ಪ್ರಚಲಿತ

ಮಂದಿರ ಕಟ್ಟೋ ಬದಲು ಆಸ್ಪತ್ರೆ ಕಟ್ಟಿಸಿ ಅಂತ ಬೊಗಳೆ ಬಿಡುತ್ತ ಹಿಂದೂಗಳನ್ನ ಸಾಫ್ಟ್ ಟಾರ್ಗೇಟ್ ಮಾಡಲು ಮುಂದಾಗಿರೋ ಚಿತ್ರ ನಟರಿಗೆ ನೈತಿಕತೆ ಅನ್ನೋದೇನಾದರೂ ಇದೆಯಾ?

ದೇಶದಲ್ಲಿ ಮಂದಿರಗಳ ನಿರ್ಮಾಣದ ಸಂಖ್ಯೆ ಹೆಚ್ಚಾಗಿದೆಯಾ ಅಥವ ಮಸೀದಿ ಚರ್ಚುಗಳ ನಿರ್ಮಾಣ ಹೆಚ್ಚಾಗಿದೆಯಾ?

ಶ್ರೀರಾಮಚಂದ್ರ ಪ್ರಭುವಿನ ಒಂದು ರಾಮ ಮಂದಿರವನ್ನ ರಾಮ ಜನಿಸಿದ ಸ್ಥಳ ಆಯೋಧ್ಯೆಯಲ್ಲಿ ಕಟ್ಟಬೇಕು ಅಂತ ಬಹುಸಂಖ್ಯಾತ ಹಿಂದುಗಳು ಕೇಳಿದರೆ “ಇಲ್ಲ ಇಲ್ಲ ಅಲ್ಲಿ ಮಂದಿರವೂ ಬೇಡ ಮಸೀದಿಯೂ ಬೇಡ, ಅಲ್ಲೊಂದು ಬಡವರಿಗಾಗಿ ಆಸ್ಪತ್ರೆಯಾಗಲಿ” ಅಂತ ಬೊಬ್ಬಿರಿಯೋ ಸೋಗಲಾಡಿ ಸೆಕ್ಯೂಲರ್’ಗಳು ಬರೀ ರಾಜಕೀಯ ಕ್ಷೇತ್ರದಲ್ಲಷ್ಟೇ ಇದಾರೆ ಅನ್ಕೊಂಡಿದ್ದೆ ಆದರೆ ಇತ್ತೀಚೆಗೆ ತಮ್ಮ ಸೋ ಕಾಲ್ಡ್ ಸೆಕ್ಯೂಲರ್ ಪರಾಕಾಷ್ಠೆಯನ್ನ ಫಿಲಂ ಇಂಡಸ್ಟ್ರಿಯ ನಟರೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮೊನ್ನೆ ಮೊನ್ನೆಯಷ್ಟೆ ಬಿಡುಗಡೆಯಾದ “ಮೆರಸಾಲ್” ತಮಿಳು ಚಿತ್ರದಲ್ಲಿ ಹಿಂದೂ ಮಂದಿರಗಳನ್ನು, ಹಿಂದೂ ಸಂಸ್ಕೃತಿಯನ್ನ ಸಾಫ್ಟ್ ಆಗಿ ಹೀಯಾಳಿಸಿ ಅದರ ಜೊತೆ ಜೊತೆಗೆ ಪ್ರಧಾನಿ ಮೋದಿ ತರುತ್ತಿರುವ ಯೋಜನೆಗಳನ್ನ ಹೀಯಾಳಿಸೋ ಕೆಲಸವನ್ನೂ ಚಿತ್ರತಂಡ ಜೋಸೆಫ್ ವಿಜಯನ್ ಮೂಲಕ ಮಾಡಿದ್ದಾರೆ.

