ಅಂಕಣ

ಭಾರತೀಯ ಸಂಸ್ಕ್ರತಿಯಲ್ಲಿರುವ 16 ಮೂಢನಂಬಿಕೆಗಳ ಹಿಂದಿರುವ ಅದ್ಭುತ ಕಾರಣಗಳು ಯಾವುದು ಗೊತ್ತೇ?!

ಭಾರತದ ಹಿಂದೂ ಧರ್ಮದಲ್ಲಿ ತಮ್ಮದೇ ಆದ ವಂಶಪಾರಂಪರಿಕ ಸಂಪ್ರದಾಯಗಳು, ಆಚಾರ ವಿಚಾರಗಳು ಲೆಕ್ಕವಿಲ್ಲದಷ್ಟಿವೆ. ಅದರಲ್ಲಿ ಮೂಢನಂಬಿಕೆಗಳು ಕೂಡ ಭಾರತದ ಹಿಂದೂ ಧರ್ಮದಲ್ಲಿ ತಮ್ಮದೇ ಆದ ವಂಶಪಾರಂಪರಿಕ ಸಂಪ್ರದಾಯಗಳು, ಆಚಾರ ವಿಚಾರಗಳು ಲೆಕ್ಕವಿಲ್ಲದಷ್ಟಿವೆ. ಅದರಲ್ಲಿ ಮೂಢನಂಬಿಕೆಗಳು ಕೂಡ ಒಂದು ಪ್ರಮುಖ ಅಂಶ! ಒಡೆದ ಗಾಜಿನಿಂದ ಹಿಡಿದು ತೋರಣಕ್ಕೆ ಕಟ್ಟುವ ಲಿಂಬೆ, ಮೆಣಸಿನಕಾಯಿಯಲ್ಲೂ ಮೂಢನಂಬಿಕೆಗಳಿವೆ. ಹೌದು! ಮೂಢನಂಬಿಕೆಗಳನ್ನು ಆಧುನಿಕ ಜನರು ತಿರಸ್ಕರಿಸಿ, ಅವುಗಳನ್ನು ಹಾಸ್ಯಾಸ್ಪದವಾಗಿ ಕಾಣುತ್ತಾರೆ.. ಆದರೆ ನಮ್ಮ ಪೂರ್ವಜರು ಏನೇ ಮಾಡಿದರು ಅದರಲ್ಲೊಂದು ಅರ್ಥ ಇದ್ದೇ ಇರುತ್ತಿತ್ತು, ನಾವದನ್ನು ಸರಿಯಾಗಿ ಅರಿತಿಲ್ಲ ಅಷ್ಟೇ.. ಹಿರಿಯರು ಏನೇ ಮಾತನಾಡಿದರು ಅದನ್ನು ತಿರಸ್ಕರಿಸುವ ನವ ಪೀಳಿಗೆಗಳು ಅದರೊಳಗಿರುವ ಒಳ ಅರ್ಥವನ್ನು ಅರಿಯಲು ಪ್ರಯತ್ನಿಸುವುದಿಲ್ಲ.. “ಆಕ್ಸಫರ್ಡ್ ಡಿಕ್ಷನರಿ”  ಮೂಢನಂಬಿಕೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ನೀಡಿದೆ. ಹಾಗೂ ಮೂಢನಂಬಿಕೆಗೆ ಇಲ್ಲಿ ವೈಜ್ಞಾನಿಕವಾಗಿ ಅರ್ಥವನ್ನು ನೀಡಲಾಗಿದೆ. ಅಲೌಕಿಕ ಪ್ರಭಾವಗಳ ಬಗ್ಗೆ ನಂಬಿಕೆಯನ್ನು ವ್ಯಕ್ತಪಡಿಸಲಾಗಿದ್ದು ಅದರಲ್ಲೂ ಪ್ರಮುಖವಾಗಿ ಅದರಲ್ಲಿರುವ ಒಳಿತು-ಕೆಡುಕುಗಳ ಬಗ್ಗೆ ವಿವರಿಸಲಾಗಿದೆ. ನಮಗೆ ಮೂಢನಂಬಿಕೆಯ ಬಗ್ಗೆ ನಂಬಿಕೆ ಇದೆಯೋ, ಇಲ್ಲವೋ ಎಂಬುವುದಕ್ಕೆ ಇಲ್ಲಿ ತರ್ಕದ ವಿವರಣೆಗಳಿವೆ, ಹಾಗೂ ಮೂಢನಂಬಿಕೆಯಲ್ಲಿ ಹಲವಾರು ವೈಜ್ಞಾನಿಕ ಕಾರಣಗಳು ಅಡಗಿವೆ.

