ಅಂಕಣದೇಶಪ್ರಚಲಿತ

ಭಾರತದ ಮೇಲೆ ಯುದ್ಧ ಮಾಡುವಷ್ಟು ತಾಕತ್ತು ಚೀನಾಕ್ಕಿದೆಯಾ? ಈ ಬಗ್ಗೆ ವೈಮಾನಿಕ ಇಂಜಿನಿಯರ್‍ನ ವಿಶ್ಲೇಷಣೆ!!

ಡೋಕ್ಲಾಮ್ ವಿಚಾರವಾಗಿ ಚೀನಾ ಭಾರತದ ಮೇಲೆ ಯುದ್ಧ ಮಾಡಲು ತುದಿಗಾಲಲ್ಲಿ ನಿಂತಿದೆ. ಭೂಮಿ, ಆಕಾಶ, ಸಮುದ್ರ ಹಾಗೂ ಸೈಬರ್ ಮೂಲಕ ಯುದ್ಧ ನಡೆಯಬಹುದು. ಒಂದು ವೇಳೆ ಯುದ್ಧ ನಡೆದಿದ್ದೇ ಆದರೆ ಕೆಲವೊಂದು ವಿಷಯಗಳು ಪ್ರಭಾವ ಬೀರುತ್ತದೆ. ಚೀನಾಕ್ಕೆ ಯುದ್ಧ ಮಾಡುವಷ್ಟು ಖದರ್ ಇದೆಯಾ? ಭಾರತ ಚೀನಾವನ್ನು ಮಣಿಸುವ ಬಗೆ ಹೇಗೆ? 
ಭೂ ದಾಳಿ;  
ಚೀನಾ 2.3 ಮಿಲಿಯನ್ ಸೈನಿಕರನ್ನು ಹೊಂದಿದ್ದರೆ, ಭಾರತ 1.3 ಮಿಲಿಯನ್ ಸೈನಿಕರನ್ನು ಹೊಂದಿದೆ. ಒಂದು ವೇಳೆ ಚೀನಾ ಭೂದಾಳಿಯನ್ನು ನಡೆಸಿತು ಎಂದಾದರೆ ಈ ಅಂಶಗಳು ಪ್ರಭಾವ ಬೀರುತ್ತದೆ. ಇದರಲ್ಲಿ ಎರಡು ವಿಭಾಗವನ್ನು ಮಾಡಬಹುದು. ಮೊದಲನೆಯದಾಗಿ ಅಕ್ರಮಣಕಾರಿ ವಿಭಾಗ ಮತ್ತೊಂದು ರಕ್ಷಣಾತ್ಮಕ ವಿಭಾಗ. ಇಲ್ಲಿ ಚೀನಾ ಅಕ್ರಮಣಕಾರಿ ವಿಭಾಗದಲ್ಲಿದ್ದರೆ ಭಾರತ ರಕ್ಷಣಾ ವಿಭಾಗದಲ್ಲಿದೆ. ರಕ್ಷಣಾ ವಿಭಾಗದ ಒಬ್ಬ ಸೈನಿಕ ಆಕ್ರಮಣ ವಿಭಾಗದ ಮೂರು ಸೈನಿಕನಿಗೆ ಸಮವಾಗಿರುತ್ತದೆ. ಯಾಕೆಂದರೆ ಚೀನಾ ಆಕ್ರಮಣಕ್ಕೆ ಬಂದಿರುವ ಪ್ರದೇಶಗಳೆಲ್ಲಾ ಪರ್ವತಗಳನ್ನು ಹೊಂದಿರುವುದರಿಂದ ಚೀನಾ ಯುದ್ಧಕ್ಕೆ ಬಂದರೆ ಭಾರತ ಸುಲಭವಾಗಿ ಗೆಲುವು ಸಾಧಿಸುತ್ತದೆ. ಯಾಕೆಂದರೆ ಅಕ್ರಮಣ ವಿಭಾಗದವರು ಪರ್ವತಗಳನ್ನು ದಾಟಿ ರಕ್ಷಣಾ ವಿಭಾಗದವರ ಜೊತೆ ಕಾದಾಡುವುದು ಅಷ್ಟು ಸುಲಭವಲ್ಲ.
