ಪ್ರಚಲಿತ

ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿದ ಪಾಕ್ ಮಾಡಿದ್ದೇನು ಗೊತ್ತೇ??!

ಪಾಕಿಸ್ತಾನ ಇತ್ತೀಚೆಗಷ್ಟೇ ಭಾರತವನ್ನು ತೆಗಳುವ ಮೂಲಕ ತಾನೇ ಫಜೀತಿಗೆ ಸಿಕ್ಕಿ ಹಾಕಿರುವ ವಿಚಾರ ಎಲ್ಲರಿಗೂ ತಿಳಿದಿದೆ!!! ಆದರೆ ಇದೀಗ, ಪಾಕಿಸ್ತಾನ ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಗುರಿಯಾಗಿರುವ ವಿಚಾರ ಇದೀಗ ವೈರಲ್ ಆಗಿದೆ!!

ಹೌದು… ಪದೇ ಪದೇ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿರುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ!! ಯಾಕೆಂದರೆ, ಪಾಕಿಸ್ತಾನ ಸರಕಾರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇಶದ ಪಾರಂಪರೆಯ ತಾಣಗಳ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಮಸೀದಿಯನ್ನು ಪ್ರಕಟಿಸಿ ಎಡವಟ್ಟು ಮಾಡಿಕೊಂಡಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ತನ್ನ ಮಾನವನ್ನು ತಾನೇ ಹರಾಜು ಮಾಡಿದ್ದು ಇದೀಗ ಹಾಸ್ಯಕ್ಕೆ ಗುರಿಯಾಗಿದ್ದಾರೆ!!!

ವಿಪರ್ಯಾಸ ಎಂದರೆ, ತಮ್ಮ ದೇಶದ ಪಾರಂಪರೆಯ ತಾಣಗಳ ವಿಡಿಯೋ ಒಂದರಲ್ಲಿ ಅಫ್ಘಾನಿಸ್ತಾನದ ಮಸೀದಿಯನ್ನು ಪ್ರಕಟಿಸಿದ್ದು, ಇದನ್ನು ಪಾಕ್ ಸರಕಾರದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಒಂದು ವಿಡಿಯೋ ಅಪೆÇ್ಲೀಡ್ ಮಾಡಿದ್ದರು!! ಈ ಪಾರಂಪರೆಯ ತಾಣಗಳನ್ನು ವಿವರಿಸುವ ವಿಡಿಯೋದಲ್ಲಿ ದೇಶದ ನಾಗರಿಕತೆ, ಪರಂಪರೆ, ಸಂಸ್ಕೃತಿಯನ್ನು ತೋರಿಸುವ ಸುಂದರ ದೃಶ್ಯಗಳು ಎನ್ನುವ ಶೀರ್ಷಿಕೆಯನ್ನು ಹಾಕಿತ್ತು. ಆದರೆ ಈ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಪ್ರಸಿದ್ಧ ಹಜರ್ ಅಲಿ ಮಸೀದಿಯ ಫೋಟೋವನ್ನು ತೋರಿಸಿದ್ದು, ಈ ಫೋಟೋ ನೋಡಿದ ಜನರು ಪಾಕ್ ಸರಕಾರದ ಎಡವಟ್ಟನ್ನು ತೋರಿಸಿದ ಕೂಡಲೇ ಈ ವಿಡಿಯೋ ಖಾತೆಯಿಂದ ಈಗ ಡಿಲೀಟ್ ಮಾಡಿದ್ದಾರೆ!!

ಆದರೆ ಪಾಕ್ ಮಾಡಿದ ಎಡವಟ್ಟು ಇದೇನೂ ಹೊಸದಲ್ಲ!! ಯಾಕೆಂದರೆ, ಇತ್ತೀಚೆಗಷ್ಟೇ ವಿಶ್ವಸಂಸ್ಥೆಯಲ್ಲಿ ವಿವಿಧ ದೇಶಗಳ ಗಣ್ಯರ ಮುಂದೆ ನಮ್ಮ ಭಾರತ ದೇಶಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಮಾಡಿದ್ದರು. ಅಲ್ಲದೇ, ತನ್ನ ನರಿ ಬುದ್ದಿ ತೋರಿಸಲು ಹೋಗಿ ತಾವೇ.. ತೀವ್ರ ಮುಖಭಂಗಕ್ಕೀಡಾಗಿರುವ ಘಟನೆ ನಡೆದಿದೆ. ವಿಶ್ವಸಂಸ್ಥೆಯ 72 ನೇ ಮಹಾ ಅಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದರಲ್ಲದೇ, ಪಾಕ್ ಭಯೋತ್ಪಾದನೆಯ ರಫ್ತು ದೇಶವಾಗಿದೆ ಎಂದು ಕಟು ಶಬ್ಧಗಳಲ್ಲಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪ್ರತಿನಿಧಿ ಮಾಲಿಹಾ ಲೋಧಿ, ಭಾರತ ದಕ್ಷಿಣ ಏಷ್ಯಾದ ಭಯೋತ್ಪಾದನೆಯ ತಾಯಿಯಾಗಿದೆ ಎಂದು ಆರೋಪಿಸಿದ್ದು, ಭಾರತವನ್ನು ಟೀಕಿಸಲು ಮುಂದಾಗಿದ್ದ ವಿಚಾರ ಈಗಾಗಲೇ ಗೊತ್ತಿದೆ!!

