ಅಂಕಣದೇಶಪ್ರಚಲಿತ

“ಭಾರತೀಯ ಸೇನೆಗೆ ಕಾಂಗ್ರೆಸ್ ಮಾಡಿದ ಅತಿದೊಡ್ಡ ದ್ರೋಹ” : ಅಜಿತ್ ದೋವಲ್!!

ಭಾರತ ಸ್ವಾತಂತ್ರ್ಯ ಪಡೆದು 70 ವರ್ಷಗಳನ್ನು ಕಳೆದು ಕಳೆದಿದೆ. ಈಗ ಭಾರತ ಮೊದಲಿನಂತಿಲ್ಲ. ಚೀನಾ ಸೇರಿ ಬೇರೆ ಯಾವ ರಾಷ್ಟ್ರವಾದರೂ ಭಾರತದ ಮೇಲೆ ದಾಳಿ ನಡೆಸಬೇಕಾದರೆ ನೂರು ಬಾರಿ ಯೋಚಿಸಬೇಕಾದ ಸ್ಥಿತಿ ಬಂದಿದೆ. ಇದಕ್ಕೆಲ್ಲಾ ಕಾರಣವೇನು? ಮುಂಚೆ ಭಾರತದ ಪರಿಸ್ಥಿತಿ ಹೇಗಿತ್ತು. ಈ ಬಗ್ಗೆ ಅಜಿತ್ ಧೋವಲ್ ಏನು ಹೇಳಿದ್ದಾರೆ…?

ಕೆಲವರ್ಷಗಳ ಮುಂಚೆ ಭಾರತದ ಸ್ಥಿತಿ ಏನಾಗಿತ್ತು? ಇತರ ದೇಶಗಳ ಬಗ್ಗೆ ಹೆದರಿಕೊಳ್ಳುವಂತಹಾ ಸ್ಥಿತಿ ಇತ್ತು. ಕಾರಣವಿಷ್ಟೆ ನಮ್ಮ ಹಿಂದಿನ ಸರಕಾರ ರಕ್ಷಣಾ
ವ್ಯವಸ್ಥೆಯನ್ನು ಬಲಪಡಿಸಲು ನಿರ್ಲಕ್ಷ್ಯ ವಹಿಸಿಸಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಯಾಕೆಂದರೆ ಭಾರತದ ರಕ್ಷಣಾ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯುತ್ತಮ ಎಂಬ ಸ್ಥಾನವನ್ನು ಪಡೆದುಕೊಂಡಿದ್ದು, ಪ್ರಪಂಚದ ನಾಲ್ಕನೇ ಬಲಿಷ್ಠ ಸೇನೆ ಎಂಬ ಹೆಸರು ಪಡೆದಿದೆ. ಭಾರತದ ಎದುರು ನೆರೆಯ ಬಲಾಡ್ಯ ಚೀನಾ ಸೇನೆ ಕೂಡಾ ಹಿಂದೆ ಸರಿದಿದೆ.

ಭಾರತದ ಸೈನ್ಯ ಪ್ರಪಂಚದಲ್ಲೇ ಪ್ರಪಂಚದಲ್ಲೇ ಟಾಪ್ ಪಟ್ಟಿಯಲ್ಲಿದೆ ನಿಜ. ಆದರೆ ಆ ಹೆಸರು ಸುಮ್ಮನೆ ಬರಲಿಲ್ಲ. ಇತರ ದೇಶಗಳು ಇಂದು ಸೈನ್ಯದಲ್ಲಿ
ಮುಂಚೂಣಿಯಲ್ಲಿರಬೇಕಾದರೆ ಭಾರತೀಯರ ಕೊಡುಗೆಯೂ ಹೆಚ್ಚಿನದ್ದಾಗಿದೆ. ಭಾರತೀಯರನ್ನು, ಭಾರತದ ತಂತ್ರಜ್ಞಾನವನ್ನು ತನ್ನ ವಿಮಾನಗಳಲ್ಲಿ, ನೌಕೆಗಳಲ್ಲಿ ಬಳಸಿಕೊಂಡಿತು. ಸುಮಾರು 60 ವರ್ಷಗಳಲ್ಲಿ ಇಡೀ ವಿಶ್ವದಲ್ಲಿ ತಂತ್ರಜ್ಞಾನ ಬೆಳೆಯಬೇಕಾದರೆ ಅದಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆಯೂ ಇದೆ.

