ಅಂಕಣ

ಭಾರತದ ಆರ್ಥವ್ಯವಸ್ಥೆಯ ಬಗ್ಗೆ ಬ್ರಿಟನ್ನಿನ HSBC ಸಂಸ್ಥೆಯ ರಿಪೋರ್ಟ್ ಮೋದಿಜೀಯನ್ನ ಪ್ರಶ್ನೆ ಮಾಡುತ್ತಿರುವ ಜನರನ್ನ ಬೆಚ್ಚಿಬೀಳಿಸುತ್ತೆ!!! ಅಂಥದ್ದೇನಿದೆ ಆ ರಿಪೋರ್ಟಲ್ಲಿ?

ಭಾರತದ ಆರ್ಥಿಕತೆ ಕುಸೀತಿದೆ, ಪೆಟ್ರೋಲ್ ಬೆಲೆ ಏರುತ್ತಿದೆ, ಜನಸಾಮಾನ್ಯರಿಗೆ ಬದುಕಲು ಆಗ್ತಿಲ್ಲ ಹಂಗೇ ಹಿಂಗೆ ಅಂತ ಕಾಂಗ್ರೆಸ್ ಆದಿಯಾಗಿ ವಿರೋಧ ಪಕ್ಷಗಳ ಸಮೇತ ಎಲ್ಲರೂ ಮೋದಿಜೀಯ ಮೇಲೆ ಮುಗಿಬಿದ್ದಿದ್ದಾರೆ. ಆದರೆ ಸದ್ಯ ಭಾರತದಲ್ಲಿ ಮೋದಿಜೀ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಭಾರತವನ್ನು ಭವಿಷ್ಯದಲ್ಲಿ ಇಡೀ ಜಗತ್ತಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಿಸುವತ್ತ ಹೆಜ್ಜೆ ಹಾಕಿದ್ದಾರೆ.

ನೆನ್ನೆ ದೆಹಲಿಯ Institute of Company Secretaries ನಲ್ಲಿಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

“ವರ್ತಮಾನದ ಸುಖಕ್ಕಾಗಿ ಭವಿಷ್ಯದ ಕನಸನ್ನು ನುಚ್ಚು ನೂರು ಮಾಡೋದಕ್ಕೆ ನಾನು ಬಿಡಲ್ಲ”

ಇದರರ್ಥ ಸದ್ಯ ಜನಸಾಮಾನ್ಯರಿಗೆ ಸ್ವಲ್ಪ ಕಷ್ಟವಾಗುತ್ತಿರಬಹುದು ಆದರೆ ಸರ್ಕಾರದ ಸದ್ಯದ ನಿರ್ಧಾರಗಳು ಭವಿಷ್ಯದ ಒಳ್ಳೆಯ ದಿನಗಳಿಗಾಗಿಯೇ.

ಇದರ ಮಧ್ಯೆ ಬ್ರಿಟನಿನ್ನ HSBC Brokerage ರಿಪೋರ್ಟ್ ಕೂಡ ಮೋದಿಜೀ ಹೇಳಿದ್ದನ್ನ ಸಮರ್ಥಿಸುವ ರೀತಿಯಲ್ಲೇ ರಿಪೋರ್ಟ್ ಒಂದನ್ನು ನೀಡಿತ್ತು.

ಆ ರಿಪೋರ್ಟ್ ನೋಡಿದ ಮೋದಿ ವಿರೋಧಿಗಳಿಗೆ ನಿಜಕ್ಕೂ ನಡುಕ ಹುಟ್ಟಿರೋದಂತೂ ಸುಳ್ಳಲ್ಲ.

ಬರೀ ಮೋದಿ ವಿರೋಧಿಗಳಷ್ಟೇ ಅಲ್ಲ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂಥ ರಿಪೋರ್ಟ್ ಅದಾಗಿತ್ತು.

ಅಂಥದ್ದೇನಿದೆ ಆ ರಿಪೋರ್ಟ್’ಲ್ಲಿ?