ನಡೆವ ದಾರಿಗೆ ಬೆಕ್ಕು ಅಡ್ಡಲಾಗಿ ಬಂದರೆ ಅದು ಅಪಶಕುನ?

ಹೌದು! ನಡೆವ ದಾರಿಗೆ ಬೆಕ್ಕು ಅಡ್ಡಬಂದರೆ ಅದು ಅಪಶಕುನ? ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ, ನಮ್ಮ ಪೂರ್ವಜರು ಯಾವುದೇ ಶಕುನದ ಬಗ್ಗೆ ಕಾರಣವಿಲ್ಲದೆ ಸುಳ್ಳು ಸುದ್ಧಿ ಹಬ್ಬಿಸಿಲ್ಲ, ಆಗಿನ ಜನರು ಮುಗ್ದರು ಅವರಿಗೆ ವಿದ್ಯಾಭ್ಯಾಸದ ಕೊರತೆ ಇತ್ತು. ಅದರಿಂದ ಆಗಿನ ಕೆಲ ಜ್ಞಾನಿಗಳು ಈ ರೀತಿಯಾಗಿ ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಾಚೀನ ಕಾಲದಲ್ಲಿ, ಜನರು ಒಂದುಕಡೆಯಿಂದ ಇನ್ನೊಂದು ಕಡೆಗೆ, ಪ್ರಯಾಣಿಸುವಾಗ ಎತ್ತಿನ ಹಾಗೂ ಕುದುರೆ ಗಾಡಿಗಳನ್ನು ಬಳಸುತ್ತಿದ್ದರು. ಈ ಸಂದರ್ಭದಲ್ಲಿ ರಾತ್ರಿ ವೇಳೆ ಇವರಿಗೆ ಕಾಡು ಬೆಕ್ಕು ದಾರಿ ಮದ್ಯೆ ದಾಟುತ್ತಿತ್ತು. ಅದರ ಕಣ್ಣಿಂದ ಹೊರ ಬರುವ ಬೆಳಕನ್ನು ಕಂಡು ಗಾಡಿಗೆ ಕಟ್ಟಿದ ಪ್ರಾಣಿಗಳು ಹೆದರಿ ಓಡಲಾರಂಬಿಸುತ್ತಿತ್ತು. ಈ ಅಪಾಯವನ್ನು ತಡೆಯಲು ಮುಂದೆ ಬೆಕ್ಕು ದಾರಿಗೆ ಅಡ್ಡಲಾದರೆ ಅದು ಅಪಶಕುನ ಎಂದು ಹೇಳಲಾಗಿ ನಂತರ ಅದನ್ನೇ ಮುಂದುವರಿಸಿಕೊಂಡು ಬರಲಾಯಿತು.


ಸೂರ್ಯಗ್ರಹಣದ ಸಂದರ್ಭದಲ್ಲಿ ಮನೆಯಿಂದ ಹೊರ ಕಾಲಿಡಬಾರದು?
ನಂಬಿಕೆಯ ಪ್ರಕಾರ ಸೂರ್ಯಗ್ರಹಣದ ವೇಳೆ ಮನೆಯಿಂದ ಹೊರಹೊಗಬಾರದು. ರಾಹು ಸೂರ್ಯದೇವರನ್ನು ನುಂಗುವುದನ್ನು ನೋಡಬಾರದು. ಅದು ಅಪಶಕುನ ಎಂದು ನಂಬಲಾಗಿದೆ. ಆದರೆ ಇಲ್ಲಿ ನಾವು ವೈಜ್ಞಾನಿಕವಾಗಿ ಇದರಿಂದ ಅರಿತಿರಬೇಕಾದ ವಿಷಯವೇನೆಂದರೆ? ಗ್ರಹಣದ ಸಂದರ್ಭದಲ್ಲಿ ಭೂಮಿಗೆ ಸೂಕ್ಷ್ಮ ವಿಕಿರಣಗಳು ಬೀಳುವುದು, ಅದು ಬಹಳ ಅಪಾಯಕಾರಿಕಿರಣಗಳಾಗಿದ್ದು, ಅವುಗಳು ಜೀವರಾಶಿಗಳಿಗೆ ತೊಂದರೆಯನ್ನುಂಟುಮಾಡುತ್ತದೆ. ಅದರಲ್ಲೂ ಪ್ರಮುಖವಾಗಿ ಮನುಷ್ಯರ ಆರೋಗ್ಯಕ್ಕೆ ಮತ್ತಷ್ಟೂ ಅಪಯಾಕಾರಿ.


