ಪ್ರಚಲಿತ

ಭಾರತವನ್ನು ಕೊಲೆಗಡುಕರ ರಾಷ್ಟ್ರವೆನ್ನುವ ಪೆದ್ದಿಮಠದ ಉರಿಲಿಂಗನಿಗೆ ಪಿಎಫ್‍ಐ ಕೊಲೆಗಡುಕ ಸಂಘಟನೆ ಎನ್ನುವುದು ಮರೆತುಹೋಯಿತೇ?

ಅಧಿಕಾರದ ಆಸೆಗಾಗಿ, ತನ್ನ ಜೀವದ ಹಂಗಿಗಾಗಿ ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆಯಿಟ್ಟು ಕತ್ತಲ ಕೋಣೆಗೆ ನೂಕಿದ ಪುಕ್ಕಲ, ಸಾವಿರಾರು ಹಿಂದೂಗಳನ್ನು, ಕ್ರೈಸ್ತರನ್ನು ಕತ್ತರಿಸಿ ಕತ್ತರಿಸಿ ತುಂಡು ತುಂಡು ಮಾಡಿದ, ಚರ್ಚ್, ದೇವಸ್ಥಾನಗಳನ್ನು ಧ್ವಂಸ ಮಾಡಿದ ಇತಿಹಾಸ ಕಂಡ ಅತ್ಯಂತ ಕ್ರೂರಿ, ದುಷ್ಟ, ತಿಕ್ಕಲು ಮನುಷ್ಯ ಟಿಪ್ಪು ಸುಲ್ತಾನನ್ನು ಪಿಎಫ್‍ಐ ಭಯೋತ್ಪಾದಕರ ಸಮಾವೇಷದಲ್ಲಿ ಹೊಗಳುವ ಮೂಲಕ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಗಂಜಿಗಾಗಿ ತಿರುಪೆ ಎತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ.

ಪಿಎಫ್‍ಐ ಸಂಘಟನೆ ಭಯೋತ್ಪಾದಕ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಇರುವುದರಿಂದ ಗೃಹಸಚಿವಾಲಯ ಇದನ್ನು ನಿಷೇಧಿಸಲು ಮುಂದಾಗಿದೆ.
ಭಯೋತ್ಪಾದನೆ ಸೃಷ್ಟಿಸಲು ಬಾಂಬ್‍ಗಳ ತಯಾರಿ, ಟೆರರ್ ಕ್ಯಾಂಪ್‍ಗಳ ನಿರ್ವಹಣೆ, ಲವ್ ಜಿಹಾದ್ ಮುಂತಾದ ಅಪರಾಧ ಕೃತ್ಯಗಳಲ್ಲಿ ಪಿಎಫ್‍ಐ ತೊಡಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಗೃಹ ಸಚಿವಾಲಯಕ್ಕೆ ನಿಷೇಧಿಸುವಂತೆ ವರದಿ ಸಲ್ಲಿಸಿದೆ. `ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ಯಡಿಯಲ್ಲಿ ಈ ಸಂಘಟನೆ ನಿಷೇಧಕ್ಕೆ ಅರ್ಹವೆಂದು ಎನ್‍ಐಎ ವರದಿಯಲ್ಲಿ ಶಿಫಾರಸು ಕೂಡಾ ಮಾಡಿದೆ. ಆದರೆ ಭಯೋತ್ಪಾದಕರ ಸಮಾವೇಶದಲ್ಲಿ ಭಯೋತ್ಪಾದಕರನ್ನು ಹೊಗಳುವ ಮೂಲಕ ತಾನೂ ಕೂಡಾ ಭಯೋತ್ಪಾಕರ ಪರವಾಗಿರುವ ವ್ಯಕ್ತಿ ಎಂದು ಉರಿಲಿಂಗ ತೋರಿಸಿಕೊಟ್ಟಿದ್ದಾರೆ.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಶುರವಾಗಿದ್ದೇ 1857ರಲ್ಲಿ. ಬ್ರಿಟಿಷರು ಭಾರತಕ್ಕೆ ವಕ್ಕರಿಸಿದ್ದ ಸಂದರ್ಭದಲ್ಲಿ ಫ್ರೆಂಚರ ಜೊತೆ ಸೇರಿ ಬ್ರಿಟಿಷರ ಜೊತೆ
ಯುದ್ಧ ಮಾಡಿದ ಎಂಬ ಕಾರಣಕ್ಕೆ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುವ ಮೂರ್ಖತನ ನೋಡಿದರೆ ನಗು ಬರುತ್ತದೆ. ಟಿಪ್ಪು ಭಾರತದಲ್ಲಿ ಇಸ್ಲಾಂ ರಾಜ್ಯ ಸ್ಥಾಪನೆಗಾಗಿ ಬ್ರಿಟಿಷರನ್ನು ಸೋಲಿಸಲು ಪರ್ಷಿಯನ್, ತುರ್ಕಿ, ಅಫ್‍ಘನ್, ಅರೇಬಿಯಾದ ಮುಸ್ಲಿಂ ರಾಜರಿಗೆ ಪತ್ರ ಬರೆಯುತ್ತಿದ್ದ ವ್ಯಕ್ತಿಯ ಪ್ರತಿಮೆಯನ್ನು ಕೆಂಪುಪೇಟೆಯ ಮೇಲೆ ಇಡಬೇಕೆಂದು ಹೇಳುವ ಉರಿಲಿಂಗನಿಗೆ ಇಸ್ಲಾಂ ಬಗ್ಗೆ ಏನು ಗೊತ್ತಿದೆ.. ಇಸ್ಲಾಂನಲ್ಲಿ ಮೂರ್ತಿ ಪೂಜೆ ಮಾಡಬಾರದು ಎಂದು ಗೊತ್ತಿದ್ದರೂ ಮುಸ್ಲಿಮರ ಮುಂದೆಯೇ ನಿಂತು ಮೂರ್ತಿಪೂಜೆಯನ್ನು ಪ್ರತಿಪಾದಿಸುವ ಉರಿಲಿಂಗನಿಗೆ ಕಲ್ಲುಬೀಳದೇ ಇರುವುದು ಒಂದು ಪುಣ್ಯ….

