ಸಂಸತ್ತಿನಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ಮಾತಾಡಿ ತಮ್ಮ ಭಾಷಾಪ್ರೇಮವನ್ನು ತೋರಿ ಇತಿಹಾಸ ಸೃಷ್ಟಿಸಿದ ಹೆಮ್ಮೆಯ ಕನ್ನಡಿಗ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ರು. ‘ಮದಿರೆ ಮತ್ತು ಮಾನಿನಿ’ ನನ್ನ ಸಂಗಾತಿಗಳು , ಮದಿರೆ ಮತ್ತು ಮಾನಿನಿ ನನ್ನ ದೌರ್ಬಲ್ಯ ಎಂದು ಧೈರ್ಯವಾಗಿ ಹೇಳಿದ ವ್ಯಕ್ತಿ ಪಟೇಲರು. ಮಾಡುವುದು, ಮಾಡುವುದನ್ನೇ ಹೇಳುವುದು ಈ ಮಾತಿಗೆ ಯಾರನ್ನಾದರೂ ಹೆಸರಿಸುವುದಿದ್ದರೆ ಪಟೇಲ್ ಅವರನ್ನು ಮಾತ್ರ. ಈ ರಾಜ್ಯ ಕಂಡ ಬುದ್ಧಿವಂತ ಮುಖ್ಯಮಂತ್ರಿಗಳಲ್ಲಿ ಜೆ.ಎಚ್.ಪಟೇಲ್ ಕೂಡಾ ಒಬ್ಬರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂತಹ ಜೆ.ಎಚ್. ಪಟೇಲ್ ರನ್ನು ಮಾಜಿ ಪ್ರಧಾನಿ ದೇವೇಗೌಡರು ತುಳಿಯಲು ಪ್ರಯತ್ನಿಸಿದ್ದರು ಎಂಬುದು ಬಹತೇಕರಿಗೆ ಗೊತ್ತಿಲ್ಲ.
ಜೆ.ಹೆಚ್. ಪಟೇಲ್‌ರು ಬಡತನದ ಕುಟುಂಬದಿಂದ ಬಂದವರಲ್ಲ. ಇವರ ತಂದೆಯವರಾದ ಹಾಲಪ್ಪ ಪಟೇಲರು ತುಂಬಾ ಸಿರಿವನಮತರು. ಹಾಲಪ್ಪ ಪಟೇಲರು ಹಿಂದಿನ ಮೈಸೂರು ಸಂಸ್ಥಾನದಲ್ಲಿ ಚನ್ನ್ನಗಿರಿ ಕ್ಷೇತ್ರವನ್ನ್ನು ಪ್ರತಿನಿಧಿಸಿದ್ದರು. ಮೈಸೂರಿನ ಸಂಸ್ಥಾನವನ್ನು ಪ್ರತಿನಿಧಿಸಿದ್ದವರ ಮಗನೆಂದರೆ ತುಂಬಾ ಸಿರಿವಂತರ ಮಗ.
ಶಿವಮೊಗ್ಗ ಜಿಲ್ಲೆಯ ಎರಡು ಅತಿದೊಡ್ಡ ಶ್ರೀಮಂತ ಕುಟುಂಬಗಳ ಪೈಕಿ ಜೆ.ಎಚ್. ಪಟೇಲರ ಕುಟುಂಬವೂ ಒಂದು. ಇಷ್ಟೆಲ್ಲಾ ಶ್ರೀಮತಿಕೆ ಕುಟುಂಬದ ಹಿನ್ನಲೆಯಿದ್ದರೂ ಜೆ.ಎಚ್. ಪಟೇಲರ ಹತ್ತಿರ ಅಹಂಕಾರವಿರಲಿಲ್ಲ. ಅಷ್ಟೆಲ್ಲಾ ಶ್ರೀಮಂತರಿದ್ದು ತಮ್ಮ ಪಾಡಿಗೆ ತಾವು ಸುಖವಾಗಿರಬಹುದಾಗಿತ್ತು ಆದರೆ ಜೆ.ಎಚ್. ಪಟೇಲರು ಭಾರತದ ಸ್ವಾತಂತ್ರ್ಯಕ್ಕೆ ನಂದು ಕೊಡುಗೆ ಇರಲಿ ಅಂತ ಧುಮುಕಿ ಸಾಗರ ಕಾರಾಗೃಹದಲ್ಲಿ ಬಂಧಿತರಾಗಿದ್ದರು. ಆಗ ಅವರ ವಯಸ್ಸು ಬರೀ 17 ವರ್ಷ ಮಾತ್ರ. ಅದಾದ ನಂತರ ಜೆ.ಎಚ್.ಪಟೇಲರು ರಾಜಕೀಯಕ್ಕೆ ಧುಮುಕಿದರು.
