ಪ್ರಚಲಿತ

ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೋದಿಗೆ ಮತ್ತೆ ಅವಹೇಳನ! ಮೋದಿ ಕೈಸಾ ಹೇ, ಮೋದಿ ಲುಚ್ಚಾ ಹೈ ಎಂದ ಕಾಂಗ್ರೆಸ್ ಕೆಪಿಸಿಸಿ ಸದಸ್ಯ!

ಮೋದಿಯನ್ನು ತೆಗಳಿ ತನ್ನ ಬುಡಕ್ಕೆ ತಾನೇ ಕೊಡಲಿಏಟುಕೊಡುತ್ತಿರುವ ಅಬ್ಬೆಪಾರಿಗಳ ಕಥೆಕೇಳಿದ್ದೀರಾ…? ಮೋದಿಯನ್ನು ತೆಗಳಿ ಹೀರೋ ಆಗಲು ಹೋದ
ವಿರೋಧಿಗಳು ಏನಾದ್ರು ಗೊತ್ತಾ..?

ಮೋದಿ ವಿರುದ್ಧ ಆರೋಪ ಮಾಡಲು ಯಾವುದೇ ಪ್ರಕರಣಗಳಿಲ್ಲದೆ ಹತಾಶ ಮನೋಭಾವದಿಂದ ಕಂಗೆಟ್ಟು ಹೋಗಿರುವ ಕೆಲವು ಸೋಗಲಾಡಿ ಕಾಂಗ್ರೆಸ್ ನಾಯಕರು, ಮೋದೀಜಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ನಿನ್ನೆ ತಾನೆ ಕಾಂಗ್ರೆಸ್ ಸಚಿವ ರೋಶನ್ ಬೇಗ್ ಬಾಯಿಂದ ಮೋಶನ್‍ನಂತೆ ಅವಾಚ್ಯ ಪದಗಳು ವಿಜೃಂಭಿಸಿದ್ದರೆಡ ಇಂದು ಮತ್ತೊಬ್ಬ ಕಾಂಗ್ರೆಸ್ ಮುಖಂಡನ ಬಾಯಿಂದ ಮೋದೀಜಿ ಬಗ್ಗೆ ತನ್ನ ನಾಲಗೆಯನ್ನು ಹರಿಯ ಬಿಟ್ಟಿದ್ದಾನೆ. ಕೆಪಿಸಿಸಿ ಸದಸ್ಯ ದೀಪಕ್ ಚಿಂಚೋರೆ ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮದಲ್ಲಿ “ಮೋದಿ ಕೈಸಾ ಹೈ, ಲುಚ್ಚಾ ಹೈ” ಎಂಬ ಅವಾಚ್ಯ ಪದಗಳಿಂದ ನಿಂದಿಸಿ ತನ್ನ ಕಾಂಗ್ರೆಸ್ ಸಂಸಕೃತಿಯನ್ನು ಸಮಾಜದ ಮುಂದೆ ಮತ್ತೆ ಬೆತ್ತಲುಗೊಳಿಸಿದ್ದಾನೆ. ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿಗಳ ಬಗ್ಗೆ ಇಂತಹ ಹೇಳಿಕೆಯನ್ನು ನೀಡಿ ಜನತೆಯ ಮುಂದೆ ದಿಗ್ಗಜನಾಗಲು ಹೋಗಿ ಈಗ ತನ್ನ ಮುಖಕ್ಕೆ ತಾನೇ ಉಗಿದುಕೊಂಡಿದ್ದಾನೆ

