ಅಂಕಣಪ್ರಚಲಿತ

ಮಹಾತ್ಮಾ ಜಿನ್ನಾನಿಗೆ ಲಕ್ಷಾಂತರ ಹಿಂದೂಗಳ ರಕ್ತದಿಂದ ತೋಯ್ದ ಪಾಕಿಸ್ಥಾನದ ಕೂಸೊಂದನ್ನು ಕೊಟ್ಟರು. ಕೊನೆಗೆ, ಕಾಶ್ಮೀರ ತಣ್ಣಗಾಗಲೇ ಇಲ್ಲ!

ಮತ್ತೆ ಸುಮೇಧ್ ಗವಾಯ್ ಎಂಬ 25 ರ ತರುಣ ಜಮ್ಮು ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆಗಸ್ಟ್ 13 ರಂದು ಹುತಾತ್ಮನಾಗಿದ್ದಾರೆ! ಒಳನುಸುಳಿದ್ದ ಉಗ್ರರ ಹುಟ್ಟಡಗಿಸಿದರಾದರೂ ಎರಡು ಜನ ಶೆಪಾಯ್ ಯೋಧರು ಪ್ರಾಣವನ್ನರ್ಪಿಸಿದ್ದಾರೆ!

ಕಾಶ್ಮೀರವೊಂದು ಕಾದ ಕೆಂಡವಾಗೇ ಉಳಿದಿದೆ! ಕಾಶ್ಮೀರದ ಪ್ರತ್ಯೇಕತಾವಾದಿಗಳ ಬೆಂಬಲ ಹಾಗೂ ಪಾಕಿಸ್ಥಾನದ ಹಣಕಾಸಿನ ನೆರವು ಅದೆಷ್ಟು ಉಗ್ರರನ್ನು ಪೋಷಿಸುತ್ತಲುಳಿದಿದೆಯೆಂದರೆ ಕಾಶ್ಮೀರವೆನ್ನುವುದು ಬಗೆಹರಿಯಲಾಗದ ಸಮಸ್ಯೆಯಾಗಿಯೇ ಉಳಿದುಬಿಡುವ ಆತಂಕವೊಂದೆದುರಾಗಿದೆ.

ಆತಂಕಕಾರಿಯೆಂದರೆ ಅದೇ! ಈ ಸಲವೂ ಕೂಡ ಮುಂಚೆಯ ಹಾಗೇ ನೆರೆಯ ಜನರು ಸೈನಿಕರನ್ನು ಕಲ್ಲಿನಿಂದ ಹೊಡೆದಿದ್ದಾರೆಂಬುದು. ಉದ್ಯೋಗವಿಲ್ಲದ ಈ ಯುವಕರಿಗೆ ಉಗ್ರರನ್ನು ರಕ್ಷಿಸುವ ಕೆಲಸಕ್ಕೆ ಹಣದ ಆಮಿಷ ಒಡ್ಡಿ ಕೊಟ್ಟು ತೆಗೆದುಕೊಳ್ಳುವ ಪರಿಪಾಠ ಕಾಶ್ಮೀರದಲ್ಲಿ ನಿರಂತರ. ಕಳೆದ ಅದೆಷ್ಟೋ ಶತಮಾನಗಳಿಂದಲೂ ಕಾಶ್ಮೀರದ ಸ್ಥಿತಿಯೊಂದು ಬಿಗಡಾಯಿಸುತ್ತಲೇ ಬಂದಿದೆ.

ಮುಂಚೆಯೇ ಹೇಳಿದ್ದರು ಸಾವರ್ಕರ್!!!

ಬ್ರಿಟಿಷ್ ಹುಟ್ಟಡಗಿಸಿದ್ದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್ ಮುಂಚೆಯೇ ಎಚ್ಚರಿಸಿದ್ದರು! ಮಹಾತ್ಮಾ ಗಾಂಧಿಯೆನ್ನುವ ಮಹಾತ್ಮರೊಬ್ಬರು ಜಿನ್ನಾನ ಎದುರು ಮಂಡಿಯೂರಿ ಕುಳಿತಾಗ ಸಾವರ್ಕರ್ ಎಚ್ಚರಿಸಿದ್ದರು! ಈ ಪ್ರತ್ಯೇಕತಾವಾದದಿಂದ ಮುಂದೊಂದು ದಿನ ಕಾಶ್ಮೀರ ಉಳಿಯುವುದಿಲ್ಲ ಎಂದು. ಕೇಳದ ಮಹಾತ್ಮಾ ಜಿನ್ನಾನಿಗೆ ಲಕ್ಷಾಂತರ ಹಿಂದೂಗಳ ರಕ್ತದಿಂದ ತೋಯ್ದ ಪಾಕಿಸ್ಥಾನದ ಕೂಸೊಂದನ್ನು ಕೊಟ್ಟರು. ಅಲ್ಲಿಗೆ, ಸಿಂಧುವೂ ಇಲ್ಲವಾಗಿತ್ತು!

