ಅಂಕಣಇತಿಹಾಸದೇಶಪ್ರಚಲಿತ

ಭಾರತದ ಇತಿಹಾಸದಲ್ಲೆ ದಲಿತರಿಗಾದ ಅತೀ ದೊಡ್ಡ ಮೋಸ : ರಾಷ್ಟ್ರಪತಿ ಸ್ಥಾನದಲ್ಲಿ ಕ್ರೈಸ್ತನನ್ನು ಕೂರಿಸಿ ದಲಿತನೆಂದು ಸುಳ್ಳು ಹೇಳಿದ್ದ ಕಾಂಗ್ರೆಸ್

 ಹೌದು !  ಭಾರತದಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ತನ್ನದೇ ಆದ ಘನತೆ, ಸ್ಥಾನಮಾನಗಳನ್ನು ನೀಡಲಾಗಿದೆ.. ರಾಷ್ಟ್ರಪತಿ ನಮ್ಮ ಭವ್ಯ ಭಾರತದ ಪ್ರಥಮ ಪ್ರಜೆ ಕೂಡ ಹೌದು…ಪ್ರಸ್ತುತವಾಗಿ ರಾಮನಾಥ್ ಕೋವಿಂದ್ ಇವರು ನಮ್ಮ 14 ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಪಟ್ಟವೇರಿದ ಮೇಲೆ ಅನೇಕ ಗೊಂದಲಗಳ ಮಳೆ ಸುರಿಯುತ್ತಿದೆ.
ಹಾಗದರೆ  ಕೆ.ಆರ್ ನಾರಾಯಣನ್ ದಲಿತರಲ್ಲದ ಪಕ್ಷದಲ್ಲಿ ಕೋವಿಂದ್ ಭಾರತದ ಮೊದಲ ದಲಿತ ರಾಷ್ಟ್ರಪತಿಯಾಗುವರೆ???..
ಕೆ.ಆರ್ ನಾರಾಯಣನ್‍ರವರನ್ನು ಭಾರತದ ಮೊದಲ ದಲಿತ ರಾಷ್ಟ್ರಪತಿ ಎಂಬಂತೆ ಬಿಂಬಿಸಲಾಗಿದೆ. ಆದರೆ ಇತ್ತೀಚಿನ ಹೇಳಿಕೆಗಳು ಮತ್ತು ಸಾಕ್ಷಾಧಾರಗಳು ಈ ಹೇಳಿಕೆಯೇ ಸುಳ್ಳೆಂಬುವುದನ್ನು ಪುಷ್ಠೀಕರಿಸಿದೆ.
ಹಾಗಾದರೆ ಇಲ್ಲಿ ಸತ್ಯಾಸತ್ಯತೆಯ ಸಮಾಧಿ ಮಾಡಲಾಗಿದೆಯೆ???
ನಮ್ಮ ಭಾರತದ ಪ್ರಸಿದ್ದ ದಿನ ಪತ್ರಿಕೆಯಾದ “ಟೈಮ್ಸ್ ಆಪ್ ಇಂಡಿಯಾ” ನವೆಂಬರ್ 10, 2005 ರಲ್ಲಿ ಕೆ.ಆರ್ ನಾರಾಯಣನ್ ರವರ ಅಂತ್ಯಕ್ರಿಯೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿತ್ತು.. ಕೆ.