1945-46 ಸಂದರ್ಭ ನಡೆದ ಎಡರನೇ ಜಾಗತಿಕ ಯುದ್ದದ ವೇಳೆ ವಿಶ್ವದ ಹಲವು ರಾಷ್ಟ್ರಗಳ ಪೈಕಿ ಯುನೈಟೆಡ್ ಕಿಂಗ್‍ಡಮ್, ಜಪಾನ್, ಅಮೆರಿಕಾ ಭಾರತದ
ನೌಕಾ ತಂತ್ರಜ್ಞಾನ, ವಿಮಾನ ತಂತ್ರಜ್ಞಾನ, ವಿಮಾನ ತಂತ್ರಜ್ಞಾನವನ್ನು ಬಳಿಸಿಕೊಂಡಿತು. ಇಂದು ಯುಕೆ-ಇಂಡಿಯಾ ಸೇರಿ 25 ವಿಮಾನ ಕಾರ್ಯಾಚರಣಾ
ಘಟಕಗಳನ್ನು ನಿರ್ಮಿಸಿದರೆ ಅದರ ಪ್ರಮುಖ ಸಾಧನಗಳೆಲ್ಲಾ ಬಂದಿರುವುದೆಲ್ಲಾ ಭಾರತದಿಂದ. ಇದು ಸ್ವಾತಂತ್ರ್ಯ ಸಿಗುವ ಮುಂಚಿನ ಕಥೆ.

ಸ್ವಾತಂತ್ರ್ಯ ಸ್ವಾತಂತ್ರ್ಯ ಸಿಕ್ಕ ಬಳಿಕ ಏನಾಯಿತು…? ಇಡೀ ಜಗತ್ತಿಗೆ ತಂತ್ರಜ್ಞಾನವನ್ನು ಕೊಟ್ಟದ್ದು, ಭಾರತ. ಆದ್ದರಿಂದ ಇಲ್ಲಿಯೂ ತಂತ್ರಜ್ಞನಾ ಉಚ್ಛ್ರಾಯ
ಸ್ಥಿತಿಯಲ್ಲಿರಬೇಕಾಗಿತ್ತಲವೇ? ಆದರೆ ಹಾಗೆ ಆಗಲು ನಮ್ಮ ದೇಶದ ಮೊದಲ ಪ್ರಧಾನಿ ನೆಹರೂ ಕಾಳಜಿ ವಹಿಸಲಿಲ್ಲ. ಅವರ ಕಾಲದಿಂದಲೇ ವೋಟ್ ಬ್ಯಾಂಕ್
ರಾಜಕೀಯ ಬೆಳೆಯಲಾರಂಭಿಸಿ ಭಾರತ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿತು.