ಅರೆ… ಅವನ್ಯಾವನೋ ರೋಷನ್ ಬೇಗ್ ಅಂತೆ. ಅವನು ಕರ್ನಾಟಕ ಸರ್ಕಾರದ ಸಚಿವನಂತೆ. ಅವನ ಬಾಯಿಂದ ಬಂದ ಮಾತನ್ನು ಕೇಳಬೇಕಿತ್ತು. ಅಯ್ಯಯ್ಯೋ… ಈ ಅರೆ ಹುಚ್ಚರನ್ನೆಲ್ಲ ನಾವು ಗೆಲ್ಲಿಸಿದ್ದೇವಲ್ಲಾ ಎಂದು ಜನತೆ ಈಗ ಬಡಬಡಾಯಿಸುತ್ತಿದ್ದಾರೆ. ದೇಶದ ಅಗ್ರಗಣ್ಯ ಹುದ್ಧೆಯಲ್ಲಿರುವ, ಇಡಿ ದೇಶವೇ ಹೆಮ್ಮೆ ಪಡುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಮಾತಾಡಿದ ಆ ಸಚಿವನಿಗೆ ಅದ್ಯಾವ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಜನರೇ ನಿರ್ಧರಿಸ್ತಾರೆ.

ಬಿಡಿ. ನಾವೀಗ ಹೇಳ ಹೊರಟಿರುವುದು, ಮೋದಿ ವಿರುದ್ಧ ಕೀಳಾಗಿ ಮಾತಾಡಿ, ಹೀರೋ ಆಗಲು ಹೋಗಿ ಜನತೆಯ ಮುಂದೆ ಝೀರೋ ಆದ ಕೆಲ ಮಂದ ಬುದ್ಧಿಯ
ಸೋಗಲಾಡಿ ನಾಯಕರ ಬಗ್ಗೆ!!

ರೋಷನ್​ ಬೇಗ್​ ಬಳಿಕ ನಾಲಿಗೆ ಹರಿಬಿಟ್ಟ ಮತ್ತೊಬ್ಬ ಕಾಂಗ್ರೆಸ್ ಮುಖಂಡ | ಮ…

ರೋಷನ್​ ಬೇಗ್​ ಬಳಿಕ ನಾಲಿಗೆ ಹರಿಬಿಟ್ಟ ಮತ್ತೊಬ್ಬ ಕಾಂಗ್ರೆಸ್ ಮುಖಂಡ | ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಸಿದ ದೀಪ‌ಕ್​ ಚಿಂಚೋರೆ | Dighvijay News Live

تم النشر بواسطة ‏‎Dighvijay News – ದಿಗ್ವಿಜಯ ನ್ಯೂಸ್‎‏ في 14 أكتوبر، 2017

ಮೋದೀಜಿ ಅಂದ್ರೆ ಸುಮ್ನೇನಾ… ಕೋಟಿ ಕೋಟಿ ಜನರ ನಾಡಿ ಮಿಡಿತಗಳನ್ನು ಅರ್ಥ ಮಾಡಿಕೊಂಡು, ಒಂದೂ ರಜೆಯನ್ನೂ ಪಡೆಯದೆ, ದಿನಕ್ಕೆ 18 ಗಂಟೆ ಕೆಲಸ
ಮಾಡುವ ಮೋದೀಜಿಯನ್ನು ದೇಶವೇ ಕೊಂಡಾಡುತ್ತಿದೆ. ದೇಶ ಮಾತ್ರವೇಕೆ, ಮೋದೀಜಿ ಬರ್ತಾರೆಂದರೆ ಸಾಕು ಇಡಿ ವಿಶ್ವವೇ ತುದಿ ಕಾಲಲ್ಲಿ ನಿಲ್ಲುತ್ತೆ. ಅಚ್ಚರಿಯೆಂದರೆ ಅಮೇರಿಕಾದ ಮ್ಯಾಡಿಸನ್ ಸ್ಕ್ವಾರ್ ನಲ್ಲಿ ಮೋದಿ ಮಾಡಿದ್ದ ಭಾಷಣ ವಿಶ್ವದಲ್ಲೇ ಹೊಸ ಭಾಷ್ಯವನ್ನು ಬರೆದಿತ್ತು. ಆವಾಗ ನೋಡಿ, ಉಳಿದ ರಾಷ್ಟ್ರಗಳು ಜಿದ್ದಿಗೆ ಬಿದ್ದಿದ್ದು. ಮೋದೀಜಿಯ ಅಮೇರಿಕಾದ ಭಾಷಣವನ್ನು ಛಾಲೆಂಜಾಗಿ ತೆಗೆದುಕೊಂಡ ಆಸ್ಟ್ರೇಲಿಯಾ ಮೋದಿ ಆಗಮನಕ್ಕಾಗಿ ಕಾದು ಕುಳಿತು ಸಿಡ್ನಿಯಲ್ಲಿ ಅಮೇರಿಕಾವನ್ನೂ ಮೀರಿಸುವಂತ ವೇದಿಕೆ ನಿರ್ಮಿಸಿ ಗೆದ್ದು ಬಿಟ್ಟಿತ್ತು. ಹೀಗೆ ಅನೇಕ ರಾಷ್ಟ್ರಗಳು ಮೋದಿಯನ್ನು ಕಾರತದಿಂದ ಕಾದು ಕುಳಿತು ಅವರ ಅಪ್ಪುಗೆಗೆ ಚಾತಕ ಪಕ್ಷಿಯಂತೆ ನೋಡುತ್ತಿರುತ್ತವೆ.