ಪ್ರಧಾನಿ ಮೋದಿಜೀಯವರಿಂದ ದೇಶದಲ್ಲಾಗುತ್ತಿರೋ ಅಭಿವೃದ್ಧಿ ಹಾಗು ಸುಧಾರಣಾ ನೀತಿಗಳ ಬಗ್ಗೆ ಕಾಂಗ್ರೆಸ್ ಆದಿಯಾಗಿ ಎಲ್ಲಾ ವಿಪಕ್ಷಗಳೂ ಸುಳ್ಳು ಸುದ್ದಿಯನ್ನು ಹಬ್ಬಿಸಲು ಇನ್ನಿಲ್ಲದ ಪ್ರಯತ್ನಗಳನ್ನ ಮಾಡುತ್ತಿದ್ದಾರೆ.

60 ವರ್ಷ ದೇಶವನ್ನ ಲೂಟಿ ಹೊಡೆದ ಕಾಂಗ್ರೆಸ್’ಗೆ ಮಾತ್ರ ಈಗ ಅಭಿವೃದ್ಧಿ, ಬಡವರ ಏಳಿಗೆ, ಯುವಕರಿಗೆ ಉದ್ಯೋಗ, ಮಹಿಳಾ ಸಬಲೀಕರಣ ಮಾತ್ರ ಫಟಾಫಟ್ ಆಗಿ ಆಗಬೇಕು ಅಂತ ತುದಿಗಾಲ ಮೇಲೆ ನಿಂತಿದಾರೆ.

ಪ್ರಧಾನಮಂತ್ರಿ ಮೋದಿ ಒಬ್ಬ ಸುಳ್ಳುಗಾರ, ಆತ ಹೇಳುತ್ತಿರೋ ಹಾಗೆ ದೇಶದಲ್ಲಿ ಅಭಿವೃದ್ದಿ ಕಾಣುತ್ತಿಲ್ಲ. GDP ಇಳಿಯುತ್ತಿದೆ ಬ್ಲಾ ಬ್ಲಾ ಬ್ಲಾ ಅಂತ ಬಾಯಿ ಬಾಯಿ ಬಡ್ಕೋತಿದಾರೆ.

ಆದರೆ ಬ್ರಿಟನ್’ನ HSBC ರಿಪೋರ್ಟ್ ಮಾತ್ರ ವಿಪಕ್ಷಗಳಿಗೆ ಕಪಾಳಮೋಕ್ಷ ಮಾಡಿದಂತಿದೆ.

HSBC Brokerage ರಿಪೋರ್ಟಿನ ಪ್ರಕಾರ “ಭಾರತದಲ್ಲಿ ಸದ್ಯ ನಡೆಯುತ್ತಿರೋ ಬೆಳವಣಿಗೆಯನ್ನ ನೋಡಿದರೆ ಮುಂದಿನ 10 ವರ್ಷಗಳಲ್ಲಿ ಭಾರತ ಜಪಾನ್
ಹಾಗು ಜರ್ಮನಿಯನ್ನ ಹಿಂದಿಕ್ಕಿ ಪ್ರಪಂಚದ 3 ನೇ ಅತೀ ದೊಡ್ಡ ಅರ್ಥವ್ಯವಸ್ಥೆಯ ದೇಶವಾಗಿ ಹೊರಹೊಮ್ಮಲಿದೆ. ಇದಕ್ಕಾಗಿ ಭಾರತ ಸತತವಾಗಿ ಇದೇ ರೀತಿಯ ಸುಧಾರಣಾ ನೀತಿಗಳನ್ನ ಮಾಡುತ್ತಿರಬೇಕು ಹಾಗು ಸೋಶಿಯಲ್ ಸೆಕ್ಟರ್ ಮೇಲೂ ಹೆಚ್ಚಿನ ಒತ್ತು ನೀಡಬೇಕು”

