ಪ್ರಚಲಿತ

ಬ್ರೇಕಿಂಗ್ ನ್ಯೂಸ್: ಸಚಿವ ಡಿಕೆಶಿ ಎರಡು ಸಾವಿರ ಕೋಟಿ ಹಣ ಬದಲಾವಣೆ : ಡಿಕೆಶಿ ಆಪ್ತ ಅಂಜನೇಯ ದೂರು

3 ತಿಂಗಳಿಂದ ಸಚಿವ ಡಿಕೆಶಿ ಮೇಲೆ ನಿಗಾ ವಿಹಿಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಈಗ ಸತತವಾಗಿ ಅವರ ಅಕ್ರಮ ಆಸ್ತಿಯನ್ನು ಬಯಲಿಗೆಳೆಯುತ್ತಿದ್ಧಾರೆ.
ಸುಮಾರು 10 ಕೋಟಿ ನಗದು ಈಗಾಗಲೇ ಅಧಿಕಾರಗಳು ವಶಪಡಿಸಿದ್ದು, ಇನ್ನೂ ಅವರ ಬೆಂಗಳೂರು ನಿವಾಸದಲ್ಲಿ ಅಲ್ಲದೇ ಕರ್ನಾಟಕ ಹಾಗೂ ದೇಶದ ಇತರೆ ನಿವಾಸದ ಮೇಲೆ ದಾಳಿ ಮಾಡುತ್ತಿದ್ಧಾರೆ. ಅವರ ಆಪ್ತರ ವಿಚಾರಣೆಯಿಂದ ಅವರ ಇನ್ನಷ್ಟೂ ಅಕ್ರಮಗಳು ಬಯಲಾಗುತ್ತಿವೆ.

ಇನ್ನೊಂದು ಸ್ಫೋಟಕ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಡಿಕೆಶಿ ಯ ಆಸ್ತಿ ಕರ್ನಾಟಕ ಮಾತ್ರ ಅಲ್ಲ, ಭಾರತದಲ್ಲಿ ಮಾತ್ರ ಅಲ್ಲ, ವಿದೇಶದಲ್ಲಿಯೂ ಅವರು ಆಸ್ತಿಯನ್ನು ಹೊಂದಿದ್ಧಾರೆ ಅನ್ನುವ ಮಾಹಿತಿ ಹೊರಬಿದ್ದಿದೆ. ಶೋಭಾ ಡೆವಲಪರ್ಸ್ ಮೂಲಕ ದುಬೈ ಯಾಲ್ಲಿ ಹಣ ಹೂಡಿದ್ದಾರೆ. ಅಲ್ಲದೇ ಲಂಡನ್ ನ ಬರ್ಮಿಂಗ್ ಹಾಮ್ ರಸ್ತೆಯಲ್ಲಿ ಅವರು ಆಸ್ತಿಯನ್ನು ಹೊಂದಿದ್ದಾರೆ ಅನ್ನು ವಿಚಾರ ಈಗ ಬಯಲಾಗಿದೆ.

ಇದಲ್ಲದೇ ಸಚಿವ ಡಿ.ಕೆ. ಶಿವಕುಮಾರ್ ರವರು 2 ಸಾವಿರ ಕೋಟಿ ಹಣ ಬದಲಾವಣೆ ಮಾಡಿದ್ದಾರೆ ಅನ್ನುವ ದೂರು ಕೂಡ ಈಗ ಕೇಳಿ ಬರುತ್ತಿದೆ. ನೋಟು ನಿಷೇಧದ ಸಂದರ್ಭದಲ್ಲಿ ಹಣ ಬದಲಾಯಿಸಿದ್ದಾರೆ. ದೆಹಲಿಯಲ್ಲಿ ಲಭಿಸಿದ ಸುಮಾರು 7.5 ಕೋಟಿ ಇವರಿಗೇ ಸೇರಿದ್ದು ಅನ್ನುವ ವಿಚಾರ ಈಗ ಗೊತ್ತಾಗಿದೆ. ಕುತೂಹಲಕಾರಿ ವಿಚಾರವೆಂದರೆ ಈ ಸ್ಫೋಟಕ ಮಾಹಿತಿಯನ್ನು ಡಿಕೆಶಿ ಅಪ್ತಾರಾದ ಆಂಜನೇಯರವರು ತೆರಿಗೆ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಬಯಲು ಮಾಡಿದ್ದಾರೆ.

ಎಸೋಸಿಯೇಷನ್ ಆಫ್ ಡೆಮೋಕ್ರೇಟಿಕ್ ರಿಫೋರ್ಮ್ ಕೊಟ್ಟ ವರದಿಯ ಪ್ರಕಾರ ಅವರು ದೇಶದ 2ನೆಯ ಶ್ರೀಮಂತ ರಾಜಕಾರಣಿ ಎಂದು ಹೇಳಿದೆ. 251 ಕೋಟಿ ಮೌಲ್ಯದ ಆಸ್ತಿಯನ್ನು ಡಿಕೆಶಿ ಯವರು ಹೊಂದಿದ್ಧಾರೆ. ಸಿಂಗಾಪೂರ್ ನಲ್ಲಿದ್ದ ಡಿಕೆಶಿ ಯವರು ಗುಜರಾತ್ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ತಲುಪಿದ್ದಾರೆ ಅನ್ನುವ ಸುದ್ದಿ ತಿಳಿದ ತಕ್ಷಣ ಅವರು ಅಲ್ಲಿಂದ ಬೆಂಗಳೂರಿಗೆ ಮರಳಿದ್ದಾರೆ ಅನ್ನುವ ಸುದ್ದಿಯೂ ಈಗ ಹರಿದಾಡುತ್ತಿದೆ

– ಶೇಕರ್ ಪೂಜಾರಿ

Tags

Related Articles

Close