ಆರ್ ನಾರಾಯಣನ್‍ರವರ ಅಂತ್ಯಕ್ರಿಯೆಯನ್ನು ಯಮುನಾ ನದಿ ತೀರದಲ್ಲಿ ನೆರವೇರಿಸಲಾಗಿದ್ದು, ಅವರ ಸೋದರಳಿಯನಾದ ಡಾ. ಎಸ್ ರಾಮಚಂದ್ರನ್‍ನವರು ವಿಧಿವಿಧಾನಗಳನ್ನು ನೆರವೇರಿಸಿದ್ದರು. ಜವಹರ್‍ಲಾಲ್ ನೆಹರೂ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕಗಳಿರುವಂತಹ ಜಾಗವಾದ ಶಾಂತಿವನ ಮತ್ತು ವಿಜಯ ಘಾಟ್‍ಗಳ ಮದ್ಯದಲ್ಲಿ ನೆರವೇರಿಸಲಾಗಿದೆ ಎಂಬುದು ಸೋಜಿಗದ ಸಂಗತಿ. ಹಾಗೂ ಕೆ. ಆರ್ ನಾರಾಯಣನ್‍ರವರ ಅಂತಿಮ ವಿಧಿಕಾರ್ಯವನ್ನು ಶಾಂತಿಗಿರಿ ಆಶ್ರಮದ ಸನ್ಯಾಸಿಗಳಿಂದ 2005 ರಲ್ಲಿ ಯಮುನಾ ನದಿ ತೀರದಲ್ಲಿ  ಹಿಂದೂಧರ್ಮದ ಸಂಪ್ರದಾಯದಂತೆ ಮಾಡಲಾಗಿದ್ದು ಮತ್ತು ಎಲ್ಲಾ ಧರ್ಮಗಳ ಪಾರ್ಥನೆಯನ್ನು ಪಠಣೆ ಮಾಡಲಾಗಿದೆ ಎಂದೆಲ್ಲಾ ಮಾಹಿತಿ ಈ ವರದಿಯಲ್ಲಿತ್ತು..
ಆದರೆ ಇಲ್ಲಿ ನಡೆದಂತಹ ಹಾಗೂ ನಾವೆಲ್ಲರೂ ಆಶ್ಚರ್ಯ ಪಡಬೇಕಾದ  ಸಂಗತಿಯಾದ್ರು ಏನು ಗೊತ್ತಾ..?
ಹೌದು! ಈ ಸತ್ಯವನ್ನ ಯಾರು ನಂಬಲ್ಲ. ಆದ್ರೂ ಇದನ್ನು ನಾವು ನಂಬಲೆಬೇಕಾಗಿದೆ.…ದೆಹಲಿಯ ಹೃದಯ ಭಾಗದಲ್ಲಿರುವಂತಹ ಪೃಥ್ವಿರಾಜ್ ರಸ್ತೆಯ  ಕ್ರಿಶ್ಚಿಯನ್ ಸ್ಮಶಾನದಲ್ಲಿ ಕೆ.ಆರ್ ನಾರಾಯಣನ್ ರವರ ಸಮಾಧಿ ಪತ್ತೆಯಾಗಿದೆ!! ಹಾಗೂ ಆ ಸಮಾಧಿಯ ಮೇಲೆ ಅಮೃತ ಶಿಲೆಯಲ್ಲಿ ಬರೆಯಲ್ಪಟ್ಟ ಬರಹವು ಈ ಸುದ್ದಿ ನಿಜವೆಂದು ಸಾಬೀತು ಪಡಿಸುತ್ತಿದೆ.. ಅಷ್ಟಕ್ಕೂ ಆ ಶಿಲೆಯಲ್ಲಿ ಏನು ಬರೆದಿದೆ ಗೊತ್ತೆ ? “ ಕೆ.ಆರ್ ನಾರಾಯಣನ್ ಭಾರತದ ರಾಷ್ಟ್ರಪತಿ (1997- 2002) .” ಇದರ ಜೊತೆಗೆ ಅಶೋಕ ಸ್ತಂಭದ ಚಿಹ್ನೆಯನ್ನು ಕೂಡ ಕೆತ್ತಲಾಗಿತ್ತು.
 ಇದರ ಜೊತೆಗೆ ಹಲವಾರು ಸಾಕ್ಷಿಗಳು ನಮಗೀಗ ದೊರೆತಿವೆ!!!
