ಅಂಕಣದೇಶಪ್ರಚಲಿತ

ಭೀಕರ ಇತಿಹಾಸ!!! ಮಾನವ ಹಕ್ಕುಗಳನ್ನು ಬೀದಿಗೆಸೆಯುವ ಈ ವಿಶ್ವದ ಹನ್ನೆರಡು ರಹಸ್ಯ ಸಾವಿನ ಕೂಪಗಳು!!!

ಇತಿಹಾಸವನ್ನು ಕೆದಕುತ್ತಾ ಹೋದಂತೆ ಅದೆಷ್ಟೋ ಮಂದಿ ಅಧಿಕಾರಿಗಳ ಕ್ರೂರತನಕ್ಕೆ ಬಲಿಯಾದವರೇ ಹೆಚ್ಚು. ಕೆಲವರು ಅವರು ಮಾಡಿದ ತಪ್ಪಿಗೆ ಶಿಕ್ಷೆಗಳನ್ನು
ಅನುಭವಿಸಿದರೆ ಇನ್ನು ಕೆಲವರು ತಪ್ಪೇ ಮಾಡದೇ ಸಾವಿಗೆ ಶರಣಾದ ಪ್ರಸಂಗಗಳು ಇತಿಹಾಸದ ಪುಟಗಳಲ್ಲಿ ಅಚ್ಚಲಿಯಾಗಿದೆ. ಕ್ರೂರತೆಗೆ ಬಲಿಯಾದ ಅದೆಷ್ಟೋ ಖೈದಿಗಳು ಮಾನವಹಕ್ಕುಗಳ ಉಲ್ಲಂಘಣೆಗೆ ಸಾಕ್ಷಿಯಾಗಿದ್ದಾರೆ ಗೊತ್ತೆ? ಅಲ್ಲದೇ ಮಾನವಹಕ್ಕುಗಳ ಉಲ್ಲಂಘನೆ ಮಾಡಿದ ವಿಶ್ವದ 12 ಪ್ರದೇಶಗಳಾವುದು ಗೊತ್ತೇ? ಅದೇ..

ಆಷ್ವಟ್ಜ್ ಕಾನ್ಸಂಟ್ರೇಶನ್ ಕ್ಯಾಂಪ್, ನಾಝಿ ಜರ್ಮನಿ

ನಾಝಿ ಆಡಳಿತದಿಂದ ಸ್ಥಾಪಿಸಲ್ಪಟ್ಟ ಆಷ್ವಟ್ಜ್ ಕಾನ್ಸಂಟ್ರೇಶನ್ ಕ್ಯಾಂಪ್ ಬಹಳ ದೊಡ್ಡಾದ ಸಾಮ್ರಾಜ್ಯವನ್ನು ಹೊಂದಿದೆ. ಆಷ್ವಟ್ಜ್ ಕಾನ್ಸಂಟ್ರೇಶನ್ ಕ್ಯಾಂಪ್ ಒಟ್ಟು ಮೂರು ಪ್ರಮುಖ ಶಿಬಿರಗಳನ್ನು ಒಳಗೊಂಡಿತ್ತು. ಈ ಮೂರು ಶಿಬಿರಗಳು ಖೈದಿಗಳನ್ನು ಕಾರ್ಮಿಕರನ್ನಾಗಿಸಿ ಬಳಸಿಕೊಳ್ಳುತ್ತಿದ್ದು ಮಾತ್ರವಲ್ಲದೇ, ಹೆಚ್ಚಿನ ಖೈದಿಗಳನ್ನು ಆಷ್ವಿಟ್ಜ್‍ಗೆ ಕಳುಹಿಸಿ ಅಲ್ಲಿ ಖೈದಿಗಳು ಸಾವಿಗೆ ಆಯ್ಕೆಯಾಗುತ್ತಿದ್ದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಸಾಮಾನ್ಯವಾಗಿ ಆಷ್ವಟ್ಜ್ ಕಾನ್ಸಂಟ್ರೇಶನ್ ಕ್ಯಾಂಪ್ ಎಲ್ಲಾ ಮಕ್ಕಳನ್ನು, ಹೆಚ್ಚಿನ ಮಹಿಳೆಯರನ್ನು, ಎಲ್ಲಾ ವೃದ್ಧರನ್ನು, ಖಾಯಿಲೆಗೆ ತುತ್ತಾದವರನ್ನು, ಈ ಗುಂಪಿನಲ್ಲಿ ಕೆಲಸ ಮಾಡಲು ಸಾಧ್ಯ ಆಗದಿದ್ದವರನ್ನು ಕೂಡ ಈ ಒಂದು ಹಿಂಸೆಗೆ ಅವರನ್ನು ಬಳಸಿಕೊಳ್ಳಲಾಗಿತ್ತು. ಇಲ್ಲಿ ಯಹೂದಿಗಳಿಗೆ ವಿಷಯುಕ್ತವಾದ ಅನಿಲವನ್ನು ಸಿಂಪಡಿಸಿ ಅವರನ್ನು ಸಾಯಿಸಲಾಗುತ್ತಿತ್ತು. ಅದಕ್ಕಾಗಿ ಹೈಡ್ರೋಜನ್ ಸೈನೈಡ್ ಎನ್ನುವ ಒಂದು ವಿಧದ ಅನಿಲವನ್ನು ಉಪಯೊಗಿಸುತ್ತಿದ್ದು, ಈ ಒಂದು ವಿಷಯುಕ್ತವಾದ ಅನಿಲದಿಂದ ಸುಮಾರು 1.1 ಮಿಲಿಯನ್ ಜನರು ಸಾವನ್ನಪ್ಪುತ್ತಿರುವಂತಹ ಘಟನೆ ಇಲ್ಲಿ ಸಂಭವಿಸಿದೆ.