ಇಂತಹ ಮೋದೀಜೀಯನ್ನು ತೆಗಳುವ ನಮ್ಮ ನಾಯಕರ ನಾಲಗೆಗಳಿಗೇನೂ ಕೊರತೆಯಿಲ್ಲ. ಅದ್ಯಾವನೋ ರೋಶನ್ ಬೇಗ್‍ನಿಂದ ಹಿಡಿದು ಇಟಲಿಯ ಬಾರ್‍ನಿಂದ ಓಡಿ ಬಂದು ದೇಶವನ್ನು ಕೋಳ್ಳೆ ಹೊಡೆದ ಸೋನಿಯಾ ತನಕ ಮೋದಿಯನ್ನು ದೂರುವಲ್ಲಿ ಹಿಂದೆ ಬಿದ್ದಿಲ್ಲ.

ಹಿಂದೊಮ್ಮೆ ಮೋದೀಜಿಯನ್ನು ಸೋನಿಯಾ ಗಾಂಧಿ ಸಾವಿನ ವ್ಯಾಪಾರಿ ಎಂದಿದ್ದಳು. ಗೋಧ್ರಾ ಗಲಭೆಯಲ್ಲಿ ಮೋದಿಯ ಪಾತ್ರವಿಲ್ಲ ಎಂದು ಸ್ವತಃ ನ್ಯಾಯಾಲಯವೇ ಕ್ಲೀನ್ ಚಿಟ್ ಕೊಟ್ಟಿದ್ದರೆ, ಎಲುಬಿಲ್ಲದ ನಾಲಿಗೆಗಳಿಗೆ ಏನೂ ಕೊರತೆ ಇಲ್ಲ ತಾನೆ. ಹೀಗೆ ಮತ್ತೆ ತನ್ನ ವಿಕೃತ ಮನಸ್ಸನ್ನು ಮಾತಿನ ಮೂಲಕ ಹರಿಯ ಬಿಟ್ಟಿದ್ದ ಸೋನಿಯಾ, ಆ ಮೊದಲೇ ಕೆಟ್ಟು ಹೋಗಿದ್ದ ಇಮೇಜನ್ನು ಮತ್ತೆ ಕೆಡಿಸಿಕೊಂಡಿದ್ದಳು. ಆವಾಗಲೇ ಅವಳಿಗೆ ಏಳರಾಟ ಶನಿ ಹೆಗಲೇರಿದ್ದ. ನಂತರ ನಡೆದದ್ದು ಇತಿಹಾಸ. ದೇಶದಲ್ಲೇ ಕಾಂಗ್ರೆಸ್ ಅನ್ನುವ ಬ್ರಟಿಷರು ಹುಟ್ಟಿಸಿದ ಪಕ್ಷವು ನೆಲಕಚ್ಚಿ, ಎಂದೂ ಎದ್ದೇಳದಂತೆ ಆಗಿ ಬಿಟ್ಟಿತ್ತು. ಆದರೆ ಮೋದೀಜಿ ಮಾತ್ರ ದೇಶ ಸೇವೆಯಲ್ಲೇ ಮಗ್ನಾರಾಗಿದ್ದಾರಲ್ವ…

