ಇತಿಹಾಸ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಮಧ್ಯರಾತ್ರಿಯಲ್ಲಿ ಅಲ್ಲ!!

ಉದಾರವಾದಿಗಳು ಬುದ್ದಿಜೀವಿಗಳು ಭಾರತದ ಇತಿಹಾಸದಲ್ಲಿರುವ ಅದೆಷ್ಟೋ ವಿಚಾರಗಳನ್ನು ಸುಳ್ಳನ್ನೇ ಸತ್ಯವಾಗಿಸಿ ಈಡೀ ವ್ಯವಸ್ಥೆಯನ್ನೇ ಬದಲಾವಣೆ ಮಾಡಿದರು ಎಂದರೆ ಅದನ್ನು ಹೇಳತೀರದು!! ಯಾಕೆಂದರೆ ಭಾರತದಲ್ಲಿ ಬ್ರಿಟಿಷರು 190 ವರ್ಷಗಳಲ್ಲಿ ಆಳ್ವಿಕೆ ಮಾಡಿ ತದನಂತರದಲ್ಲಿ ದೇಶ ಬಿಟ್ಟು ತೊಲಗಿದರು ಎಂದರೆ ಅಲ್ಲಿ ಆಗಿರುವ ಸಾವು-ನೋವುಗಳ ವಿಚಾರಗಳು ಮಾತ್ರ ಪತಾಳದಲ್ಲಿ ಹುದುಗಿ ಹೋಗಿರುವ ನಿಗೂಢ ರಹಸ್ಯದಂತೆ ಕಾಣುತ್ತದೆ!! ಯಾಕೆಂದರೆ ಸುಳ್ಳನ್ನೇ ಸತ್ಯವಾಗಿಸಿ ನಡೆಸಿದ ಇತಿಹಾಸದಲ್ಲಿನ ನಿಜಾಂಶ ತಿಳಿಯುವುದೂ ಕೂಡ ಕಷ್ಟವೇ ಬಿಡಿ!!

ಹೌದು….. ಬುದ್ದಿಜೀವಿಗಳು ಮಾಡಿದ ಅವಾಂತರಗಳನ್ನು ನೋಡಿದಾಗ ನಗಬೇಕು ಅಥವಾ ಅಕ್ರೋಶವನ್ನು ವ್ಯಕ್ತಪಡಿಸಬೇಕೋ ಎಂದು ಗೊತ್ತಾಗುತ್ತಿಲ್ಲ!! ಯಾಕೆಂದರೆ ಭಾರತದಲ್ಲಿ ಬ್ರಿಟಿಷರಿಂದ ಆದ ದೌರ್ಜನ್ಯಗಳು ಅಷ್ಟಿಷ್ಟಲ್ಲ!! ಇದರಿಂದ ಅದೆಷ್ಟೋ ಭಾರತೀಯರು ಸಿಡಿದೆದ್ದು, ಬ್ರಿಟಿಷರ ವಿರುದ್ದ ಹೋರಾಡಿ ದೇಶದಿಂದ ಬ್ರಿಟಿಷರನ್ನು ಓಡಿಸಲು ಮಾಡಿದ ಕಸರತ್ತುಗಳನ್ನು ಹೇಳತೀರದು!! ವಿಪರ್ಯಾಸವೆಂದರೆ, ಅನೇಕ ಭಾರತೀಯರು ಮತ್ತು ಇತಿಹಾಸದ ಪುಟಗಳು ನಮಗೆ ತಿಳಿಸಿದೆನೆಂದರೆ, ಎಂ.ಕೆ ಗಾಂಧಿಯವರು ಅಹಿಂಸೆಯ ಶಸ್ತ್ರಾಸ್ತ್ರವನ್ನು ಬಳಸಿದಾಗ, ಬ್ರಿಟಿಷರು ಇದನ್ನು ಕಂಡು ಕಂಗಾಲಾಗಿ ತಮ್ಮ ವಸಾಹತುಗಳನ್ನು ಭಾರತದಿಂದ ಹೊರಹಾಕಿದ್ದಲ್ಲದೇ, ಪಲಾಯನಗೈದಿದ್ದಾರೆ ಎಂದು!! ಆದರೆ ಕೇವಲ ಅಹಿಂಸೆಯ ಮಾರ್ಗವನ್ನು ಹಿಡಿದಿದ್ದಕ್ಕಾಗಿ ಹೆದರಿ ಓಡಿದರು ಎಂದರೆ ಯಾರಾದರೂ ನಂಬುತ್ತಾರೆಯೇ??

