ಅಂಕಣದೇಶಪ್ರಚಲಿತ

ಭಾರತೀಯ ಸೇನಾಧಿಕಾರಿಯಿಂದ ಮಾಜಿ ಪ್ರಧಾನಿ ನೆಹರೂರವರು ಅನುಭವಸಿದ ಅತೀ ದೊಡ್ಡ ಅವಮಾನ ಯಾವುದು ಗೊತ್ತೇ??

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಪ್ರಾಥಮಿಕ ದಿನಗಳಾಗಿದ್ದವು ಅವು. ಈ ಕಡೆ ಸ್ವಾತಂತ್ರ್ಯ ಸಿಕ್ಕ ಸಂತೋಷ, ಸಂಭ್ರಮವಾದರೆ, ಇನ್ನೊಂದೆಡೆ ನೇತಾರರಿಗೆ ದೇಶವನ್ನು ಕಟ್ಟುವ ಸಡಗರ. ನಮ್ಮ ಸಂವಿಧಾನವು ಬೆರೆಯಲ್ಪಟ್ಟಿತು, ಸ್ವಂತ ಸರಕಾರವೂ ರಚನೆಯಾಯಿತು. ಈಗ ನಮ್ಮ ದೇಶದಲ್ಲಿ ಒಂದು ಪ್ರಶ್ನೆ ಉದ್ಭವವಾಯಿತು..ಸಮರ್ಥ ಸೇನಾಧಿಕಾರಿಯಾಗಿ ಹಾಗೂ ರಕ್ಷಣಾ ಸೂತ್ರವನ್ನು ಯಾವ ರೀತಿಯಾಗಿ ಯೋಜಿಸಬೇಕೆಂಬ ಚಿಂತನೆ ಅಗಾಧವಾಗಿತ್ತು. ಸರಕಾರದ ಅನೇಕ ಅಧಿಕಾರಿಗಳಿಗೆ ಹಾಗು ಭಾರತೀಯ ಸೇನೆಗೆ ಇದ್ದುದು ಒಂದೇ ದೃಷ್ಟಿ, ಚಿಂತನೆ. ಅದೇನು ಗೊತ್ತಾ?? ಸಮರ್ಥ ಹಾಗೂ ಅನುಭವಿ ವೀರ ಭಾರತೀಯ ಯೋಧರನ್ನು ಸೇನಾಧಿಕಾರಿಯಾಗಿ ನಿಯೋಜಿಸಬೇಕೆಂಬುದು!!!

ನಮ್ಮ ದೇಶದ ದುರಾದೃಷ್ಟವೆಂದು ಹಣಿಯಲೋ ಒಂದೂ ಅರ್ಥವಾಗುತ್ತಿಲ್ಲ. ಭಾರತದ ದಿ ಗ್ರೇಟ್ ಭ್ರಷ್ಟ ಪ್ರಧಾನಿಯೋರ್ವರು ಇದ್ದರಲ್ಲ.. ಅವರು ಬೇರೆಯದ್ದೇ ಆದ ರೂಪುರೇಷೆಗಳನ್ನು ಸಿದ್ಧಪಡಿಸಿದ ಹಾಗಿತ್ತು. ಸ್ವಾತಂತ್ರ್ಯ ಸಿಕ್ಕ ತಕ್ಷಣ ಅವರು ಮಾಡಿದ ಅತೀ ದೊಡ್ಡ ಪ್ರಮಾದಗಳಲ್ಲಿ ಇದೂ ಒಂದು. ಯಾರಲ್ಲಿಯೂ ವಿಮರ್ಶಿಸದೇ ಸ್ವತಂತ್ರ ಭಾರತದ ಸೇನಾಧಿಪತಿಯಾಗಿ ನೆಹರೂ ಆಯ್ಕೆ ಮಾಡಿದ್ದು ಓರ್ವ ಬ್ರಿಟಿಷ್ ಅಧಿಕಾರಿಯನ್ನು.. ಆಶ್ಚರ್ಯವಾಗುತ್ತಿದೆಯಾ?? ವಾಸ್ತವವಾಗಿಯೂ ಸತ್ಯವಿದು. ಆತನ ಹೆಸರು ಜನರಲ್ ರೋಬ್ ಲೊಕ್ಕಾರ್ಟ್. ಸತತ 200 ವರ್ಷಗಳ ಕಾಲ ಶತ್ರುವಾದ ಬ್ರಿಟಿಷರೊಡನೆ ಹೋರಾಡಿ ಸ್ವತಂತ್ರ ಸಿಕ್ಕಿದ ಮೇಲೆಯೂ ಭಾರತವನ್ನು ಅವರಿಗೇ ಉಡುಗೊರೆಯಾಗಿ ಕೊಡುವ ಆಲೋಚನೆ ನೇಹರೂವಿಗೆ ಇತ್ತೇನೋ!! ಪ್ರಧಾನಿಯ ಈ ನಡೆಯಿಂದ ಸಂಪೂರ್ಣವಾಗಿ ನಿರಾಸೆಗೊಂಡವರು ಮೇಜರ್ ಜನರಲ್ ಎ ಎ ‘ಜಿಕ್’ ರುದ್ರ.!!