2. ಸಮುದ್ರ ದಾಳಿ;
ಇನ್ನು ಭಾರತದ ವಿರುದ್ಧ ಚೀನಾ ಸಮುದ್ರದ ಮೂಲಕ ಯುದ್ಧಕ್ಕಿಳಿದರೆ ಕೆಲವೊಂದು ಅಂಶಗಳು ಪ್ರಭಾವ ಬೀರುತ್ತದೆ. ಮುಖ್ಯವಾಗಿ ಭಾರತ 7 ಪ್ರಮುಖ ಬಂದರುಗಳನ್ನು ಹೊಂದಿದೆ. ಇದರ ಜೊತೆಗೆ ಹಲವಾರು ಚಿಕ್ಕ ಚಿಕ್ಕ ಬಂದರುಗಳನ್ನು ಒಳಗೊಂಡಿದೆ. ಒಂದು ದೇಶ ಕನಿಷ್ಠ 5 ಬಂದರುಗಳನ್ನು ಹೊಂದಿರಬೇಕು. ಆದರೆ ಇಲ್ಲಿ 7 ಇರುವುದರಿಂದ ಹೊರದೇಶಗಳು ಅಷ್ಟು ಸುಲಭವಾಗಿ ದಾಳಿ ನಡೆಸಲು ಸಾಧ್ಯವಿಲ್ಲ. ಆದರೆ ಚೀನಾ ಬರೇ ಒಂದು ಪ್ರಮುಖ ಬಂದರನ್ನು ಹೊಂದಿದ್ದು, ಒಂದು ವೇಳೆ ಚೀನಾ ಭಾರತದ ವಿರುದ್ಧ ಯುದ್ಧಕ್ಕೆ ಬಂದಿದ್ದೇ ಆದರೆ ಭಾರತ ತನ್ನ ಎಲ್ಲಾ ಬಂದರುಗಳನ್ನು ಬಂದ್ ಮಾಡುತ್ತದೆ. ಆದ್ದರಿಂದ ಚೀನಾಕ್ಕೆ ಸಮುದ್ರ ಮಾರ್ಗವಾಗಿ ಭಾರತದೆಡೆಗೆ ನುಗ್ಗುವ ಹಾಗೆಯೇ ಇಲ್ಲ. ಇನ್ನೊಂದು ಪ್ರಮುಖವಾದ ಅಂಶವೆಂದರೆ ಚೀನಾದ ಹೆಚ್ಚಿನ ವ್ಯಾಪಾರ ನಡೆಯುವುದೇ ಭಾರತದ ಸಮುದ್ರ ಮಾರ್ಗ, ಬಂದರುಗಳ ಮೂಲಕ. ಒಂದು ವೇಳೆ ಚೀನಾ ಯದ್ಧಕ್ಕೆ ಬಂದರೆ ಭಾರತ ಎಲ್ಲಾ ಸಮುದ್ರಮಾರ್ಗಗಳನ್ನು ಬಂದ್ ಮಾಡುವುದರಿಂದ ಚೀನಾದ ವ್ಯಾಪಾರ ಅಲ್ಲಿಗೆ ನಿಂತುಹೋಗುತ್ತದೆ. ಯಾಕೆಂದರೆ ಚೀನಾದ ಶೇ.80ರಿಂದ 90 ಭಾಗ ವ್ಯಾಪಾರ ಭಾರತದ ಸಮುದ್ರ ಮಾರ್ಗದ ಮುಖಾಂತರವೇ ನಡೆಯುವುದು. ಇಷ್ಟೆಲ್ಲಾ ಇರುವುದರಿಂದ ಚೀನಾ ನೌಕಾದಾಳಿಗೆ ಮುಂದೆ ಬರುವುದಿಲ್ಲ. ಒಂದು ವೇಳೆ ಭಾರತದ ಸಮುದ್ರ ಮಾರ್ಗವನ್ನು ಬಂದ್ ಮಾಡಿದ್ದೇ ಆದರೆ ಚೀನಾದ ಆರ್ಥಿಕತೆಯ ಮೇಲೆ ಸಾಕಷ್ಟು ಪರಿಣಾಮ ಬೀಳುತ್ತದೆ. ಯಾಕೆಂದರೆ ಭಾರತವನ್ನು ಸಮುದ್ರಗಳ ರಾಜ ಎಂದೂ ಕರೆಯಲಾಗುತ್ತದೆ. ಇದೆಲ್ಲಾ ಭಾರತಕ್ಕೆ ಲಾಭವಾಗುತ್ತದೆ.
