ಅಂಕಣದೇಶಪ್ರಚಲಿತ

ಭಾರತದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ, ಪೂರ್ಣ ಪ್ರಮಾಣದ ರಕ್ಷಣಾ ಸಚಿವರಾಗಿ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ! ಚೀನಾ ಹಾಗೂ ಪಾಕಿಸ್ಥಾನ ಆಕೆಗೆ ಯಾಕೆ ಹೆದರಬೇಕಿದೆ ಗೊತ್ತೇ?

ದೇಶದ ರಕ್ಷಣಾ ಸಚಿವರ ಹುದ್ದೆಗೆ ಮುಂದಿನ ಸೂಕ್ತ ವ್ಯಕ್ತಿಯನ್ನು ಮೋದಿ ಪತ್ತೆ ಮಾಡಿಲ್ಲ ಎಂದು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದ ಮಂದಿಗೆ ತಕ್ಕ ಉತ್ತರ
ಸಿಕ್ಕಿದೆ. ರಾಜಕೀಯ ವಿಶ್ಲೇಷಕರ ಊಹಾಪೋಹಗಳಿಗೆ ತೆರೆ ಎಳೆದ ಪ್ರಧಾನಿ ನರೇಂದ್ರ ಮೋದಿ ಕುತೂಹಲಕರವಾದ ವಿಚಾರಗಳನ್ನು ಸಂಪುಟ ಪುನರ್‍ರಚನೆಯಲ್ಲಿ ಮುಂದಿಟ್ಟರು. ಆದರೆ, ಮೋದಿ ಮಾತ್ರ ಈ ಸಮಯವೂ ಕೂಡ ಯಾರನ್ನೂ ನಿರಾಶೆಗೊಳಿಸಲಿಲ್ಲ.

ಅಧಿಕಾರಕ್ಕೆ ಬಂದ ನಂತರ ಅಚ್ಚರಿಗೆ ಆದ್ಯತೆ ನೀಡುತ್ತಲೇ ಸಾಗಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಪುಟದ ಪುನರ್ ರಚನೆಯ ವೇಳೆ ಮತ್ತೆ ಅದಕ್ಕೆ ಪುಷ್ಠಿ ನೀಡುವಂತಹ ಕೆಲಸವನ್ನು ಮಾಡಿದ್ದಾರೆ. ಪತ್ರಕರ್ತರು ರಕ್ಷಣಾ ಸಚಿವರ ಖಾತೆಯನ್ನು ಅರುಣ್ ಜೇಟ್ಲಿಯವರು ಉಳಿಸಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಲು ಪ್ರಾರಂಭಿಸಿ ಹೊತ್ತಲ್ಲೇ, ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಎಂದು ಘೋಷಿಸಲಾಯಿತು. ನಿರ್ಮಲಾ ಸೀತಾರಾಮನ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಿರುವ ನರೇಂದ್ರ ಮೋದಿ, ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಅತೀ ಮುಖ್ಯ ಪ್ರಾಶಸ್ತ್ಯವನ್ನು ನೀಡುತ್ತಿದ್ದಾರೆ ಎಂದು ತಿಳಿದು ಬರುತ್ತದೆ. ಆ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ವಿಶೇಷ ಒತ್ತು ನೀಡುತ್ತಿರುವ ಪ್ರಧಾನಿ ಮೋದಿ ತನ್ನ ಸರಕಾರದಲ್ಲಿ ಮೂರು ಪ್ರಮುಖ ಖಾತೆಯನ್ನು ಸುಷ್ಮಾ ಸ್ವರಾಜ್. ಸ್ಮೃತಿ ಇರಾನಿ ನಂತರ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದ್ದಾರೆ.

ದೇಶದ ಅತಿ ಪ್ರಮುಖ ಹುದ್ದೆಗಳಲ್ಲಿ ಒಂದಾಗಿರುವ “ರಕ್ಷಣೆ’ಯ ಹೊಣೆಯು ಈಗ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರ ಹೆಗಲಿಗೆ ಬಿದ್ದಿದೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆಯಾಗಿ ನೇಮಕಗೊಂಡ ಮಹಿಳೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಪಾತ್ರರಾಗಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ, ಇಟಲಿ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಜಾಗತಿಕವಾಗಿ ಇತರ 15 ರಾಷ್ಟ್ರಗಳ ರಕ್ಷಣಾ ಸಚಿವರು ಮಹಿಳೆಯರೇ ಆಗಿದ್ದು, ಇದೀಗ ಅವರ ಸಾಲಿಗೆ ನಿರ್ಮಲಾ ಸೇರಿದ್ದಾರೆ.

