ಇಡೀ ದೇಶವನ್ನು ಹಾಗೂ ಕರ್ನಾಟಕವನ್ನು ನಾನು ಬದುಕಿರುವವರೆಗೂ ಹಿಂದೂ ರಾಜ್ಯವನ್ನಾಗಲು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಹೇಳಿದ್ದಾರೆ. ಈ ಮೂಲಕ ದೇವೇಗೌಡರು ಮುಂದಿನ ಚುನಾವಣೆಯಲ್ಲಿ ತನಗೆ ಹಿಂದೂಗಳ ಓಟು ಬೇಡ ಎಂದು ಸೂಚ್ಯವಾಗಿ ಹೇಳಿದ್ದಾರೆ. ತನ್ನ ಅಧಿಕಾರವಧಿಯಲ್ಲಿ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುತ್ತಿದ್ದ ಇದೇ ದೇವೇಗೌಡರ ಬಾಯಿಯಿಂದ ಇದಕ್ಕಿಂತ ಚಂದವಾದ ಅಣಿಮುತ್ತು ಉದುರಲು ಖಂಡಿತಾ ಸಾಧ್ಯವಿಲ್ಲ.
ನಿಮಗೆ ನೆನಪಿದೆಯೋ ಇಲ್ಲ್ವೋ ಗೊತ್ತಿಲ್ಲ. ಒಮ್ಮೆ ದೇವೇಗೌಡರ ಪಕ್ಷದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಕ್ಕಿರಲಿಲ್ಲ. ಆಗ ಗೌಡ್ರು ಯಾರಾದರೂ ಬಂದು ಬಿ ಫಾರಂ
ತೆಗೆದುಕೊಂಡು ಹೋಗಿ ಪಕ್ಷದ ಮರ್ಯಾದೆ ಉಳಿಸಿ ಎಂದು ಅಂಗಲಾಚಿದ್ದರು. ಮುಸ್ಲಿಮರ ಪರವಾಗಿ ಎಷ್ಟೇ ಮಾತಾಡಿದರೂ ಯಾವ ಮುಸ್ಲಿಮರು ಕೂಡಾ
ದೇವೇಗೌಡರ ಪಕ್ಷಕ್ಕೆ ಓಟೇ ಹಾಕಲಿಲ್ಲ. ಒಂದು ವೇಳೆ ಮುಸ್ಲಿಮರು ಓಟು ಹಾಕಿದ್ದರೆ ದೇವೇಗೌಡನ ಪಕ್ಷ ಹೀನಾಯವಾಗಿ ಸೋಲುತ್ತಿರಲಿಲ್ಲ.
ಯಾದಗಿರಿಯ ಶಹಾಪುರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, ರಾಜ್ಯ ಸೇರಿದಂತೆ ಇಡೀ ದೇಶವನ್ನು ಹಿಂದೂ
ರಾಷ್ಟ್ರವನ್ನಾಗಿ ಮಾಡುವ ಹಗಲುಗನಸು ಪ್ರಧಾನಿ ನರೇಂದ್ರ ಮೋದಿ ಕಾಣುತ್ತಿದ್ದಾರೆ. ಆದರೆ ಇಡೀ ದೇಶವನ್ನು ಹಾಗೂ ಕರ್ನಾಟಕವನ್ನು ನಾನು ಬದುಕಿರುವವರೆಗೂ ಹಿಂದೂ ರಾಜ್ಯವನ್ನಾಗಲು ಬಿಡುವುದಿಲ್ಲ ಎಂದು ಹೇಳಿ ಇಡೀ ಹಿಂದೂಗಳ ಪಾಲಿಗೆ ಕೋಪಕ್ಕೆ ತುತ್ತಾಗಿದ್ದಾರೆ. ಮುಸ್ಲಿಮರನ್ನು ಓಲೈಕೆ ಮಾಡಲು ಬಾಯಿಗೆ ಬಂದಂತೆ ಒದರುವ ದೇವೇಗೌಡರಿಗೆ ಹಿಂದೂಗಳು ಯಾಕಾಗಿ ಮತ ನೀಡಬೇಕು ಎಂದು ಹಿಂದೂಗಳು ಅಲೋಚಿಸುವಂತಾಗಿದೆ. ಮೋದಿಯ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿರುವ ಗೌಡ್ರು ತನ್ನ ರಾಜಕೀಯ ಜೀವನಕ್ಕೆ ತಾವೇ ಚಪ್ಪಡಿಕಲ್ಲು ಎಳೆಯುತ್ತಿದ್ದಾರೆ.