ಸಿಂಗಾಪೂರದಲ್ಲಿ 8% GST ಇದ್ದರೆ ಭಾರತದಲ್ಲಿ ಮಾತ್ರ 28% GST ಚಾಲ್ತಿಯಲ್ಲಿದೆ, ಕೇಂದ್ರದ ಯೋಜನೆಗಳು ನೆಲಕಚ್ಚಿವೆ ಅಂತ ಸಿನೆಮಾದಲ್ಲಿ ಬೊಗಳೆ ಬಿಡುತ್ತಿರೋ ಈ ನಾಯಕನಟನೇ ಐದು ವರ್ಷಗಳಿಂದ ದೇಶಕ್ಕೆ ಟ್ಯಾಕ್ಸ್ ಕಟ್ಟದೆ ಟ್ಯಾಕ್ಸ್ ಕಳ್ಳನಾಗಿ ಕೋಟಿ ಕೋಟಿ ಸಂಭಾವನೆ ತೆಗೆದುಕೊಳ್ಳುತ್ತ ತನ್ನ ಸಿನೆಮಾಗಳ ಮೂಲಕ ಸಾಮಾನ್ಯ ಜನರಿಗೆ ಬಿಟ್ಟಿ ಉಪದೇಶಗಳನ್ನ ಕೊಡುತ್ತಿದ್ದ “ನಾಯಕನಟ”ನೊಬ್ಬನಿಗೆ ದಿಢೀರ್ ಆಗಿ ದೇಶದಲ್ಲಿ ಬದಲಾವಣೆ ತರಲು ಹಗಲಿರುಳು ಶ್ರಮಿಸುತ್ತಿರೋ ಪ್ರಧಾನಿ ಮೋದಿ ಹಾಗು ಅವರ ಯೋಜನೆಗಳು ಟಾರ್ಗೇಟ್ ಆಗಿದ್ದನ್ನ ನೋಡಿದರೆ ಇದರ ಹಿಂದೆ ರಾಜಕೀಯ ಕುತಂತ್ರ ಅಡಗಿದೆ ಅನ್ನೋದು ಸ್ಪಷ್ಟವಾಗಿ ಕಾಣುತ್ತೆ.

ತೆರಿಗೆ ಕಳ್ಳತನ ಮಾಡುತ್ತಿದ್ದ ಈ ಕಳ್ಳ ನಟನ ಮೇಲೆ ಸರಿಯಾಗಿ, ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು. ಕಳ್ಳತನದಿಂದ ಪೇರಿಸಿದ್ದ ಟ್ಯಾಕ್ಸ್ ಹಣ ಸರಕಾರದ ಪಾಲಾಗಿತ್ತು.

ತನ್ನ ಚಿತ್ರದಲ್ಲಿ ಮಂದಿರಗಳನ್ನ ನಿರ್ಮಿಸುವ ಬದಲು ಆಸ್ಪತ್ರೆ ನಿರ್ಮಿಸುವುದು ಉತ್ತಮ ಅನ್ನೋ ಬಿಟ್ಟಿ ಸಲಹೆಯನ್ನೂ ಕೊಟ್ಟಿದ್ದ ಈ ಜೋಸೆಫ್ ವಿಜಯನ್.

ಕ್ರಿಶ್ಚಿಯನ್ ಆಗಿರೋ ಜೋಸೆಫ್ ವಿಜಯನ್ ಮಂದಿರ ಅನ್ನೋ ಶಬ್ದ ಬಳಸುವ ಬದಲಿಗೆ ಮಸೀದಿ, ಚರ್ಚ್ ನಿರ್ಮಾಣ ಮಾಡುವ ಬದಲು ಆಸ್ಪತ್ರೆ ನಿರ್ಮಾಣವಾಗಲಿ ಅನ್ನೋದನ್ನ ಹೇಳಬಹುದಿತ್ತಲ್ಲವೇ? ಆದರೆ ಆತ ಅದನ್ನ ಹೇಳಲ್ಲ, ತಮಿಳುನಾಡು, ಆಂಧ್ರಪ್ರದೇಶದ ಬಹುತೇಕ ಪ್ರದೇಶಗಳಲ್ಲಿ ಕ್ರಿಶ್ಚಿಯನ್ ಮಿಷ’ನರಿ’ಗಳು ಫುಲ್ ಆ್ಯಕ್ಟಿವ್ ಆಗಿ ಹಿಂದುಗಳನ್ನ ಮತಾಂತರ ಮಾಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.

ಜೋಸೆಫ್ ವಿಜಯನ್ ಕೂಡ ಮಿಷನರಿಗಳ ಅಣತಿಯಂತೇ ಹಿಂದುಗಳನ್ನ ತನ್ನ ಚಿತ್ರದ ಮೂಲಕ ಸಾಫ್ಟ್ ಟಾರ್ಗೇಟ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾನೆ.

