ಅಂಕಣಪ್ರಚಲಿತ

ಭಾರತಕ್ಕೆ ಬಂಪರ್ ಆಫರ್ !! ಐದು ಲಕ್ಷ ಕೋಟಿ ಹೂಡಿಕೆಯ ಮೂಲಕ 50 ನಗರಗಳಿಗೆ ಮೆಟ್ರೋ ಸೇವೆ!

ಹೌದು ಈ ಯೋಜನೆ ಎಂದೋ ಆಗಬೇಕಿತ್ತು. ಆದರೆ ಆಗಿಲ್ಲ. ಯಾಕೆ ಗೊತ್ತಾ ಮುಂಚೆ ಭಾರತದಲ್ಲಿದ್ದದ್ದು ಕಾಂಗ್ರೆಸ್ ಸರಕಾರ. ದೇಶದಲ್ಲಿ ನಾನಾ ಹಗರಣಗಳನ್ನು
ಸೃಷ್ಟಿಸಿ, ತನ್ನ ದೇಶದ ಹಣವನ್ನು ಸ್ವಿಸ್ ಬ್ಯಾಂಕ್‍ನಲ್ಲಿಡುವುದೇ ಅವರ ಸಾಧನೆಯಾಗಿತ್ತು. ಆದರೆ ದೇಶದ ಚಿತ್ರಣವನ್ನು ಬದಲಿಸಲು ಬರೋಬ್ಬರಿ 70 ವರ್ಷಗಳ
ಮೋದಿಯೇ ಪ್ರಧಾನಿಯಾಗಿ ಬರಬೇಕಾಯಿತು. ಹೌದು, ನರೇಂದ್ರ ಮೋದಿ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆ ಇಡೀ
ದೇಶದಲ್ಲೆಡೆ ಅನುಷ್ಠಾನಕ್ಕೆ ಬಂದಿದ್ದೇ ಆದರೆ ಇಡೀ ದೇಶದ ದಿಕ್ಕು ಬದಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಮೋದಿಯ ನೂತನ ಯೋಜನೆ ಯಾವುದು ಗೊತ್ತಾ…? ಅದುವೇ ಕ್ಷಿಪ್ರ ಸಾರಿಗೆ ವ್ಯವಸ್ಥೆ…. ಮೆಟ್ರೋ ಸರ್ವಿಸ್… ಮೊದಲಿಗೆ ದೇಶದ 50 ನಗರಗಳು ಕ್ಷಿಪ್ರ ಸಾರಿಗೆ ವ್ಯವಸ್ಥೆಯಡಿಯಲ್ಲಿ ಬರಲಿದೆ. ಕೆಲವು ಕಡೆ ಈ ಯೋಜನೆ ಆರಂಭಗೊಂಡಿದೆ. ಮೋದಿ ತನ್ನ ಕನಸಿನ ಯೋಜನೆಯ ಬಗ್ಗೆ ಪೂಣೆ ಮೆಟ್ರೋ ರೈಲು ಉದ್ಘಾಟನೆ ಸಮಾರಂಭದಲ್ಲಿ ಹೇಳುತ್ತಿದ್ದಾಗ ಸಭೆಯಲ್ಲಿದ್ದವರೆಲ್ಲಾ ಬೆರಗಿನಿಂದ ನೋಡುತ್ತಿದ್ದರು. ಮೋದಿಯ ಈ ನೂತನ ಯೋಜನೆಗೆ ಆಗುವ ವ್ಯಯವೆಷ್ಟು ಗೊತ್ತಾ ಬರೋಬ್ಬರಿ 5 ಲಕ್ಷ ಕೋಟಿ ರೂ. ಹಣ. ನಗರಾಭಿವೃದ್ಧಿ ಸಚಿವಾಲಯದಿಂದ ಇಷ್ಟು ಹಣ ಬಿಡುಗಡೆಯಾಗಲಿದ್ದು, ಮುಂದಿನ 5ರಿಂದ 6 ವರ್ಷದ ಒಳಗಡೆ ಈ ಯೋಜನೆ ಸಿದ್ಧವಾಗಲಿದೆ. ಇಷ್ಟು ಹಣವನ್ನು ಕೇಂದ್ರ ಭರಿಸಲಿದ್ದು, ಈ ಯೋಜನೆಯಡಿಗೆ ಬರುವ ರಾಜ್ಯಗಳು ಯೋಜನೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸುವಂತೆ ಮೋದಿ ಕೇಳಕೊಂಡಿದ್ದಾರೆ. ದಕ್ಷಿಣ ಕೊರಿಯಾದ, ಚೀನಾ, ಜಪಾನ್, ಜರ್ಮನಿ, ಫ್ರಾನ್ಸ್, ರಷ್ಯಾ, ಕೆನಡಾ ಮೂಲದ ಕಂಪೆನುಗಳು ಈ ಯೋಜನೆಯಲ್ಲಿ ಸಹಭಾಗಿತ್ವ ಪಡೆಯಲಿದೆ. ಉನ್ನತ ತಂತ್ರಜ್ಞಾನವನ್ನು ಅಳವಡಿಸುವುದರಿಂದ ವಿಶ್ವದಲ್ಲೇ ವಿಶೇಷ ಸಾರಿಗೆ ವ್ಯವಸ್ಥೆಯಾಗಿ ಈ ಯೋಜನೆ ರೂಪುಗೊಳ್ಳಲಿದೆ. ಇಡೀ ದೇಶದಲ್ಲಿ ಮೆಟ್ರೋ ಜಾಲವನ್ನು ಹಬ್ಬಿಸಿ ಸಂಚಾರ ವ್ಯವಸ್ಥೆಯನ್ನು ವೇಗಗೊಳಿಸುವುದು ಈ ಯೋಜನೆಯ ಉದ್ದೇಶ.