731 ಘಟಕ, ಪಿಂಗ್ಪಾಂಗ್ ಜಿಲ್ಲೆ, ಚೀನಾ

ಅಕ್ರಮ ರೀತಿಯಲ್ಲಿ ನಡೆಯುತ್ತಿರುವಂತಹ ಅನೇಕ ಪ್ರಯೋಗಗಳನ್ನು ಇಲ್ಲಿ ನಡೆಸಲಾಗುತ್ತಿತ್ತು. ಜಪಾನೀಸ್ ಆರ್&ಡಿ ಘಟಕ ಎರಡನೇ ಸಿನೊ ಜಪಾನೀಸ್
ಯುದ್ದ(1937-1945)ದಲ್ಲಿ ಕೆಲವೊಂದು ಹಿಂಸಾತ್ಮಕವಾದ ಪ್ರಯೋಗಗಳನ್ನು ನಡೆಸುತಿದ್ದರು. ಅದಕ್ಕಾಗಿ ಯುದ್ಧ ಶಿಬಿರಗಳಲ್ಲಿದ್ದ ಖೈದಿಗಳಲ್ಲಿ ಸಾವಿರಾರು ಗಂಡಸರನ್ನು, ಮಹಿಳೆಯರನ್ನು, ಮಕ್ಕಳು ಸೇರಿ, ಒಟ್ಟು 2,50,000 ಜನರನ್ನು ಪ್ರಯೋಗಾಲಯಕ್ಕೆ ವಸ್ತುಗಳಂತೆ ಬಳಸಿಕೊಳ್ಳಲಾಯಿತು. ವಿಪರ್ಯಾಸ ಏನೆಂದರೆ ಇವರಿಗೆ ಯಾವುದೇ ರೀತಿಯ ಮಂಪರು ಬರಿಸುವ ಚುಚುಮದ್ದನ್ನು ನೀಡದೇ ಪ್ರಯೋಗಕ್ಕೆ ಒಳಪಡಿಸುತ್ತಿದ್ದದ್ದು. ಇದರಿಂದ ಹಲವಾರು ಮಂದಿ ಸೋಂಕುಗಳು ತಗುಲಿ ಸಾವನ್ನಪ್ಪುತ್ತಿದ್ದರು ಕೂಡ. ಈ ಪ್ರಯೋಗಲಾಯದಲ್ಲಿ ಬಲವಂತದ ಗರ್ಭಧಾರಣೆ, ಸಿಫಿಲಿಸ್ ಮತ್ತು ಫ್ರಾಸ್ಟೈಟ್ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತಿತ್ತು.

