ಪ್ರಚಲಿತ

ಭಾರತಕ್ಕೆ ಹೆಚ್ಚಿನ ಇಂಧನ ತೆರಿಗೆ ಯಾಕೆ ಲಾಭಕರವೆಂದು ಗೊತ್ತೇ?! ಜಿಹಾದಿ ಇಸ್ಲಾಂ ಗೂ ಈ ತೆರಿಗೆ ಹೇಗೆ ವಿಷಕಾರಿಯಾಗಿದೆ ಗೊತ್ತೇ?

ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಭಾವವನ್ನು ಬೀರುತ್ತಿದೆ. ನಮ್ಮ ದೇಶದ ಆಡಳಿತಾತ್ಮಕ ವಿಚಾರದಲ್ಲೂ ಪೆಟ್ರೋಲ್ ಬೆಲೆ ಹೆಚ್ಚಳ
ಸಾಕಷ್ಟು ಪ್ರಭಾವನ್ನು ಬೀರುತ್ತದೆ. ದೇಶದಲ್ಲಿ ಪೆಟ್ರೋಲ್ ದರ ತೀರಾ ಹೆಚ್ಚಳವಾಗಿದೆ ನಿಜ ಆದರೆ ಬಡವರಿಗೆ ಪೂರೈಕೆ ಮಾಡುವ ಅಡುಗೆ ಗ್ಯಾಸ್, ಸೀಮೆ ಎಣ್ಣೆಯ ದರ ತುಂಬಾ ಕಡಿಮೆಯಾಗಿದೆ. ಪೆಟ್ರೋಲ್ ಮೇಲೆ ತೆರಿಗೆ ಹೆಚ್ಚಳವಾಗಿದ್ದರೂ ಅಥವಾ ಅದರ ದರ ಹೆಚ್ಚುಕಮ್ಮಿಯಾದರೂ ಸಹ ಅಡುಗೆ ಅನಿಲ, ಸೀಮೆ ಎಣ್ಣೆ
ಮುಂತಾದುವುಗಳನ್ನು ಸರಕಾರ ಕಡಿಮೆ ಬೆಲೆಗೆ ಪೂರೈಕೆ ಮಾಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಎನ್‍ಡಿಎ ಸರಕಾರ ಪೆಟೋಲಿಯಂ ಬೆಲೆ ಸರಕಾರದ ಮೇಲೆ ಪ್ರಭಾವ ಬೀರುವುದನ್ನು ಗಮನಿಸಿ ಅವುಗಳ ಮೇಲಿನ ತೆರಿಗೆಯನ್ನು ನಿವಾರಿಸಿ ಜನರಿಗೆ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಪೂರೈಕೆ ಮಾಡಲು ಕೆಲವೊಂದು ಅವಶ್ಯ ಕಾರ್ಯವಿಧಾನಗಳನ್ನು ಕೈಗೊಂಡಿತು. ಆದರೆ ಆಮೇಲೆ 10 ವರ್ಷಗಳ ಯುಪಿಎ ಸರಕಾರ ಅಸ್ತಿತ್ವಕ್ಕೆ ಬಂದ ಕಾರಣ ಆ ಉದ್ದೇಶ ನೆನೆಗುದಿಗೆ ಬಿದ್ದಿತು. ಅಲ್ಲದೆ ಯುಪಿಎ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳು ನಡೆದ ಕಾರಣ ಪೆಟ್ರೋಲ್ ಬೆಲೆ ಎನ್ನುವುದು ಸರಕಾರವನ್ನು ಅಲುಗಾಡಿಸುವಷ್ಟು ಮಟ್ಟಿಗೆ ಪ್ರಭಾವ ಬೀರಿತು. ಯುಪಿಎಯ 10 ವರ್ಷಗಳ ಅವಧಿಯ ನಂತರ ಪೆಟ್ರೋಕೆಮಿಕಲ್ಸ್ ಉತ್ಪನ್ನಗಳಿಂದ 8,50,000 ಕೋಟಿ ರೂ. ಸಬ್ಸಿಡಿ ನೀಡಲಾಗುವುದರಿಂದ ಪೆಟ್ರೋಲ್ ಬೆಲೆ ಇಳಿಸಲು ಸಾಧ್ಯವೇ ಆಗುವುತ್ತಿಲ್ಲ. ಆಮೇಲೆ ಆಡಳಿತ ನಡೆಸಿದ ಯುಪಿಎ 2 ಸರಕಾರವೂ ಪ್ರೆಟ್ರೋಲ್ ಉತ್ಪನ್ನಗಳಿಂದ ಸಾಕಷ್ಟು ಕ್ಷೇತ್ರಗಳಿಗೆ ಸಪ್ಸಿಡಿ ನೀಡಬೇಕಾಯಿತು. ಯುಪಿಎ ಅವಧಿಯ ಬೃಹತ್ ಸಪ್ಸಿಡಿ ಮಸೂದೆ ಪೆಟ್ರೋಲ್ ಬೆಲೆ ಮುಂದೆಂದಿಗೂ ಇಳಿಯಲಾರದ ಸೊತ್ತಾಗಿ ಪರಿಣಮಿಸಿತು..