ಅಷ್ಟಕ್ಕೂ ಇಲ್ಲಿ ಈತ ಮಂದಿರ ನಿರ್ಮಾಣದ ಬಗ್ಗೆ ಮಾಡಿದ ಪ್ರಸ್ತಾಪವೇ ಅಪ್ರಸ್ತುತ ಅನಿಸುತ್ತೆ. ಕಳೆದ 20 ವರುಷಗಳಲ್ಲಿ 17,500 ಚರ್ಚುಗಳು, 9,700 ಮಸೀದಿಗಳು ಹಾಗೂ ಕೇವಲ 370 ದೇವಾಲಯಗಳ ನಿರ್ಮಾಣವಾಗಿದೆ. ಅಂದಮೇಲೆ ಮಂದಿರಗಳ ನಿರ್ಮಾಣವಾಗೋದು ನಿಲ್ಲಬೇಕಾ ಅಥವ ಮಸೀದಿ ಚರ್ಚುಗಳ ನಿರ್ಮಾಣವಾಗೋದು ನಿಲ್ಲಬೇಕಾ?

ಇದು ಜೋಸೆಫ್ ವಿಜಯನ್ ಅನ್ನೋ ಢೋಂಗಿ ನಟನ ಕಥೆಯಷ್ಟೇ ಅಲ್ಲ, ಮೋದಿಯನ್ನ ವಿರೋಧಿಸೋಕೆ ಈಗೀಗ ಸಿನೆಮಾ ತಾರೆಗಳ ದಂಡೇ ಅಖಾಡಕ್ಕಿಳಿದುಬಿಟ್ಟಿದೆ.

ಮೋದಿಯವರು ಪ್ರಧಾನಿಯಾದಾಗಿನಿಂದ ಹಿಂದುಗಳಲ್ಲಿ ತಮ್ಮ ಪರಂಪರೆ, ಸಂಸ್ಕೃತಿಯ ಬಗ್ಗೆ ಪ್ರಜ್ಞೆ ಮೂಡಲಾರಂಭಿಸಿದೆ, ಹಿಂದುಗಳು ಜಾಗೃತರಾಗುತ್ತಿದ್ದಾರೆ.

ಇದರಿಂದ ಬೆಚ್ಚಿದ ಮಿಷನರಿಗಳು ಮೋದಿಯೊಬ್ಬನನ್ನ ಅಧಿಕಾರದಿಂದ ಕೆಳಗಿಳಿಸದರೆ ತಮ್ಮ ಕೆಲಸ ಸಲೀಸಾಗಿ ಮಾಡಬಹುದಂತ ನಟರ ಮೂಲಕ ತಮ್ಮ ಮಾತನ್ನ ಹೇಳಿಸುತ್ತಿದ್ದಾರೆ ಅನ್ನೋ ಅನುಮಾನ ಕಾಡುತ್ತಿವೆ.

ಉರಿಯೋ ಬೆಂಕಿಗೆ ತುಪ್ಪ ಸುರಿಯೋ ರೀತಿಯಲ್ಲಿ ಮೋದಿ ವಿರೋಧಿಗಳು ಇವರ ‘ಕೈ’ ಜೋಡಿಸಿ ನಿಂತುಬಿಟ್ಟಿವೆ.

ಇದಕ್ಕೆ ತಾಜಾ ಉದಾಹರಣೆಯೆಂದರೆ “ಏನಾಗುತ್ತಿದೆ ಕರ್ನಾಟಕದಲ್ಲಿ?” ಅಂತ ಓಡಿ ಬಂದು ಪ್ರಧಾನಿ ಮೋದಿಯನ್ನ ತರಾಟೆಗೆ ತೆಗೆದುಕೊಂಡಿದ್ದ ಪ್ರಕಾಶ್ ರಾಜ್(ರೈ).

ಅತ್ತ ತಮಿಳಿನಲ್ಲಿ ಕಮಲ್ ಹಾಸನ್ ಎಂಬ ಶ್ರೇಷ್ಟ ಕಲಾವಿದ ಕೂಡ ಮೋದಿಯ ನೀತಿಗಳನ್ನ ಕಟುವಾಗಿ ಟೀಕಿಸುತ್ತ, “ಮೊದಲು ನಾನು ನೋಟು ಅಮಾನ್ಯೀಕರಣ
ಬೆಂಬಲಿಸಿದ್ದಕ್ಕೆ ಕ್ಷಮಿಸಿ, ಈಗ ನನ್ನ ತಪ್ಪಿನ ಅರಿವು ನನಗಾಗಿದೆ” ಅಂತ ಹೇಳಿಕೆ ನೀಡಿದ್ದ.