ಹೊಯೆರೊಂಗ್ ಕಾನ್ಸಂಟ್ರೇಶನ್ ಕ್ಯಾಂಪ್, ಉತ್ತರ ಕೊರಿಯಾ

ಜನರನ್ನು ಬಲವಂತವಾಗಿ ಕೆಲಸಕ್ಕೆ ದೂಡುತ್ತಿದ್ದದ್ದು ಮಾತ್ರವಲ್ಲದೇ ಕುಖ್ಯಾತ ಸ್ಥಳವೆಂದೇ ಬಿಂಬಿತವಾದ ಪ್ರದೇಶವೇ ಹೊಯೆರೊಂಗ್ ಕಾನ್ಸಂಟ್ರೇಶನ್ ಕ್ಯಾಂಪ್. ಇಲ್ಲಿ ಜನರನ್ನು ವಿಚಿತ್ರ ರೀತಿಯ ಹಿಂಸೆಗಳನ್ನು ನೀಡಿ ಸಾಯಿಸಲಾಗುತ್ತಿತ್ತು. ಹೊಯೆರೊಂಗ್ ಕಾನ್ಸಂಟ್ರೇಶನ್ ಕ್ಯಾಂಪ್‍ನ್ನು “ಕ್ಯಾಂಪ್-22” ಎಂದು ಕೂಡ ಕರೆಯಲಾಗುತ್ತದೆ. ಇದು ಪ್ರಪಂಚದ ಉಳಿದ ಭಾಗಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟ ಒಂದು ಜೈಲು ಶಿಬಿರ. ದಿನನಿತ್ಯ ಚಿತ್ರಹಿಂಸೆ ನೀಡುತ್ತಿದಲ್ಲದೇ ಖೈದಿಗಳಿಗೆ ಈ ಜೈಲಿನಲ್ಲಿ ಸಾಕಷ್ಟು ಬರ್ಬರವಾಗಿ ನೀರಿನಿಂದ ಚಿತ್ರಹಿಂಸೆ, ಹಗ್ಗದಿಂದ ನೇತಾಡಿಸಿ, ಮಂಡಿಯೂರಿಸಿ, ಪಾರಿವಾಳದಿಂದ ಚುಚ್ಚಿಸಿ ನೀಡಿಸಿ ಚಿತ್ರಹಿಂಸೆಗಳನ್ನು ನೀಡುತ್ತಿದ್ದರು.

ಎಸ್-21 ಜೈಲು, ನೋಮ್ ಪೆನ್, ಕಾಂಬೋಡಿಯಾ

ಎಸ್-21 ಸೆರೆಮನೆಯು ಖಮೇರ್ ರೂಜ್ ಆಡಳಿತದಿಂದ ಒಳಪಟ್ಟ ಸಾಮ್ರಾಜ್ಯವಾಗಿತ್ತು. ಈ ಒಂದು ಗುಪ್ತ ಸೆರೆಮನೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು
ಮಾಡಿದ ಆರೋಪಿಗಳಿಗೆ ಮತ್ತು ದೇಶದ್ರೋಹಿಗಳಿಗೆ ವಿಚಾರಣೆ ನಡೆಸಿ ಚಿತ್ರಹಿಂಸೆಗಳನ್ನು ನೀಡಲಾಗುತ್ತಿತ್ತು. ಯಾವರೀತಿಯ ಚಿತ್ರಹಿಂಸೆ ಅಂದರೆ ಮಾನವನ
ಮೂಳೆಗಳನ್ನು ತಿನ್ನುವಂತೆ, ಮನುಷ್ಯನ ಮೂತ್ರವನ್ನು ಕುಡಿಯುವಂತೆ, ಮಲವನ್ನು ತಿನ್ನುವಂತೆ ಚಿತ್ರಹಿಂಸೆಗಳನ್ನು ನೀಡಲಾಗುತ್ತಿತ್ತು. ಅಲ್ಲದೇ ರಕ್ತತವನ್ನು ಚಿಮ್ಮಿಸಿ, ಖೈದಿ ಎಷ್ಟು ಸಮಯ ಬದುಕುತ್ತಾನೆ ಎಂಬುವುದನ್ನು ನೋಡುತ್ತಿದ್ದರು ಕೂಡ.

