ಪ್ರಚಲಿತ

ಮತಾಂಧನಿಂದ ಮತ್ತೆ ಹಿಂದೂ ದೇವ ದೇವತೆಗಳ ಬಗ್ಗೆ ಅಶ್ಲೀಲ ನಿಂದನೆ?! (ಹದಿನೆಂಟು ವರ್ಷ ಮೇಲ್ಪಟ್ಟವರು ಮಾತ್ರ ಓದಬೇಕಾಗಿ ವಿನಂತಿ)!

ಮುಸ್ಲಿಂ ಮತಾಂಧರ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಹಿಂದೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರನ್ನು ತುಚ್ಛವಾಗಿ ನಿಂದಿಸಿದ್ದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಸಾಕಷ್ಟು ಪ್ರತಿಭಟನೆ ನಡೆದಿತ್ತು. ಆದರೆ ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದ್ದು, ಮತಾಂಧನೋರ್ವ ಹಿಂದೂ ದೇವರನ್ನು ಅಶ್ಲೀಲವಾಗಿ ನಿಂದಿಸಿ ಹಿಂದೂಗಳ ಆಕ್ರೋಶಕ್ಕೆ ತುತ್ತಾಗಿದ್ದಾನೆ.

ಈ ಮುಂಚೆ ಜಬ್ಬಾರ್ ಬಿ.ಸಿ.ರೋಡು ಎಂಬ ಹೆಸರಿನ ವ್ಯಕ್ತಿಯ ಫೇಸ್‍ಬುಕ್ ಖಾತೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮತ್ತು ಸೀತಾಮಾತೆಯನ್ನು ತುಚ್ಛವಾಗಿ ಅಶ್ಲೀಲವಾಗಿ ನಿಂದಿಸಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಕೊನೆಗೂ ಪ್ರಕರಣದ ಸೂತ್ರಧಾರರಾದ ಡರ್ವೀಜ್ ಮೊಹಿದೀನ್ ಹಾಗೂ ಶಫಿ ಬಿ.ಎಂ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ಘಟನೆ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಮತಾಂಧ ವ್ಯಕ್ತಿ ಹಿಂದೂ ದೈವ ದೇವರುಗಳನ್ನು ಅತ್ಯಂತ ಕೀಳುಮಟ್ಟದಲ್ಲಿ, ಅಶ್ಲೀಲವಾಗಿ ನಿಂದಿಸಿ ಸಮಸ್ತ ಹಿಂದೂಗಳ ಆಕ್ರೋಶಕ್ಕೆ ತುತ್ತಾಗಿದ್ದಾನೆ.

`ಜಬ್ಬಾರ್ ಮಂಗಳೂರು’ ಎನ್ನುವ ಫೇಸ್‍ಬುಕ್ ಖಾತೆಯಲ್ಲಿ ಹಿಂದೂ ದೇವರುಗಳಾದ ಕಟೀಲು ದುರ್ಗಾಪರಮೇಶ್ವರಿ, ನಾಡ ದೇವತೆ ಚಾಮುಂಡೇಶ್ವರಿ, ಮಾತೆ
ಸೀತಾದೇವಿ, ತುಳುನಾಡಿನ ಆರಾಧ್ಯ ದೈವ ಕೊರಗಜ್ಜ ಸ್ವಾಮಿ, ದ್ರೌಪದಿ, ಪಾರ್ವತಿ, ಗಣಪತಿ, ಇತ್ಯಾದಿ ದೇವರುಗಳನ್ನು ಅತ್ಯಂತ ತುಚ್ಛವಾಗಿ ನಿಂದಿಸಿದ್ದಾನೆ.
ಕಮೆಂಟ್ ಹಾಕುವ ಭರದಲ್ಲಿ ಜಬ್ಬಾರ್ ಮಂಗಳೂರು ಎಂಬ ವ್ಯಕ್ತಿ ಅತ್ಯಂತ ಕೆಟ್ಟ ಪದಗಳನ್ನು ಬಳಸಿದ್ದಾನೆ. ಈತನ ಬರಹದ ಸ್ಕ್ರೀನ್‍ಶಾಟ್ ಹಾಗೂ ಪ್ರೊಫೈಲ್ ಲಿಂಕ್ ಕೂಡಾ ಲಭ್ಯವಾಗಿದೆ. ಆದರೆ ಈಗ ಬರುವ ಮಾಹಿತಿ ಪ್ರಕಾರ ಜಬ್ಬಾರ್ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. (ಈತನ ಫೇಸ್‍ಬುಕ್ ಲಿಂಕ್- https://www.facebook.com/profile.php?id=100015406929001 )

