ಅಂಕಣ

ಭಾರತೀಯ ಸೇನೆಯ ‘ಮುಧೋಳ್ ನಾಯಿಯ’ ಬಗ್ಗೆ 16 ಅಂಶಗಳನ್ನು ಪ್ರತಿಯೊಬ್ಬ ಭಾರತೀಯನು ತಿಳಿದಿರಲೇಬೇಕು..ಕರ್ನಾಟಕದವರಂತೂ ಹೆಮ್ಮೆ ಪಡುವ ವಿಷಯ!

ಸೈನ್ಯದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸೇನೆಗೆ ಕರ್ನಾಟಕದ “ಮುಧೋಳ” ನಾಯಿಯನ್ನು ಸೇರ್ಪಡೆಗೊಳಿಸುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆ ಮತ್ತು ಮಹತ್ತರವಾದ ಹೆಜ್ಜೆ. ಇದು ಜರ್ಮನಿಯ ಶೆಪರ್ಡ್ಸ್, ಲ್ಯಾಬ್ರಡೋರ್ಸ್ ಮತ್ತು ಗ್ರೇಟ್ ಸ್ವಿಸ್ ಪರ್ವತ ನಾಯಿಗಳಷ್ಟು ವೆಚ್ಚದ ನಾಯಿಯಲ್ಲ. ಯಾಕೆಂದರೆ ಇದು ಸ್ವದೇಶಿ ಅದರಲ್ಲೂ ಕರ್ನಾಟಕಕ್ಕೆ ಸೇರಿದ್ದು. ಮುಧೋಳ್ ನಾಯಿಗಳು ಸ್ವದೇಶಿ ಆಗಿದ್ದರಿಂದ ಭಾರತದ ವಾತವಾರಣಕ್ಕೆ ಹೊಂದಿಕೊಳ್ಳುತ್ತವೆ. ಅದೇ ವಿದೇಶಿ ನಾಯಿಗಳಾಗಿದ್ದರೆ ಜಾಸ್ತಿ ಕಾಳಜಿ ವಹಿಸಬೇಕಾಗುತ್ತಿತ್ತು.

ಈಗಾಗಲೇ ಆರು ಮುಧೋಳ್ ನಾಯಿಗಳನ್ನು ಭಾರತೀಯ ಸೇನೆ ತೆಗೆದುಕೊಂಡಿದೆ. ಅವುಗಳನ್ನು ಉತ್ತರ ಪ್ರದೇಶದ ಮೀರತ್ ನಲ್ಲಿ ಸೈನ್ಯದ ರೆಮೌಂಟ್ ಮತ್ತು ಪಶುವೈದ್ಯ ಕಾರ್ಪ್ಸ್ (RVC) ಕೇಂದ್ರಕ್ಕೆ ತರಬೇತಿಗೆ ಕಳಿಸಲಾಗಿದೆ ಮತ್ತು ಈ ವರ್ಷದ ನಂತರ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಳ್ಳಲಿವೆ. ತರಬೇತಿಯ ನಂತರ ಆ ಮುಧೋಳ್ ನಾಯಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗಾರ್ಡ್ ಗಳಾಗಿ ಪೋಸ್ಟ್ ಮಾಡುತ್ತಾರೆ.

Mudhols

ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿರುವ ಮುಧೋಳ್ ನಾಯಿಯ ಬಗ್ಗೆ ನಾವು 16 ಅಂಶಗಳನ್ನು ತಿಳಿದುಕೊಳ್ಳಲೇಬೇಕು.

1.ಈ ತಳಿಯ ನಾಯಿಯು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ಊರಿನದು. ಈ ಮುಧೋಳ್ ನಾಯಿಯನ್ನು ಹಿಂದಿನಿಂದಲೂ ಬುಡಕಟ್ಟು ಜನಾಂಗದವರು ಬೇಟೆಯಾಡಲು ಬಳಸುತ್ತಿದ್ದರು. ಹಿಂದೆ ಒಂದು ಸಲ ಮುಧೋಳ್ ನಾಯಿಗಳು ಬೇಟೆಯಾಡುವುದನ್ನು ನೋಡಿದ ಮುಧೋಳದ ರಾಜನು ಮುಧೋಳ ನಾಯಿಯನ್ನು ತನ್ನ ಸೇನೆಗೆ ಸೇರಿಸಿಕೊಂಡಿದ್ದ. 1900ನೇ ಇಸವಿಯಲ್ಲಿ ಕಿಂಗ್ ಜಾರ್ವಿ ಮುಧೋಳಕ್ಕೆ ಭೇಟಿ ನೀಡಿದಾಗ ಅವನಿಗೆ ಮುಧೋಳ ರಾಜನು ಎರಡು ನಾಯಿಗಳನ್ನು ಕೊಡುಗೆಯಾಗಿ ನೀಡಿದ್ದ. ಇದರಿಂದ ಆ ನಾಯಿಯು ಮತ್ತಷ್ಟು ಜನಪ್ರಿಯವಾಯಿತು.

