ಇತಿಹಾಸ

ಭಾರತ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸಾವರ್ಕರ್ ಅವರಿಗೆ ಅವಮಾನ ಮಾಡುತ್ತಿದ್ದೇವಲ್ಲ?! ನಾವೆಷ್ಟು ಕೀಳು ಮನಸ್ಸುಳ್ಳವರು?!

“ತಾಯ್ನೆಲವೆ ಮನಸೆಲ್ಲ ಮುಡಿಪಾಯ್ತು ನಿನಗೆ. ಮಾತು ಮಾತಿ ಪ್ರತಿಭೆ ಅರ್ಪಿತವು ಜತೆಗೆ, ಹೊಸ ಕವಿತೆ ಹೊಸೆ ಹೊಸೆದು ಬರೆದಿರದೆ ನಿನಗೆ, ನಿನ್ನ ಹೊರತಿಲ್ಲವೀಲೇಖನಿಯ ಮನೆಗೆ”…

ಇದು ವೀರ ಸಾವರ್ಕರ್ ಜೈಲಿನಲ್ಲಿ ಕುಳಿತು ತಾಯಿ ಭಾರತಿಯ ಕುರಿತು ಮಾಡಿದ ಗುಣಗಾನ. ಸಾವರ್ಕರ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ತಾಯಿ ಭಾರತಿಯನ್ನು ಉಸಿರಾಗಿಟ್ಟುಕೊಂಡು, ಅವಳ ಮುಕ್ತಿಗಾಗಿ ತನ್ನ ಜೀವನವನ್ನೇ ಸವೆಸಿದ ಪುಣ್ಯಾತ್ಮ ಆತ. ಅಖಂಡ ಭಾರತದ ಪರಿಕಲ್ಪನೆಯನ್ನು ಹೊಂದಿದ್ದ ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಕ್ಷಾತ್ರ ತೇಜ. ಭಾರತವನ್ನು ಪಾಶ್ಚಿಮಾತ್ಯರಿಂದ ಮುಕ್ತಿಗೊಳಿಸಲು ಎರಡು ಬಾರಿ ಕರಿನೀರಿನ ಶಿಕ್ಷೆ ಅನುಭವಿಸಿದ ಅಪ್ಪಟ ದೇಶ ಪ್ರೇಮಿ. ಆದರೆ ದೇಶವನ್ನು ಅರುವತ್ತು ವರ್ಷ ಆಳಿದ ಕಾಂಗ್ರೇಸಿಗರಿಗೆ ಮಾತ್ರ ಸಾವರ್ಕರ್ ಕಂಡರೆ ಸಿಡಿಲು ಬಡಿದಂತಹ ಅನುಭವ. ಕಾಂಗ್ರೇಸ್ ಪಕ್ಷವೆಂದರೆ ಅದು ಹಿಂದೂ ವಿರೋಧಿ ಪಕ್ಷವೆಂದು ಈಗ ಗುಟ್ಟಾಗಿ ಉಳಿದಿಲ್ಲ ಬಿಡಿ.

ಸ್ವಾತಂತ್ರ್ಯದ ಪೂರ್ವದಲ್ಲೂ ಮುಸ್ಲಿಮರ ಓಲೈಕೆಗಾಗಿ ಹಿಂದೂಗಳನ್ನು ಬಲಿಕೊಟ್ಟಿದ್ದ ಕೆಲವು ಸ್ವಘೋಷಿತ ಜಾತ್ಯಾತೀತವಾದಿ ಕಾಂಗ್ರೇಸ್ ನಾಯಕರಿಗೆ ಅಪ್ಪಟ ಹಿಂದುತ್ವವಾದಿಯಾಗಿದ್ದ ವೀರ ಸಾವರ್ಕರ್ ರನ್ನು ಕಂಡರೆ ಎಲ್ಲಿಲ್ಲದ ಸಿಟ್ಟು. ಸ್ವಾತಂತ್ರ್ಯದ ಹೋರಾಟಕ್ಕಾಗಿ ಹಿಂದುತ್ವದ ಕ್ರಾಂತಿಕಾರಿ ಮಾರ್ಗಗಳನ್ನು ಅನುಸರಿಸಿದರು ಎನ್ನುವ ಏಕೈಕ ಉದ್ಧೇಶದಿಂದ ಭಗತ್ ಸಿಂಗ್, ರಾಜ್ ಗುರು, ಸುಖದೇವರಂತಹ ಹೋರಾಟಗಾರರನ್ನು ದೂರ ಇಟ್ಟದ್ದ ಈ ಸೋಕಾಲ್ಡ್ ನಾಯಕರು ಇನ್ನು ಹಿಂದುತ್ವದ ವಿಷಯದಲ್ಲಿ ಸಿಡಿಲಮರಿಯಂತಿದ್ದ ಸಾವರ್ಕರ್ ಹೇಗೆ ತಾನೆ ಹತ್ತಿರವಾಗುತ್ತಾರೆ. ಗಾಂಧೀ ತಾತನ ಕೃಪಾಕಟಾಕ್ಷದಿಂದ, ತಂದೆ ಮೋತಿಲಾಲ್ ನೆಹರೂರ ಹಟದಿಂದ ಅರ್ಹತೆ ಇಲ್ಲದಿದ್ದರೂ ಪ್ರಧಾನಿಯಾದ ನಮ್ಮ ದೇಶದ ಮೊದಲ ಪ್ರಧಾನಿ ಜವಹರಲಾಲರಿಗಂತೂ ಸಾವರ್ಕರ್ ಕಂಡರೆ ಒಂದು ಕಡೆ ಸಿಟ್ಟು ಬರುತ್ತಿದ್ದರೆ ಮತ್ತೊಂದು ಕಡೆ ನನ್ನ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆ ಬರುತ್ತೋ ಅನ್ನೋ ಹೆದರಿಕೆ ಕಾಡುತ್ತಲೇ ಇರುತ್ತಿತ್ತು. ಯಾವ ಭಾರತಕ್ಕಾಗಿ 52 ವರ್ಷ ಅಂಡಮಾನಿನ ಆ ಸೆಲ್ಯೂಲರ್ ಜೈಲಿನಲ್ಲಿ ಕರಿನೀರಿನ ಶಿಕ್ಷೆಯನ್ನು ಅನುಭವಿಸಿದರೋ ಅದೇ ಭಾರತದ ನಾಯಕರು ಸ್ವಾತಂತ್ರ್ಯ ಸಿಕ್ಕ ನಂತರವೂ ಎರಡೆರಡು ಬಾರಿ ಸಾವರ್ಕರ್‍ರನ್ನು ಜೈಲಿಗೆ ಹಾಕಲಾಗಿತ್ತು.