ಮುಂಚಿನ ಘಟನೆಯಲ್ಲಿ ಕಟೀಲು ದುರ್ಗಾದೇವಿಯನ್ನು ನಿಂದಿಸಿದ ಬಗ್ಗೆ ದೇವಳದ ಆಡಳಿತ ಮೊಕ್ತೇಸರರು ದೂರು ಪೊಲೀಸರಿಗೆ ನೀಡಿದ್ದರು. ಅಲ್ಲದೆ ಪೊಲೀಸರು ಕೂಡಾ ಸ್ವತಃ ಕೇಸು ದಾಖಲಿಸಿಕೊಂಡಿದ್ದರು. ಡರ್ವೀಜ್ ಮೊಹಿದೀನ್ ಎಂಬಾತ ಜಬ್ಬಾರ್ ಬಿ.ಸಿ.ರೋಡು ಎಂಬ ನಕಲಿ ಹೆಸರಿನಿಂದ ದೇವಿಯ ನಿಂದನೆ ಮಾಡಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆತನ ಯುಆರ್‍ಎಲ್ ಲಿಂಕ್ ಪಡೆದು ಫೇಸ್‍ಬುಕ್ ಜೊತೆ ಮಾಹಿತಿ ಪಡೆದುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತಲ್ಲದೆ, ದೇವಸ್ಥಾನದ ಅಸ್ರಣ್ಣ ಅವರು ಸಾರ್ವಜನಿಕವಾಗಿಯೇ ಕಣ್ಣೀರು ಸುರಿಸಿದ್ದರು. ಹಿಂದೂಗಳ ಭಾವನೆಯನ್ನೇ ಕದಡಿದ್ದ ಘಟನೆ ಇದ್ದಾಗಿತ್ತು. ಆದರೆ ಈ ಘಟನೆ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಇಂಥದ್ದೇ ಘಟನೆ ನಡೆದಿರುವುದು ಹಿಂದೂಗಳಲ್ಲಿ ದಿಗ್ಭ್ರಮೆ ಮೂಡಿಸಿದೆ. ಈಗಾಗಲೇ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯನ್ನು ಬಂಧಿಸುವಂತೆ ಒತ್ತಾಯ ಕೇಳಿಬಂದಿದೆ.

ಜಬ್ಬಾರ್ ಮಂಗಳೂರು ತನ್ನ ಖಾತೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಾಗಿ ವಿವರಿಸಿದ್ದು, ಕತ್ರಿಗುಪ್ಪೆಯ ಆರ್‍ವಿವಿ ಕಾಲೇಜಿನಲ್ಲಿ ಕಲಿತಿರುವುದಾಗಿ ವಿವರಿಸಿದ್ದಾನೆ. ಸದ್ಯ ಈ ವ್ಯಕ್ತಿ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದಾನೆ.

ಕಳೆದವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮೆಕ್ಕಾ ಮಸೀದಿಯನ್ನು ಅವಹೇಳನ ಮಾಡಿದ್ದಾನೆಂದು ವ್ಯಕ್ತಿಯೋರ್ವನನ್ನು ಬಂಧಿಸುವಂತೆ ಮುಸ್ಲಿಮರೆಲ್ಲರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯ ತೀವ್ರತೆಯನ್ನು ತಾಳಲಾರದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದರು. ಆದರೆ ಇದೀಗ ಇಂಥದ್ದೇ ಮಗದೊಂದು ಘಟನೆ ನಡೆದಿರುವುದರಿಂದ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವಂತೆ ಒತ್ತಾಯ ಕೇಳಿಬಂದಿದೆ. ಪ್ರಕರಣವನ್ನು ಮಂಗಳೂರು ಕಮೀಷನರ್ ಗಂಭೀರವಾಗಿ ಪರಿಗಣಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಜಾಲತಾಣಗಳಲ್ಲಿ ನಿಲ್ಲದ ಚಾಳಿ!!