ಭಾರತ ದನಗಳ ರಾಷ್ಟ್ರವಾಗಬಾರದು ಎನ್ನುವು ಉರಿಲಿಂಗ ಗೋಹತ್ಯೆಗೆ ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ ತಾನು ಉಟ್ಟಿರುವು ಕಾವಿಯ ಘನತೆಯನ್ನು
ಹಾಳು ಮಾಡಿದ್ದಾರೆ. ದೇಶದ ನೂರಾರು ಗೋತಳಿಗಳು ನಾಶವಾಗಿದೆ. ರೈತರ ಮನೆಗೆ ನುಗ್ಗಿ, ತಲವಾರು ಝಳಪಿಸಿ ಇಡೀ ಕುಟುಂಬದ ಆಧಾರ ಸ್ಥಂಬವಾಗುತ್ತಿದ್ದ ಗೋವುಗಳನ್ನು ಕದ್ದು ಮಾಂಸ ಮಾಡುವಾಗ ಈ ಉರಿಲಿಂಗ ಎಲ್ಲಿ ಅಡಗಿದ್ದರು.

ಈ ಉರಿಲಿಂಗನಿಗೆ ಭಯೋತ್ಪಾದಕರು ಎಂದರೆ ಯಾರು ಎಂದೇ ಇನ್ನೂ ಅಂದಾಜಾಗಿಲ್ಲ. ಎಲ್ಲಿ ಮುಸಲ್ಮಾನರ ಸಂಖ್ಯೆ ಕಡಿಮೆ ಇರುತ್ತದೋ ಅಲ್ಲಿ ಶಾಂತಿ ಇರುತ್ತದೆ. ಎಲ್ಲಿ ಮುಸಲ್ಮಾನರ ಸಂಖ್ಯೆ ಜಾಸ್ತಿ ಆಯಿತೋ ಅಲ್ಲಿ ಭಯೋತ್ಪಾದನೆಯೂ ಶುರುವಾಯಿತು. ಜಿಹಾದಿಯೊಬ್ಬ ಕತ್ತಿ ಹಿಡಿದು ಕಾಫಿರರನ್ನು ಕೊಲ್ಲುವುದು ಮುಸ್ಲಿಮನಾಗಿ ತನ್ನ ಕರ್ತವ್ಯದ ಒಂದು ಭಾಗ ಎಂದು ಭಾವಿಸಿ ಅದಕ್ಕಾಗಿ ಆತ ಸಾಯುವುದಕ್ಕೂ ರೆಡಿ ಇರುತ್ತಾನೆ. ಸಾವಿಗಂಜದೆ ಎದೆಯೊಡ್ಡುವ ಧೈರ್ಯವನ್ನು ಆತನಿಗೆ ಸಿಗುವಂತೆ ಮಾಡುವುದು ಯಾವುದು ಎಂದು ಸಮಾವೇಶದಲ್ಲಿ ಉರಿಲಿಂಗ ಕೇಳಬೇಕಿತ್ತು. ಒಂದಷ್ಟು ಜನರನ್ನು ಕೊಂದು, ತನ್ನನ್ನೂ ಕೊಂದುಕೊಳ್ಳುವ ಈ ಪ್ರಕ್ರಿಯೆಯಿಂದ ಪರಲೋಕದಲ್ಲಿ ಸಿಗುವ ಲಾಭ ದೊಡ್ಡದು ಎಂಬ ಮೂಢನಂಬಿಕೆಯನ್ನು ನಂಬುತ್ತಾ ಒಂದಷ್ಟು ಮಂದಿಯನ್ನು ಕೊಲ್ಲುವವರನ್ನು ಭಯೋತ್ಪಾದಕರಲ್ಲ ಎಂದು ಎದೆತಟ್ಟಿ ಹೇಳುವ ಉರಿಲಿಂಗನಿಗೆ ಇಸ್ಲಾಂ ಬಗ್ಗೆಯೂ ಗೊತ್ತಿಲ್ಲ, ಸರಿಕಟ್ ಹಿಂದೂ ಧರ್ಮದ ಬಗ್ಗೆಯೂ ಗೊತ್ತಿಲ್ಲ ಎಂದು ಅರ್ಥ ಮಾಡಿಕೊಳ್ಳಬಹುದು.