ಉತ್ತರ-ದಿಕ್ಕಿಗೆ ತಲೆ ಹಾಕಿ ಮಲಗಬಾರದು?
ನಮ್ಮ ಪೂರ್ವಜರಿಗೆ ಭೂಮಿ ಹಾಗೂ ಅದರ ಗುಣಗಳ ಅರಿವಿತ್ತು, ಅದರಲ್ಲೂ ಪ್ರಮುಖವಾಗಿ ಭೂಮಿಯ ಅಯಸ್ಕಾಂತೀಯ ಗುಣದ ಬಗ್ಗೆಯು ಅವರಿಗೆ ತಿಳಿದಿತ್ತು ಹಾಗೂ ಇದರಿಂದ ಮಾನವನ ದೇಹದ ಮೇಲಾಗುವ ಪರಿಣಾಮದ ಬಗ್ಗೆಯು ತಿಳಿದಿತ್ತು. ವೈಜ್ಞಾನಿಕವಾಗಿ ತಿಳಿದು ಬರುವುದೇನೆಂದರೆ ಉತ್ತರ ದಿಕ್ಕು ಅತೀ ಹೆಚ್ಚು
ಅಯಸ್ಕಾಂತೀಯ ಗುಣವನ್ನು ಹೊಂದಿದೆ. ಆ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಮ್ಮ ದೇಹದ ರಕ್ತಸಂಚಲನದಲ್ಲಿ ಏರುಪೇರಾಗುತ್ತದೆ, ಇದು ಜೀವಕ್ಕೆ
ಅಪಾಯಕಾರಿ. ಅದರಿಂದ ನಾವು ಪೂರ್ವದಿಕ್ಕಿಗೆ ತಲೆಹಾಕಿ ಮಲಗುವುದರಿಂದ ನಮ್ಮ ದೇಹದ ಅಯಸ್ಕಾಂತೀಯ ಗುಣವನ್ನು ಸರಿಪಡಿಸಿ ಕೊಳ್ಳಬಹುದು.


ಮಂಗಳವಾರ ಕೂದಲು ಕತ್ತರಿಸಬಾರದು?
ಹಿಂದಿನಕಾಲದಲ್ಲಿ ನಮ್ಮ ರೈತರು ವಾರಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೂಡಗಿರುತ್ತಿದ್ದರು, ಸೋಮವಾರದಂದು ವಿಶ್ರಾಂತಿ ಪಡೆಯುವ ದಿನವಾಗಿತ್ತು. ಆ ದಿನ ಮನೆ ಕೆಲಸದ ಜೊತೆಗೆ ಆ ದಿನವೇ ಕೂದಲು ಕತ್ತರಿಸಿಕೊಳ್ಳುತ್ತಿದ್ದರು.. ಕ್ಷೌರಿಕನು ಆ ದಿನ ತುಂಬಾ ಸುಸ್ತಾಗಿ ಮಾರನೇ ದಿವಸ ಅಂದರೆ ಮಂಗಳವಾರ ಅಂಗಡಿ ಬಾಗಿಲು ಮುಚ್ಚುತ್ತಿದ್ದ. ಕಾಲಾನಂತರ ಅದುವೇ ರೂಢಿಯಾಗಿ ಮುಂದುವರಿದು ಮಂಗಳವಾರ ಕೂದಲು ತೆಗಿಸಿದರೆ ಅಪಶಕುನ ಎಂಬುದಾಗಿ ಬಿಂಬಿಸಲಾಯಿತು.

ಲಿಂಬೆ ಹಾಗು 7 ಮೆಣಸಿನಕಾಯಿಯನ್ನು ಅಂಗಡಿ ಹಾಗೂ ವ್ಯಾವಹಾರಿಕ ಜಾಗದಲ್ಲಿ ಕಟ್ಟಬೇಕು?