ಭಾರತಕ್ಕೆ ಸ್ವಾತಂತ್ರ್ಯವು ಏಕಾಏಕೀಯಾಗಿ ಮಧ್ಯರಾತ್ರಿಯಲ್ಲಿ ಸಿಕ್ಕಿದ್ದಲ್ಲ!! ಇದಕ್ಕಾಗಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಲೆಕ್ಕಿಸಿದೇ ದೇಶಕ್ಕೋಸ್ಕರ ಪ್ರಾಣವನ್ನು ಪಣಕ್ಕಿಟ್ಟು, ಕೋಟಿಯಾಂತ್ಯರ ಭಾರತೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ!! ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ, ಭಾರತ ದೇಶದುದ್ದಕ್ಕೂ ವಸಾಹತು ಶಾಹಿಗಳೇ ಆಡಳಿತವನ್ನು ನಡೆಸುತ್ತಿದ್ದವು ಮಾತ್ರವಲ್ಲದೇ ಈಡೀ ದೇಶವೇ ಅವರ ಸುಪರ್ದಿಗೆಯಲ್ಲಿತ್ತು!!

ಆದರೆ, ಭಾರತದಲ್ಲಿ 1857ರ ಸಂದರ್ಭದಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಬ್ರಿಟಿಷರ ವಿರುದ್ದ ನಡೆದ ಬಹುದೊಡ್ಡ ಹೋರಾಟವಾಗಿತ್ತು. ಆ ಸಂದರ್ಭದಲ್ಲಿ ಈಡೀ ಭಾರತವೇ ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು!! ಆ ಸಂದರ್ಭದಲ್ಲಿ ಬ್ರಿಟನ್ ತಮ್ಮ ಹತೋಟಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಯು ಒದಗಿಬಂದಿತ್ತು!!! (Dr B Ambedkar considered the 1857 Mutiny to be a revolt by Muslims to reestablish their rule over India – Editor.)

ಕ್ರಿ.ಶ 1857ರಲ್ಲಿ ನಡೆದ ನಾಗರಿಕತೆಯ ಯುದ್ದದಲ್ಲಿ, ಮುಂಬೈ ಮೂಲದ ಬರಹಗಾರ ಮತ್ತು ಇತಿಹಾಸಕಾರರಾದ ಅಮರೇಶ್ ಮಿಶ್ರಾ ಹೇಳುವ ಪ್ರಕಾರ, 1857ರಲ್ಲಿ ಆರಂಭವಾದ ಈ ಯುದ್ದ ಕೇವಲ 10 ವರ್ಷಗಳಲ್ಲಿ, ಸುಮಾರು 10 ಮಿಲಿಯನ್ ಜನರ ಪ್ರಾಣವನ್ನು ತೆಗೆದುಕೊಂಡಿತ್ತು. ಹಾಗಾಗಿ ಅದನ್ನು “ಅಳೆಯಲಾಗದ ಸಾಮೂಹಿಕ ಹತ್ಯಾಕಾಂಡ” ಎಂದು ಕರೆದಿದ್ದಾರೆ!! ಅಷ್ಟೇ ಅಲ್ಲದೇ, ದಿ ಗಾರ್ಡಿಯನ್ ವೃತ್ತಪತ್ರಿಕೆಯಲ್ಲಿ ಮಾತನಾಡಿದ ಮಿಶ್ರಾ, “ಈ ಯುದ್ದವು, ಲಕ್ಷಾಂತರ ಜನ ಕಣ್ಮರೆಯಾದ ಒಂದು ಯುದ್ದವಾಗಿದ್ದಲ್ಲದೇ ಇದೊಂದು ಹತ್ಯಾಕಾಂಡವಾಗಿತ್ತು! ಯಾಕೆಂದರೆ ಬ್ರಿಟಿಷರ ದೃಷ್ಠಿಕೋನದ ಪ್ರಕಾರ, ಇದೊಂದು ಅಗತ್ಯವಾದ ಹತ್ಯಾಕಾಂಡವಾಗಿದ್ದು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣವಾಗಿ ಜನಸಂಖ್ಯೆಯನ್ನು ನಾಶಮಾಡುವುದು ಇದರ ಏಕೈಕ ಉದ್ದೇಶವಾಗಿತ್ತು! ಅಷ್ಟೇ ಅಲ್ಲದೇ, ಇದೊಂದು ಸರಳ ಮತ್ತು ಕ್ರೂರವಾಗಿ ನಡೆದ ಹತ್ಯಾಕಾಂಡದ ಜೊತೆಗೆ ಭಾರತೀಯರ ಮೇಲೆ ನಡೆದ ಕ್ರೂರ ಹತ್ಯೆ ಇದಾಗಿತ್ತು!! ಆದರೆ ಈ ಒಂದು ಕ್ರೂರ ಹತ್ಯಾಕಾಂಡವನ್ನು ರಹಸ್ಯವಾಗಿಯೇ ಇರಿಸಲಾಗಿದ್ದು ಮಾತ್ರ ವಿಪರ್ಯಾಸ” ಎಂದಿದ್ದಾರೆ!!!