ಕೆ.ಆರ್ ನಾರಾಯಣನ್ ರವರ ಪತ್ನಿ ಉಷಾ ನಾರಾಯಣನ್ 2008 ರಲ್ಲಿ ಮರಣಹೊಂದಿದ್ದಾಗ ಅವರ ಅಂತ್ಯಕ್ರಿಯೆಯನ್ನು ಕೂಡ ಅದೇ ಸ್ಮಶಾನದಲಿ,್ಲ ಅದೇ ಜಾಗದಲ್ಲಿ  ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನಡೆಸಿರುವುದು ಈ ದಂಪತಿಗಳಿಬ್ಬರೂ ಕ್ರೈಸ್ತರೆಂಬುವುದನ್ನು ಸಾಬೀತುಮಾಡುತ್ತಿದ್ದು ಹಲವಾರು ಅನುಮಾನಾಸ್ಪದ ವಿಷಯಗಳ ಹುಟ್ಟಿಗೆ ಎಡೆಮಾಡಿಕೊಟ್ಟಿದೆ. ವಿ.ಪಿ.ಎಚ್ ಲೀಡರ್ಸ್‍ಗಳಲ್ಲಿ ಒಬ್ಬರಾದ ಅಶೋಕ್ ಸಿಂಗಾಲ್ ಇವರು ಹಲವಾರು ಭಾರಿ ಕೆ.ಆರ್ ನಾರಾಯಣನ್ ಹಿಂದೂವಲ್ಲ ಎಂಬುವುದನ್ನು ವಾದಿಸುತ್ತಲೆ ಬಂದಿದ್ದರು! ಇವರ ಮಾತನ್ನು ಪ್ರತಿಯೊಬ್ಬರು ಕಡೆಗಣಿಸುತ್ತಲೇ ಬಂದಿದ್ದರು. ಆದರೆ ಅವರ ವಾದವು ನಿಜವೆಂದು ಇತ್ತೀಚಿಗೆ ದೊರೆತಿರುವ ಈ ಮೇಲಿನ ಸಾಕ್ಷಾಧಾರಗಳು ದೃಡಪಡಿಸುತ್ತಿವೆ.. ಹಾಗಾದರೆ ಇಲ್ಲಿ ನಡೆಯಬೇಕಾಗಿರುವ ಪ್ರಮುಖ ತನಿಖೆ ಏನೆಂದರೆ ದಲಿತ ಹಿಂದೂ ಎಂದು ಕರೆಸಿಕೊಂಡಿದ್ದ ಕೆ.ಆರ್ ನಾರಾಯಣನ್ ರವರ ಅಂತ್ಯಕ್ರಿಯೆಯು ಹೇಗೆ ಕ್ರಿಶ್ಚಿಯನ್ ಸಂಪ್ರದಾಯದೊಂದಿಗೆ ಕೊನೆಗೊಂಡಿತು?
ಭಾರತದಲ್ಲಿನ ಎಲ್ಲಾ ಧರ್ಮಗಳಿಗೆ ತಮ್ಮದೇ ಆದ ರೀತಿ ರಿವಾಜುಗಳಿವೆ..ಅದರಂತೆ ಕ್ರೈಸ್ತಧರ್ಮದಲ್ಲೂ ಅವರ ಅನೇಕ ನೀತಿ- ಸಂಹಿತೆಗಳಿವೆ. ಅದನ್ನು ಅವರು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ ಕೂಡ, ಇದರಲ್ಲಿ ಕಂಡು ಬರುವುದೇನೆಂದರೆ ಇದರ ಪ್ರಕಾರ  ಚರ್ಚ್‍ನ ಸ್ಮಶಾನಗಳಲ್ಲಿ ಕ್ರಿಶ್ಚಿಯನ್ ಧರ್ಮದವರನ್ನು ಮಾತ್ರ ಸಮಾದಿ ಮಾಡಲಾಗುತ್ತಿದ್ದು. ಅನ್ಯ ಧರ್ಮಿಯರ ಸಮಾಧಿಗೆ ಆಸ್ಪದವಿಲ್ಲ, ಅದು ಈಗಲೂ ಮುಂದುವರೆಯತ್ತಾ ಬಂದಿರುವ  ಸಂಪ್ರದಾಯ ಕೂಡ ಹೌದು.!  