ಅಂಕಣಪ್ರಚಲಿತ

ಭಯೋತ್ಪಾದನೆಗೆ ಪರೋಕ್ಷ ಬೆಂಬಲ : ಕಾಶ್ಮೀರದ 12 ಪ್ರದೇಶಗಳಿಗೆ ದಾಳಿ ಮಾಡಿದ ರಾಷ್ಟ್ರೀಯ ತನಿಖಾ ದಳ!

ಬ್ರಿಟಿಷರು ಭಾರತ ಬಿಟ್ಟು ಹೋದಾಗಿನಿಂದ ಕಾಶ್ಮೀರ ಸಮಸ್ಯೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಒಂದಲ್ಲಾ ಒಂದು ದಿನ ಕಾಶ್ಮೀರ ಸಮಸ್ಯೆಗಳ ಸುದ್ದಿಯನ್ನೇ ದೇಶಕ್ಕೆ ತಲುಪಿಸುತ್ತಿದೆ. ಕಾರಣ ಅಲ್ಲಿ ಮೂರು ರೀತಿಯ ವ್ಯಕ್ತಿಗಳಿದ್ದಾರೆ. ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು, ಹಾಗೂ ರಾಷ್ಟ್ರಪ್ರೇಮಿಗಳು. ಹಲವಾರು ಕಾಶ್ಮೀರ ಸಮಸ್ಯೆಗಳನ್ನು ಈ ದಿವಸ ಭಾರತ ಭೇಧಿಸಬೇಕಿದೆ. ಅಲ್ಲಿ ಶಾಂತಿ ನೆಲೆಸಬೇಕಿದೆ. ಆ ನಿಟ್ಟಿನಲ್ಲಿ ಭಾರತೀಯ ತನಿಖಾ ದಳ ಕಾರ್ಯ ಸದಾ ನಿರ್ವಹಿಸುತ್ತಾ ಇದೆ.

ಭಾರತದ ರಾಷ್ಟ್ರೀಯ ತನಿಖಾ ದಳ ಜುಮ್ಮು ಕಾಶ್ಮೀರ ಭಾಗದ ಹಲವು ಕಡೆ ಭಯೋತ್ಪಾದಕರಿಗೆ ಸಹಾಯ ಮಾಡುವವರನ್ನು ಹಾಗೂ ಇದಕ್ಕೆ ಸಂಬಂಧಪಟ್ಟ ಪ್ರತ್ಯೇಕತಾವಾದಿಗಳನ್ನು ಇವತ್ತು ವಿಚಾರಣೆಗೆ ಒಳಪಡಿಸಿದೆ. ಶ್ರೀನಗರ, ಬಾರಾಮುಲ್ಲಾ, ಹಾಗೂ ಹಾಂಡ್‍ವಾರಾ ಮುಂತಾದ 12 ಪ್ರದೇಶಗಳಲ್ಲಿ ತನಿಖಾ ದಳ ವಿಚಾರಣೆಯನ್ನು ಪ್ರಾರಂಭಿಸಿದೆ. ಭಯೋತ್ಪಾದಕರಿಗೆ ಪರೋಕ್ಷವಾಗಿ ಬೆಂಬಲಿಸಿದವರ ತನಿಖೆ ಮಾಡಲಾಗಿದೆ ಎಂದು ತನಿಖಾ ದಳದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಜುಲೈ 24 ರಂದು ಭಯೋತ್ಪಾದಕರಿಗೆ ಹಣ ಸಂದಾಯ ಮಾಡುವವರನ್ನು ಹಾಗೂ ಕಾಶ್ಮೀರದಲ್ಲಿ ಅಶಾಂತಿಯ್ನು ನಿರ್ಮಿಸುವವರನ್ನು ಬಂಧಿಸಲಾಗಿತ್ತು. ಕಾಶ್ಮೀರದಲ್ಲಿ ಅನೇಕ ದೇಶದ್ರೋಹ ಚಟುವಟಿಕೆಗಳು ಇತ್ತೀಚೆಗೆ ಅಧಿಕವಾಗುತ್ತಿದೆ. ನಮ್ಮ ರಾಷ್ಟ್ರದ ಕಾನೂನನ್ನು ಉಲ್ಲಂಘಿಸಿ ಅವರು ನಡೆದುಕೊಳ್ಳುತ್ತಿದ್ದಾರೆ. ಹಣವನ್ನು ಪ್ರತ್ಯೇಕತಾವಾದಿಗಳಿಗೆ ಹಾಗೂ ಭಯೋತ್ಪಾದಕರಿಗೆ ಹಂಚುವ ತಂಡವೇ ಇದೆಯೆಂದು ತನಿಖಾ ದಳ ಅರೋಪಿಸಿದೆ.