ಲಿಂಬೆ ಹಾಗೂ ಮೆಣಸಿನಕಾಯಿಯನ್ನು  ಹತ್ತಿಯ ದಾರದಲ್ಲಿ ಅಂಗಡಿ ಅಥವಾ ವ್ಯಾವಹಾರಿಕ ಜಾಗದಲ್ಲಿ ಕಟ್ಟುವುದರಿಂದ ಇದರ ವಾಸನೆಗೆ ಕ್ರೀಮಿ-ಕೀಟಗಳು
ಬರುವುದಿಲ್ಲ. ಈ ಸರಳ ಕೀಟನಾಶಕ ಪ್ರಾಚೀನ ಕಾಲದ ಹವ್ಯಾಸವಾದುದರಿಂದ ಮುಂದೆ ಇದೊಂದು ಮೂಢನಂಬಿಕೆಯಾಗಿ ಪರಿವರ್ತನೆಗೊಂಡಿತು.


ಸೂತಕದ ಹಾಗೂ ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ದೇವಸ್ಥಾನ ಹಾಗೂ ಅಡುಗೆ ಮನೆಗೆ ಪ್ರವೇಶಮಾಡಬಾರದು?
ಭಾರತದಲ್ಲಿ ಮುಟ್ಟಾದ ಮಹಿಳೆಯರನ್ನು ಅಶುದ್ಧ & ಅಶುಚಿ ಎಂದೆಲ್ಲಾ ಪರಿಗಣಿಸಲಾಗುತ್ತದೆ. ಇದು ಅಪಾರ ಮೂಢನಂಬಿಕೆಗಳಿಗೆ ಎಡೆಮಾಡಿಕೊಟ್ಟಿವೆ. ಇದರಿಂದಾಗಿ ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರಿಗೆ ಅಡುಗೆಕೋಣೆಯ ಪ್ರವೇಶವನ್ನು ನಿಷೇಧಿಸಲಾಗಿದೆ. ಹಾಗೂ ಆ ದಿನಗಳಲ್ಲಿ ಮಹಿಳೆಯರಿಗೆ ದೇವಸ್ಥಾನ, ಮಸೀದಿ, ಧಾರ್ಮಿಕ ಸ್ಥಳಗಳಿಗೆ ಭೇಟಿನೀಡುವಂತಿಲ್ಲ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ತಮ್ಮ ದಿನಚರಿಗಳಲ್ಲಿ ತೋಡಗುವುದಿಲ್ಲ. ಇದಕ್ಕೊಂದು ವೈಜ್ಞಾನಿಕ ಕಾರಣಗಳಿವೆ. ಹೌದು! ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವವಾಗುವುದರಿಂದ ಮಹಿಳೆಯರು ತುಂಬಾ ಆಯಸಗೊಂಡಿರುತ್ತಾರೆ, ಅದರಿಂದ ಅವರಿಗೆ ವಿಶ್ರಾಂತಿ ಅಗತ್ಯವಾಗಿರುತ್ತಿತ್ತು. ದೇವಸ್ಥಾಗಳಿಗೆ ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ  ದೇವಸ್ಥಾನಗಳಿಗೆ ನಡೆದುಕೊಂಡು ಹೋಗುವುದು ಅಸಾಧ್ಯವಾದ ವಿಷಯವಾಗಿತ್ತೇ ಹೊರತು.. ಇನ್ನಾವುದೇ ವೈಜ್ಞಾನಿಕ ಕಾರಣಗಳು ಇದಕ್ಕೆ ಅನ್ವಯವಾಗುವುದಿಲ್ಲ. ಇದು ಕೂಡ ಕಾಲನಂತರ ಮಹಿಳೆಯರ ವಿಷಯದಲ್ಲಿ ಮೂಢನಂಬಿಕೆಯಗಿ ಪರಿವರ್ತನೆಗೊಂಡಿತು.