ಈ ರಿಪೋರ್ಟಿನ ಪ್ರಕಾರ ಸದ್ಯ ಭಾರತ 2.3 ಟ್ರಿಲಿಯನ್ ಡಾಲರ್(2.3 ಲಕ್ಷ ಕೋಟಿ ಡಾಲರ್) ಹೊಂದಿರುವ ಭಾರತದ 5 ನೆಯ ಅತಿ ದೊಡ್ಡ ಆರ್ಥವ್ಯವಸ್ಥೆ ಹೊಂದಿರುವ ದೇಶವಾಗಿದೆ. ಈಗ ಭಾರತದ ನಡೆಯುತ್ತಿರುವ ಆರ್ಥಿಕ ಸುಧಾರಣೆಯನ್ನ ನೋಡಿದರೆ 2028 ರ ವೇಳೆಗೆ ಭಾರತವು ಜಪಾನ್, ಜರ್ಮನಿ, ಚೀನಾ ದೇಶವನ್ನೂ ಹಿಂದಿಕ್ಕಿ 7. ಟ್ರಿಲಿಯನ್ ಡಾಲರ್(7 ಲಕ್ಷ ಕೋಟಿ) ಹೊಂದಿರುವ ಆರ್ಥವ್ಯವಸ್ಥೆಯ ದೇಶವಾಗಲಿದೆ. ಆಗ ಜರ್ಮನಿ 6 ಟ್ರಿಲಿಯನ್ ಡಾಲರ್, ಜಪಾನ್ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯ ಹೊಂದಿರುವ ದೇಶಗಳಾಗಲಿವೆ.

ಭಾರತದಲ್ಲಿ ವ್ಯಾಪಾರ ವಹಿವಾಟು ಮಾಡುವಲ್ಲಿ ಸರಳತೆ ಹಾಗು ಕಾಂಟ್ರ್ಯಾಕ್ಟ್ ಎನಫೋರ್ಸಮೆಂಟ್’ನ ಮೇಲೆ ಹೆಚ್ಚು ಒತ್ತು ನೀಡಬೇಕು, ಇದರ
ಹೊರತಾಗಿ ಆರೋಗ್ಯ ಹಾಗು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚು ಮಾಡುವದು ಅವಶ್ಯಕವಾಗಿದೆ.

ಮೋದಿಜೀ ಹೀಗೆ ತಮ್ಮ ಸುಧಾರಣಾ ಕಾಯಿದೆಗಳನ್ನು ಮುಂದುವರೆಸಿಕೊಂಡು ಹೋದರೆ ಭಾರತ ಮುಂದಿನ ಹತ್ತು ವರ್ಷಗಳಲ್ಲಿ ಚೀನಾಕ್ಕೂ ತನ್ನ ಅರ್ಥವ್ಯವಸ್ಥೆಯ ಮೂಲಕ ಸೆಡ್ಡು ಹೊಡೆಯಲಿದೆ. ಭಾರತದಲ್ಲಿ ಭ್ರಷ್ಟಾಚಾರವನ್ನ ನಿರ್ಮೂಲನೆಗೆ ದಿಟ್ಟ ಕ್ರಮಗಳನ್ನು ಮೋದಿ ಸರ್ಕಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತ ಆಡಳಿತದಲ್ಲಿ ಪಾರದರ್ಶಕತೆಯನ್ನ ತರಲಾಗುತ್ತಿದೆ.

ರಿಪೋರ್ಟಿನಲ್ಲಿರುವ ಮತ್ತೊಂದು ಅಂಶವೆಂದರೆ “ಭಾರತದ ಒಟ್ಟು ಜನಸಂಖ್ಯೆಯಲ್ಲಿ ಹೆಚ್ಚಿನವರು ಯುವಕರೇ ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ
ಯುವಕರಿಗೆ ವಿದೇಶಿ ಹೂಡಿಕೆಯಿಂದ ಹೆಚ್ಚು ಉದ್ಯೋಗಗಳು ಸಿಗುವುದಿದೆ”

