ಪ್ರಚಲಿತ

ಭಗವಂತ ಈ ಲೋಕ ಹಾಗೂ ಜೀವಸಂಕುಲವನ್ನು ಹೇಗೆ ಸೃಷ್ಟಿಸಿದ? ಭಾಗವತದಲ್ಲಿದೆ ಇದರ ಅದ್ಭುತ ವಿವರಣೆ…

ವಿರಾಟ್ಟುರುಷನಾದ ಲೋಕ ಸೃಷ್ಟಿಯ ಕುರಿತಾಗಿ ಭಾಗವತ ವಿವರಿಸಿದೆ. ಭಗವಂತನು ತನ್ನ ವಾಸಸ್ಥಾನಕ್ಕೆ ಜಲವನ್ನು ಸೃಜಿಸಿಕೊಂಡನು . ಜಲರಾಶಿಯಲ್ಲಿ ಸಹಸ್ರಾರು ಸಂವತ್ಸರಗಳ ಕಾಲ ಇದ್ದುದರಿಂದಾಗಿ ನಾರಾಯಣನನಿಸಿಕೊಂಡನು . ಪೃಥ್ವಿಯ ಸಕಲ ಭೂತವರ್ಗಗಳು , ಕಾಲ , ಕರ್ಮ , ಸ್ವಭಾವ ಅವನ ಕರುಣಾ ಕಟಾಕ್ಷದಿಂದಲೇ ಉತ್ಪತ್ತಿಯಾದುವು.

ಸ್ಥಿತಿ , ಪ್ರವೃತ್ತಿ , ನಿವೃತ್ತಿ ಈ ಎಲ್ಲವೂ ಅವನ ಸಂಕಲ್ಪದಿಂದಲೇ ಆಗುತ್ತವೆ . ದೇವತೆಗಳು ಮಾನವರು ಮತ್ತು ಇನ್ನಿತರ ಜೀವಿಗಳು ಅವನು ಇಚ್ಚಿಸಿರುವುದರಿಂದಾಗಿ ಸೃಷ್ಟಿಗೊಂಡುವು . ರಜೋಗುಣದಿಂದ ಕೂಡಿದ ಸೃಷ್ಟಿಕರ್ತ ಬ್ರಹ್ಮನ ಜನ್ಮಕ್ಕೆ ಆ ಭಗವಂತನೇ ಕಾರಣನಾಗಿರುತ್ತಾನೆ. ಅಧಿಭೂತ , ಅಧಿದೈವ , ಅಧ್ಯಾತ್ಮವನ್ನುವ ಮೂರು ಪ್ರಥಮವಾಗಿ ಸಮಷ್ಟಿರೂಪದಿಂದ ಇದ್ದುವು . ಪ್ರಕೃತಿ ಮಹತ್ವ , ಅಹಂಕಾರ , ಚಕ್ಷುಃಶ್ರೋತ್ರಾದಿ ತನ್ಮಾತ್ರೆಗಳು , ಆಕಾಶಾದಿ ಪಂಚಭೂತಗಳೇ ಮೊದಲಾದ ಸೃಷ್ಟಿಯನ್ನು ಸಮಷ್ಟಿಯೆನ್ನುತ್ತಾರೆ . ಈ ಪ್ರಥಮ ಕಾರ್ಯವು ಪರಮಾತ್ಮನಿಂದಲೇ ಮಾಡಲ್ಪಟ್ಟಿತು .

ಅನಂತರ ಬ್ರಹ್ಮನಿಂದ ದೇವ , ಮನುಷ್ಯ , ಪಶು ಪಕ್ಷಿ ಮೃಗಗಳು ಸೃಜಿಸಲ್ಪಟ್ಟವು . ಈ ಕಾರ್ಯವು ವ್ಯಷ್ಟಿ ಸೃಷ್ಟಿಯನಿಸಿತು . ಈ ರೀತಿ ನಾವು ಸಮಷ್ಟಿ ಮತ್ತು ವ್ಯಷ್ಟಿ ಸೃಷ್ಟಿಯ ಭೇದವನ್ನು ನಿರ್ಣಯಿಸಬಹುದು .