ನಿರ್ಮಲಾ ಸೀತಾರಾಮನ್: ಇವರು ಮೋದಿಯ ನೆಚ್ಚಿನ ಅಭ್ಯರ್ಥಿಯಾಗಿದ್ದು ಹೇಗೆ?

ಕೇಂದ್ರ ಸಂಪುಟದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಿರುವ ಮೊದಲ ಮಹಿಳೆ ಎಂದು ಪ್ರಸಿದ್ಧಿಯನ್ನು ಪಡೆದಿದ್ದಾರೆ ನಿರ್ಮಲಾ ಸೀತಾರಾಮನ್. ವಾಣಿಜ್ಯ ಖಾತೆ ಸಹಾಯಕ ಸಚಿವೆಯಾಗಿಯೂ, ಪಕ್ಷದ ವಕ್ತಾರೆಯಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ ನಿಷ್ಠಾವಂತೆ. ತಮಿಳುನಾಡಿನ ಮಧುರೈನಲ್ಲಿ ರಾಜಕೀಯ ಗರಡಿಯಲ್ಲಿ ಪಳಗಿದ ನಿರ್ಮಲಾ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗುವ ಮೊದಲೇ 2014ರಲ್ಲಿ ವಾಣಿಜ್ಯ ಸಚಿವಾಲಯದಲ್ಲಿ ಸ್ಥಾನಗಿಟ್ಟಿಸಿಕೊಂಡ ಮಹಿಳೆಯಾಗಿದ್ದಾರೆ. ಮೋದಿಯ ಕ್ಯಾಬಿನೆಟ್ ಸೇರುವ ಮೊದಲು ಬಿಜೆಪಿ ವಕ್ತಾರರಾಗಿ ಕೆಲಸ ನಿರ್ವಹಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಪ್ರಶಂಸನೀಯ ಕೆಲಸಗಳನ್ನು ಮಾಡಿದ್ದಾರೆ. 2014ರ ಚುನಾವಣೆಗಳ ಮೊದಲೇ ನಿರೂಪಣೆಯಲ್ಲಿ ಯಶಸ್ವಿಯಾಗಿದ್ದರು ಕೂಡ.

ಹೌದು…. ಮಾಧ್ಯಮಗಳು 2002ರ ಗೋಧ್ರಾ ದಂಗೆಯ ಬಗ್ಗೆ ಪ್ರಧಾನಿ ಮೋದಿವರನ್ನು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ, ಮಾಧ್ಯಮಗಳಿಗೆ ತಕ್ಕ ಉತ್ತರ ನೀಡಿದ ಗಟ್ಟಿಗಿತ್ತಿ. ಮಾಧ್ಯಮಗಳ ಚರ್ಚೆಗಾಗಿ ಸ್ಟುಡೀಯೋಗೆ ಹೋಗುವ ಮುಂಚಿತವಾಗಿ ವಿಷಯದ ಕುರಿತಂತೆ ಸಂಶೋಧನೆ ಮಾಡಿದ್ದಲ್ಲದೇ ಇದರ ಬಗ್ಗೆ ಸಮರ್ಥಕವಾಗಿ ಮಾತಾನಾಡಿ ಮೆಚ್ಚುಗೆಗೆ ಪಾತ್ರವಾಗಿದ್ದರು ನಿರ್ಮಲಾ.

ಉನ್ನತ ದರ್ಜೆಯ ಸ್ಥಾನವನ್ನು ಹೊಂದಿರುವ ಅರ್ಹ ಮಹಿಳೆ!!!

ಇವರು 2003 ರಿಂದ 2005ರವರೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿದ್ದರು. ನಂತರ 2008 ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ
ಆಯ್ಕೆಗೊಂಡರಲ್ಲದೇ 2010ರಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿದ್ದರು.