ಭಾರತವನ್ನು ಬ್ರಿಟಿಷರು ವಶಪಡಿಸಿಕೊಂಡ ನಂತರ ನಡೆದ ಘೋರ ಪ್ರತೀಕಾರದ ಬಗ್ಗೆ “ದಿ ಗಾರ್ಡಿಯನ್”ನಲ್ಲಿ- “ನಿಜವಾಗಿ ಕೂಡ, ಈ ರೀತಿಯಾಗಿ ಕಲಿಸಿದ ಕೊಟ್ಟ ಭಯಾನಕವಾದ ಪಾಠವನ್ನು ನಾವು ಎಂದಿಗೂ ಮರೆಯುವುದಿಲ್ಲ” ಎಂದು ಬರೆದಿದ್ದರು!!

Here’s what the writer Charles Dickens remarked: “I wish I were commander-in-chief in India … I should proclaim to them that I considered my holding that appointment by the leave of God, to mean that I should do my utmost to exterminate the race.”

ಆದರೆ 1857ರ ಯುದ್ದಕ್ಕೂ ಮುಂಚಿತವಾಗಿ ಅಂದರೆ, 1806ರಲ್ಲಿ ನಡೆದ ವೆಲ್ಲೂರ್ ದಂಗೆಯು ಸುಮಾರು ಅರ್ಧಶತಮಾನಕ್ಕಿಂತಲೂ ಹಿಂದೆ ನಡೆದ ದಂಗೆಯಾಗಿತ್ತು!! ದಕ್ಷಿಣ ಭಾರತೀಯ ಪಟ್ಟಣವಾದ ವೆಲ್ಲೂರ್‍ನಲ್ಲಿ ನಡೆದ ಕ್ರೂರ ದಂಗೆ ಇದಾಗಿತ್ತು!! ಆ ಸಂದರ್ಭದಲ್ಲಿ ಭಾರತೀಯರ ದಂಗೆಕೋರರು ಬ್ರಿಟಿಷರ
ಭದ್ರಕೋಟೆಯನ್ನು ಮುರಿದು 200 ಬ್ರಿಟಿಷ್ ಪಡೆಗಳನ್ನು ಕ್ರೂರವಾಗಿ ಕೊಂದಿದ್ದಾರಲ್ಲದೇ, ಈ ಸಂದರ್ಭದಲ್ಲಿ ಅದೆಷ್ಟೋ ಜನ ಬ್ರಿಟಿಷರು ಗಾಯಕ್ಕೊಳಗಾಗಿದ್ದರು!!

ತದನಂತರದ, 1824ರಲ್ಲಿ ಕರ್ನಾಟಕದ ಕಿತ್ತೂರು ಸಾಮ್ರಾಜ್ಯದ ರಾಣಿಯಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಸಶಸ್ತ್ರ ದಂಗೆಯನ್ನು ನಡೆಸಿದ್ದರು. ಅಲ್ಲದೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಮ ನಡೆಯುವುದಕ್ಕಿಂತಲೂ ಸುಮಾರು 56 ವರ್ಷಗಳ ಹಿಂದೆ ಜನಿಸಿದ ರಾಣಿ ಲಕ್ಷೀಬಾಯಿ ಬ್ರಿಟಿಷರ ವಿರುದ್ದ ಹೋರಾಡಿದ ಮೊದಲ ಮಹಿಳೆ ಎಂದೆನಿಸಿದ್ದಾರೆ!!