ಚತುರ್ಮುಖ ಬ್ರಹ್ಮನು ಉಸಿರಾಡುವಾಗ ಆತನ ಪ್ರಾಣವಾಯುವಿನಿಂದ ಓಜಸ್ಸು , ತೇಜಸ್ಸು , ಬಲ , ‘ ಈ ಮೂರು ಧರ್ಮಗಳುದಿಸಿದುವು . ಪ್ರಯತ್ನವೆನಿಸುವ ಪ್ರವೃತ್ತಿ ಸಾಮರ್ಥ್ಯವನ್ನು ಓಜಸ್ಸು ಎಂದು ಹೇಳಬಹುದು .

ವೇಗ ಶಕ್ತಿಯೇ ತೇಜಸ್ಸನಿಸಲ್ಪಡುತ್ತದೆ . ಧಾರಣ ಸಾಮರ್ಥ್ಯವನ್ನು ಬಲವನ್ನುತ್ತಾರೆ . ಆ ಬ್ರಹ್ಮನ ಪ್ರಾಣದಿಂದಲೇ ಸರ್ವ ಜೀವಿಗಳ ಪ್ರಾಣಗಳುಂಟಾದುವು . ದೇಹ ಮತ್ತು ವಿವಿಧ ಇಂದ್ರಿಯಗಳು ಪ್ರಾಣಕ್ಕನುಸಾರವಾಗಿ ಅರಮನೆಯ ನೃತ್ಯರಂತೆ ಲೋಕ ವ್ಯವಹಾರವನ್ನು ನಡೆಸುತ್ತವೆ . ದೇಹಕ್ಕೆ ಪ್ರಾಣವೇ ಆಧಾರವಲ್ಲವೇ ? ಪ್ರಾಣವಾಯುವಿನ ಶಕ್ತಿಯಿಂದ ಜಠರಾಗ್ನಿಯು ಜಾಗೃತವಾಗುತ್ತದೆ. ಜಠರಾಗ್ನಿಯು ಜರಗಿಸುವ ಪಚನ ಕ್ರಿಯೆಗಳಿಂದಾಗಿ ಅನ್ನ ಆಹಾರ ಉಣ್ಣುವ ಇಚ್ಛೆ ಉಂಟಾಗುತ್ತದೆ .

ಈ ವ್ಯಷ್ಟಿ ಶರೀರ ಹುಟ್ಟಿದಾಗ ರಸನೇಂದ್ರಿಯಗಳು ಉಂಟಾದುವು . ರಸನೇಂದ್ರಿಯದ ಅಭಿಮಾನಿ ದೇವತೆ ವರುಣನು ಆಸ್ವಾದಿಸಲು ಯೋಗ್ಯವಾದ ಲವಣ , ಕಟು ಮಧುರ ಮೊದಲಾದುವುಗಳಿಗೆ ಅಧಿದೇವತೆಯಾದನು . ಬಾಯಿಯಲ್ಲಿ ವಾಕ್ಯ ಉಚ್ಚರಿಸಲು ವಾಗಿಂದ್ರಿಯ ಮತ್ತು ಅಧಿಷ್ಠಾನ ದೇವತೆಯಾದ ಅಗ್ನಿ ಆವಿರ್ಭವಿಸಿತು . ಪರಿಮಳ , ವಾಸನೆಯನ್ನು ಅನುಭವಿಸಲು ಮೂಗು ಹುಟ್ಟಿಕೊಂಡಿತು . ಪ್ರಾಣೇಂದ್ರಿಯವೂ , ಅದಕ್ಕೆ ಅಭಿಮಾನಿ ದೇವತೆಯಾದ ವಾಯುವಿನ ಸೃಷ್ಟಿಯಾಯಿತು . ನೋಡುವುದಕ್ಕಾಗಿ ಎರಡು ನೇತ್ರಗಳು ಮತ್ತು ಅದರ ಅಭಿಮಾನ ದೇವತೆಯಾದ ಸೂರ್ಯನ ಸೃಷ್ಟಿಯಾಯಿತು . ಸ್ವರವನ್ನು ಆಲಿಸಲು ಕಿವಿ , ಮತ್ತು ಅದರ ಅಧಿಷ್ಟಾನ ದೇವತೆಯಾದ ದಿಕೃತಿಗಳು ಹುಟ್ಟಿದರು , ಶೀತೋಷ್ಟಗಳನ್ನು , ಮೃದು ಕಾಠಿನ್ಯವನ್ನು ಅನುಭವಿಸಲು ಚರ್ಮ ಮತ್ತು ಅದಕ್ಕೆ ಸ್ಪರ್ಶಗುಣವನ್ನು ಗ್ರಹಿಸುವ ಸಾಮರ್ಥ್ಯ ಪ್ರಾಪ್ತಿಯಾಯಿತು .