ಜಾಲತಾಣಗಳಲ್ಲಿ ಹಿಂದೂಗಳ ದೈವದೇವರನ್ನು ನಿಂದಿಸುವ, ರಾಜ್ಯದಲ್ಲಿ ಕೋಮುಗಲಭೆಗೆ ಪ್ರೇರೇಪಣೆ ನೀಡುವ ಅನೇಕ ಫೇಸ್‍ಬುಕ್ ಪೇಜ್, ಗ್ರೂಪ್‍ಗಳಿವೆ. ಈ
ಪೇಜ್‍ಗಳ ಅಡ್ಮಿನ್‍ಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕೆಂಬ ಒತ್ತಾಯ ಆರಂಭದಿಂದಲೂ ಕೇಳಿಬಂದಿತ್ತು. ಆದರೆ ರಾಜ್ಯದ ಸೈಬರ್ ಸೆಲ್ ಅತ್ಯಂತ
ದುರ್ಬಲವಾಗಿರುವುದರಿಂದ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ. ಉದಾಹರಣೆಗೆ `ಮಂಗಳೂರು ಮುಸ್ಲಿಂ’ ಎನ್ನುವ ಪೇಜ್‍ನಲ್ಲಿ ಸಾಕಷ್ಟು ಕೋಮುಗಲಭೆಗೆ ದುಷ್ಪ್ರೇರಣೆ ನೀಡುವಂತಹಾ ಘಟನೆಗಳೂ ನಡೆದಿದ್ದರೂ ಪೊಲೀಸರಿಗೆ ಇದುವರೆಗೂ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇದರ ಜೊತೆಗೆ ದೇಶದಲ್ಲಿ ಸಾಕಷ್ಟು ಸೈಬರ್‍ಕ್ರೈಂ, ಸೈಬರ್ ವಂಚನೆ ಪ್ರಕರಣಗಳು ದಾಖಲಾಗುತ್ತಲೇ ಇದೆ. ಆದರೂ ಪೊಲೀಸ್ ಇಲಾಖೆಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುವುದಿಲ್ಲ ಎಂದರೆ ಪೊಲೀಸರ ದೌರ್ಬಲ್ಯಕ್ಕೆ ಸಾಕ್ಷಿ ಒದಗಿಸಿದೆ. ಖಾಸಗಿ ಎಥಿಕಲ್ ಹ್ಯಾಕರ್ ಪ್ರಕಾರ ಈ ರೀತಿ ದುಷ್ಕøತ್ಯಗಳನ್ನು ಮೆರೆಯುವ ದುಷ್ಕರ್ಮಿಗಳ ಯುಆರ್‍ಎಲ್ ಅಡ್ರೆಸ್ ಪಡೆದು ಬಂಧಿಸುವುದು ಸುಲಭವಿದ್ದರೂ ಪೊಲೀಸರಿಗೆ ಅದು ಸಾಧ್ಯವಾಗುತ್ತಿಲ್ಲ ಎಂದರೆ ಅತ್ಯಂತ ನಾಚಿಕೆಗೇಡು ಎಂದು ಬಣ್ಣಿಸಿದ್ದಾರೆ.

ಒಟ್ಟಾರೆ ಹಿಂದೂಗಳ ದೇವರನ್ನು ನಿಂದಿಸುವ ಮೂಲಕ ಹಿಂದೂಗಳ ಆಕ್ರೋಶಕ್ಕೆ ಮತಾಂಧ ಮುಸ್ಲಿಮನೋರ್ವ ತುತ್ತಾಗಿದ್ದಾನೆ. ಈ ಬಗ್ಗೆ ಹಿಂದೂಗಳು ಮತ್ತೊಮ್ಮೆ ತೀವ್ರವಾದ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಒಟ್ಟಾರೆ ಮುಂದೆ ಈ ಪ್ರಕರಣ ತೀವ್ರಸ್ವರೂಪ ಪಡೆಯುವ ಲಕ್ಷಣ ಗೋಚರಿಸುತ್ತಿದೆ..

-ಚೇಕಿತಾನ

Tags

Related Articles

Close