ಜಿಲ್ಲಾ ಸುದ್ದಿಪ್ರಚಲಿತ

ಮಂಗಳೂರು ಮೇಯರ್ ಕವಿತಾ ಸನಿಲ್ ಮಹಿಳೆ ಮತ್ತು ಮಗುವಿಗೆ ಹೊಡೆದ ತಪ್ಪಿಗೆ ಕ್ಷಮೆಯಾಚಿಸುವುದು ಬಿಟ್ಟು ಈಗ ಮಾಡಿರುವುದು ಇನ್ನೊಂದು ಘೋರ ಅಮಾನವೀಯ ಅಪರಾಧ!

ನಿನ್ನೆ ತಾನೇ ನಮ್ಮ ತಂಡ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್‍ರವರು ತನ್ನದೇ ಅಪಾರ್ಟ್‍ಮೆಂಟ್‍ನ ವಾಚ್‍ಮ್ಯಾನ್‍ನ ಪತ್ನಿಯ
ಮೇಲೆ ಮನಸೋ ಇಛ್ಚೆ ಹಲ್ಲೆ ಮಾಡಿ ಆಕೆಯ ಮಗುವನ್ನು ಅಮಾನವೀಯ ರೀತಿಯಲ್ಲಿ ಎಳೆದು ಬಿಸಾಡಿ ತನ್ನ ಕ್ರೌರ್ಯತೆ ಮೆರೆದ ವಿಸ್ಕøತ ವರದಿಯನ್ನು ಜನತೆಯ ಮುಂದಿಟ್ಟು, ಮೇಯರ್ ಕವಿತಾ ಸನಿಲ್‍ರವರ ನೈಜಮುಖವನ್ನು ಅನಾವರಣಗೊಳಿಸಿದ್ದೆವು. ನಮ್ಮ ವರದಿಯಿಂದ ಅಕ್ಷರಷಃ ಕಂಗಾಲಾಗಿದ್ದ ಮೇಯರ್ ಕವಿತಾ ಸನಿಲ್ ಅದ್ಯಾರ್ಯಾರಿಗೋ ಕರೆ ಮಾಡಿ “ದಯವಿಟ್ಟು ಆ ಸುದ್ಧಿಯನ್ನು ಆಲಿಸಿ ಹಾಕಿ ನನ್ನ ಮಾನ ಉಳಿಸಿ” ಎಂದು ಅಂಗಲಾಚಿದ್ದರು. ಅಷ್ಟರಲ್ಲಾಗಲೇ ರಾಜ್ಯ ಮಾಧ್ಯಮಗಳು ಎಚ್ಚೆತ್ತುಕೊಂಡು ಆಕೆಯ ಅಮಾನವೀಯ ಕೃತ್ಯವನ್ನು ಸಮಾಜದ ಮುಂದೆ ತೆರೆದಿಟ್ಟಿತ್ತು. ಆದರೆ ಇಂದು, ಅದೇ ಬಡಪಾಯಿ ಕುಟುಂಬದ ಮೇಲೆ ಮೇಯರ್ ಕವಿತಾ ಸನಿಲ್ ಸುಳ್ಳು ಕೇಸು ದಾಖಲಿಸಿ, ತನ್ನದೇನು ತಪ್ಪಿಲ್ಲ ಎಂದು ಬಿಂಬಿಸಲು ಹೊರಟಿದ್ದಾರೆ.

ಅದ್ಯಾವಾಗ ತನ್ನ ನೈಜ ಮುಖ ಸಮಾಜದ ಮುಂದೆ ಬಟಬಯಲಾಗಿತ್ತೋ, ಇದರಿಂದ ದಾರಿ ಕಾಣದ ಮೇಯರ್ ಕವಿತಾ ಸನಿಲ್ ತರಾತುರಿಯಲ್ಲಿ ಪತ್ರಿಕಾ ಗೋಷ್ಠಿ ಕರೆದು ಕೆಲವೊಂದು ಸಾಕ್ಷಿಗಳನ್ನು ಮುಂದಿಟ್ಟು, ಇದರಲ್ಲಿರುವುದೇ ಸತ್ಯ, ಉಳಿದೆಲ್ಲವೂ ಸುಳ್ಳು ಎಂದು ಬಿಂಬಿಸಲು ಶತ ಪ್ರಯತ್ನ ನಡೆಸಿದ್ದಾರೆ.