ನೋಟು ಅಮಾನ್ಯೀಕರಣ ಮಾಡಿ ಅರ್ಥವ್ಯವಸ್ಥೆ ಬುಡಮೇಲಾಗಿದೆ ಅಂತ ಕಾಂಗ್ರೆಸ್ ಮಾಡಿತ್ತಿರೋ ಅಪಪ್ರಚಾರಕ್ಕೂ ಉತ್ತರ ಕೊಡುವಂತೆ HSBC ರಿಪೋರ್ಟ್’ನಲ್ಲಿ ಉಲ್ಲೇಖಿಸಿರುವಂತೆ “ನೋಟು ಅಮಾನ್ಯೀಕರಣ ಹಾಗು GST ಯಿಂದ ಸದ್ಯದ ಮಟ್ಟಿಗೆ GDP ಕೊಂಚ ಇಳಿಮುಖವಾಗಿದ್ದರೂ ಈ ವರ್ಷಾಂತ್ಯಕ್ಕೆ GDP 7.1 ರಷ್ಟು ಏರಿಕೆಯಾಗಲಿದೆ, ಮುಂದೆ ಅದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಭಾರತದ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ. ಭಾರತಕ್ಕೆ ಮುಂಬರುವ ದಿನಗಳು ಸುವರ್ಣ ದಿನಗಳಾಗಿರಲಿವೆ. ಭಾರತದಲ್ಲಿ ಒಟ್ಟು 2.4 ಕೋಟಿ ಉದ್ಯೋಗಗಳ ಅಗತ್ಯವಿದೆ, ಅದರಲ್ಲಿ ಇ-ಕಾಮರ್ಸ್ ಕಂಪೆನಿಗಳು ಭಾರತದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ(1 Cr 20 Lakh) ಉದ್ಯೋಗಗಳು ಕೊಡಲಿವೆ.

ಇದನ್ನೂ ಹೊರತುಪಡಿಸಿ ಸ್ವಾಸ್ಥ್ಯ ಹಾಗು ಶಿಕ್ಷಣ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗಾವಕಾಶಗಳು ದೊರಕಲಿವೆ.

ಭಾರತ ಸೇವಾಧಾರಿತ ಅರ್ಥವ್ಯವಸ್ಥೆಯತ್ತ ಮುನ್ನುಗ್ಗುತ್ತಿದೆ. ಇದರ ಜೊತೆಗೆ ಭಾರತ ಉತ್ಪಾದನಾ ಕ್ಷೇತ್ರದಲ್ಲಿ ಹಾಗು ಕೃಷಿ ಕ್ಷೇತ್ರದಲ್ಲೂ ಈಗಿನಿಗಿಂತ ಸ್ವಲ್ಪ ಹೆಚ್ಚು ಒತ್ತು ನೀಡಿದರೆ ಭಾರತವನ್ನ ಹಿಂದೆ ಹಾಕೋಕೆ ಉಳಿದ ರಾಷ್ಟ್ರಗಳು ಹೆಣಗಾಡುವ ಪರಿಸ್ಥಿತಿಗೆ ಬರುತ್ತವೆ”

ಈಗ ಮೋದಿಜೀಯನ್ನ ವಿರೋಧಿಸುತ್ತಿರುವ ಜನಗಳು HSBC ಬ್ರೋಕರೇಜ್ ಕೊಟ್ಟಿರುವ ಈ ರಿಪೋರ್ಟ್’ನ್ನ ಓದಿದರೆ ಖಂಡಿತವಾಗಿಯೂ ಸೂಸೈಡ್ ಮಾಡಿಕೊಳ್ಳುವುದಂತೂ ಸತ್ಯ.

ಮೊದಲೇ ರಾಜಕೀಯ ಅಸ್ತಿತ್ವ ಕಳೆದುಕೊಂಡು ಒಂದೊಂದೇ ರಾಜ್ಯದಿಂದ ಮಾಯವಾಗುತ್ತಿರುವ ಕಾಂಗ್ರೆಸ್ ಎಂಬ ಮುಳುಗುತ್ತಿರುವ ದೋಣಿಗೆ ಈ ರಿಪೋರ್ಟ್ ಕಪಾಳಮೋಕ್ಷದಂತಿದೆ.