ಭಾರತದ ಮೇಧಾವಿಗಳನ್ನು ಸಂಪನ್ಮೂಲವನ್ನಾಗಿ ಬಳಸುವ ಬದಲು ಭಾರತವನ್ನು ವೋಟ್‍ಬ್ಯಾಂಕ್ ರಾಜಕಾರಣ, ಜಾತಿ, ಧರ್ಮವನ್ನೇ ಪ್ರಧಾನವನ್ನಾಗಿಸಿತು.
ಇದರಿಂದ ಭಾರತದ ಮೇಧಾವಿಗಳ ಸಮರ್ಪಕ ಬಳಕೆ ನಿಂತಿತಲ್ಲದೆ, ಅವರ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತಾಳಿತು. ನಮ್ಮ ಮೇಧಾವಿಗಳನ್ನು ಅಮೆರಿಕಾ, ಜಪಾನ್, ರಷ್ಯಾ ದೇಶ ಬಳಸಿಕೊಂಡು ನಮ್ಮ ದೇಶದಲ್ಲಿ ಆಗಬೇಕಿದ್ದ ತಂತ್ರಜ್ಞಾನ ಅಭಿವೃದ್ಧಿ ಎಲ್ಲಾ ಆ ದೇಶದ ಪಾಲಾಗುವಂತೆ ಮಾಡಿದರು. ಇಂದು ಯಾವ ಜಪಾನ್, ಯಾವ ಅಮೆರಿಕಾ, ಯಾವ ರಷ್ಯಾ ದೇಶವು ಕ್ಷಿಪಣಿ ತಂತ್ರಜ್ಞಾನ ಸೇರಿ ಬಲಾಢ್ಯವಾಗಿದೆಯೋ ಅದಕ್ಕೆ ಭಾರತೀಯ ವಿಜ್ಞಾನಿಗಳೇ ಕಾರಣ. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಅಮೆರಿಕಾದ ನಾಸಾದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳ ನ ಪೈಕಿ ಅತಿ ಹೆಚ್ಚು ವಿಜ್ಞಾನಿಗಳು ಭಾರತೀಯರು. ಅಲ್ಲಿನ ರಕ್ಷಣಾ, ತಂತ್ರಜ್ಞಾನ ಹುದ್ದೆಯಲ್ಲಿ ಪ್ರಮುಖ ಸ್ಥಾನವನ್ನು ಭಾರತೀಯರು ಅಲಂಕರಿಸಿದ್ದಾರೆ. ಬೇರೆ ದೇಶಗಳು ಭಾರತೀಯರನ್ನು ಬರಮಾಡಿಕೊಂಡ ಕಾರಣ, ಅವರೆಲ್ಲಾ ದೇಶ ಬಿಟ್ಟು ಬೇರೆ ದೇಶದ ಅಭಿವೃದ್ಧಿಗೆ ದುಡಿಯುವಂತಾಯಿತು.

ಭಾರತದ ಪ್ರತಿಭಾ ಪಲಾಯನದಿಂದ ಭಾರತಕ್ಕೆಷ್ಟು ನಷ್ಟವಾಯಿತೆಂದರೆ ಭಾರತ ರಕ್ಷಣಾ ಉಪಕರಣಗಳನ್ನು ಬೇರೆ ದೇಶಗಳಿಂದ ಹತ್ತುಪಟ್ಟು ಹೆಚ್ಚು ದುಡ್ಡು ಕೊಟ್ಟು ಖರೀದಿಸಬೇಕಾಗುತ್ತದೆ. ಉದಾಹರಣೆಗೆ ಭಾರತಲ್ಲಿ ಒಬ್ಬ ಸಬ್ ಇನ್ಸ್ ಪೆಕ್ಟರ್ ಉಪಯೋಗಿಸುವ 9ಎಂಎಂ ಪಿಸ್ತೂಲ್ ಬಿಡಿ, ಅದರ ಬುಲೆಟ್ಗಳನ್ನೂ ಯುಗೋಸ್ಲೋವಿಯಾದಿಂದ ಆಮದು ಮಾಡಿಕೊಳ್ಳುವಂತಾಗಿದೆ. ವಿಮಾನ, ಕ್ಷಿಪಣಿ, ಹಡಗು, ಸಬ್‍ಮೆರಿನ್, ಟ್ಯಾಂಕರ್, ಗನ್, ರೈಫಲ್ ಎಲ್ಲವನ್ನೂ ವಿದೇಶಗಳಿಂದ ಖರೀದಿಸುವಂತಾಯಿತು. ಇದೆಲ್ಲಾ ಅಂದು ಕಾಂಗ್ರೆಸ್ ಮಾಡಿದ ಪಾಪದ ಫಲದಿಂದ ಇಂದು ನಾವೆಲ್ಲಾ ಅನುಭವಿಸುವಂತಾಗಿದೆ.

ಮುಖ್ಯವಾದ ವಿಷಯವೇನೆಂದರೆ ಭಾರತದ ಒಟ್ಟು ಬಜೆಟಿನ ಶೇಕಡ 25 ರಷ್ಟು ರಕ್ಷಾಣಾ ಬಜೆಟಿಗೆ ಮೀಸಲು. ಇದರಲ್ಲಿ ತಿನ್ನುವುದಕ್ಕೆ ಸಿಗುವಷ್ಟು ಬೇರೆ ಯಾವ ಇಲಾಖೆಯಲ್ಲೂ ಸಿಗುವುದಿಲ್ಲ. ನಾವೇ ಎಲ್ಲದನ್ನೂ ತಯಾರಿಸಿ ಕೊಂಡರೆ ತಿನ್ನುವುದು ಎಲ್ಲಿಂದ ?

