ಪ್ರಚಲಿತ

ಮಾಂಸದೂಟ ತಿಂದು ಮಂಜುನಾಥನ ಸನ್ನಿಧಿಗೆ ತೆರಳಿ ದೇವಸ್ಥಾನವನ್ನು ಅಪವಿತ್ರಗೊಳಿಸಿದರೇ ಮುಖ್ಯಮಂತ್ರಿ ಸಿದ್ದರಾಮಯ್ಯ!!

ಸಿಎಂ ಸಿದ್ಧರಾಮಯ್ಯರವರಿಂದ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಅವಮಾನ!!

ಚುನಾವಣೆ ಹತ್ತಿರ ಬರುತ್ತಿದೆ! ಕಾಂಗ್ರೆಸ್ ಮನೆ ಮನೆಗೆ ಬರುತ್ತಿದೆ! ಅದೇ ರೀತಿ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ಕೂಡಾ ರಾಜಕೀಯ ಸಭೆಯ ನಿಮಿತ್ತ ಮಂಗಳೂರಿನ ಬಂಟ್ವಾಳಕ್ಕೆ ಬಂದಿಳಿದಿದ್ದಾರೆ! ಜೊತೆ ಜೊತೆಗೆ, ಧರ್ಮಕಸ್ಥಳದ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಸಿದ್ಧರಾಮಯ್ಯರವರು ಮಾತ್ರ ಹಿಂದೂ ಧರ್ಮಕ್ಕೆ ಅಪಮಾನವೆಸಗಿರುವುದಲ್ಲದೇ, ಶ್ರೀ ಕ್ಷೇತ್ರಕ್ಕೆ ಅಪಮಾನವೆಸಗಿದ‌್ದಾರೆ!

ಮೀನೂಟ! ಬಾಡೂಟ! ಒಟ್ಟಾರೆಯಾಗಿ ಆಯ್ತು ಕಾಟಾಚಾರದ ಆಟ!

ಹೌದು! ಪಬ್ಲಿಕ್ ಟಿವಿ ನಡೆಸಿದ ಎಕ್ಸ್ ಕ್ಲೂಸಿವ್ ಕಾರ್ಯಾಚರಣೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆಯಷ್ಟೇ! ಮಂಜುನಾಥನ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಮೀನೂಟ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಕ್ಷೇತ್ರಕ್ಕೆ ಅಪಮಾನವೆಸಗಿದ್ದಲ್ಲದೇ, ಈಗ ರಾಜ್ಯದ ಪ್ರಜೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ!

Watch Here! How Sidramayya Insulted Shri Manjunath!

ಹಿಂದೂ ದೇವಾಲಯಗಳ ನಿಯಮ ನಿಷ್ಟೆ!

ಹಿಂದೂ ದೇವಾಲಯಗಳಲ್ಲಿ ಅದರದ್ದೇ ಆದ ನಿಯಮ ನಿಷ್ಠೆಗಳಿದೆ! ಅಲ್ಲದೇ, ಯಾವುದೇ ಭಕ್ತಾದಿಗಳು ಮಾಂಸಾಹರವನ್ನು ಸೇರಿಸಿ ದೇವಸ್ಥಾನವನ್ನು ಪ್ರವೇಶಿಸುವುದಿಲ್ಲ! ಅದರಲ್ಲಿಯೂ ಸಹ, ಶಕ್ತಿ ದೇವತೆಗಳೆಂದೇ ಆರಾಧಿಸಲ್ಪಡುವ ಶಿವ, ದುರ್ಗಾ ಹಾಗೂ ಇನ್ನಿತರ ದೇವ ದೇವತೆಗಳ ದೇಗುಲದಲ್ಲಿ ಸಹಸ್ರ ಕೋಟಿ ಭಕ್ತಾದಿಗಳ ಅನುಷ್ಟಾನದಿಂದ ಲೋಕ ಕಲ್ಯಾಣಾರ್ಥವಾಗಿ ಧರ್ಮಕಾರ್ಯಗಳು ನಡೆಯುತ್ತಲೇ ಇರುತ್ತವೆ! ಅಂತಹದ್ದರಲ್ಲಿ, ಲಕ್ಷಾಂತರ ಭಕ್ತಾದಿಗಳನ್ನು ಹೊಂದಿರುವ ದಕ್ಷಿಣ ಕನ್ನಡದ ಶಕ್ತಿ ಕೇಂದ್ರಗಳಲ್ಲೊಂದಾದ ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಮಾಂಸಾಹಾರ ಸೇವಿಸಿ ಭೇಟಿ ನೀಡಿದ್ದು ಎಷ್ಟು ಸರಿ?! ಇದು ದೇಶದ 78% ಇರುವಷ್ಟಿರುವ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಷಯವಿಲ್ಲವೇ?! ಧರ್ಮದ ಸಿದ್ಧಾಂತವನ್ನೇ ಪ್ರಶ್ನಿಸುವ ಹಾಗಾಗಲಿಲ್ಲವೇ?!

ಮಂಜುನಾಥನ ಕೋಪಕ್ಕೆ ಗುರಿಯಾಗುತ್ತಾರೆಯೇ ಸಿದ್ಧರಾಮಯ್ಯನವರು?!

ಧರ್ಮಸ್ಥಳದ ಶಕ್ತಿ ಕರ್ನಾಟಕದ ಮೂಲೆ ಮೂಲೆಗೂ ತಿಳಿಯದ ವಿಷಯವಲ್ಲ. ಅಲ್ಲದೇ, ಭಯ ಭಕ್ತಿಗಳಿಂದ ಆರಾಧಿಸುವ ಮಂಜುನಾಥನ ಕೋಪವನ್ನೂ ಒಂದಷ್ಟು ಜನ ತಿಳಿದಿದ್ದಾರೆ ಅಷ್ಟೇ! ಹೀಗಿದ್ದಾಗಿಯೂ ಸಹ, ಸಿದ್ಧರಾಮಯ್ಯನವರು ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಕ್ಕಾಗಿ ಮಂಜುನಾಥನ ಕೋಪಕ್ಕೆ ಬಲಿಯಾಗುತ್ತಾರೆಯೇ
ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ ಅಷ್ಟೇ!

 

 

– ಪೃಥು ಅಗ್ನಿಹೋತ್ರಿ

Tags

Related Articles

Close