ಸುಮಾರು 1858 ರಿಂದ 1900ರ ಆರಂಭದವರೆಗೂ ಬ್ರಿಟಿಷರು ಭಾರತದಲ್ಲಿ ತಮ್ಮ ಅಧಿಕಾರವನ್ನು ಹೊಂದಿದ್ದು, ಈ ಸಂದರ್ಭದಲ್ಲಿ ಭಾರತದಲ್ಲಿದ್ದ ಕೈಗಾರಿಕೆಗಳು ಸೇರಿದಂತೆ, ನೂಲುನೇಯ್ಗೆಗಳು, ಲೋಹಶಾಸ್ತ್ರಗಳು, ಹಾಗೆಯೇ ಕೃಷಿ ಮತ್ತು ವ್ಯಾಪಾರಗಳು ವಿನಾಶದ ಅಂಚಿನಲ್ಲಿತ್ತು!!

ಹಾಗಾಗಿ ಇದಕ್ಕೆ ಕೋಪಗೊಂಡ ಬ್ರಿಟಿಷರು ಕ್ರಾಂತಿಪಡೆಗಳ ಜೊತೆ ಹೋರಾಟ ನಡೆಸಲು ಮುಂದಾದವು!! 19ನೇ ಶತಮಾನದ ಕೊನೆಯ ತ್ರೈಮಾಸಿಕದಲ್ಲಿ ಬಂಕಿಂ ಚಂದ್ರ ಚಟರ್ಜಿ, ಸ್ವಾಮಿ ವಿವೇಕಾನಂದ ಮತ್ತು ಇತರ ರಾಷ್ಟ್ರೀಯವಾದಿಗಳ ಸ್ಫೂರ್ತಿಯಿಂದಾಗಿ ಸ್ವಾತಂತ್ರ್ಯ ಹೋರಾಟ ನಡೆಯಲು ಆರಂಭವಾದವು. “ವಂದೇ ಮಾತರಂ” ಎನ್ನುವ ದೇಶಭಕ್ತಿ ತುಂಭಿದ ಹಾಡನ್ನು 1882ರಲ್ಲಿ ಚಟರ್ಜಿಯವರು ಬರೆದಿದ್ದರು!! ವಂದೇ ಮಾತರಂ ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು ರಾಷ್ಟ್ರೀಯ ಗಾನ ಎಂದು ಕರೆಯಲಾಗುತ್ತದೆ!!

1905ರ ನಂತರ ಸ್ವದೇಶಿ ಚಳುವಳಿಯು ತೀವ್ರಗೊಂಡು, ಕ್ರಾಂತಿಕಾರಿಗಳು ವಿದೇಶಿ ವಸ್ತುಗಳನ್ನು ಖರೀದಿಸುವಲ್ಲಿ ಹಾಗೂ ವಿದೇಶಿ ಕಂಪನಿಗಳನ್ನು ನಿಷೇಧ
ಮಾಡಬೇಕೆಂದು ಪಣತೊಟ್ಟರು. ಈ ಸಂದರ್ಭದಲ್ಲಿ ದೇಶಾಭಿಮಾನದ ಕಿಚ್ಚು ಎಲ್ಲರ ಮನೆ ಮನಸ್ಸನ್ನು ತಟ್ಟಿತ್ತು!! ಪುಣೆಯಲ್ಲಿ, ಕಾಂತ್ರಿಕಾರಿಯಾದ ವೀರ ಸಾವರ್ಕರ್ 1905ರ ಒಕ್ಟೋಬರ್ 7ರಂದು ವಿದೇಶಿ ಬಟ್ಟೆಗಳನ್ನು ಸುಟ್ಟು ಹಾಕಿದರು!!( ವಿಪರ್ಯಾಸ ಎಂದರೆ, 16ವರ್ಷದ ನಂತರ ಉತ್ತರ ಆಫ್ರಿಕಾದಲ್ಲಿದ್ದ ಎಂಕೆ ಗಾಂಧಿ, ತನ್ನನ್ನು ಬಹಿಷ್ಕರಿಸಿದ ನಂತರ ಭಾರತದಲ್ಲಿ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ್ದು).