ಭಾರತದ ಕಾಂಗ್ರೆಸ್ ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ವಿಫಲವಾಯಿತು ಎನ್ನುವುದಕ್ಕಿಂತಲೂ ಅದಕ್ಕೆ ಅದರ ಆಸಕ್ತಿಯೇ ಇಲ್ಲವೆಂದು ಹೇಳಬಹುದು. ಭಾರತದ ವಿಜ್ಞಾನಿಗಳನ್ನು ಬಳಸಿ ಭಾರತಲ್ಲೇ ರಕ್ಷಣಾ ಸಾಮಗ್ರಿಗಳನ್ನು ತಯಾರಿಸಿ ವಿದೇಶಕ್ಕೆ ರಫ್ತು ಮಾಡಿದ್ದೇ ಇದ್ದರೆ ಇಂದು ಸ್ವತಃ ಅಮೇರಿಕಾ, ಚೀನಾ ಭಾರತ ಮುಂದೆ ಕೈಕಟ್ಟಿ ನಿಲ್ಲಬೇಕಿತ್ತು. ಇಷ್ಟು ಬಿಡಿ ಬೇರೆ ದೇಶಗಳಿಂದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವುದನ್ನೂ ನೆಟ್ಟಗೆ ಮಾಡಿದ್ದರೂ ಸಾಕಿತ್ತು. ಆದರೆ ಅವೆರಡನ್ನೂ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಚೆನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಮಾಡಿದ ರಕ್ಷಣಾ ಹಗರಣಗಳ ಸ್ಯಾಂಪಲ್‍ಗಳನ್ನು ಇಲ್ನೋಡಿ.

1948ರ ಜೀಪ್ ಖರೀದಿ ಹಗರಣ, 1987ರ ಭೋಪೋರ್ಸ್ ಹಗರಣ, 2007ರ ಆರ್ಡನನ್ಸ್ ಫಾಕ್ಟರಿ ಬೋರ್ಡ್ ಹಗರಣ, 2007ರ ಬ್ರೈಬ್ ಸ್ಕ್ಯಾಮ್,
2012ರ ಟೆಟ್ರಾಟ್ರಕ್ ಹಗರಣ, ಅಗಸ್ಟಾ ವೆಸ್ಟ್‍ಲ್ಯಾಂಡ್ ಮತ್ತು ರಾಫೆಲ್ ಡೀಲ್ ಹಗರಣ. ಇದೆಲ್ಲಾ ಬೆಳಕಿಗೆ ಬಂದ ಹಗರಣ, ಬೆಳಕಿಗೆ ಬಾರದ ಅದೆಷ್ಟೋ
ಹಗರಣಗಳಿರಬಹುದು. ನಮ್ಮ ದೇಶದ ಒಬ್ಬೊಬ್ಬ ಸೈನಿಕನೂ ಶತ್ರುಗಳ ಗುಂಡಿಗೆ ಎದೆಯೊಡ್ಡಿ ಪ್ರಾಣ ಬಿಡಬೇಕಾದರೂ ಕಾಂಗ್ರೆಸ್ ಮಾಡಿದ ಅನ್ಯಾಯದ ಒಂದೊಂದು ಎಳೆಯನ್ನೂ ನೆನಪಿಗೆ ತಂದುಕೊಳ್ಳಬೇಕು.