ಇನ್ನೊಬ್ಬನ ಕಥೆ ಕೇಳಿ. ಅವನು ಮಣಿಶಂಕರ್ ಅಯ್ಯರ್. ಬ್ರಾಹಣ ಕುಲಕ್ಕೇ ಅವಮಾನ ಆತ. ದೇಶಕ್ಕಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ್ದ ಮಹಾ ಕ್ರಾಂತಿಕಾರಿ, ವೀರ ಸಾವರ್ಕರರನ್ನು ದೇಶದ್ರೋಹಿ ಅಂದ ಧೂರ್ತ ಮಣಿಶಂಕರ್ ಅಯ್ಯರ್. ಆತ ಮೋದೀಜಿ ಬಗ್ಗೆ ಮಾತನಾಡಿದ ಮಾತುಗಳನ್ನು ಕೇಳಿದ್ದೀರಾ… ಕಳೆದೆ ಲೋಕಸಭಾ ಚುನಾವಣೆಯ ವೇಳೆಯಲ್ಲಿ, ಕಾಂಗ್ರೇಸ್‍ನ ಸಭೆಯೊಂದನ್ನು ಮುಗಿಸಿ ಹೊರಗಡೆ ಬಂದು ಆತ ಹೇಳಿಕೆ ಕೊಡ್ತಾನೆ, “ನಮಗೆ ಮೋದಿ ಕಂಡರೆ ಭಯವಿಲ್ಲ. ಮೋದಿ ಚಾಯಾ ಮಾರಿಕೊಂಡೇ ಇರಲಿ. ಬೇಕಾದರೆ ನಮ್ಮ ಕಾಂಗ್ರೆಸ್ ಸಭೆಯಲ್ಲಿ ಚಯಾ ಮಾರಲಿ. ನಾವು ಅವಕಾಶ ಮಾಡಿ ಕೊಡುತ್ತೇವೆ” ಎಂದು ತನ್ನ ನಾಲಿಗೆಯನ್ನು ಹರಿಯ ಬಿಟ್ಟಿದ್ದ.

ಆತ ಯಾವಾಗ ಈ ಮಾತನ್ನು ಬೊಗಳಿದನೋ ಅಂದಿನಿಂದ ದೇಶದಲ್ಲಿ ಹೊಸ ಶಕೆ ಆರಂಭವಾಗಿ ಬಿಟ್ಟಿತ್ತು. ದೇಶದ ಯುವಕರು ಸಿಡಿದೆದ್ದು ಬಿಟ್ಟಿದ್ದರು. ಗಲ್ಲಿ ಗಲ್ಲಿಗಳಲ್ಲಿ “ನಮೋ ಟೀ ಸ್ಟಾಲ್” ಆರಂಭಿಸಿದರು. ಜನರು ಹಣ ಕೊಟ್ಟು ಟೀ ಖರೀದಿಸಿ ಮೋದೀಜಿಯನ್ನು ಬೆಂಬಲಿಸಿದರು. ಕರ್ನಾಟಕದಲ್ಲಂತೂ ನಮೋ ಬ್ರಿಗೇಡ್ ವತಿಯಿಂದ ರಾಜ್ಯದ ಮೂಲೆ ಮೂಲೆಗಳಲ್ಲೂ ನಮೋ ಚಾಯಾದ ರುಚಿಯನ್ನು ಜನತೆಗೆ ಚಪ್ಪರಿಸಿದ್ದರು.