ಆದ್ದರಿಂದ ಸರಕಾರ ಏನು ಮಾಡಿದರೂ ಪೆಟ್ರೋಲ್ ಬೆಲೆ ತಗ್ಗಿಸಲು ಸಾಧ್ಯವೇ ಇಲ್ಲ ಅಥವಾ ಪೆಟ್ರೋಲ್ ಬೆಲೆ ತಗ್ಗಿಸುವುದು ಎನ್ನುವುದು ಒಂದು ಮೂರ್ಖತನವಷ್ಟೆ. ಯಾಕೆಂದರೆ ಸರಕಾರ ನೀಡುವ ಹಲವು ಸಪ್ಸಿಡಿಗಳು ಪೆಟ್ರೋಲ್‍ನ ತೆರಿಗೆ ಹಣದಿಂದಲೇ ಪೂರೈಸಲಾಗುತ್ತಿದೆ. ಅಲ್ಲದೆ ಪೆಟ್ರೋಲ್ ಎನ್ನುವುದು ಆಮದು ಮಾಡುವ ಸರಕಾಗಿರುವುದರಿಂದ ನಮ್ಮ ದೊಡ್ಡ ಮಟ್ಟದ ಹಣವನ್ನು ಇನ್ನೊಂದು ದೇಶಕ್ಕೆ ನೀಡಬೇಕಾಗುತ್ತದೆ. ಆಮದು ಸರಕುಗಳಿಗೆ ತೆರಿಗೆ ವಿಧಿಸಿದರಷ್ಟೆ ಸರಕಾರಕ್ಕೆ ಲಾಭವಾಗುತ್ತದೆ. ಇಲ್ಲವಾದರೆ ಸರಕಾರಕ್ಕೆ ಯಾವುದೇ ಆದಾಯ ಸಿಗುವುದಿಲ್ಲ. 2016-17ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ 4,63,989 ಕೋಟಿ ರೂ. ಗಳನ್ನು ಸಂಗ್ರಹಿಸಿತ್ತು. ಒಂದು ವೇಳೆ ಪೆಟ್ರೋಲ್ ತೆರಿಗೆಯನ್ನು ವಿಧಿಸದೇ ಇದ್ದರೆ ಅಷ್ಟು ಮೊತ್ತ ಸರಕಾರಕ್ಕೆ ಖೋತಾ. ಅಲ್ಲದೆ ಸರಕಾರ ನೀಡುವ ಸಪ್ಸಿಡಿಯ ಮೇಲೂ ಪರಿಣಾಮ ಬೀಳುತ್ತದೆ. ಒಂದು ವೇಳೆ ಹಲವಾರು ಸಪ್ಸಿಡಿಗಳನ್ನು ರದ್ದುಗೊಳಿಸಿ ಪೆಟ್ರೋಲ್ ದರವನ್ನು ಕಡಿಮೆಗೊಳಿಸೋಣ ಎಂದರೆ ಅದು ಅಸಾಧ್ಯವಾದ ಮಾತು.ಇದನ್ನೆಲ್ಲಾ ಚೆನ್ನಾಗಿ ಅರ್ಥೈಸಿಕೊಂಡ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲಿಯಂ ಬೆಲೆ ಇಳಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತೈಲಬೆಲೆ ಹೆಚ್ಚಳ ಅಥವಾ ಕಡಿಮೆಯಾಗುವುದು ಮಾರುಕಟ್ಟೆ ಮುಕ್ತವಾಗಿದ್ದು, ಸರಕರಾ ಪ್ರಭಾವ ಬೀರಲು ಸಾಧ್ಯವೇ ಇಲ್ಲ.

