ಪ್ರಚಲಿತ

ಮಾನ ಇಲ್ಲದವನಿಂದ ಮಾನನಷ್ಟ ಮೊಕದ್ದಮೆ ದಾಖಲು…!

ತನ್ನ ಮೊದಲನೇ ಹೆಂಡತಿ ಮಗು ಸತ್ತಾಗ ಕಣ್ಣೀರನ್ನೇ ಸುರಿಸದೆ, ಮುಂಬೈನ ಕೊರಿಯೋಗ್ರಾಫರ್ `ಪೋನಿ ವರ್ಮಾಳ ಜೊತೆ ಓಡಿದ ಸ್ವಘೋಷಿತ ನಟಭಯಂಕರ ಪ್ರಕಾಶ್ ರೈ  ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದಾರೆ..

ಭಲೇ ಭೇಷ್….

ಮಗನನ್ನು ಕಳೆದುಕೊಂಡ ಬಗ್ಗೆ ಕಣ್ಣೀರು ಹಾಕದೆ ಮೊದಲ ಹೆಂಡತಿಗೆ ಕೈಕೊಟ್ಟ ಬಗ್ಗೆ ಒಂದಕ್ಷರವನ್ನೂ ಉಸುರದ ಪ್ರಕಾಶ್ ರೈ ಸಂಸದ ಸಿಂಹರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದಾಗ ಜೋರು ನಗು ಬರುತ್ತದೆ. ಪ್ರಕಾಶ್ ರೈ ನಿಜವಾಗಿಯೂ ತಾಖತ್ ಇದ್ದಿದ್ದರೆ ತನ್ನ ಮಗನನ್ನು ಕಳೆದುಕೊಂಡ ಹೆಂಡತಿಯನ್ನು ಸಂತೈಸಿ, ಆಕೆಗೆ ಧೈರ್ಯ ಹೇಳುತ್ತಿದ್ದರು. ಆದರೆ ತಾನೊಬ್ಬ ಮನುಷ್ಯನೆಂಬುವುದನ್ನೇ ಮರೆತು ಸೌಂದರ್ಯದ ಹಿಂದೆ ಓಡಿದ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ಹಾಕುವಷ್ಟು ನೈತಿಕತೆ ಇದೆಯಾ? ತನಗೆ ನೋವಾಗುತ್ತದೆ ಎಂದು ಮಾನನಷ್ಟು ಹೂಡಿದ ರೈಗೆ ತನ್ನ ಮೊದಲ ಹೆಂಡತಿ ತನ್ನ ಮಗನನ್ನು ಕಳೆದುಕೊಂಡು ಅತ್ತ ಕೈಹಿಡಿದ ಗಂಡನೂ ಕೈಕೊಟ್ಟನೆಂದು ಕಣ್ಣೀರು ಸುರಿಸುವಾಗ ಎಲ್ಲಿಗೆ ಹೋಗಿತ್ತು ಮಾನ?

ಗ್ರೇಟ್ ವೆರಿ ಗ್ರೇಟ್… ಯಾಕೆ ಗೊತ್ತೆ… ಮಾನವೇ ಇಲ್ಲದ ವ್ಯಕ್ತಿಯಿಂದ ಮಾನ ನಷ್ಟ ಮೊಕದ್ದಮೆ…. ಮಾನನಷ್ಟ ಹೂಡುವುದಾಗಿ ಬ್ಲ್ಯಾಕ್‍ಮೇಲ್ ಮಾಡಿ ಬೆದರಿಸುವ ಪ್ರಕಾಶ್ ರೈ ತಾನ್ಯಾಕೆ ಮಗ ಸತ್ತಾಗಲೂ ಹೆಂಡತಿಗೆ ಕೈಕೊಟ್ಟು ಬೇರೊಬ್ಬಳ ಹಿಂದೆ ಓಡಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ… ಈ ತಾಖತ್ ನಿಜವಾಗಿಯೂ ರೈಗೆ ಇದೆಯಾ? ತಾನೊಬ್ಬ ದೊಡ್ಡ ಸೊಬಗನಂತೆ ಪೋಸು ಕೊಡುತ್ತಿರುವ ರೈ ತನ್ನ ಹಿಂದಿನ ಬಂಡವಾಳ ಬಯಲಾಗಬಾರದೆಂದು ಇಷ್ಟೆಲ್ಲಾ ನಾಟಕ ಆಡಬಾರದಿತ್ತು… ಹ್ಹಹ್ಹ ಸಾರಿ ಪ್ರಕಾಶ್!!!

