ಅಂಕಣ

ಭಾರತದಲ್ಲಿ ದಿನೇ ದಿನೇ ರೈಲು ಅಪಘಾತ ಹೆಚ್ಚಳವಾಗುತ್ತಿರುವುದೇಕೆ ಗೊತ್ತೇ?!

ಈಡೀ ವಿಶ್ವದ ಎಲ್ಲಾ ವ್ಯವಸ್ಥೆಗಳನ್ನು ಗಮನಿಸಿ ನೋಡಿದಾಗ ಭಾರತದ ರೈಲ್ವೆಗಳು ಅಸುರಕ್ಷಿತವಾಗಿಲ್ಲ ಎಂದು ಗೋಚರಿಸುತ್ತದೆ. ಯಾಕೆಂದರೆ, ಕೆಲವು
ಉದಾಹರಣೆಗಳನ್ನು ತೆಗೆದು ನೋಡಿದಾಗ, ಭಾರತವು ಬೇರೆ ದೇಶಕ್ಕಿಂತ ಅಸುರಕ್ಷಿತವಾಗಿಲ್ಲ ಎಂದು ತಿಳಿದುಬರುತ್ತದೆ!! ಉದಾಹರಣೆಗೆ ಯುರೋಪ್‍ನ್ನು ಗಣನೆಗೆ ತೆಗೆದುಕೊಂಡು ಮತ್ತು ಅದರೊಂದಿಗೆ ಹೋಲಿಸಿ ನೋಡಿದಾಗ ಸಾಕಷ್ಟು ವಿಚಾರಗಳು ಕಂಡುಬರುತ್ತದೆ.

ಯುರೋಪ್‍ನ ಈ ಒಂದು ಡೇಟಾ ಶೀಟ್‍ನ್ನು ಗಣನೆಗೆ ತೆಗೆದುನೋಡಿದಾಗ:

http://ec.europa.eu/eurostat/statistics-explained/index.php/Railway_safety_statistics

ಹಾಗೂ ಭಾರತದಿಂದ ಈ ಒಂದು ಡೇಟಾ ಶೀಟ್‍ನ್ನು ಗಣನೆಗೆ ತೆಗೆದುನೋಡಿದಾಗ:

http://www.indianrailways.gov.in/railwayboard/uploads/directorate/finance_budget/Budget_2015-16/White_Paper-_English.pdf

ಈ ಎರಡು ಡೇಟಾ ಶೀಟ್‍ನ್ನು ಹೋಲಿಸಿ ನೋಡಿದಾಗ – ಅದರಲ್ಲಿ, ಒಂದು ಪ್ರಯಾಣದ ದೂರವನ್ನು ಆಧರಿಸಿದರೆ, ಇನ್ನೊಂದು ಪ್ರಯಾಣಿಕರರನ್ನು ಸಾಗಿಸುವ
ಆಧಾರದ ಮೇಲೆ ತಾಳೆ ನೋಡಲಾಗಿದೆ!! ಪ್ರಯಾಣದ ದೂರಕ್ಕೆ ಸಂಬಂಧಿಸಿದಂತೆ, ನಾವು ಯುರೋಪಿಯನ್ ದೇಶಗಳ ಮಧ್ಯದಲ್ಲಿ ಬಂಧಿತರಾಗಿದ್ದೇವೆ. ಆದರೆ
ಪ್ರಯಾಣದ ದೂರದಲ್ಲಿ ಯು.ಕೆ ಉತ್ತಮವಾಗಿದ್ದರೆ, ಇನ್ನು ಹಲವು ರಾಷ್ಟ್ರಗಳಲ್ಲಿ ಈ ವ್ಯವಸ್ಥೆಯು ಬಹಳ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದೆ!!

