ಪ್ರಚಲಿತ

ಭಾರತದ ಸೇನೆಯೂ ಇತರ ಶಕ್ತಿವಂತ ರಾಷ್ಟ್ರಗಳಂತೆ ಯುದ್ದ ಮಾಡಲು ರಣೋತ್ಸಾಹ ತೋರಿಸುತ್ತಿರುವುದು ಯಾಕೆ??

ಮೋದಿ ಸರಕಾರ ಬಂದ ನಂತರ ದೇಶದಲ್ಲಿ ಅದೆಷ್ಟೋ ರೀತಿಯ ಬದಲಾವಣೆಗಳು ಕಂಡು ಬಂದಿದ್ದು, ಈ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರಬೇಕಾದರೆ
ಭಾರತೀಯ ಸೇನೆ ವೈರಿಗಳೊಂದಿಗೆ ಹೋರಾಡಲು ಅನುಮತಿಯನ್ನು ಪಡೆದುಕೊಳ್ಳಬೇಕಾದ ದುರ್ವಿಧಿ ಇತ್ತು!! ಆದರೆ, ನರೇಂದ್ರ ಮೋದಿಯವರು ಅಧಿಕಾರದ
ಗದ್ದುಗೆಯನ್ನು ಹಿಡಿದ ನಂತರ ಭಾರತೀಯ ಸೇನೆಯಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅಷ್ಟೇ ಅಲ್ಲದೇ, ಯುದ್ದ ಎದುರಿಸಲು ನಾವು ಸಿದ್ದ
ಎನ್ನುವಷ್ಟರ ಮಟ್ಟಿಗೆ ಸೇನೆಯು ಮುಂದುವರೆದಿದೆ ಅದಕ್ಕೆಲ್ಲಾ ಕಾರಣ ಮೋದಿ ಜೀ!!

ಹೌದು….. ಯಾವುದೇ ತುರ್ತು ಯುದ್ಧ ಸಂದರ್ಭವನ್ನು ಅಥವಾ ದೇಶದ ಭದ್ರತೆಗೆ ಸವಾಲಿನ ಸನ್ನಿವೇಶವನ್ನು ಕ್ಷಿಪ್ರವಾಗಿ ಎದುರಿಸಲು ಭಾರತೀಯ ವಾಯುಪಡೆ
ಸನ್ನದ್ಧವಾಗಿದೆ ಎಂದು ವಾಯುಪಡೆಯ 85 ನೇ ವರ್ಷಾಚರಣೆಯಲ್ಲಿ ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ಹೇಳಿದ್ದಾರೆ!! ಅಗತ್ಯ ಬಿದ್ದಲ್ಲಿ ಅಲ್ಪಾವಧಿಯಲ್ಲೇ ಯುದ್ಧ ನಡೆಸಲು ಭಾರತೀಯ ವಾಯುಪಡೆ ಸರ್ವ ಸನ್ನದ್ಧವಾಗಿದೆ ಎನ್ನುವಷ್ಟರ ಹಂತಕ್ಕೆ ಭಾರತೀಯ ಸೇನೆ ರೆಡಿಯಾಗಿದೆ!!

ಈ ಹಿಂದೆ ಭಾರತೀಯ ಸೇನೆ ಯಾವ ಮಟ್ಟದ ಪರಿಸ್ಥಿತಿಯನ್ನು ಎದುರಿಸುತ್ತಿತ್ತು ಎಂದರೆ ಯಾವುದೇ ಪರಿಸ್ಥಿತಿ ಎದುರಾದರೂ ಕೂಡ ಅಥವಾ ತಮಗೆ ದಾಳಿಯಾದರೂ ಕೂಡ ಮೌನ ಮುರಿಯುತ್ತಿದ್ದ ಸೇನೆ ಇದೀಗ ರಾಜರೋಷದಿಂದ ಯುದ್ಧಕ್ಕೆ ಆಹ್ವಾನ ನೀಡುತ್ತಿದೆ!! ಹೌದು…. ತಮ್ಮ ಕೈಯಲ್ಲಿ ಬಂದೂಕು ಇದ್ದರೂ ಕೂಡ ಒಂದು ಬುಲೆಟ್‍ನ್ನು ಹಾರಿಸಲು ಅನುಮತಿಯನ್ನು ಪಡೆಯಬೇಕಿದ್ದ ಸೇನೆ ಇದೀಗ ಯುದ್ಧಕ್ಕೆ ನಾವು ಸಿದ್ಧ ಎನ್ನುವಷ್ಟರ ಮಟ್ಟಿಗೆ ಭಾರತೀಯ ಸೇನೆ ಬೆಳೆದಿದೆ ಎಂದರೆ ನಾವದನ್ನು ಮೆಚ್ಚಲೇಬೇಕು!! ವಾಯು ಪಡೆ ದೇಶದ ಭದ್ರತೆಗೆ ಎದುರಾಗುವ ಯಾವುದೇ ಅಪಾಯಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ವಿಶ್ವಾಸದ ಮಾತುಗಳನ್ನು ಹೇಳಿದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋಹಾ, ಭಾರತೀಯ ಭೂ ಸೇನೆ ಮತ್ತು ನೌಕಾ ಸೇನೆಯೊಂದಿಗೆ ಜತೆ ಜತೆಯಾಗಿ ಕೆಲಸ ಮಾಡಲು ನಾವು ತಯಾರಾಗಿದ್ದೇವೆ ಎಂದಿದ್ದಾರೆ!!