ಸುಪ್ರೀಮ್ ಕೋರ್ಟ್‍ನ ನ್ಯಾಯಾಧೀಶರು ಸಾವರ್ಕರ್ ಜೀ ನೀವು ಅಪರಾಧಿ ಅಲ್ಲ ಆದ್ರೂ ಯಾಕೆ ಕಟಕಟಯಲ್ಲು ನಿಂತಿದ್ದೀರಿ ಎಂದರೂ ಹಠ ಬಿಡದ ನೆಹರೂ ಮಹಾತ್ಮ ಗಾಂಧೀ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹಾಕಲಾಯಿತು. ಕಠೋರ ಹಿಂದೂ ಪ್ರೇಮಿ ಎನ್ನುವ ಒಂದೇ ಒಂದು ಕಾರಣಕ್ಕೆ ಭಾರತದಿಂದ ಭಿಕ್ಷೆ ಗಳಿಸಿಗೊಂಡ ಪಾಕಿಸ್ಥಾನದ ಪ್ರಧಾನಿ ಭಾರತಕ್ಕೆ ಬಂದಾಗಲೂ ಸಾವರ್ಕರ್‍ರನ್ನು ಅನಾವಶ್ಯಕವಾಗಿ ಜೈಲಿಗಟ್ಟಲಾಯಿತು. ಯಾವ ದೇಶಕ್ಕಾಗಿ ತನ್ನ ಜೀವನವನ್ನೇ ಸವೆಸಿದರೋ, ಯಾವ ದೇಶಕ್ಕಾಗಿ ಎರಡೆರಡು ಬಾರಿ ಕರಿ ನೀರಿನ ಶಿಕ್ಷೆ ಅನುಭವಿಸಿರೋ, ಯಾವ ದೇಶಕ್ಕಾಗಿ ವಿದೇಶಗಳನ್ನೆಲ್ಲ ಅಲೆದು ಭಾರತದ ದಾಸ್ಯ ಮುಕ್ತಿಗಾಗಿ ಹೋರಾಟ ನಡೆಸಿದರೋ, ಯಾವ ದೇಶಕ್ಕಾಗಿ ತನ್ನ ಜೀವನವನ್ನು ಜೈಲಿನಲ್ಲಿಯೇ ಭಾರತಾಂಬೆಗೆ ಅರ್ಪಿಸಿದರೋ, ಅದೇ ಸಾವರ್ಕರ್ ಸ್ವಾತಂತ್ರ್ಯ ಭಾರತದಲ್ಲಿ ಕಾಂಗ್ರೇಸ್ ನಾಯಕರಿಂದ ದೇಶದ್ರೋಹಿ ಅನ್ನುವ ಪಟ್ಟವನ್ನು ಕಟ್ಟಿಕೊಂಡರು. ಯಾವಾಗ ಸಾವರ್ಕರ್ ಜೈಲು ಸೇರುತ್ತಾರೋ ಆವಾಗ ಯುವ ಜನತೆ ಬೀದಿಗಿಳಿಯುತ್ತಿದ್ದರು. ಈ ಸ್ವಾತಂತ್ರ್ಯ ಹೋರಾಟದ ಅನಘ್ರ್ಯ ರತ್ನವನ್ನು ಕಂಡು ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್, ಮದನ್ ಲಾಲ್ ದಿಂಗ್ರಾರಂತಹ ಅಪ್ರತಿಮ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ತುಳಿಯುತ್ತಾರೆ. ಸಾವರ್ಕರ್‍ರಿಂದ ಪ್ರೇರಣೆ ಪಡೆದು, ಅವರ ಆದೇಶದ ಮೇರೆಗೆ ಭಾರತೀಯರಿಗೆ ಕಿರುಕುಳ ನೀಡಿ ಲಂಡನ್‍ನಲ್ಲಿ ಮೆರೆಯುತ್ತಿದ್ದ ದುಷ್ಟ ಕರ್ಜನ್ ವೈಲಿಯನ್ನು ಮದನ್ ಲಾಲ್ ದಿಂಗ್ರಾ ಹತ್ಯೆಗೈದಿದ್ದರೆ, ಇತ್ತ ಸಾವರ್ಕರ್ ಬರೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕವನ್ನು ಮನೆ ಮನೆಗೆ ಮಾರಾಟ ಮಾಡಿ ಅದ್ರಲ್ಲಿ ಬಂದ ಹಣವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಉಪಯೋಗಿಸುತ್ತಿರುವುದರೊಂದಿಗೆ ಮನೆ ಮನೆಯಲ್ಲೂ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದ್ದರು ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಎಂಬ ಸ್ವಾತಂತ್ರ್ಯದ ದಾಹವುಳ್ಳ ಹುಲಿಗಳು.