ನಿನ್ನೆ ಪತ್ರಿಕಾಗೋಷ್ಠಿ ಕರೆದ ಕವಿತಾ ಸನಿಲ್, ತನ್ನ ಅಪಾರ್ಟ್‍ಮೆಂಟ್‍ನಲ್ಲಿದ್ದ ಸಿಸಿಟಿವಿ ವೀಡಿಯೋಗಳನ್ನು ಮಾಧ್ಯಮದ ಮುಂದಿಟ್ಟಿದ್ದರು. ಆ ಹಿಂದೆ ಮಾಧ್ಯಮಗಳು ಕರೆ ಮಾಡಿದ್ದಾಗ, “ತನ್ನ ಮಗುವಿನ ಮೇಲೆ ವಾಚ್ ಮ್ಯಾನ್ ಪತ್ನಿ ಹಲ್ಲೆ ನಡೆಸಿದ್ದಾಳೆ, ಇದರ ಸಿಸಿಟಿವಿ ಫುಟೇಜನ್ನು ಪತ್ರಿಕಾ ಗೋಷ್ಟಿಯಲ್ಲಿ ಬಿಡುಗಡೆಗೊಳಿಸುತ್ತೇನೆ” ಎಂದು ಬೊಬ್ಬೆ ಬಿಟ್ಟಿದ್ದ ಮೇಯರ್, ಪ್ರೆಸ್ ಕಾನ್ಫರೆಸ್‍ನಲ್ಲಿ ತೋರಿಸಿದ್ದೇ ಬೇರೆ. ಅಸಲಿಗೆ ಆಕೆ ಬಿಡುಗಡೆ ಗೊಳಿಸಿದ್ದ ಸಿಸಿಟಿವಿ ವೀಡಿಯೋದಲ್ಲಿ, ಕವಿತಾ ಸನಿಲ್ ಮಗಳು ರಸ್ತೆ ಬದಿಗೆ ಓಡಿ ಹೋಗುವುದನ್ನು ಕಂಡ ವಾಚ್‍ಮ್ಯಾನ್ ಪತ್ನಿ ಕಮಲಾ, ಆಕೆಯನ್ನು ಹೋಗಬೇಡಾ ಎಂದು ತಡೆಯುವುದಾಗಿತ್ತು. ಕವಿತಾ ಸನಿಲ್ ಮಗಳು ರಸ್ತೆ ಕಡೆಗೆ ಓಡುತ್ತಿರುವಾಗ, “ಆ ಕಡೆ ಹೋಗಬೇಡಮ್ಮಾ, ವಾಹನಗಳು ಬರುತ್ತವೆ” ಎಂದು ಜಾಗ್ರತೆ ಹೇಳಿದ್ದ ಮುಗ್ದ ಮಹಿಳೆಯ ಮೇಲೆ, ಅದು ತನ್ನ ಮಗಳಿಗೆ ಹಲ್ಲೆ ಮಾಡಲು ಹೊರಟಿದ್ದು ಎಂದು ಬಿಂಬಿಸಲು ಹೊರಟಿರುವ ಈ ಮೇಯರಮ್ಮನಿಗೆ ಏನನ್ನಬೇಕು..? ಮಗುವಿನ ಸುರಕ್ಷತೆಗೆ ವಾಚ್ ಮ್ಯಾನ್ ಪತ್ನಿ ಕಮಲಾ ಜಾಗ್ರತೆ ವಹಿಸಿದ್ದೇ ಮುಳ್ಳಾಯಿತಾ..?

ನಂತರ ಸುಳ್ಳುಗಳ ಸರಮಾಲೆಯನ್ನು ಕಟ್ಟುತ್ತಲೇ ಹೋದ ಮೇಯರ್ ಕವಿತಾ ಸನಿಲ್, “ನಾನು ವಾಚ್ ಮ್ಯಾನ್ ಇರುವ ಕೊಠಡಿಗೆ ಹೋಗಿ ಕೇವಲ 3
ನಿಮಿಷಗಳಲ್ಲೇ ಹೊರ ಬಂದಿದ್ದೇನೆ. ಆಷ್ಟರೊಳಗೆ ಹಲ್ಲೆ ಮಾಡಲು ಸಾಧ್ಯವೇ” ಎಂದು ಪ್ರಶ್ನಿಸಿದ್ದಾರೆ. ಇಂತಹ ಮೂರ್ಖತನದ ಪ್ರಶ್ನೆ ಮೇಯರ್ ಪಟ್ಟವನ್ನು
ಅಲಂಕರಿಸಿರುವ ಕವಿತಾ ಸನಿಲ್‍ರಿಂದ ಬರುತ್ತೆ ಎಂದು ಸ್ವತಃ ಪತ್ರಕರ್ತರೇ ಎನಿಸಿರಲಿಲ್ಲ. ಅರೆ, 3 ನಿಮಿಷದಲ್ಲಿ ಏನೆಲ್ಲಾ ಆಗಬಹುದು ಎಂಬ ಕನಿಷ್ಠ ಜ್ನಾನವೂ ಈ ಮೇಯರ್‍ಗೆ ಇಲ್ವಾ. ಇತಿಹಾಸ ತೆರೆದು ನೋಡಿ ಮೇಯರಮ್ಮಾ, ಒಂದೇ ಒಂದು ನಿಮಿಷಗಳಲ್ಲಿ ಅದೆಷ್ಟೋ ಜನರ ಮೇಲೆ ಮಾರಣ ಹೋಮ ನಡೆಸಿದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಇನ್ನು 3 ನಿಮಿಷದಲ್ಲಿ ಹಲ್ಲೆ ನಡೆಸುವುದು ದೊಡ್ಡ ಸಂಗತಿಯೇ..?