ಆದರೆ ಪ್ರಯಾಣಿಕರನ್ನು ಸಾಗಿಸುವುದಕ್ಕೆ ಸಂಬಂಧಪಟ್ಟಂತೆ, ನಾವು ಯುರೋಪ್‍ಗಿಂತ ಗಣನೀಯವಾಗಿ ಉತ್ತಮವಾದ ಸ್ಥಾನದಲ್ಲಿದ್ದೇವೆ!! ಅಷ್ಟೇ ಅಲ್ಲದೇ, ಭಾರತದಲ್ಲಿ ಕಿಲೋಮೀಟರ್‍ಗಳ ಪ್ರಕಾರ, ಅಪಘಾತಗಳಿಂದ ಸಾವನ್ನಪ್ಪಿದ ಪ್ರಯಾಣಿಕರ ಸಂಖ್ಯೆಯು ಯುರೋಪ್‍ಗಿಂತ 5 ಪಟ್ಟು ಕಡಿಮೆ ಇದೆ!!

ಭಾರತೀಯ ರೈಲ್ವೆಗಳ ಸುರಕ್ಷತಾ ದಾಖಲೆಯ ಪಟ್ಟಿಗಳನ್ನು, ಮುಂದುವರಿದ ಯುರೋಪಿಯನ್ ರೈಲುಮಾರ್ಗಗಳ ವ್ಯವಸ್ಥೆಗಳೊಂದಿಗೆ ಹೋಲಿಸಿದರೆ, ಅದರಲ್ಲಿರುವ ಸಾಕಷ್ಟು ವಿಚಾರಗಳನ್ನು ನಾವು ಕಾಣಬಹುದಾಗಿದೆ!! ಹೌದು.. ಭಾರತೀಯ ರೈಲ್ವೆಗಳ ಪ್ರತಿ ಕಿಲೋಮೀಟರ್‍ನ್ನು, ಮಿಲಿಯನ್ ಲೆಕ್ಕಾಚಾರದಲ್ಲಿ ಗಮನಿಸಿದಾಗ, ಅದರಲ್ಲಿರುವ ಅಪಘಾತ ದರವು 2012-2013ರವರೆಗೆ 0.201 ಇದ್ದರೆ, 2013-14ನೇ ಸಾಲಿನಲ್ಲಿ 0.147 ಆಗಿತ್ತು!! ಆದರೆ 2012ರಲ್ಲಿರುವ
ಯುರೋಪ್‍ನ ಅಪಘಾತದ ದರವು 0.210ರಷ್ಟಿತ್ತು!! ಅಷ್ಟೇ ಅಲ್ಲದೇ, ಭಾರತೀಯ ರೈಲ್ವೇ ಅಪಘಾತವು ಕಿಲೋಮೀಟರ್‍ಗಳ ಪ್ರಕಾರ, ಬಿಲಿಯನ್ ಲೆಕ್ಕಾಚಾರದಲ್ಲಿ 2012-13ರಲ್ಲಿ 0.240 ಇದ್ದರೆ 2013-14ರಲ್ಲಿ 0.147ಕ್ಕೆ ಇಳಿದಿತ್ತು. ಆದರೆ ಇದು ಕೂಡ ಯುರೋಪ್‍ಗಿಂತಲೂ ಉತ್ತಮವಾಗಿದೆ ಯಾಕೆಂದರೆ
ಯುರೋಪ್‍ನಲ್ಲಿ ಬಿಲಿಯನ್ ಲೆಕ್ಕಚಾರದಲ್ಲಿ ಅಪಘಾತದ ಪ್ರಮಾಣವು 1.033ರಷ್ಟಾಗಿದೆ!! ಹಾಗಾಗಿ ಭಾರತವು ಬದಲಾವಣೆಯ ಹಾದಿಯಲ್ಲಿರುವುದಂತೂ ನಿಜ!!

