ಪ್ರಚಲಿತ

ಭಾರತದಲ್ಲಿ ಅಸಹಿಷ್ಣುತೆ ಅಂತ ಪ್ರಶಸ್ತಿ ವಾಪಸಾತಿ ಮಾಡಿದ್ದ ಬ್ರಿಗೇಡ್’ನಲ್ಲಿದ್ದ ಚಂಪಾ ಈಗ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಂತೆ!!

ಭಾರತದಲ್ಲಿ ಅಸಹಿಷ್ಣುತೆ ಇದೆ, ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಸುರಕ್ಷತೆಯಿಲ್ಲ, ಪ್ರಗತಿಪರರಿಗೆ, ವಿಚಾರವಾದಿಗಳಿಗೆ ಭದ್ರೆತೆಯಿಲ್ಲ ಅಂತ ಬೊಬ್ಬೆ ಹೊಡೆದಿದ್ದ ಗಂಜಿ ಗಿರಾಕಿಗಳಿಗೆ ಮಾತ್ರ ಕರ್ನಾಟಕದ ಅಸಹಿಷ್ಣುತೆ ಕಣ್ಣಿಗೆ ಕಾಣಲೇ ಇಲ್ಲ.

ಅದು ಕಾಣುವುದು ಇಲ್ಲ ಬಿಡಿ, ಮೋದಿಯನ್ನ ವಿರೋಧಿಸಿ ಹೋರಾಟ ಹಾರಾಟ ಮಾಡಿದರೆ ಕನಿಷ್ಠಪಕ್ಷ ಗಂಜಿಯಾದರೂ ಸಿಗುತ್ತೆ ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಹೋರಾಟ ಮಾಡಿದರೆ ಗಂಜಿಗೂ ಗತಿ ಇಲ್ಲದಂತಾಗುತ್ತೆ ಅನ್ನೋದು ಈ ‘ಅಸಹಿಷ್ಣು ಬ್ರಿಗೇಡ್’ ನವರಿಗೆ ಚೆನ್ನಾಗೇ ಗೊತ್ತಿದೆ.

ಭಾರತದ ಅದ್ಯಾವುದೋ ಜಾಗದಲ್ಲಿ ತಮ್ಮ ತೀಟೆಗೆ ಹೊಡೆದಾಡಿ ಸತ್ತರು ಅದಕ್ಕೆ ಮೋದಿಯೇ ಕಾರಣ ಅಂತ ಬೊಬ್ಬೆಯಿಟ್ಟು ಪ್ರಶಸ್ತಿ ವಾಪಸಾತಿ ಮಾಡಲು ಹೊರಟಿದ್ದ ಬುದ್ಧಿಜೀವಿಗಳು, ಲೇಖರರು, ಪ್ರಗತಿಪರರು, ಚಿಂತಕರಿಗೆ ಮಾತ್ರ ಕರ್ನಾಟಕದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ ನಡೆದ ಒಂದೇ ಒಂದು ಸಾವಿನ ವಿರುದ್ಧ ತಮ್ಮ ಪ್ರಶಸ್ತಿ ವಾಪಸ್ ಮಾಡುವ ಧಮ್ಮಿರಲಿಲ್ಲ.

ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರು, ನಿಷ್ಠಾವಂತ ಅಧಿಕಾರಿಗಳ ಎತ್ತಂಗಡಿಯಾಯ್ತು, ಕಿರುಕುಳವಾಯ್ತು, ನಿಗೂಢ ಹತ್ಯೆಗಳೂ ನಡೆದವು, ಸಾಲು ಸಾಲು ಹಿಂದೂ ಸಂಘಟನೆಯ ಕಾರ್ಯಕರ್ತರ 22 ಹತ್ಯೆಗಳಾದವು, ಮಹಿಳಾ ಅಧಿಕಾರಿಗಳ ಮೇಲೆ ದೌರ್ಜನ್ಯವಾದವು.

