ಅಂಕಣಇತಿಹಾಸದೇಶಪ್ರಚಲಿತ

‘ಮಂದಿರವನ್ನಲ್ಲೇ ಕಟ್ಟುವೆವು!’, ಹೇಳಿದ್ದು ಯೋಗಿಯಲ್ಲ! ಮೋದಿಯೂ ಅಲ್ಲ! ಯಾರು ರಾಮಮಂತ್ರವನ್ನು ಜಪಿಸುತ್ತಿದ್ದಾರೆಂದು ತಿಳಿದರೆ ಜಾತ್ಯಾತೀತವಾದಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ!

ಡಿಸೆಂಬರ್ 6 ಎಂದಾಗ ಅಯೋಧ್ಯೆ ನೆನಪಾಗುತ್ತೆ ಅಲ್ವೇ?… ವಿದೇಶಿ ದಾಳಿಕೋರ ಬಾಬರ್‍ನ ಮುಖ್ಯ ಕಮಾಂಡರ್ ಮೀರ್ ಬಾಕಿ 1528ರಲ್ಲಿ ರಾಮ ಜನ್ಮಭೂಮಿ ದೇವಸ್ಥಾನವನ್ನು ನಾಶಗೊಳಿಸಿ ಅದೇ ಜಾಗದಲ್ಲಿ ನಿರ್ಮಿಸಿದ ಕಟ್ಟಡವೇ ಬಾಬರಿ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ, ಬಿಜೆಪಿ ಈಗಾಗಲೇ ರಾಮ ಮಂದಿರವನ್ನು ಮರು ನಿರ್ಮಾಣ ಮಾಡುವಂತೆ ಆಶ್ವಾಸನೆ ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೀಗ ಬಿಜೆಪಿ ನೀಡಿರುವ ಆಶ್ವಾಸನೆಯಂತೆ, ನೇರವೆರಿಸುತ್ತಿದೆ ಕೂಡ!! ಹೌದು ಅಯೋಧ್ಯೆಯಲ್ಲಿ ರಾಮ ಮಂದಿರದ ಕನಸು ನನಾಗಿಸುವ ಕ್ಷಣ ಇದೀಗ ಬಂದಿದೆ.

