ಅಂಕಣ

ಮಂಗಲ್ ಪಾಂಡೆಗಿಂತಲೂ ಮುಂಚೆ ಈತ ಬ್ರಿಟಿಷರನ್ನು ಅಟ್ಟಾಡಿಸಿ ಹೊಡೆದಿದ್ದ!!! ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನನಾಗಿದ್ದ ಈ ರಾಜನ ಬಗ್ಗೆ ಗೊತ್ತೇ?!

ಬ್ರಿಟಿಷರು ಭಾರತೀಯರ ಮೇಲೆ ದೌರ್ಜನ್ಯಗಳನ್ನು ನಡೆಸಲು ಪ್ರಾರಂಭಿಸಿದಾಗ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಮಂಗಲ್ ಪಾಂಡೆ ಭಾರತೀಯ ಸೈನಿಕರ ಪಾಲಿಗೆ, ದೇಶಭಕ್ತರ ಪಾಲಿಗೆ ಒಂದು ಸ್ಫೂರ್ತಿ ಮಂತ್ರವಾಗಿದ್ದರು!!! ಆದರೆ ಮಂಗಲ್ ಪಾಂಡೆಗಿಂತಲೂ 90 ವರ್ಷಗಳ ಹಿಂದೆ ಬ್ರಿಟಿಷರ ವಿರುದ್ದ ಸಿಡಿದೆದ್ದ ಪರಾಕ್ರಮಿಯೂ ಭಾರತದಲ್ಲಿದ್ದರು ಎನ್ನುವುದು ಕೆಲವರಿಗೆ ತಿಳಿದೇ ಇಲ್ಲ. ಹೌದು… ದೇಶದಲ್ಲಿ ಬ್ರಿಟಿಷರ ಅಮಾನುಷವಾದ ಕೃತ್ಯವನ್ನು ಖಂಡಿಸಿ, ಬ್ರಿಟಿಷರ ವಿರುದ್ದವೇ ಸೆಟೆದು ನಿಂತ ಪರಾಕ್ರಮಿಯೇ….ರಾಜಾ ನಾರಾಯಣ್ ಸಿಂಗ್!! ಮಹಾನ್ ಪರಾಕ್ರಮಿಯಾದ ಈತ, ಯೋಧ ಪೃಥ್ವೀರಾಜ್ ಚೌಹಾನ್ ನ ವಂಶಸ್ಥ. ಅಷ್ಟೇ ಅಲ್ಲದೇ ಜಮೀನ್ದಾರರಾಗಿದ್ದರಿಂದ ಐಷಾರಾಮಿ ಸೌಕಾರ್ಯಗಳನ್ನು ಹೊಂದಿದ್ದಂತಹ ವ್ಯಕ್ತಿ!!

ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ತಿಳಿದುಕೊಳ್ಳಬೇಕಾದರೆ ನಾವು 1770ಕ್ಕೆ ಹಿಂತಿರುಗಲೇಬೇಕು!! ಯಾಕೆಂದರೆ ಮಂಗಲ್ ಪಾಂಡೆಗಿಂತಲೂ ಮೊದಲು ಭಾರತದಲ್ಲಿ ಬ್ರಿಟಿಷರ ವಿರುದ್ದ ಸಿಡಿದೆದ್ದ ವೀರನ ಬಗ್ಗೆ ತಿಳಿದುಕೊಳ್ಳಲೇ ಬೇಕಾದದ್ದು ಅತೀಮುಖ್ಯ!! ಹೌದು.. ಪವೈ ರಾಜವಂಶದ ರಾಜಾ ನಾರಾಯಣ್ ಸಿಂಗ್ ಬ್ರಿಟಿಷರ ದಾಸ್ಯದಲ್ಲಿದ್ದ ಭಾರತವನ್ನು ಬಂಧಮುಕ್ತಗೊಳಿಸಲು ಹೋರಾಡಿದ ವೀರ. 1746ರಲ್ಲಿ ವಾರಣಾಸಿಯ ಯಾವುದೋ ಒಂದು ಪುಟ್ಟ ಪ್ರದೇಶದಲ್ಲಿ ಜನಿಸಿದರು ಎಂದು ನಂಬಲಾಗಿದೆ.