ಆಗಿದ್ದ ಮೇಲೆ ಯಾವ ಪ್ರಕಾರದಲ್ಲಿ ಓರ್ವ ಹಿಂದೂವನ್ನು ಅವರ ಸ್ಮಶಾನದಲ್ಲಿ ಸಮಾಧಿಮಾಡಿರುತ್ತಾರೆ? ಒಂದು ವೇಳೆ ಅನ್ಯ ಧರ್ಮಿಯರ ಸಮಾಧಿ ನಿರ್ಮಾಣಕ್ಕೆ ಕ್ರೈಸ್ತ ಧರ್ಮದಲ್ಲಿ ಅವಕಾಶ ವಿದೆಯೆಂದಾದಲ್ಲಿ, ಇವುಗಳಿಗೆ ವಿರುದ್ದವಾಗಿ ಅದೆಷ್ಟೋ ನಿದರ್ಶನಗಳು ನಮಗೆ ದೊರೆಯುತ್ತಿವೆ. ಏನೆಂದರೆ ಚರ್ಚ್‍ಗಳು ಅವರ ಧರ್ಮದಲ್ಲೇ ಹುಟ್ಟಿದವರ ಹಾಗೂ ಖ್ಯಾತ ವ್ಯಕ್ತಿಗಳನ್ನೂ ಸಮಾಧಿ ಮಾಡಲು ನಿರಾಕರಿಸಿದ ನಿದರ್ಶನಗಳನ್ನು ನಾವು ಕಾಣಬಹುದು. ಅದರಲ್ಲೂ ಪ್ರಮುಖವಾಗಿ ಇತ್ತೀಚಿಗಿನ ದಿನಗಳಲ್ಲಿ ಖ್ಯಾತನಟಿ ಪ್ರಿಯಾಂಕ ಚೋಪ್ರಾರವರ ಅಜ್ಜಿಯಾದ ಮೇರಿ ಜಾನ್ ರವರನ್ನು  ಸಮಾಧಿ ಮಾಡಲು ಅವಕಾಶ ದೊರೆಯದಿರುವುದು!  ಟೈಮ್ಸ್ ಆಪ್ ಇಂಡಿಯಾದ ವರದಿ ಪ್ರಕಾರ ಜನವರಿ, 27, 2017 ರ ವರದಿಯು ಮೇರಿ ಜಾನ್ ಒಬ್ಬ ಕೇರಳದ ಕ್ರಿಶ್ಚಿಯನ್‍ರಾಗಿದ್ದು, ಇವರು ಓರ್ವ ಹಿಂದುವನ್ನು ವಿವಾಹವಾಗಿರುವ ಹಿನ್ನೆಲೆಯಲ್ಲಿ, ಚರ್ಚ್ ಇವರ ಸಮಾಧಿಗೆ ಅವಕಾಶ ನೀಡದಿರುವುದಕ್ಕೆ ಪ್ರಮುಖ ಕಾರಣವಾಗಿತ್ತು. ಮೇರಿ ಜಾನ್, ಕೇರಳದ ಸೈಂಟ್ ಜಾನ್ ಅತ್ತಮಂಗಳಂ ಚರ್ಚ್‍ಗೆ ತುಂಬಾ ಹತ್ತಿರವಾಗಿದ್ದರು. ಆದರೂ ಅವರ ವಿವಾಹ ಹಿಂದೂ ಧರ್ಮದ ವ್ಯಕ್ತಿಯೊಂದಿಗೆ ನಡೆದಿರುವುದರಿಂದ ಚರ್ಚ್‍ನ ಅಧಿಕಾರವೃಂದ ಇವರ ಸಮಾಧಿ ಮಾಡಲು ಅವಕಾಶ ನೀಡಲಿಲ್ಲ.
Grave of K.R. Narayanan in New Delhi on Wednesday. EXPRESS PHOTO BY PRAVEEN KHANNA 26 07 2017.
ಅಶೋಕ ಸಿಂಗಾಲ್ ಹೇಳಿಕೆಯಲ್ಲಿರುವ ನಿಜ ಅಂಶಗಳೇನು ?