ಭಾರತದ ರಕ್ಷಣಾ ನೀತಿಯನ್ನು ಕಾರ್ಯರೂಪಗೊಳಿಸುವ ದೃಷ್ಟಿಯಿಂದ ಒಂದು ದಿನ ಲೊಕಾರ್ಟ್ ಅವರು ನೆಹರೂ ರನ್ನು ಭೇಟಿಯಾದರು. ಆತನ
ಯೋಜನಾಪಟ್ಟಿಯನ್ನು ಪ್ರಧಾನಿ ನೆಹರೂರವರ ಮೇಜಿನ ಮೇಲಿಟ್ಟರು. ಮೇಜರ್ ಲೊಕಾರ್ಟ್ ಕೆಲವು ಸಮಯಗಳ ನಂತರ ಹೊರಗೆ ಬಂದಾಗ ಮೇಜರ್ ರುದ್ರರವರನ್ನು ಭೇಟಿಯಾದರು. ಆ ಕ್ಷಣದಲ್ಲಿ ರುದ್ರರವರು ಆಶ್ಚರ್ಯದಿಂದ ಬೆಚ್ಚಿಬಿದ್ದರು. ನಮ್ಮನ್ನೂ ಚಕಿತಗೊಳಿಸುವ ವಿಚಾರವಿದು. ಏನು ಗೊತ್ತಾ?? ಒಳಗೆ ಏನೆಲ್ಲಾ ವಿಚಾರಗಳು ವಿನಿಮಯವಾಗಿವೆಯೆಂದು ರುದ್ರಾರವರು ಕೇಳಿದಾಗ ಅವರು ಕೊಟ್ಟ ಉತ್ತರವಿದು.

“ನಾನಿಟ್ಟ ಯೋಜನೆಗಳ ಪತ್ರವನ್ನು ಒಂದು ದೃಷ್ಟಿಯನ್ನು ಹಾರಿಸಿ ನನ್ನ ಮೇಲೆಯೇ ಹರಿಹಾಯ್ದರು. ಎಂತಹ ಕಳಪೆ ಯೋಜನೆಯಿದು!!?ನಮಗೆ ರಕ್ಷಣಾ ಯೋಜನೆಯ ಅಗತ್ಯವೇ ಇಲ್ಲ. ನಮ್ಮ ಧ್ಯೇಯವೇ ಅಹಿಂಸೆ. ನಮ್ಮ ರಾಷ್ಟ್ರದ ರಕ್ಷಣೆಗೆ ಯಾವುದೇ ಆತಂಕವಿಲ್ಲ. ಸೇನೆಯನ್ನು ತ್ಯಜಿಸಿ ಬಿಡಿ..”

ಭಾರತೀಯ ಸೇನೆಯನ್ನು ರದ್ದುಗೊಳಿಸಬೇಕೆಂಬ ಚಿಂತನೆಯಲ್ಲಿದ್ದರು ನೆಹರೂ. ಎಂತಹ ಒಂದು ವ್ಯಂಗ್ಯದ ವಿಚಾರ !!!