ಮೆಟ್ರೋ ಯೋಜನೆ ಈಗಾಗಲೇ ದಹಲಿ, ಫರಿದಾಬಾದ್, ನೊಯಿಡಾ, ಗ್ರೇಟರ್ ನೊಯಿಡಾ, ಗಾಝಿಯಾಬಾದ್ ಜೈಪುರ್, ಕೊಚಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಅಹ್ಮದಾಬಾದ್ ನಗರಗಳಲ್ಲಿ ಮೆಟ್ರೋ ರೈಲು ಜಾಲವನ್ನು ಅನುಷ್ಠಾನಗೊಳಿಸಲಾಗಿದೆ ಅಥವಾ ಕೆಲವೊಂದು ಕಡೆಗಳಲ್ಲಿ ಅನುಷ್ಠಾನದ ಹಂತದಲ್ಲಿದೆ. ಸುಸ್ಥಿರ ಮತ್ತು ತ್ವರಿತ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ದೇಶದೆಲ್ಲೆಡೆ ಹಬ್ಬಿಸಲು ಮಾಡಿದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

ದೇಶದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರಕಾರ ಹಣ ವಿನಿಯೋಗಿಸಲಿದೆ. ಪ್ರಮುಖ ನಗರಗಳಲ್ಲಿ ರಾಜ್ಯ ಹಾಗೂ ಕೇಂದ್ರ 50:50 ಪಾಲುಬಂಡವಾಳ ವಿನಿಯೋಗಿಸಲಿದೆ. ಅಲ್ಲದೆ ನಗರದ ಪುರಸಭೆಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳಲಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕೇಂದ್ರ ಸರಕಾರ ಮುತುವರ್ಜಿ ವಹಿಸಲಿದೆ.

ದೇಶದಲ್ಲಿ ಈಗಾಗಲೇ 13 ಮೆಟ್ರೋ ಯೋಜನೆಗಳ ಕಾಮಗಾರಿ ಮುಗಿದಿದ್ದು, ಕೆಲವೊಂದು ಯೋಜನೆಗಳು ಮುಕ್ತಾಯದ ಹಂತದಲ್ಲಿದೆ. ಮೊದಲ ಹಂತದಲ್ಲಿ ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಜೈಪುರ, ಮುಂಬೈ(ಮೆಟ್ರೋ ಮತ್ತು ಮೊನೋರೈಲ್), ಕೋಲ್ಕತಾ ಹಾಗೂ ಕೊಚ್ಚಿಯಲ್ಲಿ ಪೂರ್ತಿಗೊಂಡಿದೆ.

ಎರಡನೇ ಹಂತದಲ್ಲಿ ಲಖ್ನೌ, ಕಾನ್ಪುರ, ಗೂರ್ಗನ್, ಪಾಟ್ನಾ, ಅಹ್ಮದಾಬಾದ್, ಸೂರತ್, ಇಂದೋರ್, ನಾಗ್ಪುರ್ ಮತ್ತು ಕೊಯಂಬತ್ತೂರುನಲ್ಲಿ ಎರಡನೇ ಹಂತದ ಮೆಟ್ರೋ ಕಾಮಗಾರಿ ಆರಂಭಗೊಳ್ಳಲಿದೆ. ಜೊತೆಗೆ ಚತ್ತೀಸ್ಗಢ, ಲೂಧಿಯಾನ ಹಾಗೂ ಕೋಝಿಕ್ಕೊಡೆಯಲ್ಲಿ ಹಂತಹಂತವಾಗಿ ಈ ಯೋಜನೆಗೆ ಚಾಲನೆ ಸಿಗಲಿದೆ.