ನಿರ್ಮಲಾ ತಿರುಚಿರಾಪಲ್ಲಿಯ ಸೀತೈಯಕ್ಷಿಮಿ ರಾಮಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ವಿಷಯದಲ್ಲಿ ಪದವಿಯನ್ನು ಪಡೆದಿದ್ದು, ಅರ್ಥಶಾಸ್ತ್ರದ ವಿಷಯದಲ್ಲಿ
ಸ್ನಾತಕೋತ್ತರ ಪದವಿಯನ್ನು ಮತ್ತು ಎಂ,ಫಿಲ್ ನ್ನು ದೆಹಲಿಯ ಜೆಎನ್‍ಯುನಲ್ಲಿ ಮಾಡಿದ್ದಾರೆ. ಜೆಎನ್‍ಯು ಕ್ಯಾಂಪಸ್‍ನಲ್ಲಿ ರಾಷ್ಟ್ರೀಯ ವಿರೋಧಿ ಚಟುವಟಿಕೆಗಳು
ನಡೆದಾಗ ಇದು ನಾನು ಅಧ್ಯಯನ ಮಾಡಿದ ಹಳೆಯ ಜೆಎನ್‍ಯು ಅಲ್ಲ ಎಂದು ಹೇಳಿದ್ದಾರೆ. ಇವರು ಲಂಡನ್‍ನಲ್ಲಿ ಅಗ್ರಿಕಲ್ಚರಲ್ ಇಂಜಿನಿಯರ್ಸ್
ಅಸೋಸಿಯೇಶನ್‍ನಲ್ಲಿ ಕೆಲಸ ಮಾಡಿದ್ದಲ್ಲದೇ ಹಿರಿಯ ವ್ಯವಸ್ಥಾಪಕರಾಗಿ, ಪ್ರೈಸ್ ವಾಟರ್ ಹೌಸ್ ಕೂಪರ್ಸ್‍ರೊಂದಿಗೆ ಸಂಶೋಧನೆ ಮತ್ತು ವಿಶ್ಲೇಷಕರಾಗಿ ಹಾಗೂ ಬಿಬಿಸಿ ವಲ್ರ್ಡ್ ಸರ್ವೀಸಸ್ ಲಂಡನ್‍ನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಯಾವುದೇ ರೀತಿಯ ವಿವಾದವನ್ನು ಸೃಷ್ಟಿಸದೇ ಇರುವ ರಾಜಕಾರಣಿಗಳಲ್ಲಿ ಒಬ್ಬರು ಎಂದೆನಿಸಿದ್ದು, ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು ನಿರ್ಮಲಾ ಸೀತಾರಾಮನ್ . ಇವರು ಪರಕಲ ಪ್ರಭಾಕರ್ ಅವರನ್ನು ವಿವಾಹವಾಗಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಂವಹನ ಸಲಹಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

58 ರ ಹರೆಯದ ನಿರ್ಮಲಾ ಸೀತಾರಾಮನ್ ಅವರು ಮೊದಲ ಸ್ವತಂತ್ರ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. “ಯಾರಾದರೂ ಒಂದು ಸಣ್ಣ
ಪಟ್ಟಣದಿಂದ ಬಂದು, ಪಕ್ಷದ ಎಲ್ಲರ ನಾಯಕತ್ವದ ಬೆಂಬಲದಿಂದ ಬೆಳೆದು ಮತ್ತು ಒಂದು ಹೊಣೆಗಾರಿಕೆಯನ್ನು ನೀಡಿದರೆ, ಅದು ಕೆಲವೊಂದು ಸಲ ಏನೋ
ಅಗೋಚರವಾದ ಶಕ್ತಿಯ ಆರ್ಶೀವಾದ ಎಂದನಿಸುತ್ತೇ, ಇಲ್ಲದಿದ್ದರೆ ಇದು ಅಸಾಧ್ಯ”, ಎಂದು ನಿರ್ಮಲಾ ಸೀತಾಮನ್ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದರು.

ರಕ್ಷಣಾ ಸಚಿವಾಲಯಕ್ಕೆ ಇವರೂ ಸರಿಯಾದ ವ್ಯಕ್ತಿ ಹೇಗೆ?

ರಕ್ಷಣಾ ಸಚಿವಾಲಯದಲ್ಲಿ ಮೊದಲ ಮಹಿಳಾ ರಕ್ಷಣಾ ಸಚಿವರು ಯಾರು ಎನ್ನುವ ಚರ್ಚೆಗಳು ನಡೆಯುತ್ತಿವೆಯಾದರೂ, ಸ್ಪಷ್ಟವಾಗಿ ಹೇಳುವುದಾದರೆ ಇಂದಿರಾ
ಗಾಂಧಿಯವರೇ ಮೊದಲ ರಕ್ಷಣಾ ಸಚಿವೆಯಾಗಿದ್ದರು. ಆದರೆ 70ರ ದಶಕದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ರಕ್ಷಣಾ ಖಾತೆಯಲ್ಲಿ 1975ರ
ಡಿಸೆಂಬರ್ 1 ರಿಂದ 21 ರವರೆಗೆ ಹಾಗೂ ಜನವರಿ 14, 1980ರಿಂದ ಜನವರಿ 15, 1982 ರವರೆಗೆ ಹೆಚ್ಚುವರಿ ಹೊಣೆಯನ್ನು ಹೊತ್ತಿದ್ದರು. ಆದರೆ ಅನಂತರ
ರಕ್ಷಣೆಯ ಜವಾಬ್ದಾರಿ ಹೊತ್ತ 2ನೇ ಮಹಿಳೆ ಹಾಗೂ ಪೂರ್ಣ ಪ್ರಮಾಣದಲ್ಲಿ ಈ ಖಾತೆಯನ್ನು ನಿರ್ವಹಿಸುತ್ತಿರುವ ಮೊದಲ ಮಹಿಳೆ ಎಂಬ ಕೀರ್ತಿ ನಿರ್ಮಲಾ ಅವರಿಗೆ ದಕ್ಕಿದೆ.