ತಾನು ಪ್ರತಿಭಟನೆಯ ಅಂಗವಾಗಿ ಒಬ್ಬ ದೇಶದ ಪ್ರಜೆಯಾಗಿ ಸಂಸದ ಪ್ರತಾಪ್ ಸಿಂಹಗೆ ಕಾನೂನಿನ ನೋಟೀಸ್ ಕಳಿಸಿದ್ದೇನೆ… ನಿಗದಿತ ಸಮಯದಲ್ಲಿ ಉತ್ತರಿಸದೇ ಇದ್ದರೆ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದೇನೆ ಎಂದಿದ್ದೀರಿ.. ಅದು ಬಿಟ್ಟು ತನ್ನ ಮೇಲೆ ಬಂದಿರುವ ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡಬಹುದಿತ್ತಲ್ಲವೇ?

ಮೋದಿ ಒಬ್ಬ ಬಿಜೆಪಿ ನಾಯಕ ಅಂತ ಪ್ರಶ್ನೆ ಮಾಡಿಲ್ಲ… ದೇಶದ ಪ್ರಧಾನಿ ಎಂದು ಪ್ರಶ್ನೆ ಮಾಡಿದ್ದೀನಿ ಎಂದು ಹೇಳುವ ನೀವು ಯಾವ ಪ್ರಶ್ನೆ ಕೇಳಿದ್ದಿರಿ ಸ್ವಾಮಿ?

ಗೌರಿ ಲಂಕೇಶ್ ಕೊಲೆ ನಡೆದ ಬಗ್ಗೆ ಮೋದಿ ಮಾತಾಡಬೇಕು ಅಂದಿರಿ… ಅಲ್ಲಾ ಸ್ವಾಮಿ ಗೌರಿ ಲಂಕೇಶ್ ಹತ್ಯೆಯ ಪ್ರಕರಣವನ್ನು ರಾಜ್ಯ ಸರಕಾರವೇ ತನಿಖೆಗೆ ನೀಡಿದ್ದು ಇನ್ನೂ ಕೊಲೆಗಾರರು ಯಾರೆಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆಕ್ಚುವಲಿ ನೀವು ಈ ಪ್ರಶ್ನೆ ಯಾರಲ್ಲಿ ಕೇಳಬೇಕಿತ್ತು ಗೊತ್ತೇನು? ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ರಾಮಲಿಂಗ ರೆಡ್ಡಿಯವರಲ್ಲಿ.. ಅವರಿಬ್ಬರ ಜೊತೆ ವೇದಿಕೆ ಹಂಚಿಕೊಂಡಾಗಲೂ ನೀವ್ಯಾಕೆ ಪ್ರಶ್ನೆ ಕೇಳಿಲ್ಲ?