ಸಾವರ್ಕರ್ ಬಗೆಗಿನ ಕಾಂಗ್ರೇಸಿಗರ ವಿಕೃತ ಮನಸಿನ ಕ್ರೂರತೆಯನ್ನು ಬಿಚ್ಚಿಡುವ ಮೊದಲು ಆ ಪುಣ್ಯಾತ್ಮನ ಬಗ್ಗೆ ಸಣ್ಣ ಕಥೆ ಹೇಳ್ತೇವೆ ಕೇಳಿ…

ವೀರ ಸಾವರ್ಕರ್ ಅನುಭವಿಸಿದ ಕಠಿಣ ಜೈಲು ಶಿಕ್ಷೆಯನ್ನು ಭಾರತದ ಮತ್ತೊಬ್ಬ ವ್ಯಕ್ತಿಯೂ ಅನುಭವಿಸಿರಲಿಕ್ಕಿಲ್ಲ. ದೇಶಕ್ಕಾಗಿ ಪ್ರಾಣವನ್ನೇ ಅರ್ಪಣೆ ಮಾಡಲು ಹೊಟಿದ್ದ ಅವರಿಗೆ ಮೃತ್ಯುವನ್ನು ಕಂಡರೆ ಅತಿ ಪ್ರೀತಿ. ಒಬ್ಬ ವ್ಯಕ್ತಿಗೆ ಒಂದು ಬಾರಿ ಜೀವಾವದಿ ಶಿಕ್ಷೆ ಆಗುವುದು ಸಾಮಾನ್ಯ. ಆದ್ರೆ ವೀರ ಸಾವರ್ಕರ್‍ಗೆ ಎರಡೆರಡು ಬಾರಿ ಜೀವಾವಧಿ ಶಿಕ್ಷೆಯಾಗಿತ್ತು. ಎರಡು ಬಾರಿ ಜೀವಾವದಿ ಶಿಕ್ಷೆ ಕೊಡುವ ಮೂಲಕ ಆ ಪುಣ್ಯಾತ್ಮನಿಗೆ ಪುನರ್ಜನ್ಮವಿದೆ ಎಂದು ಸ್ವತಃ ಬ್ರಿಟಿಷರೇ ಒಪ್ಪಿದ್ದರು.

ಅದೊಂದು ದಿನ ಸಾವರ್ಕರರನ್ನು ಹಡಗಿನಲ್ಲಿ ಅಂಡಮಾನ್‍ನ ಸೆಲ್ಯೂಲರ್ ಜೈಲಿಗೆ ಕರೆದೊಯ್ಯುವಾಗ, ಅವರು ತಪ್ಪಿಸಿಕೊಳ್ಳುವ ಯೋಚನೆ ಮಾಡಿದ್ದರು. ರಾತ್ರಿಯಿಡೀ ನಿದ್ದೆ ಮಾಡದೆ ಪ್ರಾಣಾಯಾಮ ಮಾಡಿ ದೇಹವನ್ನು ಕುಗ್ಗಿಸಿಬಿಟ್ಟಿದ್ದರು. “ಟಾಯ್ಲೇಟ್‍ಗೆ ಹೋಗಬೇಕು ಕೈಕಾಲಿಗೆ ಹಾಕಿರುವ ಬೇಡಿಯನ್ನು ಕಳಚು” ಎಂದು ಬ್ರಿಟಿಷ್ ಅಧಿಕಾರಿಗೆ ಹೇಳಿ, ಆ ಬೃಹತ್ ಹಡಗಿನ ಟಾಯ್ಲೇಟ್ ಒಳಗೆ ಹೋಗಿ, ಅದ್ರಲ್ಲಿದ್ದ ಕಿರಿದಾದ ಗಾಜಿನ ಕಿಟಕಿಯನ್ನು ಒಡೆದು, ಅರೆಬರೆ ಒಡೆದ ಗಾಜಿನ ಕಿಟಕಿಯ ಒಳಗೆ ಹೊಕ್ಕಿ ಸಮುದ್ರಕ್ಕೆ ಹಾರಿದ್ದರು. ಆ ಸಣ್ಣ ಗಾಜಿನ ಕಿಟಕಿಯಿಂದ ದೇಹವನ್ನು ನುಗ್ಗಿಸಿ ಹೊರಬರುವಾಗ ಇಡೀ ದೇಹವೇ ಸೀಳಿ ಹೋಗಿತ್ತು. ಇಡೀ ಸಮುದ್ರದಲ್ಲೇ ಇವರ ದೇಹದ ರಕ್ತವು ತೊಯ್ದು ಹೋಗಿದ್ದು. ಸಣ್ಣ ಗಾಯಕ್ಕೆ ಉಪ್ಪು ತಾಗಿದರೆ ಕಿರುಚಿಕೊಳ್ಳುವ ನಾವು ಇಡೀ ದೇಹವೇ ಸೀಳಿ, ರಕ್ತದಿಂದ ತೊಯ್ದು
ತೊಪ್ಪೆಯಾಗಿದ್ದ ದೇಹಕ್ಕೆ ಆ ಉಪ್ಪಿನ ಸಮುದ್ರದಲ್ಲಿ ಈಜುವಾಗ ಅದು ಹೇಗಾಗಿರಬೇಡ. ಆದ್ರೂ ಈಜುತ್ತಾ ಈಜುತ್ತಾ ಫ್ರಾನ್ಸ್ ದಡ ಸೇರುವಾಗ ಬ್ರಿಟಿಷರ
ಕುತಂತ್ರದಿಂದ ಸೆರೆಯಾಗ್ತಾರೆ ಸಾವರ್ಕರ್.

