ಪ್ರಚಲಿತ

ಭಾರತೀಯ ಸುಂದರಿಯ ಮುಡಿಗೇರಿತು ವಿಶ್ವಸುಂದರಿ ಕಿರೀಟ!

ಭಾರತದ ಮತ್ತೊಬ್ಬಳು ಮಿಸ್‍ವಲ್ರ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.!! ಭಾರತದ 21 ವರ್ಷದ ಮಾನುಷಿ ಚಿಲ್ಲರ್ 17 ವರ್ಷಗಳ ಬಳಿಕ ಮಿಸ್ ವಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 2000ರಲ್ಲಿ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮಿಸ್‍ವಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

ಚೀನಾದ ಸನ್ನಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ದೆಯಲ್ಲಿ 108 ದೇಶಗಳ ಸುಂದರಿಯನ್ನು ಹಿಂದಿಕ್ಕುವ ಮೂಲಕ ಮಾನುಷಿ 2017ರ ಮಿಸ್‍ವಲ್ರ್ಡ್ ಆಗಿದ್ದಾರೆ. ಮಿಸ್ ಇಂಗ್ಲೆಂಡ್ ಸ್ಟೆಫನಿ ಹಿಲ್ ಮೊದಲ ರನ್ನರ್ ಆಫ್ ಆದರೆ , ಮೆಕ್ಸಿಕೋ ಸುಂದರಿ ಆಂಡ್ರೆಜಾ ಮೆಜಾ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

 

ಮಾನುಷಿ ಮೂಲತಃ ಹರಿಯಾಣ ರಾಜ್ಯದ ನಿವಾಸಿಯಾಗಿದ್ದು, ನವದೆಹಲಿಯ ಸೇಂಟ್ ಥಾಮಸ್ ಸ್ಕೂಲ್ ಮತ್ತು ಸೋನ್‍ಪೇಟೆಯ ಭಗತ್ ಫೂಲ್ ಸಿಂಗ್ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ.

 

ಟಾಪ್ ಐದನೇ ಸ್ಥಾನಕ್ಕೆ ತಲುಪಿದಾಗ ಪ್ರಶ್ನೋತ್ತರ ಸುತ್ತಿನಲ್ಲಿ ಮಾನುಷಿ ಅವರಿಗೆ ಅತಿ ಹೆಚ್ಚು ಸಂಬಳ ನೀಡುವ ಯಾವ ವೃತ್ತಿಗೆ ನೀವು ಅರ್ಹರು ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಈ ಸುಂದರಿ ಸಂಬಲ ಯಾವುದೇ ವೃತ್ತಿಯ ಗೌರವವನ್ನು ನಿರ್ಧರಿಸುವುದಿಲ್ಲ. ತಾಯಿಯಾಗುವ ವೃತ್ತಿ ಮಹಿಳೆಯ ಜೀವನದಲ್ಲಿ ದೊರೆಯುವ ಅತ್ಯಂತ ಗೌರವಯುತವಾದ ಹುದ್ದೆಯಾಗಿದೆ. ಕೇವಲ ಹಣದಿಂದ ಮಾತ್ರ ಪ್ರೀತಿ ಮತ್ತು ಗೌರವ ಸಿಗುತ್ತದೆ ಎಂಬ ವಿಚಾರದಲ್ಲಿ ನನಗೆ ನಂಬಿಕೆ ಇಲ್ಲ. ನನ್ನ ತಾಯಿ ನನಗೆ ಜೀವನದ ಅತೀ ದೊಡ್ಡ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ . ಹಾಗಾಗಿ ತಾಯಿಯಾಗುವ ವೃತ್ತಿ ಜಗತ್ತಿನಲ್ಲಿ ಅತ್ಯಂತ ಗೌರವಯುಕ್ತವಾದದ್ದು ಎಂದು ಮಾನುಷಿ ಭಾವಾನಾತ್ಮಕವಾಗಿ ಉತ್ತರಿಸುತ್ತಾರೆ.

 

1966ರವರೆಗೂ ಪಾಶ್ಚಾತ್ಯಾರಿಗೆ ಮಾತ್ರ ಸೀಮಿತವಾಗಿದ್ದ ವಿಶ್ವ ಸುಂದರಿ ಪಟ್ಟ ಮೊದಲ ಬಾರಿಗೆ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿನಿ ಭಾರತದ ರೀತಾ ಫರಿಯಾ ಕೊನೆಯ ಸುತ್ತಿಗೆ ಪ್ರವೇಶಿಸುವುದರ ಮೂಲಕ ಕೊಂಚದರಲ್ಲೇ ಪಟ್ಟ ತಪ್ಪಿಸಿಕೊಂಡಿದ್ದರು. ಅದಾದ ಬಳಿಕ ಹಲವು ಮಂದಿ ಭಾರತೀಯರು ವಿಶ್ವ ಸುಂದರಿ ಕಿರೀಟ ಧರಿಸಿದ್ದು , ಶ ಸಾಲಿಗೆ ಮಾನುಷಿ ಚಿಲ್ಲಾರ್ ಸೇರ್ಪಡೆಗೊಂಡಿದ್ದಾರೆ. ಚೀನಾದಲ್ಲಿ ನಡೆದ 2017ರ ವಿಶ್ವ ಸುಂದರಿ ಸ್ವರ್ದೆಯಲ್ಲಿ ವಿಚೇತರಾಗಿರುವಂತಹದ್ದು ಮಾನುಷಿ ಚಿಲ್ಲಾರ್‍ನ ಹಲವು ವರ್ಷಗಳ ಕನಸು ಸಾಕಾರವಾಗಿದೆ.

2016ರ ವಿಶ್ವ ಸುಂದರಿ ವಿಜೇತೆ ಪೋಟ್ ರಿಕೋದ ಡೆಲ್ ವ್ಯಾಲೆ ತಮ್ಮ ಮಿಸ್ ವಲ್ರ್ಡ್ ಕಿರಿಟವನ್ನು ಭಾರತೀಯ ಕುವರಿ ಮಾನುಷಿಯರಿಗೆ ತೊಡಿಸಿದರು. ಇದು ಇಡೀ ಭಾರತೀಯರಿಗೆ ಗೌರವವನ್ನು ತಂದುಕೊಟ್ಟಿರುವಂತಹ ಪ್ರಶಸ್ತಿ. ಸುಮಾರು 17 ವರ್ಷಗಳ ನಂತರ ಭಾರತೀಯ ನಾರಿಗೆ ಕಿರೀಟ ಮುಡಿಗೇರಿದ್ದು ಬಹಳ ಸಂತೋಷಕರ ವಿಷಯವಾಗಿದೆ.
-ಪವಿತ್ರ

Tags

Related Articles

Close