ವಾಕ್ ಸ್ವಾತಂತ್ರ್ಯ ನಮಗೂ ಇದೆ, ನಮಗೂ ಹೇಳಲಿಕ್ಕಿದೆ ಅಂತ ಬಾಯಿಗೆ ಬಂದ ಹಾಗೆ ಈಗ ಬೊಗಳುತ್ತಿರೋ ಈ ತಮಿಳು ನಟರು ಇದೇ ಕಮಲ್ ಹಾಸನ್ “ರಾ ಏಜೆಂಟ್” ಆಗಿ ಅಭಿನಯಿಸಿ ಇಸ್ಲಾಮಿಕ್ ಭಯೋತ್ಪಾದನೆಯನ್ನ ಬಿಚ್ಚಿಟ್ಟ ವಿಶ್ವರೂಪಂ ಸಿನೆಮಾದ ಪರ ಯಾಕೆ ನಿಲ್ಲಲಿಲ್ಲ? ಆಗ ಯಾಕೆ ಪ್ರಧಾನಂತ್ರಿಯಾಗಿದ್ದ ಮನಮೋಹನ್ ಸಿಂಗರನ್ನ ಮೋದಿಯನ್ನ ಹೀಗಳೆಯೋ ಹಾಗೆ ಹೀಗಳೆಯಲಿಲ್ಲ?

ಈಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು ಬಂದಿದೆ ಅಂತ ಬೊಬ್ಬಿರಿಯುತ್ತಿರೋ ಈ ಸೋಗಲಾಡಿಗಳು ಆಗ್ಯಾಕೆ ಬಾಯಿ ಮುಚ್ಚಿಕೊಂಡು ಕೂತಿದ್ದರೋ? ಆಗ ದೇಶದಲ್ಲಿ
ಅಭಿವ್ಯಕ್ತಿ ಸ್ವಾತಂತ್ರ್ಯ ರಾರಾಜಿಸುತ್ತಿತ್ತೇನೋ, ಪಾಪ ಮೋದಿ ಬಂದಮೇಲೆ ಇವರಿಗೆ ಮೋದಿ ಮಾತನಾಡುವ ಹಕ್ಕನ್ನೇ ಕಸಿದುಕೊಂಡು ಬಿಟ್ಟಿದ್ದಾರೆ ಅನ್ನೋ ರೀತಿಯಲ್ಲಿ ದಿನಬೆಳಗಾದರೆ ಮೋದಿಯನ್ನ ಟೀಕಿಸುವ ಭರದಲ್ಲಿ ಹಿಂದೂ ಧರ್ಮವನ್ನೂ ಎಳೆದು ತರುತ್ತಿದ್ದಾರೆ ಈ ಢೋಂಗಿಗಳು.

ಇದು ತಮಿಳು ಚಿತ್ರರಂಗದ ಕಥೆಯಾದರೆ ಇತ್ತ ನಮ್ಮ ನೆಚ್ಚಿನ ಕಂಚಿನ ಕಂಠದ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಮೊನ್ನೆ ಮೊನ್ನೆಯಷ್ಟೇ GST ವಿರುದ್ಧ ಹೇಳಿಕೆಯೊಂದನ್ನ ಕೊಟ್ಟಿದ್ದನ್ನ ಗಮನಿಸಿದೆ.

GST ವಿರೋಧ ಮಾಡುತ್ತಿರೋ ಇವರನ್ನ ನೋಡಿದರೆ ಇವರ್ಯಾರೂ ಮೊದಲು ಟ್ಯಾಕ್ಸ್ ಕಟ್ತಿರಲಿಲ್ವೇನೋ ಈಗ GST ಜಾರಿಯಾದನಂತರ ಶತಾಯಗತಾಯ
ಟ್ಯಾಕ್ಸ್ ಕಟ್ಟಲೇಬೇಕಾದ ಅನಿವಾರ್ಯತೆಗೆ ಸಿಲುಕಿ ಹೀಗೆಲ್ಲಾ ಹೇಳಿಕೆ ಕೊಡುತ್ತಿದ್ದಾರೇನೋ ಅನ್ನೋ ಅನುಮಾನಗಳೂ ಕಾಡುತ್ತಿವೆ.