ರಾಮಾಯಣ ಕಾಲದ ಅಯೋಧ್ಯದಲ್ಲಿದ್ದ ಬಾಬ್ರಿ ಮಸೀದಿಯ ಹುಟ್ಟು ಬಾಬರ್‍ನಿಂದ ಪಡೆಯಿತಾದರೂ ಇಲ್ಲಿ ರಾಮಮಂದಿರವನ್ನು ಪುನಃಕಟ್ಟಲು ನಮಗೆ ಅವಕಾಶ ಸಿಕ್ಕಿದೆ!! ಅಲ್ಲದೇ ರಾಮಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾದವರು ಯಾರು ಗೊತ್ತೇ?? ಜಾತ್ಯಾತೀತ ಪಕ್ಷಗಳು ರಾಮಮಂದಿರದ ಬಗೆಗಿನ ವಿಷಯಗಳ ಬಗ್ಗೆ ಸಾಕಷ್ಟು ಕುತಂತ್ರ ಹೂಡಿದ್ದರು. ಇದೀಗ ರಾಮ ಮಂದಿರದ ಕನಸು ಮಾತ್ರ ನನಸಾಗುವ ಹೊಸ್ತಿಲಿನಲ್ಲಿದೆ. ಬಿಜೆಪಿ ನಾಯಕ ಸುಬ್ಮಮಣಿಯನ್ ಸ್ವಾಮಿ ಹೇಳಿರುವಂತೆ, ರಾಜ್ಯ ಸಭೆಯಲ್ಲಿ ಬಿಜೆಪಿ ಬಹುಮತವನ್ನು ಪಡೆದುಕೊಂಡರೆ, 2018ರಲ್ಲಿ ರಾಮಮಂದಿರವನ್ನು ಕಟ್ಟುತ್ತೇವೆ ಎನ್ನುವ ಮಾತನ್ನು ಹೇಳಿದ್ದರು. ಅದರಂತೆ ರಾಮಮಂದಿರದ ಮರುನಿರ್ಮಾಣಕ್ಕೆ ಅಯೋಧ್ಯೆ ಸಜ್ಞಾಗಿದೆ. ಅದೆಷ್ಟೋ ಮಾಧ್ಯಮಗಳು ತನ್ನ ಟಿಆರ್‍ಪಿಯನ್ನು ಹೆಚ್ಚಿಸಿಕೊಳ್ಳಲು, ರಾಮಮಂದಿರದ ಸಮಸ್ಯೆಗಳನ್ನು ಎತ್ತಿತೋರಿಸುತ್ತಿದ್ದರು. ಇದೀಗ ರಾಮ ಮಂದಿರದ ಸಮಸ್ಯೆಗಳಿಗೆ ಬ್ರೇಕ್ ಬಿದ್ದಂತಾಗಿದೆ. ರಾಮ ಮಂದಿರದ ವಿಷಯವನ್ನು ಕೆದುಕುತ್ತಿದ್ದ ಅದೆಷ್ಟೊ ಮೀಡಿಯಾಗಳು ಇದೀಗ ಟಿಆರ್‍ಪಿಯಿಂದ ಬರುತ್ತಿದ್ದ ಹಣದ ದಾಹಕ್ಕೆ ಪೂರ್ಣವಿರಾಮ ಇಟ್ಟದಾಂಗಿದೆ. ಅಲ್ಲದೇ ಹಿಂದೂ ಮುಸ್ಲಿಂ ಜಗಳದಲ್ಲಿ ರಾಮಮಂದಿರವನ್ನು ಕಟ್ಟಲು ಮುಸಲ್ಮಾನರೇ ಬಿಡುತ್ತಿಲ್ಲ ಎನ್ನುತ್ತಿದ್ದ ವಿಚಾರ ಹುಸಿಯಾಗಿದೆ ಯಾಕೆಂದರೆ ರಾಮ ಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾಗಿರುವುದು, ಮುಸಲ್ಮಾನ ಸ್ನೇಹಿತರು!!

ಹೌದು.. ಇದೀಗ ರಾಮ ಮಂದಿರದ ಮರುನಿರ್ಮಾಣಕ್ಕೆ ಮುಂದಾದವರು ಕೆಲ ಮುಸಲ್ಮಾನರು. ಆದರೆ ಈ ವಿಷಯ ಜಾತ್ಯಾತೀತ ಪಕ್ಷಗಳಿಗೆ ಮಂಕು ಕವಿದಂತಹ ಪರಿಸ್ಥಿತಿ ಇದೀಗ ನಿರ್ಮಾಣವಾದಂತಿದೆ. ಯಾಕಂದರೆ ಧರ್ಮ ಎನ್ನುವ ಹೆಸರಿನ ಮೂಲಕ ಜನರ ಓಟನ್ನು ಗಳಿಸುತ್ತಿದ್ದ ಜಾತ್ಯಾತೀತ ಪಕ್ಷಗಳು ಇದೀಗ ಯಾವ ರೀತಿ ಧರ್ಮದ ಅನುಸಾರವಾಗಿ ಭಾಷಣವನ್ನು ಬಿಗಿಯಲು ಸಾಧ್ಯ ಹೇಳಿ? ಬಾಬರಿ ಮಸೀದಿಯಲ್ಲಿ ರಾಮ ಮಂದಿರದ ಮರುನಿರ್ಮಾಣಕ್ಕೆ ಎದ್ದ ಗಲಭೆಯನ್ನು ನಮ್ಮ ಹಿಂದಿನ ಸರಕಾರ ತಮ್ಮ ಲಾಭಕ್ಕಾಗಿ ಬಳಸಿದ್ದೇ ಹೊರತು ಈ ಬಗ್ಗೆ ಯಾವುದೇ ರೀತಿಯ ಧ್ವನಿ ಎತ್ತಿದ್ದು ನಾವೇಂದು ಕಂಡಿಲ್ಲ. ಯಾಕೆಂದರೆ ಅವರು ಹಿಂದೂಸ್ತಾನದವರು ಆಗಿದ್ದರೇ ತಾನೆ??…

ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರ ಹುಟ್ಟಿದ ಸ್ಥಳದಲ್ಲಿ ಮಸೀದಿ ನಿರ್ಮಾಣವಾದುದರ ಹಿಂದಿನ ಗುಟ್ಟೇ ಬೇರೆ. ಅದೇನೆಂದರೆ ಬಾಬರ್‍ಗೆ ಭಾರತದ ಸಂಸ್ಕೃತಿ ಹಾಗೂ ಸಾರ್ವಭೌಮತ್ವದ ಮೇಲೆ ನಡೆದ ಆಕ್ರಮಣದ ಪ್ರತೀಕವೇ ಹೊರತು ಯಾವುದೇ ಧಾರ್ಮಿಕ ಸಂಕೇತವಲ್ಲ. ಇಸ್ಲಾಂನ ಪ್ರಕಾರ ಬೇರೆಯವರಿಂದ ಕಬಳಿಸಿದ ಅಥವಾ ಬಲವಂತವಾಗಿ ಪಡೆದ ಭೂಮಿಯಲ್ಲಿ ಹಾಗೂ ಕಟ್ಟಡದಲ್ಲಿ ಮಾಡಿದ ನಮಾಜ್ ಅಲ್ಲಾಹುವಿಗೆ ಸ್ವೀಕೃತವಲ್ಲ. ಆದರೆ ಭಾರತೀಯರನ್ನು ಅವಮಾನಿಸುವುದು ಹಾಗೂ ಭಾರತೀಯರು ತನ್ನ ಗುಲಾಮರು ಎಂದು ತೋರಿಸುವುದು ಅವನ ನಿಜವಾದ ಉದ್ದೇಶವಾಗಿತ್ತು. ಯಾವುದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಹೇಳುವುದಾದರೂ, ಭಾರತೀಯ ಮುಸ್ಲಿಮರಿಗೆ ಬಾಬರ್‍ನ ಜೊತೆ ಯಾವುದೇ ರೀತಿಯಲ್ಲಿ ವಿಶೇಷ ಸಂಬಂಧವೂ ಇರಲಿಲ್ಲ. ಏಕೆಂದರೆ ಅವರ ಪೂರ್ವಜರು ರಾಮನನ್ನು ದೇವರು ಹಾಗೂ ಆದರ್ಶರಾಜನೆಂದು ನಂಬಿದ್ದವರು. ಆದ್ದರಿಂದ ನಿಜವಾದ ಅರ್ಥದಲ್ಲಿ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ನೆಲಸಮವಾಗಿದ್ದು ಭಾರತೀಯರು ಹಾಗೂ ಭಾರತೀಯ ಸಂಸ್ಕೃತಿಯ ಮೇಲಿನ ಆಕ್ರಮಣದ ಸಂಕೇತವಾಗಿತ್ತು. ಅಷ್ಟೇ ಅಲ್ಲದೇ ಭಾರತ ದೇಶದಲ್ಲಿ ಮೊಘಲ್ ಸಾಮ್ರಜ್ಯ ಸ್ಥಾಪನೆಯಷ್ಟೇ ಬಾಬರ್‍ಗೆ ಇದ್ದ ಉದ್ದೇಶ.

