ಅಂಕಣದೇಶಪ್ರಚಲಿತ

ಭಾರತದ ಪ್ರಧಾನ ಮಂತ್ರಿಯೋರ್ವರು ಮಾಡಿದ ಅತೀ ದೊಡ್ಡ ಪ್ರಮಾದ ಯಾವುದು ಗೊತ್ತೇ?

ಭಾರತದ ಪ್ರಧಾನಮಂತ್ರಿಯೋರ್ವರು ಮಾಡಿದ ಅತೀ ದೊಡ್ಡ ಪ್ರಮಾದ ಎಂಬ ವಿಚಾರ ಬಂದಾಗ ಮೊದಲು ನೆನಪಾಗುವುದೇ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ. ಆದರೆ ನಮ್ಮ ಊಹೆ ತಪ್ಪು. ಪ್ರಮಾದದ ವಿಚಾರ ಬಂದಾಗ, ಅತ್ಯಂತ ದೊಡ್ಡ ಪ್ರಮಾದವೇ ಮಾಡಿ ತೆರಳಿದ್ದೇ ಲಾಲ್ ಬಹದ್ದೂರ್ ಶಾಸ್ತ್ರಿ.

ಅವರು ಜಾಸ್ತಿ ಕಾಲ ಬದುಕದಿದ್ದುದೇ ಅವರು ಮಾಡಿದ ಪ್ರಮಾದ!!!!!

ಹೌದು. ಒಂದು ವೇಳೆ ಆ ವ್ಯಕ್ತಿ 10 ವರ್ಷಗಳ ಕಾಲ ಹೆಚ್ಚು ಬದುಕಿದ್ದಿದ್ದರೆ, ಭಾರತದ ಸ್ಥಿತಿಯೇ ಬದಲಾಗುತ್ತಿತ್ತು. ಬಹುಶಃ ವಿಶ್ವಗುರು ಭಾರತ 20 ನೆಯ ಶತಮಾನದ ಅಂತ್ಯದಲ್ಲಿಯೇ ನಿರ್ಮಾಣವಾಗುತ್ತಿತ್ತು.

