ಪ್ರಚಲಿತ

ಬ್ರೇಕಿಂಗ್: ಮೋಸ್ಟ್ ವಾಟೆಂಡ್ ಕ್ರಿಮಿನಲ್ ದಾವೂದ್ ಸಹೋದರ ಕಸ್ಕರ್ ಬಾಯ್ಬಿಟ್ಟ ಸ್ಫೋಟಕ ಮಾಹಿತಿ ಏನು ಗೊತ್ತೇ?

ಮೋಸ್ಟ್ ವಾಟೆಂಡ್ ಕ್ರಿಮಿನಲ್ ಇಸ್ಲಾಮಿಕ್ ಉಗ್ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್‍ನನ್ನು ಎನ್‍ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ನೇತೃತ್ವದ ಥಾಣೆ ಪೆÇಲೀಸರ ತಂಡ ದಕ್ಷಿಣ ಮುಂಬಯಿಯ ನಾಗ್ಪುರದಲ್ಲಿನ ನಿವಾಸಕ್ಕೆ ದಾಳಿ ನಡೆಸಿ ಬಂಧಿಸಿ ವಿಚಾರಣೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ವಿಚಾರಣೆಯ ವೇಳೆ ಈತ ಹಲವಾರು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ಅದರ ಜೊತೆಗೆ ದಾವೂದ್ ಇಬ್ರಾಹಿಂ ಮತ್ತು ವಿವಾದಾತ್ಮಕ ಇಸ್ಲಾಮಿಕ್ ಧರ್ಮ ಪ್ರಚಾರಕ ಝಾಕಿರ್ ನಾಯಕ್ ಬಗ್ಗೆ ಕಸ್ಕರ್ ಸ್ಫೋಟಕ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದಾನೆ

ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಇಸ್ಲಾಮಿಕ್ ಧರ್ಮಪ್ರಚಾರಕ ಝಾಕಿರ್ ನಾಯ್ಕ್‍ಗೆ ಕೋಟ್ಯಂತರ ರೂಪಾಯಿ ನಗದು ಸಹಾಯ ಮಾಡುತ್ತಿದ್ದನೆಂಬ ವಿಚಾರವನ್ನು ಇಕ್ಬಾಲ್ ಕಸ್ಕರ್ ಪೊಲೀಸರಲ್ಲಿ ಮಾಹಿತಿ ನೀಡಿದ್ದಾನೆ. 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದ ಬಳಿಕ ದಾವೂದ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದು, ಆ ಬಳಿಕ ಸಾಕಷ್ಟು ಅಡ್ಡದಂಧೆಗಳನ್ನು ನಡೆಸುತ್ತಿದ್ದ. ಈತನ ಅಡ್ಡದಂಧೆಗೆ ಝಾಕಿರ್ ನಾಯಕ್ ಸಹಾಯ ಹಸ್ತ ನೀಡುತ್ತಿದ್ದು, ಇದಕ್ಕೆ ಪೂರಕವಾಗಿ ಝಾಕಿರ್‍ನ ಇಸ್ಲಾಮಿಕ್ ಸಂಶೋಧನಾ ಕೇಂದ್ರಕ್ಕೆ ಕೋಟ್ಯಂತರ ರೂ ಅನುದಾನ ನೀಡುತ್ತಿದ್ದ ಎಂಬ ಅಂಶವನ್ನು ಕಸ್ಕರ್ ಪೊಲೀಸರಲ್ಲಿ ಬಾಯಿಬಿಟ್ಟಿದ್ದಾನೆ.

