ಅಂಕಣ

ಭಾರತದ ಇತ್ತೀಚಿಗಿನ ಆರ್ಥಿಕತೆಯ ಇಳಿಕೆಗೆ ಪ್ರಧಾನಿ ಮೋದಿ ಕಾರಣವೇ?!

ಭಾರತದಲ್ಲಿನ ರಾಜಕೀಯ ಬೆಳವಣಿಗೆಳಲ್ಲಿ 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‍ಅನ್ನು ಮಣಿಸಿ ಗದ್ದುಗೆ ಏರಿದ್ದ ಪ್ರಧಾನಿ ನರೇಂದ್ರ ಮೋದಿ ಸರಕಾರ ಬಂದ ನಂತರ ದೇಶ ಒಂದಲ್ಲ ಒಂದು ರೀತಿ ಆರ್ಥಿಕ ವೇಗವನ್ನು ಪಡೆದುಕೊಂಡಿತ್ತು. ಕೆಲವು ವಿಪಕ್ಷ ಸಹಿತ ಸ್ವಪಕ್ಷೀಯರು ಮೋದಿ ಸರಕಾರದ ಆರ್ಥಿಕ ನೀತಿಯನ್ನು ಟೀಕಿಸುತ್ತಾ ಬಂದಿದ್ದರು. ಆದರೆ ಮೋದಿ ಸರಕಾರ ಬಂದ ನಂತರದ ಎಲ್ಲಾ ಆರ್ಥಿಕ ನೀತಿಯ ಸಮೀಕ್ಷೆಗಳು ಮೋದಿ ಸರಕಾರಕ್ಕೆ ಬಹುಪರಾಕ್ ಎಂದಿದೆ.

ಪ್ರತೀಯೊಂದು ಆರ್ಥಿಕತೆಯ ವಿಸ್ತೀರ್ಣಗಳು ಮತ್ತು ಚೇತರಿಸಿಕೊಳ್ಳುವಿಕೆ ತನ್ನ ಚಕ್ರವನ್ನು ಹೊಂದಿದೆ. ಭಾರತೀಯ ಪ್ರಕರಣದಲ್ಲಿ ವಿಶಿಷ್ಟ ಚೇತರಿಕೆ ಚಕ್ರವು 3
ವರ್ಷಗಳು ಅಂದರೆ 2013ರಲ್ಲಿ ಆರ್ಥಿಕ ಬೆಳವಣಿಗೆ ತೀರಾ ಕಡಿಮೆಯಾಗಿತ್ತು. ಮೂರು ವರ್ಷಗಳ ನಂತರ 2016ರ ಮಧ್ಯದಲ್ಲಿ ನಮ್ಮ ಆರ್ಥಿಕ ಬೆಳವಣಿಗೆ
ಉತ್ತುಂಗಕ್ಕೆ ಏರಿತ್ತು. ಆದರೆ ಮತ್ತೆ ಇದೀಗ ಸ್ವಲ್ಪ ಮಟ್ಟಿಗೆ ಕುಸಿತ ಕಂಡುಬಂದಿದೆ. ಈ ಏಷ್ಯಾದ ಅಭಿವೃದ್ಧಿ ಬ್ಯಾಂಕ್‍ನ ಮೌಲ್ಯಮಾಪನವನ್ನು ನೀವು ಇದನ್ನು
ಅಲ್ಪಾವಧಿಯ ಚಕ್ರದ ವಿಷಯವಾಗಿ ಸೂಚಿಸಬಹುದು. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7.4%ರಿಂದ 7% ಗೆ ಕಡಿತಗೊಳಿಸುವ ಊಹೆಯನ್ನು ಮಾಡಬಹುದಾಗಿದೆ.