ಮೋದಿಯವರೇ ಪಿಎಫ್‍ಐ ಭಯೋತ್ಪಾದಕ ಸಂಘಟನೆಯಲ್ಲ, ದೇಶವನ್ನು ಒಡೆಯುತ್ತಿರುವ ನೀವು ನಿಜವಾದ ಭಯೋತ್ಪಾದಕರು ಎಂದು ಹೇಳುವ ಉರಿಲಿಂಗ
ಸ್ವಾಮೀಜಿಗೆ ದೇಶವನ್ನು ಒಡೆಯುವವರು ಯಾರು ಎಂದು ತಿಳಿಯುವ ಅಗತ್ಯವಿದೆ. ವೀರಶೈವ-ಲಿಂಗಾಯಿತರನ್ನು ಎತ್ತಿಕಟ್ಟಿ ಅವರನ್ನು ಪರಸ್ಪರ ಕಚ್ಚಾಡುವಂತೆ ಮಾಡಿದ ಸಿದ್ದು ಪಟಲಾಂ, ಮುಸ್ಲಿಮರಿಗೆ ಒಂದಷ್ಟು ಭಾಗ್ಯಗಳನ್ನು ಕೊಟ್ಟು, ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುವ ಕಾಂಗ್ರೆಸಿಗರು, ದಲಿತರನ್ನು ಹಿಡಿದುಕೊಂಡು ಓಟ್‍ಬ್ಯಾಂಕ್ ಭದ್ರಪಡಿಸುವವರ ಬಗ್ಗೆ ತಿಳಿಯದ ಉರಿಲಿಂಗ ಸ್ವಾಮಿಗೆ ನಿಜವಾಗಿಯೂ ದೇಶವನ್ನು ಒಡೆಯುವವರು ಯಾರು ಎಂಬ ಸತ್ಯ ಅರಿವಾಗಲಿಲ್ಲ…