ವಿದ್ಯಾವಂತರಾಗಿದ್ದ ಕೆಲ ಕ್ರಾಂತಿಕಾರಿಗಳು ವಿದೇಶಿ ವಸ್ತುಗಳ ಮೇಲೆ ಭಾರತದಲ್ಲಿ ಹೋರಾಟ ನಡೆಸಿದರೆ, ಜಾರ್ಖಾಂಡ್‍ನಲ್ಲಿ ಬಿರ್ಸಮುಂಡಾ ಎನ್ನುವಾತ ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ!! 1914ರಲ್ಲಿ ಜಾತ್ರಾ ಓರೊನ್, ತಾನಾ ಚಳುವಳಿಯನ್ನು ಆರಂಭಿಸಿದ್ದು ಅದರಲ್ಲಿ ಸುಮಾರು 25000 ಬುಡಗಟ್ಟು ಜನಾಂಗದವರು ಭಾಗವಹಿಸಿದ್ದರು!!! ಆದರೆ 1920ರಲ್ಲಿ ತಾನ ಚಳುವಳಿಯು ಬ್ರಿಟಿಷ್ ಸರಕಾರ ವಿಧಿಸಿದ್ದ ಭೂತೆರಿಗೆಯಿಂದ ನಿಂತು ಹೋಯಿತು!! ತದನಂತರದ ಭಾರತದಲ್ಲಿರುವ ನಾಯಕರಲ್ಲಿ ಕ್ರಾಂತಿ ಏಳಲು ಕಾರಣವಾಯಿತಲ್ಲದೇ, ಈ ಸಂದರ್ಭದಲ್ಲಿ ದರ್ಬಾಂಗ್‍ನ ರಾಜ ಕಠಿಣವಾದ ತೊಂದರೆಯನ್ನು ತೆಗೆದುಕೊಂಡು ರೈತರ ಬೆಂಬಲಕ್ಕೆ ನಿಂತನು. ಇದು 1922 ಆಗಸ್ಟ್‍ನಲ್ಲಿ, ಆಂದ್ರಪ್ರದೇಶದ ಬುಡಕಟ್ಟು ಜನಾಂಗದವರು ದಂಗೆ ಏಳಲು ಕೂಡ ಕಾರಣವಾಯಿತು!! ಈ ಸಂದರ್ಭದಲ್ಲಿ ಅಲ್ಲೂರಿ ಸೀತಾರಾಮರಾಜು ಎನ್ನುವಾತ ಬುಡಕಟ್ಟು ಜನಾಂಗದವರ ಹೋರಾಟದ ನಾಯಕತ್ವವನ್ನು ವಹಿಸಿದ್ದು, ಬ್ರಿಟಿಷರ ವಿರುದ್ದ ನಡೆದಿದ್ದ ಗೊರಿಲ್ಲ ಯುದ್ದದಲ್ಲಿ ಯಶಸ್ಸನ್ನು ಕಂಡರು!!

ಅತ್ಯಂತ ಜನಪ್ರಿಯ ದಂಗೆಯೆಂದು ಕರೆಯಲ್ಪಟ್ಟ ಖಾಕ್ಸರ್ ಚಳುವಳಿಯ ಮುಂದಾಳತ್ವವನ್ನು ಲಾಹೋರ್‍ನ ಅಲ್ಲಮ ಮರ್ಶೀಕಿ ವಹಿಸಿದ್ದು, ಯಾವತ್ತೂ ಕೂಡ
ಬ್ರಿಟಿಷರೊಂದಿಗೆ ರಾಜಿಯನ್ನು ಮತ್ತು ಹೊಂದಾಣಿಕೆಯನ್ನು ಬಯಸಿದವನೇ ಅಲ್ಲ!! ಈ ಸಂದರ್ಭದಲ್ಲಿ ಭಾರತದಲ್ಲಿನ ಮುಸಲ್ಮಾನರು, ಹಿಂದುಗಳು ಮತ್ತು ಸಿಖ್ಖರು ಸೇರಿ, ಒಟ್ಟು 4 ಮಿಲಿಯನ್ ಜನರು ಹಾಗೂ ಸಾವಿರಾರು ಅಧಿಕಾರಿಗಳು ಖಾಕ್ಸರ್ ಚಳುವಳಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆಗಳನ್ನು ನಡೆಸಿ, ಅಣಕು ಯುದ್ದಗಳನ್ನು ನಡೆಸಿದ್ದಲ್ಲದೇ ಅನೇಕ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅಲ್ಲದೇ ಅನೇಕ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿ ವಿದೇಶಿ ಆಡಳಿತವನ್ನು ಮಟ್ಟ ಹಾಕಲು ಮುಸಲ್ಮಾನ ಹಾಗೂ ಇತರ ಧರ್ಮದವರು ಸೋದರತ್ವದ ಭಾವನೆಯನ್ನು ಒಗ್ಗೂಡಿಸಿ ಬ್ರಿಟಿಷರೊಂದಿಗೆ ಕಾದಾಡಿದರು!! ಈ ಸಂದರ್ಭದಲ್ಲಿ ಮರ್ಶೀಕಿ ಮತ್ತು ಆತನ ಚಿಕ್ಕ ಮಗನನ್ನು ಬ್ರಿಟಿಷರು ಬಂಧಿಸಿ ಚಿತ್ರಹಿಂಸೆಯನ್ನು ನೀಡಿದರು!!