ಮೇಯರ್ ಕವಿತಾ ಸನಿಲ್ ಮೊದಲೇ ಕರಾಟೆ ಪಟು. ಕರಾಟೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿರುವ ಕವಿತಾ ಸನಿಲ್ ಆ ಬಡಪಾಯಿ ಜೀವಗಳಿಗೆ ಎಷ್ಟು
ಏಟು ಬೇಕು.? ಆ ಒಂದೂವರೆ ವರ್ಷದ ಪುಟ್ಟ ಮಗುವನ್ನು ಎಳೆದು ಬಿಸಾಡಲು ಕರಾಟೆ ಕರಗತ ಮಾಡಿಕೊಂಡಿರುವ ಮೇಯರ್‍ಗೆ ಎಷ್ಟು ಸಮಯ ಬೇಕು.? 3 ನಿಮಿಷದಲ್ಲಿ ಏನು ಮಾಡೋಕಾಗುತ್ತೆ ಎನ್ನುವ ಮೂರ್ಖ ಪ್ರಶ್ನೆಯನ್ನಿಡುವ ಮೇಯರ್‍ಗೆ, ಅದೇ 3 ನಿಮಿಷ ತನ್ನ ಮೇಯರ್ ಪಟ್ಟಕ್ಕೆ ರಾಜೀನಾಮೆ ನೀಡುವ ಸನ್ನಿವೇಶವೂ ಉದ್ಭವವಾಗಿದೆ ಎಂಬುವುದನ್ನು ನೆನಪಿಟ್ಟುಕೊಳ್ಳಬೇಕಲ್ವೇ..?

ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಾ, “ಬಿಜೆಪಿಯ ಮಹಿಳಾ ಮೋರ್ಚಾದ ಇಬ್ಬರು ಸದಸ್ಯರು ಅಪಾರ್ಟ್‍ಮೆಂಟ್‍ನಲ್ಲಿರುವ ವಾಚ್ ಮ್ಯಾನ್ ಬಳಿ ಬಂದು ಅವರಿಗೆ ಆಮಿಷವೊಡ್ಡಿ, ತನ್ನ ವಿರುದ್ಧ ಷಡ್ಯಂತ್ರ ಹೂಡಿದ್ದಾರೆ” ಎಂದು ಆರೋಪಿಸಿದ್ದಾರೆ. ಇದೊಳ್ಳೆ ಕಥೆ ಆಯಿತಲ್ಲಾ… ಬೇರೆ ಜಿಲ್ಲೆಯ ನಿವಾಸಿಯಾಗಿರುವ ಈ ಕುಟುಂಬಕ್ಕೆ ಈ ಜಿಲ್ಲೆಯಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಅದೇನೇ ಅನ್ಯಾಯವಾದರೂ ಅವರ ಅಳಲನ್ನು ಕೇಳೋರಿಲ್ಲ. ಇಂತಹ ಸಮಯದಲ್ಲಿ ಯಾರೋ ಇಬ್ಬರು ಮಹಿಳೆಯರು ಆ ನೊಂದ ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಒಂದು ಪಕ್ಷದ ಸದಸ್ಯರನ್ನಾಗಿ ಬಿಂಬಿಸಿ, ಪ್ರಕರಣವನ್ನು ರಾಜಕೀಯವಾಗಿ ಬದಲಾಯಿಸಲು ಹೊಟಿರುವುದು ಕವಿತಾ ಸನಿಲ್‍ರವರ ಬಾಲಿಶತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ತಪ್ಪಾಗಲಾರದು.