ಹಾಗಂತ ಕಿಚ್ಚ ಸುದೀಪ್ ಟ್ಯಾಕ್ಸ್ ಕಟ್ಟಿಲ್ಲ ಅಂತೇನೂ ಹೇಳ್ತಿಲ್ಲ, ಆದರೆ ಅವರು ಈಗ GST ಬಗ್ಗೆ ಪ್ರಶ್ನೆ ಮಾಡುತ್ತಿರೋ ರೀತಿಯಲ್ಲಿ ಕಳೆದ ಹತ್ತು ವರ್ಷಗಳ ಆಡಳಿತದಲ್ಲಿದ್ದ UPA ಸರಕಾರಕ್ಕೂ ಸ್ವಲ್ಪ ಚಾಟಿ ಬೀಸಿದ್ದಿದ್ದರೇ 10 ವರ್ಷಗಳ ಹಿಂದೆಯೇ ಕಿಚ್ಚನ ಅಭಿಮಾನಿಗಳೂ ಸ್ವಲ್ಪ ದೇಶದಲ್ಲಿ ಏನಾಗುತ್ತಿದೆ ಅನ್ನೋದರ ಬಗ್ಗೆ ಅರ್ಥೈಸಿಕೊಳ್ಳುತ್ತಿದ್ದರೇನೋ!!

ಅಷ್ಟಕ್ಕೂ GST ಬರೋಕೂ ಮುನ್ನ ಭಾರತದ ಸಾಮಾನ್ಯ ನಾಗರಿಕ ಟ್ಯಾಕ್ಸ್ ಕಟ್ತಾನೇ ಇರಲಿಲ್ಲ, ಈಗ ಮೋದಿ ಪ್ರಧಾನಿಯಾದ ಮೇಲೆ GST ಜನರ ಮೇಲೆ ಹೇರಿಬಿಟ್ಟರು ಅನ್ನೋ ರೀತಿಯಲ್ಲಿ ಹೇಳಿಕೆಗಳನ್ನು ಗಮನಿಸಿದರೆ ಇದು ಅವರ ಬಾಲಿಶತನದ ಹೇಳಿಕೆ ಅನ್ನಿಸೋದಂತು ಸುಳ್ಳಲ್ಲ.

GST ಬರೋಕೂ ಮುನ್ನ ಸೇಲ್ಸ್ ಟ್ಯಾಕ್ಸ್, ಕಸ್ಟಮ್ ಟ್ಯಾಕ್ಸ್, ಸರ್ವಿಸ್ ಟ್ಯಾಕ್ಸ್, ಕಸ್ಟಮ್ ಟ್ಯಾಕ್ಸ್, ವ್ಯಾಟ್‌ ಟ್ಯಾಕ್ಸ್, ಟ್ರಾನ್ಸಪೋರ್ಟ್ ಟ್ಯಾಕ್ಸ್, ಆ ಟ್ಯಾಕ್ಸ್ ಈ ಟ್ಯಾಕ್ಸ್ ಅಂತ ಹತ್ತು ಹಲವು ಟ್ಯಾಕ್ಸ್ ಗಳನ್ನ ಕಟ್ತಿದ್ರು ಅದರಿಂದ ಜನರಿಗೆ ಹೊರೆಯಾಗಿತ್ತು ಅನ್ನೋದು ಈ ನಾಯಕನಟರಿಗೆ ತಿಳಿದಿರಲಿಲ್ಲವಾ?

ಭಾರತವನ್ನ ಪ್ರೀತಿಸುತ್ತೇನೆ, ಜನ ಒಂದು ಆಶಾಕಿರಣವನ್ನಿಟ್ಟುಕೊಂಡು ಪ್ರತಿಬಾರಿಯೂ ವೋಟ್ ಮಾಡ್ತಾರೆ, ಆದರೆ ಭಾರತ ಮಾತ್ರ ಬದಲಾಗುತ್ತಿಲ್ಲ ಅಂತ ಹೇಳಿಕೆ ಕೊಡುತ್ತಿರೋ ನಾಯಕನಟರ ಮಾತನ್ನ ಕೇಳಿದರೆ ಭಾರತದ ಜನ ಯಾವ ಕಷ್ಟವೂ ಅನುಭವಿಸದೆ ಜಗತ್ತಿನ ನಂ.1 ರಾಷ್ಟ್ರವಾಗಿ ಆದಷ್ಟು ಬೇಗ ಚಿಟಿಕೆ ಹೊಡೆಯೋಷ್ಟರಲ್ಲಿ ಆಗಿ ಬಿಡಬೇಕು ಅಂದಂಗಿದೆ.

