ಪ್ರಚಲಿತ

ಮಂಗಳೂರು ಮೇಯರ್ ಕವಿತಾ ಸನಿಲ್ ಮಾಡಿರುವ ದೌರ್ಜನ್ಯದ ಬಗ್ಗೆ ಪುರಾವೆಗಳು ಸಿಕ್ಕಿವೆ ಪೋಸ್ಟ್ ಕಾರ್ಡ್ ಬಳಿ!!!

ಮಂಗಳೂರು ಮೇಯರ್ ಕವಿತಾ ಸನಿಲ್‍ರೇ… ನೀವು ಸಮಾಜಕ್ಕೆ ತೋರುವಂತೆ ಅತ್ತುಬಿಟ್ಟು, ತಮ್ಮ ಮೊಸಳೆ ಕಣ್ಣೀರನ್ನು ಧಾರಾಕಾರವಾಗಿ ಹರಿಸಿಬಿಟ್ಟಿರಿ. ಆದರೆ ಆ ಬಡಪಾಯಿ ಜೀವಗಳು ಏನು ಮಾಡಬೇಕು..?

ಸಮಾಜ ಬದಲಾಗಬೇಕಿದೆ ಎಂದು ಎಷ್ಟು ಬೊಬ್ಬೆ ಬಿಟ್ಟರೂ ಇಂತವರು ಇರುವಾಗ ಅದೆಲ್ಲಿ ಬದಲಾವಣೆ ಸಾಧ್ಯ. ಸೊಕ್ಕಿನ ಮಂಗಳೂರು ಮೇಯರ್‍ನ ತನ್ನ ಅಧಿಕಾರದ ದರ್ಪದಿಂದ ಒಂದು ಬಡ ಕುಟುಂಬವೇ ಬೀದಿಪಾಲಾಗಿದ್ದು, ಅದನ್ನು ಮರೆಮಾಚುವ ಸಲುವಾಗಿ ಕಣ್ಣೀರು ಹಾಕಿ ನಾಟಕವಾಡುತ್ತಿದ್ದಾರೆ.

ಕರುಣೆ ತೋರದ ಕಾನೂನು…

ಏನಾದರೂ ಅನ್ಯಾಯವಾದಾಗ ಜನಸಾಮಾನ್ಯರು ಯಾರೂ ದಿಕ್ಕಿಲ್ಲದ ಸಮಯದಲ್ಲಿ ನ್ಯಾಯವನ್ನು ಅರಸಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದು ಸಹಜ. ಆದರೆ ನ್ಯಾಯ ದಕ್ಕಿಸಿ ಕೊಡಬೇಕಾದ ಕಾನೂನೇ ಧನವಂತರ ಅಂಕುಶಕ್ಕೆ ಒಳಗಾದರೆ ಹೇಗೆ.?

ಹೌದು. ಈ ಪ್ರಕರಣದಲ್ಲಿ ನಡೆದದ್ದೂ ಇದುವೇ. ತೀವ್ರ ಹಲ್ಲೆಗೊಳಗಾದ ವಾಚ್ ಮ್ಯಾನ್ ಪತ್ನಿ ಕಮಲಾ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದು ತಡವಾದರೆ
ಕಷ್ಟವಾಗಬಹುದೆಂದು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗುತ್ತಾರೆ. ಆದರೆ ಬಡಪಾಯಿಗಳಿಗೆ ಬೆಲೆ ಎಲ್ಲಿದೆ. ಬರ್ಕೆ ಪೊಲೀಸ್
ಠಾಣೆಯಲ್ಲಿ ಪೊಲೀಸರ ಪ್ರತಿಕ್ರಿಯೆ ವ್ಯತಿರಿಕ್ತವಾಗಿತ್ತು. “ನೀವು ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿ” ಎಂದು ಬರ್ಕೆ ಪೊಲೀಸ್ ಠಾಣೆಯ
ಪೊಲೀಸರು, ಕವಿತಾ ಸನಿಲ್ ವಿರುದ್ಧ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಾರೆ.