3. ವಾಯುಶಕ್ತಿ:
ಭಾರತದ ವಾಯುಶಕ್ತಿ ಪ್ರಪಂಚದಲ್ಲೇ ಶಕ್ತಿಶಾಲಿಯಾಗಿದೆ. ಭಾರತದಲ್ಲಿ ಯುದ್ಧವಿಮಾನಗಳನ್ನು ಚಲಾಯಿಸುವ ಕೌಶಲ್ಯಪೂರ್ಣ ಪೈಲಟ್‍ಗಳಿದ್ದಾರೆ. 21ನೇ ಶತಮಾನದಲ್ಲಿ ಭಾರತದ ವಾಯಶಕ್ತಿ ಆಧುನೀಕರಣಗೊಂಡಿದೆ. ಭಾರತ ಈಗಾಗಲೇ ಎರಡು ಬಾರಿ(1965, 1971) ಪಾಕಿಸ್ತಾನವನ್ನು ಮಣಿಸಿದೆ. ಭಾರತದ ಪೈಲಟ್‍ಗಳು ಜಾಗತಿಕವಾಗಿ ಸಾಕಷ್ಟು ದೇಶದ ಪೈಲಟ್‍ಗಳಿಗೆ ತರಬೇತಿ ನೀಡುವಷ್ಟು ನಿಪುಣರಾಗಿದ್ದಾರೆ. ಜೊತೆಗೆ  ಉತ್ತಮ ಪೈಲಟ್‍ಗಳೆಂಬ ಹೆಸರು ಗಳಿಸಿದ್ದು, ಚೀನಾಕ್ಕೆ ಭಾರತದೆದುರು ಕಡಿಮೆಯೆಂದೇ ಹೇಳಬಹುದು. ಇನ್ನು ಭಾರತದ ಬಳಿ ನಿಖರ ದಾಳಿ ನಡೆಸಬಲ್ಲ ಆಕ್ರಮಣಕಾರಿ ಸುಖೋಯಿ, 30ಎಂಕೆಐ ಇರುವುದರಿಂದ ಶತ್ರುಗಳ ಭಯವಿಲ್ಲ. ಎಫ್-22 ಏಕಾಂಗಿಯಾಗಿ ಚಲಿಸಿ ಚೀನಾದ ಆಕಾಶಮಾರ್ಗವನ್ನು ಭೇದಿಸುವಷ್ಟು ಸಾಮಥ್ರ್ಯ ಪಡೆದುಕೊಂಡಿದೆ. ಇದು ಭಾರತದ ಮತ್ತೊಂದು ಪ್ರಯೋಜನವೆಂದೇ ಹೇಳಬಹುದು.
4. ಸೈಬರ್,
ಬಾಹ್ಯಾಕಾಶ ದಾಳಿ; ಭಾರತಕ್ಕೆ ಹೋಲಿಸಿದರೆ ಚೀನಾದ ಹ್ಯಾಕರ್ಸ್ ಅಗ್ರಸ್ಥಾನದಲ್ಲಿರುತ್ತಾರೆ ನಿಜ. ಆದರೆ ಭಾರತದ ತಂತ್ರಜ್ಞಾನವನ್ನು ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಚೀನಾದ ಹ್ಯಾಕರ್ಸ್ ಅವರದ್ದೇ ದೇಶದ ತಂತ್ರಜ್ಞಾನವನ್ನು ಹ್ಯಾಕಿಂಗ್ ಮಾಡುತ್ತಾರೆ. ಆದರೆ ಭಾರತದ ಹ್ಯಾಕರ್ಸ್ ಹೊರದೇಶದ ತಂತ್ರಜ್ಞಾನವನ್ನು ಹ್ಯಾಕ್ ಮಾಡುಷ್ಟು ಚಾಕಚಕ್ಯತೆಯನ್ನು ಹೊಂದಿದ್ದಾರೆ.
