ಪ್ರಚಲಿತ

ಭಾರತೀಯ ಸೇನೆಯನ್ನು ಇನ್ನಷ್ಟು ಬಲಿಷ್ಟವನ್ನಾಗಿ ಮಾಡಲು ಮೋದಿ ಸರಕಾರ ಪ್ರಾರಂಭಿಸಿರುವ ನೂತನ ಯೋಜನೆಯ ಬಗ್ಗೆ ಗೊತ್ತೇ?!

ಪದೇ ಪದೇ ಭಾರತೀಯ ಸೇನೆ ತನ್ನ ನೆರೆ ರಾಷ್ಟ್ರದ ಉಪಟಳದಿಂದ ಅದೆಷ್ಟೋ ಬಾರಿ ಶತ್ರುರಾಷ್ಟ್ರವನ್ನು ಹೀನಾಯವಾಗಿ ಸೋಲಿಸಿದರೂ ಕೂಡ ತಮ್ಮ ನರಿ
ಬುದ್ದಿಯನ್ನು ಬಿಡುವಲ್ಲಿ ಮಾತ್ರ ತಯಾರಾಗಿಲ್ಲ ಎನ್ನುವುದು ವಿಪರ್ಯಾಸ!! ಆದರೆ ಈಗಾಗಲೇ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ
ಭಾರತ ಇನ್ನಷ್ಟೋ ಬಲಿಷ್ಠ ರಾಷ್ಟ್ರವಾಗಲು ಸಿದ್ಧತೆಗಳನ್ನು ನಡೆಸುತ್ತಿದೆ!!

ಹೌದು! ಭಾರತದ ಗಡಿಯಲ್ಲಿ ಪಾಕಿಸ್ತಾನ ಹಾಗೂ ಚೀನಾ ಉಪಟಳಗಳ ನಡುವೆಯೇ ಹಳೆಯ ಶಸ್ತ್ರಾಸ್ತ್ರಗಳಿಗೆ ವಿದಾಯ ಹೇಳಲು ಬಯಸಿರುವ ಭಾರತೀಯ ಸೇನೆ, ಶೀಘ್ರದಲ್ಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲಿದೆ. ಮೋದಿ ಸರಕಾರ ತನ್ನ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಿಂದ ಭಾರತೀಯ ಸೇನೆ ನಾನಾ ರೀತಿಯಲ್ಲಿ ಮುಂದುವರೆದಿದ್ದು, ಇದೀಗ ಮತ್ತೊಮ್ಮೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವಲ್ಲಿ ಮುಂದಾಗಿದೆ!! ಈಗಾಗಲೇ ಮೋದಿ ಸರಕಾರ ಭಾರತೀಯ ಸೈನಿಕರಿಗೆ ಬುಲೆಟ್ ಫ್ರೂಫ್ ಚಾಕೆಟ್, ಬುಲೆಟ್ ಫ್ರೂಪ್ ಹೆಲ್ಮೆಟ್ ಗಳನ್ನು ನೀಡಿರುವ ವಿಚಾರ ಎಲ್ಲರಿಗೂ ತಿಳಿದಿದೆ!! ಇದರೊಂದಿಗೆ ಶತ್ರುಗಳನ್ನು ಎದುರಿಸಲು  ಉನ್ನತ ಆಜ್ಞೆಯನ್ನು ಪಾಲಿಸುತ್ತಿದ್ದ ಸೇನೆಯು ಇದೀಗ ಯಾವುದೇ ರೀತಿಯ ಆಜ್ಞೆಗಾಗಿ ಕಾಯಬೇಕೆಂದಿಲ್ಲ. ಬದಲಾಗಿ ಶತ್ರುಗಳನ್ನು ಎದುರಿಸಲು ಭಾರತೀಯ ಸೇನೆ ಸಮರ್ಥವಾಗಿದ್ದಲ್ಲದೇ, ಶತ್ರುರಾಷ್ಟ್ರವನ್ನು ಯುದ್ದಕ್ಕಾಗಿ ಆಹ್ವಾನ ನೀಡುವಷ್ಟರ ಮಟ್ಟಿಗೆ ಇದೀಗ ಭಾರತೀಯ ಸೇನೆ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಮೋದಿ ಸರಕಾರ!!