ಅಷ್ಟೇ ಅಲ್ಲದೇ, ಪಾಕಿಸ್ತಾನದ ಪ್ರತಿನಿಧಿ ಮಲೀನಾ ಲೋಧಿ, 2014ರಲ್ಲಿ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯ ವೇಳೆ ಪೆಲೆಟ್ ಗನ್‍ನಿಂದ ಗಾಯಗೊಂಡಿದ್ದ ಯುವತಿ ಫೋಟೋವನ್ನು ತೋರಿಸಿ, ಇದು ಭಾರತವು ಕಾಶ್ಮೀರಿಗಳ ಮೇಲೆ ತೋರುತ್ತಿರುವ ದೌರ್ಜನ್ಯ ಎಂದು ಹೇಳಿದ್ದರು!! ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿತ್ತು. ಗಾಜಾ ಯುದ್ಧದ ಸಂದರ್ಭದಲ್ಲಿ ದಾವಿ ಅಬು ಜೊಮ್(17) ಯುವತಿ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಇದರಿಂದ, ಪಾಕಿಸ್ತಾನ ತೀವ್ರ ಮುಜುಗರಕ್ಕೀಡಾಗಿದ್ದು ತನ್ನ ಕುತಂತ್ರ ಬುದ್ದಿಯನ್ನು ವಿಶ್ವದೆಲ್ಲೆಡೆ ತೋರಿಸಿದ್ದಂತೂ ನಿಜ!!

ಭಾರತದ ಮುಕುಟವನ್ನು ಕದಿಯಲು ಯತ್ನಿಸುತ್ತಿರುವ ಕಳ್ಳರು ಇದೀಗ ಅಫ್ಘಾನಿಸ್ತಾನದ ಪ್ರಸಿದ್ಧ ಹಜರ್ ಅಲಿ ಮಸೀದಿಯ ಫೋಟೋವನ್ನು ಕದ್ದು ತೀವ್ರ
ಮುಜುಗರಕ್ಕೆ ಈಡಾಗಿದ್ದು ವಿಶ್ವದೆಲ್ಲೆಡೆ ತನ್ನ ಮಾನವನ್ನು ತಾನೇ ತೆಗೆಯುತ್ತಿದೆ. ಯಾಕೆಂದರೆ ಒಂದಲ್ಲ ಒಂದು ಕಾರಣದಿಂದ ಪ್ರತಿ ಭಾರಿ ಸುದ್ದಿ ಮಾಡುತ್ತಿರುವ
ಪಾಕಿಸ್ತಾನ ಇತ್ತೀಚೆಗೆಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್, ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದರು!! ಅಷ್ಟೇ ಅಲ್ಲದೇ, ಭಾರತದ ಟೀಕೆಗಳಿಗೆ ಉತ್ತರಿಸುವ ಬರದಲ್ಲಿ ಪಾಕ್ ಸಚಿವ ಆಸಿಫ್ ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಹೇಳಿ ಉದ್ದಟತನವನ್ನು ಮೆರೆದಿದ್ದಾರೆ. ಗುಜರಾತ್ ನಲ್ಲಿ ನಡೆದ ಮುಸ್ಲಿಮರ ಹತ್ಯೆಯ ರಕ್ತದ ಕಲೆಗಳು ಮೋದಿಯವರ ಕೈ ಮೆತ್ತಿಕೊಂಡಿವೆ. ಭಾರತವನ್ನು ಆರ್.ಎಸ್.ಎಸ್ ಎಂಬ ಭಯೋತ್ಪಾದಕ ಪಕ್ಷವು ಮುನ್ನಡೆಸುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ!!

ಹೀಗೆ ಪ್ರತೀ ಬಾರಿಯೂ ಭಾರತವನ್ನು ತೆಗಳುತ್ತಾ ಮಸಿ ಬಳಿಯಲು ಯತ್ನಿಸುತ್ತಿರುವ ಪಾಕಿಸ್ತಾನವು ಇದೀಗ ತಾವೇ ತನ್ನ ಮಾನವನ್ನು ಹರಾಜು ಹಾಕಿರುವುದು
ವಿಪರ್ಯಾಸ!! ತನ್ನ ದೇಶದಲ್ಲಿ ಯಾವೆಲ್ಲಾ ಮಸೀದಿಗಳಿವೆ, ಯಾವೆಲ್ಲಾ ಸುಂದರ ತಾಣಗಳಿವೆ ಎನ್ನುವುದನ್ನೇ ತಿಳಿಯದ ವ್ಯಕ್ತಿಗಳು ಭಾರತದ ಬಗ್ಗೆ ಮಾತಾನಾಡುವ ಯಾವುದೇ ನೈತಿಕ ಹಕ್ಕನ್ನು ಹೊಂದಿಲ್ಲ ಈ ಪಾಕಿಸ್ತಾನಿಯರು!!

ಮೂಲ:http://publictv.in/pakistan-fails-again-uses-wrong-picture-to-promote-tourism/

– ಅಲೋಖಾ

 

Tags

Related Articles

Close