ಪ್ರಚಲಿತ

ಮತ್ತೆ ಶುರುವಾದ ಟ್ವೀಟ್ ವಾರ್! ಟ್ವಿಟ್ಟರ್ ನಲ್ಲಿ ಸ್ಮೃತಿ ಇರಾನಿ ಪದ್ಮಾವತಿಯ ಹುಚ್ಚು ಬಿಡಿಸಿದ್ದು ಹೇಗೆ ಗೊತ್ತೇ?!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯ ಜನಪ್ರಿಯತೆ ಸಂಬಂಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನದ ನೇತೃತ್ವ ವಹಿಸಿಕೊಂಡಿರುವ ನಟಿ ರಮ್ಯಾ ನಡುವಿನ ಟ್ವೀಟ್ ವಾರ್ ಇದೀಗ ವೈರಲ್ ಆಗಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇನ್ನೇನು ಕೆಲವೇ ದಿನಗಳಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆ ಎಂಬ ಸುದ್ದಿ ಕೂಡಾ ಕೇಳಿ ಬರುತ್ತಿದೆ..!!! ಅದಕ್ಕೆ
ಪೂರಕವಾಗಿ ಮೈಕ್ರೋಬ್ಲಾಂಗಿಂಗ್ ಜಾಲತಾಣ ಟ್ವೀಟರ್‍ನಲ್ಲಿರುವ @OfficeOfRG ಅವರ ಖಾತೆ ದೇಶದ ಮತ್ತು ಜಗತ್ತಿನ ವಿದ್ಯಾಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಪರಿಯ ಬಗ್ಗೆ ಅನುಮಾನಗಳು ಎದ್ದಿವೆ.!! ಕನ್ನಡ ಚಿತ್ರ ನಟಿ ರಮ್ಯಾ ದಿವ್ಯ ಸ್ಪಂದನ ಪಕ್ಷದ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆಯಾದ ಬಳಿಕ ರಾಹುಲ್ ಗಾಂಧಿಯ ಟ್ವಿಟರ್ ಖಾತೆಯಲ್ಲಿ ಕೇಂದ್ರ ಸರಕಾರ ಮತ್ತು ಜಗತ್ತಿನ ಪ್ರಮುಖ ವಿದ್ಯಾಮಾನಗಳ ಬಗ್ಗೆ ಪ್ರಬಲವಾಗಿಯೇ ಟೇಕೆ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.!!!

ಅದಕ್ಕೆ ಪೂರಕವಾಗಿ ಅಗಸ್ಟ್ 15 ರಂದು ರಾಹುಲ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಅಧ್ಯಕ್ಷ ಡೋನಾಡ್ಡ್ ಟ್ರಂಪ್‍ರ ಟ್ವೀಟ್ ಒಂದನ್ನು ರೀ ಟ್ವೀಟ್
ಮಾಡಲಾಗಿತ್ತು. ಮೋದಿ ಅವರೇ ತ್ವರಿತರಾಗಿ ಅಧ್ಯಕ್ಷ ಟ್ರಂಪ್ ಇನ್ನೊಂದು ಅಪ್ಪುಗೆ ಬಯಸಿದ್ದಾರೆ ಎಂದು ಬರೆದುಕೊಳ್ಳಲಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.!!! ಕೆಲವೇ ಸೆಕೆಂಡುಗಳಲ್ಲಿ ಅದು 20 ಸಾವಿರ ಮಂದಿಯಿಂದ ರೀಟ್ವೀಟ್ ಆಗಿತ್ತು. ನಂತರ ಅದರ ಸಂಖ್ಯೆ 30 ಸಾವಿರಕ್ಕೆ ಏರಿಕೆಯಾಗಿತ್ತು.

ರಾಹುಲ್ ಗಾಂಧಿ ಹಿಂಬಾಲಕರ ಪಟ್ಟಿಯಲ್ಲಿ ರಷ್ಯಾ, ಕಜಕಿಸ್ತಾನ ಮತ್ತು ಇಂಡೋನೇಷ್ಯಾದ ಹೆಸರುಗಳಿಗೆ ಸಾಮ್ಯವಾದ ಒಂದಿಷ್ಟು ಹೆಸರುಗಳು ಕಂಡು ಬರುತ್ತಿವೆ. ಅವರ ವಿವರವೂ ಆಯಾ ದೇಶಗಳ ಪ್ರಜೆ ಎನ್ನುವಂತೆ ಇವೆ. ಅದರಲ್ಲೂ ರೀ ಟ್ವೀಟ್ ಮಾಡುವಷ್ಟರ ಮಟ್ಟಿಗೆ ಏಕಾಏಕಿ ಹಿಂಬಾಲಕರು ಸಾಧ್ಯವೇ? ಇವರೆಲ್ಲಾ ನಿಜವಾಗಿಯೂ ಖಾತೆದಾರರೇ ಅಥವಾ ನಕಲು ಖಾತೆಗಳನ್ನು ಸೃಷ್ಠಿಸಲಾಗಗಿದೆಯೇ ಎನ್ನುವುದು ಅನುಮಾನಗಳಿಗೆ ಕಾರಣವಾಗಿದೆ.

