ಪ್ರಚಲಿತ

ಬ್ರೇಕಿಂಗ್ ನ್ಯೂಸ್!! ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ಮತ್ತೆ ಮುಂದುವರೆದ ಹಿಂದೂ ಸಂತರ ದಮನ! ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಆಂದೋಲಾದ ಶ್ರೀ ಸಿದ್ಧಲಿಂಗಸ್ವಾಮಿಜೀಗಳ ಬಂಧನ!!!

ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ, ಹಿಂದೂ ಸಂತರ ದಮನ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಕರುಣಾ ಮಠದ ಪರಮಪೂಜ್ಯ ಸ್ವಾಮಿಜೀಗಳು ಹಾಗು ಶ್ರೀರಾಮಸೇನೆಯ ಕಾರ್ಯಧ್ಯಕ್ಷರಾಗಿರುವ ಶ್ರೀ.ಸಿದ್ಧಲಿಂಗ ಸ್ವಾಮೀಜೀಗಳ ಬಂಧನ ಮಾಡಿಸಿದ ರಾಜ್ಯದ ಹಿಂದೂ ವಿರೋಧಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ.

ಯಾಕಾಯ್ತು ಬಂಧನ?

ಆಂದೋಲ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಕೇವಲ ಹಿಂದೂ ಅಂಗಡಿಗಳನ್ನ ತೆರವುಗೊಳಿಸಿ ಮುಸ್ಲಿಂ ಅಂಗಡಿಯನ್ನ ತೆರವುಗೊಳಿಸದೆ ಬಿಟ್ಟಿದ್ದರಿಂದ ಗ್ರಾಮಸ್ಥರು ಆಕ್ಷೇಪವ್ಯಕ್ತಪಡಿಸಿದ್ದರು.

ತಮ್ಮ ಅಂಗಡಿಗಳನ್ನ ತೆರವುಗೊಳಿಸೋಕೆ ಒತ್ತಾಯ ಮಾಡೋಕೆ ಇವರ್ಯಾರು ಅಂತ ಆಂದೋಲಾ ಗ್ರಾಮದ ಮುಸಲ್ಮಾನರು ಗ್ರಾಮದ ಹಿಂದುಗಳ ಮೇಲೆ ಆಕ್ರಮಣ ಕೂಡ ಮಾಡಿದ್ದರು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

ಎರಡೂ ಕೋಮಿನ ಜನರು ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಇದಾದನಂತರ ಕಲಬುರಗಿ ಜಿಲ್ಲೆಯ MIM ಪಕ್ಷ ಭಯೋತ್ಪಾದಕ ಸಂಘಟನೆಗಳಾದ PFI, SDPI ಸಂಘಟನೆಗಳ ಜೊತೆಗೂಡಿ ಪ್ರಕರಣಕ್ಕೆ ಸಂಬಂಧವೇ ಇರದ ಆಂದೋಲಾ ಕರುಣಾ ಮಠದ ಸ್ವಾಮೀಜೀಗಳಾದ ಶ್ರಿ.ಸಿದ್ಧಲಿಂಗಸ್ವಾಮೀಜೀಗಳ ಬಂಧನಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದ್ದರು.

ವಿನಾಕಾರಣ ಶ್ರೀಗಳ ಹೆಸರನ್ನ ಈ ಪ್ರಕರಣದಲ್ಲಿ ಎಳೆದು ತಂದಿದ್ದಕ್ಕೆ ಕಲಬುರಗಿಯಲ್ಲಿ ಹಿಂದೂ ಸಂಘಟನೆಗಳೂ ತೀವ್ರ ಆಕ್ಷೇಪವ್ಯಕ್ತಪಡಿಸಿದ್ದವು.

ಕಲಬುರಗಿಯಲ್ಲಿ ಈ ಬಾರಿ MIM ಪಕ್ಷವೂ ಉತ್ತರ ಮತಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿಯಲಿದ್ದು ಅದರ ಸಾರಥ್ಯವನ್ನ ವಕೀಲ ವಹಾಜ್ ಬಾಬಾ ವಹಿಸಿಕೊಂಡಿದ್ದಾನೆ.

MIM ಪಕ್ಷ ಹಾಗು ಓವೈಸಿ ಸಹೋದರರು ಹೇಗಾದರೂ ಮಾಡಿ ಮುಸ್ಲಿಂ ಬಾಹುಳ್ಯವಿರೋ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಗೆಲುವು ಸಾಧಿಸಲೇಬೇಕೆಂದು ಹಿಂದೂ ಮುಸ್ಲಿಂ ಕೋಮು ಗಲಭೆಯೆಬ್ಬಿಸಲು ವಹಾಜ್ ಬಾಬಾ ಮೂಲಕ ಮುಂದಾಗಿದ್ದು ಇವರ ಈ ಕೃತ್ಯಕ್ಕೆ PFI, SDPI ಭಯೋತ್ಪಾದಕ ಸಂಘಟನೆಗಳೂ ಕೈ ಜೋಡಿಸಿ ನಿಂತಿವೆ.