ಮತ್ತೊಂದು ಸುಳ್ಳು ಮೇಯರ್ ಅವರನ್ನು ಹಳ್ಳಕ್ಕೆ ದೂಡಿಹಾಕಿದೆ. ಈ ಎಲ್ಲಾ ಘಟನೆಗಳು ನಡೆದ ನಂತರ, ತನ್ನ ಜೀವ ರಕ್ಷಣೆಗಾಗಿ ಆ ಕುಟುಂಬ ಅಲ್ಲಿದ್ದ ಜಾಗವನ್ನು ಖಾಲಿ ಮಾಡಿತ್ತು. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಮೇಯರ್, “ನಮ್ಮ ಅಪಾರ್ಟ್‍ಮೆಂಟ್‍ನಲ್ಲಿರುವ ರಾಧಾ ಶೆಟ್ಟಿಯವರು ವಾಚ್‍ಮ್ಯಾನ್ ಪತ್ನಿಗೆ ಕರೆ ಮಾಡಿದ್ದು, ಅವರು, ತಾನು ಬಿಜೆಪಿ ಕಛೇರಿಯಲ್ಲಿದ್ದೇವೆ ಎಂದು ಹೇಳಿದ್ದರು” ಎಂದು ಸುಳ್ಳು ಹೇಳಿದ್ದಾರೆ. ಅಸಲಿಗೆ ಹಲ್ಲೆಗೊಳಗಾದ ವಾಚ್‍ಮ್ಯಾನ್ ಪತ್ನಿ ಮತ್ತು ಕುಟುಂಬಸ್ಥರು ಬಿಜೆಪಿ ಕಛೇರಿ ಹತ್ತಿರ ಸುಳಿದೇ ಇಲ್ಲವೆಂಬುವುದು ಬಹಿರಂಗವಾಗಿದೆ. ಈ ಬಗ್ಗೆ ನಮ್ಮ ವರದಿಗಾರರು ಬಿಜೆಪಿ ಕಛೇರಿಯನ್ನು ಸಂಪರ್ಕಿಸಿದಾಗಲೂ ಅವರು ಸಿಸಿಟಿವಿ ಫುಟೇಜನ್ನು ತೋರಿಸಿ, ನಮ್ಮ ಕಛೇರಿಗೆ ಈ ವಿಷಯದ ಬಗ್ಗೆ ಯಾರೂ ಭೇಟಿ ಕೊಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲಿಗೆ ಮೇಯರ್ ಕವಿತಾ ಸನಿಲ್‍ರವರ ಬತ್ತಳಿಕೆಯಲ್ಲಿದ್ದ ಮತ್ತೊಂದು ಸುಳ್ಳಿನ ಬಾಣ ಠುಸ್ ಪಟಾಕಿಯಾಗಿದೆ.

ಇವುಗಳ ಮಧ್ಯೆ ಖಾಸಗೀ ಸುದ್ಧಿವಾಹಿನಿಯೊಂದಿಗೆ ಮಾತನಾಡಿದ್ದ ಮೇಯರ್ ಕವಿತಾ ಸನಿಲ್, “ನಾನು ಕರಾಟೆ ಪಟು. ನಾನು ಆಕೆಗೆ ಸರಿಯಾಗಿಯೇ ಹೊಡೆದಿದ್ದರೆ ಆಕೆ ಮೇಲೇಳದಂತೆ ಮಾಡುತ್ತಿದ್ದೆ” ಎಂದು ದರ್ಪದ ಮಾತುಗಳನ್ನಾಡಿದ್ದರು. ಇಡೀ ರಾಜ್ಯ ವೀಕ್ಷಿಸುತ್ತಿರುವ ಒಂದು ಸುದ್ಧಿ ವಾಹಿನಿಯಲ್ಲಿ, ಇಷ್ಟೊಂದು ಅಹಂಕಾರವಾಗಿ ಮಾತನಾಡುತ್ತಿರುವ ಈ ಮೇಯರ್, ಇನ್ನು 4 ಗೋಡೆಗಳ ಮಧ್ಯೆ, ಸಾಮಾನ್ಯ ಬಡಪಾಯಿ ಜನರನ್ನು ಅದ್ಯಾವ ರೀತಿ ಹಿಂಸಿಸಬಹುದು ಎಂದು ಸಾಮಾನ್ಯ ಪ್ರಜೆಯೂ ಕೂಡಾ ಊಹಿಸಬಲ್ಲ.