ಪಾಪ… ಆ ಬಡಪಾಯಿ ಜೀವಗಳು ಬರ್ಕೆ ಪೊಲೀಸರ ಮಾತು ಕೇಳಿ ನೇರವಾಗಿ ಅಲ್ಲಿಂದ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಲೇರುತ್ತಾರೆ. ಅಲ್ಲಿಯೂ ಪ್ರಕರಣ
ದಾಖಲಿಸದ ಪೊಲೀಸರು, “ನೀವು ಆಸ್ಪತ್ರೆಯಿಂದ ಇಂಟಿಮೇಷನ್ ತನ್ನಿ” ಎಂದು ವಾಪಾಸ್ ಕಳಿಸಿದ್ರು. ಅಲ್ಲಿಂದ ನೇರವಾಗಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ತೆರಳಿ ಮತ್ತೊಮ್ಮೆ ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡಿದ್ದರು ವಾಚ್ ಮ್ಯಾನ್ ಪತ್ನಿ ಕಮಲಾ…

ಹೀಗೆ ತಪಾಸಣೆ ಮಾಡಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಇಂಟಿಮೇಷನ್ ಕಳುಹಿಸಿಕೊಡಬೇಕಾಗಿದ್ದ ವೆನ್‍ಲಾಕ್ ಆಸ್ಪತ್ರೆ ಕೂಡಾ ಆ ಬಡಪಾಯಿ ಜೀವಗಳಿಗೆ
ಮೋಸ ಮಾಡುತ್ತೆ. ಆಸ್ಪತ್ರೆಯಲ್ಲಿನ ಕೆಲವು ದಾಖಲೆಗಳನ್ನು (ಹಲ್ಲೆಗೈದ ಪರಿಣಾಮ ಕಿವಿಯ ಭಾಗದಲ್ಲಿ ಇಂಜುರಿಯಾದ ದಾಖಲೆ ಇವೆ) ಪಡೆದುಕೊಂಡು ಮತ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ಕೇಸು ದಾಖಲಿಸಲು ಮೀನಾಮೇಷವೆನಿಸುತ್ತಾರೆ. ಪರಿಣಾಮ, ಇಂದಿಗೂ ಮಂಗಳೂರು ಮೇಯರ್ ಕವಿತಾ ಸನಿಲ್ ವಿರುದ್ಧ ಪ್ರಕರಣವನ್ನು ದಾಖಲಿಸಲೇ ಇಲ್ಲ ಮಂಗಳೂರಿನ ಪೊಲೀಸರು.

ತನ್ನ (ಕಾಂಗ್ರೆಸ್) ಹಿಡಿತದಲ್ಲಿರುವ ಪೊಲೀಸ್ ಇಲಾಖೆ ಹಾಗೂ, ಸರ್ಕಾರಿ ಆಸ್ಪತ್ರೆಯನ್ನು ದುರುಪಯೋಗಪಡಿಸಿಕೊಂಡು ನಾಟಕವಾಡುತ್ತಿದ್ದಾರೆ ಮೇಯರ್ ಕವಿತಾ ಸನಿಲ್. ಬಡಪಾಯಿ ಜೀವಗಳಿಗೆ ನ್ಯಾಯ ಕೊಡದ ಸರ್ಕಾರಿ ಇಲಾಖೆಗಳು ಧನವಂತರ ಪಾಲಾಗುತ್ತಿರುವುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇರೊಂದಿದೆಯೇ..?

ಕಮಲಾ ಮೇಲೆ ಸಾಲು ಸಾಲು ಕೇಸ್..!!!

ಅಮಾನವೀಯ ರೀತಿಯಲ್ಲಿ ಹಲ್ಲೆಗೊಳಗಾದ ಕಮಲಾ ನೀಡಿದ್ದ, ಮೇಯರ್ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಿಸದ ಮಂಗಳೂರಿನ ಪೊಲೀಸರು, ಮಂಗಳೂರಿನ ಅಹಂಕಾರಿ ಮೇಯರ್ ಕವಿತಾ ಸನಿಲ್ ನೀಡಿದ ಸುಳ್ಳು ದೂರನ್ನು ಯಥಾಶೀಘ್ರ ಸ್ವೀಕರಿಸಿ, ಆ ಕೂಡಲೇ ಎಫ್‍ಐಆರ್ ದಾಖಲಿಸುತ್ತಾರೆ. ಒಂದಲ್ಲಾ ಎರಡಲ್ಲಾ, ಬರೋಬ್ಬರಿ 7 ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಎಫ್‍ಐಆರ್ ದಾಖಲಿಸಿಕೊಂಡು ಹಲ್ಲೆಗೊಳಗಾದ ವಾಚ್‍ಮ್ಯಾನ್ ಪತ್ನಿ ಕಮಲಾರನ್ನು ಬಂಧಿಸಲು ಹೊರಟಿದ್ದಾರೆ. ಐಪಿಸಿ ಸೆಕ್ಷನ್ 341,323,504,324,307,506 ಹಾಗೂ 34 ರಂತೆ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಹತ್ಯೆಗೆ ಯತ್ನ ಸಹಿತ ಅನೇಕ ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಕಮಲಾ ಬಂಧನಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಮೂಲಕ ಬಡವರಿಗೊಂದು ನ್ಯಾಯ, ಸಿರಿವಂತರಿಗೊಂದು ನ್ಯಾಯ ಎಂಬ ಪೊಲೀಸರ ಧೋರಣೆಯನ್ನು ನಿರೂಪಿಸಿದ್ದಾರೆ.