ರಾಹುಲ್ ಗಾಂಧಿಯ ಟ್ವಿಟರ್ ಜನಪ್ರಿಯತೆಗೆ ರಷ್ಯಾ ಮೂಲದ ಸಂಸ್ಥೆ ಕಾರಣ ಎಂದು ಸ್ಮೃತಿ ಇರಾನಿ ಆರೋಪಿಸಿದ್ದು, ರಷ್ಯಾ ಮೂಲದ ಬಾಟ್ ಮೂಲಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿದ್ದು ರಾಹುಲ್ ಗಾಂಧಿಯವರ ಪ್ರತಿಯೊಂದು ಟ್ವಿಟ್‍ಗಳನ್ನು ರಷ್ಯಾ ಮೂಲದ ಸಂಸ್ಥೆ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಕೆಲ ಪುರಾವೆಗಳನ್ನು ಹಾಗೂ ಕೆಲ ಪತ್ರಕರ್ತರು ಹಂಚಿಕೊಂಡಿರುವ ದಾಖಲೆಗಳನ್ನು ಸಾಕ್ಷಿಯಾಗಿ ಸ್ಮೃತಿ ನೀಡಿದ್ದಾರೆ.

ಟ್ವಿಟರ್ ಬಾಟ್ ಸಂಸ್ಥೆ ಒಂದು ತಂತ್ರಾಂಶವಾಗಿದ್ದು, ಟ್ವಿಟರ್ ಎಪಿಐ (ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್‍ಫೇಸ್) ಮೂಲಕ ಖಾತೆಯನ್ನು ನಿಯಂತ್ರಿಸುತ್ತದೆ. ಇದರ ಮೂಲಕ ಖಾತೆಗೆ ಬರುವ ಟ್ವೀಟ್‍ಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಟ್ವೀಟ್ ಮಾಡುವುದು ಟ್ವೀಟ್‍ಗಳಿಗೆ ಪ್ರತಿಕ್ರಿಯೆ ನೀಡುವುದು, ಟ್ವೀಟ್ ಖಾತೆಯನ್ನು ನಕಲಿ ಖಾತೆಗಳ ಮೂಲಕ ಹಿಂಬಾಲಿಸುವುದರ ಮೂಲಕ ಹಿಂಬಾಲಿಸುವುದು ಇಂತಹ ಕಾರ್ಯಗಳನ್ನು ಮಾಡುತ್ತದೆ ಎಂದು ಸ್ಮೃತಿ ಇರಾನಿ ಸ್ಪಷ್ಟಪಡಿಸಿದ್ದಾರೆ.

ಬಾಟ್ ಎಂದರೇನು?

ರೋಬಾಟ್ ಎಂಬ ಪದದಿಂದ ಬಂದಿರುವುದೇ ಬಾಟ್. ಮನುಷ್ಯರಿಗಿಂತಲೂ ವೇಗವಾಗಿ ಬಾಟ್‍ಗಳು ತಮಗೆ ವಹಿಸಿದ ಕೆಲಸ ಮಾಡುತ್ತದೆ. ರಾಹುಲ್ ತಮ್ಮ ಟ್ವಿಟರ್ ಹ್ಯಾಂಡಲ್‍ಗಳನ್ನು ಇಂತಹ ಬಾಟ್‍ಗಳಿಗೆ ಲಗತ್ತಿಸಿದ್ದಾರೆ!! ಜಗತ್ತಿನ ಯಾವ ಭಾಗದಲ್ಲಿ ರಾಹುಲ್ ಗಾಂಧಿ ಕುರಿತು ಟ್ವೀಟ್ ಪ್ರಕಟವಾಗುತ್ತಲೇ ಜಾಗೃತವಾಗುವ ಇವು ಅದನ್ನು ನಿರಂತರವಾಗಿ ಮರುಟ್ವೀಟ್ ಮಾಡುತ್ತವೆ. ಇತ್ತೀಚೆಗೆ ಪಾಕಿಸ್ತಾನ ತನ್ನ ಹಾದಿಗೆ ಮರಳುತ್ತಿದೆ, ನಮ್ಮೊಂದಿಗಿನ ಅದರ ಸಂಬಂಧ ಸುಧಾರಣೆ ಪ್ರತಿಕ್ರಿಯೆಯ ಒಂದು ಭಾಗ ಇದು ಎಂದು ಅಮೇರಿಕಾ ಕೂಡಾ ಸ್ಪಷ್ಟ ಪಡಿಸಿತ್ತು.