ಹಿಂದೂ, ಮುಸ್ಲಿಂ ಎನ್ನುವ ಬೇಧಭಾವವನ್ನು ಮರೆತು ಎಲ್ಲರೂ ಬ್ರಿಟಿಷರನ್ನು ಮಟ್ಟಹಾಕುವಲ್ಲಿ ಒಗ್ಗೂಡಿದರು. ಹಾಗಾಗಿ ಸುಭಾಷ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಗೆ ಸೇರಿಕೊಂಡರು!! ತದನಂತರದಲ್ಲಿ ಬ್ರಿಟಿಷರಿಗೆ ಭಾರತದಲ್ಲಿ ಸುರಕ್ಷತೆ ಇಲ್ಲ ಎನ್ನಲು ಪ್ರಾರಂಭವಾಯಿತು. ಅಷ್ಟೇ ಅಲ್ಲದೇ, ಬ್ರಿಟಿಷರು ಹೆದರಲು ಆರಂಭಿಸಿ, ಮನೆಯಲ್ಲಿರಲು ಭಯಭೀತರಾದರು!! ಆ ಸಂದರ್ಭದಲ್ಲಿ ಭಗತ್‍ಸಿಂಗ್ ಬ್ರಿಟಿಷರ ಸಂಸತ್ತಿಗೆ ಬಾಂಬ್ ಸ್ಪೋಟಿಸಿದರೆ, ಕ್ರಾಂತಿಕಾರಿ ಉದ್ದಮ್ ಸಿಂಗ್ ಯುಕೆಗೆ ತೆರಳಿ, ಜಲಿಯನ್ ವಾಲಾಬಾಗ್‍ನಲ್ಲಿ 2000ಕ್ಕಿಂತಲೂ ಹೆಚ್ಚು ನಿಶ್ಯಸ್ತ್ರ ಪುರುಷರನ್ನು, ಮಹಿಳೆಯರನ್ನು ಹಾಗೂ ಮಕ್ಕಳನ್ನು ಹತ್ಯೆ ಮಾಡಿದ್ದ ಪಂಜಾಬ್‍ನ ಬ್ರಿಟಿಷ್ ಲೆಫ್ಟಿನೆಂಟ್ ಆಗಿದ್ದ ಮೈಕಲ್ ಒ’ಡೈಯರ್‍ನನ್ನು ಹತ್ಯೆ ಮಾಡಿದ!!

ಭಾರತದಲ್ಲಿ ಸುಲಭವಾಗಿ ಲೂಟಿ ಮಾಡಿದ ಬ್ರಿಟಿಷರನ್ನು ಬಗ್ಗುಬಡಿಯಲು ಲಕ್ಷಾಂತರ ಭಾರತೀಯರು ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಸಿದ್ದರಾಗಿದ್ದರೇ ಹೊರತು ಯುದ್ದದಿಂದ ಹಿಂಜರಿಯಲು ರೆಡಿ ಇರಲಿಲ್ಲ!!