ಸೊಲೊವಿಕಿ ಜೈಲು ಶಿಬಿರ, ಸೊಲೊವೆಟ್ಸ್ಕಿ ದ್ವೀಪಗಳು

ಈ ಜೈಲು ಶಿಬಿರವನ್ನು ‘ಗುಲಗ್‍ನ ತಾಯಿ” ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಸೋವಿಯತ್ ರಷ್ಯಾದ ಹೊಸ ಬೋಲ್ಯೆವಿಕಕ ಆಡಳಿತದ ಸಮಾಜ
ವಿರೋಧಿಗಳಿಗೆ, ಜೀತದ ಆಳುಗಳಿಗೆ ಇರುವ ಶಿಬಿರ ಇದಾಗಿತ್ತು. ಆದರೆ ಇಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಇಲ್ಲ ಆಹಾರವನ್ನು ಒದಗಿಸಲಾಗುತ್ತಿತ್ತು. ಸೊಲೊವಿಕಿ ಜೈಲು ಶಿಬಿರದ ಗಾರ್ಡ್‍ಗಳು ಜೈಲಿನ ಖೈದಿಗಳಿಗೆ ಚಿತ್ರವಿಚಿತ್ರವಾಗಿ ಹಿಂಸುತ್ತಿದ್ದಲ್ಲದೇ, ಅವರನ್ನು ದುರ್ಬಲರನ್ನಾಗಿಸುವುದು ಅಥವಾ ಉದ್ದದ ಮೆಟ್ಟಿಲಿನ ಮೂಲಕ ಅವರನ್ನು ಎಸೆದು ಕೊಲ್ಲುವುದೇ ಇವರ ಕೆಲಸವಾಗಿತ್ತು. ಇಷ್ಟೆ ಅಲ್ಲದೇ ಸೆರೆಮನೆಯಲ್ಲಿನ ಖೈದಿಗಳಿಗೆ ಬೇಸಿಗೆಯಲ್ಲಿನ ಸೊಳ್ಳೆಗಳ ಹಿಂಡುಗಳನ್ನು, ಈ ನಿರ್ಜನ ದ್ವೀಪದಲ್ಲಿ ಬಿಟ್ಟು ಚಿತ್ರಹಿಂಸೆ ನೀಡುತ್ತಿದ್ದರು.

ಸೋವಿಯತ್ ಸೀಕ್ರೆಟ್ ಸರ್ವಿಸಸ್‍ನ ವಿಷಯುಕ್ತ ಪ್ರಯೋಗಾಲಯ, ರಷ್ಯಾ

ಇಲ್ಲಿ ಮಾರಣಾಂತಿಕ ವಿಷಯುಕ್ತವಾದ ಅನಿಲಗಳನ್ನು ನೀಡಿ ಜನರನ್ನು ಕೊಲ್ಲಿಸಲಾಗುತ್ತಿತ್ತು. ಅದೆಷ್ಟೋ ವಿಷಯುಕ್ತವಾದ ಅನಿಲಗಳನ್ನು ಇಲ್ಲಿ ಉಪಯೋಗಿಸುತ್ತಿದ್ದು, ಖೈದಿಗಳ ಸಾವಿಗೆ ಕಾರಣವಾಗುತ್ತಿದ್ದವು. ಸಾಸಿವೆ ಅನಿಲ, ರಿಸಿನ್, ಡಿಜಿಟಕ್ಸಿಕ್, ಕೇರ್, ಸೈನೈಡ್, ಗುಲಾಗ್ಸ್‍ಗಳೆನ್ನುವ ಅನಿಲವನ್ನು ಖೈದಿಗಳ ಮೇಲೆ ಪರೀಕ್ಷಿಸಲಾಗುತ್ತಿತ್ತು. ರಷ್ಯನ್ನರು ಬಣ್ಣವಿಲ್ಲದ, ವಾಸನೆಯಿಲ್ಲದ ರಾಸಾಯನಿಕಗಳನ್ನು ಉಪಯೋಗಿಸಿ ಖೈದಿಗಳನ್ನು ಕೊಲ್ಲುತ್ತಿದ್ದರು ಯಾಕಂದರೆ ಶವಪರೀಕ್ಷೆ ಮಾಡುವ ವೇಳೆ ಯಾವುದೇ ರೀತಿಯ ಶಂಕೆ ಬಾರದಂತೆ ಹಾಗೂ ಪತ್ತೆಹಚ್ಚಲು ಸಾಧ್ಯವಾಗದಂತೆ ಇತಂಹ ಅನಿಲಗಳ ಬಳಕೆಯಾಗುತ್ತಿತ್ತು. ಈ ಒಂದು ರಾಸಾಯನಿಕ ಅನಿಲದ ಅಂತಿಮ ಫಲಿತಾಂಶದಲ್ಲಿ ವ್ಯಕ್ತಿ ದೈಹಿಕವಾಗಿ ಬದಲಾಗುತ್ತ, ಆತ ತನ್ನ ಸಾಮಥ್ರ್ಯವನ್ನೇ ಕಳೆದುಕೊಳ್ಳುತ್ತಾನೆ. ಅಲ್ಲದೇ ತ್ವರಿತವಾಗಿ ದುರ್ಬಲಗೊಂಡು, ಶಾಂತವಾಗಿ ಮತ್ತು ಮೌನವಾದ 15 ನಿಮಿಷಗಳಲ್ಲಿ ವ್ಯಕ್ತಿ ಸಾಯುತ್ತಾನೆ.