ಈ ಘಟನೆ ನಡೆದು ಸರಿಸುಮಾರು ಒಂದು ವರ್ಷಗಳ ನಂತರ ಕಾಶ್ಮೀರದ ಸಮಸ್ಯೆ ಉಲ್ಬಣಗೊಂಡಿತು. ಪಾಕಿಸ್ತಾನದ ಸೇನಾಧಿಕಾರಿಯಾಗಿದ್ದ ಜನರಲ್ ಡೋಗ್ಲಾಸ್ ಗ್ರೇಸೀ ಯೊಂದಿಗೆ ವಿಚಾರಗಳನ್ನು ವಿನಿಮಯ ಮಾಡಬೇಕೆಂಬುದಾಗಿ ಜನರಲ್ ಲೋಕಾರ್ಟ್ ಅವರನ್ನು ಕೇಳಿಕೊಳ್ಳಲಾಗಿತ್ತು. ಒಳನುಸುಳಿವಿಕೆಯ ಕಾರ್ಯವೂ ಅಗಾಧವಾಗಿ ನಡೆಯುತ್ತಿದ್ದವರ ಮೇಲೆಯೂ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಸೇನಾಧಿಕಾರಿ. ವಿಪರ್ಯಾಸವೆಂದರೆ ಗಡಿಯ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದ ಆತ ಮಾಡಿದ್ದು ಮಾತ್ರ ಶೂನ್ಯ ಕಾರ್ಯ!! ಮೇಜರ್ ಕಾರ್ಯಪ್ಪ ಕೈಗೊಂಡಿದ್ದ ಕೆಲವು ಕಠಿಣ ನಿಲುವುಗಳಿಂದಾಗಿ ಆಗಿನ ಪರಿಸ್ಥಿತಿಯಿಂದ ಭಾರತ ಹೊರಬಂದಿತು ಎಂಬುದಂತೂ ಸತ್ಯ. ಜನರಲ್ ಲೋಕಾರ್ಟ್ ಅವರ ಸಮಗ್ರತೆಯ ಕುರಿತಾಗಿ ಸರಕಾರದಲ್ಲಿ ಹಾಗೂ ಪ್ರಜೆಗಳಿಂದ ನಂತರ ತೀವ್ರವಾದ ಪ್ರತಿಕ್ರಿಯೆ ಬರಲಾರಂಭಿಸಿತು. ನೆಹರೂವಿನ ಆಪ್ತ ಶಿಷ್ಯನಿಗೆ ಕ್ಷಮೆ ನೀಡಲೂ ಅಲ್ಲಿ ಅವಕಾಶವಿರಲಿಲ್ಲ. ಕಾಶ್ಮೀರದ ಸಮಗ್ರ ಸಮಸ್ಯೆಯ ಕುರಿತಾಗಿ ಅರಿತಿದ್ದರೂ ಕ್ರಮ ಕೈಗೊಳ್ಳದ ಕುರಿತಾಗಿ ಸ್ಪಷ್ಟನೆಯನ್ನು ಕೊಡುವಂತೆ ಆತನಲ್ಲಿ ಪ್ರಧಾನಿ ಕೇಳಿದರು.

ಆತ ಅದಕ್ಕೆ ಏನು ಪ್ರತಿಕ್ರಿಯೆ ನೀಡಿದ ಗೊತ್ತಾ,” ಪ್ರಧಾನಿಗಳೇ, ನೀವು ಒಂದು ವೇಳೆ ಈ ಪ್ರಶ್ನೆಯನ್ನು ಕೇಳುತ್ತಿದ್ದೀರೆಂದರೆ, ನಿಮ್ಮ ಸೇನೆಗೆ ನಾಯಕನಾಗಿರಲು ನನಗೆ ಆಸಕ್ತಿಯಿಲ್ಲ. ಆ ವ್ಯವಹಾರದ ಅಗತ್ಯ ನನಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮುಂಬೈಯಿಂದ ಬ್ರಿಟಿಷ್ ಅಧಿಕಾರಿಗಳನ್ನು ಹೊತ್ತೈದು ಬ್ರಿಟನ್ ಗೆ ಹಡಗು ಪ್ರಯಾಣಿಸಲಿದೆ ಎಂಬುದರ ಅರಿವಿದೆ ನನಗೆ. ನಾನು ಇಂಗ್ಲೆಂಡ್ ಗೆ ತೆರಳುತ್ತೇನೆ.”