ಪೆಟ್ರೋಲ್ ದರ ಹೆಚ್ಚಿರುವುದು ಜನಸಾಮಾನ್ಯರಿಗೆ ಸೇರಿ ಪ್ರತಿಯೊಂದೂ ಹಂತದಲ್ಲೂ ತೊಂದರ ನೀಡುತ್ತದೆ ನಿಜ. ಆದರೆ ಅದರ ಮೇಲಿನ ಅಧಿಕ ತೆರಿಗೆ ಇರುವುದನ್ನು ಸಮರ್ಥಿಸಲು ಹತ್ತು ಕಾರಣಗಳಿವೆ…

1: ಭಾರತದಲ್ಲಿ ಪೆಟ್ರೋಲಿಯಂ ಬೇಡಿಕೆ ತೀವ್ರವಾಗಿದೆ. ಭಾರತ ತನ್ನ ಅವಶ್ಯಕತೆಗನುಗುಣವಾಗಿ ಶೇ. 80 ಭಾಗವನ್ನು ಆಮದು ಮಾಡುತ್ತಿದೆ. ತೀವ್ರ ತೆರಿಗೆಯ
ಹೊರತಾಗಿಯೂ 2016_17ರಲ್ಲಿ ಇಂಧನ ಬೇಡಿಕೆ ಶೇ. 5ರಷ್ಟು ಏರಿಕೆ ಕಂಡಿದೆ. ಡಿಮೊನಿಟೈಸೇಷನ್ ಸಂದರ್ಭ ಉಂಟಾದ ಆರ್ಥಿಕ ಕುಸಿತದಿಂದಲೂ ಇಂಧನ
ಬೇಡಿಕೆಯಲ್ಲಿ ಎಳ್ಳಷ್ಟೂ ಏರಿಳಿತ ಕಂಡುಬರಲಿಲ್ಲ. ಕಳೆದ ವರ್ಷ ಪೆಟ್ರೋಲ್ ಬೇಡಿಕೆ ಶೇ. 8ರಷ್ಟು ಏರಿಕೆ ಕಂಡರೆ ಡೀಸೆಲ್. ಶೇ. 1.8 ಏರಿಕೆ ಕಂಡಿತು. ಬೇಡಿಕೆ
ಹೆಚ್ಚಿದಂತೆ ಅದರ ಬೆಲೆಯಲ್ಲೂ ಹೆಚ್ಚಾಗುತ್ತದೆ ಎನ್ನುವುದು ಅರ್ಥಶಾಸ್ತ್ರದ ನಿಯಮ. ಜಾಗತಿಕವಾಗಿಯೂ ಇಂಧನ ಎಲ್ಲರಿಗೂ ಬೇಕಾಗಿರುವುದರಿಂದ ಬೇಡಿಕೆ
ಸಹಜವಾಗಿಯೇ ಹೆಚ್ಚಿರುವುದರಿಂದ ಬೆಲೆ ಹೆಚ್ಚಳ ಕೂಡಾ ಸಹಜವೇ. ಪೆಟ್ರೋಲ್‍ಗಾಗಿ ನಾವು ಗಲ್ಫ್ ರಾಷ್ಟ್ರಗಳನ್ನೇ ನೆಚ್ಚಿಕೊಂಡಿದ್ದೇವೆ. ಒಂದು ವೇಳೆ ದೇಶದಲ್ಲಿ
ಪೆಟ್ರೋಲ್ ಅಗತ್ಯ ತೀವ್ರ ಹೆಚ್ಚಿದೆ. ಇಂಧನ ಬೇಡಿಕೆ ಹೆಚ್ಚಿದೆ ಎಂದರೆ ಸರಕಾರಕ್ಕೆ ಸಾಕಷ್ಟು ತೆರಿಗೆ ರೂಪದಲ್ಲಿ ಹಣ ಸಿಗವುದರಿಂದ ಈ ಬಾರಿ ರಾಷ್ಟ್ರೀಯ ಹೆದ್ದಾರಿಗಳೂ ಹೆಚ್ಚು ಹೆಚ್ಚು ನಿರ್ಮಾಣಗೊಳ್ಳುತ್ತದೆ.