ಹಾಗಾಗಿ ಇದೀಗ ಶತ್ರುರಾಷ್ಟ್ರಗಳನ್ನು ಎದುರಿಸಲು ಭಾರತೀಯ ಸೇನೆ ಹಳೆಯ ಶಸ್ತ್ರಾಸ್ತ್ರಗಳಿಗೆ ವಿದಾಯ ಹೇಳಲು ಬಯಸಿದ್ದಲ್ಲದೇ, ಅದಕ್ಕಾಗಿ 40 ಸಾವಿರ ಕೋಟಿ ರೂಪಾಯಿ ಮೊತ್ತದ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ!! ಅಲ್ಲದೇ, ಅತ್ಯಾಧುನಿಕ ಮಾದರಿಯ ಹಗುರ ಮಷಿನ್ ಗನ್ ಗಳು, ಕಾರ್ಬೆನ್ ಗಳು, ರೈಫಲ್ ಮತ್ತು ಮದ್ದುಗುಂಡುಗಳನ್ನು ಸೇನೆ ಖರೀದಿಸಲಿದೆ. ಪ್ರಸ್ತಾವನೆಯ ಪ್ರಕಾರ, ಸೇನೆ 7 ಲಕ್ಷ ರೈಫಲ್, 44,000 ಹಗುರ ಮಷಿನ್ ಗನ್ ಮತ್ತು 44,600 ಕಾರ್ಬೆನ್‍ಗಳನ್ನು ಖರೀದಿಸಲಿದೆ. ಈ ಬಗ್ಗೆ ಈಗಾಗಲೇ ಖರೀದಿ ಪ್ರಕ್ರಿಯೆ ಆರಂಭವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯನ್ನು ನೀಡಿದೆ.

ಈ ಹಿಂದೆ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿಯ ಬೆದರಿಕೆಗೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಮೋದಿ ಸರಕಾರ ಸೇನೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಅತ್ಯಾಧುನಿಕ ಪಿನಾಕಾ ರಾಕೆಟ್ ಗಳನ್ನು ನಿಯೋಜಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ!! ಅಬ್ಬಾಸಿ ಭಾರತೀಯ ಸೇನೆಯನ್ನು ಎದುರಿಸಲು ಸಣ್ಣ ವ್ಯಾಪ್ತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದಾಗಿ ಎಚ್ಚರಿಸಿದ್ದರು, ಮೋದಿ ಸರಕಾರ ಅತ್ಯಾಧುನಿಕ ಪಿನಾಕಾ ರಾಕೆಟ್ ಗಳನ್ನು ನಿಯೋಜಿಸುವ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ!!.

ಭಾರತವನ್ನು ಎದುರಿಸಲು ಚೀನಾದ ಸಹಾಯದಿಂದ ಯುದ್ಧತಂತ್ರದ ನ್ಯೂಕ್ ಗಳನ್ನು ಪಾಕಿಸ್ತಾನ ಅಭಿವೃದ್ಧಿ ಪಡಿಸುತ್ತಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ) ಭಾರತದಲ್ಲಿ ನಿರ್ಮಾಣ ಮಾಡಿದ ಪಿನಾಕಾ ಬಹು-ಬ್ಯಾರೆಲ್ ರಾಕೆಟ್ ಲಾಂಚರ್
ಅನ್ನು ಭಾರತೀಯ ಸೇನೆ ಪಡೆಯಲಿದೆ, ಭಾರತದಲ್ಲಿಯೇ ನಿರ್ಮಾಣಗೊಂಡ ಈ ರಾಕೆಟ್ ಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಸುಲಭವಾಗಿ ಹೊತ್ತೊಯ್ಯುವ
ಸಾಮರ್ಥ್ಯವನ್ನು ಹೊಂದಿದೆ. ಇಷ್ಟೇ ಅಲ್ಲದೇ, ಅಮೆರಿಕಾದ ವಿಜ್ಞಾನಿಗಳ ತಜ್ಞರ ಪ್ರಕಾರ, ಪಾಕಿಸ್ತಾನ ತನ್ನ ಯುದ್ಧತಂತ್ರದ ನ್ಯೂಕ್ ಗಳನ್ನು ದೇಶದ ಒಂಭತ್ತು ವಿಭಿನ್ನ ಸ್ಥಳಗಳಲ್ಲಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ. ಭಾರತವನ್ನು ನೇರ ಯುದ್ದದಿಂದ ಎದುರಿಸಲು ಸಾಧ್ಯವಾಗದ ಪಾಕಿಸ್ತಾನ ಈ ನ್ಯೂಕ್ ಗಳನ್ನು ಭಾರತವನ್ನು ಗುರಿಯಾಗಿಸಿ ಅಭಿವೃದ್ಧಿ ಪಡಿಸಿದೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ!!

ಇದೀಗ ಹಳೆಯ ಶಸ್ತ್ರಾಸ್ತ್ರಗಳಿಗೆ ವಿದಾಯ ಹೇಳಲು ಮುಂದಾಗಿರುವ ಭಾರತೀಯ ಸೇನೆ, ಶೀಘ್ರದಲ್ಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲಿದೆ!! ಜತೆಗೆ ಪಾಕಿಸ್ತಾನ ಮತ್ತು ಚೀನಾದಿಂದ ಪದೇಪದೆ ಗಡಿ ಸಮಸ್ಯೆ ಉಂಟಾಗುತ್ತಿದ್ದು, ಉಗ್ರರ ಉಪಟಳ ತಡೆಯಲು ಸೇನೆಗೆ ಶಸ್ತ್ರಾಸ್ತ್ರಗಳ ಅಗತ್ಯವಿದೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಶಸ್ತ್ರಾಸ್ತ್ರ ಖರೀದಿ ಪ್ರಕ್ರಿಯೆ ಈಗ ಚುರುಕಾಗಿದೆ. ಅಲ್ಲದೆ ಲೈಟ್ ಮಷಿನ್ ಗನ್ (ಎಲ್.ಎಂ.ಜಿ) ಸಹಿತ ಹಗುರ ಮತ್ತು ಹೆಚ್ಚಿನ ಸಾಮರ್ಥ್ಯದ ಸಣ್ಣ ಶಸ್ತ್ರಾಸ್ತ್ರಗಳ ತಯಾರಿ ಬಗ್ಗೆಯೂ ಹೆಚ್ಚು ಗಮನ ಹರಿಸುವಂತೆ ರಕ್ಷಣಾ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ)ಗೆ ಸರಕಾರ ಸೂಚನೆ ನೀಡಿದೆ.