ಜಿಎಸ್‍ಟಿ ಜಾರಿಯಾದ ನಂತರ ಭಾರತ ಒಂದು ಉದಯೋನ್ಮಕ ರಾಷ್ಟ್ರವಾಗಿ ಬೆಳೆಯಲು ಸಹಾಯ ಮಾಡಿವೆ. ಜಿಎಸ್‍ಟಿಯಿಂದ ಬಂದ ನಂತರ ಖಂಡಿತವಾಗಿಯೂ ನಮ್ಮ ಅರ್ಥವ್ಯವಸ್ಥೆ ಸುಧಾರಿಸುತ್ತದೆ. ದೇಶದ ಅರ್ಥವ್ಯವಸ್ಥೆ ಪ್ರಗತಿಯೆಡೆಗೆ ಸಾಗಬೇಕಾದರೆ ರಾಜಕೀಯ ಸಾಮರಸ್ಯವಿದ್ದರೆ ಮಾತ್ರ ಸಾಧ್ಯ. ನಮ್ಮ ಅರ್ಥವ್ಯವಸ್ಥೆ ಕಳೆದ ವರ್ಷ ನಿರೀಕ್ಷಿತ ಬೆಳವಣಿಗೆ ಕಾಣಲಿಲ್ಲ. ಕೇಂದ್ರ ಸರಕಾರದ ಹಲವು ಸುಧಾರಣಾ ಕ್ರಮಗಳ ನಡುವೆ ಸೃಷ್ಟಿಯಾದ ಪ್ರತಿಷ್ಠೆಯ ರಾಜಕೀಯ ಬಿನ್ನಾಭಿಪ್ರಾಯಗಳು ದೇಶದ ಆರ್ಥಿಕ ಪ್ರಗತಿಗೆ ಅಡ್ಡಿಯಾದವು. ಕಳೆದ 6 ದಶಕಗಳಲ್ಲಿ ರಾಜಕೀಯ ವ್ಯವಸ್ಥೆಯ ಸ್ವಾರ್ಥ ಲಾಭಕ್ಕಾಗಿ ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯಾದ ಅನೇಕ ನಿದರ್ಶನಗಳನ್ನು ನಾವು ಪಟ್ಟಿ ಮಾಡಬಹುದು.

ಎಚ್‍ಎಸ್‍ಬಿ ವಿಶ್ಲೇಷಕರಿಂದ ಬಂದ ವರದಿಯ ಪ್ರಕಾರ ನೋಟು ಅಮಾನ್ಯೀಕರಣದ ಮೊದಲೇ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ನೋಟು ಅಮಾನ್ಯೀಕರಣದಿಂದ ನಮ್ಮ ಅರ್ಥ ವ್ಯವಸ್ಥೆ ಕುಸಿತಗೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಸಮಯಕ್ಕೆ ಮಾತ್ರ ಅದು ಕುಸಿತಗೊಂಡಿರಬಹುದು ಆದರೆ ಅದು ಅರ್ಥವ್ಯವಸ್ಥೆಗೆ ಹೆಚ್ಚಿನ ಪರಿಣಾಮವನ್ನು ಬೀರಿವೆ. ಇದರಿಂದಾಗಿ ನಮ್ಮ ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿವೆ ಎಂದು ಹೇಳಲು ಸಾಧ್ಯವಿಲ್ಲ!! ಎಂದು ಎಚ್‍ಎಸ್‍ಬಿ ಮಾಹಿತಿಯನ್ನು ಬಿಡುಗಡೆ ಮಾಡಿವೆ.

ಮುಂದಿನ ಮೂರು ವರ್ಷಗಳ ನಂತರ ನಮ್ಮ ಭಾರತ ಎರಡನೇ ಭಾರತ ಆಗುವುದರಲ್ಲಿ ಸಂಶಯವಿಲ್ಲ. ಅಂದರೆ ಭಾರತ ಖಂಡಿತಾ ಸುಧಾರಣೆಯಾಗುವುದರಲ್ಲಿ
ಸಂಶಯವಿಲ್ಲ …..ಜಿಎಸ್‍ಟಿ ಮಾತ್ರ ಜಿಡಿಪಿ ಬೆಳವಣಿಗೆಗೆ ಅದರ ಉತ್ಪಾದಕತೆ ಮತ್ತು ದಕ್ಷತೆಯ ಲಾಭ ಹೊರಹೊಮ್ಮುವಲ್ಲಿ 40 ಬಿಪಿಎಸ್‍ಗಳನ್ನು ಸೇರಿಸುತ್ತದೆ ಎಂದು ಹೆಚ್‍ಎಸ್‍ಬಿಸಿ ತಿಳಿಸಿದೆ. ದಿವಾಳಿತನದ ಸಂಹಿತೆ ಮತ್ತು ರಿಯಲ್ ಎಸ್ಟೇಟ್ (ರೆಗ್ಯುಲೇಷನ್ ಆಂಡ್ ಡೆವಲಪ್‍ಮೆಂಟ್) (ಆರ್‍ಇಆರ್‍ಎ) ಸುಧಾರಣೆಗಳ ಪರಿಣಾಮವನ್ನು ಕೂಡಾ ನೀರಸಗೊಳಿಸಲಾಗುವುದು ಎಂದು ಹೇಳಿದೆ. ಭಾರತದಲ್ಲಿ ಅತೀ ಹೆಚ್ಚು ತೆರಿಗೆ ವಂಚನೆ ನಡೆಯುವ ಮತ್ತು ನಗದು ವ್ಯವಹಾರಗಳು ನಡೆಯುವ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಪ್ರಮುಖವಾಗಿದೆ. ಇದು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗಿದೆ. ಇದನ್ನು ಜಿಎಸ್‍ಟಿಗೆ ಒಳ ಪಡಿಸುವಲ್ಲಿ ಮೋದಿ ಸರಕಾರ ಪ್ರಯತ್ನಿಸುತ್ತಿದೆ.