ಭಾರತದಲ್ಲಿ ನಾವು ಅತೀ ಹೆಚ್ಚು ಅಪಘಾತಗಳನ್ನು ಗಮನಿಸುತ್ತಿರುವುದು ಏಕೆ? ಅದೇ ಕಾರಣಕ್ಕಾಗಿ ಭಾರತದಲ್ಲಿ ನಡೆಯುವ ಅತ್ಯಾಚಾರ ಅಥವಾ ಕೊಲೆಗಳನ್ನು ಕೂಡ ಗಮನಿಸುತ್ತೇವೆ!! ಯಾಕೆಂದರೆ, ಭಾರತ ದೇಶವು ಬಹು ದೊಡ್ಡ ಜನಸಂಖ್ಯೆ ಹೊಂದಿದ್ದು, ಬಹುದೊಡ್ಡ ಮಟ್ಟದ ಭೂಪ್ರದೇಶವನ್ನು ಹೊಂದಿದೆ. ಜೊತೆಗೆ 1.3ಶತಕೋಟಿ ಜನರು ಕೂಡ ಸಾಮಾನ್ಯ ರಾಷ್ಟ್ರೀಯ ಮಾಧ್ಯಮದಿಂದ ಸಂಪರ್ಕವನ್ನು ಕೂಡ ಹೊಂದಿದ್ದಾರೆ!! ಹಾಗಾಗಿ ಇಷ್ಟು ದೊಡ್ಡಮಟ್ಟದ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಸಾವು-ನೋವುಗಳು, ಅಪರಾಧಗಳು ಮತ್ತು ಅಪಘಾತಗಳು ನಡೆಯುವುದು ಸರ್ವೇಸಾಮಾನ್ಯವಾಗಿವೆ. ಒಂದುವೇಳೆ ಕೇವಲ 10ಮಿಲಿಯನ್ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದ್ದರೆ ನಾವದನ್ನು ಅಷ್ಟಾಗಿ ಗಮನಿಸುವ ಗೋಜಿಗೆ ಹೋಗುವುದಿಲ್ಲ!!

ಒಟ್ಟಾರೆಯಾಗಿ, ಉತ್ತರಪ್ರದೇಶ, ಬಿಹಾರ ಹಾಗೂ ಮುಂತಾದ ನಿರ್ದಿಷ್ಟ ಸ್ಥಳಗಳಲ್ಲಿ ಅಪಘಾತದ ಪ್ರಮಾಣಗಳು ಏರಿಕೆಯಾಗಿದ್ದಾದರೂ ಯಾಕೆ? ಹಾಗಾದರೆ, ಈ
ಕೆಳಗಿನ ಕೋಷ್ಟಕದಲ್ಲಿರುವ >150%ವನ್ನು ಗಮನಿಸಿ…..

ಈ ಚಾರ್ಟ್‍ನ್ನು ಗಮನಿಸಿದಾಗ ನಾವು ಎಷ್ಟು ಟ್ರ್ಯಾಕ್‍ಗಳನ್ನು ಬಳಸುತ್ತಿದ್ದೇವೆ ಎನ್ನುವುದು ಗೊತ್ತಾಗುತ್ತೆ!! ನಾವು ವಿನ್ಯಾಸವನ್ನು ಶೇಕಡಾ 100ಕ್ಕಿಂತಲೂ ಹೆಚ್ಚಾಗಿ ಮಾಡುವುದಲ್ಲದೇ, ಹೆಚ್ಚಾಗಿ ಲೋಡನ್ನು ಮಾಡುವ ಮೂಲಕ ಇಡೀ ಟ್ರ್ಯಾಕ್‍ನ್ನು ದುರುಪಯೋಗಪಡಿಸುತ್ತಿದ್ದೇವೆ. ಆದರೆ >150% ಪ್ರಕಾರ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ರೈಲುಮಾರ್ಗಗಳನ್ನು ಬಳಕೆ ಮಾಡುವುದಿಲ್ಲ. ಹೀಗಾಗಿ ದಕ್ಷಿಣ ಭಾರತದ ಹಲವು ಹಾದಿಗಳಲ್ಲಿ ಅಪಘಾತಗಳು ನಿಮಗೆ ಕಾಣಸಿಗುವುದೇ ಇಲ್ಲ!!