ಹಲ್ಲಿ ಬೆನ್ನಿಗೆ ಬಿದ್ದರೆ ಅಪಶಕುನ?
ಗೋಡೆಹಲ್ಲಿಯು ತನ್ನದೆಯಾದ ಮಹತ್ವ ಹೊಂದಿದೆ ಎಂಬುವುದಾಗಿ ನಮ್ಮ ಭಾರತದ ಗೌಲಿ ಶಾಸ್ತ್ರದಲ್ಲಿ ಹೇಳಲಾಗಿದೆ. ನಮ್ಮ ಜನರು ಹಲ್ಲಿ ಬೆನ್ನ ಮೇಲೆ ಬಿದ್ದರೆ ಅದು ಅಪಶಕುನ ಎನ್ನುತ್ತಾರೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ ಹಲ್ಲಿ ಒಂದು ವಿಷಜಂತು! ಇದರ ಮೈಯೆಲ್ಲ ವಿಷವಿದ್ದು ತನ್ನ ಶತ್ರುಗಳಿಂದ ಪಾರಗಳು ಈ ರೀತಿಯ ವಿಷಯುಕ್ತ ಶರೀರವನ್ನು ಹೊಂದಿದೆ. ಇದು ಒಂದುವೇಳೆ ಮನುಷ್ಯನ ಮೈಮೇಲೆ ಅಥವಾ ಆತ ತಿನ್ನುವ ಆಹಾರದ ಮೇಲೆ ಬಿದ್ದರೆ ಅಪಾಯ ತಪ್ಪಿದಲ್ಲ.


ಕಣ್ಣಿನ ರೆಪ್ಪೆ ಬಡಿಯುವುದು ಅಶುಭ?
ಈ ವಿಚಾರವನ್ನು ನಾವು ತುಂಬಾ ನಿರಾಳವಾಗಿ ತೆಗೆದುಕೊಳ್ಳುವುದು ಉತ್ತಮ. ಹೌದು! ನಾವೆಲ್ಲರೂ ನಮ್ಮ ಕಣ್ಣ ರೆಪ್ಪೆ ಬಡಿದರೆ ಅದರಿಂದ ಮುಂದೆನೋ ಅಪಾಯ ಕಾದಿದೆ ಎಂಬಂತೆ ಭಾವಿಸಿ ಅದರಿಂದ ಭಯಬೀತರಾಗುತ್ತೇವೆ. ಆದರೆ ಅದು ತಪ್ಪು ಕಲ್ಪನೆ, ನಮ್ಮ ದೇಹದಲ್ಲಿ ವಿಟಮಿನ್ ಕೊರತೆ ಇದ್ದರೆ ಈ ರೀತಿಯಾಗಿ ಕಣ್ಣ ರೆಪ್ಪೆ ಬಡಿಯುವುದು ಸರ್ವೆಸಾಮಾನ್ಯ ಇದರಿಂದ ಭವಿಷ್ಯದ ಬಗ್ಗೆ ಚಿಂತಿಸುವ ಬದಲು ಇನ್ನು ಮುಂದೆಯಾದರು ವೈದ್ಯರನ್ನು ಭೇಟಿಯಾಗುವುದು ಉತ್ತಮ.


ಉಗುರು ಕತ್ತರಿಸುವ ಮತ್ತು ಕ್ಷೌರದ ಕೆಲಸವನ್ನು ಸೂರ್ಯಹಸ್ತ ದ ನಂತರ ಮಾಡಬಾರದು?
ಸೂರ್ಯಹಸ್ತದ ನಂತರ ಉಗುರು ಕತ್ತರಿಸಬಾರದು, ಕ್ಷೌರದ ಕೆಲಸವನ್ನು ಮಾಡಬಾರದು, ಮನೆಗೆ ಅದು ಅಶುಭ ಎಂದು ವಾಡಿಕೆ ಇದೆ. ಅದರೆ ನಮ್ಮ ಪೂರ್ವಜರು ರಾತ್ರಿವೇಳೆ ಬೆಳಕಿರುವುದಿಲ್ಲ, ಕತ್ತಲಲ್ಲಿ ಉಗುರು ಕತ್ತರಿಸುವುದು, ಕ್ಷೌರ ಮಾಡುವುದು ಅಪಾಯಕಾರಿ ಸಂಗತಿ ಎಂದು ತಿಳಿದು ರಾತ್ರಿವೇಳೆ ಇದನ್ನು ನಿಷೇಧಿಸಿದ್ದಾರೆ. ಇದು ಕೂಡ ಮುಂದೆ ಮೂಢನಂಬಿಕೆಯಾಗಿ ಪರಿವರ್ತನೆಗೊಂಡಿದೆ.