ದಾವೂದ್ ತನಗೆ ತಿಂಗಳಲ್ಲಿ ನಾಲ್ಕು ಬಾರಿ ಕಾಲ್ ಮಾಡುತ್ತಾನೆ. ಆತ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂಬ ಮಹತ್ವದ ಅಂಶವನ್ನೂ ಕಸ್ಕರ್ ಪೊಲೀಸರಲ್ಲಿ ಬಾಯ್ಬಿಟ್ಟಿದ್ದ. ಈತ ದಾವೂದ್‍ನ ಹೆಸರಲ್ಲಿ ಹಪ್ತಾ ವಸೂಲಿ, ಸುಲಿಗೆ ದಂಧೆ, ಬಿಲ್ಡರ್‍ಗಳಿಂದ ಕಟ್ಟಡಗಳನ್ನು ಪಡೆದುಕೊಳ್ಳುವುದು, ಬೆದರಿಕೆ, ಹತ್ಯೆ ಮುಂತಾದ ಕೇಸ್‍ಗಳಿವೆ. ಝಾಕಿರ್ ನಾಯಕ್ ಜೊತೆ ಸಂಪರ್ಕ ಇಟ್ಟುಕೊಂಡು ಆತನಿಗೆ ಹಣಕಾಸು ಸಹಾಯ ನೀಡುತ್ತಾ ಇಸ್ಲಾಂ ವಿಸ್ತರಣಾವಾದಕ್ಕೆ ದಾವೂದ್ ಪ್ರೋತ್ಸಾಹ ನೀಡುತ್ತಿದ್ದ ಎಂಬ ಅಂಶ ಇದರಿಂದ ಬಯಲಾಗಿದೆ.

ಝಾಕಿರ್ ನಾಯ್ಕ್ ಸ್ಥಾಪಿಸಿರುವ ನಿಷೇಧಿತ ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನ(ಐಆರ್‍ಎಫ್)ಗಳಿಗೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ದಾಳಿ ನಡೆಸಿ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಝಾಕಿರ್ ನಾಯ್ಕ್ ಸೇರಿದಂತೆ ಇತರರ ವಿರುದ್ಧ ಭಯೋತ್ಪಾದನ ವಿರೋಧಿ ಕಾನೂನಿನ ಅಡಿ ಎನ್‍ಐಎ ಮುಂಬೈ ವಿಭಾಗ ತನಿಖೆ ನಡೆಸಿ ಐಪಿಸಿ 153ಎ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ. ಅಲ್ಲದೆ ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಅಡಿ ಕೇಂದ್ರ ಸಚಿವ ಸಂಪುಟ ಐಆರ್‍ಎಫ್ ಅನ್ನು ನಿಷೇಧಿತ ಸಂಘಟನೆಗಳ ಸಾಲಿಗೆ ಸೇರಿಸಿ, ನಿಷೇಧಿಸಿತ್ತು. ಈತನ ಭಾಷಣಕ್ಕೆ ಹಲವಾರು ದೇಶಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.

ಉಗ್ರರು ಈತನ ಭಾಷಣದಿಂದ ಪ್ರೇರೇಪಣೆ ಪಡೆದು ದಾಳಿ ನಡೆಸುತ್ತಿದ್ದರು. ಅಲ್ಲದೆ ಈತನ ಭಾಷಣ ಕೇಳಿ ಹಲವಾರು ಮಂದಿ ಐಸಿಸ್‍ಗೆ ಸೇರಿದ್ದಲ್ಲದೆ ಕೆಲವು ಮುಂಬೈ ಯುವಕರು ಅದಕ್ಕಾಗಿ ಮನೆಯನ್ನೇ ತೊರೆದಿದ್ದರು. ಭಾಷಣಗಳಿಂದ ಉಗ್ರ ಸಂಘಟನೆಗಳಿಗೆ ದುಷ್ಪ್ರೇರಣೆ ನೀಡುತ್ತಿದ್ದ ಝಾಕಿರ್‍ಗೆ ಹಣಕಾಸು ಸಹಾಯ ಯಾರು ಮಾಡುತ್ತಾರೆಂಬ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿದ್ದವು. ಆದರೆ ಇದೀಗ ಇಕ್ಬಲ್ ಕಸ್ಕರ್ ಬಾಯ್ಬಿಟ್ಟ ಸ್ಫೋಟಕ ಮಾಹಿತಿಯಿಂದ ಆತನಿಗೆ ಹಣಕಾಸನ್ನು ದಾವೂದು ಪೂರೈಸುತ್ತಿದ್ದಾನೆಂಬುದು ಬೆಳಕಿಗೆ ಬಂದಂತಾಗಿದೆ.

