ಅಂಕಣಪ್ರಚಲಿತ

ಮಂದಿರ ಕೆಡವಿ ಮಸೀದಿ ಕಟ್ಟಿದ್ದು ನಿಜ! ಸತ್ಯ ಒಪ್ಪಿದ ಶಿಯಾ ವಕ್ಫ್ ಮಂಡಳಿ! ‘ರಾಮಮಂದಿರವಲ್ಲೇ ಕಟ್ಟುವೆವು’!!!! ಹೊಸ ತಿರುವು, ಹೊಸ ಅಧ್ಯಾಯ!!

ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿರುವ ಅಯೋಧ್ಯಾ ರಾಮ ಮಂದಿರದ ಕಲಹಕ್ಕೆ ಅಂತ್ಯ ಕೊನೆಗೂ ಬಂದೊದಗಿದೆ. ಮೊದಲಿನಿಂದಲೂ ಬಾಬರಿ ಮಸೀದಿಯ ವಿಷಯದಲ್ಲಿ ನಡೆಯುತ್ತಿದ್ದ ಕಲಹ ಹಾಗೂ ಚರ್ಚೆಗಳಿಗೆ ಮತ್ತೊಂದಿಷ್ಟು ಸೇರ್ಪಡೆಯಾಗಿದೆ.

‘ಬಾಬರಿ ಮಸೀದಿಯ ಜಾಗ’ ಶಿಯಾ ವಕ್ಫ್ ಮಂಡಳಿಗೆ ಸೇರಿದ್ದೆಂದು ಮಂಡಳಿ ಸುಪ್ರೀಮ್ ಕೋರ್ಟಿನಲ್ಲಿ ದಾವೆ ಹೂಡಿತ್ತು ಲ. ತದನಂತರ ಸುನ್ನಿ ಮಂಡಳಿಯವರು ಅಡ್ಡಗಾಲು ಹಾಕಿದರಾದಾರೂ ಕೂಡ ಶಿಯಾ ಮಂಡಳಿ ಕ್ಯಾರೇ ಎಂದಿರಲಿಲ್ಲ. ಆದರೆ ‘ಮಂದಿರದ ಜಾಗದಲ್ಲಿಯೇ ಮಸೀದಿ ಕಟ್ಟುವ ಅಗತ್ಯವಿಲ್ಲ. ಅಲ್ಲಿಯೇ ಸುತ್ತ ಮುತ್ತಲಿನ ಹತ್ತಿರದ ಜಾಗದಲ್ಲಿ ಮಂಡಳಿ ಕಟ್ಟಬಹುದೆಂದಿದೆ.” ಇದಕ್ಕೂ ಆರೋಪ ಮಾಡಿದ್ದ ಸುನ್ನಿ ಮಂಡಳಿ, “ಶಿಯಾ ಮಂಡಳಿಯವರು ತಮ್ಮದೇ ಜಾಗ ಎನ್ನುವಂತೆ ಮಾತನಾಡಿ ತಪ್ಪು ಮಾಹಿತಿ ಕೊಡುತ್ತಿದೆ” ಎಂದಿತ್ತು!

ಈಗ ಮತ್ತೊಂದು ಆಘಾತ!

ಶಿಯಾ ವಕ್ಫ್ ಮಂಡಳಿ ಮತ್ತೊಂದು ಸತ್ಯವನ್ನು ಬಹಿರಂಗಗೊಳಿಸಿದೆ. ಇಷ್ಟು ದಿನವೂ ಕಾದು ಕುಳಿತಿದ್ದ ಸತ್ಯದ ಬೆಳಕೊಂದು ಹೊರಹೊಮ್ಮಿದಂತಾಗಿದೆ.
“ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕೆಡವಿ ಬಾಬರಿ ಮಸೀದಿ ಕಟ್ಟಿದ್ದು ನಿಜ. ಅಬ್ದುಲ್-ಮೀರ್-ಭಕಿ ಎಂಬುವ ಶಿಯಾ ಪಂಗಡಕ್ಕೆ ಸೇರಿದ ಹಾಗೂ ಬಾಬರನ ಸಚಿವನಾಗಿದ್ದಗರು ರಾಮ ಮಂದಿರವನ್ನು ಕೆಡಗಿ ನಂತರ ಸ್ವಂತ ಹಣದಲ್ಲಿ ಮಸೀದಿಯನ್ನು ಕಟ್ಟಿದ್ದನು” ಎಂಬುದಾಗಿ ಹೇಳಿಕೊಂಡಿದೆ. ಇದಕ್ಕೆ ತೀವ್ರವಾದ ವಿವಾದ ವ್ಯಕ್ತವಾಗಿದೆ.

ಇದಕ್ಕೆ ಸುನ್ನಿ ಮಂಡಳಿ ಯವರು ವಿರೋಧ ವ್ಯಕ್ತಪಡಿಸಿದ್ದು ಶಿಯಾ ಮಂಡಳಿಯವರು ಸುಳ್ಳು ಹೇಳಿಕೆಗಳಿಂದ ಅವಾಂತರ ಸೃಷ್ಟಿಸುತ್ತಾರೆಂದು ಆರೋಪಿಸಿದೆ.

ಸತ್ಯಂ ಏವ ಜಯತೇ!

ಮೊದಲಿನಿಂದಲೂ ಬಾಬರಿ ಮಸೀದಿ ಹಾಗೂ ರಾಮ ಮಂದಿರದ ವಿಷಯದಲ್ಲಿ ಅದೆಷ್ಟೋ ಸಾವು ನೋವುಗಳಾಗಿದೆ. ಅಲ್ಲದೆಯೇ, ಅದೆಷ್ಟೋ ವರ್ಷಗಳಿಂದಲೂ ಬಾಕಿಯಿದ್ದ ವಿವಾದವೊಂದು ಈಗ ಕೊನೆಯ ಘಟ್ಟಕ್ಕೆ ಬಂದಿದೆ. ಕೊನೆಗೂ ಸತ್ಯವೊಂದೇ ಗೆಲ್ಲುವುದೆಂಬುದು ಸಾಬೀತಾದಂತಾಗಿದೆ. ರಾಮ ಮಂದಿರದ ಅಸ್ತಿತ್ವ ಸುಳ್ಳು ಎಂಬುದಾಗಿ ಆರೋಪಿಸಿದ್ದ ಬಹುತೇಕ ಎಡ ಪಂಥೀಯರು ಇನ್ನೂ ಮುಂದೆ ಹೋಗಿ ರಾಮನೇ ಸುಳ್ಳು ಎಂಬುದಾಗಿ ಆರೋಪಿಸಿದ್ದರು. ಆದರೆ, ಶಿಯಾ ವಕ್ಫ್ ಮಂಡಳಿಯ ನಡೆಯೊಂದು ಹೊಸ ಇತಿಹಾಸವನ್ನು ಸೃಷ್ಟಿಸುವತ್ತ ಸಾಗಿದೆಯೆಂಬುದರಲ್ಲಿ ಸಂಶಯವಿಲ್ಲ. ‘ರಾಮಮಂದಿರವಲ್ಲೇ ಕಟ್ಟುವೆವು’ ಎಂಬ ಹಿಂದೂಗಳ ಐಕ್ಯತಾ ಮಂತ್ರವೊಂದಕ್ಕೆ ಮತ್ತೆ ಶಕ್ತಿ ಬಂದೊದಗಿದೆ.

– ಪೃಥ ಅಗ್ನಿಹೋತ್ರಿ

Tags

Related Articles

Close