ಗ್ವಾಟನಾಮೊ ಬೇ, ಯುಎಸ್‍ಎ

ಇದು ಅಮೇರಿಕ ಸಂಯುಕ್ತ ಸಂಸ್ಥಾನದ ಮಿಲಿಟರಿ ಜೈಲು ಇದಾಗಿದ್ದು, ಇಲ್ಲಿ ಖೈದಿಗಳನ್ನು ವಿಚಾರಣೆ ನಡೆಸದೇ ಅವರನ್ನು ಬಂಧಿಸಲಾಗುತ್ತಿತ್ತು. ಇಲ್ಲಿ
ಬಂಧಿತರಾದವರಿಗೆ ಜೀವನಪೂರ್ತಿಯಾಗಿ ಸ್ವಾತಂತ್ರ್ಯ ಪಡೆಯುವ ಭರವಸೆಯೇ ಇರುತ್ತಿರಲಿಲ್ಲ. ಇಲ್ಲಿ ಖೈದಿಗಳು ಒಮ್ಮೆ ಎಂಟ್ರಿಯಾದರೆ ಸಾಕು ಅವರಿಗೆ ಹೊರಗೆ ಹೋಗುವ ದಾರಿಯೇ ಇರಲಿಲ್ಲ. ಅಷ್ಟೇ ಅಲ್ಲದೇ ಖೈದಿಗಳಿಗೆ ವಿಚಿತ್ರರೀತಿಯ ಚಿತ್ರಹಿಂಸೆಗಳನ್ನು ನೀಡಲಾಗುತ್ತದೆ. ಈ ಕ್ರೂರ ಹಿಂಸೆಲ್ಲಿ ಖೈದಿಗಳ ಶೀತ, ಸೀಮಿತ ಜೀವಕೋಶಗಳನ್ನು ಹಿಡಿದಿಟ್ಟು ಚಿತ್ರಹಿಂಸೆಗಳನ್ನು ನೀಡಲಾಗುತ್ತದೆ. ಕಳೆದ ಒಬಾಮ ಸರ್ಕಾರದ ಸಂದರ್ಭದಲ್ಲಿ ಗ್ವಾಟನಾಮೊ ಬೇ ಯನ್ನು ಮುಚ್ಚುವಂತೆ ಪ್ರಯತ್ನಪಟ್ಟರು ಕೂಡ ಅದು ಅವರಿಂದ ಸಾಧ್ಯವಾಗಲಿಲ್ಲ.