ಕಣ್ಣಿನಲ್ಲಿ ನೀರು ಬರುತ್ತೆ ಕಣ್ರೀ… ಸಾವರ್ಕರ್ ಕಥೆ ಕೇಳುವಾಗ ಬಿಕ್ಕಿ ಬಿಕ್ಕಿ ಅಳುವ ಮನಸು ಬರುತ್ತೆ. ಅವರ ಇತಿಹಾಸವನ್ನು ಕೆದಕಿದರೆ ಹೊಟ್ಟೆ ಉರಿಯುತ್ತೆ, ಮನಸು ಕುಗ್ಗುತ್ತೆ.

ಅಂಡಮಾನಿನ ಆ ಜೈಲಿನಲ್ಲಿ ಸಾವರ್ಕರ್ ಅನುಭವಿಸಿದ ನರಕಯಾತನೆ ಕೇಳಿದರೆ ಎಂತ ಕಲ್ಲೆದೆಯ ಮನಸು ಕೂಡಾ ಕರಗಬಹುದು. ಧೈತ್ಯ ದೇಹದ ಬ್ರಟಿಷ್ ಅಧಿಕಾರಿಗಳಿಗೆ ಹೆದರದ ಸಾವರ್ಕರ್‍ರನ್ನು ಬ್ರಿಟಿಷರು ನಡೆಸಿಕೊಂಡ ರೀತಿ… ಅಬ್ಬಬ್ಬಾ ಶತ್ರುವಿಗೂ ಆ ಪರಿಸ್ಥಿತಿ ಬರಬಾರದು. ತನ್ನನ್ನು ಇರಿಸಿದ್ದ ಜಾಗ ಮಲಮೂತ್ರ ಮಾಡುವ ಜಾಗವಾಗಿತ್ತು. ಅಲ್ಲಿರುವ ಎಲ್ಲಾ ಕೈದಿಗಳು ಅಲ್ಲಿಗೆ ಬಂದು ಮಲ ಮೂತ್ರ ಮಾಡಿ ಹೋಗುತ್ತಿದ್ದರು. ಇದರಿಂದ ಸಾವರ್ಕರರಿಗೆ ಕಾಯಿಲೆ ಕೂಡಾ ಬಂದಿತ್ತು. ಅಂತಹ ನರಕ ಯಾತನೆಯನ್ನು ಅನುಭವಿಸಿ ತಾಯಿ ಭಾರತಿಗೋಸ್ಕರ ಸಹಿಸಿಕೊಂಡು ಕುಳಿತಿದ್ರಲ್ಲಾ ಅವರ ದೇಶಭಕ್ತಿಗೆ ಏನನ್ನಬೇಕು.

ಗಾಣವನ್ನು ತೆಗೆಯಲು ಎತ್ತುಗಳನ್ನು ಬಳಸುವುದು ಕೇಳಿದ್ದೇವೆ. ಆದ್ರೆ ಸಾವರ್ಕರ್ ಮೇಲಿನ ಧ್ವೇಷ ಸಾಧನೆಗಾಗಿ ಆ ಜೈಲಿನಲ್ಲಿ ಸಾವರ್ಕರ್‍ಗೆ ಗಾಣವನ್ನು ಕಟ್ಟಿ ಎಣ್ಣೆ ತೆಗೆಯುತ್ತಿದ್ದರು. ತೆಂಗಿನ ಕಾಯಿ ಸಿಪ್ಪೆಗಳನ್ನು ಸುಳಿದು ದಿನಕ್ಕೆ ಇಷ್ಟರಂತೆ (ಫೌಂಡ್ ಲೆಕ್ಕದಲ್ಲಿ) ಹಗ್ಗ ನೆಯ್ಯಲು ಕೆಲಸ ನೀಡಿದರು. ಸ್ವಲ್ಪ ಕಡಿಮೆಯಾದರೂ ಛಡಿಯೇಟಿನಿಂದ ಮನಬಂದಂತೆ ಭಾರಿಸುತ್ತಿದ್ದರು. ರಕ್ತ ಚಿಮ್ಮುತ್ತಿತ್ತು. ಪ್ರತಿ ಹೊಡೆತದಲ್ಲೂ ಭಾರತ್ ಮಾತಾ ಕೀ ಜೈ, ಭಾರತ್ ಮಾತಾ ಕೀ ಜೈ ಎನ್ನುವ ಭಾರತ ಮಾತೆಯ ಸ್ತುತಿ ಮಾತ್ರ ಮರೆಯಲೇ ಇಲ್ಲ. ಅದೆಷ್ಟೇ ನೋವುಗಳನ್ನು ಅನುಭವಿಸಿದರೂ ಅವರಲ್ಲಿದ್ದ ದೇಶ ಪ್ರೇಮದ ಹುಚ್ಚು ಕಡಿಮೆಯಾಗಲೇ ಇಲ್ಲ.