ಕೆಲವು ತಿಂಗಳುಗಳ ಹಿಂದೆ ಕಾಶ್ಮೀರದ ಪ್ರತ್ಯೇಕತಾವಾದಿಗಳು ಯಾವ ರೀತಿಯಲ್ಲಿ ದೇಶದ್ರೋಹ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು ಎಂಬುದು ನಮಗೆಲ್ಲಾ ಅರಿವಿದೆ. ನಮ್ಮ ರಾಷ್ಟ್ರವನ್ನು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಕಾಪಾಡುತ್ತಿರುವ ಯೋಧರ ಮೇಲೆಯೇ ಈ ಪಾಪಿಗಳು ಕಲ್ಲೆಸೆದಿದ್ದರು. ಅಂತಹ ಒಬ್ಬ ದೇಶದ್ರೋಹಿಯನ್ನು ಜೀಪಿಗೆ ಕಟ್ಟಿ ಶಿಕ್ಷಿಸಿದರೆ ಭಾರತದ ಬುದ್ಧಿಜೀವಿಗಳು ಬೊಬ್ಬೆ ಹಾಕಿದರು. ಈಗ ಅಂತಹ ಅನೇಕ ದೇಶದ್ರೋಹಿಗಳ ಬಂಡವಾಳ ಬಯಲಾಗಲಿದೆ. ಇದಕ್ಕೆ ಆ ಬುದ್ಧಿಜೀವಿಗಳು ಯಾವ ರೀತಿ ಪ್ರತಿಕ್ರಿಯೆಯನ್ನು ಕೊಡುತ್ತಾರೋ ದೇವನೇ ಬಲ್ಲ.

ಇನ್ನೊಂದು ಆಘಾತಕಾರಿ ವಿಚಾರವೊಂದನ್ನು ತನಿಖಾ ದಳ ಹೊರಹಾಕಿದೆ. ತನಿಖಾ ದಳ ತಂಡ ಹೇಳಿರುವ ಪ್ರಕಾರ, “ಹಜ್ ಯಾತ್ರೆಗೆ ಭಾರತದಲ್ಲಿರುವಂತಹ ಮುಸಲ್ಮಾನರನ್ನು ಕಳುಹಿಸುವ ಪ್ರವಾಸೀ ಸಂಸ್ಥೆಗಳು ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಹಜ್ ಯಾತ್ರಿಕರಿಂದ ಪಡೆಯುವ ಹಣದಲ್ಲಿ ಅರ್ಧ ಅಂಶವನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ 80 ಜನರನ್ನು ಕಾಶ್ಮೀರದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಅವರ ವಿಚಾರಣೆಗಳಿಂದ ಕಾಶ್ಮೀರದಲ್ಲಿ ವ್ಮವಸ್ಥಿತ ಭಯೋತ್ಪಾದನೆ ಚಟುವಟಿಕೆಗಳು ನಡೆಯುತ್ತಿವೆ ಎಂಬುದಾಗಿ ಸಾಬೀತಾಗಿವೆ ಎಂದು ಭಾರತದ ರಾಷ್ಟ್ರೀಯ ತನಿಖಾ ದಳ ಸ್ಪಷ್ಟಪಡಿಸಿದೆ.

“ಹಲವು ಮಸೀದಿಗಳಲ್ಲೂ ಹಲವಾರು ವ್ಯಕ್ತಿಗಳು ಮಾಡುವ ಭಾಷಣದ ಮೇಲೂ ನಿಗಾವಹಿಸಲಾಗಿದೆ. ಅವರು ಕಾಶ್ಮೀರಿಗಳನ್ನು ಭಯೋತ್ಪಾದನೆ ಚಟುವಟಿಕೆ ಮಾಡುವತ್ತ ಪ್ರೇರೇಪಿಸುತ್ತಾರೆ” ಎಂದೂ ತನಿಖಾ ದಳದ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಾರೆಯಾಗಿ ಕಾಶ್ಮೀರ ಪ್ರತ್ಯೇಕತಾವಾಗಿಗಳಿಗೆ, ಹಜ್ ಯಾತ್ರೆಯ ವ್ಯವಸ್ಥಾಪಕರಿಗೆ, ಭಯೋತ್ಪಾದಕರಿಗೆ, ವೃತ್ತಿಪರ ಕಲ್ಲೆಸುಯುವವರಿಗೆ ಎಲ್ಲ ಸಂಬಂಧಗಳಿವೆ ಎಂಬುದು ಪದೇ ಪದೇ ಸಾಬೀತಾಗುತ್ತಿವೆ.

– ಆತ್ಮಿಕ

Tags

Related Articles

Close