Mudhols

2.ಮುಧೋಳ್ ನಾಯಿಯನ್ನು ಬ್ರಿಟಿಷರು ಕಾರವಾನ್ ಹೌಂಡ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಏಕೆಂದರೆ ಈ ನಾಯಿಗಳು ಕಾರವಾನ್ ಎಂಬ ಜನಾಂಗದ ಜೊತೆಯಲ್ಲಿಯೇ ಇರುತ್ತಿದ್ದವು. ಸ್ಥಳಿಯರು ಮಾತ್ರ ಆ ನಾಯಿಯನ್ನು ಮುಧೋಳ್ ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು.

‎3.ಈ ಮುಧೋಳ್ ನಾಯಿಗಳು ಸಲ್ಕಿ ಮತ್ತು ಟಾಜಿ ಎಂಬ ಹೆಸರಿನ ತಳಿಯ ವಂಶವಾಹಿಗಳು. ಇವುಗಳನ್ನು ಅಫ್ಘಾನಿಸ್ತಾನ, ಅರಬ್ಬರು,ಪಠಾಣರು ಮತ್ತು ಪರ್ಷಿಯನ್ನರು ವಿದೇಶದಿಂದ ತಂದು ಭಾರತದಲ್ಲಿ ಬಿಟ್ಟಿದ್ದರು. ಅವುಗಳೇ ಮುಂದೆ ಮುಧೋಳ್ ಎಂಬ ಹೆಸರಿನಿಂದ ಜನಪ್ರಿಯವಾದವು.

4.ಮುಧೋಳ್ ನಾಯಿಗಳು ಪ್ರಪಂಚದಲ್ಲಿ ಅತೀ ಆರೋಗ್ಯವಂತ ನಾಯಿಯ ತಳಿಗಳಲ್ಲಿ ಒಂದು ಎಂಬ ಪ್ರಸಿದ್ಧಿ ಪಡೆದಿವೆ.

5.ಮುಧೋಳ್ ನಾಯಿಗಳು ಇತರ ನಾಯಿಗಳಿಗಿಂತ ಬಲು ಚುರುಕಾಗಿರುತ್ತವೆ. ಅವುಗಳು ನಿರಂತರವಾಗಿ ಆಯಾಸಗೊಳ್ಳದೆ ಇರುತ್ತವೆ.

 

6.ಮುಧೋಳ್ ನಾಯಿಗಳು ಉದ್ದನೆಯ ತಲೆಬುರುಡೆ ಮತ್ತು ಮೊನಚಾದ ಕುತ್ತಿಗೆಯನ್ನು ಹೊಂದಿರುವುದರಿಂದ, ಅವು 270 ಡಿಗ್ರಿಗಳಷ್ಟು ದೃಷ್ಟಿ ಕೋನದ್ದಾಗಿರುತ್ತವೆ. ಮಾನವರ ದೃಷ್ಟಿ ಕೋನಕ್ಕೆ ಹೋಲಿಕೆ ಮಾಡಿದರೆ ಎರಡು ಪಟ್ಟು ಜಾಸ್ತಿ ದೃಷ್ಟಿ ಕೋನ ಹೊಂದಿವೆ.

7.ಮುಧೋಳ್ ನಾಯಿಗಳು ಅಸಾಧಾರಣ ದೃಷ್ಟಿ ಶಕ್ತಿಯನ್ನು ಹೊಂದಿವೆ. ಅವುಗಳು ನೂರಾರು ಮೈಲು ದೂರದಿಂದ ಚಲನವಲನಗಳನ್ನು ಗುರುತಿಸಬಲ್ಲವು.
8.ಮುಧೋಳ್ ನಾಯಿಗಳಿಗೆ ಚಿಕ್ಕಂದಿನಿಂದಲೇ ಸ್ಥಿರವಾದ ವ್ಯಾಯಾಮ ಮಾಡಿಸಬೇಕು ಜೊತೆ ಜೊತೆಗೆ ಬೇರೆ ಪ್ರಾಣಿಗಳೊಂದಿಗೆ ಬೆರೆಯಲು ತರಬೇತಿ ಕೊಡಬೇಕು. ಏಕೆಂದರೆ ಆ ನಾಯಿಗಳು ಅಷ್ಟೊಂದು ಸ್ನೇಹ ಪೂರ್ವಕವಾಗಿರುವುದಿಲ್ಲ.

