ಪ್ರಚಲಿತ

ಭಾರತಕ್ಕೆ ಬಾರದಿರಲಿ ಇಟಲಿಯ ಪರಿಸ್ಥಿತಿ! ಪ್ರಧಾನಿ ಮೋದಿಯ ಈ ನಿರ್ಧಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಶ್ಲಾಘನೆ…

ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈರಾಣು ಸೋಂಕಿನ ವಿರುದ್ಧ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಭಾರತಕ್ಕೆ ಕೊರೊನಾ ಸೋಂಕು ಕಾಲಿಡುತ್ತಲೇ ಸರ್ಕಾರ ಬಾರೀ ನಿಗಾ ವಹಿಸಿದೆ. ಕೆಲವೇ ಕೆಲವರ ಬೇಜಾಬ್ದಾರಿಗಳಿಂದ ದಿನದಿಂದ ದಿನಕ್ಕೆ ಸೋಂಕು ಹರಡುವುದು ಜಾಸ್ತಿಯಾಗುತ್ತಿದೆ. ಇದಕ್ಕಾಗಿ ಇನ್ನು ಮೂರು ವಾರಗಳ ಕಾಲ ಸಂಪೂರ್ಣವಾಗಿ ಭಾರತ ಲಾಕ್‍ಡೌನ್ ಆಗಲಿದೆ.

ಜನರಿಗೆ ಅಗತ್ಯವಸ್ತುಗಳು ಖರೀದಿಸುವುದಕ್ಕೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದ್ದು ಅದನ್ನು ಬಿಟ್ಟು 21 ದಿನಗಳ ಕಾಲ ಮನೆಯಿಂದ ಹೊರಬರುವಂತಿಲ್ಲ ಅಂತಾ ಸರ್ಕಾರ ಖಡಕ್ ಆಗಿ ಎಚ್ಚರಿಸಿದೆ. ಅದನ್ನೂ ಮೀರಿಯೂ ಮನೆಯಿಂದ ಹೊರಬಂದರೆ ಮುಂದೆ ಭಾರೀ ಅಪಾಯವನ್ನು ಎದುರಿಸಬೇಕಾದ ಸಂದರ್ಭ ಎದುರಾಗಬಹುದು. ನಮ್ಮನ್ನು, ನಮ್ಮ ಕುಟುಂಬವನ್ನು, ಇಡೀ ದೇಶವನ್ನು ರಕ್ಷಣೆ ಮಾಡಬೇಕೆಂದರೆ ಮನೆಯಿಂದ ಹೊರಬರದೇ ಇರುವುದು ಒಂದೇ ದಾರಿ.

ನಿನ್ನೆ ಪ್ರಧಾನಿ ಮೋದಿಯವರು ದೇಶವನ್ನುದ್ಧೆಶಿಸಿ ಮಾತನಾಡಿದ್ದು ಪ್ರಧಾನಿಯಾಗಿ ಅಲ್ಲ ನಿಮ್ಮ ಮನೆಯ ಸದಸ್ಯನಾಗಿ ನಾನು ನಿಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ ಮನೆಯಿಂದ ಯಾರೂ ಹೊರಬರಬೇಡಿ ಈ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಎಚ್ಚರವಹಿಸೋಣ ಎಂದು ಮನವಿ ಮಾಡಿದ್ದರು.

ಭಾರತಕ್ಕೆ ಬಾರದಿರಲಿ ಇಟಲಿ ಪರಿಸ್ಥಿತಿ!

ಚೀನಾದಲ್ಲಿ ಆರಂಭವಾದ ಈ ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಅದರಲ್ಲೂ ಇಟಲಿಯಲ್ಲಂತೂ ಸಾವಿನ ಸಂಖ್ಯೆ ಕೇಳುತ್ತಲೇ ಮೈ ಜುಮ್ಮೆನ್ನುತ್ತೆ! ಭಾರತದಲ್ಲೇದರೂ ನಿರ್ಲಕ್ಷ್ಯವಹಿಸಿದೆ ನಮ್ಮ ಸ್ಥಿತಿ ಏನಾಗಬಹುದು ಒಮ್ಮೆ ಯೋಚಿಸಿ. ಜೀವನ ಸ್ಪಲ್ಪ ದಿನ ಕಷ್ಟವಾದರೂ ನಮ್ಮನ್ನು ನಮ್ಮ ಕುಟುಂಬ ನಮ್ಮ ದೇಶವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂಬುವುದನ್ನು ಮರೆಯದಿರಿ. ಇಡೀ ದೇಶವನ್ನು ಲಾಕ್‍ಡೌನ್ ಮಾಡಿದ್ರು ಇನ್ನೂ ಜನರು ನಿರ್ಲಕ್ಷ್ಯ ತೋರಿಸಿದ್ರೆ ಭಾರೀ ಅನಾಹುತವನ್ನು ಎದುರಿಬೇಕಾಗಬಹುದು.

ಇಟಲಿಯಂತಹ ಪರಿಸ್ಥಿತಿ ಭಾರತಕ್ಕೆ ಬರಬಾರದೆಂದರೆ ನಾವು ಮೊದಲು ಜವಾಬ್ದಾರರಾಗಬೇಕು. ಸಾಮಾಜಿಕ ಅಂತರವನ್ನು ಕಾಪಾಡಬೇಕು. ಸರ್ಕಾರದ ಸೂಚನೆಯಂತೆ ನಡೆದುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ…

ಭಾರತದ ನಿರ್ಧಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ

ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಸಂಪೂರ್ಣ ಭಾರತದ 21 ದಿನಗಳ ಲಾಕ್ ಡೌನ್ ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಸಮಗ್ರ, ದಿಟ್ಟ ಕ್ರಮ ಎಂದು ಶ್ಲಾಘಿಸಿದೆ. ಕೊರೋನಾ ಸೋಂಕಿನ ವಿರುದ್ಧ ಭಾರತ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿ ಎಂದು ಹೇಳಿದೆ. ಭಾರತ ಕೊರೋನಾ ವೈರಸ್ ವಿರುದ್ಧ ಕಣ್ಗಾವಲು, ಪ್ರಯೋಗಾಲಯದ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಪ್ರತ್ಯೇಕತೆ ಮತ್ತು ಅಪಾಯಗಳ ಬಗ್ಗೆ ತಿಳಿಹೇಳುವುದು ಒಳಗೊಂಡಂತೆ ತಡೆಗಟ್ಟುವಿಕೆಗೆ ಬೃಹತ್ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್ ಬೆಕೆಡಮ್ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 18 ಸಾವಿರದ 915ಕ್ಕೇರಿದ್ದು, 4 ಲಕ್ಷದ 22 ಸಾವಿರದ 900 ಕೇಸುಗಳು ಜಗತ್ತಿನ 165ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ವರದಿಯಾಗಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 562ಕ್ಕೇರಿದ್ದು ಇದುವರೆಗೆ 12 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೊರಡಿಸಿರುವ ಅಂಕಿಅಂಶ ತಿಳಿಸಿದೆ. ಹೀಗಾಗಿ ನಮ್ಮನ್ನು ನಮ್ಮ ಕಟುಂಬವನ್ನು ಇಡೀ ದೇಶವನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡೋಣ…

Tags

Related Articles

FOR DAILY ALERTS
Close