ಅಂಕಣದೇಶಪ್ರಚಲಿತ

ಮಾಲೆಗಾಂವ್ ಸ್ಫೋಟ! ಸುಪ್ರೀಮ್ ಕೋರ್ಟ್ ನೀಡಲಿದೆಯೇ ಕಾಲೊನೆಲ್ ಪುರೋಹಿತ್ ಗೆ ಜಾಮೀನು?!

2008 ರ ಮಾಲೇಗಾಂವ್ ಸ್ಫೋಟದಲ್ಲಿ ಭಾಗಿಯಾಗಿದ್ದರೆಂದು ಆರೋಪಿಸಿ ಕಾಲೊನೆಲ್ ಪುರೋಹಿತ್ ರನ್ನು ಜೈಲಿಗಟ್ಟಿದ್ದ ಕಾಂಗ್ರೆಸ್ ‘ಕೇಸರೀ ಭಯೋತ್ಪಾದನೆ’ ಯೆಂಬ ಹೊಸ ಸಿದ್ಧಾಂತಕ್ಕೆ ನಾಂದಿ ಹಾಡಿತ್ತು.

ಜಾಮೀನು ನೀಡುವಂತೆ ಆಗ್ರಹಿಸಿದ ಪುರೋಹಿತ್ ರವರ ಜಾಮೀನು ಮನವಿಯನ್ನು ಇವತ್ತು ಸುಪ್ರೀಮ್ ನ್ಯಾಯಾಲಯ ಕೇಳಲಿದ್ದು, ಅದಕ್ಕೆ ರಾಷ್ಟ್ರೀಯ ತನಿಖಾ ದಳ ವಿರೋಧ ವ್ಯಕ್ತಪಡಿಸಿದೆ.

ಡಾ.ಸುಬ್ರಹ್ಮಣಿಯನ್ ಸ್ವಾಮಿ ವಿರೋಧಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದು ‘ ಪುರೋಹಿತ್ ರವರ ಬಂಧನ ರಾಜಕೀಯ ಪಿತೂರಿ’ ಎಂದು ಹೇಳಿದ್ದಾರೆ.

ಮುಂಬೈ ಉಚ್ಛ ನ್ಯಾಯಾಲಯ ಈ ಹಿಂದೆ ಪುರೋಹಿತ್ ರವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ,ಪುರೋಹಿತ್ ಸುಪ್ರೀಮ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿಂದೆ ಸಾಧ್ವಿ ಪ್ರಗ್ಯಾ ಸಿಂಗ್ ರಿಗೂ ಜಾಮೀನು ನೀಡಲು ನಿರಾಕರಿಸಿದ್ದ ಮುಂಬೈ ನ್ಯಾಯಾಲಯ ತದನಂತರ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜಾಮೀನು ನೀಡಿತ್ತು.

ರಾಷ್ಟ್ರೀಯ ತನಿಖಾ ದಳ ಪುರೋಹಿತ್ ರವರ ಜಾಮೀನು ಅರ್ಜಿಯ ವಿರುದ್ಧ ಪ್ರತಿಕ್ರಿಯಿಸಿದ್ದು, ‘ಪುರೋಹಿತ್ ವಿರುದ್ಧವಾಗಿಯೇ ಮುಖ್ಯ ಸಾಕ್ಷಿಗಳಿರುವ ಕಾರಣ ಜಾಮೀನಿನ ಅವಕಾಶ ನೀಡಬಾರದು. ಪ್ರಗ್ಯಾ ವಿಷಯದಲ್ಲಿ ಯಾವುದೇ ಕಾರಣಗಳಿರಲಿಲ್ಲ.’ ಎಂದು ಹೇಳಿದೆ.

ಮಾಲೆಗಾಂವ್ ಸ್ಫೋಟ!

ಸೆಪ್ಟೆಂಬ್ 28, 2008 ರಂದು ನಡೆದ ಮಾಲೆಗಾಂವ್ ಸ್ಫೋಟದಲ್ಲಿ ಏಳು ಜನ ಸಾವನ್ನಪ್ಪಿದ್ದರು. ತದನಂತರ ಇದು ‘ಕೇಸರೀ ಭಯೋತ್ಪಾದನೆ’ ಯೆಂಬ ಬಿರುದನ್ನು ಕಾಂಗ್ರೆಸ್ ಸರಕಾರದಿಂದ ಪಡೆದುಕೊಂಡಿತ್ತು.