ಕಮಲಾ ಗೋಳು, ಕೇಳೋರ್ಯಾರು..?

ಸಧ್ಯ ವಾಚ್‍ಮ್ಯಾನ್ ಪತ್ನಿ ಕಮಲಾ ಬಂಧನದ ಭೀತಿಯಿಂದ ಭೂಗತರಾಗಿದ್ದು, ಮನೆ ಮಠವನ್ನೆಲ್ಲ ಕಳೆದುಕೊಂಡಿದ್ದಾರೆ. ಅಹಂಕಾರಿ ಮೇಯರ್ ಕವಿತಾ ಸನಿಲ್‍ರವರ ಬೆದರಿಕೆಗೆ ಹೆದರಿ ಎದೆಲ್ಲೋ ಭಯದಿಂದ ತಪ್ಪಿಸಿಕೊಂಡಿರುವ ಕಮಲಾ ಮುಂದಿನ ಜೀವನದ ಪಾಡೇನು..? ಯಾರ ಬಳಿಗೆ ತನ್ನ ಜೀವನಕ್ಕಾಗಿ ಅನ್ನವನ್ನು ಅರಸಿಕೊಂಡು ಬಂದಿದ್ದರೋ, ಅದೇ ಅಪಾರ್ಟ್‍ಮೆಂಟ್‍ನ ಮಹಿಳೆ (ಮೇಯರ್)ಯಿಂದ ಅನ್ಯಾಯವಾದಾಗ ಆ ಬಡಪಾಯಿ ಮಹಿಳೆಯ ಪಾಡು ಏನಾಗಬೇಕು..? ತಾಯಿ ಮೊಲೆಯೂಡುತ್ತಿರುವಾಗ ಆಕೆಯಿಂದ ಮಗುವನ್ನು ಕಿತ್ತು ಎಸೆದ ಅಹಂಕಾರಿ ಮೇಯರ್‍ಗೇನು ಗೊತ್ತು ಆ ಬಡಪಾಯಿಯ ಗೋಳು… ತಾನೂ ಕೆಲಸ ಮಾಡದೆ, ಭವಿಷ್ಯವನ್ನು ರೂಪಿಸಿಕೊಳ್ಳುವಂತಹ ತನ್ನ ಮಕ್ಕಳನ್ನೂ ಶಾಲೆಗೆ ಕಳಿಸಲಾಗದೆ, ಮೇಯರಮ್ಮನಿಗೆ ಹೆದರಿ ಕುಳಿತಿರುವ ಆ ಜೀವಗಳ ಭವಿಷ್ಯವೇನು..? ಊರಿಗೆ ಬುದ್ಧಿ ಹೇಳುವ ಮೇಯರ್ ಕವಿತಾ ಸನಿಲ್ ಆ ಅಮಾಯಕ ಜೀವಗಳಿಗೆ ಮಾಡಿದ ಅನ್ಯಾಯ ಕ್ಷಮಿಸುವಂತದ್ದೇ..? ಇನ್ನು ಮುಂದೆ ಆ ಕುಟುಂಬ ಅದೆಲ್ಲಿ ಕೆಲಸ ಹುಡುಕಿಕೊಂಡು ಹೋದರೂ ಅದ್ಯಾವ ಧೈರ್ಯದಿಂದ ಕೆಲಸ ಮಾಡೋದು.? ಈಗಲೇ ಇಷ್ಟೊಂದು ಅಧಿಕಾರದ ಮದದಿಂದ ತೇಲುತ್ತಿರುವ ಕವಿತಾ ಸನಿಲ್ ಮುಂದೆ ಇವರ ಅನ್ನವನ್ನು ಕಸಿಯಲ್ಲ ಎಂದು ಯಾವ ಗ್ಯಾರಂಟಿ..?

ಕಟೀಲು ಅಮ್ಮನವರ ಮೇಲಾಣೆ..!!!