ಇನ್ನು ತಂತ್ರಜ್ಞಾನದಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಭಾರತದ ಹ್ಯಾಕರ್ಸ್‍ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು ಭಾರತೀಯರು ಪ್ರಥಮ ಶ್ರೇಣಿಯಲ್ಲಿದ್ದಾರೆ. ಅಲ್ಲದೆ ಭಾರತದ ಸೆಕ್ಯುರಿಟಿ ಕೋಡ್‍ಗಳನ್ನು ಅಷ್ಟು ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯವಾಗಿಲ್ಲ. 
ಇನ್ನು ಬಾಹ್ಯಾಕಾಶ ತಂತ್ರಜ್ಞಾನವನ್ನು ನೋಡಿದರೆ ಭಾರತ ಈಗಾಗಲೇ ಚಂದ್ರನಲ್ಲಿಗೆ ಮುಟ್ಟಿಬಂದಿದ್ದು, ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಉಪಗ್ರಹಗಳನ್ನು ಕಳುಹಿಸಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಚೀನಾಕ್ಕಿಂತ ಭಾರತ ಪ್ರಭಾವಶಾಲಿಯಾಗಿದೆ. ಒಂದು ವೇಳೆ ಬೇರೆ ರಾಷ್ಟ್ರಗಳಿಂದ ಕ್ಷಿಪಣಿ, ಅಣುಬಾಂಬ್ ದಾಳಿಯಾದರೆ ಅದನ್ನು ಮಾರ್ಗಮಧ್ಯದಲ್ಲೇ ತುಂಡರಿಸುವ ಸಾಮಥ್ರ್ಯವನ್ನು ಭಾರತ ಹೊಂದಿದೆ. ಇಸ್ರೇಲ್ ಹಾಗೂ ಭಾರತ ಇದೇ ಸಾಮಥ್ರ್ಯವನ್ನು ಹೊಂದಿರುವುದು ವಿಶೇಷ. ಮೊನ್ನೆ ಇಸ್ರೋದ ಪ್ರಮುಖರು ಭಾರತದ ವಿರುದ್ಧ ಬೇರೆ ರಾಷ್ಟ್ರಗಳು ಯುದ್ಧ ಸಾರಿದರೆ ತಮ್ಮ ಕ್ರಮಗಳೇನು ಎಂಬ ವಿಸ್ತ್ರತ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. 
ಒಂದು ವೇಳೆ ಭಾರತದ ಸೈನಿಕರ ಸಂಖ್ಯೆ ಚೀನಾ ಸೈನಿಕರ ಸಂಖ್ಯೆಗಿಂತ ಕಡಿಮೆ ಇದೆ ಎಂಬ ಕಾರಣಕ್ಕಷ್ಟೆ ಭಾರತ ದುರ್ಬಲ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸೈನಿಕರ ಸಂಖ್ಯೆಯನ್ನು ಮುಂದಿಟ್ಟುಕೊಂಡು ಒಂದು ದೇಶದ ಸಾಮಥ್ರ್ಯವನ್ನು ಹೇಳುವಂತಿಲ್ಲ. ಇಲ್ಲಿ ಸೈನಿಕರ ನೈತಿಕ ಸಾಮಥ್ರ್ಯ ಹೆಚ್ಚಿದ್ದು, ಚೀನಾದ ವಿರುದ್ಧ ಕೆಚ್ಚಿನಿಂದ ಹೋರಾಡುವಷ್ಟು ಶಕ್ತರಾಗಿದ್ದಾರೆ. 