ಮರುದಿನ ಸೇನಾಧಿಕಾರಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ತುರ್ತು ಸಭೆಯನ್ನು ಕರೆಯಲಾಯಿತು. ಪ್ರಧಾನಿ ನೆಹರೂ ನೇತೃತ್ವ ವಹಿಸಿದ ಆ ಸಭೆಯಲ್ಲಿ ರಕ್ಷಣಾ ಸಚಿವ ಬಲದೇವ್ ಸಿಂಗ್, ಮೇಜರ್ ಜನರಲ್ ನಾಥು ಸಿಂಗ್ ರಾಥೋರ್, ಮೇಜರ್ ಜನರಲ್ ಕಾರ್ಯಪ್ಪ, ಹಾಗೂ ಕೆಲವು ರಕ್ಷಣಾ ತಜ್ಞರು ಉಪಸ್ಥಿತರಿದ್ದರು. ಮೇಜರ್ ಕಾರ್ಯಪ್ಪರವರೇ ಸೇನೆಯ ನಾಯಕತ್ವ ವಹಿಸಿಬೇಕೆಂಬುದೇ ಎಲ್ಲರ ಬಯಕೆಯಾಗಿತ್ತು.

ಆ ಸಭೆಯಲ್ಲಿ ನೆಹರೂ ಹೇಳಿದರು, “ಜನರಲ್ ಲೋಕಾರ್ಟ್ ಅವರು ರಾಜೀನಾಮೆ ನೀಡಿದ ಕಾರಣ ಈಗ ಹೊಸ ಸೇನಾಧಿಕಾರಿಯನ್ನು ನೇಮಿಸಬೇಕಾಗಿದೆ. ನಮ್ಮ ದೇಶದಲ್ಲಿ ಸಮರ್ಥ ಹಾಗೂ ಅನುಭವಿ ಯೋಧರಿಲ್ಲದ ಕಾರಣ ಬ್ರಿಟಿಷ್ ವ್ಯಕ್ತಿಯೇ ನಮ್ಮ ರಾಷ್ಟ್ರದ ಸೇನಾಧಿಕಾರಿಯಾಗಲಿಯೆಂಬುದಾಗಿಯೇ ನಾನು ಆಶಿಸುತ್ತೇನೆ.”

ಆ ಮಾತನ್ನು ಆಲಸಿದ ಎಲ್ಲರೂ ಮೌನವಾದರು. ನೆಹರೂ ಮಾತಿನಿಂದ ಅಲ್ಲಿಯೇ ಇದ್ದ ಸೈನಿಕರು ಅಕ್ಷರಶಃ ಅವಮಾನಿತಗೊಂಡರು. ನೆಹರೂ ಇಟ್ಟ ಅಭಿಪ್ರಾಯವನ್ನು ಸಮರ್ಥಿಸುವಂತೆ ಬಲದೇವ್ ಸಿಂಗರು,”ಹೌದು. ನಮ್ಮಲ್ಲಿ ಸಮರ್ಥ ಸೇನಾನಿಯಿಲ್ಲ.” ಎಂದು ಬಿಟ್ಟರು.

ಎಲ್ಲವನ್ನೂ ಮೌನದಿಂದಲೇ ಗಮನಿಸುತ್ತಿದ್ದ ವ್ಯಕ್ತಿಯೋರ್ವರು ಎದ್ದು ನಿಂತು, “ಸರ್, ನಾನು ಒಂದು ವಿಚಾರವನ್ನು ನಿಮ್ಮಲ್ಲಿ ಹಂಚಬೇಕು. ಸ್ವತಂತ್ರ ಭಾರತವನ್ನು
ಮುನ್ನಡೆಸಲೂ ಅನುಭವಿ ನಾಯಕರು ನಮ್ಮಲ್ಲಿಲ್ಲ, ಯಾಕೆ ನಾವು ಪ್ರಥಮ ಪ್ರಧಾನಿಯಾಗಿ ಬ್ರಿಟಿಷರನ್ನು ಆರಿಸಬಾರದು??”” ಈ ಮಾತನ್ನು ಆಡಿದವರು ಬೇರಾರು ಅಲ್ಲ. ಮೇಜರ್ ಜನರಲ್ ನಾಥು ಸಿಂಗ್ ರಾಥೋರ್ !!