ಪೋಸ್ಟ್ ಕಾರ್ಡ್ ಸುದ್ಧಿ ಸಂಸ್ಥೆ ಯಾವಾಗ ಮೇಯರ್ ಹಣೆಬರಹವನ್ನು ಬಟಬಯಲು ಮಾಡಿತ್ತೋ ಅಂದಿನಿಂದ ಮೇಯರಮ್ಮ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಜನತೆ ರೊಚ್ಚಿಗೆದ್ದು ಪ್ರತಿಭಟನೆಯನ್ನು ನಡೆಸಿದ್ದಾರೆ. ಭಾರತೀಯ ಜನತಾ ಪಕ್ಷ ಕೂಡಾ ಪ್ರತಿಭಟನೆಯನ್ನು ಹಮ್ಮಿಕೊಂಡು ಮೇಯರ್ ಕವಿತಾ ಸನಿಲ್ ಈ ಕೂಡಲೇ ರಾಜೀನಾಮೆಯನ್ನು ನೀಡಬೇಕೆಂದು ಒತ್ತಾಯಿಸಿದೆ. ಮಾತ್ರವಲ್ಲದೆ ಇಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷಗಳು ಗದ್ದಲವನ್ನೇ ನಡೆಸಿದ್ದವು. ಮೇಯರ್ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದವು.

ಈ ವೇಳೆ ಮೇಯರ್ ಕವಿತಾ ಸನಿಲ್ ಮೊಸಳೆಯೂ ನಾಚುವಂತೆ ಕಣ್ಣೀರಿಟ್ಟಿದ್ದೇ ಇಟ್ಟಿದ್ದು. ಈ ವೇಳೆ ಆಕೆಯ ಬಾಯಿಂದ ಬಂದ ಮಾತೇನು ಗೊತ್ತಾ..?
“ನನ್ನ ಮೇಲೆ ಆರೋಪಿಸುವವರು ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ” ಎಂದು ದೇವರ ಮೊರೆ ಹೋಗಿದ್ದಾರೆ. ಥೂ… ಅದ್ಯಾವ ಬಾಯಿಯಿಂದ ಕಟೀಲು ಅಮ್ಮನವರ ಹೆಸರು ಹೇಳುತ್ತಾಳೆ ಈಕೆ. ಈಕೆಗೆ ಹಾಗೂ ಈಕೆಯ ಪಕ್ಷಕ್ಕೆ ಅಮ್ಮನವರ ಹೆಸರೆತ್ತಲೂ ನೈತಿಕತೆ ಇದಿಯಾ..? ಕಳೆದ ಬಾರಿ ಭಾರೀ ಸುದ್ಧಿಯಾಗಿದ್ದ, ಮತಾಂಧ ಮುಸಲ್ಮಾನನೊಬ್ಬ ಕಟೀಲು ಅಮ್ಮನವರ ಬಗ್ಗೆ ಬಾಯಿಗೆ ಬಂದ ಹಾಗೆ ಗೀಚಿದ್ದಾಗ ಜಿಲ್ಲೆಯ ಜನತೆ ಹಾಗೂ ಸಂಘ ಪರಿವಾರ ಬೀದಿಗಿಳಿದು ಪ್ರತಿಭಟಿಸಿದ್ದವು. ಪಾದಯಾತ್ರೆಯ ಮೂಲಕ ಅಮ್ಮನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಕಾನೂನು ಹೋರಾಟಗಳನ್ನು ಮಾಡಿ ಅಮ್ಮನ ಸೆರಗಿನ ಮಾನವನ್ನು ಕಾಪಾಡಿದ್ದರು. ಆದರೆ ಇಂದು ಕಟೀಲಿಗೆ ಬನ್ನಿ ಎಂದು ಸವಾಲು ಹಾಕುವ ಇದೇ ಕವಿತಾಳ ಕಾಂಗ್ರೆಸ್ ಪಕ್ಷ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತಿತ್ತು. ಅವಮಾನ ಮಾಡಿದ್ದ ದ್ರೋಹಿಗಳು ಮುಸಲ್ಮಾನರು ಎಂಬ ಸಾಫ್ಟ್ ಕಾರ್ನರ್ ಕಾಂಗ್ರೆಸ್ ಪಕ್ಷದಲ್ಲಿತ್ತು. ಇಂತಹ ಹಿಂದೂ ವಿರೋಧಿ ಕಾಂಗ್ರೆಸ್‍ನಿಂದ ಕಟೀಲು ಜಪ!!! ನಾಚಿಕೆಯಾಗಬೇಕು…

ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಹಾಕಿ ಎಂದು ಬೊಬ್ಬೆ ಬಿಟ್ಟ ಮೇಯರಮ್ಮಾ… “ವಾಚ್‍ಮ್ಯಾನ್ ಪತ್ನಿ ಕಮಲಾ ಮೇಲೆ ತಾನು ಹಲ್ಲೆ ಮಾಡಿಲ್ಲ,
ಆರೋಪಿಸುವವರು ಕಟೀಲು ದೇವಸ್ಥಾನಕ್ಕೆ ಬನ್ನಿ” ಎಂದು ಹೇಳುವಿರಲ್ಲಾ… ನಿಮ್ಮ ಮಗಳ ಕತ್ತು ಹಿಡಿದು ಕೊಲೆಗೆ ಯತ್ನಿಸಿದ್ದಾಳೆ ಸಹಿತ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಅಷ್ಟೂ ಆರೋಪಗಳನ್ನು ಸತ್ಯ ಎಂದು ಕಟೀಲಿನ ಅಮ್ಮನವರ ಮುಂದೆ ಆಣೆ ಹಾಕಿ ಹೇಳುವಿರಾ..? ನಿಮಗೆ ಆ ಧೈರ್ಯ ಇದೆಯಾ..? ದೇವರ ಹೆಸರಿನಲ್ಲಿ ರಾಜಕೀಯ ಮಾಡುವ ನೈತಿಕತೆ ನಿಮಗಾಗಲಿ, ನಿಮ್ಮ ಪಕ್ಷಕ್ಕಾಗಲಿ ಇದಿಯಾ ಎಂದು ತಿಳಿದುಕೊಳ್ಳಿ. ಮೊದಲು, “ನನ್ನ ಮಗಳ ಕತ್ತನ್ನು ಹಿಡಿದು ಕೊಲೆಗೆ ಯತ್ನಿಸಿದ್ದಾಳೆ, ಆದರೆ ನಾನು ಅವಳ ಕೊಠಡಿಗೆ ತೆರಳಿ ಅವರ ಮೈ ಮೇಲೆ ಕೈ ಹಾಕಿಲ್ಲ, ಮಗುವನ್ನು ಎತ್ತಿ ಎಸೆದಿಲ್ಲ” ಎಂದು ಪ್ರಮಾಣ ಮಾಡಿ. ಈ ಸವಾಲು ಸ್ವೀಕರಿಸುವ ತಾಕತ್ತು ನಿಮಗಿದೆಯಾ..?

ಬಯಲಾಗಿದೆ ಮೇಯರ್ ಕವಿತಾಳ ಮತ್ತೊಂದು ರಾಕ್ಷಸೀ ಮುಖ…!!

ಹೌದು. ಮಂಗಳೂರು ಮೇಯರ್ ಕವಿತಾ ಸನಿಲ್ ವಿರುದ್ಧದ ಮತ್ತೊಂದು ಆರೋಪ ನಮ್ಮ ಪೋಸ್ಟ್‍ಕಾರ್ಡ್ ಸುದ್ಧಿ ಸಂಸ್ಥೆಗೆ ಲಭ್ಯವಾಗಿದೆ. ಈ ಹಿಂದೆ ಅದೇ
ಅಪಾರ್ಟ್‍ಮೆಂಟ್‍ನಲ್ಲಿ ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮಂಜು ಎಂಬ ವ್ಯಕ್ತಿಯ ಮೇಲೆ ಇದೇ ಮಂಗಳೂರು ಮೇಯರ್ ಹಲ್ಲೆ ನಡೆಸಿದ್ದ ಬಗ್ಗೆ ಸ್ವತಃ ಆತನೇ ಕವಿತಾ ವಿರುದ್ಧ ಆರೋಪವನ್ನು ಮಾಡಿದ್ದಾನೆ. “ನನ್ನ ಮೇಲೆ ಆಕೆ ಹಾಗೂ ಆಕೆಯ ಪತಿ ಹಲ್ಲೆ ಮಾಡಿದ್ದಾರೆ. ಆ ಕಾರಣಕ್ಕೆ ನಾನು ಅಲ್ಲಿಂದ ಕೆಲಸ ಬಿಟ್ಟಿದ್ದೇನೆ” ಎಂದು ಹೇಳಿದ್ದಾನೆ. ಈ ಬಗ್ಗೆ ವೀಡಿಯೋ ಬಿಡುಗಡೆಯಾಗುವ ಸಾಧ್ಯತೆಯೂ ಇದೆ.