ಸಾವರ್ಕರ್ ಕೇವಲ ಗನ್ನು ಹಿಡಿದು ಬದುಕಿದವರಲ್ಲ. ಅವರು ಪೆನ್ನು-ಗನ್ನುಗಳ ಸಮಾಗಮರಾಗಿದ್ದರು. ಮಹಾಕವಿಯಾಗಿದ್ದರು. ಭಾರತ ಮಾತೆಯ ಬಗ್ಗೆ ಬರೆಯದೆ
ಕೈಗಳು ತುಕ್ಕು ಹಿಡಿದು ಹೋಗಿದ್ದವು. ಅದೊಂದು ದಿನ ಪಕ್ಕದಲ್ಲೇ ಒಂದು ಮೊಳೆ ಸಿಕ್ಕಿತ್ತು. ಆ ಮೊಳೆಯಿಂದ ಜೈಲಿನಲ್ಲಿರುವ ಗೋಡೆಯಲ್ಲಿ ತಾಯಿ ಭಾರತಿಯ ಬಗ್ಗೆ ಹತ್ತು ಸಾವಿರ ಗೆರೆಗಳ ಕವನವನ್ನು ಬರೆಯುತ್ತಾರೆ. ಅದೆಷ್ಟು ನೋವುಗಳನ್ನು, ನರಕಯಾತನೆಗಳನ್ನು ಅನುಭವಿಸಿದರೂ ಅವರ ರಕ್ತದ ಕಣ ಕಣವೂ ಹೇಳುತ್ತಿದ್ದುದು ಒಂದೇ, ಅದು ಭಾರತ್ ಮಾತಾ ಕೀ ಜೈ…

ಅವರಿಗೆ ನೀಡಿದ್ದ ಕರಿನೀರಿನ ಶಿಕ್ಷೆ ಅತ್ಯಂತ ಘೋರವಾಗಿತ್ತು. ತನ್ನ ದೇಹದ ಅರ್ಧ ಭಾಗವನ್ನು ಆ ವಿಷಕಾರಿಯಾದ ನೀರಿನಲ್ಲಿ ಇಡುವ ಕ್ರೂರ ಶಿಕ್ಷೆಯಾಗಿತ್ತು. ಆ ಶಿಕ್ಷೆಯನ್ನು ಅನುಭವಿಸುತ್ತಾ ತನ್ನ ಎರಡೂ ಕಾಲುಗಳೂ ಕೊಳೆತು ಹೋಗಿತ್ತು. ಆದರೂ ಭಾರತವನ್ನು ಸ್ವಾತಂತ್ರ್ಯಗೊಳಿಸುವ ಅವರ ಕನಸು ಮರೆಯಾಗಲೇ ಇಲ್ಲ.ತನ್ನ ದೇಶಭಕ್ತಿಯಿಂದ ತಂದೆ, ತಾಯಿಯನ್ನು ಕಳೆದುಕೊಂಡರು. ಅತ್ತಿಗೆಯ ಪತ್ರಕ್ಕೂ ಉತ್ತರಿಸಲಾಗದೆ, ಕೈಹಿಡಿದ ಹೆಂಡತಿಗೂ ನ್ಯಾಯ ಕೊಡಲಾಗದೆ, ಮಗನ ಹೊಣೆಯನ್ನೂ ಹೊತ್ತುಕೊಳ್ಳಲಾಗದೆ ಭಾರತ ಮಾತೆಯೇ ನನ್ನ ಕುಟುಂಬ ಎಂದು ಸದಾ ಕಾಲ ಅವಳ ಜಪವನ್ನೇ ಮಾಡುತ್ತಾ ಕುಳಿತಿದ್ದರು. ಭಾರತ ಸ್ವಾತಂತ್ರ್ಯಗೊಳ್ಳುವವರೆಗೂ ನಾನು ವಿರಮಿಸಲಾರೆ ಎಂದು ಹಠ ಹಿಡಿದಿದ್ದರು.

ಸಾಲದು…ಅವರ ದೇಶಭಕ್ತಿಯ ಕಥೆಯನ್ನು ಹೇಳಲು ಪದಪುಂಜಗಳೇ ಸಾಲದು. ಅವರ ದೇಶಪ್ರೇಮ ಗೌರೀ ಶಿಖರಕ್ಕಿಂತಲೂ ಹೆಚ್ಚು. ಅವರ ದೇಶಭಕ್ತಿ ಸೂರ್ಯ ಮುಳುಗದ ಸಾಮ್ರಾಜ್ಯಕ್ಕಿಂತಲೂ ವಿಶಾಲ. ಇಂತಹ ಭಾರತ ಮಾತೆಯ ಭಂಟನಿಗೆ ನಮ್ಮ ದೇಶದ ಕಾಂಗ್ರೇಸ್ ನಾಯಕರು ನೀಡಿದ ಬಿರುದು ದೇಶದ್ರೋಹಿ…