ರಾತ್ರಿವೇಳೆ ಮನೆಗುಡಿಸುವುದು ಅಶುಭ?
ಸೂರ್ಯಹಸ್ತದ ನಂತರ ಮನೆ ಗುಡಿಸುವುದು ಅಶುಭ ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ, ನಾವು ಪೊರಕೆ ಹಿಡಿದು ಹೊರ ಬಂದರೆ ಸಾಕು ನಮ್ಮ ಅಮ್ಮ,
ಅಥವಾ ಮನೆ ಹಿರಿಯರು ಬೈಯುವುದು ಸಹಜ ಮನೆಯಲ್ಲಿ ಚಿನ್ನಾಭರಣಗಳು, ನಾಣ್ಯಗಳು ಇದ್ದೇ ಇರುತ್ತವೆ, ರಾತ್ರಿ ವೇಳೆ ಕಸಗುಡಿಸಿದರೆ, ಒಂದು ವೇಳೆ ಅವುಗಳು ಕಸದಲ್ಲಿ ಬೆರೆತರೆ, ನಮಗದು ಕತ್ತಲಲ್ಲಿ ಗೋಚರಿಸುವುದಿಲ್ಲ ಎಂಬ ದೃಷ್ಟಿಯಿಂದ ನಮ್ಮ ಪೂರ್ವಜರು ಈ ರೀತಿ ಹೇಳುತ್ತಿದ್ದರು. ಇದು ಮುಂದೆ ಮೂಢನಂಬಿಕೆಯಾಗಿ ಪರಿವರ್ತನೆ ಹೊಂದಿದೆ.

ಅಶ್ವಥ ಮರದ ಹತ್ತಿರ ರಾತ್ರಿವೇಳೆ ಸಂಚರಿಸಬಾರದು.?
ರಾತ್ರಿವೇಳೆ ಅಶ್ವಥ ಮರದ ಸುತ್ತ ದೆವ್ವ, ಭೂತಗಳು ಸಂಚರಿಸುತ್ತಿರುತ್ತವೆ! ಆದ್ದರಿಂದ ಅದರ ಹತ್ತಿರ ರಾತ್ರಿವೇಳೆ ಹೋಗಬಾರದು ಎಂದು ನಮ್ಮ ಹಿರಿಯರು ನಿಷೇಧ ಹೇರುತ್ತಾರೆ. ಆದರೆ ವೈಜ್ಞಾನಿಕವಾಗಿ ನಾವು ತಿಳಿಯಬೇಕಾದ ವಿಷಯವೆಂದರೆ ಅಶ್ವಥ ಮರವು ರಾತ್ರಿವೇಳೆ, ಆಹಾರ ಉತ್ಪತಿ ಕಾರ್ಯ ಮಾಡುತ್ತವೆ, ಆ ಸಂದರ್ಭದಲ್ಲಿ ಅತೀ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಆದರಿಂದ ಅಲ್ಲಿ ಆಮ್ಲಜನಕದ ಕೊರತೆ ಇರುತ್ತದೆ, ಆ ವೇಳೆ ಮಾನವರು ಅದರ ಹತ್ತಿರ ಸಂಚಾರ ಮಾಡುವುದು ಅಪಾಯಕಾರಿ, ಎಂದು ಈ ರೀತಿ ಹೇಳಲಾಗಿದೆ. ಇದು ಕೂಡ ಮುಂದೆ ಮೂಢನಂಬಿಕೆಯಾಗಿ ಪರಿರ್ತನೆಗೊಂಡಿದೆ.

 

