ಪ್ರಚಲಿತ

ಭಾರತದಿಂದ ಸಂಸ್ಕೃತ ಭಾಷೆ ದೂರವಾದರೂ, ವಿಶ್ವದ ಟಾಪ್ ಯೂನಿವರ್ಸಿಟಿಗಳು ಸಂಸ್ಕೃತ ಭಾಷೆಯ ಪಾರಾಯಣಕ್ಕೆ ಮುಂದಾಗಿದೆ…

ಹಿಂದೂ ಧರ್ಮದ ಸೊಗಡನ್ನು ತುಂಬಿಕೊಂಡಿರುವ ಭಾರತದಲ್ಲಿ ಅದೆಷ್ಟೋ ಗ್ರಂಥಗಳ ಆಗರ ತುಂಬಿಕೊಂಡಿದೆ. ಅದಲ್ಲದೆ ಇಲ್ಲಿನ ಸಂಸ್ಕೃತಿ ಆಚಾರ ವಿಚಾರ ನಿಜಕ್ಕೂ ಹೇಳತೀರದು.. ಆದರೆ ಭಾರತದಲ್ಲಿಯೇ ಇದೆಲ್ಲಾ ಮರೆಯಾಗುತ್ತಿದೆ.. ಇಂತಹ ಸಮಯದಲ್ಲಿ ಹಿಂದೂ ಧರ್ಮವನ್ನು ಆರಾಧಿಸುವ ರಾಷ್ಟ್ರ ಮತ್ತೊಂದಿದೆ ಎಂದು ತಿಳಿದಾಕ್ಷಣ ಅಚ್ಚರಿಯಾಗುವುದು ಸಹಜ. ಹಿಂದೂ ಧರ್ಮವನ್ನು ಭಾರತಕ್ಕಿಂತಲೂ ಮಿಗಿಲಾಗಿ ಆರಾಧಿಸುವ ಪುಣ್ಯಭೂಮಿ ಮತ್ತೊಂದಿದೆ ಎಂದರೆ ಅದು ಹೆಮ್ಮೆಯ ವಿಚಾರ. ಈಗಾಗಲೇ ಇಂಡೋನೇಷಿಯಾ, ಅಮೆರಿಕಾದಂತಹ ರಾಷ್ಟ್ರದಲ್ಲಿ ಸನಾತನ ಧರ್ಮದ ಆಚಾರ ವಿಚಾರವನ್ನು ಪಾಲಿಸುತ್ತಿದೆ. ಇದೀಗ ಜರ್ಮನ್ ಅದರ ಸಾಲಿಗೆ ಸೇರಿಕೊಂಡಿದೆ…

ಹೌದು… ಭಾರತ ಎಂಬ ಹೆಸರು ಕೇಳಿದರೆ ಸಾಕು ಅದೆಷ್ಟೋ ಜನ ಇಲ್ಲೇ ಜನಿಸಬೇಕಿತ್ತು ಎಂದು ದೇವರಲ್ಲಿ ಪ್ರಾರ್ಥಿಸಿದ್ದೂ ಉಂಟು.. ಅಷ್ಟರ ಮಟ್ಟಿಗೆ ಈ ದೇಶ ಪ್ರೇರಿತಗೊಂಡಿದೆ. ಇಲ್ಲಿನ ಆಚಾರ ವಿಚಾರ ಸಂಸ್ಕೃತಿಯನ್ನು ನೋಡಿದರೆ ಕೆಲ ರಾಷ್ಟ್ರಗಳ ಜನರು ಮುಂದಿನ ಜನ್ಮದಲ್ಲಾದರೂ ಈ ದೇಶದಲ್ಲಿ ಹುಟ್ಟ ಬೇಕು ಎಂದು ಹಾತೊರೆಯುತ್ತಾರೆ. ಆದರೆ ಕೆಲ ಜನರು ಇಲ್ಲೇ ಹುಟ್ಟಿ ಇದೇ ಮಣ್ಣಲ್ಲಿ ಬೆಳೆದರೂ ಭಾರತದ ಆಚಾರ ವಿಚಾರದ ಬಗ್ಗೆ ಬಾಯಿಗೆ ಬಂದಂತೆ ಜರಿಯುತ್ತಿರುತ್ತಾರೆ.