ಸದಾ ಅಹಿಂಸೆಯ ತತ್ವವನ್ನು ಪಾಲಿಸಿಕೊಂಡು ಬರುತ್ತಿದ್ದ ಕೆಲವು ಸ್ವಘೋಷಿತ ಸ್ವಾತಂತ್ರ್ಯ ಹೋರಾಟಗಾರರಿಗೆ ಸೆಡ್ಡು ಹೊಡೆದು ಕ್ರಾಂತಿಕಾರಿ ಮಾರ್ಗಗಳನ್ನು ತುಳಿದು ಇಡೀ ದೇಶವೇ ಸ್ವಾತಂತ್ರ್ಯದ ಕಹಳೆಯನ್ನು ಊದುವಂತೆ ಮಾಡಿದ್ದರು ಸಾವರ್ಕರ್. ನಿಜವಾಗಿಯೂ ಅಂದು ಬ್ರಿಟಿಷರು ಬೆದರಿದ್ದು ಸಾವರ್ಕರ್‍ರವರ ಗಂಡೆದೆಗೇ ಹೊರತು ಸಾವಿಗೆ ಹೆದರಿ ಕೂತು ಸತ್ಯಾಗ್ರಹ ಕುಳಿತ ನೆಹರೂರಂತವರಿಗಲ್ಲ. ಪೆನ್ನು ಹಿಡಿಯಬೇಕಾಗಿದ್ದ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ಗನ್ನು ಹಿಡಿದ ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್, ರಾಜ್ ಗುರು , ಸುಖದೇವ್‍ರಂತಹ ಸ್ವಾತಂತ್ರ್ಯದ ಸಿಡಿತಲೆಗಳಿಗೇ ಹೊರತು, ಹೆಸರಿಗಾಗಿ, ಅಧಿಕಾರದ ಆಸೆಗಾಗಿ ಗಾಂಧಿ ತತ್ವವನ್ನೇ ಮುರಿದು, ಮರದಡಿಯಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಮದ್ಯಪಾನ ಮಾಡುತ್ತಾ, ಫಾರಿನ್ ಹೆಣ್ಣುಮಕ್ಕಳೊಂದಿಗೆ ಸರಸವನ್ನಾಡುತ್ತಿದ್ದ ಸೋಗಲಾಡಿ ಜವಹರಲಾಲ್ ನೆಹರೂರ ಕಪಟ ನಾಟಕದ ಅಹಿಂಸಾ ತತ್ವಕ್ಕಲ್ಲ.

ಸ್ವಾತಂತ್ರ್ಯದ ವಿಚಾರದಲ್ಲಿ ದಿಟ್ಟ ನಡೆಯನ್ನು ಇಟ್ಟಿದ್ದ ಗಾಂಧೀಜೀ ಆಪ್ತ ಸರ್ದಾರ್ ವಲ್ಲಭಬಾಯಿ ಪಟೇಲ್‍ಗೆ ದಕ್ಕಬೇಕಿದ್ದ ಪ್ರಧಾನಿ ಪಟ್ಟವನ್ನು ಗಾಂಧೀಜೀ ಬಳಿ ಮಕ್ಕಳಂತೆ ಕಾಡಿ, ಬೇಡಿ, ತಂದೆ ಮೋತಿಲಾಲ್ ನೆಹರೂರ ಕೃಪಾಕಟಾಕ್ಷದಲ್ಲಿ ಪ್ರಧಾನಿ ಪಟ್ಟವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ನಮ್ಮ ಮೊದಲ
ಪ್ರಧಾನಿ. ಸ್ವಾತಂತ್ರ್ಯ ಬಂದಮೇಲೆ ಯಾವ ಕಾಂಗ್ರೇಸ್ ಪಕ್ಷವನ್ನು ವಿಸಜೀಸಬೇಕೆಂದು ಗಾಂಧೀಜಿ ಬಯಸಿದ್ದರೋ, ಆ ಕಾಂಗ್ರೇಸ್ ವಿಸರ್ಜಿಸಿದರೆ ನಾನು
ಪ್ರಧಾನಿಯಾಗುವುದು ಹೇಗೆ ಎಂಬ ಆತಂಕದಿಂದ ಮತ್ತೆ ಕಾಡಿ ಬೇಡಿ ಕಾಂಗ್ರೇಸನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

1948ರಲ್ಲಿ ಗಾಂಧೀಜಿಯ ಹತ್ಯೆಯಾಗುತ್ತೆ. ಆವಾಗ ತಾನೇ ಪ್ರಧಾನಿ ಪಟ್ಟಕ್ಕೇರಿದ್ದ ನೆಹರೂ, ಗಾಂಧೀ ಹತ್ಯೆ ಮಾಡಿದ್ದು ಯಾರು ಎಂಬುವುದನ್ನು ಅರಿತಿದ್ದರೂ, ಸದಾ ಕಾಲ ಸೇಡು ತೀರಿಸಲು ಯತ್ನಿಸುತ್ತಿದ್ದು, ಸಿಕ್ಕಿದ್ದೇ ಛಾನ್ಸ್ ಎಂದುಕೊಂಡು ಗಾಂಧೀ ಹತ್ಯೆಯ ಆರೋಪದಲ್ಲಿ ವಿನಾ ಕಾರಣ ವೀರ ಸಾವರ್ಕರರನ್ನು ಬಂಧಿಸಲು ಆದೇಶಿಸುತ್ತಾರೆ.