ಇವರ ಮಾತಿನ ಅರ್ಥ ಹೇಗಿದೆಯೆಂದರೆ ಒಬ್ಬ ಹೆಣ್ಣು ಗರ್ಭಿಣಿಯಾದರೆ ಒಂಭತ್ತು ತಿಂಗಳು ಮಗುವನ್ನ ಹೊರದೆ, ಯಾವ ಹೆರಿಗೆ ನೋವೂ ಇಲ್ಲದೆ ಫಟಾಫಟ್ ಮಗುವನ್ನ ಹೆತ್ತು ಗಂಡನ ಕೈಗಿಡಬೇಕು ಅನ್ನೋ ರೀತಿಯಲ್ಲಿದೆ.

ಇವರಿಗೆ ಈಗ ತೊರಿಸುತ್ತಿರೋ ಅಭಿವೃದ್ಧಿಯ ಆತುರತನ ಈ ಮೂರು ವರ್ಷಗಳ ಹಿಂದೆ ಮಾಡಿದ್ದಿದ್ದರೆ ಎಗ್ಗಾಮಗ್ಗ ದೇಶವನ್ನ ಲೂಟಿ ಹೊಡೆದ ಕಳೆದ
ಸರ್ಕಾರಗಳು ಯಾವತ್ತೋ ಸುಧಾರಿಸಿ ದೇಶ ಬದಲಾಗಿರುತ್ತಿತ್ತೇನೋ.

ಏನೇ ಹೇಳಿ ಮೋದಿ ಅನ್ನೋ ವ್ಯಕ್ತಿಯನ್ನು ವಿರೋಧಿಸುವ ತವಕದಲ್ಲಿ ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಿರುವ ಇಂಥ ಜನರನ್ನ ಏನಂತ ಕರೀಬೇಕು?

ಇವರ ಬೆಂಕಿಗೆ ತುಪ್ಪ ಸುರಿಯಲು ಮಿಷನರಿಗಳು, ಮುಲ್ಲಾ ಮೌಲ್ವಿಗಳು ಹಿಂದೂ ಧರ್ಮ ಒಡೆಯೋಕೆ ಈ ನಾಯಕ ನಟರ ಹೇಳಿಕೆಗಳನ್ನಿಟ್ಟುಕೊಂಡು ನಾನಾರೀತಿಯ ಕಸರತ್ತನ್ನೂ ನಡೆಸಿತ್ತಿರೋದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಜನ ಮೊದಲಿನ ಹಾಗಿಲ್ಲ, ಜನ ಬದಲಾಗುತ್ತಿದ್ದಾರೆ, ಜನಮನ ಕೂಡ ಬದಲಾಗುತ್ತಿದೆ ಅನ್ನೋದನ್ನ ಈ ನಾಯಕ ನಟರು ಯಾವಾಗ ಅರ್ಥೈಸಿಕೊಳ್ಳುತ್ತಾರೋ!!!

ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆದು ಐಷಾರಾಮಿ ಜೀವನ ನಡೆಸುತ್ತಿರೋರು ಬಡವರ ನೋವಿನ ಬಗ್ಗೆ ಸಡನ್ ಆಗಿ ಧ್ವನಿಯೆತ್ತುತ್ತಿರೋದನ್ನ ನೋಡಿದರೆ ನಗು ಬರ್ತಿದೆ.

ದೇಶ ಬದಲಾಗ್ತಿದೆ, ಬದಲಾವಣೆ ಬರಬೇಕಾದರೆ ಕೆಲ ಕಷ್ಟಗಳನ್ನ ನಾವು ಎದುರಿಸಲೇಬೇಕು, ಆಗ ಮಾತ್ರ ಸಮರ್ಥ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ.

– Vinod Hindu Nationalist

Tags

Related Articles

Close