ಈ ನಡುವೆ ಹಲ್ಲೆಗೊಳಗಾದ ವಾಚ್‍ಮ್ಯಾನ್ ಪತ್ನಿ ಕಮಲಾರನ್ನು ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈಧ್ಯರು ತಪಾಸಣೆ ನಡೆಸಿದಸ್ದಾರೆ. ಆಕೆಯ ಕಿವಿಯ
ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು, ಕಿವಿಯ ಕೆಳಭಾಗದ ಎಲುಬಿಗೆ ತೀವ್ರವಾದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಸಧ್ಯ ಅಷ್ಟೊಂದು ಅಪಾಯವಿಲ್ಲದಿದ್ದರೂ,
ಭವಿಷ್ಯದಲ್ಲಿ ಈ ಸಮಸ್ಯೆ ಮತ್ತೆ ಉಲ್ಬಣವಾಗಿ ತಲೆಯ ಭಾಗಕ್ಕೆ ಶಾಶ್ವತ ಸಮಸ್ಯೆಯಾಗಿ ಕಾಡಬಹುದು ಎಂದಿದ್ದಾರೆ.

“ಅಥಿತಿ ದೇವೋಭವ” ಎಂಬುವುದಕ್ಕೆ ಮಂಗಳೂರಿನಲ್ಲಿ ವಿಶೇಷವಾದ ಪ್ರಾಧಾನ್ಯತೆ ಇದೆ. ಅದು ಕೆಲಸವನ್ನು ಅರಸಿ ಬಂದ ಸಾಮಾನ್ಯ ಕೂಲಿ ಕಾರ್ಮಿಕರಿಗೂ ಆ
ಗೌರವ ಇರುತ್ತೆ. ಈ ರೀತಿಯ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿರುವ ಈ ಜಿಲ್ಲೆಯಲ್ಲಿ, ಬೇರೆ ಜಿಲ್ಲೆಯಿಂದ ಕೆಲಸಕ್ಕಾಗಿ ಆಗಮಿಸಿದ್ದ ಈ ಬಡಪಾಯಿ
ಕುಟುಂಬಕ್ಕೆ ಈ ರೀತಿ ತನ್ನ ದರ್ಪವನ್ನು ಪ್ರದರ್ಶಿಸಿರುವುದು ಬುದ್ಧಿವಂತರ ಜಿಲ್ಲೆಯೇ ತಲೆ ತಗ್ಗಿಸುವಂತಾಗಿದೆ. ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಹರಸಿಕೊಂಡು ಬಂದ ಈ ಕುಟುಂಬಕ್ಕೆ ಕರುಣೆ ತೋರಿ ಅನ್ನ ನೀಡುವುದನ್ನು ಬಿಟ್ಟು, ಬುದ್ಧಿ ತಿಳಿಯದ ತನ್ನ ಮಗಳು ಅದೇನೋ ದೂರು ಹೇಳಿದ್ದಳೆಂದು ಆ ಕುಟುಂಬವನ್ನು ಬೀದಿ
ಪಾಲಾಗಿಸಿದ್ದು ತನ್ನ ಅಮಾನವೀಯತೆಯನ್ನು ಬಿಂಬಿಸುತ್ತದೆ. ತಾನೂ ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಹಲ್ಲೆ ಮಾಡಿ, ಆಕೆ ನನ್ನ ಮಗಳಿಗೆ ಹಲ್ಲೆ ಮಾಡಿದ್ದಾಳೆ ಎಂದು ಸುಳ್ಳು ಕೇಸು ದಾಖಲು ಮಾಡಿ ಪ್ರಕರಣದ ದಿಕ್ಕು ತಪ್ಪಿಸಲು ಹೊರಟಿರುವುದು ಮೇಯರಮ್ಮನ ಹತಾಶಾ ಮನೋಭಾವವನ್ನ ತೋರಿಸುತ್ತದೆ. ಇದು ನಮ್ಮ ಜಿಲ್ಲೆಗೆ ಮೇಯರ್ ಮಾಡಿದ ಅವಮಾನವೆನ್ನುವುದು ಉತ್ಪ್ರೇಕ್ಷೆಯಲ್ಲ.

Part 1 : ಕರಾಟೆ ಚಾಂಪಿಯನ್ ಮಂಗಳೂರು ಮೇಯರ್ ಕವಿತಾ ಸನೀಲ್ ರವರಿಂದ ವಾಚ್ ಮೆನ್ ಮತ್ತು ಅವರ ಹೆಂಡತಿಯ ಮೇಲೆ ಹಲ್ಲೆ! ಮಗುವನ್ನು ಎತ್ತಿ ಬಿಸಾಡಿದ ಮೇಯರ್!

-Suresh Poojary

Tags

Related Articles

Close