ನೀವೆಂಥಾ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ ಎಂದು ಸಂಸದ ಸಿಂಹರ ಕ್ಷೇತ್ರದ ಜನರಲ್ಲಿ ಕೇಳುವ ನೀವು, ತಾನೆಂಥೆಹಾ ಪ್ರಶ್ನೆಗಳನ್ನು ಕೇಳಿದ್ದೆ ಎಂದು ಯಾಕೆ ಆತ್ಮವಲೋಕನ ಮಾಡಿಲ್ಲ? ನೀವು ಯಾರ ವಿರುದ್ಧ ಬೇಕಾದರೂ ಹೋರಾಟ ನಡೆಸಿ ಅದು ನಿಮ್ಮ ಸಾಂವಿಧಾನಿಕ ಹಕ್ಕು ಕೂಡಾ.. ಆದರೆ ವಿವೇಚನಾರಹಿತರಾಗಿ ಪ್ರಶ್ನೆ ಮಾಡುವುದನ್ನು ನಿಲ್ಲಿಸಿ. ನೀವೊಬ್ಬ ನಟ, ಸಮಾಜದ ಜವಾಬ್ದಾರಿಯುತ ವ್ಯಕ್ತಿ. ನೀವು ತಪ್ಪು ಮಾಡಿದ್ರೆ ನಿಮ್ಮನ್ನು ಪ್ರಶ್ನಿಸುವ ಸಾಂವಿಧಾನಿಕ ಹಕ್ಕು ನಮಗೂ ಇದೆ, ಸಂಸದ ಸಿಂಹರಿಗೂ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದರಿಂದ ನಿಮ್ಮನ್ನು ಜಾಲತಾಣಗಳಲ್ಲಿ ಟ್ರೋಲ್ ಮಾಡುವುದರಲ್ಲಿ ಯಾವುದೂ ತಪ್ಪಿಲ್ಲ ಬಿಡಿ… ಆದರೆ ನಿಮಗೆ ನಿಮ್ಮ ಬಗ್ಗೆ ಬರುವ ಟೀಕೆಗಳನ್ನು ಕೇಳಿ ಸಹಿಸದಾಗಿ ಸುಖಾಸುಮ್ನೆ ಪ್ರತಾಪ್ ಸಿಂಹರ ಮೇಲೆ ಮುಯ್ಯಿ ತೀರಿಸುತ್ತಿದ್ದೀರಿ ಅಷ್ಟೆ.. ನಿಮ್ಮ ಗೊಡ್ಡು ಬೆದರಿಕೆಯಿಂದ ಸಿಂಹರನ್ನು ಅಲ್ಲಾಡಿಸಲು ನಿಮ್ಮಿಂದ ಸಾಧ್ಯವಿಲ್ಲ ನೆನಪಿಡಿ..

ನಾನು ಹೋರಾಟ ಮಾಡ್ತೀನಿ ಎಂದು ಘಂಟಾಘೋಷವಾಗಿ ಹೇಳುವ ನಿಮ್ಮನ್ನು ಹೋರಾಡಬೇಡಿ ಎಂದು ಯಾರು ಹೇಳಿದ್ದಾರೆ? ಆದರೆ ಬಿಜೆಪಿ ಪಾರ್ಟಿ ವಿರುದ್ಧ ಹೋರಾಡೋಲ್ಲ ಎಂದಿದ್ದೀರಿ… ನೀವು ಬಿಜೆಪಿ ವಿರುದ್ಧ ಹೋರಾಡ್ತೀರೋ, ಕಾಂಗ್ರೆಸ್ ವಿರುದ್ಧ ಹೋರಾಡ್ತೀರೋ ಅದು ನಿಮಗೆ ಬಿಟ್ಟಿದ್ದು, ಆದರೆ ನೀವು ಇದುವರೆಗೆ ಯಾವುದಕ್ಕೆ ಹೋರಾಡಬೇಕಿತ್ತೋ ಅದಕ್ಕೆಲ್ಲಾ ಹೋರಾಡೋ ಬದಲು ನಿಮ್ಮ ಸಿದ್ಧಾಂತಕ್ಕೆ ಕಟ್ಟುಬಿಟ್ಟು ಮೋದಿ., ಯೋಗಿಯನ್ನು ಎಳೆತಂದಿದ್ದೇ ಹೆಚ್ಚು. ಬೇಕಾದರೆ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಸ್ವಾಮಿ.

