ಅಂಕಣ

ಭಾರತದ ಪರಮಾಣು ಒಪ್ಪಂದದ ನಂತರ ರಷ್ಯಾದ ಜೊತೆಗಿನ ಸ್ನೇಹವೊಂದು ದುರ್ಬಲವಾಗುತ್ತಿದೆಯೇ?!!!

ಭಾರತ-ರಷ್ಯಾ ಸಂಬಂಧಗಳು ದುರ್ಬಲಗೊಳ್ಳುತ್ತಿದೆ!! ರಷ್ಯಾ, ಚೀನಾ ಮತ್ತು ಪಾಕ್‍ನೊಂದಿಗೆ ಸಂಬಂಧವನ್ನು ಹೆಚ್ಚುತ್ತಿದೆ ಎಂದು ಇತರ ದೇಶಗಳು ತಪ್ಪಾಗಿ
ತಿಳಿದುಕೊಂಡಿದ್ದಾರೆ.!! ಅದನ್ನು ಸುಳ್ಳು ಮಾಡುವುದ್ದಕ್ಕಾಗಿಯೇ ಭಾರತ ಮತ್ತು ರಷ್ಯಾ ಹೊಸ ಒಪ್ಪಂದದ ಯೋಜನೆಯನ್ನು ಮಾಡಲು ತಯಾರಾಗಿದ್ದಾರೆ…!! ಈಗ ಭಾರತ ಮತ್ತು ರಷ್ಯಾ ಸಂಬಂಧಗಳು ಬೆಳೆಯುತ್ತಿವೆ ಎಂಬೂದಕ್ಕೆ ಅಕ್ಟೋಬರ್‍ನಲ್ಲಿ ನಡೆದ ಎರಡೂ ರಾಷ್ಟ್ರಗಳ ಸಶಸ್ತ್ರ ಪಡೆಗಳ ತ್ರಿಕೋನ ಸೇವೆಯೇ ಒಂದು ಉದಾಹರಣೆಯಾಗಿದೆ. ಸೇನಾ ಕ್ಷೇತ್ರದಲ್ಲಿ ರಷ್ಯಾವು ಪಾಕ್‍ನೊಂದಿಗೆ ಪ್ರಬಲ ಸಂಬಂಧ ಹೊಂದಿಲ್ಲ ಎನ್ನುವುದು ಕೂಡಾ ರಷ್ಯಾದ ಅಧ್ಯಕ್ಷ ಸ್ಪಷ್ಟಪಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಿರ್ಮಾಣವಾಗುವ ಈ ಪರಮಾಣು ವಿದ್ಯುತ್ ಸ್ಥಾವರದಿಂದ ಭಾರತ ಮತ್ತು ರಷ್ಯಾದ ಸಂಬಂಧ ಬೆಳೆಯುವ ದೊಡ್ಡ ಸೂಚನೆಯಿದೆ.!! ಇಂಡೋ ರಷ್ಯಾ ಮೂರನೇ ರಾಷ್ಟ್ರಗಳಲ್ಲಿ ಪರಮಾಣು ಇಂಧನ ಯೋಜನೆಗಳನ್ನು ಕೈಗೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಭಾರತದ ಮೊದಲ ಪರಮಾಣು ಶಕ್ತಿ
ಉದ್ಯಮವಾಗಿದ್ದು, ವಿದೇಶಿ ಪ್ರಯತ್ನಗಳು ಭಾರತದಲ್ಲಿ ಹೊಸ ಪ್ರಮಾಣದ ಧೈರ್ಯವನ್ನು ತುಂಬುತ್ತದೆ..

ನಮ್ಮ ರಷ್ಯನ್ ಮತ್ತು ಬಾಂಗ್ಲಾದೇಶದ ಪಾಲುದಾರರೊಂದಿಗೆ ನಾವು ಬಾಂಗ್ಲಾದೇಶದಲ್ಲಿ ರೂಪ್ಪುರ್ ಪರಮಾಣು ಸ್ಥಾವರವನ್ನು ಸ್ಥಾಪಿಸಲು ಸಹಕರಿಸುತ್ತೇವೆ ಎಂದು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರು ಶೇಖರ್ ಬಸು ಹೇಳಿದ್ದಾರೆ. ಭಾರತದ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಪೋಖ್ರಾನ್‍ನಲ್ಲಿ ಮೊದಲ ಬಾರಿಗೆ ಪರಮಾಣು ಪರೀಕ್ಷೆ (ಶಾಂತಿ ಪರ ಉದ್ಧೇಶಗಳಿಗಾಗಿ ಬಳಸುವ ಪರಮಾಣು ಪರೀಕ್ಷೆ) ನಡೆಸಿತ್ತು.