9.ಒಂದು ವರದಿಯ ಪ್ರಕಾರ ಜರ್ಮನ್ ಶೇಪರ್ಡ್ ನಾಯಿಗಳಿಗೆ ಈ ನಮ್ಮ ಮುಧೋಳ ನಾಯಿಯ ಕಾರ್ಯವನ್ನು ಹೋಲಿಸಿದರೆ ,ಜರ್ಮನ್ ಶೇಪರ್ಡ್ ನಾಯಿ ಒಂದು ಕಾರ್ಯವನ್ನು ಮುಗಿಸಲು 90 ಸೆಕೆಂಡ ತೆಗೆದುಕೊಂಡರೆ ಅದೇ ಕಾರ್ಯವನ್ನು ನಮ್ಮ ಮುಧೋಳ್ ನಾಯಿ 40 ಸೆಕೆಂಡಗಳಲ್ಲಿ ಮುಗಿಸಬಲ್ಲದು.

Mudhols

10. ಈಗ ಮುಧೋಳ್ ನಾಯಿಗಳು ಅಳಿವಿನಂಚಿನಲ್ಲಿರುವುದರಿಂದ ಅವುಗಳನ್ನು ಉಳಿಸಲು ಕರ್ನಾಟಕ ಪಶುವೈದ್ಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಒಂದು ಸಂಶೋಧನೆ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಿದೆ. 2010ರಲ್ಲಿ ಮುಧೋಳ್ ನಾಯಿಗಳ ಸಂಖ್ಯೆ 750 ಇವೆ ಎಂಬ ಮಾಹಿತಿ ಇರುವುದರಿಂದ. ಗಣನೀಯವಾಗಿ ಆ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.

11.ಮುಧೋಳ್ ನಾಯಿಗಳು 10ರಿಂದ 15 ವರ್ಷಗಳ ಕಾಲ ಬದುಕುತ್ತವೆ. ಅಂದ್ರೆ ಅವುಗಳ ಜೀವಿತಾವಧಿ 10ರಿಂದ 15 ವರ್ಷಗಳು.

12.ಮುಧೋಳ್ ನಾಯಿಗಳು ಪೂರ್ಣ ವಯಸ್ಕರಾಗಲು ಸುಮಾರು 18 ತಿಂಗಳು ಬೇಕಾಗುತ್ತವೆ.

13.ಇವುಗಳು ಮೊದ ಮೊದಲು ಪ್ರಸ್ಥಭೂಮಿಯಲ್ಲಿ ಕಂಡುಬರುತ್ತಿದ್ದವು. ಅವುಗಳನ್ನು ಅಲ್ಲಿಯ ಸ್ಥಳಿಯರು ಬೇಟೆಗಾಗಿ ಬಳಸುತ್ತಿದ್ದರು.

 

14.ಜನವರಿ 9 ,2005ರಲ್ಲಿ ಭಾರತೀಯ ಅಂಚೆ ಇಲಾಖೆ ಗೌರವಾಪೂರ್ವಕವಾಗಿ ನಾಯಿಗಳ ಚಿತ್ರವಿರುವ 5ರೂಪಾಯಿಯ ಅಂಚೆ ಚೀಟಿ ಬಿಡುಗಡೆ ಮಾಡಿತ್ತು

Mudhols

15.ಮರಾಠರು ಈ ಮುಧೋಳ್ ನಾಯಿಗಳನ್ನು ಮೊಘಲರ ವಿರುದ್ಧ ಹೋರಾಡಲು ಬಳಸುತ್ತಿದ್ದರು. ಗೆರಿಲ್ಲಾ ಯುದ್ಧಗಳಲ್ಲಿ ಈ ನಾಯಿಗಳು ಪ್ರಮುಖ ಪಾತ್ರ ವಹಿಸಿದ್ದವು.

16.ಶಿವಾಜಿ ಮಹಾರಾಜರ ಮೊಮ್ಮಗ ಛತ್ರಪತಿ ಸಾಹು ಮಹಾರಾಜರು ಒಂದು ಸಲ ತಮ್ಮ ದಂಡಯಾತ್ರೆಯಲ್ಲಿ ಹುಲಿ ದಾಳಿಗೆ ಒಳಗಾಗಿದ್ದರಂತೆ ಆಗ ಹುಲಿಯಿಂದ ರಕ್ಷಿಸಿದ್ದು ಇದೇ ನಮ್ಮ ಹೆಮ್ಮೆಯ ಮುಧೋಳ ನಾಯಿ.

Mudhols

-ಮಹೇಶ್

Tags

Related Articles

Close