ಇತ್ತೀಚೆಗೆ ಅರುಣ್ ಜೇಟ್ಲಿ ವಿರುದ್ಧ ಕಿಡಿಕಾರಿದ ಯಶವಂತ್ ಸಿನ್ಹಾ 2014ರ ನಂತರ ಬಿಜೆಪಿ ಆಡಳಿತದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ದೂರಿದ್ದಾರೆ. ಆದರೆ ಬಿಜೆಪಿ ಮಾಡದ ತಪ್ಪಿಗೆ ತಲೆತೂಗದೆ 2014ರ ಮುಂಚೆ ಮಾಡಿದ ಎಲ್ಲಾ ಯುಪಿಎ ಸರಕಾರ ಘನಾಂಧಾರಿ ಕೆಲಸಗಳನ್ನು ಬಯಲಿಗೆಳೆಯಿತು. ನೋಟು ಅಮಾನ್ಯ ಮತ್ತು ಜಿಎಸ್‍ಟಿ ಯಿಂದ ಮೋದಿ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಪ್ರಗತಿ ಕುಸಿದಿದೆ. ದೇಶದಲ್ಲಿ ಇಂದು ಅನೇಕ ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಐಶವಂತ್ ಸಿನ್ಹಾ ಅರುಣ್ ಜೇಟ್ಲಿಯನ್ನು ತರಾಟೆಗೆ ತೆಗೆದುಕೊಂಡರು… ಆದರೆ ಇದೀಗ ಅದಕ್ಕೆ ಸಮರ್ಥನೆ ಕೊಡುವಂತೆ ದಾಖಲೆಗಳು ಕೂಡಾ ಬಿಡುಗಡೆಯಾಗಿವೆ. ಕೇವಲ ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಜಾರಿಗೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿಲ್ಲ.!! ಜಿಎಸ್‍ಟಿ ಮತ್ತು ನೋಟು ಅಮಾನ್ಯೀಕರಣ ಮಾಡುವ ಮೊದಲೇ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿತ್ತು ಎಂದು ಸ್ಪಷ್ಟೀಕರಿಸಿದ್ದಾರೆ. ಮೋದಿ ಸರಕಾರ ಜಿಎಸ್‍ಟಿ ಮತ್ತು ನೋಟು ಅಮಾನ್ಯೀಕರಣದಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ವಾದ ಮಾಡಿಲ್ಲ…ಇದರಿಂದಾಗಿ ಸ್ವಲ್ಪ ಮಟ್ಟಿಗೆ ಅನಾನುಕೂಲವಾಗಿರಬಹುದು ಆದರೆ ಮುಂದೆ ಇದರಿಂದ ಅದೆಷ್ಟೋ ಅನುಕೂಲವಾಗಲಿದೆ ಎಂಬುವುದನ್ನು ನಾವು ಅರ್ಥಮಾಡಿಕೊಳ್ಳ ಬೇಕಾಗಿದೆ.

ಮೋದಿ ಸರಕಾರದ ವಿರುದ್ಧ ಕಿಡಿಕಾರಿದ ಯಶವಂತ್ ಸಿನ್ಹಾ ಸರಕಾರ ಚೆನ್ನಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.