ನಿಮಗೆ ನೆನಪಿರಬಹುದು. ಪಾಕಿಸ್ತಾನದಂಥಾ ಚಿಕ್ಕ ರಾಷ್ಟ್ರ ಭಾರತದ ಮೇಲೆ ಎರಡು ಬಾರಿ ಯುದ್ಧಕ್ಕೆ ಬಂದಿತು. ಇದು ಸೋತಿತು ನಿಜ ಆದರೆ ಅದು ಯಾವ
ಧೈರ್ಯದಿಂದ ಯುದ್ಧಕ್ಕೆ ಬಂದಿದೆ ಎಂದು ಯೋಚಿಸಿದ್ದೀರಾ ಅದಕ್ಕೂ ಕಾಂಗ್ರೆಸ್ ಮಾಡಿದ ಹಗರಣಗಳು ಗೊತ್ತಿರುವುದರಿಂದಲೇ ಭಾರತವನ್ನು ಸುಲಭವಾಗಿ ಮಣ್ಣು ಮುಕ್ಕಿಸಬಹುದೆಂದು ಅಂದುಕೊಂಡಿದ್ದರು. ಆಮೇಲೆ ಚೀನಾ ಕೂಡಾ ಅಷ್ಟು ಧೈರ್ಯದಿಂದ ಭಾರತದ ಮೇಲೆ ಯುದ್ಧಕ್ಕೆ ಬಂದಿತು ಎಂಬವುದು ತಿಳಿದಿರುವ ವಿಚಾರ.1950ರಿಂದ ಚೀನಾದಲ್ಲಿ ಒಂದೇ ಒಂದು ರಕ್ಷಣಾ ಕಾರ್ಯಾಚರಣಾ ಘಟಕಗಳನ್ನು ಹೊಂದಿರಲಿಲ್ಲ ಆದರೆ ಅದೇ ಚೀನಾ ಇಂದು ತನ್ನ ದೇಶದಿಂದ ಬೇರೆ ದೇಶಗಳಿಗೆ ರಫ್ತು ಮಾಡಿಕೊಳ್ಳುತ್ತಿದೆ.

ಇನ್ನೊಂದು ವಿಷಯವನ್ನು ಹೇಳ್ತೇನೆ. ಆ ವಿಷ್ಯವನ್ನು ಓದಿದಾದ ನಿಮಗೆ ಗಾಯದ ಮೇಲೆ ಉಪ್ಪು ಇಡುವಂತೆ ಸಿಟ್ಟು ಬರಬಹುದು. 1960ರಲ್ಲಿ ವಿಶ್ವಸಂಸ್ಥೆಯು ಭಾರತದಲ್ಲಿ ಹೀಗೆ ಕೇಳಿತು, `ನಿಮ್ಮ ದೇಶದಲ್ಲಿ ಅನೇಕ ಮಂದಿ ವಿಜ್ಞಾನಿಗಳು ಪರಮಾಣು ಕ್ಷೇತ್ರದಲ್ಲಿ ದುಡಿಯುತ್ತಾರೆ. ನೀವೂ ಕೂಡಾ ಪರಮಾಣು ಪೂರೈಕೆದಾರ ರಾಷ್ಟ್ರವಾಗಬಹುದು. ಆ ಒಪ್ಪಂದಕ್ಕೆ ಸಹಿ ಹಾಕುತ್ತೀರಾ?’ ಅದಕ್ಕೆ ನಮ್ಮ ಪ್ರಧಾನಿ ನೆಹರೂ ಮಾತ್ರ ಇದಕ್ಕೆ ಸಹಿ ಹಾಕಲು ನಿರಾಕರಿಸಿತು. ಅಲ್ಲದೆ ಭಾರತ ಪರಮಾಣುವನ್ನು ಉಪಯೋಗಿಸುವುದೂ ಕೂಡಾ ಇಲ್ಲ ಎಂದು ಹೇಳೀದರು. ಆದರೆ ಚೀನಾ ಮಾತ್ರ ಆ ಒಪ್ಪಂದದ ಪ್ರಾಮುಖ್ಯತೆಯನ್ನು ಅರಿತು ಕಣ್ಣು ಮುಚ್ಚಿ ಸಹಿ ಹಾಕಿದ್ದರಿಂದ ಇಂದು ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವನ್ನು ಪಡೆದಿದೆ. ಆದರೆ ಭಾರತ ಆ ಸ್ಥಾನಕ್ಕೆ ಬರಲು ಹೆಣಗಾಡುತ್ತಿದ್ದು, ಭಾರತದ ಇಂದಿನ ಪರಿಸ್ಥಿತಿಗೆ ನೆಹರೂ ಅವರೇ ನೇರ ಹೊಣೆ.

