ಪಾಕಿಸ್ತಾನದ ಅಧಿಕಾರಿಗಳಿಗೆ ಅದೇನೂ ಗರ ಬಡಿದಿದೋ ಗೊತಿಲ್ಲ!! ಇತ್ತೀಚೆಗಷ್ಟೇ ಭಾರತ ದಕ್ಷಿಣ ಏಷ್ಯಾದ ಭಯೋತ್ಪಾದನೆಯ ತಾಯಿಯಾಗಿದೆ ಎಂದು ಹೇಳಿದ್ದಲ್ಲದೇ ಗಾಜಾಪಟ್ಟಿ ಘರ್ಷಣೆಯ ಸಂದರ್ಭದಲ್ಲಿ ಮಹಿಳೆಯೊಬ್ಬಳ ಫೋಟೋವನ್ನು ತೋರಿಸಿ ಭಾರತವನ್ನು ಟೀಕೆಗೆ ಗುರಿ ಮಾಡಿ ತಾನೇ ಪಜೀತಿಗೆ ಸಿಕ್ಕಿದ್ದಲ್ಲದೇ, ಈಡೀ ವಿಶ್ವದೆದುರು ತನ್ನನ್ನು ತಾನೇ ತಲೆ ತಗ್ಗಿಸುವಂತೆ ಮಾಡಿಕೊಂಡಿತ್ತು!! ಒಂದಲ್ಲಾ ಒಂದು ರೀತಿಯಲ್ಲಿ ಭಾರತದ ವಿರುದ್ದ ವಿನಾಕಾರಣ ಹೇಳಿಕೆಗಳನ್ನು ನೀಡುತ್ತಿರುವುದು ಪಾಕಿಸ್ತಾನ ಇದೀಗ ಮತ್ತೊಮ್ಮೆ ಭಾರತದ ಪ್ರಧಾನಿಗಳಿಗೆ ನೇರವಾಗಿ ಟೀಕೆಯನ್ನು ಮಾಡಿ, ಆರ್‍ಎಸ್‍ಎಸ್‍ನ್ನು ಉಗ್ರ ಸಂಘಟನೆ ಎಂದು ಕರೆದಿದೆ ಎಂದರೆ ನಂಬ್ತೀರಾ? ಈ ರೀತಿಯಾಗಿ, ಆರ್‍ಎಸ್‍ಎಸ್‍ನ್ನು ಉಗ್ರ ಸಂಘಟನೆ ಎಂದು ಕರೆದ ಭೂಪ ಯಾರು ಎಂದು ನಿಮಗೆ ಗೊತ್ತಿದಿಯಾ?
ಪಾಕಿಸ್ತಾನಿಗಳಿಗೆ ಭಾರತವನ್ನು ಕಂಡರೆ ಅದೇನೋ ಹೊಟ್ಟೆಕಿಚ್ಚೋ ನಾ ಕಾಣೆ!! ಯಾಕೆಂದರೆ ಪ್ರತಿ ಭಾರಿ ಭಾರತವನ್ನು ಕಂಡರೆ ಅಸೂಯೆ ಪಟ್ಟುಕೊಳ್ಳುವ ಇವರು, ಇದೀಗ ನಮ್ಮ ಪ್ರಧಾನಿ ನರೇಂದ್ರ ಮೋದಿಗಳನ್ನೇ ಒರ್ವ ಉಗ್ರ ಎಂದು ಹೇಳುವ ಮಟ್ಟಕ್ಕೆ ಹೇಳಿಕೆಗಳನ್ನು ನೀಡುತ್ತಾರೆ ಎಂದರೆ ಇವರನ್ನು ಏನೆಂದು ತೆಗಳಬೇಕೋ ಅದಕ್ಕೆ ಪದಗಳೇ ಸಿಗುತ್ತಿಲ್ಲ!! ಯಾಕೆಂದರೆ ಜಾಗತಿಕ ಮಟ್ಟದಲ್ಲಿ ದಿನೇ ದಿನೇ ಮೂಲೆ ಗುಂಪಾಗುತ್ತಿರುವ ಪಾಕಿಸ್ತಾನ, ಭಾರತದ ವಿರುದ್ಧ ವಿನಾಕಾರಣ ಒಂದಲ್ಲಾ ಒಂದು ಹೇಳಿಕೆ ನೀಡುತ್ತಲೇ ಇದೆ!!! ಆದರೆ ಇದೀಗ ಪಾಕ್ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ತನ್ನ ನಾಲಿಗೆಯನ್ನು ಹರಿಬಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿಯನ್ನು ಓರ್ವ ಉಗ್ರ ಎಂದು ಕರೆದಿದ್ದಾನೆ!!!