ಹೈದರಾಬಾದ್ ಮೆಟ್ರೋದಲ್ಲಿ ಲಾರ್ಸೆನ್ ಹಾಗೂ ಟರ್ಬೊ ವ್ಯವಸ್ಥೆಯನ್ನು ಕಲ್ಪಿಸುವ ಪ್ರಮುಖ ಉದ್ದೇಶವನ್ನು ಹೊಂದಲಾಗಿದ್ದು ಇದು ಇದೇ ಅಕ್ಟೋಬರ್‍ನಲ್ಲಿ
ಸಮರ್ಪಣೆಗೊಳ್ಳಲಿದೆ. ಮುಂದಿನ ದಿನಗಳಲ್ಲಿ ವಿಜಯವಾಡದಿಂದ ಅಮರಾವತಿಗೆ ನೇರವಾಗಿ ಸಂಪರ್ಕ ಕಲ್ಪಿಸಲಿದೆ. ಇದಕ್ಕಾಗಿ 6,823 ಕೋಟಿ ರೂ. ವೆಚ್ಚವಾಗಲಿದೆ. ಈ ಮೆಟ್ರೋಗಳಿಗೆ ಅಗತ್ಯ ಬೇಕಾಗಿರುವುದು ವಿದ್ಯುತ್ ಶಕ್ತಿ. ಇದರಲ್ಲಿ ಶೇ. 40 ಭಾಗವನ್ನು ವಿವಿಧ ವಿದ್ಯುತ್ ಸ್ಥಾವರಗಳಿಂದ ಪಡೆಯಲಿದ್ದರೆ ಉಳಿದ ವಿದ್ಯತ್‍ಛಕ್ತಿಯನ್ನು ಸೋಲಾರ್ ಮುಖಾಂತರ ಬರಿಸಲಿದೆ. ಈ ಯೋಜನೆಗೆ ಬೇಕಾದ ಭೂಸ್ವಾದೀನ ಪ್ರಕ್ರಿಯೆಯನ್ನೂ ಪೂರೈಸಲಾಗಿದೆ. 2022ರಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸಲಿದ್ದು, ಇದರ ಸವಿನೆನಪಿಗಾಗಿ ಅಂದೇ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಭಾರತವನ್ನು ಬಲಾಢ್ಯ ದೇಶವನ್ನಾಗಿ ಮಾಡಲು ಈ ಯೋಜನೆಯನ್ನು ಆರಂಭಿಸಲಾಗಿದೆ.

ಮುಂದಿನ ದಿನಗಳಲ್ಲಿ ಮೆಟ್ರೋ ಇಡೀ ಭಾರತದ ಪ್ರಮುಖನಗರಗಳನ್ನು ಬೆಸೆಯಲಿದ್ದು, ದೇಶದ ಜನರ ಪ್ರಯಾಣದ ಕಾಲಾವಕಾಶವನ್ನು ತಗ್ಗಿಸಲಿದೆ. ಸೌರಶಕ್ತಿಯನ್ನು ಬಳಕೆ ಮಾಡುವುದರಿಂದ ಒಂದು ಇಂಧನ ಬಳಸಬೇಕಾದ ಅಗತ್ಯವಿರುವುದಿಲ್ಲ. ಇದರಿಂದ ಪ್ರಯಾಣ ದರ ಕಡಿಮೆಯಾಗುವುದರಿಂದ ಜನಸ್ನೇಹಿ ಸಾರಿಗೆ ವ್ಯವಸ್ಥೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನರೇಂದ್ರ ಮೋದಿಯವರ ಯೋಜನೆಗಳು ದೇಶದ ಅಭಿವೃದ್ಧಿಗೆ ಮಹಾನ್ ಕೊಡುಗೆ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಮೋದಿಯವರಿಂದ ಇನ್ನಷ್ಟು ಮಹಾನ್ ಯೋಜನೆಗಳು ಜಾರಿಗೆ ಬರಲಿದೆ.

-ಚೇಕಿತಾನ

Tags

Related Articles

Close