ಪ್ರಚಲಿತ

ಮಹಾಭಾರತ ಯುದ್ಧವನ್ನು ಗೆಲ್ಲಲು 18 ದಿನಗಳು ಬೇಕಾಯಿತು. 21 ದಿನಗಳಲ್ಲಿ ಕೋವಿಡ್-19ನ್ನು ಸೋಲಿಸಬೇಕು- ಪ್ರಧಾನಿ ಮೋದಿ

ಕೊರೊನಾ ವೈರಸ್ ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ವಿಶ್ವದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಭಾರತದಲ್ಲೂ ಈ ವೈರಾಣು ಹರಡುವಿಕೆಯ ಬಗ್ಗೆ ಭಾರೀ ನಿಗಾವಹಿಸುತ್ತಿದೆ. 21 ದಿನಗಳ ಕಾಲ ಭಾರತ ಸಂಪೂರ್ಣ ಲಾಕ್‍ಡೌನ್ ಆಗಿದೆ. ಜನರಿಗೆ ಅಗತ್ಯವಸ್ತುಗಳು ಖರೀದಿಸುವುದಕ್ಕೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದ್ದು ಅದನ್ನು ಬಿಟ್ಟು 21 ದಿನಗಳ ಕಾಲ ಮನೆಯಿಂದ ಹೊರಬರುವಂತಿಲ್ಲ ಅಂತಾ ಸರ್ಕಾರ ಖಡಕ್ ಆಗಿ ಎಚ್ಚರಿಸಿದೆ. ಅದನ್ನೂ ಮೀರಿಯೂ ಮನೆಯಿಂದ ಹೊರಬಂದರೆ ಮುಂದೆ ಭಾರೀ ಅಪಾಯವನ್ನು ಎದುರಿಸಬೇಕಾದ ಸಂದರ್ಭ ಎದುರಾಗಬಹುದು. ಹೀಗಾಗಿ ನಮ್ಮನ್ನು, ನಮ್ಮ ಕುಟುಂಬವನ್ನು ಇಡೀ ದೇಶವನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ದೇಶವ್ಯಾಪಿ ಲಾಕ್‍ಡೌನ್ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಸಂದೇಶಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದರು. ಹೀಗಾಗಿ ಪ್ರಧಾನಿಯವರು ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ವಾರಣಾಸಿಯ ಜನರ ಪ್ರಶ್ನೆಗೆ ಉತ್ತರಿಸಿದ ಮೋದಿ ಭಾರತ ಮಹಾಭಾರತ ಯುದ್ಧವನ್ನು ಗೆಲ್ಲಲು ಹದಿನೆಂಟು ದಿನಗಳು ಬೇಕಾಯಿತು. ಕೋವಿಡ್-19 ವಿರುದ್ಧದ ಯುದ್ಧವನ್ನು ಗೆಲ್ಲಲು 21 ದಿನಗಳು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ಕೋವಿಡ್-19ನ್ನು ಹೊಡೆದೋಡಿಸಬೇಕೆಂದರೆ ಸಾಮಾಜಿಕ ಅಂತರ ಅತ್ಯಂತ ಪ್ರಮುಖವಾದುದು ಹಾಗಾಗಿ ಎಲ್ಲರೂ ಈ ಬಗ್ಗೆ ಎಚ್ಚರವಹಿಸಿ ಮನೆಯಿಂದ ಹೊರಬರದೆ ನಮ್ಮನ್ನು ,ನಮ್ಮ ಕುಟುಂಬವನ್ನು ನಮ್ಮ ದೇಶವನ್ನು ಕಾಪಾಡಬೇಕು ಎಂದು ಮೋದಿ ಹೇಳಿದ್ದಾರೆ.

Tags

Related Articles

FOR DAILY ALERTS
Close