ಅಷ್ಟೇ ಅಲ್ಲದೇ ಪಠಾನ್ ಕೋಟ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ವಾಯು ಸೇನೆಯ ಎಲ್ಲಾ ಸ್ಟೇಷನ್‍ಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಎಲ್ಲಾ ರೀತಿಯ
ಪ್ರತಿದಾಳಿ ನಡೆಸಲು ಸರ್ವ ಸನ್ನದ್ಧವಾಗಿವೆ ಎಂದು ಹೇಳಿದ್ದಾರೆ. ‘ನಮ್ಮ ಮುಖ್ಯ ಉದ್ದೇಶ ಶಾಂತಿಯೇ ಆಗಿದೆ. ಆದರೆ ಅಗತ್ಯ ಪರಿಸ್ಥಿತಿ ನಿರ್ಮಾಣವಾದಲ್ಲಿ
ಕ್ಷಿಪ್ರಗತಿಯಲ್ಲಿ ಹೋರಾಡಲು ನಾವು ಸಿದ್ದವಾಗಿದ್ದು, ಭೂ ಸೇನೆ ಮತ್ತು ನೌಕಾಪಡೆಯೊಂದಿಗೆ ಕೆಲಸ ಮಾಡಲು ಶಕ್ತರಿದ್ದೇವೆ’ ಎಂದಿದ್ದಾರೆ. ಅಲ್ಲದೇ ‘ನಾವು ಚೀನಾ
ಮತ್ತು ಪಾಕಿಸ್ಥಾನವನ್ನು ಒಟ್ಟಿಗೆ ಯುದ್ದವನ್ನು ಎದುರಿಸಲು ಶಕ್ತರಿದ್ದೇವೆ’ ಎನ್ನುವುದನ್ನು ಹೇಳಿದ್ದಾರೆ!! ಮೋದಿ ಅಧಿಕಾರ ಸ್ವೀಕರಿಸಿದ ನಂತರ ಸೇನೆಯಲ್ಲಿ ಹೊಸ
ರೀತಿಯ ಹುಮ್ಮಸ್ಸು ಕಾಣುತ್ತಿದ್ದು, ಧೈರ್ಯದಿಂದ ಶಕ್ತಿವಂತ ರಾಷ್ಟ್ರಗಳಂತೆ ಯುದ್ದ ಮಾಡಲು ರಣೋತ್ಸಾಹ ತೋರಿಸುತ್ತಿದೆ !!!

