ಪ್ರಚಲಿತ

ಭಾರತದ ಜಿಡಿಪಿಯಲ್ಲಿ ಮತ್ತೆ ಏರಿಕೆ!! ಅಚ್ಛೇ ದಿನ್ ಮಂತ್ರವನ್ನು ಸಾಬೀತು ಪಡಿಸುತ್ತಿರುವ ಮೋದಿ ಸರಕಾರ!

ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ. 6.3ಕ್ಕೆ ಏರಿಕೆಯಾಗಿದ್ದು, ಭಾರತದ ಆರ್ಥಿಕತೆ ಪ್ರಗತಿಯ ಪಥದಲ್ಲಿದೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ. ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಬಡ್ತಿ, ಮೂಡಿಸ್ ಶ್ರೇಯಾಂಕ ಮೇಲ್ದರ್ಜೆಗೇರಿಸಿದ ಬಳಿಕ ಕೇಂದ್ರ ಸರ್ಕಾರದ ಆರ್ಥಿಕ ನೀತಿಗೆ ಮತ್ತೊಂದು ಮುನ್ನಡೆ ಲಭಿಸಿದಂತಾಗಿದೆ. ಕಳೆದ ಮೂರು ವರ್ಷಗಳಿಂದ ಕುಸಿತ ದಾಖಲಿಸುತ್ತಿದ್ದ ಜಿಡಿಪಿ ಈಗ ಏರಿಕೆಯ ಹಾದಿಯಲ್ಲಿದೆ.

500, 1000 ನೋಟು ನಿಷೇಧ ಬಳಿಕ ತುಸು ಆರ್ಥಿಕತೆ ತುಸು ಹಿನ್ನಡೆ ಅನುಭವಿಸಿದ ಪರಿಣಾಮ ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ.5.7ಕ್ಕೆ ಇಳಿಕೆ ಯಾಗಿತ್ತು. ಕೇಂದ್ರದ ಆರ್ಥಿಕ ನೀತಿ ವಿರುದ್ಧ ಪ್ರತಿಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದ್ದವು. ನೋಟು ನಿಷೇಧ ಪರಿಣಾಮ ತಾತ್ಕಾಲಿಕ ವಾಗಿದ್ದು, ದೀರ್ಘಾವಧಿಯಲ್ಲಿ ಜಿಡಿಪಿ ಅಭಿವೃದ್ಧಿ ಹೊಂದಲಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.

ನೋಟ್ ಬ್ಯಾನ್ ಮತ್ತು ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದರಿಂದ ದೇಶದ ಆರ್ಥಿಕ ಬೆಳವಣಿಗೆ ದರ(ಜಿಡಿಪಿ) ಕುಸಿದಿದೆ ಎನ್ನುವ ಮಂದಿ ಉತ್ತರ ಎನ್ನುವಂತೆ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಏರಿಕೆಯಾಗಿದೆ.

ಜುಲೈ, ಅಗಸ್ಟ್, ಸೆಪ್ಟೆಂಬರ್ ಅವಧಿಯ ಜಿಡಿಪಿ ದರ 6.3% ಏರಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ. ಏಪ್ರಿಲ್ ನಿಂದ ಜೂನ್ ವರೆಗೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ 5.7% ದಾಖಲಿಸುವ ಮೂಲಕ ಕುಸಿದಿತ್ತು. ನೋಟು ರದ್ದತಿಯ ಬಳಿಕ ಜಿಡಿಪಿ ಪ್ರಗತಿ ಶೇಕಡಾ 1.3 ರಷ್ಟು ಇಳಿಕೆ ಕಂಡಿತ್ತು.

ಜಿಡಿಪಿ ದರ ಏರಿಕೆಯಾಗಿರುವ ವಿಚಾರ ಪ್ರಕಟವಾದ ಬಳಿಕ ಬಿಜೆಪಿ ನಾಯಕರು ಟ್ವೀಟ್ ಮಾಡಿ ಸರ್ಕಾರದ ಸಾಧನೆಯನ್ನು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಟೀಕಿಸಿದ್ದ ಮಂದಿ ಎಲ್ಲಿದ್ದೀರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ..

ಜಿಡಿಪಿ ದರ ಇಳಿಕೆ ತಾತ್ಕಾಲಿಕ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎಂದು ಈ ಹಿಂದೆ ವಿಶ್ವಬ್ಯಾಂಕ್ ಹೇಳಿತ್ತು. ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಜಿಡಿಪಿ ಇಳಿಕೆಯಾಗಲಿದೆ ಎಂದು ಹೇಳಿತ್ತು. 2015 -16ರಲ್ಲಿ ಶೇ. 7.6 ರಷ್ಟಿದ್ದ ಜಿಡಿಪಿ ದರ 2016- 17ರಲ್ಲಿ ಶೇ 6.6 ರಷ್ಟು ಕಡಿಮೆ ಮಟ್ಟದಲ್ಲಿರಲಿದೆ ಎಂದು ಅದು ತಿಳಿಸಿತ್ತು.