2. ಅಗ್ಗದ ಇಂಧನವು ಪರಿಸರ ಹಾನಿಯನ್ನುಂಟು ಮಾಡುತ್ತದೆ. ಜೈವಿಕ ಇಂಧನಗಳತ್ತ ಹೋಗುವುದಾದರೆ ಅಥವಾ ಶುದ್ಧವಾದ ಶಕ್ತಿಯ ರೂಪಗಳಿಗೆ
ಹೋಗುವುದಾದರೆ, ಭಾರತದ ಇಂಧನ ತೆರಿಗೆ ನೀತಿ ಸಂವೇದನಾಶೀಲವಾಗಿದೆ. ಅಲ್ಲದೆ, ಭಾರತದ ನಗರೀಕರಣಗೊಳ್ಳುವುದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಬದಲಾಗುತ್ತದೆ. ಒಂದು ವೇಳೆ ಮಧ್ಯಮ ವರ್ಗದ ಜನರನ್ನು ಸಮಾಧಾನಗೊಳಿಸುವ ಸಲುವಾಗಿ ಪೆಟ್ರೋಲ್ ಬೆಲೆಯನ್ನು ತಗ್ಗಿಸಿದರೆ ನಗರೀಕರಣದ ಮೇಲೆ ಸಮಸ್ಯೆಯಾಗಬಹುದು. ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಜಾಸ್ತಿ ವಾಗನಗಳು ಪ್ರಯಾಣಿಸುವುದರಿಂದ ಮಾಲಿನ್ಯದ ಮಟ್ಟಗಳು ತುಂಬಾ ಹೆಚ್ಚಿವೆ. ಪೆಟ್ರೋಲ್ ದರವನ್ನು ಕಡಿಮೆಗೊಳಿಸಿದರೆ ಹೆಚ್ಚು ಇಂಧನ ಅವಶ್ಯಕತೆ ಇರುವ ದುಬಾರಿ ವಾಹನಗಳನ್ನು ಖರೀದಿಸಲು ಜನರು ಮನಸ್ಸು ಮಾಡುತ್ತಾರೆ. ಹೆಚ್ಚು ಬೆಲೆಯ ಕಾರುಗಳಿಗೆ ಅಗ್ಗದ ಇಂಧನ ಅಂದರೆ ಜಾಸ್ತಿ ಇಂಧನ ಬಳಸಿದರೆ ಅದರಿಂದ ಯಾವ ಪ್ರಯೋಜನವಿದೆ? ಐಷಾರಾಮಿ ಕಾರುಗಳು ಜಾಸ್ತಿ ಜಾಸ್ತಿ ಬರುವುದರಿಂದ ಅವುಗಳಿಗೆ ಜಾಸ್ತಿ ಇಂಧನ ಬೇಕಾಗಿರುವುದರಿಂದ ಪೆಟ್ರೋಲ್ ಬೇಡಿಕೆಯೂ ಹೆಚ್ಚುತ್ತದೆ.