ಭಾರತಕ್ಕೆ ಗಾಂಧಿ, ಸುಭಾಷ್‍ಚಂದ್ರ ಬೋಸ್ ಏನು ಮಾಡಿಲ್ಲ ಎಂದು ಹೇಳುವ ಮೂಲಕ ದೇಶದ ಸ್ವಾತಂತ್ರ್ಯಹೋರಾಟಗಾರರನ್ನು ನಿಂದಿಸಿದ ಉರಿಲಿಂಗ
ಸ್ವಾಮೀಜಿಯ ವಿರುದ್ಧ ಕರ್ನಾಟಕದ ಕಾಂಗ್ರೆಸಿಗರು ಪ್ರಕರಣ ದಾಖಲಿಸಿಯಾರೇ? ಅಷ್ಟಕ್ಕೂ ಈ ಉರಿಲಿಂಗನಿಗೆ ಸುಭಾಷ್‍ಚಂದ್ರ ಬೋಸ ಬಗ್ಗೆ ಏನುಗೊತ್ತಿದೆ? ಸುಭಾಷ್ ಚಂದ್ರ ಬೋಸರು ಭಾರತದ ಸ್ವಾತಂತ್ರ್ಯಕ್ಕಾಗಿ ಐಎನ್‍ಎ ಸ್ಥಾಪಿಸಿ ಬ್ರಿಟಿಷರೊಡನೆ ಯುದ್ಧ ಹೂಡಿ ಮಹಾನ್ ವ್ಯಕ್ತಿ. ಬ್ರಿಟಿಷರ ಜೊತೆ ಕೆಲಸ ಮಾಡುತ್ತಿದ್ದ ಭಾರತೀಯ ಸೈನಿಕರನ್ನು ದಂಗೆ ಏಳುವಂತೆ ಪ್ರೇರೇಪಣೆ ನೀಡಿ, ಸದಾ ಕಾಲ ಹೆದರುವಂತೆಯೇ ಮಾಡಿದ ಬೋಸರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಿಜವಾದ ವ್ಯಕ್ತಿ. ಅಷ್ಟಕ್ಕೂ ಉರಿಲಿಂಗನಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಏನು ಗೊತ್ತಿದೆ?

ನಿಜವಾದ ಭಯೋತ್ಪಾದಕ ಮೋದಿ ಎಂದು ಹೇಳುವ ಮೂಲಕ ಉರಿಲಿಂಗ ಪಿಎಫ್‍ಐ ಭಯೋತ್ಪಾದಕರನ್ನು ಓಲೈಸುವ ಕೆಲಸದಲ್ಲಿ ಉರಿಲಿಂಗ ತೊಡಗಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸಿ, ಭಾರತವನ್ನು ಇಸ್ಲಾಂ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವ ಪಿಎಫ್‍ಐ ಭಯೋತ್ಪಾದಕರ ಕೃತ್ಯಕ್ಕೆ ಮೋದಿ ಸರಕಾರ ಅಡ್ಡಗಾಲಾಗಿದೆ. ಒಂದು ವೇಳೆ ಭಾರತ ಇಸ್ಲಾಂ ಆದರೆ ಉರಿಲಿಂಗ ಸ್ವಾಮೀಜಿಗೆ ಈ ರೀತಿ ನಿಂತು ಮಾತಾಡಲು ಭಯೋತ್ಪಾದಕರು ಬಿಟ್ಟಾರೆಯೇ ಎಂದು ಅರ್ಥ ಮಾಡಿಕೊಳ್ಳಬೇಕು.

ಭಾರತವನ್ನು ಕೊಲೆಗಟುಕರ ಉರಿಲಿಂಗನಿಗೆ ಪಿಎಫ್‍ಐ ಕೊಲೆಗಟುಕ ಸಂಘಟನೆ ಎನ್ನುವುದು ಮರೆತುಹೋಯಿತೇ? ಬ್ಯಾನ್ ಆಗಲಿರುವ ಪಿಎಫ್‍ಐ ಸಂಘಟನೆ
ಇದುವರೆಗೆ ಹಲವಾರು ಅಮಾಯ ಹಿಂದೂಗಳ ರಕ್ತ ಹೀರಿದೆ. ಮೂಡಬಿದ್ರೆಯ ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿಯನ್ನು ತಂದೆಯೆದುರೇ ಕೊಲೆ ಮಾಡಿದ ಪಿಎಫ್‍ಐ ಬಗ್ಗೆ ಉರಿಲಿಂಗನಿಗೆ ಗೊತ್ತಿಲ್ಲವೇ? ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಜಯಂತಿಯ ನೆಪದಲ್ಲಿ ಕುಟ್ಟಪ್ಪನವರನ್ನು ಪಿಎಫ್‍ಐಯವರು ಕೊಂದಾಗ ಈ ಉರಿಲಿಂಗ ಎಲ್ಲಿ ಅಡಗಿಕೊಂಡಿದ್ದರು? ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಪಿಎಫ್‍ಐಯವರೇ ಕತ್ತರಿಸಿದ್ದು ಎಂದು ಉರಿಲಿಂಗನಿಗೆ ಅರ್ಥವಾಗದೇ ಹೋಯಿತಾ? ಕುಂಕುಮ ಇಟ್ಟುಕೊಂಡಿದ್ದ ನೆಪದಲ್ಲಿ ರಾಜುಕೋಟ್ಯಾನ್ ಅವರನ್ನು ಹತ್ಯೆ ಮಾಡಿದ ಭಯೋತ್ಪಾದಕ ಪಿಎಫ್‍ಐ ಸಂಘಟನೆಯ ಬಗ್ಗೆ ಉರಿಲಿಂಗ ಅರಿತುಕೊಂಡಿಲ್ಲವೇ? ಅನಧಿಕೃತ ಮಸೀದಿಯನ್ನು ತಡೆದ ಎಂಬ ಕಾರಣಕ್ಕಾಗಿ ಕ್ಯಾತಮಾರನಹಳ್ಳಿ ರಾಜುವನ್ನು ಕೊಂದಿರುವುದು, ಆರ್‍ಎಸ್‍ಎಸ್ ಎಂಬ ಕಾರಣಕ್ಕೆ ಶರತ್ ಮಡಿವಾಳನನ್ನು ಹತ್ಯೆ ಮಾಡಿದ ಪಿಎಫ್‍ಐ ಒಂದು ಶಾಂತಿಯುತ ಸಂಘಟನೆ ಎಂದು ಹೇಳುವ ಉರಿಲಿಂಗನಿಗೆ ಏನಾಗಿದೆ…