1988ರಲ್ಲಿ ರಾಜೀವ್ ಗಾಂಧಿ ಅವರ ಸರ್ಕಾರ ಬೊಫೋರ್ಸ್ ಹಗರಣದಲ್ಲಿ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತೆ. ಆಗ ವಿ.ಪಿ.ಸಿಂಗ್ ಕಾಂಗ್ರೆಸ್ ವಿರುದ್ಧ ದೇಶದಾದ್ಯಂತ ಸ್ಪರ್ಧಿಸುತ್ತಿದ್ದ ಒಟ್ಟೂ ರಾಜಕೀಯ ಪಕ್ಷಗಳ್ನೆಲ್ಲ ಸೇರಿಸಿ ಜನತಾದಳವನ್ನ ಸ್ಥಾಪಿಸುತ್ತಾರೆ. ಇದಾದ ಒಂದೇ ವರ್ಷದಲ್ಲಿ ನಡೆದ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಬೆಂಬಲದಿಂದ ಜನತಾದಳ ಅಧಿಕಾರಕ್ಕೆ ಬರುತ್ತೆ. ಅದಾದ ನಂತರ ಕೆಲ ರಾಜಕೀಯ ಬೆಳವಣಿಗೆಗಳಾದವು. ಆಗ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ವಿರೋಧಿ ನಾಯಕರ ದೊಡ್ಡ ಪಡೆಯೇ ಹುಟ್ಟಿಕೊಂಡಿತ್ತು. ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್, ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್, ಶರದ್ ಯಾದವ್, ರಾಂ ವಿಲಾಸ್ ಪಾಸ್ವಾನ್, ಕರ್ನಾಟಕದಲ್ಲಿ ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಂ.ಪಿ.ಪ್ರಕಾಶ್, ಕೇರಳದಲ್ಲಿ ವೀರೇಂದ್ರಕುಮಾರ್ ಮೊದಲಾದ ನಾಯಕರುಗಳು ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದರು.
