ಅಂಕಣದೇಶಪ್ರಚಲಿತರಾಜ್ಯ

ಮಾಧ್ಯಮಾಧಮರು ಬಚ್ಚಿಟ್ಟ ಸತ್ಯ! 9 ದಿನಗಳ ಕಾಲ ಹಿಂದೂ ಮಹಿಳೆಯನ್ನು ಅತ್ಯಾಚಾರಗೈದ ಮತಾಂಧರ ಅಟ್ಟಹಾಸ ಸುದ್ದಿಯಾಗಲೇ ಇಲ್ಲ!!!!

ದೇಶ ಅಭಿವೃದ್ಧಿಯತ್ತ ಬೆಳೆಯುತ್ತಿದ್ದಂತೆ ಪೈಶಾಚಿಕ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿದೆ ಎಂದೆನಿಸುತ್ತೆ. ಕಾಮುಕರ ಅಟ್ಟಹಾಸಕ್ಕೆ ಅದೆಷ್ಟೂ ಹೆಣ್ಣುಮಕ್ಕಳು,
ಮಹಿಳೆಯರು ಬಲಿಯಾಗುತ್ತಿದ್ದಾರೋ!!. ಕಾಮುಕರ ಕೆಂಗಣ್ಣಿಗೆ ಬಲಿಯಾದ ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ಜೀವವನ್ನೇ ಕಳೆದುಕೊಂಡು ತಾವು ಚೆನ್ನಾಗಿ ಬಾಳಿ
ಬದುಕಬೇಕಾಗಿದ್ದ ಕುಟುಂಬದಿಂದಲೇ ದೂರವಾಗಿದ್ದಾರೆ. ಕೆಲವೊಂದು ಅತ್ಯಚಾರದಂತಹ ಘಟನೆಗಳಿಗೆ ಶಿಕ್ಷೆಯಾದರೆ ಇನ್ನೂ ಅದೆಷ್ಟು ಕಾಮಪಿಶಾಚಿಗಳು ಕಾನೂನಿನ ಕಣ್ಣಿಗೆ ಮಣ್ಣೆರಚಿ ತಿರುಗುತ್ತಿದ್ದಾರೆ ಅಲ್ವೇ!. ಕರ್ನಾಟಕದಲ್ಲಿ ರಾಜಕೀಯ ಕಲಹವಾದರೆ ಸುದ್ದಿಯಾಗುತ್ತೆ, ಎಲ್ಲೋ ನಡೆದ ಅತ್ಯಚಾರ ಪ್ರಕರಣಗಳು ಸುದ್ದಿಯಾಗುತ್ತೆ, ಆದರೆ ಕರ್ನಾಟಕದಲ್ಲಿ ನಡೆದಂತಹ ಪೈಶಾಚಿಕ ಕೃತ್ಯ ಯಾರಿಗೂ ಗೊತ್ತಿಲ್ಲ. ಇದು ಬೃಹತ್‍ಮಟ್ಟದ ಸುದ್ದಿ ಯಾಕೆ ಆಗಿಲ್ಲ ಎನ್ನುವುದೇ ಒಂದು ಪ್ರಶ್ನೆ?

ಕಾಮಾಂಧರ ಕಣ್ಣಿಗೆ ಬಿದ್ದ ಮಹಿಳೆಯೇ ಶಾಂತಿ (ಹೆಸರು ಬದಲಾಯಿಸಲಾಗಿದೆ). ಮೂಲತಃ ಉತ್ತರ ಕರ್ನಾಟಕದ ಹಳಿಯಾಲ್ ತಾಲೂಕಿನ ಗರ್ಡೊಲ್ಲಿ ನಿವಾಸಿ. ತನ್ನ ಗಂಡನ ಅಕಾಲಿಕ ಮರಣದಿಂದ ಬೇಸತ್ತ ಮಹಿಳೆ ಈಕೆ. ಅದಲ್ಲದೇ ತನ್ನ ಹೆತ್ತವರನ್ನು ಇಹಲೋಕವನ್ನು ತ್ಯಜಿಸಿ ಒಂಟಿಯಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗುತ್ತಿರುವ ಮಹಿಳೆ ಈಕೆ. ಅದೇನಾಯಿತೂ ಗೊತ್ತಿಲ್ಲ. ಕಾಮುಕರ ದುಷ್ಕøತ್ಯಕ್ಕೆ ಸಿಲುಕಿ ಇದೀಗ ಮನೆಯಿಂದ ಹೊರಬರಲು ಹೆದರುತ್ತಿದ್ದಾಳೆ. ಈಕೆಗೆ ಮಾದಕದ್ರವ್ಯ ಸೇರಿಸಿದ ಆಹಾರ ಪದಾರ್ಥವನ್ನು ಬಲವಂತವಾಗಿ ತಿನ್ನಿಸಿ 9 ದಿನಗಳ ಕಾಲ 9 ಮಂದಿ ಅತ್ಯಾಚಾರವೆಸಗಿದ್ದಾರೆ ನೀಚ ಕಾಮಾಂಧರರು!!