ಇವಿಷ್ಟೇ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಿಂದಲೇ ಆಯ್ಕೆಯಾದ ಒಬ್ಬ ನಾಯಕ!! ಜತೆಗೆ ಆರ್‍ಎಸ್‍ಎಸ್ ಒಂದು ಉಗ್ರ ಸಂಘಟನೆ ಎಂದು
ಖ್ವಾಜಾ ಮೊಹಮ್ಮದ್ ಆಸಿಫ್ ಹೇಳಿಕೆ ನೀಡಿದ್ದಾರೆ!! ಹಾಗಾದರೆ ಖ್ವಾಜಾ ಮೊಹಮ್ಮದ್ ಆಸಿಫ್‍ನನ್ನು ಏನೆಂದು ಕರೆಯಬೇಕು?? ಪಾಕಿಸ್ತಾನದ ನರಿಬುದ್ದಿ ಇಡೀ
ವಿಶ್ವದೆದುರೇ ಬಿಂಬಿತವಾಗಿರಬೇಕಾದರೆ ಇವರು ಯಾವ ಮುಖ ಹೊತ್ತು ಭಾರತದ ಪ್ರಧಾನಿಗಳನ್ನು ಒರ್ವ ಉಗ್ರ ಎಂದು ಕರೆಯುತ್ತಾನೆ?? ವಿಶ್ವದಲ್ಲೆಡೆ
ಭಯೋತ್ಪಾನೆಯ ರಾಷ್ಟ್ರ ಯಾವುದು ಎಂದು ಕೇಳಿದರೆ ಅದಕ್ಕೆ ಒಮ್ಮತದ ಉತ್ತರ ಪಾಕಿಸ್ತಾನವೇ ಆಗಿದೆ!! ಹೀಗಿರಬೇಕಾದರೆ ಭಾರತದ ಹಿಂದುಪರ ಸಂಘಟನೆಗಳನ್ನು ಉಗ್ರ ಸಂಘಟನೆ ಎಂದು ಯಾವ ಆಧಾರದ ಮೇಲೆ ಕರೆಯುತ್ತಾರೋ ಗೊತ್ತಿಲ್ಲ!!!
ಪಾಕಿಸ್ತಾನಿಗಳಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಸಿತುಪ್ಪದಂತೆ ಪರಿಣಮಿಸಿದ್ದು, ಒಂದಲ್ಲ ಒಂದು ರೀತಿಯಿಂದ ಪಾಕಿಸ್ತಾನಕ್ಕೆ ನಷ್ಟವೇ ಆಗಿದೆ!!! ಇದೀಗ ಪಾಕಿಸ್ತಾನಕ್ಕೆ ಭಾರತವನ್ನು ತೆಗಳುವುದೇ ಒಂದು ರೀತಿಯ ರೋಗವಾಗಿದೆ!! ಹೌದು… ಈಡೀ ವಿಶ್ವವೇ ನರೇಂದ್ರ ಮೋದಿಯವರನ್ನು ಒಬ್ಬ ಶ್ರೇಷ್ಠ ವ್ಯಕ್ತಿಯೆಂದು ಕೊಂಡಾಡಬೇಕಾದರೆ ಪಾಕಿಸ್ತಾನ ಮಾತ್ರ ಉಗ್ರವಾದಿ ಎಂದು ಕರೆದಿದೆ!! ಹಾಗಾದರೆ ಪಾಕಿಸ್ತಾನಿಗಳೇನು ಸಾಚಾನಾ?? ಕುಂಬಳಕಾಯಿ ಕಳ್ಳರು ಇವರು!!! ಯಾಕೆಂದರೆ ಇಡೀ ವಿಶ್ವವೇ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಕರೆದಿರಬೇಕಾದರೆ ಪಾಕಿಸ್ತಾನಿಗಳು ಮಾತ್ರ ಭಾರತದ ಪ್ರಧಾನಿಯನ್ನು ಒಬ್ಬ ಉಗ್ರ ಎಂದು ಹೇಳಿದ್ದಲ್ಲದೇ, ದೇಶ ಪ್ರೇಮವನ್ನು ಮೈಗೂಡಿಸಿಕೊಂಡಿರುವ ಆರ್‍ಎಸ್‍ಎಸ್‍ನ್ನು ಉಗ್ರ ಸಂಘಟನೆಯೆಂದು ಕರೆದಿರುವ ವಿದೇಶಾಂಗ ಸಚಿವ, ಐಸಿಸ್, ಅಲೈದಾ, ಮುಜಾಹಿದ್ದೀನ್ ಇನ್ನಿತರ ಉಗ್ರವಾದಿ ಸಂಘಟನೆಯನ್ನು ಈತ ಏನೆಂದು ಕರೆಯುತ್ತಾನೋ ನಾ ಕಾಣೆ!!