ಪಿ.ಎಚ್.ಪಿ ಲೀಡರ್ಸಗಳಲ್ಲಿ ಒಬ್ಬರಾದ ಅಶೋಕ ಸಿಂಗಾಲ್ ನೀಡಿರುವ ಹೇಳಿಕೆಯನ್ನು ರಾಢಿಫ್ ಎಂಬ ಪತ್ರಿಕೆಯ ಮುಖಪುಟದಲ್ಲಿ ನವೆಂಬರ್ 1-14, 1997 ರಲ್ಲಿ ಪ್ರಕಟಿಸಲಾಗಿತು.್ತ ಅವರು ಕೆ.ಆರ್ ನಾರಾಯಣನ್ ರವರು ಕೇವಲ ಪತ್ರಿಕೆಗಳಲ್ಲಿ ಮಾತ್ರ ದಲಿತ ಹಿಂದು! ಅವರ ತತ್ವ ಹಾಗೂ ದಿನಚಟುವಟಿಕೆಗಳು ಅವರೋರ್ವ ಹಿಂದು ವಿರೋಧಿ ಎಂದು ಸಾಬೀತು ಮಾಡುತ್ತದೆ. ಅವರು ಹಿಂದುವಲ್ಲ ! ಅವರ ಕುಟುಂಬವು ಕ್ರೈಸ್ತ ಧರ್ಮಕ್ಕೆ ಸೇರಿದು!್ದ ಅವರ ಮೂಲಸ್ಥಾನ ಕೇರಳದ ಕೇರಳದ ಕೊಟ್ಟಾಯಂ ಜಿಲ್ಲೆಯಾಗಿದ್ದು, ಇವರು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮುಗಿಸಿದ್ದು, ಆ ಸಂಸ್ಥೆಯು ಅವರಿಗೆ ಪದವಿಯನ್ನು ನೀಡಿದೆ ಎಂದೆಲ್ಲಾ ಹೇಳಿಕೆ ನೀಡಿದ್ದಾರೆ. ಹಾಗೂ ಇದೆಲ್ಲಾ ಹೇಳಿಕೆಯು ನಿಜವೆಂದು ಸಾಬೀತು ಕೂಡ ಆಗಿರುವುದು ಎಲ್ಲರಿಗೂ ಶಾಕ್ ನೀಡಿದೆ!
ಇದರಿಂದ ಮೂಡಿ ಬರುವ  ಸಂಶಯವೆಂದರೆ ಚರ್ಚ್ ಕೆ.ಆರ್ ನಾರಾಯಣ್‍ನರವರ ಸಾವಿನ ಹಾಗೂ ಅವರ ಧರ್ಮದ ಬಗ್ಗೆ ಸತ್ಯ ಸಂಗತಿಗೆ ಗುಂಡಿತೋಡಿ ಮಣ್ಣು ಮುಚ್ಚಿತ್ತಾ???
ಹೌದು! ನಾವೆಲ್ಲ ಅಂದುಕೊಂಡಿರುವ ಹಾಗೆ ಕೆ.ಆರ್ ನಾರಾಯಣನ್ ಮೊದಲ ದಲಿತ ರಾಷ್ಟ್ರಪತಿಯಲ್ಲ! ಇದು ಕಾಂಗ್ರೆಸ್‍ನ ಮೋಸಗೊಳಿಸುವ ಮೂರ್ಖತನವೇ ಸರಿ.! ಸತ್ಯ ಯಾವತ್ತು ಸುಳ್ಳಾಗಲ್ಲ ಕಣ್ರೀ, ಕಾಂಗ್ರೆಸ್ ಸರ್ಕಾರ ಕೇವಲ ಚರ್ಚ್‍ನ ಅಭಿವೃದ್ದಿಗೆ ಕಾರಣವಾಗಿದೆ ಅಷ್ಟೇ.. ಏನೇ ಆಗಲಿ ರಾಮನಾಥ್ ಕೋವಿಂದ್ ನಮ್ಮ ಭಾರತದ ಮೊದಲ ದಲಿತ ಹಿಂದೂ ರಾಷ್ಟ್ರಪತಿ ಎಂಬುವುದು ಸಾಬೀತಾಗಿದೆ..
– Kavyashree
Tags

Related Articles

Close