ಭಾರತ ಮತ್ತು ರಷ್ಯಾ 2014ರ ಡಿಸೆಂಬರ್‍ನಲ್ಲಿ ಪರಮಾಣು ಶಕ್ತಿಯ ಶಾಂತಿಯುತ ಬಳಕೆಗಳಲ್ಲಿ ಸಹಕಾರವನ್ನು ಬಲಪಡಿಸುವ ಕಾರ್ಯತಂತ್ರದ ದೃಷ್ಟಿಕೋನಕ್ಕೆ ಸಹಿ ಹಾಕಿದೆ. “ಭಾರತೀಯ ಉದ್ಯಮದಿಂದ ಸಾಮಗ್ರಿಗಳು, ಉಪಕರಣಗಳು ಮತ್ತು ಸೇವೆಗಳನ್ನು ಸೋರ್ಸಿಂಗ್ ಮಾಡಲು ಎರಡೂ ಕಡೆಗಳು ಅವಕಾಶವನ್ನು
ಅನ್ವಯಿಸುತ್ತದೆ. ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ವಿನ್ಯಾಸಗೊಳಿಸಿದ ಮೂರನೇ ರಾಷ್ಟ್ರವಾಗಿದೆ.

ಭಾರತವು ಎಪ್ರಿಲ್‍ನಲ್ಲಿ ಬಾಂಗ್ಲಾದೇಶದೊಂದಿಗೆ ಒಂದು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅಡಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡುವ ಮತ್ತು ತಯಾರು ಮಾಡುವುದಕ್ಕೆ ಇಲ್ಲಿ ಸಹಿ ಹಾಕಲಾಗಿದೆ.

ಢಾಕಾ ಬಳಿ ರೂಪ್ಪುರ್ ಯೋಜನೆಯು ಬಾಂಗ್ಲಾ ದೇಶದ ಮೊದಲ ಪರಮಾಣು ಶಕ್ತಿ ಯೋಜನೆಯಾಗಿದೆ. ಪರಮಾಣು ವಿದಳನದಿಂದ ಶಕ್ತಿಯನ್ನು ನಿಯಂತ್ರಿಸಲು ಭಾರತ ಮತ್ತು ಪಾಕಿಸ್ತಾನದ ನಂತರ ಬಾಂಗ್ಲಾ ದೇಶವು ಮೂರನೇ ದಕ್ಷಿಣ ಏಷ್ಯಾದ ದೇಶವಾಗಿದೆ.

ಮೋದಿ ಸರಕಾರವು ಅಧಿಕಾರ ಬಂದ ಮೇಲೆ 10 ಹೊಸ ಅಣುಶಕ್ತಿ ನಿರ್ಮಾಣವನ್ನು ಅನುಮೋದಿಸಿರುವುದರಿಂದ ಭಾರತದ ಪರಮಾಣು ವಲಯವು ಅಭೂತಪೂರ್ವ ಬೆಳವಣಿಗೆಯನ್ನು ನೋಡಲಿದೆ.

ಈ ರಿಯಾಕ್ಟರ್‍ಗಳೊಂದಿಗೆ ನಾವು ಈಗ ನಿರ್ಮಾಣ ಹಂತದಲ್ಲಿ 21 ರಿಯಾಕ್ಟರ್ ಮತ್ತು 22 ರಿಯಾಕ್ಟರ್ ಕಾರ್ಯಾಚರಣೆಯನ್ನು ಹೊಂದಿದ್ದೇವೆ. ಇದು ಕೊನೆಯಲ್ಲಿ 22,000 ಮೆ.ವ್ಯಾ ಸಾಮಧ್ರ್ಯದ ಸಾಮಧ್ರ್ಯವನ್ನು ಮುಂದಿನ ದಶಕದಲ್ಲಿ ಹೆಚ್ಚಿಸುತ್ತದೆ ಎಂದು ಹೇಳಿದರು. ಇಂಡೋ-ರಷ್ಯಾ ಯೋಜನೆಯು ಬಾಂಗ್ಲಾದೇಶದಂತಹ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಭೂ ರಾಜಕೀಯದ ಒಂದು ಹೆಜ್ಜೆಯಾಗಿದೆ. ವಿಶ್ವದ ವೇದಿಕೆಯ ಮೇಲೆ ಭಾರತದ ನಿಲುವು ಬಲಪಡಿಸುವಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಲವು ರೀತಿಯಲ್ಲಿ ಶ್ರಮಿಸುತ್ತಾ ಬಂದಿದ್ದಾರೆ.

-ಶೃಜನ್ಯಾ

Tags

Related Articles

Close