ಪಂಚ ಜ್ಞಾನೇಂದ್ರಿಯಗಳನ್ನು ಸೃಷ್ಟಿಸಿದ ಮೇಲೆ ಬ್ರಹ್ಮದೇವನು ತನ್ನ ಕಾರ್ಯವನ್ನು ಅಲ್ಲಿಗೆ ನಿಲ್ಲಿಸದೆ ಮುಂದುವರಿಸಿದನು . ಹಸ್ತಗಳು ಹುಟ್ಟಿದುವು . ಅದಕ್ಕೆ ಇಂದ್ರನು ಅಧಿದೇವತೆಯಾದನು . ಸಂಚರಿಸಲು ಪಾದಗಳ ಉತ್ಪತ್ತಿಯಾಯಿತು . ಯಜ್ಞಸ್ವರೂಪನಾದ ವಿಷ್ಣುವು ಅಧಿದೇವತೆಯಾದನು . ಪ್ರಚಾ ಉತ್ಪತ್ತಿಗೋಸ್ಕರ ಪುರುಷ ಲಿಂಗದ ಉತ್ಪತ್ತಿಯಾಯಿತು . ಅದಕ್ಕೆ ಪ್ರಜಾಪತಿ ಅಧಿದೇವತೆಯಾದನು . ಗುದಸ್ಥಾನದ ಸೃಷ್ಟಿಯಾಗಿ ಅಲ್ಲಿ ವಾಯುವನ್ನು ವ ಇಂದ್ರಿಯದ ಸೃಷ್ಟಿಯಾಯಿತು . ಮಿತ್ರನು ಅಧಿದೇವತೆಯಾದನು . ಅನ್ನಪಾನಕ್ಕೆ ಹೊಟ್ಟೆ , ಕರುಳು , ಜಲಮಾರ್ಗಗಳು ಶರೀರದಲ್ಲಿ ಉತ್ಪತ್ತಿಯಾದ ಮೇಲೆ ಹೃದಯ , ಮನಸ್ಸು , ಕಾಮ , ಸಂಕಲ್ಪ , ತ್ವಕ್ , ರಕ್ತ , ಮಾಂಸ , ಮೇದಸ್ಸು , ಅಸ್ಥಿ ಮಜ್ಜೆ ಮೊದಲಾದ ಧಾತುಗಳು ಮಣ್ಣು , ನೀರು , ಅಗ್ನಿ ಈ ಮೂರರ ಮಿಶ್ರಣದಿಂದ ಉತ್ಪತ್ತಿಯಾದುವು . ಪ್ರಾಣವು ಆಕಾಶ , ನೀರು ಮತ್ತು ವಾಯುವಿನ ಸಂಯೋಗದಿಂದ ಹುಟ್ಟಿಕೊಂಡಿತು . ಅಹಂಕಾರ ತತ್ವದಿಂದ ಶಬ್ದಾದಿ ಗುಣಗಳ ಸೃಷ್ಟಿಯಾಯಿತು . ಆ ಶಬ್ದಾದಿಗುಣಗಳಿಂದ ಇಂದ್ರಿಯಗಳು ಜನಿಸಿದುವು . ಕಾಮ ಮತ್ತು ಸಂಕಲ್ಪಕ್ಕೆ ಮನಸ್ಸು ಕಾರಣವಾಯಿತು . ಬುದ್ಧಿಯು ವಿಜ್ಞಾನ ಸ್ವರೂಪವಿದ್ದು ಮಹತ್ತತ್ವವು ಅದರ ಉತ್ಪತ್ತಿಗೆ ಕಾರಣವಾಯಿತು .