ಭಾರತೀಯ ಸಂಸ್ಕೃತಿಯನ್ನು ನಾವು ಮರೆತರೂ ಕೆಲವು ರಾಷ್ಟ್ರ ಭಾರತದ ಸಂಸ್ಕøತಿ, ಆಚಾರ ವಿಚಾರವನ್ನು ಉಳಿಸಲು ಮುಂದಾಗುತ್ತಿದ್ದಾರೆ. ಜರ್ಮನ್ ಈ ಸಾಲಿನಲ್ಲಿದ್ದು ಭಾರತದ ಆಚಾರ ವಿಚಾರನ್ನು ಉಳಿಸಲು ಮುಂದಾಗಿದೆ. ಜರ್ಮನಿಯಲ್ಲಿರುವ ಕೆಲವು ಉನ್ನತ ವಿಶ್ವವಿದ್ಯಾನಿಲಯಗಳು ಸಂಸ್ಕೃತವನ್ನು ಅಭ್ಯಸಿಸಲು ಮುಂದಾಗಿದೆ. ಇಲ್ಲಿಗೆ ಕೇವಲ ಜರ್ಮನಿ ಮಾತ್ರವಲ್ಲದೆ ಅಮೆರಿಕಾ, ಇಟಲಿ, ಇಂಗ್ಲೆಂಡ್ ಮುಂತಾದ ಕೆಲ ರಾಷ್ಟ್ರಗಳಿಂದ ವೇದಗಳ ಬಗ್ಗೆ ಕಲಿಯಲು ಇಲ್ಲಿಗೆ ಬರುತ್ತಿದ್ದಾರೆ. ಹೆನ್ರಿಕ್ ರೋತ್ ಜರ್ಮನ್ ವಿದ್ವಾಂಸನೊಬ್ಬ (1620-1668) ಭಾರತಕ್ಕೆ ಬಂದು ಸಂಸ್ಕೃತದಲ್ಲಿ ತನ್ನ ಉನ್ನತ ಶಿಕ್ಷಣವನ್ನು ಮುಗಿಸಿ ಜರ್ಮನಿಗೆ ತೆರಳಿದ್ದನು. ಅದರ ಬಳಿಕ ಜಾರ್ಜ್ ಫೆÇ?ರೀಸ್ಟರ್ ಎನ್ನುವವನು (1754 1794) ವೇದಗಳನ್ನು ಅಭ್ಯಸಿಸಿ ನಂತರ 5 ನೇ ಶತಮಾನದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ “ಕಾಳಿದಾಸ ಶಕುಂತಲಂ” ಎನ್ನುವ ನಾಟಕವನ್ನು ಜರ್ಮನಿ ಭಾಷೆಗೆ ಭಾಷಾಂತರಿಸಿದ್ದನು. ಇವರೆಲ್ಲರೂ ಸ್ಫೂರ್ತಿಯಾಗಿ ಇದೀಗ ಜರ್ಮನಿಯಲ್ಲಿ ವೇದ- ಸಂಸ್ಕøತಗಳ ಪಾರಾಯಣಕ್ಕೆ ಮುಂದಾಗಿದ್ದಾರೆ.

