ಪ್ರಚಲಿತ

ಮಕ್ಕಳೆಂದು ಮುದ್ದುಗರೆದವರೇ ಗೌರೀ ಲಂಕೇಶ್ ಹತ್ಯೆಗೆ ಕಾರಣರಾ?!

ಗೌರೀ ಲಂಕೇಶ್ ಳ ಹತ್ಯೆಯೊಂದು ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ! ತನಿಖೆಯಾಗುವುದಕ್ಕಿನ್ನ ಮುನ್ನವೇ ಆರೋಪಿಗಳ ಸುಳಿವು ಸಿಕ್ಕಿದೆ ಎಂದಿದ್ದ
ರಾಮಲಿಂಗಾರೆಡ್ಡಿಯನ್ನು ಹೇಳಿಕೆಯನ್ನೂ ಧಿಕ್ಕರಿಸಿ ಎಸ್ ಐಟಿ ಬರೋಬ್ಬರಿ ನಲವತ್ತು ದಿನಗಳ ಕಾಲ ತನಿಖೆ ನಡೆಸಿ ಆರೋಪಿಗಳ ರೇಖಾ ಚಿತ್ರವನ್ನೂ ತಯಾರಿಸಿದೆ! ಆದರೆ,. . .

ಸಾವಿನ ಸುತ್ತಲೂ ಮತ್ತೆ ರಾಜಕೀಯ!

ಗೌರೀ ಲಂಕೇಶಳ ಸಾವನ್ನೇ ಉಪಯೋಗಿಸಿಕೊಂಡ ಆಕೆಯ ಹಿಂಬಾಲಕರು ಬೀದಿಗಿಳಿದು ದೊಡ್ಡ ಸಾಧನೆ ಮಾಡಿ, ತಿರುಪೆಯನ್ನೂ ಎತ್ತಿದರು! ಸರಕಾರವೂ ಕೂಡ ಆಕೆಗೆ ಗನ್ ಸಲ್ಯೂಟ್ ಕೊಟ್ಟು ತನ್ನ ಎಡಪಂಥೀಯರ ಮತವನ್ನು ಭದ್ರ ಪಡಿಸಿಕೊಂಡಿತಷ್ಟೇ!

ಎಸ್ ಐ ಟಿ ಬಿಡುಗಡೆಗೊಳಿಸಿದ ರೇಖಾ ಚಿತ್ರದಲ್ಲಿ ವ್ಯಕ್ತಿಯೊಬ್ಬ ಹಣೆಗೆ ಕುಂಕುಮವಿಟ್ಟಿದ್ದಾನೆ ಎನ್ನಲಾಗಿದೆ! ಸಾರ್ವಜನಿಕರ ಸಹಾಯ ತೆಗೆದುಕೊಂಡೇ ಆರೋಪಿಗಳ ರೇಖಾ ಚಿತ್ರ ಬಿಡಿಸಿದ್ದೇವೆ ಎನ್ನುತ್ತಿರುವ ಎಸ್ ಐಟಿಗೆ ಸ್ವಲ್ಪವಾದರೂ ಪರಿಜ್ಞಾನವಿದೆಯೇ?!

ಸಿಸಿ ಟಿವಿಯ ಫೂಟೇಜ್ ನಲ್ಲಿ ಮುಖ ಕಾಣುವುದೇ ಕಷ್ಟ! ಅಂತಹದ್ದರಲ್ಲಿ, ಹಣೆಗೆ ಕುಂಕುಮವಿಟ್ಟಿದ್ದುಹೇಗೆ ಕಂಡೀತು?!

ಮುಂಚೆಯೂ ಗಾಡಿಯ ನಂಬರ್ ಸರಿಯಾಗಿ ಕಾಣಿಸಲಿಲ್ಲ ಎಂದರು! ಕೊನೆಗೆ ಇನ್ನೊಂದು ಸಿಸಿಟಿವಿಯ ಫೂಟೇಜ್ ನಲ್ಲಿ ಸಿಕ್ಕಿದೆ ಎಂದರು! ಆದರೆ ಅದನ್ನು ಬಹಿರಂಗಪಡಿಸಲೂ ಇಲ್ಲ!

ಆರೋಪಿ ಹೆಲ್ಮೆಟ್ ಹಾಕಿದ್ದ ಎಂದು ಹೇಳಿಕೆ ನೀಡಿದ್ದ ಎಸ್ ಐಟಿ ಗೆ ಹೆಲ್ಮೆಟ್ ಒಳಗಿನ ಕುಂಕುಮ ಹೇಗೆ ಕಂಡಿರಬಹುದು?!