ಇಂದು ನಮ್ಮ ದೇಶದಲ್ಲಿ ಟ್ರೋಲ್ ಮಾಡುವುದು ಗೂಂಡಾಗಿರಿ ಎನ್ನುವುದನ್ನು ಅದ್ಯಾವ ಬಾಯಿಯಿಂದ ವ್ಯಾಖ್ಯಾನಿಸುತ್ತೀರಿ ಸ್ವಾಮಿ? ಹಾಗಾದರೆ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರ್ಬಾರ್ದು ಅಂತೀರಾ? ಅಷ್ಟಕ್ಕೂ ಟ್ರೋಲ್ ಮಾಡೋದನ್ನು ನೀವ್ಯಾಕೆ ಗೂಂಡಾಗಿರಿ ಎನ್ನುತ್ತೀರಿ? ನೀವು ಮಾಡುವುದನ್ನು ಕೇಳಿ ಜನರೆಲ್ಲಾ ಸುಮ್ನೆ ಇರಬೇಕಿತ್ತು, ನೀವು ಹೇಳಿದ್ದೇ ಸರಿ ಎಂದು ನಿಮಗೇ ಓಟು ಹಾಕ್ಬೇಕಿತ್ತೇ? ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಮಾತಡಿದ್ದೇನೆ ಎನ್ನುವ ನೀವು ನಿಮ್ಮ ಬಗ್ಗೆ ಟ್ರೋಲ್ ಮಾಡುವ ಜನರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎನ್ನುವುದನ್ನು ಯಾಕೆ ಅರ್ಥೈಸುತ್ತಿಲ್ಲ? ನೀವು ಕೇಳಿದ ಪ್ರಶ್ನೆ ನೆಟ್ಟಗಿದ್ದಿದ್ದರೆ ಜನರು ನಿಮ್ಮನ್ನು ಯಾಕೆ ಪ್ರಶ್ನಿಸುತ್ತಿದ್ದರು? ಇದೊಳ್ಳೆ ಕಥೆ ಆಯ್ತಲ್ಲಾ ಸ್ವಾಮೀ…

ನೀವು ತನ್ನ ಅನಿಸಿಕೆ, ಆತಂಕ, ಕೋಪ ನೋವನ್ನು ವ್ಯಕ್ತಪಡಿಸೋ ಹಕ್ಕಿಲ್ಲ ಎಂದು ಯಾವ ಬಾಯಿಯಿಂದ ಹೇಳಿದಿರಿ ಸ್ವಾಮಿ? ಹಾಗೆ ನಿಮಗೆ ಯಾರು ಹೇಳಿದ್ರು? ನಿಮ್ಮ ಮಗನ ಸಾವಿನ ವಿಚಾರದಲ್ಲಿ ಟ್ರೋಲ್ ಮಾಡಿದ್ದೀರಿ ಎಂದು ಹೇಳುವ ನೀವು ಹಾಗಾದರೆ ನೀವು ದುಃಖದಲ್ಲಿರೋ ಹೆಂಡತಿಗೆ ಕೈ ಕೊಟ್ಟು ಪಲಾಯನ ಮಾಡಿದ್ದನ್ನು ನೋಡಿ ಹಾರ ಹಾಕಿ ಸನ್ಮಾನಿಸಬೇಕಿತ್ತೇ? ಅಥವಾ ಪ್ರಶಸ್ತಿ ಕೊಡಬೇಕಿತ್ತೇ? ಪ್ರತಾಪ್ ಸಿಂಹರನ್ನು ಚುನಾಯಿಸಿದ ಯುವಕರ, ನಿಮ್ಮ ಕ್ಷೇತ್ರದ ಹೆಣ್ಣುಮಕ್ಕಳ ಬಗ್ಗೆ ನೋವಾಗುತ್ತಿದೆ ಅವರಿಗೆಲ್ಲಾ ಉತ್ತರ ಕೊಡಿ ಎನ್ನುವ ನೀಡುವ ಮೊದಲು ನಿಮ್ಮ ದುಃಖದಲ್ಲಿರುವ ಹೆಂಡತಿಯನ್ನು ಬಿಟ್ಟು ಓಡಿ ಹೋಗಿದ್ದು ಯಾಕೆ ಎನ್ನುವುದನ್ನು ಎನ್ನುವುದಕ್ಕೆ ಉತ್ತರ ಕೊಡಿ…