ಜರ್ಮನಿಯ 14 ಉನ್ನತ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ, ಶಾಸ್ತ್ರೀಯ ಮತ್ತು ಆಧುನಿಕ ವೇದಗಳನ್ನು ಬೋಧಿಸಲಾಗುತ್ತದೆ. ಜರ್ಮನಿಯ ಮಾತ್ರವಲ್ಲದೆ ಹೆಚ್ಚಿನ ವಿದ್ಯಾರ್ಥಿಗಳು ಯುಎಸ್, ಇಟಲಿ, ಮತ್ತು ಯುರೋಪ್‍ನಿಂದ ಕಲಿಯಲು ಬರುತ್ತಾರೆ. ಅದಲ್ಲದೆ ಪ್ರತೀ ವರ್ಷವೂ ಕೆಲವೊಂದು ಅಪ್ಲಿಕೇಶನ್‍ಗಳನ್ನು ಇಲ್ಲಿ ತಿರಸ್ಕರಿಸಲಾಗುತ್ತದೆ. ಅದಲ್ಲದೆ ಚಾಣಾಕ್ಯನ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡುವುದರಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದ ವಿಕಾಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು “ಎಂದು ವಿಶ್ವವಿದ್ಯಾನಿಲಯದ ವೇದಶಾಸ್ತ್ರಜ್ಞ ಡಾ. ಆಕ್ಸೆಲ್ ಮೈಕೇಲ್ಸ್ ಅಭಿಪ್ರಯಿಸಿದ್ದಾರೆ.

ಅದಲ್ಲದೆ ಇರ್ಮನಿಯ ಐಐಟಿ ಮ್ಯಾತ್‍ಮೆಟಿಕ್ಸ್‍ನಲ್ಲಿ ಪದವಿಯನ್ನು ಹೊಂದಿರುವಂತಹ ಆನಂದ್ ಮಿಶ್ರಾರವರು ಉಪನಿಷತ್ತುಗಳಲ್ಲಿ ಮನೋವಿಜ್ಞಾನ ಹೇಗೆ ಬೋಧಿಸಲಾಗುತ್ತಿತ್ತೋ ಹಾಗೆಯೇ ಇಲ್ಲಿ ಕೂಡಾ ಒಂದು ಕೋರ್ಸನ್ನು ಆರಂಭಿಸಿದ್ದಾರೆ. ಜರ್ಮನಿಯಲ್ಲಿ ಇದನ್ನು ಆರಂಭಿಸಿದರು ಕೂಡಾ ಇದೇ ರಾಷ್ಟ್ರದಲ್ಲಿ ಇದನ್ನು ಟೀಕೆಗಳನ್ನು ಮಾಡುತ್ತಿದ್ದಾರೆ. ಇದು ಭಾರತದ ಸಂಸ್ಕøತ ಭಾಷೆ ಅತೀ ಪುರಾತನವಾದಂತಹದ್ದು ಇದನ್ನೆಲ್ಲಾ ಬೋಧಿಸಿ ಏನು ಪ್ರಯೋಜನ ಎಂಬ ಮಾತು ಕೂಡಾ ಜರ್ಮನಿಯಲ್ಲಿ ಅಲ್ಲಲ್ಲಿ ಕೇಳಬರುತ್ತದೆ. ಆದರೂ ಅದನ್ನೆಲ್ಲಾ ಜರ್ಮನಿಯರು ಬದಿಗಿಟ್ಟು ನಮ್ಮ ಸನಾತನ ಸಂಸ್ಕøತಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ.

ಹೈಡೆಲ್ಬರ್ಗ್ ಯೂವರ್ನಿಟಿಯ ಆಧುನಿಕ ದಕ್ಷಿಣ ಏಷ್ಯಾದ ಭಾಷೆಗಳ ಇಲಾಖೆಯ ಮುಖ್ಯಸ್ಥ ಡಾ. ಹಾನ್ಸ್ ಹಾರ್ಡರ್ ಸಂಸ್ಕೃತ ಭಾಷೆ ಎಷ್ಟು ಮಹತ್ವದ್ದು ಎಂದು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಸಂಸ್ಕೃತ ಭಾಷೆಯನ್ನು ನಾವು ಬೆಳೆಸಬೇಕು.. ಇಂಗ್ಲಿಷ್ ಭಾಷೆಯಿಂದಾಗಿ ಇಂದು ಸಂಸ್ಕೃತ ಭಾಷೆಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಇಂತಹ ಭಾಷೆಯನ್ನು ನಾವು ಬೆಳೆಸಬೇಕು. ಸಂಸ್ಕೃತವು ಜೀವಂತ ಭಾಷೆಯಾಗಿದೆ ಮತ್ತು ಸಂಸ್ಕೃತದ ಮೂಲಕ ಸಿಂಧೂ ಕಣಿವೆಯಲ್ಲಿನ ನಾಗರೀಕತೆಯ ವಿವರಗಳನ್ನು ಒಳಗೊಂಡಂತೆ ಇನ್ನೂ ಅನೇಕ ವಿಷಯಗಳನ್ನು ಕಂಡುಹಿಡಿಯಬಹುದಾಗಿದೆ.