ಅವರ ಮುಂದಿನ ಮಾತು ಹೇಗಿದೆ ಗಮನಿಸಿ… ಕಾರವಾರದ ಬೆಂಕಿಯುಂಡೆಯನ್ನು ಕೇಂದ್ರದ ಸಚಿವರನ್ನಾಗಿ ಮಾಡಿ ಕಳುಹಿಸಿರುವೆ ಎಂಬ ಬಿಜೆಪಿ ಮುಖಂಡರ ಜಂಬದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮಂಗಳೂರಿನಲ್ಲಿ ಕ್ರೈಸ್ತರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಕೋಮು ಭಾವನೆ ಕೆರಳಿಸಿ ಸಾಮರಸ್ಯ ಜೀವನಕ್ಕೆ ಧಕ್ಕೆ ತಂದಿರುವುದು ಸರಿಯಲ್ಲ. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ. ಕೋಮು ಗಲಭೆ ಹತ್ತಿಕ್ಕುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಅವರು ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಜನತೆ ಸುಖ ಶಾಂತಿಯಿಂದ ನೆಮ್ಮದಿಯ ಬದುಕು ಸಾಗಿಸಲು ಬಿಡಿ. ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳ
ಅರಾಜಕತೆಯಿಂದ ಜನತೆ ನೆಮ್ಮದಿ ಕಾಣದಂತಾಗಿದೆ. ಕೋಮು ಗಲಭೆಯ ತಾಣವಾಗಿದ್ದ ಈದ್ಗಾ ಮೈದಾನ ಸಮಸ್ಯೆ ಬಗೆಹರಿಸಿದ ನಂತರ ಇಂದು ಲಕ್ಷಾಂತರ ಮುಸ್ಲಿಂ ಬಂಧುಗಳು ಪ್ರಾರ್ಥನೆ ಮಾಡುವಂತಾಗಿದೆ. ಇದನ್ನು ಎರಡೂ ಸರಕಾರಗಳು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಮುಸ್ಲಿಂ ಮತಗಳನ್ನು ಕಣ್ಣಿಟ್ಟು ಮಾತಾಡಿದ್ದಾರೆ. ಇಷ್ಟೆಲ್ಲಾ ಮುಸ್ಲಿಂ ಓಲೈಕೆ ಮಾಡಿದರೂ ಮುಂದಿನ ಬಾರಿ ಇವರಿಗೆ ಮುಸ್ಲಿಮರು ಓಟು ಹಾಕುತ್ತಾರಾ ಎನ್ನುವುದೇ ದೊಡ್ಡ ಡೌಟು…
ಈ ಮುಂಚೆ ದೇವೇಗೌಡರು ನಾನು ಪುನರ್ಜನ್ಮವಿದ್ದರೆ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದರು. ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂಗಳಿಗೆ ಮನಸೋ ಇಚ್ಛೆ ಬೈಯ್ಯುವ ಇದೇ ದೇವೇಗೌಡನಿಗೆ ಹಿಂದೂ ಧರ್ಮದ ಮೇಲೆ ಅಭಿಮಾನವಿಲ್ಲ.
ಕಳೆದ 2012ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಜೆಡಿಎಸ್ ಹಮ್ಮಿಕೊಂಡಿದ್ದ ಮುಸ್ಲಿಂ ವಿಶೇಷ ಸಮಾವೇಶದಲ್ಲಿ ಇದೇ ದೇವೇಗೌಡ, “ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಕ್ಕೆ ನಮ್ಮ ಕುಟುಂಬಕ್ಕೆ ಶಾಪ ತಟ್ಟಿದೆ. ನಮ್ಮ ಕುಟುಂಬಕ್ಕೆ ತಟ್ಟಿರುವ ಶಾಪ ವಿಮೋಚನೆ ಆಗಬೇಕು. ಮುಸ್ಲಿಂ ಧರ್ಮ ಗುರುಗಳು ಆಶೀರ್ವಾದ ಮಾಡಿ. ಈ ಮುಸ್ಲಿಂ ಬೃಹತ್ ಸಮಾವೇಶದ ಮೂಲಕ ನಮ್ಮ ಶಾಪ ವಿಮೋಚನೆ ಆಗಿದೆ ಎಂದಿದ್ದರು. ಬಿಜೆಪಿ ಜೊತೆ ಸೇರಿ ಸರಕಾರ ರಚಿಸಿ ಕೊನೆಗೆ ಬಿಜೆಪಿಗೆ ಕೈಕೊಟ್ಟು ಅಧಿಕಾರದ ರುಚಿ ಅನುಭವಿಸಿದ ಈ ದೇವೇಗೌಡನಿಗೆ ಆಗ ಮುಸ್ಲಿಮರ ಯೋಚನೆ ಬರಲಿಲ್ಲ.