ರಾಜಾ , – ಸ್ಥೂಲ ಶರೀರ ಯಾವುದೆಂಬುದನ್ನು ಇದೀಗ ತಿಳಿಸಿದ್ದೇನೆ . ಇದಕ್ಕಿಂತಲೂ ಹೊರತಾಗಿ ಸೂಕ್ಷ್ಮ ಶರೀರವೊಂದಿದೆ . ಕಣ್ಣಿಗೆ , ಮನಸ್ಸಿಗೆ , ನಾಲಗೆಯ ಅನುಭವಕ್ಕೆ ಅದು ದೊರಕಲಾರದು . ಸೃಷ್ಟಿ ಸ್ಥಿತಿ , ಲಯ ಮತ್ತು ಕಾಲ ಪರಿಮಾಣಕ್ಕೆ ಲಭ್ಯವಾಗದ ನಿತ್ಯ ವಸ್ತುವನಿಸಿಕೊಂಡಿರುವ ಮುಕ್ತವಾದ ಜೀವಾತ್ಮ ಸ್ವರೂಪವಾಗಿದೆ.

ಜೀವಾತ್ಮನನ್ನು ಪಡೆದಿರುವ ಶರೀರ ಧಾರಿಗಳು ಪರಮಾತ್ಮನ ಧ್ಯಾನದ ಮೂಲಕ ಜಗತ್ತಲ್ಲಾ ಸುತ್ತುವ ನಿಯಂತ್ರಣವಿಲ್ಲದ ಮನಸ್ಸನ್ನು ವಶಪಡಿಸಿಕೊಳ್ಳಬೇಕು . ಪರಮಾತ್ಮನ ಸ್ಕೂಲ , ಸೂಕ್ಷ್ಮ ಮತ್ತು ದಿವ್ಯಮಂಗಳ ರೂಪವನ್ನು ಪ್ರತ್ಯಕ್ಷೀಕರಿಸಿಕೊಳ್ಳಲು ತಮ್ಮಲ್ಲಿರುವ ಮನೋಬಲಕ್ಕನುಗುಣವಾಗಿ ಪ್ರಯತ್ನಿಸಬಹುದು . ಆ ದೇವೇಶನ ದಿವ . ವಿಗ್ರಹವು ಅನೇಕ ವಿಧಗಳಲ್ಲಿ ಅವತಾರ ಮೂರ್ತಿಗಳಾಗಿ ಪ್ರಕಟಿಸಲ್ಪಡುತ್ತದೆ .

ಸೃಷ್ಟಿ ವೈಶಿಷ್ಟ್ಯ

ಸರ್ವತಂತ್ರ ಸ್ವತಂತ್ರನಾದ ಭಗವಂತನು ಅಪೇಕ್ಷಿಸಿದ ಸೃಷ್ಟಿಯು ವಿಸ್ತಾರವಾಗಿರುವುದು ಅಲ್ಲದ ವೈಶಿಷ್ಟ್ಯ ಪೂರ್ಣವಾಗಿರುತ್ತದೆ . ಅದು ಅವನ ಸಂಕಲ್ಪರೂಪವಾಗಿರುತ್ತದೆ . ಸ್ನಾವರ ಜಂಗಮಾತ್ಮಕವಾಗಿರುವ ಉತ್ಪತ್ತಿಯು ಜರಾಯುಜ , ಸ್ನೇದು , ಅಂಡಜ , ಉಬ್ಬಿದ ಎಂಬುದಾಗಿ ನಾಲ್ಕು ತರನಾಗಿದ್ದು ಭೂಮ್ಯೋಮ ಆಕಾಶದಲ್ಲಿ ವ್ಯಾಪಿಸಿರುತ್ತದೆ .