ಯಾವ ದೇಶ ದಾಸ್ಯದ ಕಪಿ ಮುಷ್ಟಿಯಿಂದ ಹೊರ ಬರಬೇಕೆಂದು ತನ್ನ ಪೂರ್ಣ ಜೀವನವನ್ನೇ ಭಾರತ ಮಾತೆಯ ಸೇವೆಗೆ ಮುಡಿಪಾಗಿಟ್ಟರೋ, ಭಾರತ ಮಾತೆಯ ಸೆರಗನ್ನೇ ಉಸಿರಾಗಿಸಿ ಸ್ವಾತಂತ್ರ್ಯದ ಪ್ರಾಪ್ತಿಗೋಸ್ಕರ ಯಾರೂ ಅನುಭವಿಸದ ಕ್ರೂರ ಜೈಲು ವಾಸವನ್ನು ಅನುಭವಿಸಿದರೋ, ಅದೇ ಸಾವರ್ಕರ್‍ಗೆ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಕೊಟ್ಟ ಮೊದಲ ಗಿಫ್ಟ್ ಮತ್ತೆ ಜೈಲು ವಾಸ… ಗಾಂಧಿಯನ್ನು ಕೊಂದರೆಂದು ಆರೋಪಿಸಿ ಅವರ ಮನೆಗಳಿಗೆ ಕಲ್ಲು ಹೊಡೆದರು. ಅವರ ಸಹೋದರರನ್ನು ಗಾಯಗೊಳಿಸಿದರು. ಅದೇ ನೋವಿನಿಂದ ಬಳಲುತ್ತಿದ್ದ ಅವರ ಸಹೋದರರೊಬ್ಬರು ಮೃತಪಟ್ಟಿದ್ದರು.

ಸ್ವಾತಂತ್ರ್ಯಕ್ಕಾಗಿ ಕ್ರಾಂತಿ ಮಾರ್ಗವನ್ನು ತುಳಿದರು, ಜಾತ್ಯಾತೀತತೆ ಎಂದು ಬೊಬ್ಬೆ ಹೊಡೆಯುತ್ತಿದ್ದ ನೆಹರೂರ ತತ್ವವನ್ನು ವಿರೋಧಿಸಿ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಮೂಡಿಸಿದರು ಎಂಬ ಕಾರಣಕ್ಕಾಗಿಯೇ ಸಾವರ್ಕರ್ ಬಗ್ಗೆ ಕೆಂಡ ಕಾರುತ್ತಿದ್ದ ನೆಹೆರೂ ಸಾವರ್ಕರರನ್ನು ಜೈಲಿಗಟ್ಟಿ ತನ್ನ ಕುತಂತ್ರಿ ಬುದ್ಧಿಯನ್ನು ತೋರಿಸಿದ್ದರು.

ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ. ಅದು ಭಾರತೀಯರಿಗೆ ದಕ್ಕಿದ್ದು ಅಹಿಂಸಾ ಮಾರ್ಗದಿಂದಲೂ ಅಲ್ಲ, ಉಪವಾಸ ಸತ್ಯಾಗ್ರಹದಿಂದಲೂ ಅಲ್ಲ. ಬದಲಾಗಿ ಸ್ವಾತಂತ್ರ್ಯ ದೊರಕಿದ್ದು ಸಾವರ್ಕರ್‍ರಂತಹ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಲಕ್ಷಾಂತರ ಮಂದಿ ಕ್ರಾಂತಿಕಾರಿಗಳ ರಕ್ತದಿಂದ.