1. ದೊಡ್ಡ ಸುದಾರಣೆಗಳು ನಿಧಾನವಾಗಿದ್ದವು.
2. ಡಿಜಿಟಲ್ ಇಂಡಿಯಾ ಸ್ಟಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಇಂತಹ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಇನ್ನು ಯಾವುದೇ ಸುಧಾರಣೆ
ಕಂಡುಬಂದಿಲ್ಲ ಎಂದು ದೂರಿದ್ದಾರೆ.
3.ಜಿಎಸ್‍ಟಿ ಅನುಷ್ಟಾನವನ್ನು ವೇಗವಾಗಿ ಹೊರಹಾಕಬೇಕು.

ಈ ರೀತಿಯ ಧೋರಣೆಗಳಿಂದ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಜಿಎಸ್‍ಟಿಯನ್ನು ಹೊರಹಾಕಿದರೆ ನಮ್ಮನ್ನು ಮೋಸ ಮಾಡಿ ಬದುಕುವ ಜನರಿಗೆ ನಾವೇ ಕುಮ್ಮಕ್ಕು ನೀಡಿದಂತಾಗುತ್ತದೆ. ಡಿಜಿಟಲ್ ಇಂಡಿಯಾ ಸ್ಟಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಇಂತಹ ಯೋಜನೆಗಳನ್ನು ಈಗಾಗಲೇ ಜಾರಿ ಗೊಳಿಸಿದ್ದು ಸುಧಾರಣೆ ಹಂತದಲ್ಲಿದೆ ಎಂಬುವುದನ್ನು ನಾವು ಅರ್ಥೈಸಿಕೊಳ್ಳ ಬೇೀಕಾಗಿದೆ. ಯಾವುದೇ ಯೋಜನೆ ಮಾಡಿದ ತಕ್ಷಣ ಕಾರ್ಯರೂಪಕ್ಕೆ ಬರುವುದು ಅಸಾಧ್ಯ ಎಂಬುವುದನ್ನು ನಾವು ಅರಿಯಬೇಕು.. ಇಂತಹ ಯೋಜನೆಗಳನ್ನು ಸುಖಾ ಸುಮ್ಮನೆ ಮೋದಿ ಸರಕಾರ ಮಾಡುತ್ತಿಲ್ಲ… ದೇಶದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ ಅಷ್ಟೆ!!

ಭಾರತದ ಆರ್ಥಿಕ ಬೆಳವಣಿಗೆ ನಿಧಾನವಾಗುತ್ತಿದೆ ಆದರೆ ಸರಕಾರಕ್ಕೆ ಅದನ್ನು ಯಾವ ರೀತಿ ಹಿಂದಕ್ಕೆ ತರಲು ಸಾಧ್ಯವಾಗುತ್ತದೆ ಎಂಬುದನ್ನು ಮೋದಿ ಸರಕಾರ
ಚಿಂತಿಸುತ್ತಲೇ ಇದೆ. ರಾಹುಲ್ ದ್ರಾವಿಡ್ ಮತ್ತು ಸುನೀಲ್ ಗಾವಸ್ಕರ್ ಆಡಿದಂತೆ ಸರಕಾರ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಜಾಗರೂಕತೆಯಿಂದ ದೇಶದ ಅಭಿವೃದ್ಧಿ ಪಡಿಸುವಲ್ಲಿ ಹಣಕಾಸು ಸಚಿವ ಜೇಟ್ಲಿ ಕೂಡಾ ಶ್ರಮಿಸುತ್ತಾ ಬಂದಿದ್ದಾರೆ. ಮುಂದಿನ ಚುನಾವಣೆಗೆ ಕೇವಲ 18 ತಿಂಗಳುಗಳು ಮಾತ್ರ ಬಾಕಿ ಇದೆ. ಜನರು ಯಾರನ್ನು ಆಯ್ಕೆ ಮಾಡಿದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಯೋಚಿಸಿ ಓಟು ಹಾಕುವುದು ಒಳಿತು.

Source :https://www.quora.com/What-are-the-reasons-for-Indias-recent-low-economic-growth-figures/answer/Balaji-Viswanathan-2?share=ce54380c&srid=LgDC

-ಶೃಜನ್ಯಾ

Tags

Related Articles

Close