ನೆಹರೂವಿಗೆ ಮಾರ್ಮಿಕವಾದ ಉತ್ತರವನ್ನು ಕೊಟ್ಟಿದ್ದರು ಮೇಜರ್. ಆ ಸಭೆಯಲ್ಲಿ ಆಗ ನೀರವ ಮೌನ ಮಾತ್ರ ಆವರಿಸಿತ್ತು.

ಉದ್ರಿಕ್ತಗೊಂಡ ನೆಹರೂ ,” ಇದರ ಅರ್ಥ ನೀವು ಭಾರತೀಯ ಸೇನೆಯ ಪ್ರಥಮ ನಾಯಕನಾಗುತ್ತೀರೆಂದೇ? ” ಎಂದು ಕೇಳಿದರು.

ಆ ಅಧಿಕಾರಿಗೆ ಇದೊಂದು ಸುವರ್ಣಾವಕಾಶವಿದ್ದರೂ ಅವರು ಹೇಳಿದರು, “ಸರ್, ನಾನು ಯಾಕೆ?? ನಮ್ಮಲ್ಲಿ ಓರ್ವ ಸಮರ್ಥ ಯೋಧನಿದ್ದಾನೆ, ನಮ್ಮ ಹಿರಿಯ
ಯೋಧರೂ ಆಗಿರುವ ಜನರಲ್ ಕಾರ್ಯಪ್ಪ. ಸೇನಾಧಿಪತಿಯಾಗಲು ಅವರಿಗಿಂತ ಅರ್ಹರು ಇನ್ನೊಬ್ಬರಿಲಿಕ್ಕಿಲ್ಲ. ಭಾರತವನ್ನು ಸಂರಕ್ಷಿಸಲು ಕಾರ್ಯಪ್ಪರವರಿಗೆ
ವಹಿಸುವುದೇ ಸೂಕ್ತ. ಭಾರತದಲ್ಲಿ ಸಮರ್ಥ ನಾಯಕರಿಲ್ಲ ಎಂದು ಯಾವ ಆಧಾರದಲ್ಲಿ ನೀವ ಬಣ್ಣಿಸುತ್ತೀರಿ?”

ಲೆಫ್ಟಿನೆಂಟ್ ಜನರಲ್ ನಾಥು ಸಿಂಗ್ ರಾಥೋರ್ ಮಂಡಿಸಿದ ಈ ವಿಚಾರಕ್ಕೆ ಇಡೀ ಸಭೆಯೇ ಪ್ರಶಂಶಿಸಿತ್ತು. ಭಾರತಕ್ಕೆ ಓರ್ವ ಸಮರ್ಥ, ಪ್ರಥಮ ಹಾಗೂ ಅತ್ಯುತ್ತಮ ಸೇನಾಧಿಕಾರಿಯಾಗಿ ಕಾರ್ಯಪ್ಪರನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಥೋರ್ ಅವರಿಗೆ ಇವತ್ತು ಭಾರತೀಯರೆಲ್ಲರೂ ಕೃತಜ್ಞತೆ ಸಲ್ಲಿಸಬೇಕಿದೆ.

ನಮ್ಮ ದೇಶದ ನಿಜವಾದ ಶಕ್ತಿಯನ್ನೂ, ಸಮರ್ಥರನ್ನು ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು ದಿ ಗ್ರೇಟ್ ಭ್ರಷ್ಟ ನೆಹರೂ. ಆದರೂ ಅವರನ್ನು ಈ ದೇಶ ಕರೆದಿದ್ದು ಚಾಚಾ!!! ಈ ದೇಶದ ರಕ್ಷಣೆಯನ್ನು ಮತ್ತೊಮ್ಮೆ ಬ್ರಿಟಿಷ್ ವ್ಯಕ್ತಿಗೆ ಕೊಡುವ ಚಿಂತನೆಯಲ್ಲಿದ್ದ ನೆಹರೂ ಮಾಡುತ್ತಿದ್ದ ಪ್ರಮಾದ ಇದಕ್ಕಿಂತ
ಮಿಗಿಲಾದುದಿದೆಯೇ?? ದುರಂತವೆಂದರೆ ಇದೇ ಅಲ್ವಾ???!!

ಮೂಲ : Defence news and Patriot Form

– ವಸಿಷ್ಠ

Tags

Related Articles

Close