ಈ ಮೂಲಕ ಮೋದೀಜಿಯ ಚಾಯಾದ ಕಥನ ಮನೆ ಮನೆಗಳಿಗೆ, ಮನಮನಗಳಿಗೆ ಹೋಗಿತ್ತು. ಭಾರತ ಹಿಂದೆಂದೂ ಕಾಣದ ಅಭೂತ ಪೂರ್ವ ಚುನಾವಣೆಗೆ
ಸಾಕ್ಷಿಯಾಗಿತ್ತು. ಅದೇ ಚಾಯವಾಲ ದೇಶದ ಪ್ರಧಾನಿ ಗದ್ದುಗೆಗೇರಿ ಕುಳಿತು ಬಿಟ್ಟಿದ್ದ. ಮೋದೀಜಿಯ ಚಹಾ ದ ಕಥನ ಅಮೇರಿಕಾದ ಕದ ತಟ್ಟಿತ್ತು. ಅಮೇರಿಕಾದ
ಅಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮರೇ ಮೋದೀಜಿಯೊಂದಿಗೆ “ಚಾಯ್ ಪೇ ಚರ್ಚಾ”ದಲ್ಲಿ ತೊಡಗಿಕೊಂಡಿದ್ದರು.

ಆದರೆ ಮೋದೀಜಿಯನ್ನು ಚಾಯಾವಾಲ ಎಂದು ಜರಿದ ಆ ದುಷ್ಟ ಮಣಿಶಂಕರ್ ಅಯ್ಯರ್ ಮಾತ್ರ ಮತ್ತೆ ಜನರ ಕಣ್ಣಿಗೆ ಕಾಣಲೇ ಇಲ್ಲ. ಮೋದೀಜಿ ಮಾತ್ರ ವಿಶ್ವ
ನಾಯಕರಾದರು.

ದೇಶದ ಕಥೆ ಬಿಡಿ. ನಮ್ಮ ರಾಜ್ಯಕ್ಕೆ ಬರೋಣ. ನಮ್ಮ ಗ್ರಹಚಾರವೋ ಅಥವಾ ರಾಜ್ಯದ ಜನತೆ ಅನುಭವಿಸಲಿಕ್ಕತ್ತೋ ಎಂಬಂತೆ ಇಲ್ಲೋಬ್ಬ ಮುಖ್ಯಮಂತ್ರಿ
ಹುದ್ದೆಯನ್ನು ಅಲಂಕರಿಸಿದ. ಅವನನ್ನು ರಾಜ್ಯದ ಜನತೆ ಪ್ರೀತಿಯಿಂದ “ನಿದ್ದರಾಮಯ್ಯ” ಎಂದು ಕರೆಯುತ್ತಾರೆ. ಆತನ ನಿಜವಾದ ಹೆಸರು ಸಿದ್ಧರಾಮಯ್ಯ ಅಂತೆ.
ರಾಜ್ಯದ ಜನರಿಗೆ ತಮಾಷೆ ಪಟ್ಟಿಗೆಯಲ್ಲಿ ಸಿನೆಮಾ ತೋರಿಸಿದಂತೆ, ವಿವಿಧ ಜನವಿರೋಧಿ ಭಾಗ್ಯಗಳನ್ನು ಘೋಷಿಸಿ ಮೋಸಗೊಳಿಸುತ್ತಿರುವ ಮುಖ್ಯಮಂತ್ರಿ.

ಆತ ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮೋದೀಜಿಯನ್ನು “ನರಹಂತಕ”ನೆಂದು ಜರೆದಿದ್ದ. ಜನರು ಬಿಡ್ತಾರಾ… ಸರಿಯಾಗಿಯೇ ಪಾಠ ಕಳಿಸಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವನ್ನು ನಡೆಸುತ್ತಿದ್ದರೂ ಜನತೆ ಮೋದೀಜಿಯನ್ನು ಬೆಂಬಲಿಸಿದ್ದರು. 19 ಸೀಟುಗಳನ್ನು ಬಿಜೆಪಿ ಗೆಲ್ಲುವ ಮೂಲಕ ಕರ್ನಾಟಕದ ಜನತೆ, “ಮೋದೀಜಿಯನ್ನು ದೂರಿದ್ರೆ ಸುಮ್ಮನಿರೋಲ್ಲ” ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದರು. ನಿಜವಾಗಿಯೂ ಅಂದು ಆರಂಭವಾಗಿದ್ದು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರಸ್ ಪಕ್ಷದ ಪತನ. ಜನತೆಯ ಮನದಲ್ಲಿ ನಮೋ ಮನನ…