ಬ್ರೆಜಿಲ್‍ನ ಕ್ಯಾರಂಡಿರು ಜೈಲು

ಬ್ರೆಜಿಲ್‍ನ ಈ ಒಂದು ಜೈಲಿನಲ್ಲಿ 8000 ಮಂದಿ ಖೈದಿಗಳಿದ್ದು ಇವರಿಗೆ ಯಾವುದೇ ರೀತಿಯ ವ್ಯವಸ್ಥೆಯೂ ಇರಲಿಲ್ಲ. ಹಾಗಾಗಿ ಅಪೌಷ್ಠಿಕತೆ ಮತ್ತು ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿರುವುದು ಇಲ್ಲಿ ಸಾಮಾನ್ಯವೇ ಆಗಿತ್ತು. ಈ ಹಿಂಸಾಚಾರಗಳು ಜೈಲು ತುಂಬಾ ಹರಡಿದರು ಕೂಡ ಪೊಲೀಸರು ಈ ಕುರಿತಂತೆ ಯಾವುದೇ ರೀತಿಯ ಮಾತುಕತೆ ನಡೆಸಲಿಲ್ಲ. ಬದಲಾಗಿ ಮಿಲಿಟರಿ ಪೊಲೀಸರಿಂದ ಇವರನ್ನು ಸೆರೆಮನೆಗೆ ದೂಡಿ ಹತ್ಯೆಗಯ್ಯಲಾಗುತ್ತಿತ್ತು. ಇದು ಬ್ರೆಜಿಲ್‍ನಲ್ಲಿ ನಡೆದಂತಹ ಅತ್ಯಂತ ಕೆಟ್ಟರೀತಿಯಲ್ಲಿ ನಡೆದ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ.

ಸಿರಿಯಾದ ಟ್ಯಾಡ್ಮರ್ ಮಿಲಿಟರಿ ಜೈಲು

1980ರಲ್ಲಿ ಹಾಫಿಜ್ ಅಲ್-ಅಸಾದ್ ಸಿರಿಯಾ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಟಾಡ್ಮರ್ ಹತ್ಯೆ ಪ್ರಯತ್ನದ ಪ್ರತಿಕ್ರಿಯೆಗಾಗಿ ನಡೆದ ಹತ್ಯಾಕಾಂಡದ ಸ್ಥಳವಾಗಿದೆ. ಇಲ್ಲಿ ಖೈದಿಗಳು ಕಠೀಣ ಪರಿಸ್ಥಿಗಳನ್ನು ಎದುರಿಸಿದ್ದರಲ್ಲದೇ, ಇಲ್ಲಿ ತೀವ್ರವಾದ ಮಾವನಹಕ್ಕುಗಳ ಉಲ್ಲಂಘನೆ ಇದ್ದು, ಖೈದಿಗಳಿಗೆ ಮರಣದಂಡೆಯನ್ನು ವಿಧಿಸಲಾಗುತ್ತದೆ. ಜೈಲಿನಲ್ಲಿ ಖೈದಿಗಳಿಗೆ ಯಾವುದೇ ರೀತಿಯಾದ ದೇಶಿಯ ಸೌಲಭ್ಯಗಳಾಗಲಿ, ಮನರಂಜನೆಗಳಾಗಲಿ, ಇರುತ್ತಿರುಲಿಲ್ಲ, ಬದಲಾಗಿ ಇದೊಂದು ಸಂಪೂರ್ಣ ಮುಚ್ಚಿದ ಸೆರೆಮನೆ.

ರಷ್ಯಾದ ಬ್ಲ್ಯಾಕ್ ಡಾಲ್ಫಿನ್ ಜೈಲು

ರಷ್ಯಾದ ಕಠಿಣವಾದ ಸೆರೆಮನೆ ಎಂದು ಹೆಸರಾದ ಕಝಾಕಿಸ್ತಾನ್ ಗಡಿಯಲ್ಲಿ, ಉನ್ನತ ಭದ್ರತಾ ಜೈಲು ದೇಶದ ಕೊಲೆಗಾರರು, ನರಭಕ್ಷಕರು ತ್ತು ಭಯೋತ್ಪಾದಕರು ಸೇರಿದಂತೆ ಅತ್ಯಂತ ಕ್ರೂರ ಅಪರಾಧಿಗಳನ್ನು ಹೊಂದಿರುವ ಸೆರೆಮನೆ ಇದಾಗಿದೆ. ಈ ಒಂದು ಜೈಲಿನಲ್ಲಿ ರಷ್ಯಾದ 700 ಮಂದಿ ಗಂಭೀರ ಆರೋಪಿಗಳನ್ನು ಇಲ್ಲಿ ಬಂಧಿಸಲಾಗಿತ್ತು ಮಾತ್ರವಲ್ಲೇ ಸುಮಾರು 3,500 ಮಂದಿಯ ದಾರುಣ ಸಾವು ನಡೆದಿದೆ. ಅಷ್ಟೇ ಅಲ್ಲದೇ ಹೊರಗೆ ಚಲಿಸಬೇಕಾದರೆ ಇವರ ಕಣ್ಣುಗಳನ್ನು ಮುಚ್ಚಿಸಲಾಗುತ್ತಿತ್ತು. ಅಲ್ಲದೇ ಹೆಚ್‍ಐವಿ/ಏಡ್ಸ್ ರೋಗಿಗಳಿಗೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಗುತ್ತಿರಲಿಲ್ಲ.