ದಾವೂದ್, ಛೋಟಾ ಶಕೀಲ್ ಬೇಟೆಗೆ ಸ್ಕೆಚ್!!

ದಾವೂದ್ ಇಬ್ರಾಹಿಂನ ವಿದೇಶಗಳಲ್ಲಿನ ಆಸ್ತಿಪಾಸ್ತಿಯನ್ನು ಈಗಾಗಲೇ ಜಫ್ತಿ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಇಕ್ಬಲ್
ಕಸ್ಕರ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿರುವುದರಿಂದ ದಾವೂದ್ ಮತ್ತು ಆತನ ಬಲಗೈ ಬಂಟ ಛೋಟಾ ಶಕೀಲ್‍ನ ಹಲವಾರು ಮಾಹಿತಿಗಳನ್ನು
ಪೊಲೀಸರು ಸಂಗ್ರಹಿಸಲಿದ್ದಾರೆ. ಛೋಟಾ ರಾಜನ್‍ನನ್ನು ಬಂಧಿಸಿದ್ದ ಪೊಲೀಸರಿಗೆ ಆತ ತನ್ನ ಕಡುವೈರಿ ಛೋಟಾ ಶಕೀಲ್ ಬಗ್ಗೆ ಹಲವಾರು ಮಹತ್ವದ ವಿಚಾರಗಳನ್ನು ಪೊಲೀಸರಲ್ಲಿ ಬಾಯ್ಬಿಟ್ಟಿದ್ದ. ರಾಜನ್ ಜೈಲಲ್ಲಿದ್ದ ಸಂದರ್ಭದಲ್ಲೇ ನಾನು ಶಕೀಲ್‍ನ ಹಲವಾರು ರಹಸ್ಯ ವಿಚಾರಗಳನ್ನು ತಿಳಿಸುತ್ತೇನೆಂದು ಅಬ್ಬರಿಸಿದ್ದ.

ಹೀಗೆ ಒಂದೊಂದೇ ಸುಳಿವಿನ ಆಧಾರದಲ್ಲಿ ಭಾರತದ ಪೊಲೀಸರು ದಾವೂದ್ ಇಬ್ರಾಹಿಂನ ಬೇಟೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾವೂದ್ ಇಬ್ರಾಹಿಂನ ಆಸ್ತಿಪಾಸ್ತಿ, ಆತನ ಸಹಚರರ ಬಗ್ಗೆ ಕೂಲಂಕುಷ ತನಿಖೆ ನಡೆಸಿದಾಗ ಹಲವಾರು ಆಸ್ತಿಪಾಸ್ತಿಗಳು ಭಾರತ ಸೇರಿ ಹಲವಾರು ದೇಶಗಳಲ್ಲಿ ಪತ್ತೆಯಾಗಿತ್ತು. ಇದೇ ಸಂದರ್ಭದಲ್ಲಿ ದಾವೂದ್ ಸಹೋದರ ಇಕ್ಬಲ್ ಕಸ್ಕರ್‍ನನ್ನು ಬಂಧಿಸಲೇಬೇಕೆಂದು ಪೊಲೀಸರು ಹೊಂಚು ಹಾಕಿ ಕುಳಿತಿದ್ದರು.