ಎರಡನೇ ಜಾಗತಿಕ ಯುದ್ದದ ನಂತರ, ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರವನ್ನು ದುರ್ಬಲಗೊಳಿಸುವಲ್ಲಿ ಭಾರತೀಯರು ಯಶಸ್ವಿಯಾದರು!! ಎಂ.ಜಿ ಅಗರ್‍ವಾಲ್ ಅವರ ನಾಲ್ಕು ಸಂಪುಟಗಳ ಭಾರತದ ಸ್ವಾತಂತ್ರ್ಯ ಹೋರಾಟಗಾರರು ಎನ್ನುವ ಪುಸ್ತಕದಲ್ಲಿ,” ಫೆಬ್ರವರಿ 1946ರಲ್ಲಿ ಭಾರತೀಯ ನೌಕಾಪಡೆಯು ಅಭೂತಪೂರ್ವ ಮುಷ್ಕರವನ್ನು ಘೋಷಿಸಿತ್ತು. ಅಲ್ಲದೇ, ಬಾಂಬೆ ಬಂದರಿನಲ್ಲಿದ್ದ 20 ಹಡಗುಗಳ ಮೇಲೆ ಭಾರತೀಯ ಸಿಬ್ಬಂದಿಗಳು ತಮ್ಮ ನಿಯಂತ್ರಣವನ್ನು ಸಾಧಿಸಿದ್ದರಲ್ಲದೇ, 20,000 ನೌಕಾ ಸಿಬ್ಬಂದಿಗಳು ದಂಗೆಯೆದ್ದರು!! ಈ ಸಂದರ್ಭದಲ್ಲಿ ಬ್ರಿಟಿಷರು ಭಯಭೀತರಾಗಿ ಹೋಗಿದ್ದಲ್ಲದೇ, ಇನ್ನು ಭಾರತದಲ್ಲಿ ವಾಸಿಸಲು ಯೋಗ್ಯವಾದ ಸ್ಥಳವಲ್ಲ ಎಂದುಕೊಂಡರು!! ಏಕೆಂದರೆ, ವಸಾಹತುಶಾಹಿತ್ವಕ್ಕೆ ಅನುಕೂಲವಾಗುವ ಏಕೈಕ ದೊಡ್ಡ ಅಂಶವಾಗಿದ್ದು ಮಿಲಿಟರಿ. ಹಾಗಾಗಿ ಭಾರತೀಯ ಮಿಲಿಟರಿ ಬ್ರಿಟಿಷರ ಬೆವರಿಳಿಸಿತ್ತು!!

ಬ್ರಿಟಿಷ್ ಪ್ರಧಾನಮಂತ್ರಿಯಾಗಿದ್ದ ಕ್ಲೆಮೆಂಟ್ ಆಟ್ಲೀಯವರು ಭಾರತವನ್ನು ತೊರೆಯುವ ನಿರ್ಧಾರ ಮಾಡಿದ್ದು, ಈ ಬಗ್ಗೆ ಕಲ್ಕತ್ತಾದ ಮುಖ್ಯ ನ್ಯಾಯಮೂರ್ತಿಯಾದ ಪಿ.ಬಿ ಚಕ್ರಬರ್ತಿ ಜೊತೆ ಹೇಳಿಕೊಂಡಿದ್ದ. ಅಷ್ಟೇ ಅಲ್ಲದೇ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ನಿರ್ಧರಿಸಿದ ಪ್ರಮುಖ ಕಾರಣವನ್ನು ಸೂಚಿಸಿದ್ದ. ಅದೇನೆಂದರೆ, ಭಾರತೀಯ ಸೈನ್ಯ ಮತ್ತು ಬ್ರಿಟಿಷ್ ನೌಕಾದಳದ ಸಿಬ್ಬಂದಿಗಳು ತಮ್ಮ ರಾಜನಿಷ್ಠೆಯನ್ನು ಕಳೆದುಕೊಂಡಿದೆ ಎನ್ನುವುದನ್ನು ಹೇಳಿಕೊಂಡಿದ್ದಾನೆ!!

ಇಂಗ್ಲೆಂಡ್‍ನ ಸ್ವತಂತ್ರ ಕಾರ್ಮಿಕ ಪಕ್ಷದ ರಾಜಕೀಯ ಕಾರ್ಯದರ್ಶಿಯಾದ ಫೆನ್ನೆರ್ ಬ್ರೊಕ್ವೆ ಪ್ರಕಾರ, ಬ್ರಿಟಿಷರು ಭಾರತದಿಂದ ನಿರ್ಗಮಿಸಲು ಎರಡು ಪ್ರಮುಖ
ಕಾರಣಗಳಿವೆ: ” ಒಂದು, ಭಾರತೀಯರೆಲ್ಲರೂ ಸ್ವಾತಂತ್ರ್ಯ ಪಡೆಯಲು ನಿರ್ಧರಿಸಿದ್ದು, ಇನ್ನೊಂದು, ಭಾರತೀಯ ನೌಕಾಪಡೆ ದಂಗೆ ಎದ್ದಿದ್ದು” ಎಂದು ಹೇಳಿದ್ದಾರೆ!!