ಅದಲ್ಲದೆ ಜರ್ಮನಿಯಲ್ಲಿ ಮಾತ್ರವಲ್ಲದೆ ಈಗಾಗಲೇ ವಿಶ್ವದ ಟಾಪ್ ಎನಿಸಿಕೊಂಡ ಅಮೆರಿಕಾದ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ರಾಮಾಯಣ-ಮಹಾಭಾರತ ಅಧ್ಯಯನಕ್ಕೆ ಕೂಡಾ ಮುಂದಾಗಿದ್ದಾರೆ. ಇಂತಹ ವಿಷಯ ಇಲ್ಲಿನ ಬುದ್ಧಿ ಜೀವಿಗಳಿಗೆ ತಡೆಯಲಾಗದಷ್ಟು ಸಂಕಟವಾಗುವುದಂತೂ ಖಂಡಿತ. ಕೆಲ ಗಂಜಿಗಿರಾಕಿಗಳು ರಾಮಾಯಣ-ಮಹಾಭಾರತ ಕುರಿತಂತೆ ಕೀಳಾಗಿ ಮಾತನಾಡುತ್ತಿರುವಾಗಲೇ ವಿಶ್ವದ ಈ ದೊಡ್ಡ ರಾಷ್ಟ್ರ ತನ್ನ ರಾಷ್ಟ್ರದ ವಿಶ್ವವಿದ್ಯಾಲಯದಲ್ಲಿ ರಾಮಾಯಣ-ಮಹಾಭಾರತದ ಅಧ್ಯಯನ ಮಾಡಿಸುತ್ತಿರುವುದು ಎಲ್ಲರಿಗೂ ಸಂತಸದ ವಿಚಾರವನ್ನು ತಂದಿತ್ತು.

ಜಗತ್ತಿನ ಟಾಪ್ ಯುನಿವರ್ಸಿಟಿ ಎನಿಸಿಕೊಂಡ ಅಮೆರಿಕಾದ ಹಾರ್ವರ್ಡ್ ಯುನಿವರ್ಸಿಟಿ ಕಳೆದ ವರ್ಷ ಹಿಂದುಗಳ ಶ್ರೇಷ್ಟ ಗ್ರಂಥಗಳಾದ ರಾಮಾಯಣ-ಮಹಾಭಾರತವನ್ನು ಅಧ್ಯಯನ ಮಾಡಲು ಮುಂದಾಗಿ ಭಾರತದದಲ್ಲಿರುವ ಬುದ್ಧಿ ಜೀವಿಗಳಿಗೆ ಕಪಾಳ ಮೋಕ್ಷಮಾಡಿದ್ದರು. ಹಾರ್ವರ್ಡ್ ಯುನಿವರ್ಸಿಟಿ `ಇಂಡಿಯನ್ ರಿಲಿಜಿಯನ್ಸ್ ಥ್ರೂ ದೇರ್ ನರೇಟಿವ್ ಲಿಟ್ರೇಚರ್’ ಕೋರ್ಸ್ ಮೂಲಕ ಈ ಮಹಾಕಾವ್ಯಗಳನ್ನು ಪಠ್ಯದಲ್ಲಿ ಪರಿಚಯಿಸಲಾಗಿದೆ.