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಸ್ನಾನ ಮಾಡಲೇಬೇಕು?
ಹೌದು! ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಸ್ನಾನ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಈ ರೀತಿಯ ಕಟ್ಟುಪಾಡಿಗೆ ತನ್ನದೇ ಆದ ವೈಜ್ಞಾನಿಕ ಕಾರಣವಿದೆ. ವಿವಿಧ ಧರ್ಮದಲ್ಲಿ ವಿವಿಧ ರೀತಿಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ, ಅದರಲ್ಲೂ ಪ್ರಮುಖವಾಗಿ ಹಿಂದು ಧರ್ಮದಲ್ಲಿ ಸತ್ತ ದೇಹವನ್ನು ಸುಡಲಾಗುತ್ತದೆ. ಈ ರೀತಿ ಸುಡುವ ಸಂದರ್ಭದಲ್ಲಿ ಗಾಳಿಯಲ್ಲಿ ಬ್ಯಾಕ್ಟೀರಿಯಾಗಳು ಸೇರಿ ಅವುಗಳು ನಮ್ಮ ದೇಹವನ್ನು ಸೇರುತ್ತದೆ. ಆದ್ದರಿಂದ ನಾವು ಕೂಡಲೇ ಸ್ನಾನ ಮಾಡುವುದರಿಂದ ನಮ್ಮ ದೇಹ ಶುದ್ಧವಾಗುವುದು. ಮುಂದಾಗುವ ಅಪಾಯವನ್ನು ತಡೆಯಬಹುದು ಎಂದು ಈ ಆಚಾರವನ್ನು ಮುಂದುವರಿಸಿಕೊಂಡು ಬರಲಾಗಿದೆ. ಹಾಗೂ ಇದು ಕೂಡ ಒಂದು ಮೂಢನಂಬಿಕೆಯಾಗಿದೆ.


ಭಾರತೀಯರು ಯಾಕೆ ಪವಿತ್ರ ನದಿಗೆ ನಾಣ್ಯಗಳನ್ನು ಎಸೆಯುತ್ತಾರೆ?
ಭಾರತೀಯರ ನಂಬಿಕೆ ಅದ್ಭುತವಾಗಿರುತ್ತದೆ. ಅದರಲ್ಲೂ ಹಿಂದೂಗಳು ತಮ್ಮದೇ ಆದ ಆಚಾರ ವಿಚಾರಗಳನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಹಿಂದೂಗಳಾದ ನಾವು ನಮ್ಮ ಪವಿತ್ರ ನದಿಗೆ ನಾಣ್ಯಗಳನ್ನು ಎಸೆಯತ್ತೇವೆ, ಇದರಿಂದ ನಮ್ಮ ಸಂಪತ್ತು ಹೆಚ್ಚುತ್ತದೆ ಎಂದು ನಂಬಿಕೆ ಇದೆ. ಆದರೆ ವೈಜ್ಞಾನಿಕವಾಗಿ ನೋಡೋದಾದ್ರೆ ಪ್ರಾಚೀನ ಕಾಲದಲ್ಲಿ ತಾಮ್ರದ ನಾಣ್ಯಗಳು ಹೆಚ್ಚು ಬಳಕೆಯಲ್ಲಿದ್ದವು ಅವುಗಳನ್ನು ನೀರಿಗೆ ಎಸೆಯುವುದರಿಂದ ಅದರಲ್ಲಿರುವ ಉತ್ತಮ ಅಂಶಗಳು ನೀರಿಗೆ ಸೇರುತ್ತದೆ.  ಆ ಪವಿತ್ರ ನೀರನ್ನು ನಾವು ಸೇವಿಸುವುದರಿಂದ ಅದು ದೇಹಕ್ಕೆ ಆರೋಗ್ಯವನ್ನು ಕೂಡ ಒದಗಿಸುತ್ತವೆ.


ಬಾವಲಿ ಮನೆಯೊಳಗೆ ಬಂದರೆ ಮನೆಯಲ್ಲಿ ಒಂದು ಸಾವು ಸಂಭವಿಸುತ್ತದೆ?
ಮನೆಯೊಳಗೆ ಬಾವಲಿ ಬಂದರೆ ಮನೆಯವರೆಲ್ಲರೂ ಚಿಂತಾಜನಕರಾಗಿ, ಅದರಿಂದ ಒಂದು ಸಾವು ಎದುರಾಗುತ್ತದೆ ಎಂದು ಭಯಬೀತರಾಗುತ್ತಾರೆ. ಆದರೆ ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ ಬಾವಲಿ ಮೈ ತುಂಬಾ ಬ್ಯಾಕ್ಟೀರಿಯಾ ತುಂಬಿಕೊಂಡಿರುವ ಪ್ರಾಣಿ, ಇದು ನಾವು ತಿನ್ನುವ ಆಹಾರದಲ್ಲಿ ಬೆರೆತರೆ ಅದು ಅಪಾಯಕಾರಿ. ಆದುದರಿಂದ ಈ ಮೇಲಿನ ಮೂಢನಂಬಿಕೆಯು ವೈಜ್ಞಾನಿಕವಾಗಿ ಸರಿಯಾಗಿದೆ.