ಅಂತೆಯೇ ಸ್ಮೃತಿ ಇರಾನಿ ಅವರ ಟ್ವೀಟ್‍ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ರಾಹುಲ್ ಗಾಂಧಿ ಟ್ವೀಟರ್‍ಗೆ ಬಂದಿರುವ ಸುಮಾರು 54 ಸಾವಿರ
ಪ್ರತಿಕ್ರಿಯೆಗಳಲ್ಲಿ ಪತ್ರಕರ್ತೆಯ ಟ್ವೀಟ್‍ಗಳನ್ನು ಮಾತ್ರ ಸ್ಮೃತಿ ಹೆಕ್ಕಿ ತೆಗೆದಿದ್ದಾರೋ ಎಂದು ತಿಳಿಯುತ್ತಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಜೊತೆ ವಾಗ್ವಾದ ನಡೆಸಿದಾರೆ. ಸ್ಮೃತಿ ಇರಾನಿ ಮತ್ತು ರಮ್ಯಾ ಟ್ವೀಟ್ ವಾರ್ ಇಲ್ಲಿದೆ..

ಈ ಆರೋಪಕ್ಕೆ ಬೆಂಬಲ ನೀಡುತ್ತಿರುವ ಮತ್ತೋರ್ವ ಕೇಂದ್ರ ಸಚಿವ ರಾಜ್ಯವರ್ದನ್ ಸಿಂಗ್ ರಾಥೋಡ್ ಅವರು ಕ್ರೀಡೆಯಲ್ಲಿ ಇಂತಹ ಕಾರ್ಯಗಳನ್ನು ಡೋಪಿಂಗ್ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಮುಖಂಡರು ಮಾಡಿರುವ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಅಲ್ಲಗಳೆದಿದ್ದು ಈ ಬಗ್ಗೆ ಟ್ವಿಟರ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನದ ನೇತೃತ್ವ ವಹಿಸಿಕೊಂಡಿರುವ ನಟಿ ರಮ್ಯಾ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಟ್ವಿಟರ್ ಖಾತೆಯನ್ನು ತಂತ್ರಾಂಶಗಳ ಮೂಲಕ ನಿಯಂತ್ರಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿ ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಮತ್ತು ಜನರ ಕಣ್ಣಿಗೆ ಮಣ್ಣೆರಚಲು ನೋಡುತ್ತಿದ್ದಾರೆ ಈ ಕಾಂಗ್ರೆಸಿಗರು….

ಪದೇ ಪದೇ ಪೇಚೆಯಲ್ಲಿ ಸಿಲುಕಿರುವ ರಾಹುಲ್ ಗಾಂಧಿ ಒಂದಲ್ಲ ಒಂದು ರೀತಿಯಲ್ಲಿ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಾರೆ… ಇಂತಹವರು ದೇಶ ಉದ್ಧಾರ ಮಾಡಲು ಹೇಗೆ ಸಾಧ್ಯವೋ ಆ ದೇವರೇ ಬಲ್ಲ.!!….ಅದು ಬೇರೆ ಇತ್ತೀಚೆಗೆ ರಾಹುಲ್ ಗಾಂಧಿ ರಮ್ಯಾಳನ್ನು ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಆಯ್ಕೆ ಮಾಡಿದ ಮೇಲಂತೂ ಪಾಪ ಆಕೆಯೂ ಯದ್ವಾ ತದ್ವಾ ಟ್ವೀಟ್ ಮಾಡುತ್ತಿದ್ದಾಳೆ… !!! ಅವಳಿಗೆ ಚಿತ್ರ ನಟಿಯಾಗಿದ್ರೇನೆ ಚೆನ್ನಾಗಿತ್ತು ಅದನ್ನು ಬಿಟ್ಟು ರಾಜಕೀಯ ಅಂತ ಅವಳನ್ನು ಮೆರೆಯೋಕೆ ಬಿಟ್ಟರೆ ಮುಂದೆ ಕಾಂಗ್ರೆಸ್‍ಗೆ ದೊಡ್ಡ ನಾಮವೇ ಬಿಡಿ!!!… ಆದರೆ ಅದನ್ನೆಲ್ಲ ಬಿಟ್ಟು ಕಾಂಗ್ರೆಸ್ ಪಕ್ಷ ರೋಬೋಟ್ ನಂತಹ ಬಾಟ್‍ಗಳನ್ನು ಟ್ವೀಟ್ ಮಾಡಲು ಬಳಸುತ್ತಿದೆ ಎಂದರೆ ಕೇಳೋಕೆನೇ ನಾಚಿಕೆಯಾಗುತ್ತೆ….!! ಇಂತಹವರು ದೇಶವನ್ನಾಳುತ್ತಾರೆಯೇ ?

Source :https://m.dailyhunt.in/news/india/kannada/kannada+prabha-epaper-kprabha/raahul+tvitar+janapriyate+vairal+aaytu+kendra+sachive+smruti+iraani+ramya+tvit+vaar-newsid-75124058?ss=pd&s=a

-ಶೃಜನ್ಯಾ

Tags

Related Articles

Close