ದೇವೇಗೌಡರ ಪಕ್ಷದ ಸ್ಥಿತಿ ಯಾವ ಸ್ಥಿತಿಗೆ ತಲುಪಿದೆ ಎಂದರೆ ಇಂದು ರಾಜ್ಯದ ಹಲವು ಭಾಗಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಯೇ ಸಿಗುತ್ತಿಲ್ಲ. ಈ ವೇಳೆ ದೇವೇಗೌಡರು `ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಜೆಡಿಎಸ್ ಉಳಿಸಿಕೊಂಡು ಹೋಗಿ. ಪಕ್ಷ ಮತ್ತೆ ಅಧಿಕಾರಕ್ಕೆ ಬರುವವರೆಗೂ ಬದುಕಿರುತ್ತೇನೆ. ಆಗ ಇಡೀ ರಾಜ್ಯ ಸುತ್ತುತ್ತೇನೆ’ ಎಂದು ಬೇಡಿಕೊಂಡಿದ್ದರು. `ಉಪಚುನಾವಣೆಗೆ ಸ್ಪರ್ಧಿಸಲು ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ. ರಾಯಚೂರಿನಲ್ಲಿ ಇಬ್ಬರು ಶಾಸಕರು ಇದ್ದರೂ ಕೂಡ ದೇವದುರ್ಗದಲ್ಲಿ ಅಭ್ಯರ್ಥಿ ಸಿಗುತ್ತಿಲ್ಲ. ಹೆಬ್ಬಾಳದಲ್ಲಿ ಜಮೀರ್ ಯಾರ್ಯಾರನ್ನೋ ಕರೆದುಕೊಂಡು ಬರೋಕೆ ಪ್ರಯತ್ನಿಸಿದರೂ ಅದು ಆಗುತ್ತಿಲ್ಲ. ಯಾರಾದರೂ ಬಂದು ಬಿ ಫಾರಂ ತೆಗೆದುಕೊಂಡು ಹೋಗಿ ಪಕ್ಷದ ಮರ್ಯಾದೆ ಉಳಿಸಿ. ಯಾವ ಮುಸ್ಲಿಮರಿಗೂ ಮೋಸ ಮಾಡಿಲ್ಲ..’ ಎಂದು ಅಂಗಲಾಚಿದ್ದರು.
ಇಷ್ಟೆಲ್ಲಾ ಬೇಡಿದರೂ ಯಾವ ಮುಸ್ಲಿಮರು ಕೂಡಾ ದೇವೇಗೌಡರ ಪಕ್ಷಕ್ಕೆ ಓಟೇ ಹಾಕಲಿಲ್ಲ. ಒಂದು ವೇಳೆ ಮುಸ್ಲಿಮರು ಓಟು ಹಾಕಿದ್ದರೆ ದೇವೇಗೌಡನ ಪಕ್ಷ
ಹೀನಾಯವಾಗಿ ಸೋಲುತ್ತಿರಲಿಲ್ಲ. ಸ್ವತಃ ಮುಸ್ಲಿಮರಿಂದಲೇ ಸಾಕಷ್ಟು ಅವಗಣನೆಗೊಳಗಾಗಿರುವ ಈ ದೇವೇಗೌಡ ಆದರೂ ಮುಸ್ಲಿಮರ ಪರವಾಗಿ ಬಕೆಟ್
ಹಿಡಿಯುವುದನ್ನು ಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಯೋಚಿಸುತ್ತಿರುವ ಗೌಡ್ರಿಗೆ ಕಾಂಗ್ರೆಸಿಗರಂತೆ ಮಾತಾಡದೆ ವಿಧಿ ಇಲ್ಲ. ಅದಕ್ಕಾಗಿಯೇ ಇಂದು ಹಿಂದೂಗಳ ವಿರುದ್ಧ ಮಾತಾಡುತ್ತಾ ಹಿಂದೂ ವಿರೋಧವನ್ನು ಕಟ್ಟುತ್ತಿದ್ದಾರೆ.