ಸಾರ್ವಜನಿಕರ ಸಹಾಯ ಪಡೆದಿದ್ದೇವೆ ಎಂದ ಎಸ್ ಐಟಿ ಗೆ ಒಂದು ವಿಚಾರ ತಿಳಿದಿರಬೇಕಿತ್ತು! ಸಾರ್ವಜನಿಕವಾಗಿ ಯಾರೂ ಸಹ ಯಾರನ್ನೂ ಗಮನಿಸಲು ಹೋಗುವುದೇ ಇಲ್ಲ! ಅದರಲ್ಲೂ, ಹತ್ಯೆ ಮಾಡಲು ಬಂದವನು ಹೆಲ್ಮೆಟ್ಟು ತೆಗೆದು ರಾಜಾರೋಷವಾಗಿ ಇನ್ನೊಬ್ಬರ ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆಯೇ?!

ಕುಂಕುಮ ಇಟ್ಟಿದ್ದನೋ ಅಥವಾ ಕುಂಕುಮ ಇಟ್ಟಿದ್ದಾ?!

ಸತ್ಯ! ಗೌರೀ ಲಂಕೇಶ್ ಳ ಪ್ರಕರಣಕ್ಕೊಂದು ಅಂತ್ಯ ಕಾಣಿಸಬೇಕಿದೆ! ಸರಕಾರಕ್ಕೆ ಚುನಾವಣೆ ಹತ್ತಿರ ಬರುತ್ತಿದೆ! ನಕ್ಸಲ್ ಸಾಮ್ರಾಜ್ಯದ ವಿಕ್ರಮ್ ಗೌಡನನ್ನು ಮಧ್ಯೆ ತಂದ ಸರಕಾರಕ್ಕೆ ಹೇಗಾದರೂ ಮಾಡಿ ಇನ್ನೊಂದು ವಿವಾದ ಸೃಷ್ಟಿಸಿ ಕೊನೆಗೆ ಇದು ಬಲಪಂಥೀಯವರೇ ಮಾಡಿದ ಕೃತ್ಯ ಎಂಬ ಸುಳ್ಳನ್ನು ಸತ್ಯ ಮಾಡಲೇ ಬೇಕೆಂದು ಶತಾಯ ಗತಾಯ ಪ್ರಯತ್ನಿಸುತ್ತಿರುವ ಸರಕಾರಕ್ಕೆ ಕುಂಕುಮವೊಂದರ ಉಪಾಯ ದೊರಕಿದ್ದೇ, ಅನುಷ್ಠಾನಗೊಳಿಸಿಬಿಟ್ಟಿದೆ! ಸಿಬಿಐ ಗೆ ಪ್ರಕರಣ ಕೊಟ್ಟರೆ ಎಲ್ಲಿ ಬುಡಕ್ಕೆ ಬರುವುದೋ ಎಂದು ಎಸ್ ಐಟಿಗೆ ಪ್ರಕರಣ ಬಗೆಹರಿಸಲು ನೀಡಿತಾ ಸಿದ್ಧರಾಮಯ್ಯನವರ ಸರಕಾರ?!

ಮಕ್ಕಳೆಂದು ಮುದ್ದುಗರೆದದ್ದೇ ಮುಳ್ಳಾಯಿತಾ?!

ಈ ಕೆಳಗಿನ ಫೋಟೋ ನೋಡಿ! ಅಲ್ಲಿರುವ ರೇಖಾ ಚಿತ್ರಕ್ಕೂ, ಗೌರೀ ಲಂಕೇಶ್ ಳ ದತ್ತು ಪುತ್ರರಿಗೂ ಅದೆಷ್ಟು ಸಾಮ್ಯತೆ! ಕುಂಕುಮವೊಂದನ್ನು ಇಟ್ಟಿದ್ದು (?) ಬಿಟ್ಟರೆ ಧಿಕ್ಕರಿಸಲು ಯಾವ ಕಾರಣವೂ ನನಗೆ ಸಿಗಲಿಲ್ಲ!

ದೇಶವನ್ನು ತುಂಡು ಮಾಡುತ್ತೇನೆಂದ ಕನ್ಹಯ್ಯಾ ನಿಗೆ ಗೌರಿ ಲಂಕೇಶ್ ಬೆಂಬಲಿಸಿದ್ದಲ್ಲದೇ, ತನ್ನ ಸ್ವಂತ ಮಗನೆಂದು ಕರೆದಿದ್ದು ಗೊತ್ತೇ ಇದೆ! ಅದೇ ರೀತಿ, ಉಮರ್ ಖಲೀದ್ ನನ್ನು ಆಲಂಗಿಸಿ ನನ್ನ ಇಬ್ಬರು ಮಕ್ಕಳೆಂದು ಬಿರಿಯಾನಿ ತಿಂದಿದ್ದ ಗೌರೀ ಲಂಕೇಶ್ ಎಡವಿದ್ದು ಹಲವು ಬಾರಿ!!