ಬರೀ ಇಷ್ಟೇ ಅಲ್ಲದೆ ಇದರ ಜೊತೆಗೆ ದಕ್ಷಿಣ ಏಷ್ಯಾದ ಧಾರ್ಮಿಕ ಸಂಪ್ರದಾಯಗಳು ಮತ್ತು ಸಮುದಾಯಗಳು ಕುರಿತ ಕೋರ್ಸ್‍ಗಳನ್ನು ಆರಂಭಿಸಲಿದ್ದು, ಇಲ್ಲಿನ ನೃತ್ಯ ಪ್ರಕಾರಗಳು, ತೊಗಲು ಗೊಂಬೆ, ಬೀದಿ ನಾಟಕ, ಆಧುನಿಕ ಕಾಲಘಟ್ಟದಲ್ಲಿ ಮಹಾಕಾವ್ಯಗಳ ಬಳಕೆ ಕುರಿತಾದ ವಿಷಯಗಳನ್ನು ಇತಿಹಾಸ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ. ಭಾರತೀಯ ಮಹಾಕಾವ್ಯಗಳು ದೀರ್ಘ ಮತ್ತು ಸಂಕೀರ್ಣ ನಿರೂಪಣೆಯನ್ನು ಹೊಂದಿವೆ. ಇದರಲ್ಲಿ ಬರುವ ಪ್ರತಿಯೊಂದು ಅಂಶವೂ ಮಾನವನ ಅನುಭವಕ್ಕೆ ತಲುಪುವಂತಹುದೇ ಆಗಿವೆ. ಈ ಮೂಲಕ ಮಹಾಕಾವ್ಯಗಳ ಅಧ್ಯಯನ ಮತ್ತು ಹಿಂದೂ ಧರ್ಮದ ವಿವಿಧ ಆಯಾಮಗಳನ್ನು, ಸಂಪ್ರದಾಯಗಳನ್ನು ಅಮೆರಿಕಾದ ವಿದ್ಯಾರ್ಥಿಗಳು ಅಭ್ಯಸಿಸಲಿದ್ದು ಇದು ಕೇವಲ ಭಾರತಕ್ಕೆ ಮಾತ್ರ ಹೆಮ್ಮೆಯ ವಿಚಾರವಲ್ಲದೆ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿತ್ತು. ಇದೀಗ ಜರ್ಮನಿಯಲ್ಲಿ ಸಂಸ್ಕøತ ಬೋಧಿಸಲು ಮುಂದಾಗಿರುವುದು ನಿಜಕ್ಕೂ ಸಂತಸದ ವಿಚಾರ.

ಜರ್ಮನಿಗಳಿಗೆ ಭಾರತ ಮತ್ತು ಅದರ ಸಂಸ್ಕೃತಿಯಲ್ಲಿ ಈ ಆಳವಾದ ಆಸಕ್ತಿಯಿಂದಾಗಿ ಜರ್ಮನ್ ವಿಶ್ವವಿದ್ಯಾನಿಲಯಗಳಲ್ಲಿ ವೇದ ಮತ್ತು ತುಲನಾತ್ಮಕ ಭಾಷಾಶಾಸ್ತ್ರದ ಅಧ್ಯಯನಕ್ಕೆ ಕಾರಣವಾಯಿತು. ಭಾರತೀಯರಾದ ನಾವು ನಾಚಿಕೆಪಡಬೇಕು. ಜರ್ಮನ್ ವಿದ್ವಾಂಸರು ಭಾರತೀಯ ಸಂಪತ್ತನ್ನು ಬೆಳೆಯಲು ಮತ್ತು ಪೆÇೀಷಿಸುವ ಅವರ ಪ್ರಯತ್ನ ನಿಜವಾಗಿಯೂ ಅದ್ಭುತವಾಗಿದೆ. ಇನ್ನಾದರೂ ಭಾರತೀಯರಾದ ನಾವು ನಮ್ಮ ಸಂಸ್ಕøತಿ ಆಚಾರ ವಿಚಾರವನ್ನು ಉಳಿಸಲು ಮುಂದಾಗೋಣ….

-ಪವಿತ್ರ

Tags

Related Articles

FOR DAILY ALERTS
Close