ಎಂಥವರ ಕಲ್ಲು ಹೃದಯವು ಈ ಕುಕೃತ್ಯಕ್ಕೆ ಒಂದು ಕ್ಷಣ ಕರಗುವುದಂತೂ ನಿಜ. ಈ ಆಘಾತದಿಂದ ನೊಂದಿರುವ ಮಹಿಳೆ ಈ ಘಟನೆಯಿಂದ ಹೊರಬರಲು ದಿನಗಳೇ ಬೇಕಾಯಿತು. ಶಾಂತಿಯ ಮನೆಯೊಳಗೆ ನುಗ್ಗಿ ಆಕೆಯನ್ನು 9 ದಿನ ನಿರಂತರವಾಗಿ ಅತ್ಯಾಚಾರ ಗೈದಿದ್ದಾರೆ ಎಂದರೆ ಆಕೆ ತನ್ನೊಳಗೆ ಅದೆಷ್ಟು ನೋವು
ನರಕಯಾತನೆಗೆ ಅನುಭವಿಸಿರಬೇಕು ಹೇಳಿ.

ಫೆಬ್ರವರಿ 25 ರಂದ ಮಾರ್ಚ್ 6ರವರೆಗೆ ನಡೆದ ನಿರಂತರ ಅತ್ಯಾಚಾರ ಆಕೆಯ ಮನೆಯೊಳಗೆ ನಡೆದಿದ್ದೇ ಒಂದು ರೋಚಕ ಸಂಗತಿ. ” ಫೆಬ್ರವರಿ 2ನೇ ದಿನ ತನ್ನ ಮನೆ ಹಳ್ಳಿಯಿಂದ ಹೊರಪ್ರದೇಶದಲ್ಲಿದೆ, ಹಾಗಾಗಿ ನಾನು ರಾತ್ರಿ ಗರ್ಡೊಲ್ಲಿ ರಸ್ತೆಯಲ್ಲಿ ಬಸ್ಸಿಗಾಗಿ ನಿಂತ ಸಂದರ್ಭದಲ್ಲಿ ಫಯಾಜ್ ಎನ್ನುವಾತ ಬೈಕ್‍ನಲ್ಲಿ ನನ್ನ ಬಳಿ ಬಂದು ಮನೆಗೆ ಕರೆದೊಯ್ದು ಬಿಡುವುದಾಗಿ ಹೇಳಿದ. ತದನಂತರದಲ್ಲಿ ನನ್ನ ಮನೆಯವರೆಗೆ ಬಿಟ್ಟದ್ದಲ್ಲದೇ ಈತ ನನ್ನನ್ನು ಹಿಂಬಾಲಿಸಿ ಮನೆಗೆ ಬಂಧಿದ್ದ. ನನಗೆ ಆತ ನನ್ನನ್ನು ಹಿಂಬಾಲಿಸಿ ಮನೆಗೆ ಬಂದಾಗ ನಾನು ಹೆದರಿ ಬಾಗಿಲನ್ನು ಹಾಕಿದೆ. ಆತ ಮನೆಯ ಬಾಗಿಲನ್ನು ಒಡೆದು ಮನೆಗೆ ಪ್ರವೇಶಿಸಿದ್ದಾನೆ” ಎಂದು ಶಾಂತಿ ಹೇಳಿದ್ದಾರೆ.