ಭಾರತದ ಅರ್ಥವ್ಯವಸ್ಥೆ ಹಳ್ಳ ಹಿಡೊಯುತ್ತಿದೆ ಅಂತ ಬೊಬ್ಬೆ ಹೊಡೆಯುತ್ತಿರೋರಿಗೂ ಮುಂಬರುವ ದಿನಗಳಲ್ಲಿ ಸರಿಯಾದ ಉತ್ತರ ಸಿಗಲಿದೆ.

ಒಟ್ಟಿನಲ್ಲಿ ಭಾರತವನ್ನ ವಿಶ್ವಗುರುವಾಗಿಸುವತ್ತ ಮೋದಿಜೀ ದಿಟ್ಟ ಹೆಜ್ಜೆಯನ್ನೇ ಇಡುತ್ತಿದ್ದಾರೆ. ಅದಕ್ಕೆ ಜನಾಮಾನ್ಯರಾದ ನಮ್ಮ ಬೆಂಬಲ ಬೇಕಷ್ಟೆ.

60 ವರ್ಷ ಲೂಟಿ ಹೊಡೆದವರನ್ನ ಪ್ರಶ್ನೆ ಮಾಡದ ಜನಗಳು ಇಂದು ಮೋದಿಜೀಯನ್ನ ಪ್ರಶ್ನೆ ಮಾಡಿ ಅದ್ಯಾಕೆ ಆಗಿಲ್ಲ ಇದ್ಯಾಕೆ ಆಗಿಲ್ಲ ಅಂತ ತಮ್ಮ ಪೌರುಷ ತೋರೊಸಿಕೊಳ್ಳೋಕೆ ಮುಂದಾಗಿದಾರೆ.

ಕೊನೆಯದಾಗಿ ಒಂದು ಮಾತು, ನಮಗೆ 3 ಅಂತಸ್ತಿನ ಮನೆ ಕಟ್ಟಿಸಬೇಕಾಗಿದೆ, ಅದನ್ನ ನಾಳೆಯೇ ಕಟ್ಟಿ ಮುಗಿಸು ಅಂತ ಇಂಜಿನಿಯರ್’ಗಳಿಗೆ ಹೇಳಿದರೆ ಆತ ಒಂದೇ ದಿನದಲ್ಲಿ ಅದನ್ನ ಕಟ್ಟೋಕೆ ಸಾಧ್ಯವಾ? ಮೊದಲು ಮನೆ ಕಟ್ಟೋಕೆ ಅಡಿಪಾಯ ಅಗತ್ಯವಾದ್ದು, basement ಎಷ್ಟು strong ಆಗಿರುತ್ತೋ ಮನೆ ಕೂಡ ಅಷ್ಟೇ strong ಆಗಿರುತ್ತೆ. ಆ strong foundation ಮೋದಿಜೀ ಹಾಕುತ್ತಿದ್ದಾರೆ. ಸ್ವಲ್ಪ ತಾಳ್ಮೆಯಿರಲಿ ಅಷ್ಟೇ.

ಅಷ್ಟಕ್ಕೂ ದೇಶಕ್ಕಾಗಿ ದಿನದ 18 ಗಂಟೆ ದುಡಿಯುತ್ತಿರುವ ಮೋದಿಜೀಯನ್ನ ದೂಷಿಸಿ ಅವರನ್ನ ಅಧಿಕಾರದಿಂದ ಕೆಳಗಿಳಿಸಿ ಮತ್ತೆ ಯಾರಿಗೆ ಅಧಿಕಾರ ಕೊಡೋರಿದೀವಿ ನಾವು? ದೇಶವನ್ನ ಲೂಟಿ ಮಾಡಿ, ದಿನಬೆಳಗಾದರೆ ಹಗರಣದ ಸುದ್ದಿಯನ್ನೇ ಕೇಳುವಂತೆ ಮಾಡಿದ್ದ ಅದೇ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರದ ಗದ್ದುಗೆಯ ಮೇಲೆ ಕೂರಿಸಬೇಕಾ ನೀವೇ ಯೋಚಿಸಿ!!

– Vinod Hindu Nationalist

Tags

Related Articles

Close