ಆಗ ದೇಶದೆಲ್ಲೆಡೆ ಕಾಂಗ್ರೆಸ್ ವಿರೋಧಿ ಅಲೆ ಎದ್ದಾಗ ಕರ್ನಾಟಕದಲ್ಲಿ 1994ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ ಅಧಿಕಾರಕ್ಕೆ ಬಂತು. ರಾಜ್ಯಾಧ್ಯಕ್ಷರಾಗಿದ್ದ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾದ್ರು. ಇನ್ನು 1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯ ಬಂತು. ಎನ್‌ಡಿಎ ಮೂಲಕ ಪ್ರಮಾಣ ವಚನ ಸ್ವೀಕರಿಸಿದ ಅಟಲ್ ಬಿಹಾರಿ ವಾಜಪೇಯಿ ಬಹುಮತ ಸಾಬೀತು ಮಾಡುವುದರಲ್ಲಿ ವಿಫಲರಾಗಿ ಅನಂತರ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಬೆಂಬಲದಿಂದ ಪ್ರಧಾನಿಯಾದ್ರು. ಆದ್ರೆ 1997ರಲ್ಲಿ ಕೇಂದ್ರ ಸರ್ಕಾರದ ಮೇಲೆ ಮುನಿಸಿಕೊಂಡ ಅಂದಿನ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಸೀತಾರಾಂ ಕೇಸರಿ ಬೆಂಬಲ ವಾಪಸ್ ತಗೊಂಡ್ರು. ಆನಂತರ ಐ.ಕೆ.ಗುಜ್ರಾಲ್ ಪ್ರಧಾನಿಯಾದರು. ಇದೇ ಅವಧಿಯಲ್ಲಿ ರಾಜ್ಯದಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದರು. ಆದರೆ 1999ರಲ್ಲಿ ನಡೆದ ವಿಧಾನಸಭೆ ಮುಂದಿನ ಚುನಾವಣೆಯಲ್ಲಿ ಜನತಾದಳ ಸಂಪೂರ್ಣವಾಗಿ ನೆಲ ಕಚ್ಚಿತು. ಇಷ್ಟೇ ಅಲ್ಲ. ಅಂದಿನ ಘಟಾನುಘಟಿ ನಾಯಕರು, ಸೋಲರಿಯದ ಸರದಾರರು ಅಂದುಕೊಂಡಿದ್ದವರೆಲ್ಲಾ ಸೋತು ಸುಣ್ಣವಾದರು. ಆಗ ಕೇಂದ್ರದಲ್ಲಿ ಬಿಜೆಪಿ ಬೆಂಬಲಿಸಿದ ಜಾರ್ಜ್ ಫರ್ನಾಂಡಿಸ್‌ರನ್ನ ಬೆಂಬಲಿಸೋಕೆ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸಿದ್ಧವಾದರು. ಆದರೆ ಇದಕ್ಕೆ ಎಚ್.ಡಿ.ದೇವೇಗೌಡ ಬೆಂಬಲಿಸಲಿಲ್ಲ. ಈ ಕಾರಣದಿಂದ ದೇವೇಗೌಡರು ಮತ್ತು ಜೆ.ಎಚ್.ಪಟೇಲರ ನಡುವಿನ ಭಿನ್ನಮತ ಸ್ಪೋಟವಾಯಿತು. ಹೀಗಾಗಿ ಜನತಾದಳ ರಾಜ್ಯದಲ್ಲಿ ಜನತಾದಳ (ಸಂಯುಕ್ತ) ಮತ್ತು ಜನತಾದಳ (ಜಾತ್ಯತೀತ) ಅಂತಾ ಇಭ್ಭಾಗವಾಯ್ತು.
ಇಲ್ಲಿ ಇನ್ನೊಂದು ವಿಷಯವನ್ನು ತಿಳಿಸಲೇಬೇಕು.
ನಿರೀಕ್ಷಿಸಿದ್ದಂತೆಯೇ ಜನತಾದಳ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸೂತ್ರ ಹಿಡಿಯಲು ಮುಂದಾದಾಗ ಮುಖ್ಯಮಂತ್ರಿಯಾರಾಗಬೇಕು ಎಂಬ ಗೊಂದಲವೇ ಇರಲಿಲ್ಲ. ಜೆ.ಎಚ್. ಪಟೇಲರೇ ಮುಖ್ಯಮಂತ್ರಿಯೆಂದು ರಾಮಕೃಷ್ಣ ಹೆಗಡೆಯವರೇ ನಿರ್ಧರಿಸಿದ್ದರು. ಆದರೆ ಅಲ್ಲಿ ಕಡ್ಡಿ ಆಡಿಸಲು ಮುಂದಾದವರು ಇದೇ ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು.