ಪಿಎಫ್‍ಐ ಮುಖಂಡ ಆಬಿದ್ ಪಾಶಾ ಎಂಬಾತನ ಮೇಲೆ ಸುಮಾರು ಐದು ಮಂದಿ ಹಿಂದೂಗಳನ್ನು ಕೊಲೆಗೈದ ಆರೋಪವಿದೆ. ಕೇರಳದಲ್ಲಿ ಫ್ರೊಫೆಸರ್
ಕೈಕಡಿದಿರುವುದು, ಕಣ್ಣೂರಿನಲ್ಲಿ ಸ್ಫೋಟಕ ತಯಾರಿ, ಇಸ್ಲಾಮಿಕ್ ಸ್ಟೇಟ್ ಅಲ್‍ಹಿಂದ್ ಜೊತೆ ಸೇರಿ ದೇಶದಲ್ಲಿ ಉಗ್ರ ಕೃತ್ಯ ನಡೆಸಲು ಮುಂದಾಗಿರುವ ಪಿಎಫ್‍ಐ ಇನ್ನು ಏನು ಹೇಳಲು ಬಾಕಿ ಇದೆ. ಸಿಮಿಯ ಇನ್ನೊಂದು ರೂಪವಾದ ಪಿಎಫ್‍ಐ ಕೂಡಾ ಭಯೋತ್ಪಾದಕ ಸಂಘಟನೆ ಎಂದು ಎಂದೋ ಬಹಿರಂಗಗೊಂಡಿದೆ.

ಪಿಎಫ್‍ಐ ಆರಂಭಗೊಂಡ ಬಳಿಕ ಅನೇಕ ಕೊಲೆ, ಕೋಮುಗಲಭೆಯಲ್ಲಿ ಶಾಮೀಲಾಗಿದೆ. ಇದುವರೆಗೆ ಸುಮಾರು 75 ಮಂದಿಯನ್ನು ಪಿಎಫ್‍ಐ ಕಾರ್ಯಕರ್ತರು
ಕೊಂದಿದ್ದಾರೆ. ಕೋಮುಗಲಭೆ ಎಬ್ಬಸಿದ 106ಕ್ಕಿಂತಲೂ ಅಧಿಕ ಪ್ರಕರಣಗಳು ಈ ಸಂಘಟನೆಯ ಮೇಲೆ ದಾಖಲಾಗಿದೆ. ದೇಶದಲ್ಲಿ ಹಲವಾರು ಕಡೆಗಳಲ್ಲಿ
ಭಯೋತ್ಪಾದನೆ ಸಂಚು ರೂಪಿಸಿರುವುದು, ಹಿಂದೂಗಳನ್ನು ಹೇಗೆ ಕೊಲ್ಲಬೇಕೆಂದು ನಾಯಿಗಳನ್ನು ಕೊಲ್ಲುವ ಮೂಲಕ ತರಬೇತಿ ನೀಡಿದ ಸಂಘಟನೆ ಇದು.
ಮತಾಂತರ ಕೇಂದ್ರದಿಂದ ಹಿಂದೂಗಳನ್ನು ರಕ್ಷಿಸಿದರು ಎಂಬ ಕಾರಣಕ್ಕೆ ಈಕೆಯನ್ನು ಅಪಹರಿಸಿ ಐಸಿಸ್‍ಗೆ ಮಾರುವುದಾಗಿ ಪೋಸ್ಟರ್ ಹಾಕಿದ, ಐಸಿಸ್ ತರಬೇತಿ ಪಡೆದು ವಾಪಸ್ ಬರುವಾಗ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದವರು ಯಾರು ಎಂದು ಗೊತ್ತಿಲ್ಲದ ಈ ಉರಿಲಿಂಗ ಅವರ ಸಮಾವೇಶದಲ್ಲಿ ನಿಂತು ಭಾಷಣ ಮಾಡುವುದನ್ನು ನೋಡಿದಾಗ ಅಯ್ಯೋ ಎನಿಸುತ್ತದೆ. ಪಿಎಫ್‍ಐನಿಂದ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಅನೇಕ ಮಂದಿ ಗಂಜಿಗಿರಾಕಿಗಳು ವೇದಿಕೆ ಮೇಲಿದ್ದರು. ಭಯೋತ್ಪಾದನೆ ಸೃಷ್ಟಿಸುವವರು, ಭಯೋತ್ಪಾದನೆ ಪ್ರೋತ್ಸಾಹಿಸುವವರು ಕೂಡಾ ಭಯೋತ್ಪಾದಕರೇ ಎಂದು ಅರ್ಥ ಉರಿಲಿಂಗ ಅರ್ಥಮಾಡಿಕೊಳ್ಳುವುದು ಒಳಿತು.