1764ರಲ್ಲಿ ರಾಜಾ ನಾರಾಯಣ್ ಸಿಂಗ್, ಜೌರಂಗಬಾದ್ ನ ದುರ್ಗ ಕಟ್ಚೇರಿಯಿಂದ ಬ್ರಿಟಿಷರ ಸಹಾನುಭೂತಿಕಾರ ನಯಬ್ ಮೆಹಂಡಿ ಹುಸೇನ್ ನನ್ನು
ವಜಾಗೊಳಿಸಿದರು. ಇದನ್ನು ಕಂಡಾ ಇವರ ಚಿಕ್ಕಪ್ಪನಾದ ವಿಷ್ಣುಸಿಂಗ್, ನಾರಾಯಣ್ ಸಿಂಗ್ ನನ್ನು ರಾಜ ಎಂದು ಘೋಷಿಸಿದರು!! ಆದರೆ 1765ರಲ್ಲಿ ರಾಜಾ
ನಾರಾಯಣ್ ಸಿಂಗ್ ಬ್ರಿಟಿಷರಿಗೆ ನೀಡುತ್ತಿದ್ದ 1.75 ಲಕ್ಷ ರೂಪಾಯಿಗಳ ಮಲ್ಗುಜರಿ ತೆರಿಗೆಯನ್ನು ನೀಡುತ್ತಿದ್ದು, ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು
ವ್ಯಕ್ತಪಡಿಸಿರಲಿಲ್ಲ.

ಆದರೆ 1770ರಲ್ಲಿ ಇವರ ಪ್ರದೇಶದಲ್ಲಿ ಕ್ಷಾಮ ಸಂಭವಿಸಿದಾಗ ಬ್ರಿಟಿಷರಿಗೆ ತೆರಿಗೆ ಪಾವತಿ ಮಾಡಲು ನಿರಾಕರಿಸಿದರು. ಆ ಸಂದರ್ಭದಲ್ಲಿ ರಾಜಾ ನಾರಾಯಣ್ ಸಿಂಗ್ ತನ್ನ ಸ್ವಂತ ಸಂಪತ್ತನ್ನು ಜನರಿಗೆ ಹಂಚಿ ಶ್ರೇಷ್ಠತೆಯನ್ನು ತೋರಿದ್ದಾರೆ. ಇದು ರಾಜಾ ನಾರಾಯಣ್ ಸಿಂಗ್ ಅವರನ್ನು ಒಬ್ಬ ಶ್ರೇಷ್ಠ ರಾಜನನ್ನಾಗಿ ಮಾಡುವಲ್ಲಿ ಯಶಸ್ಸಿಯಾಗಿದೆ!! ಆ ಸಂದರ್ಭದಲ್ಲಿ ಬ್ರಿಟಿಷರು ಈ ಪ್ರದೇಶದ ಜನರಿಗೆ ಯಾವುದೇ ರೀತಿಯ ಸಹಾಯಕ್ಕೆ ಆಗಮಿಸದೇ ಇದ್ದು, ತನ್ನ ದರ್ಪವನ್ನೇ ಮೆರೆಯಲು ಪ್ರಾರಂಭಿಸಿದರು.

ಕಚ್ಚಾ ಮನೆಯಲ್ಲಿಯೇ ರಾಜನ ವಾಸ !!!