ಭಾರತ 1962ರ ಯುದ್ಧದಲ್ಲಿ ಸೋಲಲು ಮುಖ್ಯ ಕಾರಣವೆಂದರೆ ಭಾರತ ಸೈನ್ಯ ಚೀನಾ ಸೈನ್ಯದ 8;1 ಅನುಪಾತದಲ್ಲಿತ್ತು. ಆದರೂ ಅಷ್ಟು ಸುಲಭದಲ್ಲಿ ಭಾರತೀಯರನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಿಲ್ಲ. ಅಲ್ಲದೆ ಯುದ್ಧರಂಗದಿಂದ ಓಡಿಬರದೆ ಶತ್ರುಗಳ ಗುಂಡಿಗೆ ಎದೆಕೊಟ್ಟು ಹುತಾತ್ಮರಾಗಿದ್ದಾರೆ. ಅಲ್ಲದೆ ನಮ್ಮ ಅಂದಿನ ರಾಷ್ಟ್ರನಾಯಕರು ಸೈನ್ಯದ ಬಗ್ಗೆ ನಿರ್ಲಕ್ಷ್ಯ ತಾಳಿರುವುದರಿಂದಲೇ ಭಾರತಕ್ಕೆ ಸೋಲಾಯಿತು. 
ಆದರೆ 1967ರಲ್ಲಿ ಮತ್ತೆ ಚೀನಾ ಭಾರತದ ವಿರುದ್ಧ ಯುದ್ಧಕ್ಕೆ ಬಂದಿತು. ಸುಮಾರು 300 ಸೈನಿಕರನ್ನು ಭಾರತದ ಕೆಲವೇ ಕೆಲವು ಸೈನಿಕರು ಕೊಲ್ಲುವ ಮೂಲಕ ಕಾಲ್ಕೆರೆದು ಯುದ್ಧಕ್ಕೆ ಬಂದ ಚೀನಾಕ್ಕೆ ಪಾಠ ಕಲಿಸಿದ್ದರು. ಆದರೆ ಭಾರತ 75 ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. 1962ರ ಯುದ್ಧದ ಬಗ್ಗೆ ಮಾತಾಡುವ ಚೀನಾ 1967ರಲ್ಲಿ ಏನು ನಡೆಯಿತು ಎಂಬ ಬಗ್ಗೆ ಚಕಾರವೆತ್ತುತ್ತಿಲ್ಲ. 
ಇನ್ನೊಂದು ಅತ್ಯಂತ ಪ್ರಮುಖ ವಿಚಾರವೊಂದಿದೆ. ಭಾರತದ ಪತ್ತೆದಾರಿ ಉಪಗ್ರಹಗಳು, ಪಿ-8ಐ ಪಾಸಿಡಾನ್ ಹಾಗೂ ನೌಕಾ ಹಡಗುಗಳು ಎರಡು ತಿಂಗಳ ಅವಧಿಯಲ್ಲಿ ಚೀನಾದ 13 ಹಡಗುಗಳನ್ನು ಟ್ರ್ಯಾಕ್ ಮಾಡಿದೆ. ಗೌಪ್ಯತೆಯ ದೃಷ್ಟಿಯಿಂದ ಈ ಬಗ್ಗೆ ಸರಕಾರ ಗುಟ್ಟುಬಿಟ್ಟುಕೊಟ್ಟಿಲ್ಲ. ಅಲ್ಲದೆ ಇದು ಇನ್ನೂ ಹೆಚ್ಚಿರುವ ಸಾಧ್ಯತೆಯೂ ಇದೆ. ಇದೆಲ್ಲಾ ಭಾರತದ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಭಾರತದ ಸಾಮಥ್ರ್ಯದ ಬಗ್ಗೆ ಇನ್ನಷ್ಟು ಧೈರ್ಯದಿಂದ ಹೇಳಬೇಕೆಂದರೆ, ಭಾರತದಲ್ಲಿ ಪ್ರಧಾನಿಯಾಗಿರುವುದು ಮೋದಿಯೇ ವಿನಃ ನೆಹರೂ ಅಲ್ಲ. ಯಾಕೆಂದರೆ ಇದು 1962 ಅಲ್ಲ 2017..
-ಚೇಕಿತಾನ
Tags

Related Articles

Close