ಹೋಗ್ಲಿ ಬಿಡಿ. ನೆಹರೂ ಎನೋ ಸ್ವಾರ್ಥ ಸಾಧನೆಗಾಗಿ ತನ್ನ ಧರ್ಮವನ್ನೇ ಮಾರಲು ಹೊರಟಿದ್ದರು. ಆದ್ರೆ ಈಗಿನ ಕಾಂಗ್ರೆಸ್ಸಿಗರಿಗೆ ಬುದ್ಧಿ ಬೇಡವೇ. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಬಲಿಕೊಟ್ಟ ಕಾಂಗ್ರೇಸ್ ನಾಯಕರು ವೀರ ಸಾವರ್ಕರರ ಹೆಸರು ಕೇಳಿದರೆ ಭಯಬೀತರಾಗುತ್ತಾರೆ. ತಮ್ಮ ಹತಾಶ ಮನೋಭಾವದಿಂದಲೇ ವೀರ ಸಾವರ್ಕರರನ್ನು ಆಗಾಗ್ಗೆ ಟೀಕಿಸುತ್ತಾರೆ. ಯಾವಾಗ ಆ ವೀರರನ್ನು ತೆಗಳುತ್ತಾರೋ ಆವತ್ತು ಕಾಂಗ್ರೇಸ್‍ಗೆ ಆಪತ್ತು ಕಾದಿದೆ ಎಂದೇ ಅರ್ಥ. ಭಗತ್ ಸಿಂಗ್ ಹುತಾತ್ಮರ ದಿನದಂದು ಕಾಂಗ್ರೇಸ್‍ನ ಅಧಿಕೃತ ಟ್ವಿಟರ್‍ನಲ್ಲಿ ಸಾವರ್ಕರ್ ದೇಶದ್ರೋಹಿ ಎಂದು ಬರೆದು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕಾಂಗ್ರೇಸ್ಸಿನ ಶಿಖಂಡಿ ಮುಖಂಡ ಮಣಿಶಂಕರ್ ಅಯ್ಯರ್ ದೇಶಪ್ರೇಮಿ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಬೊಗಳಿಬಿಟ್ಟು ತನ್ನ ಕೆಟ್ಟ ನಾಲಿಗೆಯನ್ನು ಹರಿಯ ಬಿಟ್ಟಿದ್ದ. ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿ ರಾಜಕೀಯ ಪಕ್ಷ ಕಾಂಗ್ರೇಸ್‍ಗೆ ಸೇರಿ, ರಾಹುಲ್ ಗಾಂಧಿಯ ಕೃಪಾ ಕಟಾಕ್ಷದಿಂದ ರಾಜಕೀಯದಲ್ಲೂ ನಟನೆ ಮಾಡುತ್ತಿರುವ ಮಂಡ್ಯದ ಮಾಜಿ ಸಂಸದೆ ರಮ್ಯಾನೂ ವೀರ ಸಾವರ್ಕರರನ್ನು ತೆಗಳುವುದರಲ್ಲಿ ಹಿಂದೆ ಬಿದ್ದಿಲ್ಲ. ಅಂತಹ
ಸ್ವಾತಂತ್ರ್ಯ ವೀರನ ಬಗ್ಗೆ ರಮ್ಯಾ ಹೇಳ್ತಾಳೆ “ಸಾವರ್ಕರ್‍ಗೆ ವೀರ ಅನ್ನುವ ಬಿರುದು ಯಾಕೆ” ಎಂದು. ಪಾಕಿಸ್ಥಾನವನ್ನು ಸ್ವರ್ಗ ಎಂದು ಕರೆದ ದರಿದ್ರದವಳು ಸ್ವಾತಂತ್ರ್ಯ ವೀರನ ಸಮಾಥ್ರ್ಯವನ್ನು ಪ್ರಶ್ನಿಸಿದ ಇವಳಿಗೆ ನಿಜವಾಗಿಯೂ ಈ ದೇಶದಲ್ಲಿ ಬದುಕುವ ಅರ್ಹತೆಗಳನ್ನೇ ಕಳೆದುಕೊಂಡಿದ್ದಾಳೆ. ಆದ್ರೇನು ಮಾಡೋದು ಭಾರತ ಸಹಿಷ್ಣು ದೇಶವಲ್ಲಾ…

ಕ್ರಾಂತಿ ವೀರರನ್ನು ಕಂಡರೆ ಉಗ್ರನಂತೆ ವರ್ತಿಸುವ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಕೂಡ ವೀರ ಸಾವರ್ಕರರನ್ನು ದೂರುವುದರಲ್ಲಿ ಹಿಂದೆ ಬಿದ್ದಿಲ್ಲ.

ಭಾರತ ಕಂಡ ಹೆಮ್ಮೆಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಾವರ್ಕರ್‍ರವರ ಹುಟ್ಟುಹಬ್ಬವನ್ನು ಸಂಸತ್‍ನಲ್ಲಿ ಆಚರಿಸಿದ್ರು. ಆವಾಗ ಸ್ವತಃ
ಕಾಂಗ್ರೇಸಿಗರೇ ಈ ಕಾರ್ಯಕ್ರಮವನ್ನು ವಿರೋಧಿಸಿದ್ದರು. ಕಾರಣ ಸಾವರ್ಕರರನ್ನು ನೆಹರೂ ಧ್ವೇಷಿಸಿದ್ದರು. ಇದು ಭಾರತದೊಳಗಿನ ದೇಶದ್ರೋಹದ ಪರಮಾವಧಿ ಅಲ್ಲದೆ ಮತ್ತೇನು?

ಕಾಂಗ್ರೇಸ್ ಯಾವಾಗ ವೀರ್ ಸಾವರ್ಕರರನ್ನು ವಿರೋಧಿಸುತ್ತದೆಯೋ ಆವಾಗ ದೇಶ ವಾಸಿಗಳಲ್ಲಿ ದೇಶಭಕ್ತಿ ಜಾಗೃತವಾಗುತ್ತದೆ. ಆವಾಗ ಇಡಿ
ದೇಶವೇ ಕಾಂಗ್ರೇಸನ್ನು ವಿರೋಧಿಸುತ್ತದೆ. ಆವಾಗ ಬಿಜೆಪಿಯವವರು ಕಾಂಗ್ರೇಸ್ ಮುಕ್ತ ಭಾರತ ಹಮ್ಮಿಕೊಳ್ಳಬೇಕಿಲ್ಲ. ಸ್ವತಃ ದೇಶಪ್ರೇಮಿಗಳೇ ಈ ಕಾಂಗ್ರೇಸನ್ನು ಭಾರತದಿಂದ ಮುಕ್ತಿಗೊಳಿಸಿ ಭಾರತ ಮಾತೆಯನ್ನು ದಾಸ್ಯದ ನೆರಳಿನಿಂದ ದೂರಗೊಳಿಸುತ್ತಾರೆ. ಅಂತಹ ದಿನ ದೂರವಿಲ್ಲ. ಮುಂದೊಂದು ದಿನ ಭಾರತದ ಕೆಂಪುಕೋಟೆಯಲ್ಲಿ ವೀರ ಸವಾರ್ಕರವರ ಚರಿತ್ರೆ ಇತಿಹಾಸ ಸೃಷ್ಟಿಸುವುದರಲ್ಲಿಸಂದೇಹವೇ ಇಲ್ಲ…

-ಸುನಿಲ್

Tags

Related Articles

Close