ಪ್ರಧಾನಿಯಾದ ನಂತರ ಮೋದೀಜಿ ರಾಜ್ಯಕ್ಕೆ ಬಂದರೆ ಅವರನ್ನು ಸ್ವಾಗತಿಸಲು, ಅವರೊಂದಿಗೆ ವೇದಿಕೆ ಹಂಚಲು ಅದ್ಯಾವ ಮನಸ್ಸು ಒಪ್ಪಿಕೊಂಡಿತ್ತೋ ಗೊತ್ತಿಲ್ಲ.

ಅರೆ, ನಮ್ಮ ದೇಶದ ಮಾಜಿ ಪ್ರಧಾನಿಗಾದ್ರೂ ಬುದ್ಧಿ ಬೇಡ್ವಾ. ನಮ್ಮ ಮಣ್ಣಿನ ಮಗ ಎಂದು ಕರೆಸಿಕೊಳ್ಳುವ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಸ್ವಲ್ಪನಾದರೂ
ಗೌರವವಿತ್ತು. “ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಡುತ್ತೇನೆ” ಎಂದು ಒದರಿ ಬಿಟ್ಟಿದ್ದರು. ಈ ಹೇಳಿಕೆಗೆ ಮೋದೀಜಿ ಏನಂದಿದ್ದರು ಗೊತ್ತಾ…
“ಗೌಡಾಜೀ… ನಿಮ್ಮನ್ನು ನಿಮ್ಮ ಮಕ್ಕಳು ಸರಿಯಾಗಿ ನೋಡಿಕೊಳ್ಳದಿದ್ದರೆ ನನ್ನ ಬಳಿ ಬನ್ನಿ. ನಾನು ನೋಡಿಕೊಳ್ಳುತ್ತೇನೆ. ದೇಶ ಬಿಡಬೇಡಿ” ಎಂದು ಹೇಳಿ ಬಿಟ್ಟಿದ್ದರು. ಜನರಂತು ದೇವೇಗೌಡರಿಗೆ ಫಾರಿನ್ ಟಿಕೆಟ್ ಕಳಿಸಿಕೊಟ್ಟಿದ್ದರು. ಮೋದೀಜಿ ಪ್ರಧಾನಿಯಾದ ನಂತರ ಅದೇ ದೇವೇಗೌಡರು ಮೋದೀಜಿ ಬಳಿ ಅದೆಷ್ಟು ಬಾರಿ ದೆಹಲಿಗೆ ಹೋಗಿ ಭೇಟಿಯಾಗಿದ್ದರೋ ಲೆಕ್ಕವಿಲ್ಲ. ಮೋದೀಜಿಯ ಆತಿಥ್ಯ ನೋಡಿ ಸ್ವತಃ ದೇವೇಗೌಡರೇ ದಂಗಾಗಿದ್ದರು.

ಇತ್ತೀಚೆಗೆ ಬಾಗಲಕೋಟೆಯ ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮೋದೀಜಿ ವಿರುದ್ಧ ಮಾತಡಿದ್ರೆ ತಾನು ಶೈನ್ ಆಗ್ತೇನೆ ಎಂಬ
ಕಾರಣಕ್ಕೆ ಮೋದೀಜಿ ಬಗ್ಗೆ ಏಕವಚನದಲ್ಲಿ ಮಾತಾಡಿದ್ದ. “ಮೋದಿಗೆ ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸಲಿ” ಎಂದಿದ್ದ. ಪಾಪ… ಮುಂದಿನ
ಚುನಾವಣೆಯಲ್ಲಿ ಮೋದೀಜಿ ಯಾಕೆ, ಬಿಜೆಪಿ ಯ ಸಾಮಾನ್ಯ ಕಾರ್ಯಕರ್ತನಿಂದಲೇ ಸೋಲೋದನ್ನು ನೋಡಿ ಅದೇನು ಮಾಡಬೇಕೆಂದಿದ್ದನೋ ದೇವನೇ ಬಲ್ಲ.