2016ರಲ್ಲಿ ಹಿತೇಶ್ ಪೂಜಾರಿ ಎಂಬ ಯುವಕನ ಮೇಲೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ಮೇಲೆ ಎಫ್‍ಐಆರ್ ಆಗಿತ್ತು. ಈ ಬಗ್ಗೆಯೂ ಪೋಸ್ಟ್ ಕಾರ್ಡ್ ಸಾಕ್ಷ್ಯ
ಬಿಡುಗಡೆಗೊಳಿಸಿತ್ತು.

ತನ್ನ ಮೇಯರ್ ಪದವಿಗೆ ಕುತ್ತು ಬರಬಹುದೆಂಬ ಭಯದಿಂದ ಮೊಸಳೆ ಕಣ್ಣೀರಿಟ್ಟ ಮೇಯರ್ ಕವಿತಾ ಸನಿಲ್, ಕಟೀಲು ಅಮ್ಮನವರ ಮೊರೆ ಹೋಗಿದ್ದಾರೆ. ಒಂದು
ಹೆಣ್ಣು ಕುಲದಲ್ಲಿ ಹುಟ್ಟಿ ಈ ರೀತಿಯ ಅಹಂಕಾರಗಳನ್ನು ತೋರಿಸಿ, ಮಹಿಳೆಯರು, ಪುರುಷರೆನ್ನದೆ ಹಲ್ಲೆ ಮಾಡುವ ಈಕೆಗೆ ಮೇಯರ್ ಪದವಿಯಲ್ಲಿ ಮುಂದುವರೆಯುವ ಯಾವ ನೈತಿಕತೆಯಾದರೂ ಇದಿಯಾ..? ಪ್ರಜೆಗಳನ್ನು ಪ್ರಭುಗಳಂತೆ ಕಾಣಬೇಕಾದ ಮಂಗಳೂರಿನ ಪ್ರಥಮ ಪ್ರಜೆಯೇ ಈ ರೀತಿ ಅಮಾನವೀಯತೆಯನ್ನು ಪ್ರದರ್ಶಿಸಿರುವುದು ಎಷ್ಟು ಸರಿ..?

ಮೇಯರಮ್ಮಾ… ನಿಮಗೆ, ಮರ್ಯಾದೆ ಸ್ವಲ್ಪನಾದರು ಇದ್ದರೆ ಈ ಕೂಡಲೇ ರಾಜೀನಾಮೆ ಕೊಡಿ. ಇಲ್ಲವಾದಲ್ಲಿ ಮಂಗಳೂರಿನ ಜನತೆ ಚಪ್ಪಲಿ ಕಿತ್ತು
ಹೋಗುವವರೆಗೆ ಭಾರಿಸಿದರೂ ಅಚ್ಚರಿಯಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ. ಈವರೆಗೆ ಅದೆಷ್ಟು ಪಾಪಗಳನ್ನು ಮಾಡಿದ್ದೀರೋ ಅದೆಲ್ಲ ಈವಾಗ ತಿರುಗಿ ನಿಮ್ಮ
ಮೇಲೆಯೇ ಬೀಳುತ್ತಿದೆ. ಧರ್ಮಸ್ಥಳವನ್ನು ಅಪವಿತ್ರಗೊಳಿಸಿದ ಸಿದ್ಧರಾಮಯ್ಯನ ಕಥೆ ಏನಾಯಿತೆಂದು ನೋಡುತ್ತಿದ್ದೀರಿ ತಾನೇ..? ಈಗ ನಿಮ್ಮ ಕೊಳಕು ಬಾಯಿಯಿಂದ ಜಗದ್ಜನನಿ ಕಟೀಲು ದುರ್ಗಾಪರಮೇಶ್ವರಿಯ ಹೆಸರೆತ್ತಿದ್ದೀರಿ. ಜನ ಕ್ಷಮಿಸಿದರೂ ಮಹಾಮಾತೆ ಎಂದಿಗೂ ಕ್ಷಮಿಸಲಾರಳು. ದೇವಿಯ ಹೆಸರಿನಲ್ಲಿ ರಾಜಕೀಯ ಮಾಡುವ ನಿಮ್ಮ ನರಿ ಬುದ್ಧಿ ಈ ಪ್ರಕರಣದಲ್ಲೇ ಅಂತ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

-ಸುನಿಲ್

Tags

Related Articles

Close