ಸಮಾಜವನ್ನು ಅಸಭ್ಯ, ಅಸಹ್ಯವಾಗಿ ಮಾತಾಡುತ್ತಾ ಸಮಾಜದ ಆರೋಗ್ಯವನ್ನು ಹಾಳು ಮಾಡಬೇಡಿ ಎಂದು ಹೇಳುವ ನೀವು ಮೊದಲು ಯಾವ ರೀತಿ ಮಾತಾಡಿದ್ದಿರಿ ಎನ್ನುವುದನ್ನು ಕೊಂಚ ನೆನಪಿಸಿ… ನಿಮಗೆ ನೆನಪಾಗದಿದ್ದರೆ ನಾನೇ ಸಂಕ್ಷಿಪ್ತವಾಗಿ ನೆನಪಿಸುತ್ತೇನೆ…

ಉತ್ತರ ಪ್ರದೇಶ ಮುಖ್ಯಮಂತ್ರಿಗಳ ವೀಡಿಯೋ ನೋಡಿದಾಗ ಅವರು ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗಲಿಲ್ಲ. ನನಗೆ ಸಿಕ್ಕ 5 ರಾಷ್ಟ್ರ ಪ್ರಶಸ್ತಿಗಳನ್ನೆಲ್ಲಾ ಕೊಡೋಣ ಅನ್ನಿಸಿತು… ಎಂದಿದ್ದಿರಿ. ಒಬ್ಬನ ವೇಷಭೂಷಣವನ್ನು ಕಂಡು ಲೆಕ್ಕಾಚಾರ ಮಾಡಿದ್ದ ನಿಮ್ಮನ್ನು ಬೆಂಬಲಿಸಬೇಕಿತ್ತೇ? ಕಾವೇರಿ ವಿಚಾರದಲ್ಲಿ ಪ್ರಶ್ನೆ ಕೇಳಿದ್ದ ಆಂಕರನ್ನೇ ಯದ್ವಾತದ್ವಾ ಬೈದಿದ್ದ ನೀವು ತಮಿಳು ರೈತರ ಪರ ಕೂತಾಗ ನಿಮಗೆ ಹಾರ ಹಾಕಬೇಕಿತ್ತೇ? ಹಿಂದೂಗಳ ಹತ್ಯೆಯಾದಾಗ ಸೊಲ್ಲೆತ್ತದ ನಿಮ್ಮನ್ನು ಹೊಗಳಬೇಕಿತ್ತೇ? ದೇಶದಲ್ಲಿ ಭಯೋತ್ಪಾದನಾ ಕೃತ್ಯವೆಸಗುತ್ತಿರುವ ಪಿಎಫ್‍ಐ ಸಂಘಟನೆಯ ಅಂಗಸಂಸ್ಥೆ ಡಿವೈಎಫ್‍ಐ ಜೊತೆ ಹೆಜ್ಜೆ ಹಾಕಿದಾಗ ನಿಮ್ಮನ್ನು ಶ್ಲಾಘಿಸಬೇಕಿತ್ತೇ? ಮೊನ್ನೆ ವೈದ್ಯರ ಪ್ರತಿಭಟನೆ ನಡೆದಾಗ ಬರೋಬ್ಬರಿ 80 ಕ್ಕೂ ಅಧಿಕ ಮಂದಿ ರೋಗಿಗಳು ಔಷಧಿ ಸಿಗದೆ ಸತ್ತಾಗ ನೀವ್ಯಾಕೆ ಒಂದಕ್ಷರವನ್ನೂ ಎತ್ತಿಲ್ಲ?

ಅಷ್ಟಕ್ಕೂ ನಿಮಗೆ ಪ್ರತಾಪ್ ಸಿಂಹನೇ ಯಾಕೆ ಟಾರ್ಗೆಟ್?