3: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಡುವೆ ವ್ಯತ್ಯಾಸ ಆ ದೇಶದ ತೆರಿಗೆ ಪದ್ಧತಿಯನ್ನು ವಿವರಿಸುತ್ತದೆ. ಒಂದು ರಾಜ್ಯದಲ್ಲಿ ತೆರಿಗೆ ಹೆಚ್ಚಿದ್ದರೆ ಅಲ್ಲಿ ವಾಹನದಟ್ಟನೆ ಹೆಚ್ಚಿದೆ ಎಂದೇ ಅರ್ಥ. ಉದಾಹರಣೆಗೆ ಮುಂಬೈಯಲ್ಲಿ ಪೆಟ್ರೋಲ್ ದರ79.5 ರೂ. ಮತ್ತು ಡೀಸೆಲ್ಗೆ 62.4 ರೂ. ಮತ್ತು ದೆಹಲಿಯಲ್ಲಿ 70.39 ರೂ. ಮತ್ತು 58.74 ರೂ.. ಪೆಟ್ರೋಲ್ನ ಮುಖ್ಯ ಬಳಕೆದಾರರರು ಖಾಸಗಿ ವಾಹನಗಳಾಗಿರುವುದರಿಂದ ಸರಕಾರ ಇದರಿಂದ ಹೆಚ್ಚು ತೆರಿಗೆ ಸ್ವೀಕರಿಸುತ್ತದೆ. ಅಲ್ಲದೆ ಸಾರ್ವಜನಿಕ ವಾಹನಗಳು ಎಲ್ಲರಿಗೂ ಬಳಕೆಯಾಗುವುದರಿಂದ ಇದೇ ತೆರಿಗೆ ಹಣದಲ್ಲಿ ಸಾರ್ವಜನಿಕ ವಾಹನಗಳೂ ಓಡುತ್ತದೆ.

4. ಕಚ್ಚಾ ಬೆಲೆಯು ಕಡಿಮೆಯಾಗಿದ್ದಾಗ ಹೆಚ್ಚಿನ ತೆರಿಗೆಗಳನ್ನು ಕಡಿಮೆ ಮಾಡುವುದು ಆಯಾಯ ಸರಕಾರದ ಹೊಣೆ. ಜಾಗತಿಕವಾಗಿ ಬೆಲೆಗಳು ಕಡಿಮೆಯಾದಾಗ, ಬೆಲೆಗಳನ್ನು ಕಡಿತಗೊಳಿಸುವುದು ಸುಲಭ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಜಾಗತಿಕ ಬೆಲೆ ಏರಿಕೆಯಾದಾಗ, ಬೆಲೆಗಳನ್ನು ಏರಿಸುವಲ್ಲಿ ರಾಜಕೀಯವಾಗಿ ಕಷ್ಟವಾಗುತ್ತದೆ. ಮೋದಿ ಅಧಿಕಾರದ ಅಡಿಯಲ್ಲಿ ಬೆಲೆ ಹೆಚ್ಚು ಇಳಿಯುವುದಿಲ್ಲ ಎಂದು ಖಚಿಚತಗೊಂಡಿರುವುದರಿಂದ ತೆರಿಗೆಗಳನ್ನು ಏರಿಸುವ ಜಾಗತಿಕ ತೈಲಬೆಲೆ ಹೆಚ್ಚುಕಡಿಮೆಯಾಗದ ರೀತಿಯಲ್ಲಿ ನೋಡುತ್ತಿದ್ದಾರೆ. ಆದರೆ ಯುಪಿಎ ಅವಧಿಯಲ್ಲಿ ಪೆಟ್ರೋಲ್ ದರ ಒಮ್ಮೆಲೆ ಏರಿಕೆಗೊಂಡಾಗ ಜನರು ಆಕ್ರೋಶಿತರಾಗುವುದನ್ನು ಗಮನಿಸಿರಬಹುದು. ನೆನಪಿಡಿ ಮೋದಿ ಸರಕಾರ ಬಂದಾಗ ಇಂಧನ ದರ ಹೆಚ್ಚೂಕಡಿಮೆ ಹೆಚ್ಚೂ ಆಗಲಿಲ್ಲ ಕಡಿಮೆಯೂ ಆಗಲಿಲ್ಲ ಬದಲಿಗೆ ಸ್ಥಿರವಾಗಿದೆ. ತೈಲಬೆಲೆ ಇದೇ ರೀತಿ ಮುಂದುವರಿದರೆ ಮುಂದಿನ ಬಾರಿಯೂ ಅಧಿಕಾರ ಹಿಡಿಯಬಹುದೆಂದು ಮೋದಿಗೆ ಚೆನ್ನಾಗಿ ಗೊತ್ತಿದೆ. ಒಂದು ವೇಳೆ ತೈಲಬೆಲೆ ಕಡಿಮೆಯಾಗಿದೆಯೆಂದು ತೆರಿಗೆಯನ್ನೆಲ್ಲಾ ಇಳಿಸಿ ಬಿಟ್ಟರೆ ಅದು ವಿದೇಶಿ ಉತ್ಪನ್ನವಾಗಿರುವುದರಿಂದ ಯಾವಾಗ ಏರುತ್ತದೆ ಎಂದು ಹೇಳಲಾಗುವುದಿಲ್ಲ. ಒಂದು ವೇಳೆ ತಗ್ಗಿದ ಬೆಲೆಯನ್ನು ಒಮ್ಮೆಲೆ ಹೆಚ್ಚಿಸಿದರೆ ಜನರು ದಂಗೆ ಏಳುತ್ತಾರೆ.