ಭಾರತದ ಎರಡು ಶ್ರೇಷ್ಠ ವಿಜ್ಞಾನಿಗಳನ್ನು ಕೊಂದವರ್ಯಾರು?

ಪರಮಾಣು ಸರಬರಾಜು ರಾಷ್ಟ್ರಗಳ ಗುಂಪಿಗೆ(ಎನ್‍ಎಸ್‍ಜಿ) ಸೇರಲು ಅಣ್ವಸ್ತ್ರ ಒಪ್ಪಂದಕ್ಕೆ (ಎನ್‍ಪಿಟಿ) ಸಹಿ ಹಾಕಲು ಭಾರತ ನಿರಾಕರಿಸಿತು. ಇದಕ್ಕೆ ಮುಖ್ಯ ಕಾರಣ ಭಾರತದ ಎರಡು ಸರ್ವಶ್ರೇಷ್ಠ ವಿಜ್ಞಾನಿಗಳಾದ ಡಾ. ಹೋಮಿ ಜೆ. ಬಾಬಾ ಮತ್ತು ವಿಕ್ರಮ್ ಸಾರಭಾಯ್. ಆದರೆ ಈ ಎರಡು ವಿಜ್ಞಾನಿಗಳು ನಿಗೂಢ ಸಾವನ್ನಪ್ಪಿದರು. ಇದು ಎನ್‍ಪಿಟಿ ಒಪ್ಪಂದಕ್ಕೆ ಸಂಬಂಧಿಸಿಯೇ ನಡೆಸಲಾದ ವ್ಯವಸ್ಥಿತ ಕೊಲೆ ಎಂದು ಸಂಶಯಿಸಲಾಗುತ್ತಿದೆ. ಹೋಮಿಬಾಬಾ ಅವರು 1966ರಲ್ಲಿ ವಿಮಾನ ದುರಂತದಲ್ಲಿ ಮೃತಪಟ್ಟರೆ, ಸಾರಭಾಯಿ ಅವು 1971ರಲ್ಲಿ ನಿಗೂಢವಾಗಿ ಮೃತಪಟ್ಟರು. ಈ ಎರಡೂ ಸಾವುಗಳ ತನಿಖೆ ನಡೆಸಲು ಸರಕಾರ ನಿರಾಕರಿಸಿತು. ಈ ನಿರಾಕರಣೆಗೆ ಕಾರಣವೇನಿರಬಹುದೆಂಬ ಶಂಕೆ ಇನ್ನಿಲ್ಲದಂತೆ ಕಾಡುತ್ತದೆ.

ಒಂದು ವೇಳೆ ಭಾರತ ಎನ್‍ಪಿಟಿ ಒಪ್ಪಂದಕ್ಕೆ ಸಹಿ ಹಾಕಿದ್ದರೆ ಭಾರತ ಇಂದು ಅಣ್ವಸ್ತ್ರಗಳನ್ನು ಹೊಂದಲು ಸಾಧ್ಯವೇ ಆಗುತ್ತಿರಲಿಲ್ಲ. ಭಾರತ ಎಪಿಜೆ ಅಬ್ದುಲ್ ಕಲಾಂ ನೇತೃತ್ವದಲ್ಲಿ ಕ್ಷಿಪಣಿ ತಂತ್ರಜ್ಞಾನಕ್ಕಾಗಿ ಕೆಲಸ ಮಾಡುವ ತಂಡದಲ್ಲಿದ್ದರು. ಅವರ ಪ್ರಯತ್ನದಿಂದ ಫೋಕ್ರಾನ್ 53 ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಇಡೀ ವಿಶ್ವವೇ ಭಾರತದ ನಡೆಯನ್ನು ಖಂಡಿಸಿತು. ಆದರೆ ವಾಜಪೇಯಿ ಸರಕಾರ ಆಸಕ್ತಿಯಿಂದ ಭಾರತ ಪರಮಾಣು ಶಕ್ತ ರಾಷ್ಟ್ರವಾಯಿತು.