ಇತ್ತೀಚಿಗಷ್ಟೇ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ್ದರು. ಉಗ್ರರನ್ನ ಪೆÇೀಷಿಸುತ್ತಿರುವ ಪಾಕ್‍ಗೆ ಬ್ರೇಕ್ ಹಾಕಬೇಕು ಎಂದು ಮನವಿ ಮಾಡಿದ್ದರು. ಈ ಕುರಿತು ಪಾಕ್ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಆಸಿಫ್, ಭಾರತದ ವಿರುದ್ಧ ಬೊಟ್ಟು ಮಾಡಿದ್ದಾರೆ. ಅಷ್ಟೇ ಅಲ್ಲದೇ, ಗುಜರಾತ್ ಹತ್ಯಾಕಾಂಡ ಪ್ರಸ್ತಾಪಿಸಿದ ಆಸಿಫ್ ಮೋದಿ ಕೈಯಲ್ಲಿ ಹತ್ಯೆಯಾದ ಮುಸ್ಲಿಮರ ರಕ್ತದ ಕಲೆಗಳಿವೆ. ಅಲ್ಲದೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಭಾರತದಲ್ಲಿನ ಭಯೋತ್ಪಾದಕರ ಒಂದು ಭಾಗ. ಆರ್‍ಎಸ್‍ಎಸ್ ಹೇಳಿದಂತೆ ಮೋದಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಹೇಳಿದ್ದಾನೆ!!!
ನಾಲಗೆಯಲ್ಲಿ ಎಲುಬಿಲ್ಲ…ಎಂದಾಕ್ಷಣ ಏನು ಬೇಕಾದರು ಹೇಳಬಹುದು ಎಂದುಕೊಂಡಿದ್ದಾನೋ ಗೊತ್ತಿಲ್ಲ!! ಆರ್‍ಎಸ್‍ಎಸ್‍ನ್ನು ಉಗ್ರ ಸಂಘಟನೆಯೆಂದು ಕರೆದಿದ್ದಲ್ಲದೇ ಪ್ರಧಾನಿಯನ್ನು ಉಗ್ರ ಎಂದು ಕರೆದಿದ್ದಾನೆ ಎಂದರೆ ಈತನನ್ನು ಏನೇಂದು ಕರೆಯಬೇಕು ನೀವೇ ಹೇಳಿ!!! ಉಗ್ರ ಸಂಘಟನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನ ಭಾರತದ ಪ್ರಧಾನಿಯನ್ನು, ಹಿಂದೂ ಪರ ಸಂಘಟನೆಯನ್ನು ಭಯೋತ್ಪಾದಕರ ಒಂದು ಭಾಗ ಎಂದು ಕರೆಯಲು ಇವರಿಗೆ ಯಾವ ಯೋಗ್ಯತೆ ಇದೆ ನೀವೇ ಹೇಳಿ!!
Source : Pakistani Foreign Minister calls Modi as a terrorist!
– ಅಲೋಖಾ