5. ತೈಲದ ಮೇಲಿನ ಹೆಚ್ಚಿನ ತೆರಿಗೆಗಳು ಹೆಚ್ಚಿನ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸುತ್ತದೆ. ಕಳೆದ ವರ್ಷದ ಬಜೆಟ್ ಭಾಷಣದಲ್ಲಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಈ ವರ್ಷದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಮತ್ತು ನವೀಕರಿಸಲು ಮುಂದಾಗಿ 3,96,135 ಕೋಟಿ ರೂ. ವಿನಿಯೋಗಿಸಿದ್ದಾರೆ. ಇವುಗಳಲ್ಲಿ ಕೆಲವು ಆಂತರಿಕವಾಗಿ ರಸ್ತೆಗಳು ಮತ್ತು ರೈಲುಮಾರ್ಗಗಳ ನಿರ್ಮಾಣವಾಗುತ್ತದೆ. ಈ ಹಣ ವಾಹನಗಳ ಬಳಕೆದಾರರಿಂದ ಸಂಗ್ರಹಿಸಲಾದ ಪೆಟ್ರೊ-ತೆರಿಗೆಗಳಿಂದ ಬರುತ್ತದೆ. ಈ ತೆರಿಗೆಗಳಿಲ್ಲದೆಯೇ, ಆರ್ಥಿಕತೆಯ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಸರಕಾರದ ಬಳಿ ಪರಿಣಾಮಕಾರಿ ಮೂಲಗಳಿಲ್ಲ. ಇದರಿಂದ ದೇಶದಲ್ಲಿ ಉದ್ಯೋಗ ಹೆಚ್ಚುತ್ತದೆ. ಇದೆಲ್ಲಾ ಪೆಟ್ರೋಲ್ ತೆರಿಗೆಯಿಂದ ಬಂದ ಹಣದಿಂದಲೇ ಆಗುವುದೆಂದು ನೆನಪಿಡಬೇಕು.

6: ಹೆಚ್ಚಿನ ಪೆಟ್ರೋ-ತೆರಿಗೆಗಳು ನವೀಕರಿಸಬಹುದಾದ ಮೂಲದ ಶಕ್ತಿಯನ್ನಾಗಿ ಬದಲಾಯಿಸುವುದಕ್ಕೆ ಹೆಚ್ಚು ಹಣದ ಅಗತ್ಯವಿರುತ್ತದೆ . ತೈಲವು ಅಗ್ಗವಾಗಿದ್ದಲ್ಲಿ ಗಾಳಿ ಶಕ್ತಿ ಅಥವಾ ಸೌರಶಕ್ತಿಗಾಗಿ ಯಾರೂ ಯಾರೂ ಕೂಡಾ ಯೋಚಿಸುದಿಲ್ಲ. ವಿಶ್ವಾದ್ಯಂತ, ಕಚ್ಚಾ ಬೆಲೆಗಳು ಕುಸಿದಾಗ, ನವೀಕರಿಸಬಹುದಾದ ಇಂಧನದ ಬಗ್ಗೆ ಬಂಡವಾಳ ಹೂಡಿಕೆ ಕಡಿಮೆಯಾಗುತ್ತದೆ. ತೈಲ ಬೆಲೆ ತಗ್ಗಿದರೆ ಜನರು ಪರಿಸರದ ಪೂರಕವಾದ, ನವೀಕರಿಸಬಹುದಾದ, ಕಡಿಮೆ ಮೊತ್ತದಲ್ಲಿ ಸಿಗುವ ಇಂಧನ ಮೂಲಗಳ ಸಂಶೋಧನೆಗೂ ಮುಂದಾಗುವುದಿಲ್ಲ.