ಹಾಗಾಗಿ, ಪೂರ್ವ ಸೆಂಟ್ರಲ್(ಬಿಹಾರ್), ಉತ್ತರ(ಪಂಜಾಬ್-ಯುಪಿ)ದಲ್ಲಿ, ಎಷ್ಟೊಂದು ಸಾಲುಗಳಲ್ಲಿ ಟ್ರಾಕ್ಯ್‍ಗಳನ್ನು ಅತಿಕ್ರಮಿಸಲಾಗಿದೆ
ಎಂದು(>150%)ನೋಡಬಹುದಾಗಿದೆ!! ಅಷ್ಟೇ ಅಲ್ಲದೇ, ಯಾವ ಯಾವ ಸ್ಥಳಗಳಲ್ಲಿ ಅಪಘಾತಗಳು ಸಂಭವಿಸಬಹುದು ಎಂದು ಕೂಡ ಇಲ್ಲಿ ಕಾಣಬಹುದು!! ಆದರೆ ಅತಿ ಮುಖ್ಯವಾಗಿ ಗಮನಿಸಬೇಕಾಗಿರುವುದೆಂದರೆ, ನೀವು ಸಾಕಷ್ಟು ಹೊರೆಗಳನ್ನು ಹೊರೆಸಿದಾಗ ಅಥವಾ ಹೆಚ್ಚಿನ ಟ್ರಾಫಿಕ್‍ನ್ನು ಸೃಷ್ಟಿಸಿದಾಗ ಏನಾಗುತ್ತೆ
ಎಂಬುವುದು?- ಆದರೆ ಇದರ ಉತ್ತರವೇ ಮುರಿದುಹೋಗುತ್ತೆ ಎನ್ನುವುದು!!

ಈಗ, ನಾವು ಆ ಪ್ರದೇಶಗಳಲ್ಲಿ ಟ್ರಾಕ್‍ಗಳನ್ನು ಹೆಚ್ಚಾಗಿ ಯಾಕೆ ಬಳಸುತ್ತೇವೆ ಎಂದು ಪ್ರಶ್ನೆ ಕೇಳಿಕೊಳ್ಳಿ?? ಪ್ರಶ್ನೆ ಕೇಳಿಕೊಂಡಾಗ ನಮಗೆ ಸಿಗುವ ಉತ್ತರ, ಸುಮಾರು 20 ವರ್ಷಗಳಲ್ಲಿ ರೈಲ್ವೇ ಮಂತ್ರಿಗಳಾಗಿದ್ದವರು ಈ ಪ್ರದೇಶದವರೇ (ನಿತೀಶ್, ಲಾಲು, ಮಮತಾ)!! ಹಾಗಾಗಿ ಈ ಮಂತ್ರಿಗಳೆಲ್ಲರೂ ಕೂಡ ತಮ್ಮ ಪ್ರದೇಶದಲ್ಲಿ ಹೂಡಿಕೆಯನ್ನು ಮಾಡದೇ, ಕುರುಡು ರೀತಿಯಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೋದರೇ ಹೊರತು, ಬೇರಾವುದನ್ನು ಚಿಂತಿಸಲೇ ಇಲ್ಲ!! ಆದರೆ ಆರಂಭದಲ್ಲಿ ಎಲ್ಲವೂ ಉತ್ತಮವಾಗಿ ಕಾಣುತ್ತಿದ್ದು(ಹೆಚ್ಚು ರೈಲುಗಳು ಮತ್ತು ರೈಲಿನಿಂದ ಆದ ಹೆಚ್ಚಿನ ಆದಾಯಗಳನ್ನು), ಇದೀಗ ಇವೆಲ್ಲವೂ ಮಿತಿಮೀರಿ ಹೋಗಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ!!!

ಇದನ್ನು ಗಮನಿಸಿ:


ಮೂಲ:https://www.quora.com/Why-are-there-so-many-railway-accidents-in-India-every-year

– ಅಲೋಖಾ

 

Tags

Related Articles

Close