* 21 ತಿಂಗಳುಗಳ ಕಾಲ ಈ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿದ ಇಂದಿರಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷ ಇವತ್ತು ಭಾರತದ ಸಾರ್ವಕಾಲಿಕ ಶ್ರೇಷ್ಠಪ್ರಧಾನಿಯೆಂದು ಗುರುತಿಸುತ್ತದೆ. ಒಂದು ವೇಳೆ ತಾಷ್ಕೆಂಟ್ ಭೂಮಿಯಲ್ಲಿ ಶಾಸ್ತ್ರೀಜಿಯವರು ಪ್ರಾಣವನ್ನು ಕಳೆದುಕೊಳ್ಳದೇ ಇರುತ್ತಿದ್ದರೆ ಉಕ್ಕಿನ ಮಹಿಳೆಯೆಂದು ಕರೆಯಲ್ಪಡುವ ಇಂದಿರಾ ಗಾಂಧಿಯವರು ಪ್ರಧಾನಿಯೇ ಆಗುತ್ತಿರಲಿಲ್ಲ.
* ಭೋಪಾಲ್ ಅನಿಲ ದುರಂತದಲ್ಲಿ 21000 ಅಮಾಯಕ ಜೀವಿಗಳು ಪ್ರಾಣವನ್ನು ಕಳೆದುಕೊಳ್ಳುತ್ತಿರಲಿಲ್ಲ. ಬೊಫೋರ್ ಹೆಸರನಲ್ಲಿ ಅತೀ ದೊಡ್ಡ ಭ್ರಷ್ಟಾಚಾರ ಸಂಭವಿಸುತ್ತಿರಲಿಲ್ಲ. ಆಶ್ಚರ್ಯವಾಗುತ್ತಿದೆಯಾ?? ಹೌದು. 1966 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀಜಿವರು ಸಾಯದೆ ಇರುತ್ತಿದ್ದರೆ, ರಾಜೀವ್ ಗಾಂಧಿಯವರಿಗೆ ಪ್ರಧಾನಿ ಆಗುವ ಅವಕಾಶವೇ ಇರುತ್ತಿರಲಲ್ಲ. ಅವರು ಪೈಲಟ್ ಆಗಿ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ತಮ್ಮ ಸಂಬಳಕ್ಕಾಗಿ ಅಲೆದಾಡುವ ವ್ಯಕ್ತಿಯಾಗುತ್ತಿದ್ದರು. ಅಂದರೆ ಸಾಮಾನ್ಯ ನೌಕರರಾಗುತ್ತಿದ್ದರು.
*ಓರ್ವ ಭಾರತೀಯನ ಪತ್ನಿಯಾಗುವ ಅವಕಾಶವೇ ಸೋನಿಯಾ ಗಾಂಧಿಯವರಿಗೆ ಬರುತ್ತಿರಲಿಲ್ಲ. ಅವರು ಇಟಲಿಯಲ್ಲಿಯೇ ವಾಸಿಸುತ್ತಿದ್ದರು. ನಮ್ಮ ದೌರ್ಭಾಗ್ಯ. ಅವರು ರಾಜೀವ್ ಗಾಂಧಿಯವರನ್ನು ವರಿಸಿದರು. ಹತ್ತು ವರ್ಷಗಳ ಕಾಲ ಭಾರತವನ್ನು ಆಳಿದರು. ಅವರ ಆಡಳಿತದಲ್ಲಿ ಅಪ್ಪಟ ರಾಷ್ಟ್ರಭಕ್ತನಾಗಿದ್ದ ಕೊಲೊನೆಲ್ ಪುರೋಹಿತ್ ಅವರನ್ನು ಬಂಧಿಸಲಾಗಿತ್ತು, ಅಷ್ಟೇ ಅಲ್ಲದೆ ಸಾಧ್ವಿ ಪ್ರಗ್ಯಾ ಅವರನ್ನೂ ಅನೇಕ ವರ್ಷಗಳ ಕಾಲ ಕಾರಾಗೃಹದಲ್ಲಿ ಹಿಂಸಿಸಲಾಯಿತು. ಈ ಎಲ್ಲಾ ಘಟನೆಗಳು ಸಂಭವಿಸಿದ್ದು ಒಂದೇ ಕಾರಣಕ್ಕೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಅಚಾನಕ್ ಸಾವಿನಿಂದ.
* ಇವತ್ತು, 47 ಪ್ರಾಯದ ಓರ್ವ ವ್ಯಕ್ತಿ ತಾನೇ ಯುವಕರ ಕಣ್ಮಣಿ ಎಂದೂ, ಭಾರತದ ಭವಿಷ್ಯದ ಪ್ರಧಾನಿ ತಾನೇ ಎಂದು ಹೇಳಿ ಭಾರತೀಯರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಅವರ ಹೆಸರು ನಮಗೆಲ್ಲಾ ಪರಿಚಿತ. ಮಿಸ್ಟರ್ ರಾಹುಲ್ ಗಾಂಧಿ.! ರಾಹುಲ್ ಗಾಂಧಿಯವರು ಎಂತಹ ನಾಯಕತ್ವ ಗುಣವನ್ನು ಹೊಂದಿದ್ದಾರೆಂದರೆ ಇದುವರೆಗೆ ಅವರ ನೇತೃತ್ವದಲ್ಲಿ ಒಂದೇ ಒಂದು ವಿಧಾನಸಭಾ ಚುನಾವಣೆಯನ್ನೂ ಗೆಲ್ಲಲಾಗಲಿಲ್ಲ. ಅಪ್ರತಿಮ ನಾಯಕರೆಂದರೆ ಇವರೇ ಅಲ್ಲವೇ?? ಒಂದು ವೇಳೆ ಶಾಸ್ತ್ರೀಜಿಯವರು ಕೆಲ ವರ್ಷಗಳ ಕಾಲ ಹೆಚ್ಚು ಬದುಕುತ್ತಿದ್ದರೆ ಇವತ್ತು ರಾಹುಲ್ ಗಾಂಧಿ ನಮ್ಮಂತೆ- ನಿಮ್ಮಂತೆ ಒಂದು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಮಾನ್ಯ ಪ್ರಜೆಯಂತೆ.!! ಅವರು ಒಂದು ಸಂಸ್ಥೆಯ ವ್ಯವಸ್ಥಾಪಕರಾದಾರು ಎಂಬ ಕಲ್ಪನೆಯೂ ಬಾರದಿರಲಿ. ಯಾಕೆಂದರೆ ಆ ಜವಾಬ್ದಾರಿಯನ್ನು ನಿರ್ವಹಿಸಲೂ ಅವರು ಅಶಕ್ತರು.

ಮೋದಿಯವರ ನೇತೃತ್ವದಲ್ಲಿ ಇವತ್ತು ಭಾರತ ಉತ್ತುಂಗ ಶಿಖರಕ್ಕೆ ಏರುತ್ತಿದೆ. ಯಾವ ರೀತಿಯಲ್ಲಿ ಭಾರತದ ಅಭಿವೃದ್ದಿ ಈಗ ಸಾಗುತ್ತಿದೆಯೋ, ಶಾಸ್ತ್ರೀಜಿಯವರು ಬದುಕುತ್ತಿದ್ದರೆ ಅದೇ ಅಭಿವೃದ್ಧಿ ಮುಂಚೆಯೇ ಆಗುತ್ತಿತ್ತು. ಹೌದು. ಭಾರತೀಯ ಸೇನೆ ಪಾಕಿಸ್ತಾನದ ಭೂಪ್ರದೇಶದ ಒಳನುಗ್ಗಿ ಲಾಹೋರ್ ನಲ್ಲಿ ತ್ರಿವರ್ಣ ಧ್ವಜ ಏರಿಸಿದ್ದು ಶಾಸ್ತ್ರೀಜಿಯವರ ಆಡಳಿತದಲ್ಲಿಯೇ. ಶಾಸ್ತ್ರೀಜಿಯವರ ಆಡಳಿತಲ್ಲಿಯೇ ಭಾರತ ಅಣುಶಕ್ತಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದ್ದು. ಕೇವಲ 18 ತಿಂಗಳುಗಳ ಅವಧಿಯಲ್ಲಿ ಭಾರತ ಅಭಿವೃದ್ಧಿಯ ಪಥದತ್ತ ಸಾಗಿತ್ತು. ನೆಹರೂ ರವರ ಹಲವಾರು ವರ್ಷಗಳ ಆಡಳಿತದಲ್ಲಿ ಯಾವುದು ಸಾಧ್ಯವಾಗಿಲ್ಲವೋ ಅದು ಶಾಸ್ತ್ರೀಜಿಯವರ 18 ತಿಂಗಳುಗಳಲ್ಲಿ ಸಾಧ್ಯವಾಗಿವೆ.