ಭಾರತೀಯ ಸೇನೆ ಎಷ್ಟೊಂದು ಮುಂದುವರೆದಿದೆ ಎಂದರೆ, ಸುಮಾರು ವರ್ಷಗಳಿಂದ ನಮ್ಮ ದೇಶದ ಗಡಿಯಲ್ಲಿ ಪಾಕಿಸ್ತಾನದಿಂದ ನಿರಂತರವಾಗಿ ಶಾಂತಿ ಭಂಗ
ನಡೆಯುತ್ತಲೇ ಇತ್ತು. ಅಷ್ಟೇ ಅಲ್ಲದೇ, ಭಯೋತ್ಪಾದಕರು, ಆತಂಕವಾದಿಗಳನ್ನು ಗಡಿಯೊಳಗಿಂದ ನುಸುಳಿಸುತ್ತಲೇ ಇದ್ದರು, ಇದಕ್ಕೇ ಸಾಕ್ಷಿಯಂತೆ ಗಡಿಯಲ್ಲಿ ಕೆಲವು ಸುರಂಗಗಳು ಕೂಡ ಪತ್ತೆಯಾಗಿವೆ. ಆದರೆ, ಇತ್ತೀಚಿನ ವರ್ಷದಲ್ಲಿ ಹಿಂದೆಂದು ಇರದಷ್ಟು, ನಮ್ಮ ಸೈನಿಕರು ಉಗ್ರರನ್ನು ಹಿಡಿದು ಸಂಹಾರ ಮಾಡಿದ್ದಾರೆ ಎಂದರೆ ಅದು ಹೆಮ್ಮೆಯ ವಿಚಾರ!! ಅಷ್ಟೇ ಅಲ್ಲದೇ, “ಪಾಕಿಸ್ತಾನದತ್ತ ನಮ್ಮ ಕಡೆಯಿಂದ ಮೊದಲು ಗುಂಡು ಹೋಗಬಾರದು. ಅತ್ತ ಕಡೆಯಿಂದ ಮೊದಲು ಗುಂಡು ಬಂದರೆ ನಂತರ ನಾವು ಹೊಡೆಯುವ ಗುಂಡುಗಳು ನಿಲ್ಲಬಾರದು. ಎಷ್ಟು ಗುಂಡು ಹೊಡೆಯುತ್ತೇವೆಂದು ಲೆಕ್ಕ ಕೂಡ ಇಡಬಾರದು ಎಂದು ನಮ್ಮ ಸೈನಿಕ ದಳಗಳಿಗೆ ಸೂಚನೆ ನೀಡಲಾಗಿದೆ ಎಂದು ಈಗಾಗಲೇ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ!!!

ಇತ್ತೀಚೆಗೆ ಭಾರತ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ!! ಅಲ್ಲದೇ, ನಮ್ಮ ಸೇನೆಯು ದಾಳಿಗಳನ್ನು ಹಿಮ್ಮೆಟ್ಟಿಸಲು ಸಶಕ್ತವಾಗಿದೆ ಎಂಬುದು ಅನೇಕ ಸಂದರ್ಭದಲ್ಲಿ
ಸಾಬೀತಾಗಿದೆ. ಡೋಕ್ಲಮ್ ಪ್ರಕರಣದಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ನಡೆದೇ ಹೋಗಬಹುದೆಂದು ಅನೇಕರು ಅಂದುಕೊಂಡಿದ್ದರು. ಆದರೆ, ಭಾರತ
ಜಾಣ್ಮೆಯಿಂದ ಸಮಸ್ಯೆಯಾಗದಂತೆ ನೋಡಿಕೊಂಡಿರುವುದು ಹೆಮ್ಮೆಯ ಸಂಗತಿ!! ಹಾಗಾಗಿ ಭಾರತ ದೇಶವು ಇದೀಗ ದುರ್ಬಲ ರಾಷ್ಟ್ರವಾಗಿಲ್ಲ ಎನ್ನುವುದು ಚೀನಾಗೂ ಗೊತ್ತಿದೆ!!

ವಾಯುಪಡೆಯ 85 ನೇ ವರ್ಷಾಚರಣೆಯಲ್ಲಿ ಮೋದಿ, ಕೋವಿಂದ್ ಟ್ವೀಟ್:

ಈ ಸಂದರ್ಭದಲ್ಲಿ “ನಮ್ಮ ಆಗಸವನ್ನು ಕಾಯುತ್ತಿರುವ ವಾಯುಪಡೆ ಯೋಧರ ಧೈರ್ಯ, ಸಮರ್ಪಣೆ ಮತ್ತು ಬದ್ಧತೆಗೆ ನನ್ನ ವಂದನೆಗಳು”, ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ!!

ಸಾಹಸಶಾಲಿ ವಾಯುಪಡೆ ಯೋಧರು ಮತ್ತು ಅವರ ಕುಟುಂಬಗಳಿಗೆ ಏರ್ ಫೋರ್ಸ್‍ಡೇ ಶುಭಾಶಯಗಳು. ಅವರ ಸದೃಢತೆ ಮತ್ತು ಸಾಮಥ್ರ್ಯಗಳೇ ನಮ್ಮ ಆಗಸಕ್ಕೇ ಶ್ರೀರಕ್ಷೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ!

-ಅಲೋಖಾ

Tags

Related Articles

Close