ಭಾರತೀಯ ಸೈನಿಕರು ಯುರೋಪ್ ಯುದ್ದಭೂಮಿಯಲ್ಲಿ ಅದ್ಬುತವಾಗಿ ಹೋರಾಟ ನಡೆಸಿದ್ದು, ಬ್ರಿಟಿಷರಿಂದ ಹಾಗೂ ಜರ್ಮನ್ನರಿಂದ ಪ್ರಶಂಸೆಗೆ ಪಾತ್ರರಾಗಿದ್ದರು!! ಆದರೆ ಜರ್ಮನ್ನಿನ ಸವಾಲುಗಳನ್ನು ಎದುರಿಸುವಲ್ಲಿ ಬ್ರಿಟಿಷರು ವಿಫಲರಾಗಿದ್ದು, ಬ್ರಿಟಿಷ್ ಸೈನ್ಯವು ಅಜೇಯವನ್ನು ಸಾಧಿಸಿತ್ತು!! ವಾಸ್ತವವಾಗಿ, ಯುಎಸ್ ಸೈನ್ಯದ ಸೇನಾಧಿಪತಿಗಳಾದ ಬ್ರಾಡ್ಲಿ ಹಾಗೂ ಐಸೆನ್ಹೋವರ್, ಬ್ರಿಟಿಷ್ ಸೈನ್ಯವು ತಮ್ಮ ಹೋರಾಟದಲ್ಲಿ ಕೌಶಲ್ಯಗಳನ್ನು ಕಳೆದುಕೊಂಡಿರುವ ಬಗ್ಗೆ ತಿರಸ್ಕರವನ್ನು ವ್ಯಕ್ತಪಡಿಸಿದ್ದರು!!

ತದನಂತರದಲ್ಲಿ ಬ್ರಿಟನ್ ಅವನತಿಯ ದಾರಿಯನ್ನು ತಲುಪಿತು. ಲಂಡನ್ ಲುಫ್ಟಾ ಮತ್ತು ವಿ-2ರಾಕೆಟ್‍ಗಳಿಂದ ಲಂಡನ್ ನಾಶವಾಯಿತು. ನಂತರದ ದಿನಗಳಲ್ಲಿ
ರಷ್ಯನ್ನರು ಹಾಗೂ ಅಮೇರಿಕನ್ನರು ಒಟ್ಟು ಸೇರಿ ಹೊಸ ಮಹಾಶಕ್ತಿಗಳಾಗಿ ಮಿಂಚಿದರು. ಅಷ್ಟೇ ಅಲ್ಲದೇ, ಈ ಇಬ್ಬರಿಗೂ ಕೂಡ ವಸಾಹತುಶಾಹಿಗಳಿಂದ ಮುಕ್ತಿ
ಬೇಕಾಗಿತ್ತು!! ಹಾಗಾಗಿ ಬ್ರಿಟಿಷರು ಭಾರತದೊಂದಿಗೆ ಯುದ್ದ ಮಾಡಲು ಯಾವುದೇ ಬಲವನ್ನು ಹೊಂದಿರಲಿಲ್ಲ ಹಾಗಾಗಿ ಭಾರತ ಬಿಟ್ಟು ತೊಲಗುವ ಯೋಜನೆಯನ್ನು ಹಾಕಿದ್ದರು!!

ಭಾರತಕ್ಕೆ ಸ್ವಾತಂತ್ರ್ಯವು ಕ್ರಾಂತಿಕಾರಿಗಳ ಹೋರಾಟದಿಂದ ಸಿಕ್ಕಿತೇ ಹೊರತು ಮಧ್ಯರಾತ್ರಿಯಲ್ಲಿಅಲ್ಲ!!

( by Rakesh Krishnan Simha, features writer at Fairfax New Zealand. He has previously worked
with Businessworld, India Today and Hindustan Times, and was news editor with the Financial
Express.)

ಮೂಲ:http://www.sanskritimagazine.com/history/freedom-come-midnight/

– ಅಲೋಖಾ

Tags

Related Articles

Close