ಪ್ರೊಫೆಸರ್ ಭಗವಾನ್ ಶ್ರೀರಾಮ ತಂದೆಗೆ ಹುಟ್ಟಿದ ಮಗ ಅಲ್ಲ ಎಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಜನ್ಮದಿನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳುತ್ತಿದ್ದಾಗ ಇದೇ ಉರಿಲಿಂಗ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದ. ಜೊತೆಗೆ ಮಹಾಭಾರತ ಓದಿ ಯಾರೂ ಕೂಡಾ ಒಳ್ಳೆಯ ವ್ಯಕ್ತಿಗಳಾಗಿಲ್ಲ ಎಂದಿದ್ದರು.

ಮೋದಿಯವರ ಸ್ವಚ್ಛಭಾರತ ಅಭಿಯಾನವನ್ನು ಖಂಡಿಸಿದ್ದ ಉರಿಲಿಂಗ ತಿಪ್ಪೆಗೆ ಸೆಂಟ್ ಹೊಡೆದಂತೆ ಸ್ವಚ್ಛಭಾರತ ಅಭಿಯಾನ ಎಂದು ಹೇಳಿದ್ದರು. ಈ ದೇಶ ಮಾಂಸ ತಿಂದವರಿಂದ ಹಾಳಾಗಿಲ್ಲ, ಬದಲಿಗೆ ತುಪ್ಪ ತಿಂದವರಿಂದ ಹಾಳಾಗಿದೆ ಎಂದೆಲ್ಲಾ ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಲು ಗಿಮಿಕ್ ಮಾಡುತ್ತಿದ್ದ ಉರಿಲಿಂಗನಿಗೆ ಪಿಎಫ್‍ಐ ಭಯೋತ್ಪಾದಕರು ಒಂದು ಅವಕಾಶ ಮಾಡಿಕೊಟ್ಟರು. ಇಲ್ಲಿ ಅವರು ದೇಶದ ಇತಿಹಾಸವನ್ನು ಅಧ್ಯಯನ ಮಾಡದೆ, ತನ್ನದೇ ಆದ ಹಿಸ ಇತಿಹಾಸವನ್ನು ಸೃಷ್ಟಿಸಿ ಅದನ್ನು ಪಿಎಫ್‍ಐ ಭಯೋತ್ಪಾದಕರ ಸಮಾವೇಷದಲ್ಲಿ ವಾಂತಿ ಮಾಡಿಕೊಂಡರು. ಇದೇ ವಾಂತಿಯನ್ನು ಅಲ್ಲಿ ನೆರೆದಿದ್ದ ಭಯೋತ್ಪಾದಕರು ಪ್ರೋಕ್ಷಣೆ ಮಾಡಿಕೊಂಡರು… ಅಂತೂ ಇಂತೂ ಗಂಜಿಗಿರಾಕಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಗೊಂಡಿತು.

Source:http://www.udayavani.com/kannada/news/state-news/244324/india-is-a-country-of-murderers-swamiji-at-pfi-convention

ಚೇಕಿತಾನ

Tags

Related Articles

Close