ಮಮತಾ ಟೀಕೆ:


ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕೆ ಮಾಡಿ ಈ ಹಿಂದೆ ಈ ಅವಧಿಯಲ್ಲಿ 7.5% ದಾಖಲಾಗಿತ್ತು. ಆದರೆ ಈಗ 6.3% ದಾಖಲಾಗಿದೆ. ಈ ಸರ್ಕಾರ ಕೇವಲ ಭಾಷಣ ಮಾತ್ರ ಮಾಡುತ್ತಿದೆ ಹೊರತು ಯಾವುದೇ ಕೆಲಸ ಮಾಡುವುದಿಲ್ಲ .ಉದ್ಯೋಗದಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.

 

ಯಾವ ಅವಧಿಯಲ್ಲಿ ಎಷ್ಟಿತ್ತು?
ಮಾರ್ಚ್ 2016 ? 9.2%
ಜೂನ್ 2016 ? 7.9%
ಸೆಪ್ಟೆಂಬರ್ 2016 ? 7.5%
ಡಿಸೆಂಬರ್ 2016 ? 7%
ಮಾರ್ಚ್ 2017 ? 6.1%
ಜೂನ್ 2017 ? 5.7%
ಸೆಪ್ಟೆಂಬರ್ 2017 ? 6.3%

ನಿರೀಕ್ಷೆ ಎಷ್ಟಿತ್ತು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2017-18ನೇ ಸಾಲಿಗೆ ಭಾರತ ಜಿಡಿಪಿ ಶೇ.6.7 ದಾಖಲಾಗಲಿದೆ ಎಂದು ಅಂದಾಜಿಸಿತ್ತು. ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿಯ ಅಡ್ಡಪರಿಣಾಮಗಳು ಜಿಡಿಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಆದರೂ ಭಾರತದ ಪ್ರಾದೇಶಿಕ ಮಾರುಕಟ್ಟೆ ಅವಲಂಬನೆ, ಕೃಷಿ ಬಿತ್ತನೆ, ಸಹಕಾರಿ ಸಂಸ್ಥೆಗಳ ವಹಿವಾಟು, ಗ್ರಾಮೀಣ ಉತ್ಪನ್ನ ಸಂಸ್ಥೆಗಳ ವ್ಯವಹಾರ ಜಿಡಿಪಿಗೆ ಪೂರಕವಾಗಬಹುದು. ಹಾಗಾಗಿ ಶೇ.7 ಜಿಡಿಪಿ ಏರಿಕೆ ಸಂಭಾವ್ಯತೆಯಿದೆ ಎಂದು ವಿಶ್ಲೇಷಿಸಿದ್ದರು. ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕ್ (ಎಡಿಬಿ) ಮತ್ತು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಶೇಕಡಾ.6.7 ಜಿಡಿಪಿ ನಿರೀಕ್ಷಿಸಿದ್ದವು.

ನಿಗದಿತ ಬಂಡವಾಳ ರಚನೆ ಶೇ.4.7ರಷ್ಟಿದೆ. ಹೂಡಿಕೆ ಚೇತರಿಕೆ ಕಾಣುತ್ತಿದೆ. ಸರ್ಕಾರ ಆರ್ಥಿಕ ಪುನಶ್ಚೇತನಕ್ಕಾಗಿ ಪಟ್ಟ ಶ್ರಮ ಗೋಚರಿಸುತ್ತಿದೆ.

ಯಾವ ಕ್ಷೇತ್ರಗಳಲ್ಲಿ ಚೇತರಿಕೆ?

ಉತ್ಪಾದನೆ, ಇಂಧನ, ಅನಿಲ, ನೀರು ಪೂರೈಕೆ, ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ದಾಖಲಾದ ಶೇ.6 ಬೆಳವಣಿಗೆಯಿಂದಾಗಿ ಜಿಡಿಪಿ ಚೇತರಿಕೆ ಕಂಡಿದೆ ಎಂದು ಕೇಂದ್ರೀಯ ಸಾಂಖ್ಯಿಕ ಸಚಿವಾಲಯ ತಿಳಿಸಿದೆ. ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯದಲ್ಲಿ ಶೇ.1.7 ಬೆಳವಣಿಗೆ ಕಂಡುಬಂದಿದೆ.

Tags

Related Articles

Close