ಭಗವಂತನು ಎಲ್ಲವನ್ನು ಒಂದೇ ತರನಾಗಿ ಉಂಟು ಮಾಡಲಿಲ್ಲ . ಪ್ರಜಾಧಿಪತಿಗಳು , ದೇವಾಸುರರು , ಮಾನವರು , ಋಷಿಗಳು , ಪಿತೃದೇವತಗಳು , ಸಿದ್ದ ಚಾರಣ ಗಂಧರ್ವ , ವಿದ್ಯಾಧರರು , ಕಿನ್ನರ ಕಿಂಪುರುಷ , ಯಕ್ಷರಾಕ್ಷಸರು , ಭೂತಪ್ರೇತ ಪಿಶಾಚಾದಿಗಳು ಗ್ರಹಗಳು ಮೃಗ ಪಕ್ಷಿಗಳು ವೃಕ್ಷ , ಸರೀಸೃಪಗಳು , ನದೀ ಪರ್ವತಗಳು ಬೇರೆಬೇರ ತರನಾಗಿ ಅವನಿಂದ ಸೃಜಿಸಲ್ಪಟ್ಟಿವೆ . ಅನೇಕ ವಿಧವಾಗಿ ಯಾಕೆ ಮಾಡಿರಬಹುದನ್ನುವ ಶಂಕೆ ತಲೆದೋರಬಹುದು . ಜೀವನು ಗಳಿಸಿದ ಪಾಪಪುಣ್ಯಗಳ ಫಲಕ್ಕನುಸಾರವಾಗಿ ಸೃಷ್ಟಿಕಾರ್ಯ ವಿವಿಧ ರೀತಿಯಲ್ಲಿ ಮಾಡಲ್ಪಡಬೇಕಾಯಿತು .

ಅವತಾರದಲ್ಲಿ ಸಮಭಾವ

ಭಗವಂತನು ಎಂದಿಗೂ ಪಕ್ಷಪಾತಿಯಾಗಿರುವುದಿಲ್ಲ , ತ್ರಿಗುಣಗಳಿಗೆ ಸರಿಯಾಗಿ ಕರ್ಮಗಳ ಗತಿ ಬದಲಾಗಿ ಸೃಷ್ಟಿಯಲ್ಲಿ ಬದಲಾವಣೆಗಳು ಉಂಟಾಗುವುದು ಸಹಜ ತಾನೇ ? ಸಾತ್ವಿಕ ಕರ್ಮಿಗಳು ದೇವತ್ವವನ್ನು , ರಾಜಸ ಕರ್ಮಿಗಳು ಮನುಷ್ಯ ಜನ್ಮವನ್ನು , ತಾಮಸ ಕರ್ಮಿಗಳು ಪಶುಪಕ್ಷಿ ಕ್ರಿಮಿಕೀಟ ಸ್ಥಾವರಾದಿಗಳ ಜನ್ಮಗಳನ್ನು ಪಡೆಯುವರು ಯಾವ ವರ್ಗದ ಪ್ರಾಣಿಗಳಲ್ಲಿಯೂ ಮೇಲು ಕೀಳೆಂಬುದಾಗಿ ಇರುವುದಿಲ್ಲ .