ವಿಶೇಷ ಎಮ್ ಸಿಒಸಿಎ (Maharastra control of organised crime act) ನ್ಯಾಯಾಲಯ ಉಗ್ರ ನಿಗ್ರಹ ಪಡೆ ಮೂಲಕ ಸಾಧ್ವಿ ಪ್ರಗ್ಯಾ, ಪುರೋಹಿತ್ ಹಾಗೂ ಒಂಭತ್ತು ಜನರ ಮೇಲೆ ತಪ್ಪಾಗಿ ಆರೋಪಿಸಿತ್ತು. 4000 ಪುಟಗಳ ಚಾರ್ಜ್ ಶೀಟಿನಲ್ಲಿ ಇದು ಮುಸ್ಲಿಂ ವಿರೋಧಿ ಕಾರ್ಯವೆಂದೇ ಬಿಂಬಿಸಲಾಗಿತ್ತು.

ಸಾಧ್ವಿ, ಪುರೋಹಿತ್ ಹಾಗೂ ಸ್ವಾಮಿ ದಯಾನಂದ್ ಪಾಂಡೆ ಈ ಘಟನೆಗೆ ರೂವಾರಿಗಳೆಂದು ಪರಿಗಣಿಸಿ ತಕ್ಕನಾಗಿ ಕಥೆಯನ್ನೂ ಸೃಷ್ಟಿಸಿತ್ತು. ಆದರೆ, ಯುಎಸ್ ತನಿಖಾ ದಳ ಇದು ಪಾಕಿಸ್ಥಾನಿ ಉಗ್ರರ ಕೃತ್ಯವೆಂದು ಸಾಕ್ಷ್ಯಾಧಾರಗಳನ್ನು ಒದಗಿಸಿದರೂ ಕಾಂಗ್ರೆಸ್ ನ ಕುತಂತ್ರದಿಂದ ನಿಜಬಾದ ಉಗ್ರರನ್ನು ಬಿಡುಗಡೆಗೊಳಿಸಿ ಹಿಂದೂ ನಾಯಕರನ್ನು ಗುರಿಯಾಗಿಸಿ ತನ್ಮೂಲಕ ಕೇಸರೀ ಭಯೋತ್ಪಾದನೆಯೆಂಬ’ ಹಾಸ್ಯಾಸ್ಪದ ಸಿದ್ಧಾಂತಗಳನ್ನು ಭಾರತಕ್ಕೆ ಪರಿಚಯಿಸಿತ್ತು.

ರಾಕೇಶ್ ದಾವ್ಡೆ, ರಮೇಶ್ ಉಪಾಧ್ಯಾಯ್, ಶ್ಯಾಮಲಾಲ್ ಸಾಹು, ಶಿವನರೇನ್ ಕಲ್ಸಂಗ್ರ, ಸುಧಾಕರ್ ಚತುರ್ವೇದಿ, ಜಗದೀಶ್ ಮ್ಹಟ್ರೆ, ಸಮೀರ್ ಕುಲಕರ್ಣಿ ಹಾಗೂ ಅಜಯ್ ರಾಹಿರ್ಕರ್ ರನ್ನು ಮಾಲೆಂಗಾವ್ ಸ್ಪೋಟದ ಮೇಲೆ ಬಂಧಿಸಲಾಗಿತ್ತು.

ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಹೊರಿಸಿದ್ದ ರಾಷ್ಟ್ರೀಯ ತನಿಖಾ ದಳ ಹಾಗೂ ಹಿಂದಿರುವ ಶಕ್ತಿಯ ಮುಖ ಇನ್ನಷ್ಟೇ ಬಯಲಾಗಬೇಕಿದೆ. ಅಲ್ಲದೆಯೇ, ಜಾಮೀನು ವಿನಂತಿಗೂ ವಿರೋಧ ವ್ಯಕ್ತಪಡಿಸುತ್ತಿರುವ ತನಿಖಾ ದಳದ ನಡೆ ಸಂಶಯಾಸ್ಪದವಾಗಿರುವುದರಿಂದ ಇನ್ನಷ್ಟು ಕುತೂಹಲ ಕೆರಳಿಸಿದೆ.

– ತಪಸ್ವಿ

Tags

Related Articles

Close