ನಾನು ನನ್ನ ತಂದೆಯ ಆದರ್ಶಕ್ಕೆ ತಕ್ಕನಾಗಿ ಬದುಕುತ್ತೇನೆಂದಿದ್ದ ಗೌರೀ ಲಂಕೇಶ್ ಗೆ ಬಹುಷಃ ಸ್ವತಃ ತಂದೆಯಾದ ಲಂಕೇಶ್ ರವರೇ ಆಕೆಯ ನಕ್ಸಲ್ ವಾದಕ್ಕೆ ವಿರೋಧಿಸಿದ್ದರು! ಎಡಪಂಥೀಯ ವಿಚಾರಧಾರೆ ಹೊಂದಿದ್ದ ಲಂಕೇಶ್ ರವರು ಎಂದಿಗೂ ಸಹ ನಕ್ಸಲರನ್ನು ಬೆಂಬಲಿಸಿರಲೇ ಇಲ್ಲ ಎಂಬುವ ಸತ್ಯ ಅಂದಿನ ಲಂಕೇಶ್ ಪತ್ರಿಕೆ ಓದಿದರೆ ಅರಿವಾಗಿಬಿಡುತ್ತದೆ! ತಂದೆಯ ಸಾವಿನ ನಂತರ ಪೂರ್ತಿ ಜವಾಬ್ದಾರಿ ತೆಗೆದುಕೊಂಡ ಗೌರಿ ಗೆ ತಮ್ಮನಾದ ಇಂದ್ರಜಿತ್ ಬಹಳ ಸಲ ಎಚ್ಚರಿಸಿದ್ದ! ನಕ್ಸಲ್ ವಾದ ಲಂಕೇಶ್ ಪತ್ರಿಕೆಯ ಆದರ್ಶವಲ್ಲ ಎಂದಿದ್ದ ಇಂದ್ರಜಿತ್ ನನ್ನೂ ದೂರ ತಳ್ಳಿದ್ದ ಗೌರಿ ಎಡವಿದ್ದಲ್ಲಿಯೇ! ಯಾರು ತನ್ನವರು ಎಂಬ ಸತ್ಯ ಕೊನೆಗೂ ಆಕೆಗೆ ಹೊಳೆದಿರಲಿಲ್ಲ ಬಿಡಿ!

ಗೌರಿ ಲಂಕೇಶ್ ಎಂಬ ಪತ್ರಕರ್ತೆಯ ನಕ್ಸಲ್ ವಾದ, ಉಗ್ರರ ಓಲೈಕೆ, ಹಿಂದೂ ವಿರೋಧಿ ಮನಃಸ್ಥಿತಿ! ಹಣಕಾಸಿನ ಒಪ್ಪಂದ! ನಕ್ಸಲರ ಜೊತೆ ನಿಕಟ ಸಂಪರ್ಕ! ತೀರಾ ಆಳಕ್ಕಿಳಿದು ಯೋಚಿಸಿದರೆ ಇವೇ ಆಕೆಯ ಸಾವಿಗೆ ಮೂಲ ಕಾರಣಗಳೆನ್ನಿಸುವುದರಲ್ಲಿ ತಪ್ಪೇ ಇಲ್ಲ!

ಅಂತೂ, ನಲವತ್ತು ದಿನಗಳ ನಂತರ ಹೆಲ್ಮೆಟ್ ಹಾಕಿದ್ದ ಆರೋಪಿ ಹಣೆಗೆ ಕುಂಕುಮವಿಟ್ಟಿದ‌್ದನೆಂಬ ಅತಿ ಭಯಂಕರವಾದ ವರದಿಯನ್ನು ನೀಡಿದ್ದು ಬಹುಷಃ ಜಗತ್ತಿನಲ್ಲಿಯೇ ಏಕೈಕ ಸಂಸ್ಥೆ ಈ ಎಸ್ ಐಟಿ!

ವಿ.ಸೂ : ಈ ಅಭಿಪ್ರಾಯ ವೈಯುಕ್ತಿಕವಾಗಿರುತ್ತದೆ.

– ಪೃಥ ಅಗ್ನಿಹೋತ್ರಿ

Tags

Related Articles

Close