7. ಇಂಧನ ಬೆಲೆ ಹೆಚ್ಚಾದರೆ ಹೆಚ್ಚು ಇಂಧನ ದಕ್ಷ ಕಾರುಗಳ ಬಗ್ಗೆ ಜನರು ಆಸಕ್ತಿ ವಹಿಸುತ್ತಾರೆ. ಭಾರತದಲ್ಲಿ ಬೇರೆ ವಾಹನಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. ಕಾರಣ ಇವುಗಳು ಇಂಧನ ದಕ್ಷ ಎನ್ನುವುದನ್ನೂ ನೆನಪಲ್ಲಿಡಬೇಕು. ಜನರಿಗೆ ಇಂದು ವಿದ್ಯುತ್ ಕಾರ್‍ಗಳ ಅವಶ್ಯಕತೆ ಬೇಕೆಂದೆನಿಸಲು ಕಾರಣ ತೈಲ ಬೆಲೆ ಹೆಚ್ಚಳವೂ ಒಂದು ಅದು ನೆನಪಲ್ಲಿಡಬೇಕು.

8. ಮಾರ್ಕೆಟ್-ನಿರ್ಧಾರಿತ ಬೆಲೆಗಳು ಕಲಬೆರಕೆ ತಡೆಯಲು ಪ್ರಮುಖ ಕಾರಣವಾಗಿದೆ. ಸೀಮೆಎಣ್ಣೆ ತುಂಬಾ ಅಗ್ಗವಾಗಿದ್ದು, ಡೀಸೆಲ್ಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಡೀಸೆಲ್‍ನಲ್ಲಿ ಸೀಮೆಎಣ್ಣೆಯ ಕಲಬೆರಕೆಯಿದೆ. ಇಂದು, ಸೀಮೆಎಣ್ಣೆ ಬೆಲೆಗಳು ಏರಿಕೆಯಾಗುತ್ತಿರುವಾಗ, ಈ ಕಲಬೆರಕೆ ಕಡಿಮೆಯಾಗುತ್ತಿದೆ, ವಿಶೇಷವಾಗಿ ಅಡುಗೆ ಅನಿಲ ಬಳಕೆಯ ಮಿತಿ ವಿಸ್ತರಿಸುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಸೀಮೆಎಣ್ಣೆಯ ಲಭ್ಯತೆ ಕಡಿಮೆಯಾಗುತ್ತದೆ.

9. ಇಂಧನ ಕ್ಷೇತ್ರದ ಮಾರುಕಟ್ಟೆಯ ಸ್ಥಿತಿಗತಿಯನ್ನು ನೋಡಿದರೆ ಅವುಗಳ ಮೇಲೆ ಹೂಡಿಕೆ ಪ್ರಮಾಣವೂ ಮುಖ್ಯ. ಮೋದಿ ಸರ್ಕಾರವು ತೈಲ ಹೂಡಿಕೆದಾರರಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡಿದೆ. ಸರಕಾರ ನೀಡುವು ಸಬ್ಸಿಡಿಗಳಿಗೆ ಇಂಧನ ತೆರಿಗೆ ಸಹಾಯ ಮಾಡುತ್ತದೆ.