ಉತ್ತರ ಸಿಂಪಲ್.. ಪ್ರತಾಪ್ ಸಿಂಹ ನಿಮ್ಮ ಬಂಡವಾಳವನ್ನು ಒಂದೊಂದಾಗಿಯೇ ಬಯಲಿಗೆಳೆದಿದ್ದಾರೆ. ಅಲ್ಲದೆ ಪ್ರತಾಪ್ ರಾಜ್ಯದಲ್ಲಿ ಬೆಳೆಯುತ್ತಿರುವ ಯುವ ಬಿಜೆಪಿ ಮುಖಂಡ. ದೇಶದ ಬಗ್ಗೆ ಸ್ಪಷ್ಟವಾದ ಒಂದು ಕನಸಿದೆ, ಮೋದಿಯವರ ಯೋಚನೆಯನ್ನೇ ಹೊಂದಿರುವ ಅವರು ಮೋದಿಯ ಪ್ರತಿಯೊಂದು ಯೋಜನೆಗಳನ್ನೇ ಅರ್ಥ ಮಾಡಿಕೊಂಡಿದ್ದಾರೆ. ಜೊತೆಗೆ ಮೋದಿ ಎಂತಹಾ ಮನುಷ್ಯನೆಂದು ಸಮಾಜದ ಮುಂದೆ ಮೊದಲು ತಿಳಿಸಿದ ವ್ಯಕ್ತಿ ಪ್ರತಾಪ್ ಸಿಂಹ.

ಇಂಥಾ ಬೆಳೆಯುತ್ತಿರುವ ವ್ಯಕ್ತಿಯನ್ನು ಕಂಡು ಪ್ರಕಾಶನಂತಹಾ ಬುದ್ಧಿಜೀವಿಗಳಿಗೆ ಸಹಿಸಲಾಗುತ್ತಿಲ್ಲ… ಗುಜರಾತ್‍ನಲ್ಲೂ ಆದದ್ದೂ ಕೂಡಾ ಅದೇ.. ಕಾಂಗ್ರೆಸಿಗರ ಬಂಡವಾಳವನ್ನು ಒಂದೊಂದಾಗಿಯೇ ಬಯಲು ಮಾಡುತ್ತಿದ್ದ ನರೇಂದ್ರ ಮೋದಿ ಹಾಗೂ ಅಮಿತ್ ಶಾನಂತಹಾ ನಾಯಕರನ್ನು ಮುಗಿಸಲು ಕಾಂಗ್ರೆಸ್ ಏನೆಲ್ಲಾ ಮಾಡಿತ್ತು ನೋಡಿ… ಈಗ ಅದೇ ಪ್ರಯತ್ನವನ್ನೂ ಕರ್ನಾಟಕದಲ್ಲೂ ಮಾಡಲಾಗುತ್ತದೆ…

ಪ್ರತಾಪ್ ಸಿಂಹರಿಗೆ ಮಾನನಷ್ಟ ಮೊಕದ್ದಮೆ ಹಾಕುವಂಥದ್ದು ಏನಿದೆ? ಪ್ರತಾಪ್ ತಾನು ಏನನ್ನು ಟ್ವೀಟ್ ಮಾಡಿದ್ದರೋ ಅದು ತನ್ನ ಸ್ವಂತ ಹೇಳಿಕೆಯನ್ನಲ್ಲ. ರಿಟ್ವೀಟ್ ಮಾಡಿದ್ದನ್ನೂ ಪ್ರತಾಪರ ಮೇಲೆ ಹಾಕುವ ರೈ ಅವರು ನಿಜವಾಗಿಯೂ ಸಿಂಹರನ್ನು ಟಾರ್ಗೆಟ್ ಮಾಡಿದ್ದಾರೆ. ಕಾವೇರಿ ಗಲಾಟೆ ನಡೆದ ಸಂದರ್ಭ ಆಂಕರ್‍ನನ್ನು ದಬಾಯಿಸಿದ್ದ ಪ್ರಕಾಶ್ ರೈಯನ್ನು ಪ್ರತಾಪ್ ತಮಿಳು ರೈತರ ಪರ ಬೆಂಬಲಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯಾದ ಸಂದರ್ಭ ಮೋದಿಯನ್ನು ಪ್ರಶ್ನಿಸಿದ್ದ ಪ್ರಕಾಶರನ್ನು ಪ್ರಶ್ನಿಸಿದ್ದ ಪ್ರತಾಪ್ ಕರ್ನಾಟಕ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ್ದರು. ಪ್ರಕಾಶ್ ರೈ ಅವರ ಹೆಂಡತಿಯ ಬಗ್ಗೆ ಪ್ರತಾಪ್ ಪ್ರಶ್ನಿಸಿದ್ದೇ ಇಲ್ಲ.