ಆದರೆ ಇವ್ಯಾವುವೂ ನಮ್ಮ ಪ್ರಗತಿಪರರ ಕಣ್ಣಿಗೆ ಕಾಣಲಿಲ್ಲ. ಅದು ಹೋಗಲಿ ಬಿಡಿ ಕರ್ನಾಟಕದಲ್ಲೇ ತಮ್ಮ ವಿಚಾರವಾದವನ್ನೇ ಪ್ರತಿಪಾದಿಸುತ್ತಿದ್ದ ತಮ್ಮ ಜನಗಳೇ ಆದ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶರ ಹತ್ಯೆ ಆದಾಗಲೂ ಇವರು ಕರ್ನಾಟಕ ಸರ್ಕಾರದ ವಿರುದ್ಧ ಒಂದೇ ಒಂದು ಪದ ಮಾತನಾಡಲಿಲ್ಲ.

ಕರ್ನಾಟಕದಲ್ಲಿ ನಡೆದ ಈ ಎರಡು ಹತ್ಯೆಗಳಿಗೂ ಮೋದಿಗೇ ತಳುಕು ಹಾಕಿ ಇದು ಆರೆಸ್ಸೆಸ್ಸಿನ ಕೈವಾಡ ಅಂತ ಬೊಬ್ಬೆ ಹಾಕಿದರು.

ಉತ್ತರಪ್ರದೇಶದಲ್ಲಿ ಅಕ್ಲಾಕ್ ಅನ್ನೋನ ಹತ್ಯೆಯಾಗಿತ್ತು. ಆಗ ಅಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸರಕಾರವಿತ್ತು. ಆಗ ಉತ್ತರಪ್ರದೇಶದ ಸರ್ಕಾರದ
ವಿರುದ್ಧ ಒಂದು ಮಾತೂ ಆಡದೆ ಸೀದಾ ಬೊಟ್ಟು ಮಾಡಿ ತೋರಿಸಿದ್ದು ಮೋದಿಯ ಕಡೆಗೆಯೇ.

ಮಹಾರಾಷ್ಟ್ರದಲ್ಲಿ ‘ವಿವಾರವಾದಿ’ಗಳಾದ ಪನ್ಸಾರೆ, ದಾಭೋಲ್ಕರ್ ಹತ್ಯೆಗಳು ನಡೆದಿದ್ದವು. ಆಗ ಅಲ್ಲಿದ್ದ ಸರ್ಕಾರ ಕಾಂಗ್ರೆಸ್. ಆದರೆ ಆ ಹತ್ಯೆಗಳ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಟುವ ಕೆಲಸಕ್ಕೂ ಈ ‘ಪ್ರಶಸ್ತಿ ವಾಪಸಾತಿ ಬ್ರಿಗೇಡ್’ ತಮ್ಮ ಪ್ರಶಸ್ತಿಗಳನ್ನ ವಾಪಸ್ ಮಾಡಲು ಮುಂದಾಗಲಿಲ್ಲ.

ಕರ್ನಾಟಕದಲ್ಲಿ ‘ವಿಚಾರವಾದಿ’ಗಳ ಲಿಸ್ಟ್ ನಲ್ಲಿದ್ದ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶರ ಹತ್ಯೆಯೂ ಆದವು. ಇಲ್ಲಿ ರಾಜ್ಯ ಸರ್ಕಾರದ ವಿರುದ್ಧ ‘ಪ್ರಶಸ್ತಿ ವಾಪಸಾತಿ ಬ್ರಿಗೇಡ್’ ತಮ್ಮ ಪ್ರಶಸ್ತಿಗಳನ್ನ ಯಾರೂ ವಾಪಸ್ ಮಾಡಲಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕರ್ತವ್ಯವೆ ಅಂತ ತಿಳಿದಿದ್ದರೂ ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತೆ ಸಿದ್ಧರಾಮಯ್ಯನನ್ನ ವಿರೋಧಿಸುವ ಬದಲು ಮೋದಿಯ ವಿರುದ್ಧ ಮಾತ್ರ ತಮ್ಮ ಷಂಡ ಆಕ್ರೋಷ ವ್ಯಕ್ತಪಡಿಸಿ ಸುಮ್ಮನಾಗಿಬಿಟ್ಟರು.