1778ರಲ್ಲಿ ಬ್ರಿಟಿಷರಿಂದ ಪವೈ ದುರ್ಗ ಅರಮನೆಯು ನಾಶವಾಯಿತು. ಇದರ ನಂತರ ರಾಜ ಒಂದು ಸಣ್ಣದಾದ ಕಚ್ಚಾ ಮನೆಯಲ್ಲಿ ಉಳಿಯಲು ನಿರ್ಧರಿಸಿದರು. ಆ ಸಂದರ್ಭದಲ್ಲಿ ಬ್ರಿಟಿಷರು ರಾಜಾ ನಾರಾಯಣ್ ಅವರ ಮನೆಗೆ ತೆರಿಗೆ ಸಂಗ್ರಾಹಕನನ್ನು ಕಳುಹಿಸಿ, ಬ್ರಿಟಿಷರ ಆಜ್ಞೆಯನ್ನು ಪಾಲಿಸುವಂತೆ ಒತ್ತಡ ಹೇರಲಾಯಿತು. ಅಷ್ಟೇ ಅಲ್ಲದೇ, ಇವರ ಮೇಲೆ ದೌರ್ಜನ್ಯವನ್ನು ಎಸೆಯಲಾಗಿದ್ದು, ಸಂಗ್ರಾಹಕ ರಾಜಾ ನಾರಾಯಣ್ ಅವರಿಂದ ಸೋಲನನ್ನುಭವಿಸಬೇಕಾಯಿತು. ಇದು ಒಂದು ಸಂತೋಷಕರವಾದ ಸುದ್ದಿಯಾದರು ಕೂಡ ಬ್ರಿಟಿಷರಲ್ಲಿ ಅತೃಪ್ತಿಯು ತಾಂಡವವಾಡಲು ಪ್ರಾರಂಭವಾಯಿತು!!

ಶಹಬಾದ್ ಅವರ ಸಂಗ್ರಾಹಕನಾದ ರೆಜಿನಾಲ್ಡ್ ಹ್ಯಾಂಡ್ 1781ರಲ್ಲಿ ಬರೆದ “ಅರ್ಲಿ ಇಂಗ್ಲೀಷ್ ಅಡ್ಮಿನಿಸ್ಟ್ರೇಷನ್” ಎನ್ನುವ ಪುಸ್ತಕದಲ್ಲಿನ 84ನೇ ಪುಟದಲ್ಲಿರುವ “ಪವರ್ ಫುಲ್ ಜಮೀನ್ದಾರ್” ಎನ್ನುವ ಅಧ್ಯಾಯದಲ್ಲಿ “ಬ್ರಿಟಿಷರ ಮೊದಲ ಶತ್ರು” ರಾಜಾ ನಾರಾಯಣ್ ಸಿಂಗ್ ಎಂದು ಉಲ್ಲೇಖಿಸಿದ್ದಾರೆ!!

1770 ರಿಂದ 1791ರ ನಡುವಿನ ಸಮಯದಲ್ಲಿ ಮಾಚ್ 5, 1778ರಂದು ರಾಜಾ ನಾರಾಯಣ್ ಸಿಂಗ್ ಬ್ರಿಟಿಷರನ್ನು ಸೋಲಿಸಿದರು. ಅಷ್ಟೇ ಅಲ್ಲದೇ ವಾರಾಣಾಸಿ
ಪ್ರವೇಶಿಸುವುದನ್ನೂ ಕೂಡ ತಡೆದ ಪರಾಕ್ರಮಿಯಾಗಿದ್ದರು ಈ ರಾಜಾ ನಾರಾಯಣ್ ಸಿಂಗ್!! ಇನ್ನು ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ದ ಹೋರಾಡಲು
ರಾಮನಗರ(ವಾರಾಣಾಸಿ)ದ ರಾಜಾ ಚೈತ್ ಸಿಂಗ್ ಅವರ ಬೆಂಬಲವನ್ನೂ ಕೂಡ ರಾಜಾ ಪಡೆದಿದ್ದರು.

ಬ್ರಿಟಿಷರ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅವರನ್ನು ಮಟ್ಟಹಾಕಲು ನಿರ್ಧರಿಸಿದ್ದಲ್ಲದೇ, ಬ್ರಿಟಿಷರ ಶತ್ರು ಎಂದೇ ಬಿಂಬಿತರಾದರು!! ಹಾಗಾಗಿ ಸೋನ್ ದಂಡೆಯಲ್ಲಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ದೋಣಿಯನ್ನು ಒದಗಿಸಬಾರದು ಎಂದು ನಿರ್ಧರಿಸಿದ ನಂತರ ರಾಜಾ ಮತ್ತು ಮೇಜರ್ ಕ್ರಾಫರ್ಡ್ ನಡುವೆ ತೀವ್ರವಾದ ಯುದ್ದ ನಡೆಯಲು ಪ್ರಾರಂಭವಾಯಿತು.