ಪರಬ್ರಹ್ಮ ಸ್ವರೂಪಿ ಭಗವಂತನೇ ಮತ್ಯ , ಕೂರ್ಮ ವರಾಹ ಮೊದಲಾದ ತಿರ್ಯಕ್ ಪ್ರಾಣಿಯಾಗಿ ಅವತಾರವೆತ್ತಿದ್ದಾನೆ . ವಾಮನ, ಪರಶುರಾಮ , ಕೃಷ್ಣ, ಬಲರಾಮ , ಮಾನವ ಅವತಾರವನ್ನೆತ್ತಿದ್ದಾನೆ . ಅವನು ಎಲ್ಲವುಗಳಲ್ಲಿ ಸಮಭಾವವನ್ನು ತೋರುತ್ತಿರುತ್ತಾನೆ . ಇಷ್ಟಲ್ಲದ ಸೃಜಿಸಿ ರಕ್ಷಿಸಲ್ಪಟ್ಟ ಈ ಜಗತ್ತನ್ನು ಕಲ್ಪಾಂತ್ಯದಲ್ಲಿ ಕಾಲಾಗ್ನಿ ಸದೃಶನಾಗಿ ನಿರ್ಮೋಹದಿಂದ ನಾಶ ಗೊಳಿಸುವನು , ರಾಜಾ , – ನಿನ್ನಲ್ಲಿ ಉದ್ಭವಿಸಿದ ಕೆಲ ಪ್ರಶ್ನೆಗಳಿಗೆ ನಾನೀಗ ಉತ್ತರವೀಯುತ್ತೇನೆ . ಜೀವನು ಜ್ಞಾನಾದಿ ಗುಣಗಳಿದ್ದರೂ ಅಪೂರ್ಣನಾಗಿರುತ್ತಾನೆ . ಅಸ್ವತಂತ್ರನಾಗಿ ಕರ್ಮಬಂಧನದಿಂದ ತೊಳಲುತಿರುತ್ತಾನೆ .

ಆದರೆ ಪರಮಾತ್ಮನ ಕ್ರಿಯೆಗಳು ಕೇವಲ ಸಂಕಲ್ಪ ಮಾತ್ರದಿಂದ ನೆರವೇರುತ್ತವೆ . ಅವನು ಕರ್ಮಕ್ಕೆ ಅಂಟಿಕೊಂಡಿರುವುದಿಲ್ಲ , ಅಂಟಿಕೊಳ್ಳಲಾರನು ಎಂಬುದನ್ನು ತೋರಿಸುವುದಕ್ಕಾಗಿಯೇ ಉಚ್ಚ ನೀಚ ಭಾವವನ್ನು ತೋರದ ಮನುಷ್ಯಾದಿ ರೂಪದಿಂದ ಮತ್ತು ಪ್ರಾಣಿರೂಪದಿಂದ ಅವತಾರವೆತ್ತಿರುತ್ತಾನೆ . ಮಹತ್ವ ದಿಂದ ಭೂಮಿ ವರೆಗಿನ ಸೃಷ್ಟಿಯು ಮಹಾಶಿಲ್ಪದಲ್ಲಿ ನಡೆಯುತ್ತವೆ . ನೀನು ನನ್ನಲ್ಲಿ ಕೇಳಿರುವ ಕಾಲ ಪರಿಮಾಣ , ಕಲ್ಪ , ಲಕ್ಷಣ ಮನ್ವಂತರಾದಿಗಳನ್ನೂ ಇನ್ನು ಉಳಿದಿರುವ ದಿನಗಳಲ್ಲಿ ವಿವರಿಸುತ್ತೇನೆ . ಆ ಸಮಯದಲ್ಲಿ ನಿನ್ನ ಮನಸ್ಸಿನಲ್ಲಿ ಜನಿಸಿದ ಎಲ್ಲಾ ಸಂದೇಹಗಳು ಪರಿಹರಿಸಲ್ಪಡುವುವು ‘ ಎಂದು ಸೂತಪುರಾಣಿಕರು ಶೌನಕಾದಿಗಳಿಗೆ ಶುಕಾಚಾರ್ಯ ಮತ್ತು ಪರೀಕ್ಷಿತ ರಾಜನಿಗೆ ಸಂವಾದವನ್ನು ವಿವರಿಸಿದರು .

(ಗ್ರಂಥಕೃಪೆ: ಕೆ. ಅನಂತರಾಮ್ ರಾವ್ ಅವರ ಸಂಪೂರ್ಣ ಭಾಗವತ, ದ್ವಿತೀಯ ಸ್ಕಂಧ)

Tags

Related Articles

FOR DAILY ALERTS
Close