ತದನಂತರ, ಕಾಶ್ಮೀರ ತಣ್ಣಗಾಗಲೇ ಇಲ್ಲ!

ಇನ್ನೂ ಅದೆಷ್ಟು ಜನ ಯೋಧರು ಹುತಾತ್ಮರಾಗಬೇಕು ಹೇಳಿ! ಅವತ್ತಿನ ವಿಭಜನೆಯ ತಪ್ಪೊಂದು ಅದೆಷ್ಟು ಮಂದಿಯ ಪ್ರಾಣ ತೆಗೆದುಕೊಂಡಿತು ಗೊತ್ತೇನು?! ಅದೆಷ್ಟು ಮಂದಿ ಅನಥರಾದರೋ! ಅದೆಷ್ಟು ಕಡೆಗಳಲ್ಲಿ ಮಾರಣ ಹೋಮವಾಯಿತೋ!
ಆದರೂ, ಇವತ್ತೂ ನಮ್ಮಲ್ಲಿ ಪ್ರತ್ಯೇಕತಾವಾದವೊಂದು ಹಾಗೆಯೇ ಬೆಳೆಯುತ್ತಿದೆ! ಎಡಪಂಥೀಯರ ಈ ಲಕ್ವಾ ಹೊಡೆದ ಮನಃಸ್ಥಿತಿಯೊಂದು ಮತ್ತದೇ ಕಾಶ್ಮೀರದ ಸ್ವಾತಂತ್ರ್ಯಕ್ಕೆ ಬೇಡಿಕೆಯಿಡುತ್ತಿದೆ! ತದನಂತರ, ಶ್ರೀನಗರ! ತದನಂತರ ಪಂಜಾಬ್ ನ ಖಲಿಸ್ತಾನ್! ತದನಂತರ ಅರುಣಾಚಲ!
ಭಾರತ ತುಂಡಾಗಿ ಹೋಗುತ್ತದೆ!

ಇದಾವುದರ ಪರಿವೆಯಿಲ್ಲದ ಯೋಧರು ದೇಶದೊಳಗಿನ ಹಿತ ಶತ್ರುಗಳ ನಂಬಿಯೇ ಜೀವದ ಹಂಗು ಬಿಟ್ಟು ಕಣಕ್ಕಿಳಿಯುತ್ತಾರೆ! ಅವರ ತ್ಯಾಗವನ್ನು ನೆನಪಿಸಿಕೊಳ್ಳಲೂ ಶಕ್ತರಿರದ ಭಾರತೀಯರು ಮಾತ್ರ ತತ್ವ ಮಾತನಾಡುತ್ತಾರೆ!

ಸುಮೇಧ್ ಗವಾಯ್ ಹಾಗೂ ಇನ್ನೊಬ್ಬ ಶೆಪಾಯ್ ರ ಅಂತ್ಯ ಸಂಸ್ಕಾರ ಇವತ್ತಿನ ದಿನ ನಡೆದಿದೆ. ಮತ್ತೆ ಮತ್ತೆ ಹುತಾತ್ಮರಾಗುವ ಈ ಯೋಧರ ಪ್ರಾಣಕ್ಕೆ ಬೆಲೆ ನೀಡಿಯಾದರೂ ದೇಶದೊಳಗಿನ ಪಾಕಿಸ್ಥಾನಿ ಮನಸ್ಥಿತಿಗಳು ಬದಲಾಗುತ್ತವೆ ಎಂಬುದು ಅನುಮಾನವಷ್ಟೇ!

– ಪೃಥ ಅಗ್ನಿಹೋತ್ರಿ

Tags

Related Articles

Close