ಮೊದಲೇ ಕೇಂದ್ರ ತನಿಖಾ ದಳದ ರಡಾರ್ ಮೇಲಿರೋ PFI, SDPI ಸಂಘಟನೆಗಳು ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುವ ಉದ್ದೇಶ ಇದಾಗಿದ್ದು, ಜಿಲ್ಲೆಯ ಪೋಲಿಸರು ಇವರು ನೀಡಿರುವ ದೂರಿನ ಮೇರೆಗೆ ಆಂದೋಲಾ ಸ್ವಾಮಿಜೀಗಳನ್ನ ನೆನ್ನೆ ರಾತ್ರಿ ಬಂಧಿಸಿದ್ದಾರೆ.

ಬಂಧನಕ್ಕೂ ಮುನ್ನ ಈ PFI, SDPI, MIM ಸಂಘಟನೆಗಳು “ಆಂದೋಲಾ ಚಲೋ” ಏರ್ಪಡಿಸಿದ್ದು ಅದನ್ನ ಪೋಲಿಸರು ಹತ್ತಿಕ್ಕಿದ್ದಾಗ ಸುಮಾರು 250 ಜನರ ಬಳಿ ಮಾರಕಾಸ್ತ್ರಗಳನ್ನೂ ಜಪ್ತಿಗೊಳಿಸಿಕೊಂಡಿದ್ದ ಕಲಬುರಗಿ ಪೋಲೀಸರಿಗೆ ಈ ಸಂಘಟನೆಗಳು ಅದೆಷ್ಟು ಮಾರಕವಾಗಿವೆ ಅನ್ನೋದರ ಅರಿವಾದರೂ  ಇರಬೇಕಾಗಿತ್ತಲ್ಲವೇ?

ಕೆಲ ತಿಂಗಳ ಹಿಂದೆ ಆಗಿನ ಗೃಹಮಂತ್ರಿಯಾಗಿದ್ದ ಕೆ.ಜೆ.ಜಾರ್ಜ್ ನನ್ನ ಸಾವಿಗೆ ಕಾರಣ ಅಂತ ಮಾಧ್ಯಮ ಹೇಳಿಕೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಡಿ.ವೈ.ಎಸ್ಪಿ.ಗಣಪತಿಯವರ ಆತ್ಮಹತ್ಯೆಯ ನಂತರ ರಾಜ್ಯ ಸರ್ಕಾರ ಕೆ.ಜೆ.ಜಾರ್ಜ್ ಬಂಧನ ಮಾಡಿಸಿತ್ತಾ?

DySP ಗಣಪತಿ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತ ಕೇಸ್ ಕ್ಲೋಸ್ ಮಾಡಿ ಕೆ.ಜೆ.ಜಾರ್ಜ್ ರಕ್ಷಿಸಿದ್ದ ಸಿದ್ದರಾಮಯ್ಯನವರ ಸರ್ಕಾರಕ್ಕೆ ಅದ್ಯಾವನೋ ಮುಸಲ್ಮಾನ ನೀಡಿದ ದೂರಿನನ್ವಯ ಹಿಂದೂ ಸಂತರಾದ ಆಂದೋಲಾ ಸ್ವಾಮಿಜೀಗಳನ್ನ ಅದ್ಹೇಗೆ ಬಂಧಿಸಿಲಾಯಿತು ಅನ್ನೋದನ್ನ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಸಂತರನ್ನ ಟಾರ್ಗೇಟ್ ಮಾಡಲಾಗುತ್ತಿದೆ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ.

ಶ್ರೀಗಳ ಬಂಧನಕ್ಕೂ ಕೆಲದಿನಗಳ ಹಿಂದೆ ರಾಜ್ಯದ ಗೃಹಮಂತ್ರಿಗಳಾದ ರಾಮಲಿಂಗಾರೆಡ್ಡಿ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದರು, ಅವರ ಜಿಲ್ಲೆಯ ಭೇಟಿಯ ಸಂದರ್ಭದಲ್ಲಿ PFI, SDPI, MIM ಕಾರ್ಯಕರ್ತರು ಸ್ವಾಮೀಜೀಗಳನ್ನ ಬಂಧಿಸಲೇಬೇಕೆಂದು ಒತ್ತಾಯವನ್ನೂ ಮಾಡಿದ್ದರು.