ಹಾಗಾಗಿ ಡಿಫೆನ್ಸ್ ಅಕ್ವಿಸಿಷನ್ ಸಮಿತಿ ಶಸ್ತ್ರಾಸ್ತ್ರ ಖರೀದಿ ಕುರಿತು ನಿರ್ಧರಿಸುತ್ತದೆಯಾದರೂ, ಅದಕ್ಕೂ ಮೊದಲು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಯಲಿದೆ. ಈ ಹಿಂದೆ ಸರಕಾರಿ ಸ್ವಾಮ್ಯದ ಇಶಾಪೋರ್ ರೈಫಲ್ ಕಾರ್ಖಾನೆ ತಯಾರಿಸಿದ್ದ ರೈಫಲ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಸದ್ಯ ಸೇನೆಯು ಹಳೆಯ ಇನ್ಸಾಸ್ ರೈಫಲ್ ಬಳಸುತ್ತಿದ್ದು, ಅದಕ್ಕೆ ವಿದಾಯ ಹೇಳಿ ಸುಮಾರು 7 ಲಕ್ಷ 7.6251 ಎಂಎಂ ರೈಫಲ್ ಖರೀದಿಸಲು ಚಿಂತನೆ ನಡೆಸಿದೆ. ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ನಿರ್ಮಲಾ ಸೀತಾರಾಮನ್, ಸೇನೆಯ ಆಧುನೀಕರಣ ಮತ್ತು ಯೋಧರ ಸುರಕ್ಷತೆಗೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಬದ್ಧವಾಗಿದೆ ಮತ್ತು ಅದಕ್ಕೆ ಮೊದಲ ಆದ್ಯತೆ ಕಲ್ಪಿಸಲಾಗುತ್ತದೆ ಎಂದಿದ್ದರು. ಅದರಂತೆ ಶಸ್ತ್ರಾಸ್ತ್ರ ಖರೀದಿ ಪ್ರಕ್ರಿಯೆ ವೇಗ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ!!

ಈ ಹಿಂದೆ ಸರಕಾರ 20 ಸಾವಿರ ಕೋಟಿ ರೂಪಾಯಿಗಳಲ್ಲಿ ಅತ್ಯಾಧುನಿಕ ಟ್ಯಾಂಕರ್, ಪದಾತಿ ದಳದ ಶಸ್ತ್ರಾಸ್ತ್ರಗಳು, ಪರಿಕರಗಳು, ಸಮರ ನೌಕೆಗಳು ಹಾಗೂ ಸಮರ ವಿಮಾನಗಳನ್ನು ಖರೀದಿಸಿದೆ. ಒಂದು ವೇಳೆ ಯುದ್ಧ ಸಂಭವಿಸಿದರೆ ಯಾವುದೇ ಶಸ್ತ್ರಾಸ್ತ್ರ ಅಥವಾ ಇತರ ಪೂರಕ ಸೌಲಭ್ಯಗಳ ಕೊರತೆ ಇಲ್ಲದೇ, ಯುದ್ಧ ಮುಂದುವರಿಸಲು ಭಾರತೀಯ ಸೇನೆಗೆ ಸಾಧ್ಯವಾಗುವ ರೀತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲಾಗಿದೆ ಎಂದು ಈ ಹಿಂದೆ ವರದಿಯಲ್ಲಿ ತಿಳಿಸಲಾಗಿದೆ!! ಈ ಬಾರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವಲ್ಲಿ  ಕೇಂದ್ರ ಸರಕಾರವು ಒಪ್ಪಿಗೆಯನ್ನು ನೀಡಿರುವುದು ಸಂತಸದ ವಿಚಾರವಾಗಿದೆ !! ಅಂತೂ ಭಾರತೀಯ ಸೇನೆ ಶತ್ರುರಾಷ್ಟ್ರವನ್ನು ಹಿಮ್ಮೆಟ್ಟಿಸುವಲ್ಲಿ ಇನ್ನಷ್ಟು ಬಲಿಷ್ಠವಾಗಲಿದ್ದು, ಶತ್ರುರಾಷ್ಟ್ರಗಳು ಈ ಬಗ್ಗೆ ಭಯಭೀತರಾಗಲಿರುವುದೂ ಮಾತ್ರ ಖಂಡಿತ!!!

– ಅಲೋಖಾ

Tags

Related Articles

Close