ಪ್ರಕಾಶ್ ರೈಗೆ ನಿಜವಾಗಿಯೂ ತಾಖತ್ ಇದ್ದರೆ ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿ. ಯಾಕೆಂದರೆ ಪ್ರತಾಪ್ ಅವರು ಟ್ವೀಟ್ ಮಾಡಿದ್ದು ಅದರಲ್ಲಿ ಬಂದಿರುವ ಲೇಖನಕ್ಕೆ. ಈ ಪೋಸ್ಟನ್ನು ಪ್ರತಾಪ್ ಟ್ವೀಟ್ ಮಾಡುತ್ತಿದ್ದಂತೆ ಹಲವಾರು ಜನರು ರಿಟ್ವೀಟ್ ಮಾಡಿದ್ದಲ್ಲದೇ ರಿ ಪೋಸ್ಟ್ ಮಾಡಿದ್ದರು.  ಪ್ರಕಾಶ್ ರೈಯವರ ಬಂಡವಾಳವನ್ನು ಬಯಲು ಮಾಡುತ್ತಿರುವುದನ್ನು ಸಹಿಸಲಾಗದೆ, ಅದಕ್ಕೆ ಸೂಕ್ತವಾಗಿ ಉತ್ತರಿಸಲಾಗದ ಪ್ರಕಾಶ್ ರೈ ತನ್ನ ಕೋಪವನ್ನು ಪ್ರತಾಪ್ ಸಿಂಹರ ಮೇಲೆ ತೋರಿಸಿದ್ದಾರೆ. ಇದಕ್ಕೆಲ್ಲಾ ಪ್ರತಾಪ್ ಸಿಂಹ ಯಾಕೆ ಉತ್ತರಿಸಬೇಕು? ಇದಕ್ಕೆ ಪ್ರತಾಪ್ ಯಾಕೆ ಜವಾಬ್ದಾರರಾಗುತ್ತಾರೆ? ಇದೆಲ್ಲಾ ಪ್ರತಾಪ್ ಸಿಂಹರದ್ದು ವೈಯಕ್ತಿಕ ಅಭಿಪ್ರಾಯವಲ್ಲ ಎಂದು ಯಾಕೆ ಪ್ರಕಾಶ್ ರೈ ಅರ್ಥ ಮಾಡಿಕೊಂಡಿಲ್ಲ?

ಪ್ರಕಾಶ್ ರೈಗೆ ತಾಖತ್ ಇದ್ದರೆ ಆ ಲೇಖನದಲ್ಲಿ ಬಂದಿರುವ ವಿಚಾರ ಸತ್ಯವೋ ಸುಳ್ಳೋ ಎನ್ನುವ ವಿಚಾರವನ್ನು ಬಹಿರಂಗಗೊಳಿಸಲಿ. ತನ್ನ ಮಗನ ಸಾವಿನ ಚಿಂತೆಯಲ್ಲಿದ್ದ ಹೆಂಡತಿಗೆ ಕೈಕೊಟ್ಟದ್ದು ಹೌದೋ ಇಲ್ಲವೋ ಎನ್ನುವುದನ್ನು ಬಹಿರಂಗಗೊಳಿಸಲಿ. ಲೇಖನದಲ್ಲಿ ಬಂದಿರುವ ವಿಚಾರ ಸುಳ್ಳಾಗಿದ್ದರೆ ಪ್ರಕರಣ ದಾಖಲಿಸಲಿ. ಆದರೆ ಅದು ಬಿಟ್ಟು ಬಿಟ್ಟಿ ಪ್ರಚಾರಕ್ಕಾಗಿ ಪ್ರತಾಪ್ ಸಿಂಹ ಅವರ ಮೇಲೆ ಎಗರಿಬೀಳುವುದು ಸರಿಯಲ್ಲ..

source:http://publictv.in/actor-prakash-rai-files-defamation-case-against-mp-pratap-simha-for-trolling-his-personal-life/

-ಚೇಕಿತಾನ

Tags

Related Articles

Close