ಈಗ ಕರ್ನಾಟಕದಲ್ಲಿ 83 ನೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಈ ಸಮ್ಮೇಳನಕ್ಕೆ ಅಧ್ಯಕ್ಷರು ಯಾರು ಅನ್ನೋದು ಗೊತ್ತಾ?

ಈ ದೇಶ “ಎರಡು ಭಾಗವಾಗುತ್ತೆ”, “ಗಂಗಾ ನದಿ ಹಿಂದೂ ಸಂಸ್ಕೃತಿಯ ಪ್ರತೀಕವಲ್ಲ”, “ಬ್ರಾಹ್ಮಣರು ದೇಶ ಬಿಡಬೇಕು”, “ಪೇಜಾವರ ಶ್ರೀ ಕೋಮುವಾದಿ ತತ್ವದ ಜಗದ್ಗುರುಗಳು”, “ವೀರಶೈವ ಎಂದರೆ ಎಡಬಿಡಂಗಿಗಳು” ಎಂಬ ಹೇಳಿಕೆ ಕೊಟ್ಟಿದ್ದ ‘ಪ್ರಶಸ್ತಿ ವಾಪಸಾತಿ ಬ್ರಿಗೇಡ್’ ನಲ್ಲಿ ಗುರುತಿಸಿಕೊಂಡಿದ್ದ ಚಂದ್ರಶೇಖರ್ ಪಾಟೀಲ್ ‘ಅಲಿಯಾಸ್’ ಚಂಪಾರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಗೌರಿ ಲಂಕೇಶ್ ಹತ್ಯೆಯಾದಾಗ ಇತ್ತೀಚೆಗೆ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿದ ಚಂಪಾ ಅಲ್ಲಿ “ಗೌರಿಯನ್ನು ಕಳೆದುಕೊಂಡದ್ದು ನಮಗೆ ಬಹಳ ಸಂಕಟವಾಗುತ್ತಿದೆ, ನೋವುಂಟು ಮಾಡುತ್ತಿದೆ” ಅಂತ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಆ ನೋವು ಮನಸ್ಸಿನಿಂದ ಮರೆಯಾಗುವ ಮುನ್ನವೇ ಇಂದು ಬಹಳ ಸಂತೋಷದಿಂದ 83 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಹೊರಟಿದ್ದಾರೆ.

ಈಗ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಕ್ಕೆ ಕನ್ನಡದ ಏಳಿಗೆಗೆ ಮೀಸಲಾಗಿರದೆ ಅಂದು ಗೌರಿ ಲಂಕೇಶರ ಹತ್ಯೆಯ ವಿರುದ್ಧ ಮೋದಿಯನ್ನ ಟಾರ್ಗೇಟ್ ಮಾಡುವ ಸಮ್ಮೇಳನವಾಗಿ ಬದಲಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಇದಕ್ಕೆ ಕಾರಣವೂ ಇದೆ!

2015 ರಲ್ಲಿ ಹಾಸನದ ಶ್ರವಣಬೆಳಗೊಳದಲ್ಲಿ 81 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇವನೂರು ಮಹಾದೇವ ರವರನ್ನು ಆಹ್ವಾನಿಸಿದಾಗ ಅವರು ಕರ್ನಾಟಕದಲ್ಲಿ ಕನ್ನಡ ಭಾಷೆ ಶಿಕ್ಷಣದ ಮಾಧ್ಯಮವಾದರೆ ಮಾತ್ರ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತೇನೆ ಅನ್ನುವ ಬೇಡಿಕೆಯನ್ನಿಟ್ಟು ತಿರಸ್ಕರಿಸಿದರು.