ಇಂದಿನ ಸರದಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡತೆಗೆಟ್ಟ ಮಂತ್ರಿ ರೋಶನ್ ಬೇಗ್‍ನದ್ದು. ಅವನ ಧರ್ಮ, ಅವನಿಗೆ ಅದೇ ಭೋದನೆ ಮಾಡಿಕೊಟ್ಟಿರಬೇಕು.
ಮೋದೀಜಿಗೆ ಅದೇನೋ —ಮಗ ಅಂದು ಬಿಟ್ಟ.(ಭಾರತೀಯ ಸಂಸ್ಕøತಿಯನ್ನು ಪಾಲಿಸಿಕೊಂಡು, ಭಾರತಮಾತೆಯನ್ನು ಪೂಜಿಸುವ ನನಗೆ ಆ ಕೆಟ್ಟ ಪದವನ್ನು
ಬರೆಯುವುದು ಅಸಾಧ್ಯ). ಅವನ ವಿಕೃತ ಮೆಂಟಾಲಿಟಿಗೆ ಏನನ್ನಬೇಕೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಪತನಗೊಳ್ಳುತ್ತಿರುವ ಸಂದರ್ಭದಲ್ಲಿ ಹತಾಶ ಮನೋಭಾವದಲ್ಲಿ ಬೊಗಳಿದ. ಈಗ ಭಯದಿಂದ ಮನೆಯಿಂದ ಹೊರಬಾರದೆ ಕಳ್ಳನಂತೆ ಅಡಗಿ ಕೂತಿದ್ದಾನೆ.

ಮೊನ್ನೆ ಮೊನ್ನೆ ತಾನೆ ಅವನ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪಪ್ಪೂ, ಆರ್‍ಎಸ್‍ಎಸ್ ನ ಮಹಿಳೆಯರ ಬಗ್ಗೆ ಕೇವಲವಾಗಿ ಬೊಗಳಿದ್ದ. ಈ ರೋಶನ್ ಬೇಗ್‍ನಂತಹ ಅರೆ ಹುಚ್ಚರು ಅವನ ಛೇಲಾಗಳು ತಾನೆ. “ಯಥಾ ರಾಜ, ತಥಾ ಪ್ರಜಾ” ಎಂಬುವುದನ್ನು ಪಾಲಿಸಿಕೊಂಡು, ನಾನು ರಾಹುಲನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯನ್ನೇ ಟಾರ್ಗೆಟ್ ಮಾಡಿ ಚಪ್ಪಾಳೆ ಗಿಟ್ಟಿಸಲು ಪ್ರಯತ್ನ ಪಟ್ಟಿದ್ದ ದೂರ್ತ…

ಮೋದೀಜಿಯನ್ನು ತೆಗಳುವವರು ಈ ದೇಶದಲ್ಲಿ ಕಡಿಮೆಯಿಲ್ಲ ಬಿಡಿ. ಅವರೊಬ್ಬ ಅಸಾಧಾರಣ ವ್ಯಕ್ತಿ ಎಂದು ಜಗತ್ತೇ ನಂಬಿಕೊಂಡಿದೆ. ಅಪವಾದಗಳು ಶ್ರೀ ರಾಮ
ಚಂದ್ರನನ್ನೇ ಬಿಡಲಿಲ್ಲ.

ರಾಜ್ಯದಲ್ಲಿ ಮೋದೀಜಿ ಬಗ್ಗೆ ಬೊಗಳುತ್ತಿರುವ ನಾಯಿಗಳಿಗೆ ತಕ್ಕ ಪಾಠ ಕಲಿಸಲು ಕರ್ನಾಟಕದ ಜನತೆ ವಿಧಾನ ಸಭಾ ಚುನಾವಣೆಯವರೆಗೂ ಕಾದು ಕುಳಿತಿದ್ದಂತೂ ಸುಳ್ಳಲ್ಲ…

-ಸುನಿಲ್

Related Articles

Close