10. ಇಂಧನ ಬೇಡಿಕೆಯ ಹೆಚ್ಚಳ ಎಂದರೆ ಜಿಹಾದಿ ಇಸ್ಲಾಂಗೆ ನೇರವಾಗಿ ಆಮಂತ್ರಣ ನೀಡಿದಂತೆ. ಭಾರತದಲ್ಲಿ ಪೆಟ್ರೋ-ಇಂಧನಗಳ ಬೆಲೆಯು ಭಾರತದಲ್ಲಿ ಬೇಡಿಕೆಯ ಕಾರಣದಿಂದಾಗಿ ಹೆಚ್ಚಾಗುತ್ತದೆ. ಸೌದಿ ಅರೇಬಿಯ, ಇರಾನ್ ಮತ್ತು ಇರಾಕ್ ಮುಂತಾದ ಇಸ್ಲಾಮಿಕ್ ರಾಜ್ಯಗಳೂ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ನಮಗೆ ಹೆಚ್ಚಿನ ತೈಲ ಬರುತ್ತದೆ. ತೈಲ ಬೇಡಿಕೆಯು ಈ ಇಸ್ಲಾಮಿ ಸರ್ಕಾರಗಳನ್ನು ಸಮೃದ್ಧಗೊಳಿಸುತ್ತದೆ. ಇದರರ್ಥ ನಮ್ಮಿಂದ ಸಿಗುವ ಹಣವೆಲ್ಲಾ ಇಸ್ಲಾಂ ಮತ್ತು ಜಿಹಾದಿ ಗುಂಪುಗಳು, ಮಸೀದಿಗಳು, ಮದ್ರಸಾಗಳನ್ನು ಉತ್ತೇಜಿಸಲು ಭಾಗಶಃ ಖರ್ಚು ಮಾಡುತ್ತದೆ. ಪಶ್ಚಿಮ ಏಷ್ಯಾದ ಇಸ್ಲಾಮಿ ರಾಷ್ಟ್ರಗಳನ್ನು ಶ್ರೀಮಂತಗೊಳಿಸುವುದಕ್ಕಾಗಿ ಪೆಟ್ರೋಲಿಯಂನ ಹಣ ಬಳಕೆಯಾಗುತ್ತದೆ. ಭಾರತದಲ್ಲಿ ಪಳೆಯುಳಿಕೆ ಇಂಧನಗಳಿಂದ, ನವೀಕರಿಸಬಹುದಾದ ಮೂಲಗಳು ಅಥವಾ ಪರಮಾಣು ಶಕ್ತಿಯನ್ನು ಆದಷ್ಟು ಬೇಗ ಬಳಕೆ ಮಾಡಿಕೊಂಡು ಆದಷ್ಟು ವೇಗವಾಗಿ ನಮಗೆ ಆಸಕ್ತಿಯಿದೆ. ಇದು ಭಾರತ ಮಾತ್ರವಲ್ಲಿ ಬೇರೆ ದೇಶಗಳೂ ಇಂದು ಪೆಟ್ರೋಲ್ ಬಿಟ್ಟು ಬೇರೆ ಇಂಧನಗಳತ್ತ ಮುಖಮಾಡುತ್ತಿವೆ. ಪೆಟ್ರೋಲ್ ಹೊರತಾದ ಒಂದು ವಸ್ತುವನ್ನು ಆವಿಷ್ಕರಿಸಲು ಭಾರತ ಸೇರಿ ಇತರ ರಾಷ್ಟ್ರಗಳೂ ಮುಂದೆ ಬಂದಿದೆ ಎಂದರೆ ಇದಕ್ಕೆ ತೈಲ ಬೆಲೆ ಹೆಚ್ಚಳವೂ ಒಂದು ಕಾರಣ ಎಂದಾಗ ತೆರಿಗೆ ಹೆಚ್ಚಳದಲ್ಲೂ ಏನೋ ಒಂದು ವಿಷಯ ಇದೆ ಎಂದು ಅನಿಸುತ್ತದೆ.

Source :Original Link – Read Here

-ಚೇಕಿತಾನ

Tags

Related Articles

Close