ಇಕ್ಬಾಲ್ ಕಸ್ಕರ್ ಬಿಲ್ಡರ್‍ಗಳಿಗೆ ಬೆದರಿಕಯೊಡ್ಡಿ ಫ್ಲಾಟ್‍ಗಳನ್ನು ಪಡೆಯುತ್ತಿದ್ದ. ಸ್ಥಳೀಯರ ಹೆಸರಲ್ಲಿ ಫ್ಲಾಟ್‍ಗಳನ್ನು ಪಡೆಯುವುದರಿಂದ ಕಸ್ಕರ್‍ನ ಅಡ್ಡದಂಧೆ ಬೆಳಕಿಗೆ ಬರುತ್ತಿರಲಿಲ್ಲ. ಬಿಲ್ಡರ್‍ಗಳಿಗೆ ಕೊಲೆಬೆದರಿಕೆಯೊಡ್ಡಿ ಈ ಬಗ್ಗೆ ಪೆÇಲೀಸರಿಗೆ ದೂರು ನೀಡದಂತೆ ಎಚ್ಚರಿಸುತ್ತಿದ್ದ. ಕೊಲೆ ಪ್ರಕರಣ ಹಾಗೂ ಸಾರಾ ಸಹಾರಾ ಕೇಸ್‍ಗಳಲ್ಲಿ ಇಕ್ಬಾಲ್ ಕಸ್ಕರ್ ಪಾತ್ರವಹಿಸಿರುವ ಆರೋಪವಿದೆ. 2003ರಲ್ಲಿ ಅಕ್ರಮ ಕಟ್ಟಡನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಕೊಲೆ, ಸಾರಾ ಸಹಾರಾ ಎರಡೂ ಕೇಸ್‍ಗಳಿಂದ ಕಸ್ಕರ್ನನ್ನು ಕೋರ್ಟ್ ಖುಲಾಸೆಗೊಳಿಸಿತ್ತು.

ಈತ ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡರೂ ದೂರು ನೀಡುವವರಿಲ್ಲದೆ ಬಂಧಿಸಲು ಸಾಧ್ಯವಿರಲಿಲ್ಲ. ಇದೇ ಸಂದರ್ಭದಲ್ಲಿ ಬಿಲ್ಡರ್ ಒಬ್ಬರು ಕಸ್ಕರ್‍ನ ವಿರುದ್ಧ ಧೈರ್ಯ ತಾಳಿ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೇ ಬಂಡವಾಳವಾಗಿಟ್ಟುಕೊಂಡು ಎನ್‍ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ನೇತೃತ್ವದ ಪೊಲೀಸ್ ತಂಡ ಬಂಧಿಸಿತ್ತು. ಈ ವೇಳೆ ಕಸ್ಕರ್ ದಾವೂದ್ ಇಬ್ರಾಹಿಂ ಹೆಸರಲ್ಲಿ ಅಡ್ಡದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು.

ಈಗ ಭಾರತಕ್ಕೆ ಬೇಕಾಗಿರುವುದು ಯಾರೆಂದರೆ ದಾವೂದ್ ಇಬ್ರಾಹಿಂ, ಈತನ ಬಲಗೈ ಬಂಟ ಛೋಟಾ ಶಕೀಲ್ ಹಾಗೂ ಇನ್ನೊಬ್ಬ ರಶೀದ್ ಮಲಬಾರಿ. ದಾವೂದ್‍ನ ಹಲವಾರು ಸಹಚರರನ್ನು ಈಗಾಗಲೇ ಬಂಧಿಸಿರುವ ಪೊಲೀಸರು ಇದೀಗ ಕಸ್ಕರ್‍ನನ್ನು ಬಂಧಿಸಿ ಮಾಹಿತಿ ಪಡೆಯುತ್ತಿದ್ದಾರೆ. ಈ ವೇಳೆ ಆತ ದಾವೂದ್‍ಗೆ ಸಂಬಂಧಪಟ್ಟ ಹಲವಾರು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ವಿಚಾರಣೆಯ ದೃಷ್ಟಿಯಿಂದ ಹಲವಾರು ಮಾಹಿತಿಗಳನ್ನು ಗೌಪ್ಯವಾಗಿರಿಸಲಾಗಿದೆ. ಆದರೆ ಇದೇ ಕಸ್ಕರ್ ದಾವೂದ್ ಮತ್ತು ಝಾಕಿರ್ ನಾಯ್ಕ್ ಬಗ್ಗೆ ಇರುವ ಸಂಬಂಧ, ಹಣಕಾಸು ಸಹಾಯದ ಬಗ್ಗೆ ಮಾಹಿತಿ
ನೀಡಿದ್ದಾನೆ.

-ಚೇಕಿತಾನ

Tags

Related Articles

Close