ವಾಣಿಜ್ಯ ಖಾತೆ ಸಹಾಯಕ ಸಚಿವೆಯಾಗಿ ಉನ್ನತ ಮಟ್ಟದಲ್ಲಿ ಮಾಡಿರುವ ಸಾಧನೆ ಪರಿಗಣಿಸಿದ ಮೋದಿ ಅವರು ರವಿವಾರ ನಿರ್ಮಲಾ ಅವರಿಗೆ ಎರಡು
ಪ್ರಮೋಷನ್‍ಗಳನ್ನು ನೀಡಿದರು. ಮೊದಲನೆಯದ್ದು ಸಂಪುಟ ದರ್ಜೆಗೆ ಭಡ್ತಿ, ಮತ್ತೂಂದು ರಕ್ಷಣಾ ಖಾತೆ ಹಾಗೂ ಅದರ ಮೂಲಕ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ (ಸಿಸಿಎಸ್)ಯಲ್ಲಿ ಸ್ಥಾನವನ್ನು ನೀಡಿದ್ದಾರೆ.

ಮಹತ್ವದ ವಾಣಿಜ್ಯ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದ ನಿರ್ಮಲಾ, ಇದೀಗಾ ರಕ್ಷಣಾ ಸಚಿವರಾಗಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ. ಚೀನಾ ಮತ್ತು
ಪಾಕಿಸ್ತಾನದ ಗಡಿಗಳಲ್ಲಿ ದಿನೇದಿನೇ ಸಮಸ್ಯೆ ಉಲ್ಬಣಗೊಳ್ಳುತ್ತ ಸಾಗಿರುವುದರಿಂದ, ಬಿಸಿಬಿಸಿ ಚರ್ಚೆಗೆ ಆಹಾರವಾಗಿರುವ ಈ ಖಾತೆಯ ನಿರ್ವಹಣೆ ಒಂದು ರೀತಿಯಲ್ಲಿ ಸವಾಲು ಎಂದೇ ಬಿಂಬಿತವಾಗಿದೆ. ಒಂದು ರಾಷ್ಟ್ರದ ಮಿಲಿಟರಿಯನ್ನು ಪ್ರಬಲಗೊಳಿಸಲು ಹೊಸರಾಷ್ಟ್ರಗಳೊಂದಿಗೆ ಸ್ನೇಹವನ್ನು ಬೆಳೆಸುವ ಮೂಲಕ ಮತ್ತು ಇದೀಗಾಗಲೇ ಅಸ್ತಿತ್ವದಲ್ಲಿರುವ ರಾಷ್ಟ್ರಗಳೊಂದಿಗೆ ಇರುವ ಉತ್ತಮ ಸಂಬಂಧವನ್ನು ಮುಂದುವರೆಸುವ ಮೂಲಕ, ರಾಷ್ಟ್ರದ ಸೇನಾಬಲವನ್ನು ಪ್ರಬಲವಾಗಿ ಪರಿಗಣಿಸಲು ಸಾಧ್ಯವಾಗಲಿದೆ. ಹಾಗೂ ನಿರ್ಮಲಾ ಸೀತಾರಾಮನ್ ಅವರ ಅಧಿಕಾರದ ಅವಧಿಯಲ್ಲಿ ಇದನ್ನೆಲ್ಲ ಸುಲಭವಾಗಿ ಮಾಡಬಹುದಾಗಿದೆ ಕೂಡ.

ರಿಪಬ್ಲಿಕ್ ಟಿವಿ ವರದಿ ಮಾಡಿರುವ ಪ್ರಕಾರ “ನಿರ್ಮಲಾ ಭಾರತೀಯ ವಾಯುಪಡೆಗೆ ಹೊಸ ಫೈಟರ್ ವಿಮಾನಗಳ ಜೊತೆಗೆ ನೌಕಾಪಡೆಯ ಹೊಸ ಜಲಾಂತರ್ಗಾಮಿ ನೌಕೆಗಳು ಮತ್ತು ಯುದ್ದವಿಮಾನಗಳ ಬಗ್ಗೆ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ” ಎಂದು ಹೇಳಿದೆ.

Source:
Hindustan Times Writes on Nirmala

Economic Times – Defence Article
– ಅಲೋಖಾ

Tags

Related Articles

Close