ಅವರು ಕಲಬುರಗಿಯಿಂದ ಹೊರಟ ಎರಡೇ ದಿನಕ್ಕೆ ಶ್ರೀಗಳ ಬಂಧನವಾಗಿದ್ದನ್ನ ನೋಡಿದರೆ ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ಭಯೋತ್ಪಾದಕ ಸಂಘಟನೆಗಳಾದ PFI, SDPI ಪರ ನಿಂತಿದೆ ಅನ್ನೋದು ಅರ್ಥವಾಗುತ್ತದೆ.

ನೆನ್ನೆ ಶ್ರೀಗಳನ್ನ ಬಂಧಿಸಲು ಆಂದೋಲಾ ಗ್ರಾಮಕ್ಕೆ ಎಸ್ಪಿ ಸಮೇತ ಪೋಲಿಸ್ ದಂಡು ಹೋದಾಗ ಪೋಲೀಸರ ಮೇಲೆ ಕಲ್ಲು ತೂರಾಟವೂ ನಡೆದಿದೆ, ಕಲ್ಲುತೂರಾಟದಲ್ಲಿ ಗ್ರಾಮದ ಹಿಂದೂಗಳಲ್ಲ ಬದಲಾಗಿ ಸುತ್ತಮುತ್ತಲಿನ ಮುಸಲ್ಮಾನರೇ ಕಲ್ಲು ತೂರಾಟ ನಡೆಸಿ ಅದನ್ನ ಹಿಂದೂಗಳ ಮೇಲೆ ಹೊರಿಸುವ ಹುನ್ನಾರವೂ ನಡೆದಿದೆ.

ಶ್ರೀಗಳನ್ನ ಬಂಧಿಸಲು ಪೋಲಿಸರು ಮುಂದಾದಾಗ ಗ್ರಾಮದ ಮಹಿಳೆಯರು ಆಕ್ಷೇಪವ್ಯಕ್ತಪಡಿಸಿದಾಗ ಪೋಲೀಸರು ಹೆಣ್ಣು ಮಕ್ಕಳೆನ್ನುವುದನ್ನೂ ಲೆಕ್ಕಿಸದೆ ಹೋಗ್ತಾ ಮುಗ್ಗಾ ಥಳಿಸಿದ್ದಾರಂತ ಗ್ರಾಮಸ್ಥರು ಆರೋಪಿಸಿದ್ದಾರೆ.

ಶ್ರೀಗಳ ಬೆಂಬಲಕ್ಕೆ ನಿಂತಿದ್ದ ನೂರಾರು ಜನರ ಮೇಲೂ ಪೋಲೀಸರು ಮನಬಂದಂತೆ ಥಳಿಸಿ ದಿಕ್ಕಾಪಾಲಾಗಿ ಓಡುವಂತೆ ಮಾಡಲಾಗಿದೆ ಅನ್ನೋದು ಶ್ರೀಗಳ ಪರ ಪ್ರತಿಭಟನೆಗೆ ಮಠದಲ್ಲಿ ಸೇರಿದ್ದ ಭಕ್ತರು ಹೇಳಿದ್ದಾರೆ.

ಶ್ರೀಗಳ ಬಂಧನಕ್ಕೆ ತೀವ್ರ ಆಕ್ಷೇಪವ್ಯಕ್ತಪಡಿಸಿರುವ ಕಲಬುರಗಿ ಹಿಂದೂ ಸಂಘಟನೆಗಳು ನವೆಂಬರ್ 2 ರಂದು ಬೃಹತ್ ಪ್ರತಿಭಟನೆಯನ್ನೂ ಆಯೋಜಿಸಿವೆ. ಶ್ರೀಗಳನ್ನ ಬೇಷರತ್ ಕ್ಷಮೆ ಕೋರಿ ಬಂಧನಮುಕ್ತಗೊಳಿಸಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿವೆ.

ಇದೆಲ್ಲಾ ನೋಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಶತಾಯಗತಾಯ ಹಿಂದುಗಳ ದಮನ ಮಾಡೇ ತೀರೋಕೆ ಮುಂದಾಗಿರೋದು ಸ್ಪಷ್ಟವಾಗಿ ಕಂಡು ಬರುತ್ತೆ.

ದೀಪ ಉರಿಯುವಾಗ ಬಹಳ ಉರಿಯುತ್ತಂತೆ, ಸಿದ್ದರಾಮಯ್ಯನವರ ಸರ್ಕಾರವೂ ಈಗ ಬಹಳ ಉರಿಯುತ್ತಿದ್ದು ಬಹಳ ಬೇಗ ತಮ್ಮ ಪತನಕ್ಕೆ ತಾವೇ ಕಾರಣವಾಗೋದನ್ನ ಕಾಂಗ್ರೆಸ್ಸಿಗರೇ ಸಾಕ್ಷಿಯಾಗೋದಂತೂ ಗ್ಯಾರಂಟಿ.

ಹಿಂದೂ ಸಂತರನ್ನ ಬಂಧಿಸುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ.

– Vinod Hindu Nationalist

Tags

Related Articles

Close