ಅಯೋಧ್ಯೆಯಲ್ಲಿ ರಾಮಮಂದಿರ ಮರು ನಿರ್ಮಾಣವಾಗಬೇಕು ಎಂದು ಎದ್ದ ಸಮಸ್ಯೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡವರೇ ಹೆಚ್ಚು. ಆದರೆ ಉತ್ತರಪ್ರದೇಶದ ಚುನಾವಣೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಯಾಕೆಂದರೆ ರಾಮ ಮಂದಿರದ ಮರು ನಿರ್ಮಾಣದ ಬಗೆಗಿನ ಬಿಕ್ಕಟ್ಟಿಗೆ ಉತ್ತರಪ್ರದೇಶದಲ್ಲಿನಡೆದ ಚುನಾವಣೆಯ ಜಯ ದೊಡ್ಡ ಯಶಸ್ಸಿಗೆ ಕಾರಣವಾಗಿದೆ. ಇದು ಸಮಸ್ಯೆಯಾಗಿರುವುದು ಮಾತ್ರ, ಮೊಘಲ್ ಸಾಮ್ರಾಜ್ಯವನ್ನು ಇಷ್ಟಪಡುತ್ತಿದ್ದ ಹಿಂದಿನ ಸರಕಾರಕ್ಕೆ ಮತ್ತು ಅವರ ಹಿಂಬಾಲಕರಿಗೆ. ಹೌದು.. ರಾಜಕೀಯವಾಗಿ ರಾಮ ಮಂದಿರದ ವಿಚಾರದಲ್ಲಿ ಭಾಷಣ ಬಿಗಿಯುತ್ತಿದ್ದ ಜಾತ್ಯಾತೀತವಾದಿಗಳ ಬಾಯಿಗೆ ಬೀಗ ಜಡಿದಂತಾಗಿದೆ. ಆದರೆ ಖುಷಿಯ ಸಮಾಚಾರ ಏನಂದರೆ ಕೆಲವೊಂದು ಮುಸ್ಲಿಂ ಸಹೊದರ-ಸಹೋದರಿಯವರು ರಾಮ ಮಂದಿರದ ಮರುನಿರ್ಮಾಣಕ್ಕೆ ಸಾಥ್ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ…

ವಿಪರ್ಯಾಸವೇನೆಂದರೆ ಮರುನಿರ್ಮಾಣಕ್ಕೆ ಸಾಥ್ ನೀಡಿರುವ ಮುಸಲ್ಮಾನ ಸ್ನೇಹಿತರ ಬಗೆಗೆ ಮುಖ್ಯವಾಹಿನಿ ಮಾಧ್ಯಮಗಳು ಯಾವುದೇ ರೀತಿಯ ಮಾಹಿತಿಯನ್ನು ಹೊರಹಾಕಿಲ್ಲ. ಒಂದೆರಡು ಮಾಧ್ಯಮಗಳನ್ನು ಬಿಟ್ಟರೇ ಈ ಬಗೆಗೆ ಯಾವುದೇ ರೀತಿಯ ವಿಷಯವನ್ನು ವ್ಯಕ್ತಪಡಿಸಿಲ್ಲ. ನಿಜಾಂಶವನ್ನು ಭಿತ್ತರಿಸುವಲ್ಲಿ ಮಾಧ್ಯಮಗಳು ವಿಫಲರಾಗಿರುವುದು ಯಾಕೆ ಎನ್ನುವುದೇ ಒಂದು ಪ್ರಶ್ನೇ??? ಆದರೆ ಕೆಲವೊಂದು ಮುಸಲ್ಮಾರು, ರಾಮಮಂದಿರದ ಮರುನಿರ್ಮಾಣದ ಕುರಿತು ವಿರೋಧವನ್ನು ವ್ಯಕ್ತಪಡಿಸಿರುವ ಬಗೆಗೆ ಮಾಧ್ಯಮಗಳು ಕಾರ್ಯನಿರತರಾದರೇ ಹೊರತು ರಾಮಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾದವರನ್ನು ಶ್ಲಾಘಿಸಲೇ ಇಲ್ಲ. ಅಂತೂ ಕೆಲವೊಂದು ಮುಸಲ್ಮಾನ ಸಹೊದರ-ಸಹೋದರಿಯವರು ರಾಮಮಂದಿರ ಮರುನಿರ್ಮಾಣಕ್ಕೆ ಕೈಜೋಡಿಸಿದ್ದಲ್ಲದೇ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತುಂಬುವಲ್ಲಿ ಮುಂದಾಗಿದ್ದಾರೆ. ಜಾತ್ಯಾತೀತವಾದಿಗಳೇ ಇನ್ನಾದರೂ ನಿಮ್ಮ ಕಣ್ಣು ತೆರೆಯಿರಿ- “ಬುರೆ ದಿನ್ ಆನೇ ವಾಲೇ ಹೇ”

– ಸರಿತಾ

Tags

Related Articles

Close