ಹಾಗೇ ಆಗಿದ್ದೇ ತಡ ಬರಗೂರು ರಾಮಚಂದ್ರಪ್ಪ, ಟಿ.ಸಿದ್ಧಲಿಂಗಯ್ಯ ಎನ್ನುವ ಹೆಸರು ಕೇಳಿ ಬರ ತೊಡಗಿದವು ಅಲ್ಲಿಗೆ ದಲಿತರನ್ನೇ ಆಯ್ಕೆ ಮಾಡಬೇಕು ಅಂದಿದ್ದ ಕಾಂಗ್ರೆಸ್ ಸರ್ಕಾರ ಟಿ. ಸಿದ್ದಲಿಂಗಯ್ಯ ನವರನ್ನು ಆಯ್ಕೆ ಮಾಡಿತು. ಆ ಸಾಹಿತ್ಯ ಸಮ್ಮೇಳನದ ಮುಕ್ಕಾಲು ಭಾಗ ಯಾವ ಪ್ರಯೋಜನಕ್ಕೂ ಬಾರದ ಪ್ರಗತಿಪರ ಚಿಂತಕರು ವೇದಿಕೆಯ ಮೇಲೆ ಹತ್ತಿದರು ಅಲ್ಲಿಗೆ ನಾವೆಲ್ಲ ಊಹಿಸದಂತೆ ಬಲಪಂಥೀಯರನ್ನು ಬಯ್ಯುವುದು, ಎಸ್.ಎಲ್ ಭೈರಪ್ಪನವರನ್ನು ಹೀನಾಯವಾಗಿ ಬೈಯ್ಯವುದು ಎಲ್ಲಾ ನಡೆಯಿತು.

ಚಂದ್ರಗಿರಿಯ ತಪ್ಪಲಿನ ಇಪ್ಪತ್ತನಾಲ್ಕು ಎಕರೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಸುವಲ್ಲಿ ಅವಿರತವಾಗಿ ಶ್ರಮಿಸಿದ ಜೈನ್ ಗುರುಗಳಾದ ಚಾರುಕೀರ್ತಿ ಭಟ್ಟಾರಕಾ ಸ್ವಾಮಿಜಿಯವರ ಎಲ್ಲಾ ಶ್ರಮವನ್ನು ತಮ್ಮ ನಾಲಿಗೆಯ ತೀಟೆ ತೆವಲನ್ನು ತೀರಿಸಿಕೊಳ್ಳಲು ಇದೇ ‘ಪ್ರಶಸ್ತಿ ವಾಪಸಾತಿ ಬ್ರಿಗೇಡ್’ನಲ್ಲಿ ಗುರುತಿಸಿಕೊಂಡಿದ್ದ ಪ್ರಗತಿಪರ, ಬುದ್ಧಿಜೀವಿಗಳು ಮತ್ತು ಮಹಿಳಾ ಪರ ಹೋರಾಟಗಾರಾಗಿದ್ದರು.

ಈಗ ಚಂಪಾ ಅಧ್ಯಕ್ಷರಾದರೆ ಏನು ನಡೆಯುತ್ತೆ ಅನ್ನೋದನ್ನೂ ನಾವು ಈಗಲೇ ಊಹಿಸಬಹುದು. ಪ್ರಗತಿಪರರೆಲ್ಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದು ‘ಅಕ್ಷರ ಜಾತ್ರೆ’ ಆಗಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಮ್ಮ ತೀಟೆ ತೆವಲುಗಳಿಗೆ ಬಳಸಿಕೊಂಡು ಗೌರಿ, ಕಲಬುರ್ಗಿ, ಬಲಪಂಥೀಯ ಎಡಪಂಥೀಯ ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಕಿರುಚಾಡಿ ಅರುಚಾಡಿ ನಕ್ಸಲೈಟ್ ಗಳ ಮೀಟಿಂಗ್ ಅಡ್ಡ ಮಾಡೋದು 100% ಸತ್ಯ. ಅದು ಇನ್ನೊಂದು ‘ಪ್ರತಿರೋಧ(ನೆ) ಸಭೆ’ ಆಗುವ ಎಲ್ಲಾ ಲಕ್ಷಣವೂ ಕಂಗೊಳಿಸುತ್ತಿದೆ.

ಚಂಪಾರವರು ಗೌರಿ ಲಂಕೇಶ ಹತ್ಯೆಯನ್ನ ಖಂಡಿಸಿ ಆತ್ಮಸಾಕ್ಷಿಯಾಗಿ ಹೋರಾಟ ಮಾಡಿದ್ದೇ ಆದಲ್ಲಿ, ನಿಜವಾಗಿಯೂ ಅವಳ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ತಮ್ಮ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿ ಗೌರಿ ಹತ್ಯೆಗೆ ತಮ್ಮ ಸಂತಾಪವನ್ನು ಸೂಚಿಸಬೇಕಾಗಿತ್ತಲ್ಲವೇ?