ತದನಂತರದಲ್ಲಿ ರಾಜಾ ನಾರಾಯಣ್ ಸಿಂಗ್ ಅವರ ಸಾಮಥ್ರ್ಯವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲವೆಂದು ಮನಗಂಡ ಮೇಜರ್ ಕ್ರಾಫರ್ಡ್, ತಾನು ಚಲಿಸುತ್ತಿದ್ದ
ಮಾರ್ಗವನ್ನು ಬದಲಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು. ಹಾಗಾಗಿ ರೋಹ್ತಾಸ್ ಗೆ ಪ್ರಯಾಣ ಮಾಡಲಾರಂಭಿಸಿದರು!! ಆದರೆ ಅಲ್ಲಿಯೂ ಕೂಡ ರಾಜ ನಾರಾಯಣ್ ಸಿಂಗ್ ಆಕ್ರಮಣಕಾರರನ್ನು ವಿರೋಧಿಸಲು “ಮ್ಯಾಚ್‍ಲಾಕ್ ಮೆನ್”ಗಳನ್ನು ನೇಮಿಸಿದ್ದು, ಬ್ರಿಟಿಷರು ರಾಜ ನಾರಾಯಣ್ ಸಿಂಗ್ ನ ಪರಾಕ್ರಮಕ್ಕೆ ಬೆದರಿ ಹೋಗಿದ್ದಂತೂ ಅಕ್ಷರಶಃ ನಿಜ!!

ತದನಂತರದಲ್ಲಿ ರಾಜಾ ನಾರಾಯಣ್ ಸಿಂಗ್ ಹಾಗೂ ಅವರ 15,000 ಸೈನಿಕರೊಂದಿಗೆ ಮರ್ಬನ್ ನಲ್ಲಿರುವ ಬೆಚು ಸಿಂಗ್ ಮತ್ತು ಚೈತ್ ಸಿಂಗ್ ಅವರ ಫೌಜ್ದರ್ ಗೆ ಸೇರ್ಪಡೆಗೊಳ್ಳುವ ಮೂಲಕ ಬ್ರಿಟಿಷರ ಯೋಜನೆಗಳನ್ನು ಅಡ್ಡಿಪಡಿಸಲಾರಂಭಿಸಿದರು. ಇದನ್ನು ಸಹಿಸಲಾಗದ ಬ್ರಿಟಿಷರು “ಬಂಡಾಯ ಎದ್ದಿರುವ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ ಹಾಗಾಗಿ ಜಮೀನ್ದಾರರ ಕಚೇರಿಯಿಂದ ಸುಲಭವಾಗಿ ತೆಗೆಯಬಹುದು” ಎಂದು ಹಕ್ಕು ಪತ್ರದಲ್ಲಿ ಬರೆದು, ತದನಂತರ ಬ್ರಿಟಿಷರು ಇವರನ್ನು ದಂಗೆಕೋರ ಎಂದು ಪರಿಗಣಿಸಿದರು.

ತದನಂತರದಲ್ಲಿ ರಾಜಾ ನಾರಾಯಣ್ ಸಿಂಗ್‍ನನ್ನು ಹೀಗೆಯೇ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ತಿಳಿದ ಬ್ರಿಟಿಷರು ಮಾರ್ಚ್ 5, 1786ರಂದು ಬಂಧಿಸಿ,
ಖೈದಿಯಾಗಿ ಡಾಕಾಕ್ಕೆ ಕರೆದೊಯ್ಯಲಾಯಿತು. ಆದರೆ ರಾಜಾ ನಾರಾಯಣ್ ಸಿಂಗ್ ಬ್ರಿಟಿಷರ ಜೈಲಿನಿಂದ ಬಿಡುಗಡೆಗೊಂಡ ನಂತರದ ಕೆಲವು ದಿನಗಳಲ್ಲಿಯೇ
ಇಹಲೋಕ ತ್ಯಜಿಸಿದರು!!

Source:https://www.indiatimes.com/news/india/here-s-the-story-of-the-first-freedom-fighterraja-narayan-singh-who-fought-against-the-british-before-mangal-pandey-327807.html

-ಅಲೋಖಾ

Tags

Related Articles

Close