ಸತ್ತ ಮನುಷ್ಯನ ಕಣ್ಣು ತೆರೆದಿಡಬಾರದು?
ಹೌದು! ನಾವು ಸತ್ತ ಮನುಷ್ಯನ ಕಣ್ಣು ತೆರೆದಿಡಬಾರದು, ಕಣ್ಣು ಮುಚ್ಚದಿದ್ದ ಪಕ್ಷದಲ್ಲಿ ಆತನ ಆತ್ಮಕ್ಕೆ ಶಾಂತಿಸಿಗುವುದಿಲ್ಲ, ಅವನು ಆ ಪ್ರದೇಶದಲ್ಲೆ ಸುಳಿದಾಡುತ್ತಾನೆ ಎಂದೆಲ್ಲಾ ನಂಬಲಾಗಿದೆ. ಆದರೆ ನಾವಿಲ್ಲಿ ನಿಜವಾಗಿಯು ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ, ಸತ್ತ ದೇಹದ ಕಣ್ಣು ತರೆದಿದ್ದರೆ ಮಕ್ಕಳು ಭಯಪಡುವ ಸಾಧ್ಯತೆ ಇದೆ. ಹಾಗೂ ಆ ಮನುಷ್ಯ ಸತ್ತಂತೆ ಭಾಸವಾಗುವುದಿಲ್ಲ, ಎಂಬ ಕಾರಣದಿಂದ ಈ ಪದ್ದತಿಯನ್ನು ಅಳವಡಿಸಿಕೊಂಡು ಬರಲಾಗಿದೆ ಹೊರತು ಬೇರೆನಲ್ಲ.
ಕನ್ನಡಿ ಒಡೆದರೆ 7 ವರ್ಷ ದುರಾದೃಷ್ಟ?
ರೋಮನ್ಸ್  ಕನ್ನಡಿ ಹೊಡೆದರೆ 7 ವರ್ಷ ದುರಾದೃಷ್ಟ ಎಂದು ಹೇಳಿದ್ದಾರೆ ಹೊರತು ಭಾರತೀಯರಲ್ಲಾ! ಹೌದು! ಕನ್ನಡಿಯು ಹಿಂದಿನಕಾಲದಲ್ಲಿ ತುಂಬಾ ದುಬಾರಿ
ವಸ್ತುವಾಗಿತ್ತು, ಹಾಗೂ ಅದರ ಗುಣಮಟ್ಟ ಉತ್ತಮವಾಗಿರುತ್ತಿರಲಿಲ್ಲ. ಅದು ಒಂದು ವೇಳೆ ಹೊಡೆದು ಹೊದರೆ ಅದನ್ನು ಖರೀದಿಸುವ ಶಕ್ತಿ ಅವರಲ್ಲಿ ಇರಲಿಲ್ಲ. ಆದ್ದರಿಂದ ಅವರು ಕನ್ನಡಿ ಹೊಡೆದರೆ ಅಪಶಕುನ ಎನ್ನುತ್ತಾರೆ. ಹಾಗೂ ಇದು ಕೂಡ ಮುಂದೆ ಮೂಢನಂಬಿಕೆಯಾಗಿ ಮುಂದುವರೆದುಕೊಂಡು ಬಂದಿರುವ ಭಾಗವಾಗಿದೆ.

ನಮ್ಮ ಪೂರ್ವಜರು ಯಾವುದೇ ವಿಷಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದರೆ ಅದಕ್ಕೆ ಒಂದಲ್ಲಾ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಅದನ್ನು ನಾವು
ದಿಕ್ಕರಿಸುವ ಬದಲು ಅದರೋಳಗಿರು ಒಳ ಅರ್ಥವನ್ನು ಅರಿಯುವ ಪ್ರಯತ್ನಮಾಡಬೇಕಷ್ಟೇ, ಹಿಂದು ಧರ್ಮದಷ್ಟು ಮುಂದುವರಿದ ಧರ್ಮ ಮತ್ತೊಂದು ಇಲ್ಲ
ಎಂಬುವುದು ಕೂಡ ಇಲ್ಲಿ ನಮಗೆ ಸುಲಭವಾಗಿ ಸಾಬೀತಾಗುತ್ತದೆ.

-Kavya Anchan

Tags

Related Articles

Close