ಅರೇ ನಮಗೆ ಗಂಜಿ ಕೊಡೋ ಈ ಸರ್ಕಾರ ಇರೋದ್ ಇನ್ನೊಂದ್ ಆರು ತಿಂಗಳು, ಅಷ್ಟರೊಳಗೆ ನಮ್ಮ ಆಸೆ, ತೀಟೆ, ಆಕಾಂಕ್ಷೆಗಳೆಲ್ಲ ತೀರಿಸಿಕೊಂಡುಬಿಡೋಣ, ಮುಂದೆ ಯಾವ ಸರ್ಕಾರ ಬರುತ್ತೋ ಏನೋ, ಆಗ ನನಗೆ ಈ ಛಾನ್ಸ್ ಸಿಗೋದು ಬಹಳ ಕಷ್ಟ ಅಂತ ಹಲ್ಲುಗಿಂಜಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಕೊಂಡ ಇವರ ಮಾನಸಿಕತೆ ನೋಡಿದರೆ ಅಸಹ್ಯ ಅನ್ಸತ್ತೆ.

ಪ್ರತಿ ವಿಷಯದಲ್ಲೂ ಹಿಂದೂ ವಿರೋಧಿ ಹೇಳಿಕೆ ನೀಡುತ್ತ, ಪ್ರತಿಯೊಂದು ವಿಷಯಕ್ಕೂ ಮೋದಿಯ ಹೆಸರನ್ನ ತಳುಕು ಹಾಕೋ ಈ ಎಡಬಿಡಂಗಿಗಳಿಗೆ ಕರ್ನಾಟಕ ಸರ್ಕಾರದ ಕಾನೂನು ವೈಫಲ್ಯ ಯಾಕೆ ಇಲ್ಲೀವರೆಗೂ ಕಂಡಿಲ್ಲ, ಯಾಕೆ ರಾಜ್ಯ ಸರ್ಕಾರ ಕೊಟ್ಟ ಪ್ರಶಸ್ತಿಗಳನ್ನ ವಾಪಸಾತಿ ಮಾಡಲು ಇವರು ಮುಂದೆ ಬರಲಿಲ್ಲ ಅನ್ನೋದು ಇಡೀ ರಾಜ್ಯದ ಜನತೆಗೆ ಗೊತ್ತಿದೆ.

“ನಾನು ಗೌರಿ, ನಾವೆಲ್ಲ ಗೌರಿ” ಅಂದಿದ್ದ ಪ್ರಗತಿಪರರೆಲ್ಲ ಸೇರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರಿ ಲಂಕೇಶ ಹತ್ಯೆ, ಎಂ.ಎಂ.ಕಲಬುರಗಿ ಹತ್ಯೆ ಖಂಡಿಸಿ ಸಿದ್ದರಾಮಯ್ಯನ ಸರ್ಕಾರದ ವಿರುದ್ಧ ಸಮ್ಮೇಳನದಲ್ಲಾದರೂ ವಿರೋಧ ವ್ಯಕ್ತಪಡಿಸುತ್ತಾರಾ ಅಥವ ಅಲ್ಲೂ ಮೋದಿಯನ್ನೇ ವಿರೋಧ ಮಾಡುತ್ತಾರಾ ಅಥವ ಮೊನ್ನೆ ಕಲಬುರಗಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಸಭೆ ಹೇಗೆ ಬಿಜೆಪಿ ವಿರೋಧಿ ಹಾಗು ಕಾಂಗ್ರೆಸ್’ಮಯವಾಗಿತ್ತೋ ಹಾಗೆಯೇ ಈ ಕನ್ನಡ ಸಾಹಿತ್ಯ ಸಮ್ಮೇಳನ ಕೂಡ ಆಗುತ್ತೋ ಅಂತ ಕಾದು ನೋಡಬೇಕು.

– Vinod Hindu Nationalist

Tags

Related Articles

Close