ಪೋಖ್ರಾನ್ ಬಗ್ಗೆ ಎಪಿಜೆ ಅಬ್ದುಲ್ ಕಲಾಂ ಹೇಳಿದ್ದು ಹೀಗೆ… ಇಡೀ ಜಗತ್ತೇ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಭಾರತ ಪೋಖ್ರಾನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಭಾರತ ಪರಮಾಣು ರಾಷ್ಟ್ರವಾಗಿ ಹೊರಹೊಮ್ಮಿತು ಎಂದು ಕೊಂಡಾಡಿದ್ದರು.

ಇಂದು ನರೇಂದ್ರ ಮೋದಿ ಸರಕಾರ ಮೇಕ್ ಇಂಡಿಯಾ, ಸ್ಟಾಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಮುಂತಾದ ನೂತನ ಯೋಜನೆಗಳ ಬಗ್ಗೆ
ಮಾತಾಡುತ್ತಿದೆ. ಈ ಯೋಜನೆಗಳ ಕನಸು ನಿಜವಾಗಿಯೂ ಮೋದಿಯವರದ್ದಲ್ಲ. ಇದರ ಬಗ್ಗೆ 50 ವರ್ಷಗಳ ಮುಂಚೆಯೇ ಜೆಆರ್‍ಡಿ ಟಾಟಾ, ಸರ್ ಎಂ. ವಿಶ್ವೇಶ್ವರಯ್ಯಾ, ಹೋಮಿ ಜೆ. ಬಾಬಾ. ವಿಕ್ರಂ ಸಾರಭಾಯ್ ಹಾಗೂ ಎಪಿಜೆ ಅಬ್ದುಲ್ ಕಲಾಂ ಮುಂತಾದವರು ಕನಸು ಕಾಣಿದ್ದರು. ಆದರೆ ಕಾಂಗ್ರೆಸ್ ಸರಕಾರ ಅದನ್ನು ಜಾರಿಗೆ ತರಲು ಮುಂದಾಗಲೇ ಇಲ್ಲ. ಅಂದೇ ಜಾರಿಗೆ ತಂದಿದ್ದರೆ ಭಾರತ ಎಲ್ಲೋ ಇರುತ್ತಿತ್ತು ಅಲ್ಲವೇ? ಕೊನೆಗೂ ಅದನ್ನು ಜಾರಿಗೆ ತರಬೇಕಾದರೆ ಮೋದಿ ಸರಕಾರವೇ ಬರಬೇಕಾಯ್ತು. ಭಾರತದಲ್ಲಿ ಎಷ್ಟೆಷ್ಟೋ ಮಹಾನ್ ವಿಜ್ಞಾನಿಗಳಿದ್ದರು. ಆದರೆ ಚೀನಾದಲ್ಲಿ ಕಳೆದ 50 ವರ್ಷದವರೆಗೆ ಏನೂ ಇರಲಿಲ್ಲ. ಆದರೆ ಇಂದು ಆ ರಾಷ್ಟ್ರ ನಂಬರ್ ವನ್ ಆಗಿ ಮುಂದುವರಿಯುತ್ತಿದೆ.

ಇಂದು ಭಾರತದ ಸೇನೆ ಉತ್ತಮವಾಗಿದೆ ನಿಜ. ಆದರೆ ಆರಂಭದಲ್ಲಿ ಎಷ್ಟೋ ವಿಘ್ನಗಳಿದ್ದವು. ನರೇಂದ್ರ ಮೋದಿ ಸರಕಾರ ಬಂದ ಬಳಿಕ ದೇಶದ ರಕ್ಷಣಾ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬಲಪಡಿಸಿದ ಪರಿಣಾಮ ಇಂದು ಭಾರತದ ಸೇನೆ ವಿಶ್ವದ ಸರಿಸಮಾನವಾಗಿ ನಿಂತಿದೆ. ಇಷ್ಟು ಮಾತ್ರವಲ್ಲ, ಸೈನ್ಯದಲ್ಲಿ ಇನ್ನೂ ಅನೇಕ ಬದಲಾವಣೆಗಳು ಆಗುತ್ತಲೇ ಇವೆ.

ಈ ಬಗ್ಗೆ ಅಜಿತ್ ಧೋವಲ್ ಏನು ಹೇಳಿದ್ದಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ…

-ಚೇಕಿತಾನ

Tags

Related Articles

Close