ಚಿಲಿಯ ಚಿಲಿ ರಾಷ್ಟ್ರೀಯ ಕ್ರೀಡಾಂಗಣ

ಇದು ಚಿಲಿಯಲ್ಲಿನ ಅತ್ಯಂತ ದೊಡ್ಡ ಕ್ರೀಡಾಂಗಣ ಇದಾಗಿದ್ದು, ಈ ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ ಜೈಲು ಶಿಬಿರ ಕೆಲಸ ಮಾಡುತ್ತಿತ್ತು. ಅಲ್ಲಿ ಸುಮಾರು 20,000 ಪುರುಷರು ಮತ್ತು ಮಹಿಳೆಯರನ್ನು ಮಿಲಿಟರಿ ಅಧಿಕಾರಿಗಳು ಹಿಂಸಿಸುತ್ತಿದ್ದು, ಪಿನೊಚೆಟ್ ಆಳ್ವಿಕೆಯ ಕ್ರೂರತೆಗೆ ಸಮಾನವಾಗಿತ್ತು. ಒತ್ತೆಯಾಳುಗಳನ್ನು ದೈನಂದಿನ ಹೊಡೆತಗಳಿಗೆ ಒಳಪಡಿಸಲಾಗುತ್ತಿತ್ತು, ಕಾಂಕ್ರೀಟ್ ಗೋಡೆಗಳ ವಿರುದ್ದ ಸ್ಟ್ಯಾಂಡ್‍ನ ಕೆಳಗೆ ಎಸೆಯುತ್ತಿದ್ದರು. ಇಷ್ಟೇ ಅಲ್ಲದೇ ಸಂಪೂರ್ಣ ದೇಹಕ್ಕೆ ಬೃಹತ್ ಪ್ರಮಾಣದಲ್ಲಿ ವಿದ್ಯುತ್‍ನ್ನು ನೀಡುತ್ತಿದ್ದಲ್ಲದೇ ಸಿಗರೇಟ್‍ನಿಂದ ಸುಡುತ್ತಿದ್ದರು.

ಯುಎಸ್‍ಎನ ಕ್ಯಾಂಪ್ ಸಮ್ಟರ್

ಈ ಶಿಬಿರದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಪ್ರತಿಯೊಬ್ಬನಿಗೆ ಆರು ಚದರ ಅಡಿಗಳಷ್ಟು ಜಾಗವನ್ನು ಮಾತ್ರ ಹೊಂದಿದ್ದರು. ಸರಿಯಾದ ಸಂಪನ್ಮೂಲಗಳ
ಕೊರತೆಯಿಂದಾಗಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತ್ತು. 45,000 ಯೂನಿಯನ್ ಖೈದಿಗಳ ಯುದ್ದದ ಸಮಯದಲ್ಲಿ ಸೆರೆಯಾಗಿದ್ದರು ಅವರಲ್ಲಿ13000 ಜನ
ಸಾವನ್ನಪ್ಪಿದ ಘಟನೆ ನಡೆದಿದೆ. ಇಲ್ಲಿ ಖೈದಿಗಳು ಸಾಯುವುದಕ್ಕೆ ಕಾರಣವಾಗಿದ್ದೇ ನೀರು. ಹೌದು..ಇಲ್ಲಿನ ಪುರುಷರು ಕೊಚ್ಚೆ ನೀರು ಕುಡಿಯುತ್ತಿದ್ದರಿಂದ ರೋಗ
ರುಜಿನಗಳು ತುತ್ತಾಗಿದ್ದರು. ಹಾಗಾಗಿ ಮಧುಮೇಹ, ಸ್ಕರ್ವಿ, ಭೇದಿ ಮತ್ತು ಅತಿಸಾರಕ್ಕೆ ತುತ್ತಾಗಿ ಸಾವನ್ನಪ್ಪಿದ ಘಟನೆ ಇಲ್ಲಿ ನಡೆದಿದೆ.

-ಅಲೋಕ

Tags

Related Articles

Close