“ತನ್ನ ಮಕ್ಕಳು ತನ್ನ ಅಣ್ಣನ ಮನೆಯಲ್ಲಿ ಇದ್ದು, ಕಾಮುಕರು ತನ್ನ ಬಾಯಿಗೆ ಮಾದಕದ್ರವ್ಯ ಸೇರಿಸಿದ ಕೇಕ್‍ನ್ನು ಬಾಯಿಗೆ ತುರುಕಿದ್ದಲ್ಲದೇ ತಿನ್ನು ಎಂದು ಬಲವಂತ ಪಡಿಸಿದ್ದರು. ಮನೆಯೊಳಗೆ ಬರುತ್ತಿದ್ದ ವ್ಯಕ್ತಿಗಳು ಚಾಕು ಹಿಡಿದು ತನ್ನ ಕುತ್ತಿಗೆ ತುಂಡರಿಸುವುದಾಗಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ” ಎಂದು ಶಾಂತಿ ಹೇಳಿದ್ದಾರೆ. “ತನಗೆ ಆದ ದೌರ್ಜನ್ಯವನ್ನು ತಡೆಯಲು ನನ್ನಲ್ಲಿ ಯಾವುದೇ ರೀತಿಯ ಶಕ್ತಿ ಇರಲಿಲ್ಲ. ನನ್ನನ್ನು ಕಾಪಾಡಿಕೊಳ್ಳಲು ಕಿರುಚಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಮಾರ್ಚ್ 6ರ ಮಧ್ಯಾಹ್ನದಂದು 2 ವ್ಯಕ್ತಿಗಳು ತಮ್ಮ ಮನೆಯೊಳಗೆ ಪ್ರವೇಶಿಸಿದ್ದು, ನಾನು ಸಹಾಯಕ್ಕಾಗಿ ಜೋರಾಗಿ ಕಿರುಚಿದೆ. ಇದನ್ನು ಕೇಳಿದ ಸ್ಥಳೀಯರು ಬಂದು ಆಕೆಗೆ ಕಾಪಾಡಿದ್ದಲ್ಲದೇ, ಆ 2 ವ್ಯಕ್ತಿಗಳನ್ನು ಚೆನ್ನಾಗಿ ಥಳಿಸಿದ್ದಾರೆ” ಎಂದಿದ್ದಾರೆ.

ಅತ್ಯಚಾರ ಎಸಗಿದವರನ್ನು ಆರೋಪಿಗಳು ಫಯಾಜ್ ಮೈಸೂರ್ವಾಲೆ(23), ಹರೋನ್ ಸರ್ಕವಸ್(22), ಸಾದಿಕ್ ಖಾನ್(25), ಅಲಿಫ್ ಸೈದ್(22), ಜಮೀಲ್
ದೇಸಾಯಿ(26), ಇಲ್ಲಿಯಾಸ್ ಅನ್ಕೊಲೆಕರ್(22),ನಸ್ರೊಲ್ಲಹ್(23), ಸಾದಿಕ್ ಬಾಗೇವಾಡಿ ಮತ್ತು ನಿಯಾಸ್ ಎಂದು ಸಾಬೀತಾಗಿದೆ.

ವೈದ್ಯಕೀಯ ವರದಿಯ ಪ್ರಕಾರ ಲೈಗಿಂಕ ದೌರ್ಜನ್ಯ ನಡೆಸಿರುವುದು ಸಾಬೀತಾಗಿದ್ದು, ಎಲ್ಲಾ ಆರೋಪಿಗಳನ್ನು ಐಪಿಸಿ ಸೆಕ್ಸನ್ 376ಡಿ (ಸರಣಿ ಅತ್ಯಚಾರ),
354ಎ(ದೈಹಿಕ ದೌರ್ಜನ್ಯ), 448( ಮನೆ ಅತಿಕ್ರಮ), 506(ಕೊಲೆ ಬೆದರಿಕೆ) ಮತ್ತು 34(ಸಾಮಾನ್ಯ ಉದ್ದೇಶ) ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹಳಿಯಾಲ್ ಪೋಲಿಸರು ತಿಳಿಸಿದ್ದಾರೆ.

9 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ ಕಾಮುಕರನ್ನು ಬಂಧಿಸುವಲ್ಲಿ ಪೋಲಿಸರು ಸಫಲರಾಗಿದ್ದಾರೆ. ಆದರೆ ಇಂತಹ ದುರ್ಘಟನೆ ಕರ್ನಾಟಕದಲ್ಲಿ
ನಡೆದರು ಕೂಡ ಯಾವುದೇ ರೀತಿಯ ಸುದ್ದಿಯಾಗದೇ ಉಳಿದಿರುವುದು ಮಾತ್ರ ವಿಪರ್ಯಾಸ. ದೆಹಲಿಯಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣ ಸಾಕಷ್ಟು ಸುದ್ದಿ
ಮಾಡಿತ್ತಲ್ಲದೇ, ಸುದ್ದಿ ಮಾಧ್ಯಮಗಳು ಸುದ್ದಿಗಳನ್ನು ಬಿತ್ತರಿಸಿದ್ದರೂ ಕೂಡ. ಅಲ್ಲದೇ ಅದೆಷ್ಟೋ ಸಂಘಟನೆಗಳು ಪ್ರತಿಭಟನೆಯನ್ನೂ ಮಾಡಿ, ಮುಷ್ಕರವನ್ನು ಹೂಡಿತ್ತು. ಆದರೆ ಕರ್ನಾಟಕದಲ್ಲಿ ನಡೆದ ಈ ದುಷ್ಕøತ್ಯ ಸುದ್ದಿಯಾಗದೇ ಇರುವುದು ಮಾತ್ರ ಬೇಸರದ ಸಂಗತಿ.

– ಸರಿತಾ

Tags

Related Articles

Close