ರಾಜಕಾರಣವನ್ನು ತೊರೆಯಲು ನಿರ್ಧರಿಸಿದ್ದರು ಇಂದಿರಾ ಗಾಂಧಿ!

1965 ನೇ ವರ್ಷದಲ್ಲಿ ತನ್ನ ಸ್ನೇಹಿತನಿಗೆ ಬರೆದ ಪತ್ರವೊಂದರಲ್ಲಿ ತಾನು ರಾಜಕೀಯವನ್ನು ತೊರೆಯಲು ಬಯಸಿದ್ದೇನೆ ಎಂಬುದನ್ನು ಇಂದಿರಾ ಗಾಂಧಿಯವರು ಉಲ್ಲೇಖಿಸಿದ್ದರು. ತಮ್ಮ ಮಕ್ಕಳು ಆಗ ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರೊಂದಿಗೆ ಕೂಡಿಕೊಳ್ಳಲು ತಯಾರಿಯನ್ನು ನಡೆಸಿದ್ದರು ಇಂದಿರಾ ಗಾಂಧಿ.

ಆದರೆ ಎಲ್ಲವೂ 1966 ರಲ್ಲಿ ಬದಲಾಯಿತು. ಓರ್ವ ಪ್ರಾಮಾಣಿಕ, ನಿಷ್ಠಾವಂತ ನಾಯಕನನ್ನು ಭಾರತ ಕಳೆದುಕೊಂಡಿತು. ನಂತರ ಕುಟುಂಬ ರಾಜಕಾರಣ ಅಸ್ತಿತ್ವಕ್ಕೆ ಬಂತು, ಭಾರತ ಭ್ರಷ್ಟಾಚಾರದ ಗೂಡಾಯಿತು.

ಕಾಶ್ಮೀರದ ಸಮಸ್ಯೆಗೆ ಸಿಗುತ್ತಿತ್ತು ಶಾಶ್ವತ ಪರಿಹಾರ!

ನಿಜ. ಇವತ್ತು ಕಾಶ್ಮೀರದ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೇ ನೆಹರೂ ಹಾಗೂ ಅಬ್ದುಲ್ಲ ಅವರ ಕುಟುಂಬ. ಆದರೆ ಶಾಸ್ತ್ರೀಜಿಯವರು ಈ ಸಮಸ್ಯೆಗೆ ಶಾಶ್ವತ ಪರಿಹಾರದ ಕುರಿತಾಗಿ ಸದಾ ಚಿಂತಿಸುತ್ತಿದ್ದರು. ಭಾರತದ ಅಂತಃಸತ್ವದ ವಿಚಾರ ಬಂದಾಗ, ಅದರ ಭದ್ರತೆಯ ವಿಚಾರವಾಗಿ ಯಾವುದೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದವರಲ್ಲ ಶಾಸ್ತ್ರೀಜಿ. ಆದರೆ ನಮ್ಮ ದುರಾದೃಷ್ಟ, ಕೆಲವೇ ಕ್ಷಣಗಳಲ್ಲಿ ಎಲ್ಲವೂ ಬದಲಾಗಿ ಹೋಯಿತು. ಅಭಿವೃದ್ಧಿಯ ವಿಚಾರದಲ್ಲಿ ಭಾರತ ಶತಮಾನದಷ್ಟೂ ಹಿಂದಕ್ಕೆ ಸರಿದುಹೋಯಿತು.

50 ವರ್ಷಗಳ ನಂತರ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು , ಭಾರತವನ್ನು ರಕ್ಷಿಸಲು ಮೋದಿಜಿಯವರು ಬಂದರು. ಆದರೆ, ಲಾಲ್ ಬಹದ್ದೂರ್ ಶಾಸ್ತ್ರೀ ಮಾಡಿದ ಪ್ರಮಾದವನ್ನಂತೂ ಭಾರತ ಯಾವತ್ತೂ ಮರೆಯದು.

– ವಸಿಷ್ಠ

Tags

Related Articles

Close