ಈ ಮುಂಚೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬಗ್ಗೆ ಮಾತಾಡಿದ್ದ ದೇವೇಗೌಡ, ಕಲ್ಲಡ್ಕ ಪ್ರಭಾಕರ್ ಭಟ್‍ರನ್ನು ಸರಕಾರವು ಬಂಧಿಸುವ ವ್ಯವಸ್ಥೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ. ಕಲ್ಲಡ್ಕ ಪ್ರಭಾಕರ ಭಟ್‍ರ ಕುರಿತಾದಂತೆ ನನಗೆ ಮೊದಲೇ ಗೊತ್ತಿದೆ. ಅವರು ಕೆಲವು ತಪ್ಪುಗಳನ್ನೂ ಮಾಡಿದ್ದಾರೆ. ಪ್ರಭಾಕರ್ ಭಟ್ ನೇತೃತ್ವದ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಲಯಕ್ಕೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಅಕ್ರಮ ಅನುದಾನವನ್ನು ಕಡಿತ ಮಾಡಿ ರಾಜ್ಯ ಸರಕಾರ ಸರಿಯಾದ ನಿರ್ಧಾರವನ್ನು ಕೈಗೊಂಡಿದೆ. ಅವರನ್ನು ಶೀಘ್ರವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದರು. ಸರಕಾರ ಮಕ್ಕಳ ಅನ್ನ ಕಸಿದಾಗ ದೂರದಲ್ಲಿ ನಿಂತು ವಿಕಟ ನಗೆ ಬೀರಿದ್ದ ದೇವೇಗೌಡನಿಗೆ ಬಡ ಮಕ್ಕಳ ಹಸಿವಿನ ನೆನಪಾಗಲಿಲ್ಲ. ಇಂತಹಾ ದೇವೇಗೌಡರ ಬಾಯಲ್ಲಿ ಹಿಂದೂ ವಿರೋಧಿ ಹೇಳಿಕೆ ನಿರೀಕ್ಷಿಸುವಂಥದ್ದೇ.
2014ರ ಲೋಕಸಭಾ ಚುನಾವಣೆಯ ಮುನ್ನ ದೇವೇಗೌಡರು, `ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ಕರ್ನಾಟಕವನ್ನು ತೊರೆಯುತ್ತೇನೆ… ಎಂದಿದ್ದರು. ಆದರೆ ಮೋದಿ ಪ್ರಧಾನಿ ಗದ್ದುಗೆಯಲ್ಲಿ ಕೂತು ಯಶಸ್ವಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಇಷ್ಟು ವರ್ಷಗಳಾದರೂ ದೇವೇಗೌಡ ಕರ್ನಾಟಕವನ್ನು ತೊರೆಯುವುದು ಕಾಣುತ್ತಿಲ್ಲ.
`ನರೇಂದ್ರ ಮೋದಿ ಒಬ್ಬ ಕೋಮುವಾದಿ, 2002ರ ಗುಜರಾತ್ ಗಲಭೆಗೆ ಮೋದಿಯೇ ಕಾರಣ’ ಎಂದೆಲ್ಲಾ ಹೇಳಿದ್ದರು. ಅಲ್ಪಸಂಖ್ಯಾತರು ಭಾರತದಲ್ಲಿ ಭಯದಿಂದ ಬದುಕುತ್ತಿದ್ದಾರೆ, ಅಲ್ಪಸಂಖ್ಯಾತರ ಮೇಲೆ ಹಿಂದೂಗಳಿಂದ ದೌರ್ಜನ್‍ಯ ನಡೆಯುತ್ತಿದೆ ಎಂದು ತುತ್ತೂರಿ ಊದಿದ್ದರು. ತಮ್ಮನ್ನು ತಾವು `ಜಾತ್ಯತೀತ’ ಎಂದು ಕರೆಸಿಕೊಂಡು, ಮುಸ್ಲಿಮರು ತಮ್ಮನ್ನು ಬೆಂಬಲಿಸಬೇಕೆಂದು ಕೇಳಿಕೊಂಡು, ಅಲ್ಪಸಂಖ್ಯಾತ ಎಂಬ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಭಾರೀ ಜಬರ್ದಸ್ತಿನಿಂದ ಮಾಡುತ್ತಿದ್ದಾರೆ.
ಹಿಂದೂಗಳು ಸತ್ತಾಗ ಕಣ್ಣೀರು ಹಾಕದ, ಹಿಂದೂಗಳ ವಿರುದ್ಧ ಮಾತಾಡುವ ಈ ದೇವೇಗೌಡರಿಗೆ ಹಿಂದೂಗಳು ಯಾಕಾದರೂ ಓಟು ಹಾಕಬೇಕು?
-ಚೇಕಿತಾನ