ದೇವೇಗೌಡರು ಹೇಗೆ ಕಡ್ಡಿ ಆಡಿಸಿದ್ದರೆಂದು ತಿಳಿಸಲೇಬೇಕು. ಜೆ.ಎಚ್. ಪಟೇಲರೇ ಮುಖ್ಯಮಂತ್ರಿಯೆಂದು ಎಲ್ಲರೂ ನಿರ್ಧರಿಸಿದ್ದರು ಆಗ ದೇವೇಗೌಡರು ತಮ್ಮ ಬುದ್ಧಿಯನ್ನು ತೋರಿಸಲು ಮುಂದಾದರು. ಕೂಡಲೇ ತಮ್ಮ ಮೂವರೂ ಮಕ್ಕಳನ್ನು ಕೂರಿಸಿಕೊಂಡು ತಂತ್ರ ರೂಪಿಸಿ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಒಕ್ಕಲಿಗರನ್ನು ಕರೆಸಿ ಜನತಾದಳದ ಕಚೇರಿಗೆ ಮುತ್ತಿಗೆ ಹಾಕುವಂತೆ ಮಾಡಿದರು. ಈ ಸಂದರ್ಭದಲ್ಲಿ ದಳದ ಕಚೇರಿಯಲ್ಲಿ ಹೆಗಡೆ, ಬೊಮ್ಮಾಯಿ, ಪಟೇಲ್, ಬಿಜು ಪಟ್ನಾಯಕ್ ಮುಂತಾದ ಮುಖಂಡರು ಗಂಭೀರ ಚರ್ಚೆಯಲ್ಲಿ ಮಗ್ನರಾಗಿದ್ದರು. ಜನ ಬಂದಿದ್ದೆ ತಡ ಕಚೇರಿ ಬಾಗಿಲಿಗೆ ಬೀಗ ಹಾಕಿದರು.ಆ ಜನ ಬರೀ ಬಾಗಿಲು ಹಾಕಿ ಸುಮ್ಮನಾಗಲಿಲ್ಲ. ಜನ ಹೆಗಡೆ ಅವರ ವಂಶಾವಳಿಯನ್ನೇ ಅವಾಚ್ಯ ಶಬ್ದಗಳಿಂದ ಜಾಲಾಡುತ್ತಿದ್ದರು. ಕೆಲವರಂತೂ ಸೌಧದ ಗುಮ್ಮಟವನ್ನೂ ಏರಿ ಕುಳಿತಿದ್ದರು! ಚಿತ್ರನಟ ಅನಂತನಾಗ್, ನಾಗೇಗೌಡ, ಸಿಂಧ್ಯ, ಎಂ.ಪಿ. ಪ್ರಕಾಶ್ ಮುಂತಾದವರು ಜನ ಸಮೂಹವನ್ನು ಸೀಳಿಕೊಂಡು ವಿಧಾನಸೌಧ ಪ್ರವೇಶಿಸಬೇಕಾದರೆ ಹರಸಾಹಸ ಮಾಡಬೇಕಾಯಿತು. ಇವರೆಲ್ಲರೂ ಜನರ ಅವಾಚ್ಯ ಶಬ್ದಗಳನ್ನು ನುಂಗಿಕೊಂಡೇ ಒಳಸೇರಿಕೊಂಡರು.
ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಬಗ್ಗೆ ನಾಯಕರಿಗೆ ಮನವರಿಕೆಯಾಗಿತ್ತು. ಜೆ.ಎಚ್. ಪಟೇಲರಂತೂ ಮುಖ್ಯಮಂತ್ರಿ ಗಾದಿ ತನಗೆ ಬೇಡವೇ ಬೇಡವೆಂದು ತಿರಸ್ಕರಿಸಿಬಿಟ್ಟರು. ಪಟೇಲ್ ಈ ನಾಡು ಕಂಡ ಅತ್ಯಂತ ಪ್ರತಿಭಾನ್ವಿತ ಹಾಗೂ ಸುಸಂಸ್ಕೃತ ರಾಜಕಾರಣಿ. ಇಂತಹ ರಾಜಕಾರಣಿಗೆ ದೇವೇಗೌಡರು ಹಿಂದಿನಿಂದ ಬೆನ್ನಿಗೆ ಚೂರಿ ಹಾಕಿದ್ದರು. ಅದರ ಅರಿವು ಪಾಪ ಜೆ.ಎಚ್ ಪಟೇಲರಿಗೆ ಇರಲಿಲ್ಲ. ಕೊನೆಗೆ ಬೇಸರ ಗೊಂಡ ಜೆ.ಎಚ್.ಪಟೇಲರು ತನಗೆ ಮುಖ್ಯಮಂತ್ರಿ ಗಾದಿ ಬೇಡವೇ ಬೇಡ ಎಂದರು. ಅಲ್ಲಿಗೆ ದೇವೇಗೌಡರ ದುರಾಸೆ ಫಲಿಸಿತ್ತು.
ದೇವೇಗೌಡರು ಕರೆಸಿದ್ದ ಜನರ ಆಟಾಟೋಪ ನೋಡಿ ಬೇಸರಗೊಂಡ ರಾಮಕೃಷ್ಣ ಹೆಗಡೆಯವರು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಪತ್ರಕರ್ತರ ಕೊಠಡಿಯ ಪಕ್ಕದಲ್ಲೇ ಸಮ್ಮೇಳನ ಸಭಾಂಗಣ ಹೊರಗೆ ಬಂದು ದೇವೇಗೌಡರ ಕೈಯನ್ನು ಮೇಲೆತ್ತಿ ಜನಕ್ಕೆ ತೋರಿಸಿದರು. ಇದರ ಅರ್ಥ ಗೊತ್ತಾಯಿತಲ್ವಾ? ಮುಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ರಲ್ಲ ಬದಲಿಗೆ ದೇವೇಗೌಡರು ಅಂತ ಹೇಳಿಯಾಗಿತ್ತು. ಅಲ್ಲಿಯಿಂದ ಮುಖ್ಯಮಂತ್ರಿಯಾಗಿ ದೇವೇಗೌಡರ ದರ್ಬಾರು ಹೀಗೆ ಆರಂಭಗೊಂಡಿತು. ದೇವೇಗೌಡರು ತಮ್ಮ ಕಪಟ ನೀತಿಯಿಂದ ಸರಳ,ಸಜ್ಜನ ರಾಜಕೀಯ ಮುತ್ಸದ್ದಿಯಾಗಿದ್ದ ಜೆ.ಎಚ್.ಪಟೇಲರನ್ನು ತುಳಿದು ಅಧಿಕಾರ ಗದ್ದುಗೆಗೆ ಏರಿದರು.
ಇಲ್ಲಿಗೆ ಗೊತ್ತಾಯ್ತಲ್ವಾ? ರಾಮಕೃಷ್ಣ ಹೆಗಡೆ,ಜೆ,ಎಚ್,ಪಟೇಲ್,ಎಸ್ ಆರ್ ಬೊಮ್ಮಾಯಿ ಇವರನ್ನು ರಾಜಕೀಯವಾಗಿ ತುಳಿದವರು ಯಾರು ಅಂತ ಗೊತ್ತಾಯ್ತಲ್ವಾ? ಇವತ್ತು ದೇಶದಲ್ಲಿ ಎಷ್ಟು ದಳಗಳಿವೆ ಜನತಾದಳ ,ರಾಷ್ಟ್ರೀಯ ಜನತಾದಳ,ಬಿಜು ಜನತಾದಳ, ಲೋಕದಳ, ಸಂಯುಕ್ತ ಜನತಾದಳ ಇಷ್ಟು ದಳಗಳು ಆಗಲು ಕಾರಣ ಯಾರು ಅಂತ ಗೊತ್ತಾಯ್ತಲ್ವಾ?
-ಸುನೀಲ್ ಪಿಂಟೋ